Author: UllalaVani

Kannada News From Coastal Karnataka

UN NETWORKS ಬಾಯಾರು: ಸಹಸ್ರಾರು ಜನರು ಸೇರುವ ಬಾಯಾರು ಮುಜಮ್ಮಹ್ ನಲ್ಲಿ ನಡೆಯುವ ಮಾಸಿಕ ಸ್ವಲಾತ್ ಮಜಲಿಸ್ ಆಗುಸ್ಟ್ 18 ನಾಳೆ ರಾತ್ರಿ ನಡಯಲಿರುದು. ನಾಳೆ ಮಗರಿಬ್ ನಮಾಝಿನ ನಂತರ ನಡೆಯುವ ಅಥ್ಮೀಯ ಸ್ವಲಾತ್ ಮಜಲಿಸಿನಲ್ಲಿ ಖ್ಯಾತ ವಾಗ್ಮಿ ಅಶ್ರಫ್ ಸಅದಿ ಮಲ್ಲೂರು ಪ್ರಭಾಷಣೆ ಗೆಯ್ಯುವರು. ಅಥ್ಮೀಯ ನೇತಾರ,ಮುಜಮ್ಮಹ್ ಸಾರಥಿ ಅಸ್ಸಯಿದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿ ಕೋಯಾ ಅಲ್ಬುಖಾರಿ ಬಾಯಾರ ತಂಗಳ್ ಸ್ವಲಾತ್ ಮಜಲಿಸಿಗೂ ಕೋಟೂಪ್ರಾರ್ಥನೆಗೂ ನೇತೃತ್ವ ನೀಡುವರು. ಶರಫುಲ್ ಉಲಮಾ ಮಂಜನಾಡಿ ಅಬ್ಬಾಸ್ ಉಸ್ತಾದ್, ಅಬ್ದುಲ್ ಮದನಿ, ಅಬ್ದುಲ್ ಲತೀಫ್ ಸಅದಿ ಪಯಷಿ, ರಫೀಕ್ ಸಅದಿ ದೇಲಂಪಾಡಿ, ಸಿದ್ದೀಕ್ ಹಾಜಿ ಮಂಗಳೂರು, ಅಬ್ಬಾಸ್ ಮಂಗಳೂರು ಮುಂತಾದ ಗಣ್ಯ ವ್ಯಕ್ತಿಗಳು ಭಾಗವಹಿಸುವರು.

Read More

UN NETWORKS ಮಂಗಳೂರು: ಅಕ್ಷರ ಇ-ಮ್ಯಾಗಝಿನ್ ಪ್ರಧಾನ ಸಂಪಾದಕ ಬಿ.ಎಸ್. ಮುಹಮ್ಮದ್ ಇಸ್ಮಾಈಲ್ ಅವರ “ಮಳೆ ಹನಿ” ಪುಸ್ತಕ ಬಿಡುಗಡೆ ಸಮಾರಂಭ ಮಂಗಳೂರಿನ ಸರಕಾರಿ ರಾಜ್ಯ ನೌಕರರ ಭವನದಲ್ಲಿ ನಡೆಯಿತು. ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಮೊಯಿದಿನ್ ಬಾವಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ ದ.ಕ. ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಕಾಶ್ ನಾಯಕ್. ಎಂ. ಫ್ರೆಂಡ್ಸ್ ಪ್ರಧಾನ ಕಾರ್ಯದರ್ಶಿ ರಶೀದ್ ವಿಟ್ಲ, ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ರಫೀಕ್ ಮಾಸ್ಟರ್, ದಿನೇಶ್ ಹೊಳ್ಳ, ಡಿ.ಐ. ಅಬೂಬಕರ್ ಕೈರಂಗಳ, ಫೈನ್ ಗೋಲ್ಡ್ ಡಿ.ಎಂ.ರಶೀದ್, ಯಂಶ ಬೇಂಗಿಲ, ಆಶಿಕ್ ಕುಕ್ಕಾಜೆ ಮತ್ತಿತರರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಾಮಾಜಿಕ ಕ್ಷೇತ್ರದ ಸಾಧನೆಗೆ ಹನೀಫ್ ಹಾಜಿ ಗೋಳ್ತಮಜಲು ಅವರನ್ನು ಹಾಗೂ ಕಲಾಕ್ಷೇತ್ರದ ಸಾಧನೆಗೆ ತಾರಾನಾಥ್ ಕೈರಂಗಳ ಅವರನ್ನು ಸನ್ಮಾನಿಸಲಾಯಿತು. ಕವಿಗೋಷ್ಠಿ ಮತ್ತು…

