Author: UllalaVani

Kannada News From Coastal Karnataka

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕುಂಪಲ: ಕುಂಪಲ ಕೇಸರಿ ಮಿತೃ ವೃಂದ ಇದರ ಅಧ್ಯಕ್ಷರಾಗಿ ನವೀನ್ ಕುಜುಮಗದ್ದೆ ಆಯ್ಕೆಯಾದರು. 2016-17 ನೇ ಸಾಲಿನ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆಯು ಗಣೇಶ್ ಕೆ.ಎನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು. ಉಪಾಧ್ಯಕ್ಷರುಗಳಾಗಿ ಹರಿಶ್ಚಂದ್ರ ಸೈಟ್, ಹರಿಶ್ಚಂದ್ರ ಕುಜುಮಗದ್ದೆ, ಕಾರ್ಯದರ್ಶಿಯಾಗಿ ಸಂದೀಪ್, ಜೊತೆ ಕಾರ್ಯದರ್ಶಿಯಾಗಿ ಯೋಗೀಶ್ ಸೈಟ್, ಶಶಿಧರ್, ಕೋಶಾಧಿಕಾರಿಯಾಗಿ ವಿನ್ಯಾಸ್ ಪಿ ಬೋಳಾರ್, ಕ್ರೀಡಾ ಕಾರ್ಯದರ್ಶಿಯಾಗಿ ಅನಿಲ್, ಗೌತಮ್, ಕ್ರೀಡಾ ನಾಯಕನಾಗಿ ಜ್ಞಾನೇಶ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ನಿತಿನ್ ಜಿ, ನಿತಿನ್.ಎನ್, ಸಂಘಟನಾ ಕಾರ್ಯದರ್ಶಿಯಾಗಿ ಸುಮೇಶ್ ಕುಂಪಲ ಇವರನ್ನು ಆಯ್ಕೆಮಾಡಲಾಯಿತು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತೊಕ್ಕೊಟ್ಟು: ಉಳ್ಳಾಲದ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯು ಕಳೆದ 19 ವರ್ಷಗಳಿಂದ ಆಚರಿಸುತ್ತಾ ಬರುತ್ತಿರುವ `ಅಬ್ಬಕ್ಕ ಉತ್ಸವ -2016′ ಈ ಸಲವೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಯೋಗದೊಂದಿಗೆ ಮೇ 7 ಮತ್ತು 8ರಂದು ತೊಕ್ಕೊಟ್ಟು ಕಲ್ಲಾಪುವಿನ ಯುನಿಟಿ ಹಾಲ್ ನಲ್ಲಿ ನಡೆಸಲು ತೀರ್ಮಾನಿಸಲಾಯಿತು. ಉತ್ಸವದ ಅಂಗವಾಗಿ ನಡೆದ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಭಾರತ ಪ್ರಪ್ರಥಮ ಸ್ವಾತಂತ್ರ್ಯ ಹೋರಾಟಗಾರ್ತಿ ಉಳ್ಳಾಲದ ವೀರರಾಣಿ ಅಬ್ಬಕ್ಕನ ಶೌರ್ಯ, ದೇಶಾಭಿಮಾನ, ಸಹಬಾಳ್ವೆ, ಕೋಮು ಸೌರ್ದತೆಯನ್ನು ಎತ್ತಿ ತೋರಿಸುವ ಈ ಉತ್ಸವದ ಆಚರಣೆಗೆ ಎಲ್ಲರ ಸಹಕಾರ ಅಗತ್ಯ ಎಂದರು. ಮೇ 1ರಂದು ಮಹಿಳೆಯರಿಗಾಗಿ ರಾಜ್ಯಮಟ್ಟದ ಮಹಿಳೆಯರ ಭಾರ ಎತ್ತುವ ಸ್ಪರ್ಧೆ “ರಾಣಿ ಅಬ್ಬಕ್ಕ ಶಕ್ತಿ ಟ್ರೋಫಿ-2016” ಮತ್ತು ಮಹಿಳಾ ತಂಡಗಳಿಂದ ಸಾಂಸ್ಕøತಿಕ ವೈವಿಧ್ಯಗಳ ಸ್ಪರ್ಧಾಗುಚ್ಚವಾಗಿ “ರಾಣಿ ಅಬ್ಬಕ್ಕ ಕಲಾವೈಭವ-2016ನ್ನು ಮಂಗಳೂರು ತಾಲೂಕಿನ ಪೆರ್ಮನ್ನೂರು ಸಂತ ಸೆಬೆಸ್ಟಿಯನ್ನರ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ. ಮಾಜಿ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ಕ್ರೀಡೆಯಿಂದ ಆತ್ಮವಿಶ್ವಾಸದ ಜೊತೆ ಸಮಾಜದಲ್ಲಿ ಎಲ್ಲರನ್ನೂ ಒಗ್ಗೂಡಿಸುವ ಕೆಲಸ ಮಾಡುತ್ತದೆ. ದೇಶದ ಶಕ್ತಿಯಾಗಿರುವ ಯುವಜನತೆ ಜಾತಿ, ಧರ್ಮ, ಬೇಧ ಮರೆತು ಸಾಮರಸ್ಯದ ಜೊತೆ ಸಮಾಜ ಸೇವೆಯೊಂದಿಗೆ ಮುನ್ನಡೆದರೆ ಸೌಹಾರ್ದಯುತ ಸಮಾಜ ಕಟ್ಟಲು ಸಾಧ್ಯ. ಎಂದು ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಧಾನ ಸಭಾ ಕ್ಷೇತ್ರ ಯುವ ಕಾಂಗ್ರೆಸ್ ಹಾಗೂ ಡಿಎಫ್‍ಸಿ ದೇರಳಕಟ್ಟೆ ಇದರ ಜಂಟಿ ಆಶ್ರಯದಲ್ಲಿ ಮಾಜಿ ಶಾಸಕ ಯು.ಟಿ.ಫರೀದ್ ಅವರ ಸ್ಮರಣಾರ್ಥ ದೇರಳಕಟ್ಟೆಯಲ್ಲಿ ಆಯೋಜಿಸಿದ್ದ ಮೈಸೂರು ಟ್ರೋಫಿ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದ ಸಭಾ ಕಾರ್ಯಕ್ರಮದಲ್ಲಿ ಬಡರೋಗಿಗಳಿಗೆ ಸಹಾಯ ಧನ ಹಾಗೂ ಸ್ವ ಉದ್ಯೋಗಕ್ಕೆ ಪೆÇ್ರೀತ್ಸಾಹ ನೀಡುವ ನಿಟ್ಟಿನಲ್ಲಿ ಟೈಲರಿಂಗ್ ಯಂತ್ರ ಮತ್ತು ಅಂಗವೈಕಲ್ಯ ಹೊಂದಿದ ವ್ಯಕ್ತಿಗೆ ಗಾಲಿಕುರ್ಚಿ ವಿತರಿಸಿ ಮಾತನಾಡಿದರು. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅದ್ಯಕ್ಷತೆ ವಹಿಸಿದ್ದರು. ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಉದ್ಯಮಿ ಅಝೀಝ್ ಮೈಸೂರು…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ದೇರಳಕಟ್ಟೆ: ದಂತ ವೈದ್ಯಕೀಯ ಶಿಕ್ಷಣದಲ್ಲಿ ಹೊಸ ಹೊಸ ತಂತ್ರe್ಞÁನಗಳು, ಕೋರ್ಸ್‍ಗಳ ಮೂಲಕ ದಂತ ವೈದ್ಯರಿಗೆ ಮಾರ್ಗದರ್ಶನ ನೀಡುವ ಕಾರ್ಯಗಳು ನಡೆಯುತ್ತಿದೆ, ಓರಲ್ ಇಂಪ್ಲಾಂಟೋಲೋಜಿಯಂತಹ ವಿಶೇಷ ಸರ್ಟಿಫಿಕೆಟ್ ಕೋರ್ಸ್‍ನಂತಹ ಶೈಕ್ಷಣಿಕ ತರಬೇತಿಯನ್ನು ಎಲ್ಲಾ ವಿಭಾಗಗಳು ನಡೆಸಲು