UN NETWORKS ಉಳ್ಳಾಲ; ಬೈಕ್ ರ್ಯಾಲಿಯಲ್ಲಿ ಮಂಗಳೂರು ಕ್ಷೇತ್ರದಿಂದ 4,000ದಷ್ಟು ಬೈಕಿನಲ್ಲಿ ಕಾರ್ಯಕರ್ತರು ಭಾಗವಹಿಸಲಿದ್ದು, ಎಷ್ಟು ತಡೆದರೂ ಸಾಂವಿಧಾನಿಕ ಹಕ್ಕಾದ ಪ್ರತಿಭಟನೆಯನ್ನು ಯುವ ಕಾರ್ಯಕರ್ತರು ಜಿಲ್ಲಾ ಮತ್ತು ರಾಜ್ಯ ಮುಖಂಡರುಗಳ ನೇತೃತ್ವದಲ್ಲಿ ಮಾಡಿಯೇ ಸಿದ್ಧ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿದ್ದಾರೆ. ತೊಕ್ಕೊಟ್ಟು ಬಿಜೆಪಿ ಕಚೇರಿಯಲ್ಲಿ ಮಂಗಳವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಅವರು ಮಾತನಾಡಿ ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರಕಾರದ ಎಷ್ಟು ಪೊಲೀಸರು ಕಾರ್ಯಚರಿಸಿದರೂ, ಎಷ್ಟೇ ಕಾರ್ಯಕರ್ತರ ಬಂಧನವಾದರೂ ಎದೆಗುಂದದೆ ಬೈಕ್ ರ್ಯಾಲಿಯನ್ನು ನಡೆಸಿಯೇ ನಡೆಸುತ್ತೇವೆ. ಉಳ್ಳಾಲದ 195 ಬೂತ್ ಗಳಿಂದ 2,200 ಬೈಕ್ ಸೇರಿದಂತೆ ಒಟ್ಟು 4,000 ಬೈಕ್ ಗಳಲ್ಲಿ ಕಾರ್ಯಕರ್ತರು ರ್ಯಾಲಿ ಮೂಲಕ ಭಾಗವಹಿಸಲಿದ್ದಾರೆ. ಹಿಂದು ವಿರೋಧಿ ಧೋರಣೆಯನ್ನು ತೋರಿಸುತ್ತಿರುವ ಸರಕಾರ ಮತ್ತು ಉಸ್ತುವಾರಿ ಸಚಿವ ರೈ ವಿರುದ್ಧದ ಹಾಗೂ ರಾಜೀನಾಮೆಗೆ ಒತ್ತಾಯಿಸಿದ ಪ್ರತಿಭಟನೆಯಾಗಿದೆ. ಅಲ್ಲದೆ ಹಿಂದು ಕಾರ್ಯಕರ್ತರ ಸರಣಿ ಹತ್ಯೆ ನಡೆಸುತ್ತಿರುವ ಪಿಎಫ್ ಐ , ಕೆಎಫ್ ಡಿ ನಿಷೇಧಕ್ಕೆ ಆಗ್ರಹಿಸಿ ರ್ಯಾಲಿಯನ್ನು…
Author: UllalaVani
UN NETWORKS ಕೊಣಾಜೆ: ಜಿಲ್ಲೆಯ ಸಚಿವರುಗಳು ಕೆಎಫ್‍ಡಿ , ಪಿಎಫ್‍ಐ ಜತೆಗೆ ಒಳ ಒಪ್ಪಂದ ಮಾಡಿಕೊಂಡು ಹಿಂದುಗಳ ಹಾಗೂ ಪಕ್ಷದ ಕಾರ್ಯಕರ್ತರ ಹತ್ಯೆ ನಡೆಸುತ್ತಾ ಬಂದಿದ್ದು, ಇಲ್ಲವಾದಲ್ಲಿ ಅಂತಹ ಸಂಘಟನೆಗಳನ್ನು ನಿಷೇಧಿಸಬೇಕಿತ್ತು ಎಂದು ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬ್ರಿಜೇಶ್ ಚೌಟ ಹೇಳಿದ್ದಾರೆ. . ಅವರು ಕೊಣಾಜೆ ಗ್ರಾಮ ಪಂಚಾಯಿತಿ ಎದುರುಗಡೆ ಕೊಣಾಜೆ ವಲಯದ ಬಿಜೆಪಿ ಯುವಮೋರ್ಚಾ ವತಿಯಿಂದ ಕೆಎಫ್ ಡಿ , ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಿಜೆಪಿ ಹಮ್ಮಿಕೊಂಡಿರುವ ಪ್ರತಿಭಟನೆಯನ್ನೇ ನಿಲ್ಲಿಸಲು ರಾಜ್ಯ ಸರಕಾರ ಮುಂದಾಗಿದೆ. ಮೂರು ಹಕ್ಕೊತ್ತಾಯಗಳನ್ನು ಮುಂದಿಟ್ಟು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಕೆಎಫ್ ಡಿ ಮತ್ತು ಪಿಎಫ್ ಐ ಸಂಘಟನೆಗಳನ್ನು ನಿಷೇಧಿಸಬೇಕು, ಹಿಂದುಗಳ ಹತ್ಯೆ ಪ್ರಕರಣಗಳನ್ನು ಸಿಬಿಐಗೆ ವಹಿಸಬೇಕು, ನಾಲ್ಕೂವರೆ ವರ್ಷದಲ್ಲಿ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ರಕ್ಷಣೆ ನೀಡದ ಸರಕಾರ ಇಲ್ಲಿನ ಉಸ್ತುವಾರಿ ಸಚಿವರನ್ನು ರಾಜೀನಾಮೆ ಕೊಡಿಸಬೇಕಿದೆ. ಜಮ್ಮು ಕಾಶ್ಮೀರದಲ್ಲಿರುವ ಶಾಂತಿ ಜಿಲ್ಲೆಯಲ್ಲಿ ಇಲ್ಲದಂತಾಗಿದೆ. ಜೈಲಿನೊಳಗಡೆ ಪೊಲೀಸರ ಮೇಲೆ ಹಲ್ಲೆಯಾಗುತ್ತಿದೆ. ದೇರಳಕಟ್ಟೆ…
UN NETWORKS ಸೋಮೇಶ್ವರ: ಧಾರ್ಮಿಕ ಕ್ಷೇತ್ರಗಳಲ್ಲಿ ಸಂಬಂಧಿಸಿ ಕರ್ತವ್ಯ ನಿರ್ವಹಿಸುವ ಮಂದಿಗೆ ಹೆಚ್ಚಿನ ಪ್ರೋತ್ಸಾಹ ಒದಗಿಸುವ ನಿಟ್ಟಿನಲ್ಲಿ, ದೇವಸ್ಥಾನಗಳಲ್ಲಿರುವ ಅರ್ಚಕರ ವೇತನದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಸೋಮೇಶ್ವರದ ಸೋಮನಾಥ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಾಣಗೊಳ್ಳಲಿರುವ ಬ್ರಹ್ಮರಥಕ್ಕೆ ವೀಳ್ಯಪ್ರಧಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಈ ಹಿಂದೆ ಮಾಸಿಕ 7,000 ರೂ. ವೇತನ ಪಡೆಯುತ್ತಿದ್ದ ಅರ್ಚಕರಿಗೆ 14,000 ದಷ್ಟು ವೇತನ ಜಾಸ್ತಿ ಮಾಡಲಾಗಿದ್ದು, ಅಲ್ಲದೆ ವಾರ್ಷಿಕ ಭಡ್ತಿಯನ್ನು ರೂ. 28,000 ದಿಂದ ರೂ. 