Read More

UN NETWORKS ಕುವೈತ್: ಉದ್ಯೋಗವನ್ನು ಅರಸಿ ಕೊಲ್ಲಿ ರಾಷ್ಟ್ರಗಳಲ್ಲಿ ಜೀವಿಸಬೇಕಾದ ಸನ್ನಿವೇಶದಲ್ಲಿ ಕುವೈತ್ ನಲ್ಲಿ ಕೆಸಿಎಫ್ ಆಯೋಜಿಸಿದ ಭಾರತೀಯ ಸ್ವಾತಂತ್ರ್ಯ ದಿನಾಚರಣೆ ರಾಷ್ಟ್ರ ಪ್ರೇಮದ ಕಾಳಜಿಯನ್ನು ಇನ್ನಷ್ಟು ಹೆಚ್ಚಿಸಿದೆ. ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಫಾಹಿಲ್ ನಲ್ಲಿರುವ ಕೆಸಿಎಫ್ ಕೇಂದ್ರ ಕಛೇರಿಯಲ್ಲಿ ಬಹುಮಾನ್ಯ ಉಮರ್ ಫಾರೂಕ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ದುವಾದೊಂದಿಗೆ ಆರಂಭವಾಯಿತು. ಕೇಂದ್ರ ಕಾರ್ಯದರ್ಶಿ ಯಾಕೂಬ್ ಕಾರ್ಕಳ ಎಲ್ಲರನ್ನೂ ಸ್ವಾಗತಿಸಿ ಕೆಸಿಎಫ್ ಕುವೈತ್ ನಲ್ಲಿ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತಿದ್ದು ಕುವೈತ್ ನ ಅನಿವಾಸಿಗರಿಗೆ ಸಂತೋಷದ ಕ್ಷಣವಾಗಿದೆ. ಹೋರಾಟ,ತ್ಯಾಗದಿಂದ ಭಾರತವು ಬ್ರಿಟಿಷ್ ಆಳ್ವಿಕೆಯಿಂದ ಸ್ವಾತಂತ್ರ್ಯ ವನ್ನು ಗಳಿಸಿತು ಎಂದು ತಿಳಿಸಿದರು. ಅಧ್ಯಕ್ಷ ಭಾಷಣದಲ್ಲಿ ಬಹುಮಾನ್ಯ ಉಮರ್ ಫಾರೂಕ್ ಸಖಾಫಿಯವರು ನಮಗೆ ಭಾರತದಲ್ಲಿ ಇದ್ದಂತೆ ಸ್ವಾತಂತ್ರ್ಯ ಜಗತ್ತಿನ ಯಾವ ದೇಶದಲ್ಲಿಯೂ ಇಲ್ಲ ಎಂದು ರಾಷ್ಟ್ರ ಪ್ರೇಮದ ಬಗ್ಗೆ ತಿಳಿಸಿ ದರು.ಜನಾಬ್ ಝಕ್ರಿಯಾ ಆನೆಕಲ್ ಮಾತನಾಡಿ ನಾವು ನಮ್ಮ ರಾಷ್ಟ್ರದ ಬಗ್ಗೆ ಪ್ರೀತಿಯನ್ನು ತೊರಿಸಬೇಕಾಗಿದೆ ಹುಬ್ಬುಲ್ ವತನ್ ಮಿನಲ್ ಈಮಾನ್(ಸ್ವರಾಜ್ಯ ಪ್ರೇಮವು ಈಮಾನಿನ…