ಮುಂದೆ ಬರಬೇಕು ಇದಕ್ಕೆ ನಿಟ್ಟೆ ವಿಶ್ವವಿದ್ಯಾನಿಲಯ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧವಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲತಿ ಪ್ರೊ| ರಮಾನಂದ ಶೆಟ್ಟಿ ಅಭಿಪ್ರಾಯಪಟ್ಟರು. ದೇರಳಕಟ್ಟೆಯ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್‍ನ ವಿಂಶತಿ ಭವನದಲ್ಲಿ ಇತ್ತೀಚೆಗೆ ಜರಗಿದ ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್ ಇದರ ಓರಲ್ ಇಂಪ್ಲಾಂಟೋಲೋಜಿ ವಿಭಾಗದಲ್ಲಿ ತರಬೇತಿ ಪಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡುವ ಕಾರ್ಯಕ್ರಮ ಮತ್ತು ನಿರಂತರ ದಂತ ವೈದ್ಯಕೀಯ ಶಿಕ್ಷಣ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್‍ಸ್ಟಿಟ್ಯೂಟ್ ಆಫ್ ಡೆಂಟರ್ ಸೈನ್ಸ್‍ನ ವಿಶ್ರಾಂತ ಡೀನ್ ಮತ್ತು ಕ್ಯಾಡ್ಸ್ ನಿರ್ದೇಶಕ ಪ್ರೊ| (ಡಾ|) ಎನ್.…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ತಲಪಾಡಿ: ತಲಪಾಡಿಯ ಕೆ.ಸಿ ನಗರ, ಪೆÇೀಮಣ್ಣ್, ಪಂಜಳ, ಮಧವುಪೂರ ಭಾಗಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಗಿದ್ದು ಎಸ್ಸೆಸ್ಸೆಫ್ ಕೆ.ಸಿ ನಗರ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಈ ಭಾಗಗಳಿಗೆ ಉಚಿತ ಕುಡಿಯುವ ನೀರು ಸರಬರಾಜು ಮಾಡಲಾಯಿತು. ಈ ಸಂದರ್ಭ ಅಧ್ಯಕ್ಷ ರಹೀಂ ಝುಹುರಿ, ಮಾಜಿ ಕಾರ್ಯದರ್ಶಿ ಇಕ್ಬಾಲ್ ಎಂ.ಎ, ಸದಸ್ಯರಾದ ಇಸ್ಮಾಯಿಲ್ ಕೆ.ಸಿ ನಗರ, ಖಲೀಲ್, ಇಮ್ರಾನ್, ಇಸ್ಮಾಯಿಲ್ ಮದನಿ ಬಾಳೆಪುಣಿ, ಎಸ್‍ವೈಎಸ್ ಮುಖಂಡ ಅಬ್ಬಾಸ್ ಕೆ.ಸಿ ನಗರ, ಶರೀಫ್ ಪೂಮಣ್ಣ್, ಕರೀಂ ಪೂಮಣ್ಣ್, ಮುಸ್ತಾಫ, ಸಂಶುದ್ದೀನ್, ಮುಸ್ತಾಫ ಕೆ.