48,000 ಕ್ಕೆ ರಾಜ್ಯ ಸರಕಾರ ಏರಿಕೆ ಮಾಡಿದೆ. ಹಿಂದಿನ ಸರಕಾರ ನಡೆಸಿದ ಧಾರ್ಮಿಕ ದತ್ತಿ ತಿದ್ದುಪಡಿಯಿಂದಾಗಿ ರಾಜ್ಯಾದ್ಯಂತ ದೇವಸ್ಥಾನಗಳಿಗೆ ಒಂದೇ ಕಾನೂನು ಜಾರಿಯಾಗಿದೆ. ಇದರಿಂದಾಗಿ ವಿವಿದೆಡೆ ಇರುವ ಸ್ಥಳ ಹಾಗೂ ಆಚರಣೆಗಳಿಗೆ ಅನುಗುಣವಾಗಿ ಅನುದಾನ ಬಿಡುಗಡೆಗೊಳಿಸಲು ಸರಕಾರಕ್ಕೆ ಸಾಧ್ಯವಾಗುತ್ತಿಲ್ಲ. ಆದರೂ ಸರಕಾರ ಮುಂದೆ ನಿಂತು ಧಾರ್ಮಿಕ ಕ್ಷೇತ್ರಗಳ ಜತೆಗೆ ಅಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಹೆಚ್ಚಿನ ಆದ್ಯತೆಯನ್ನು ನೀಡುತ್ತಾ ಬಂದಿದ್ದು, ಅಧಿಕಾರಿಗಳು…
UN NETWORKS ತೊಕ್ಕೊಟ್ಟು : ದೇಶದ ಅಭಿವೃದ್ಧಿ, ನಿರುದ್ಯೋಗ ಸಮಸ್ಯೆ ನಿವಾರಣೆಯ ಮೂಲಕ ಕಾಂಗ್ರೆಸ್ ಪ್ರಾರಂಭಿಸಿದ ನವ ಉದಾರಿಕರಣ ನೀತಿಯನ್ನು ಬದಲಾಯಿಸುವ ಭರವಸೆಯೊಂದಿಗೆ ಅಧಿಕಾರಕ್ಕೇರಿದ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರ ಸಾಮಾನ್ಯ ಜನರ ಅಭಿವೃದ್ಧಿಗೆ ಮಾರಕವಾಗಿರುವ ಉದ್ಯಮಿಗಳಿಗೆ ಸಹಕಾರವಾಗಿರುವ ನವ ಉದಾರಿಕರಣ ನೀತಿಗೆ ಅತ್ಯಂತ ವೇಗ ನೀಡಿ ಜಾರಿಗೊಳಿಸಿರುವುದೇ ದೇಶದ ಜಿಡಿಪಿ ಇಳಿಯಲು ಕಾರಣ ಎಂದು ಸಿಪಿಐಎಂ ಜಿಲ್ಲಾ ಸಮಿತಿ ಕಾರ್ಯದರ್ಶಿ ವಸಂತ ಆಚಾರಿ ಅಭಿಪ್ರಾಯಪಟ್ಟರು. ಅವರು ಚುನಾವಣಾ ಭರವಸೆಗಳನ್ನು ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಆಗ್ರಹಿಸಿ ದೇಶದಾದ್ಯಂತ ಜನ ಚಳವಳಿಯ ಅಂಗವಾಗಿ ಸಿಪಿಐಎಂ ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಏರ್ಪಡಿಸಲಾಗಿದ್ದ ಕಾಲ್ನಡಿಗೆ ಜಾಥಾ ಸಂಗಮ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾಗುವ ಮೊದಲು ಇದ್ದ 7 ಶೇಖಡಾ ಜಿಡಿಪಿ 5.7ಕ್ಕೆ ಇಳಿದಿದ್ದು, ಕೋಟ್ಯಾಂತರ ಜನರ ಮೇಲೆ ಸಾಲದ ಹೊರೆ ಬಿದ್ದಿದೆ. ಜಿಡಿಪಿ ಇಳಿಕೆಯಿಂದ ದೇಶ ಅಭಿವೃದ್ಧಿಯಲ್ಲಿ ಹಿಂದೆ ಹೋಗಿದೆ. ಮೂರು ವರ್ಷದ ಹಿಂದೆ ಬಿಜೆಪಿಯ…