Read More

UN NETWORKS ಉಳ್ಳಾಲ: ಅಲ್ ಇಹ್ಸಾನ್ ಯೂತ್ ಅಸೋಸಿಯೇಶನ್ ವತಿಯಿಂದ ಸ್ವಾತಂತ್ರ್ಯೊತ್ಸವವನ್ನು ಆಚರಿಸಲಾಯಿತು, ಅಡ್ಕರೆ ಮುಹಿಯುದ್ದೀನ್ ಜುಮಾ ಮಸೀದಿಯ ಖತೀಬರಾದ ಬಹುಮಾನ್ಯ ಹಂಝ ಸಖಾಫಿ ಅಲ್ ಅಝ್ಹರಿ ದುವಾ ನೆರವೇರಿಸಿದರು. ಸಂಘದ ಅದ್ಯಕ್ಷ ರಾದ ಮಹಮ್ಮದ್ ನಿಯಾಝ್ ಧ್ವಜಾರೋಹಣ ಮಾಡಿದರು. ಸಿರಾಜ್ ಅಡ್ಕರೆ ಪ್ರಾಸ್ತಾವಿಕ ಭಾಷಣ ಮಾಡಿ ಮಾತಾನಾಡುತ್ತಾ ಪ್ರಸಕ್ತ ಸನ್ನಿವೇಶದಲ್ಲಿ ನಾವು ನಮ್ಮ ದೇಶಪ್ರೇಮ ದ ಸರ್ಟಿಫಿಕೇಟ್ ಇನ್ನೊಬ್ನರಿಗೆ ತೋರ್ಪಡಿಸುವ ಅನಿವಾರ್ಯತೆ ಬಂದಿದೆ, ದೇಶಕ್ಕಾಗಿ ಹಿಂದು ಮುಸಲ್ಮಾನರು ಒಗ್ಗಟ್ಟಾಗಿ ಹೋರಾಟ ಮಾಡಿ ತ್ಯಾಗ ಬಲಿದಾನದಿಂದ ನಮಗೆ ನಾವು ಸ್ವತಂತ್ರವಾಗಿ ಜೀವಿಸುವಂತೆ ಮಾಡಿರುತ್ತಾರೆ, ಆದರೆ ಇಂದು ನಾವು ಧರ್ಮದ ಹೆಸರಿನಲ್ಲಿ ಕಾದಾಡುತಿದ್ದೇವೆ, ಕೋಮುವಾದಿಗಳಿಗೆ ನಮ್ಮ ದೇಶಪ್ರೇಮ ದ ಸರ್ಟಿಫಿಕೇಟ್ ನೀಡುವ ಅಗತ್ಯವಿಲ್ಲ, ಅದು ನಮ್ಮ ರಕ್ತದ ಕಣಕಣದಲ್ಲೂ ಇದೆ , ದೇಶಕ್ಕಾಗಿ ಪ್ರಾಣತ್ಯಾಗಕ್ಕೂ ನಾವು ಸದಾ ಸಿದ್ದ, ಎಂದರು, ವೇದಿಕೆಯಲ್ಲಿ ಅಡ್ಕರೆ ಪಡ್ಪು ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ರಾದ ಕೆ.ಯು. ಮುಹಮ್ಮದ್, ರಹ್ಮಾನಿಯಾ ಮದ್ರಸ ಅಡ್ಕರೆ ಪಡ್ಪು ಇದರ ಮುಖ್ಯೊಪಾದ್ಯಯರಾದ…

Read More

UN NETWORKS ಮಕ್ಕಾ: ಭಾರತದ 71ನೇ ಸ್ವಾತಂತ್ರೋತ್ಸವನ್ನು ಭಾರತದ ಹಜ್ಜಾಜಿಗಳೊಂದಿಗೆ ಪವಿತ್ರ ಮಕ್ಕಾದ ಮಣ್ಣಿನಲ್ಲಿ ಕರ್ನಾಟಕ ಕಲ್ಚರಲ್ ಪೌoಡೇಷನ್ ವಿಜೃಂಭಣೆಯಿಂದ ಆಚರಿಸಿತು.ಮಂಗಳೂರು ಈದ್ಗಾ ಜುಮಾ ಮಸ್ಜಿದ್ ಖತೀಬ್ ಸ್ವದಕತ್ತುಲ್ಲಾ ಮುಸ್ಲಿಯಾರ್ ಅವರು ಧ್ವಜಾರೋಹಣ ನಿರ್ವಹಿಸಿದರು . ಧ್ವಜಾರೋಹಣ ವೇಳೆ ಕೆಸಿಎಫ್ ಕಾರ್ಯಕರ್ತರು ಭಾರತ ರಾಷ್ಟ್ರ ಗೀತೆ ಹಾಡಿದರು. ಈ ವೇಳೆ ಮಾತನಾಡಿದ ದಾರುಲ್ ಇರ್ಶಾದ್ ಎಜುಕೇಶನ್ ಮಾಣಿ ಇದರ ಆರ್ಗನೈಸರ್ ಉಮ್ಮರ್ ಸಖಾಫೀ ಪರಪ್ಪು ಮಾತನಾಡಿ ಭಾರತ ಸ್ವತಂತ್ರ ಕ್ಕಾಗಿ ಮಡಿದ ಮಹಾತ್ಮ ಗಾಂದೀಜಿ, ಮೌಲಾನ ಸೌಕತ್ ಅಲಿ, ಶಹೀದೆ ಮಿಲ್ಲತ್ ಟಿಪ್ಪು ಸುಲ್ತಾನ್ (ರ.ಅ) ಹೀಗೇ ಹಲವಾರು ಸ್ವಾತಂತ್ರ್ಯ ಹೋರಾಟಗಾರರ ಚರಿತ್ರೆಯನ್ನು ತೆರೆದಿಟ್ಟರು. ಭಾರತೀಯರಾದ ನಾವು ಜಾತಿ, ಮತ, ಬೇಧ ಭಾವವನ್ನು ಮೆರೆತು ಐಕ್ಯತೆಯ ಭಾರತವನ್ನು ಕಟ್ಟುವಂತೆ ಕರೆ ನೀಡಿದರು. ಕೆಸಿಎಫ್ ಮುಖಂಡ ಅಬ್ಬಾಸ್ ಹಾಜಿ ಎಲಿಮಲೆ ಮಾತಾನಾಡಿ ನಾವು ವಿದೇಶದಲ್ಲಿದ್ದರೂ, ಭಾರತದ ಮೇಲಿನ ಪ್ರೀತಿ, ಪ್ರೇಮ ನಮ್ಮ ಮನದಲ್ಲಿ ಎಂದೆಂದಿಗೂ ಅಮರವಾಗಿದೆ ಎಂದರು.ಜಿದ್ದಾ ಝೋನಲ್ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ…

Read More

UN NETWORKS ಮೊಂಟೆಪದವು: ಶ್ರೀ ಕೃಷ್ಣ ಜನಮಾಷ್ಟಮಿ ಪ್ರಯುಕ್ತ ಮುಡಿಪು ಸಮೀಪದ ಮೊಂಟೆಪದವಿನಲ್ಲಿ ಜರಗಿದ ಮೊಸರುಕುಡಿಕೆ ಉತ್ಸವದ ಶೋಭಾಯಾತ್ರೆಗೆ ಮುಸ್ಲಿಮರು ತಂಪು ಪಾನೀಯ ನೀಡುವ ಮೂಲಕ ಸೌಹಾರ್ದತೆಗೆ ಸಾಕ್ಷಿಯಾದರು. ಕೋಮುಸೂಕ್ಷ್ಮ ಪ್ರದೇಶ ಉಳ್ಳಾಲ ಹಾಗೂ ಮುಡಿಪುವಿನಲ್ಲಿ  ಇಂತಹ  ಸುಸಂದರ್ಭಗಳು ಮರುಕಳಿಸುತ್ತಿರುವುದರಿಂದ ಜನರಲ್ಲಿ ಸೌಹಾರ್ದತೆಯ ವಾತಾವರಣವನ್ನು ನಿರ್ಮಿಸುವಲ್ಲಿ ಸಹಕಾರಿಯಾಗುತ್ತಿದೆ.  ಶ್ರೀ ಶಾರದಾಂಬ ಭಜನಾ ಮಂದಿರ ಮೊಂಟೆಪದವು  ಇವರು ಆಚರಿಸಿದಂತಹ ಶ್ರೀ ಕೃಷ್ಣ ಜನಮಾಷ್ಟಮಿ ಉತ್ಸವದ ಪ್ರಯುಕ್ತ ಮೊಸರುಕುಡಿಕೆ ಉತ್ಸವದ ಅಂಗವಾಗಿ  ಮೊಂಟೆಪದವಿನ ಮಠದಿಂದ  ಭಜನಾ ಮಂದಿರಕ್ಕೆ ಶೋಭಾಯಾತ್ರೆ ನಡೆದಿತ್ತು. ಇದರಲ್ಲಿ  ಭಾಗವಹಿಸಿದ್ದ  ನೂರಕ್ಕೂ ಅಧಿಕ ಹಿಂದು ಬಾಂಧವರಿಗೆ, ಮೊಂಟೆಪದವು ಜಂಕ್ಷನ್ನಿನಲ್ಲಿ  ಮುಸ್ಲಿಂ ಬಾಂಧವರು ಸಿಹಿತಿಂಡಿ ಜತೆಗೆ  ತಂಪು ಪಾನೀಯ ವಿತರಿಸಿದರು. ಶೋಭಾಯಾತ್ರೆಯಲ್ಲಿ  ಭಾಗವಹಿಸಿ ದನಿದ ಹಿಂದು ಬಾಂಧವರಿಗೆ  ತಂಪು ಪಾನೀಯ ಬಹಳ ಸಹಕಾರಿಯಾಯಿತು. ಈ ಹಿಂದೆ  ಮುಸ್ಲಿಂ ಸಮುದಾಯದ ಈದ್ ಮಿಲಾದ್ ಆಚರಣೆ ಸಂದರ್ಭದಲ್ಲಿ  ಮೋಂಟುಗೋಳಿ ಪ್ರದೇಶದಲ್ಲಿ  ಹಿಂದು ಬಾಂಧವರು ಸಿಹಿತಿಂಡಿಯನ್ನು ಮಿಲಾದ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಮಂದಿಗೆ ವಿತರಿಸಿದ್ದರು.  ಎರಡು ಸಮುದಾಯದ ಅನ್ಯೋನ್ಯತೆಯೂ…