ಸಿ ನಗರ ಮುಂತಾದವರು ಉಪಸ್ಥಿತರಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಕಿನ್ಯ: ಕಿನ್ಯ ಗ್ರಾಮ ಪಂಚಾಯತ್‍ನ 2015-2016ನೇ ಸಾಲಿನ 2ನೇ ಹಂತದ ಗ್ರಾಮ ಸಬೆಯು ಕಿನ್ಯ ಉಕ್ಕುಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ರಶೀದ ಭಾನು ಮಾತನಾಡಿ ಜಿಲ್ಲಾ ಪಂಚಾಯತ್ ನಲ್ಲಿ ಬರುವ ಅನುದಾನವನ್ನು ಒದಗಿಸಿ ಕೊಡುವಲ್ಲಿ ಶಕ್ತಿ ಮೀರಿ ದುಡಿಯುತ್ತೇನೆ ಎಂದು ಹೇಳಿದರು. ನೋಡೆಲ್ ಅಧಿಕಾರಿಯಾಗಿ ಮಂಗಳೂರು ತಾಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಯಶೋಧರ ಜೆ. ಕಿನ್ಯ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಾಲಿನಿ, ಉಪಾಧ್ಯಕ್ಷರಾದ ಸಿರಾಜ್ ಕಿನ್ಯಾ, ಸದಸ್ಯರಾದ ಮೊಹಮ್ಮದ್, ಫಾರೂಕ್ ಕಿನ್ಯಾ, ಹಮೀದ್ ಕಿನ್ಯಾ, ಅಬೂಶಾಲಿ, ಮಹಾಬಲ ಪೂಂಜ, ಆಶಾಲತಾ, ಮೈಮೂನಾ, ಕುಸುಮಾ, ಹಾಗೂ ತಾಲೂಕು ಪಂಚಾಯತ್ ಸದಸ್ಯರಾದ ಸಿದ್ದೀಕ್ ತಲಪಾಡಿ ಉಪಸ್ಥಿತರಿದ್ದರು. ಪಂಚಾಯತ್ ಅಭಿವೃದ್ದಿ ಅಧಿಕಾರಿ ಪೂರ್ಣಿಮಾ ಕಾರ್ಯಕ್ರಮ ನಿರೂಪಿಸಿದರು,ಕಾರ್ಯದರ್ಶಿ ಸುರೇಖ ವರದಿ ಮಂಡನೆ ಮಾಡಿದರು

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ನಿಟ್ಟೆ ವಿಶ್ವವಿದ್ಯಾಲಯದ ಕ್ಷೇಮ ಕಾಲೇಜಿನ ಸ್ಕಿಲ್ ಲ್ಯಾಬ್‍ನಲ್ಲಿ ಎ. 16ರಂದು ನಡೆದ ಕಾರ್ಯಗಾರದಲ್ಲಿ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಸಿಪಿಆರ್ ಮತ್ತು ಪ್ರಥಮ ಚಿಕಿತ್ಸೆಯಲ್ಲಿ ತರಬೇತಿ ನೀಡಲಾಯಿತು. ಗೈಡ್ಸ್ ಕ್ಯಾಪ್ಟನ್ ಫ್ಲೇವೀ ಡಿ’ಸೋಜ ನೇತೃತ್ವದ ಅಬ್ಬಕ್ಕ ದಳದಿಂದ ಆಯೋಜಿಸಲ್ಪಟ್ಟಿದ್ದ ಈ ಶಿಬಿರದಲ್ಲಿ ಮಂಗಳೂರು ಉತ್ತರ, ಮಂಗಳೂರು ದಕ್ಷಿಣ ಹಾಗೂ ಬಂಟ್ವಾಳ ತಾಲೂಕುಗಳ ಶಿಬಿರಾರ್ಥಿಗಳು ಭಾಗವಹಿಸಿದ್ದರು. ಕ್ಷೇಮ ಕಾಲೇಜಿನ ಅರಿವಳಿಕೆ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ| ಶ್ರೀಪಾದ ಜಿ ಮೆಹೆಂದಳೆ ಹಾಗೂ ಡಾ| ಸುಮಲತಾ ಆರ್. ಶೆಟ್ಟಿ ಆಕಸ್ಮಿಕ ಹೃದಯ ಸ್ತಂಭನದ ತುರ್ತು ಸಂದರ್ಭದಲ್ಲಿ ನೀಡಲೇಬೇಕಾದ ಚಿಕಿತ್ಸೆಯ ಕೌಶಲ್ಯವನ್ನು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಮುಡಿಪು: ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ದೈವಸ್ಥಾನ ಪಟ್ಟೋರಿ, ಕೊಣಾಜೆ ಇದರ ನೂತನ ಗರ್ಭಗುಡಿ, ಗೋಪುರ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ಹಾಗೂ ವರ್ಷಾವಧಿ ಸಾನದಾಯನ ಜಾತ್ರಾ ಮಹೋತ್ಸವವು ಎ.20ರಿಂದ ಎ.23ರವರೆಗೆ ನಡೆಯಲಿದೆ. ಎ.20ರಂದು ಸಂಜೆ 5ಗಂಟೆಗೆ ತಂತ್ರಿಗಳ ಆಗಮನ, ಸಾಮೂಹಿಕ ಪ್ರಾರ್ಥನೆ, ಪುಣ್ಯಾಹವಾಚನ, ಸಪ್ತಶುದ್ದಿ, ಪ್ರಸಾದಶುದ್ಧಿವಾಸ್ತು ಹೋಮ, ವಾಸ್ತು ಬಲಿ, ವಾಸ್ತುಪೂಜೆ, ಪ್ರಕಾರ ಬಲಿ, ದೈವಗಳ ಮಂಚ ಅಧಿವಾಸ, ಕಲಶಾಧಿವಾಸ, ಆಧಿವಾಸ ಹೋಮ ನಡೆಯಲಿದ್ದು ಸಂಜೆ ಆರು ಗಂಟೆಗೆ ಪಟ್ಟೋರಿ ಭಂಡಾರ ಮನೆಯಿಂದ ಶ್ರಿ ದೈವಗಳ ಭಂಡಾರ ಶ್ರೀ ಸನ್ನಿಧಿಗೆ ಬರಲಿದೆ. ಎ.21ರಂದು ಬೆಳಿಗ್ಗೆ ಗಣಪತಿ ಹೋಮ, ಬಳಿಕ ಶ್ರೀ ಪಟ್ಟೋರಿತ್ತಾಯ, ಪಿಲಿಚಾಮುಂಡಿ ಹಾಗೂ ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ, ತಂಬಿಲ, ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಮಧ್ಯಾಹ್ನ ಅನ್ನಸಂತರ್ಪಣೆ, ಸಂಜೆ 3ಗಂಟೆಗೆ ಮಲರಾಯ ಬಂಟ ದೈವಗಳ ನೇಮ, ರಾತ್ರಿ 7ಗಂಟೆಗೆ ಪಟ್ಟೋರಿತ್ತಾಯ ದೈವದ ಕೋಟ್ಯದಾಯನ ನೇಮ ನಂತರ ಸಾಂಸ್ಕøತಿಕ ಕಾರ್ಯಕ್ರಮ…

Read More

ಉಳ್ಳಾಲ್ ನ್ಯೂಸ್ ನೆಟ್ ವರ್ಕ್ ಉಳ್ಳಾಲ: ಉಳ್ಳಾಲದ ಮೊಗವೀರಪಟ್ನ ನಿವಾಸಿ ಮೀನುಗಾರ ರಾಜು ಕೊಟ್ಯಾನ್ ಕೊಲೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಉಳ್ಳಾಲ ಮತ್ತು ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಮೊಹಮ್ಮದ್ ಅಸ್ವೀರ್ ಯಾನೆ ಅಚ್ಚು (19), ಅಬ್ದುಲ್ ಮುತ್ತಾಲಿಪ್ ಯಾನೆ ಮುತ್ತು (20) ಹಾಗೂ ಇನ್ನೋರ್ವ ಅಪ್ರಾಪ್ತ ಬಾಲಕ ಬಂಧಿತ ಆರೋಪಿಗಳು. ಎ.12 ಉಳ್ಳಾಲ ಕೋಟೆಪುರ ಜೆಟ್ಟಿಗೆ ಮೀನುಗಾರಿಕೆಗೆಂದು ತೆರಳುತ್ತಿದ್ದ ಸಂದರ್ಭ ಉಳ್ಳಾಲ ಕೋಟೆಪುರ ಬರಕಾ ಓವರ್ ಸೀಸ್ ಪ್ಯಾಕ್ಟರಿಯ ಸಮೀಪ ದುಷ್ಕರ್ಮಿಗಳು ಬಲವಾದ ಆಯುಧದಿಂದ ತಲೆಗೆ ಜಜ್ಜಿ ಹತ್ಯೆಗೈದಿದ್ದರು. ಆಟವಾಡುತ್ತಿದ್ದ ಮಕ್ಕಳು ಮೃತದೇಹ ಕಂಡು ಪ್ರಕರಣ ಬೆಳಕಿಗೆ ಬಂದಿತ್ತು. ಮುಂದುವರಿಯುವುದು…………..

Read More

ಉಳ್ಳಾಲ್  ನ್ಯೂಸ್ ನೆಟ್ ವರ್ಕ್ ಉಳ್ಳಾಲ: ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಮೊಗವೀರ ಮೀನುಗಾರ ರಾಜು ಕೋಟ್ಯಾನ್ ಅವರ ಶವವನ್ನು ಉಳ್ಳಾಲ ಪೊಲೀಸ್ ಠಾಣೆಯೆದುರು ಇಟ್ಟು ಮೊಗವೀರ ಸಮಾಜದವರು ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆಯಿತು. ಕೋಟೆಪುರ ಸಮೀಪ ಮೊಗವೀರಪಟ್ನ ನಿವಾಸಿ ಮೀನುಗಾರ ರಾಜು ಕೋಟ್ಯಾನ್ (41) ಅವರನ್ನು ಕಲ್ಲಿನಿಂದ ಜಜ್ಜಿ ಹತ್ಯೆಗೈಯ್ಯಲಾಗಿತ್ತು. ಘಟನೆ ಖಂಡಿಸಿ ಮಂಗಳವಾರ ಮೊಗವೀರ ಮಹಿಳೆಯರು ಠಾಣೆಗೆ ಮುತ್ತಿಗೆ ಹಾಕಿ 24 ಗಂಟೆಯೊಳಗೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿದ್ದರು. ಬುಧವಾರ ಬೆಳಿಗ್ಗೆ ಮೊಗವೀರಪಟ್ನದ ರಾಜು ಕೋಟ್ಯಾನ್ ಅವರ ಮನೆಯಿಂದ ಹೊರಟ ಶವಯಾತ್ರೆ ಸೀರೋಡ್ ಮೂಲಕ ಛೋಟಾ ಮಂಗಳೂರು ರಸ್ತೆಯಾಗಿ ಉಳ್ಳಾಲ ಜಂಕ್ಷನ್ನಿನಿಂದ ಹಾದು ಬಳಿಕ ಉಳ್ಳಾಲ ಠಾಣೆಯೆದರು ಇರಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಉಳ್ಳಾಲದಲ್ಲಿ ಮೊಗವೀರರ ಮೇಲೆ ನಿರಂತರ ದೌರ್ಜನ್ಯಗಳು ನಡೆಯುತ್ತಿದ್ದರೂ ಪೊಲೀಸರು ಈವರೆಗೆ ಆರೋಪಿಗಳನ್ನು ಬಂಧಿಸಿಲ್ಲ. ಚೂರಿ ಇರಿತ, ಹಲ್ಲೆ, ಮನೆಗಳಿಗೆ ಹಾನಿ ನಡೆದರೂ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಪತ್ತೆ ಇನ್ನೂ ಆಗಿಲ್ಲ. ಅದೇ ಮೊಗವೀರರ ಮೇಲೆ ಆರೋಪ…

Read More