Read More

UN NETWORKS ಕುಂಪಲ: ಕುಂಪಲ ಶ್ರೀ ಬಾಲಕೃಷ್ಣ ಮಂದಿರ ಇದರ ವತಿಯಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ 20ನೇ ವರ್ಷದ ಮೊಸರುಕುಡಿಕೆ ಉತ್ಸವವು ಕುಂಪಲ ಶ್ರೀ ಬಾಲಕೃಷ್ಣ ಮಂದಿರದಲ್ಲಿ ಸೋಮವಾರ ನಡೆಯಿತು. ಧಾರ್ಮಿಕ ಕಾರ್ಯಕ್ರಮಕ್ಕೆ ಶಾಲಿನಿ ಗಣೇಶ್ ಅಂಚನ್ ಕುಂಪಲ ದಂಪತಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ,ಗೌರವ ಅಧ್ಯಕ್ಷ ಕೇಶವದಾಸ್ ಬಗಂಬಿಲ,ಉತ್ಸವ ಸಮಿತಿ ಅಧ್ಯಕ್ಷ ಶಿವಾನಂದ ಟೈಲರ್,ಮಹಿಳಾ ಸಮಿತಿ ಅಧ್ಯಕ್ಷ ಶ್ಯಾಮಲಾ,ಕಾರ್ಯದರ್ಶಿ ರವೀಂದ್ರ ಕುಂಪಲ,ಹರೀಸ್ ಮೂರುಕಟ್ಟೆ,ಶ್ರೀಮತಿ ಲಕ್ಷ್ಮಿ,ಪ್ರವೀಣ್ ಎಸ್.ಕುಂಪಲ,ಉಮೇಶ್ ಗಾಂಬೀರ್,ಎಸ್.ಎಸ್.ನಾಯಕ್,ಮಾದವ ಬಂಗೇರ, ಆನಂದ ಎನ್. ಕೋಟೆಕಾರ್ ಪಟ್ಟಣ ಪಂಚಾಯತ್ ಉಪಾಧ್ಯಕ್ಷ ಅನಿಲ್ ಬಗಂಬಿಲ, ಪ್ರಧಾನ ಅರ್ಚಕ ಉಗ್ಗಪ್ಪ ಟೈಲರ್,ಕೃಷ್ಣ ಕುಂಪಲ,ಪುಷ್ಪಲತಾ ಡಿ.ಶೆಟ್ಟಿ ಉಪಸ್ಥಿತರಿದ್ದರು.

Read More

UN NETWORKS ಮಡ್ಯಾರ್ : ಮಡ್ಯಾರ್ ಫ್ರೆಂಡ್ಸ್ ಮಡ್ಯಾರ್ ವತಿಯಿಂದ 71 ನೇ ಸ್ವಾತಂತ್ರೊತ್ಸವ ಮಡ್ಯಾರ್ ಮೈದಾನದಲ್ಲಿ ನಡೆಯಿತು. ಧ್ವಜಾರೋಹಣವನ್ನು ಸುರೇಶ್ ಗುರೂಜಿಯವರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹರೀಶ್ ಮಡ್ಯಾರ್,ದೀರಜ್ ಕೊಂಡಾಣ,ಪ್ರವೀಣ್ ಶೆಟ್ಟಿ ನಡಾರ್,ತಾರನಾಥ ಶೆಟ್ಟಿ ಮಡ್ಯಾರ್,ದಿವ್ಯ ಶೆಟ್ಟಿ,ಸಂತೋಷ್ ಶೆಟ್ಟಿ ಬಾಗವಹಿಸಿದ್ದರು.ಚಂದ್ರಹಾಸ ರೈ ಪಿಲಾರ್ ಸ್ವಾಗತಿಸಿದರು.ಸಂಪತ್ ಮಡ್ಯಾರ್ ದನ್ಯವಾದಗೈದರು. ……………………………………………………………………………………………. ಅಂಬಿಕಾರೋಡ್: ಪೊಲದವರ ಯಾನೆ ಗಟ್ಟಿ ಸಮಾಜ ಸೇವಾ ಸಂಘದ ವತಿಯಿಂದ ಅಂಬಿಕಾರೋಡಿನಲ್ಲಿ ಸ್ವಾತಂತ್ರ್ಯೋತ್ಸವ ನಡೆಯಿತು.ಸಮಾಜದ ಅಧ್ಯಕ್ಷ ಪವಿತ್ರ ಕುತ್ತಾರ್ ಗಟ್ಟಿ ಧ್ವಜಾರೋಹಣ ನೆರವೇರಿಸಿದರು. ………………………………. ಉಳ್ಳಾಲ: ಅನುದಾನಿತ ಮೊಗವೀರ ಹಿ.ಪ್ರಾ.ಶಾಲೆಯಲ್ಲಿ 71 ನೇ ಸ್ವಾತಂತ್ರ್ಯ ವರ್ಷದ ದಿನಾಚರಣೆಯನ್ನು ಆಚರಿಸಲಾಯಿತು. ಶಾಲಾ ಸಂಚಾಲಕ ಸತೀಶ್ ಪುತ್ರನ್ ಧ್ವಜಾರೋಹಣವನ್ನು ನೆರವೇರಿಸಿದರು. ವ್ಯಾಘ್ರ ಚಾಮುಂಡೇಶ್ವರಿ ಟ್ರಸ್ಟ್‍ನ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಶಾಲಾ ಸಮಿತಿ ಸದಸ್ಯ ರೋಹಿದಾಸ್ ಬಂಗೇರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. …………………………………. ತಲಪಾಡಿ: ಫ್ರೆಂಡ್ಸ್ ಪಿಲಿಕೂರು ವತಿಯಿಂದ ಸ್ವಾತಂತ್ರ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು. ಟಿ.ಎಂ ಇಬ್ರಾಹಿಂ ಧ್ವಜಾರೋಹಣವನ್ನು ನೆರವೇರಿಸಿದರು.…

Read More

UN NETWORKS ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಗೃಹರಕ್ಷಕ ದಳ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಡಾ. ಮುರಲೀ ಮೋಹನ ಚೂಂತಾರು ಮಹಾತ್ಮರ ತ್ಯಾಗ, ಬಲಿದಾನ ಶ್ರಮ ಮತ್ತು ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ಸಿಗುವಂತಾಯಿತು. ಬ್ರಿಟಿಷರ ದಬ್ಬಾಳಿಕೆಯ ಕಾರ್ಗತ್ತಲೆಯಿಂದ ಬೆಳಕಿಗೆ ತಂದ ಆಗಸ್ಟ್ 15 ಭಾರತೀಯರೆಲ್ಲರಿಗೂ ಸಂಭ್ರಮದ ದಿನವಾಗಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ ಸುಮಾರು 40 ಜನ ಗೃಹರಕ್ಷಕರು ಉಪಸ್ಥಿತರಿದ್ದರು.

Read More