UN NETWORKS ಉಳ್ಳಾಲ: 15 ಮಂದಿ ರೌಡಿಗಳ ತಂಡವೊಂದು ಕುಟುಂಬದ ಮಚ್ಚಿನಿಂದ ದಾಳಿ ನಡೆಸಿರುವ ಘಟನೆ ಉಳ್ಳಾಲ ದರ್ಗಾ ಸಮೀಪದ ಮನೆಯೊಂದರಲ್ಲಿ ನಿನ್ನೆ ತಡರಾತ್ರಿ 11.30 ರ ಸುಮಾರಿಗೆ ಸಂಭವಿಸಿದೆ ಮನೆ ಮಾಲೀಕ ಖಾಸಿಮ್, ಆತನ ಪತ್ನಿ ಮೈಮುನಾ ಮಕ್ಕಳಾದ ಸೋಯಲ್, ಅಮಿನ್ ಮೇಲೆ ಮಚ್ಚಿನಿಂದ ಹಲ್ಲೆಗೊಗಾದವರು. ಖಾಸಿಮ್ ಎಂಬವರ ಮತ್ತೋರ್ವ ಮಗ ಹಂಝ್ ನನ್ನು ಕೊಲೆ ಮಾಡಲು ಬಂದಿದ್ದಾಗಿ ಹೇಳಿದ ಹಲ್ಲೆಕೋರರು ಮನೆಯ ಕಿಟಕಿ, ಬಾಗಿಲುಗಳನ್ನು ಪುಡಿಗೈದು ಮನೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸಿದ್ದಾರೆ. ಗಾಯಾಳುಗನ್ನು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೆಲ ದಿನಗಳ ಹಿಂದೆ ಒಂದು ಗುಂಪಿನೊಂದಿಗೆ ದಂಪತಿ ಪುತ್ರ ಹಂಝ್ ಜಗಳವಾಡಿಕೊಂಡಿದ್ದ ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ್ದಾರೆ ಎಂಬ ಸಂಶಯ ವ್ಯಕ್ತವಾಗಿದೆ.
UN NETWORS ಕೊಣಾಜೆ: ಇತ್ತೀಚೆಗೆ ಸುರಿದ ಭಾರಿ ಮಳೆಗೆ ಕೊಣಾಜೆಯಲ್ಲಿ ಬಡ ಯಕ್ಷ ಕಲಾವಿದನ ಮನೆ ಧರೆಗೆ ಉರುಳಿತ್ತು. ತಾನು ಹಾಗೂ ಸಹೋದರಿ ವಾಸವಾಗಿದ್ದ ಮನೆ ಕುಸಿದು ಬಿದ್ದ ಪರಿಣಾಮ ಕಲಾವಿದ ದೇವಪ್ಪ ಗೌಡ ಉಳಿದುಕೊಳ್ಳಲು ಸೂರು ಇಲ್ಲದೆ ಕಂಗೆಟ್ಟು ಹೋಗಿದ್ದರು. ಇದೀಗ ದೇವಪ್ಪ ಗೌಡರವರಿಗೆ ನೂತನ ಮನೆಯೊಂದನ್ನು ನಿರ್ಮಿಸಲು ಕಟೀಲು ಮೇಳದ ಖ್ಯಾತ ಭಾಗವತರಾದ ಸತೀಶ್ ಪಟ್ಲ ನೇತೃತ್ವದ ಯಕ್ಷಧ್ರುವ ಪಟ್ಲ ಫೌಂಡೇಶನ್ ಮುಂದಾಗಿದ್ದು ನೂತನ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಲಾಯಿತು. ಕೊಣಾಜೆಯ ಅಣ್ಣೆರೆಪಾಲು ಎಂಬಲ್ಲಿ ಪುಟ್ಟ ಮನೆಯಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಕುಡುಂಬಿ ಜನಾಂಗದ ದೇವಪ್ಪ ಗೌಡರ ಹರಕಲು ಹಂಚಿನ ಮನೆಯು ಕಳೆದ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕುಸಿದು ಬಿದ್ದ ಪರಿಣಾಮ ದೇವಪ್ಪ ಕುಟುಂಬಸ್ಥರು ಬೀದಿಗೆ ಬಿದ್ದಿದ್ದರು. ಕಟೀಲು ಯಕ್ಷಗಾನ ಮೇಳದಲ್ಲಿ ಚೌಕಿ ನಿರ್ವಾಹಕರಾಗಿ ಕೆಲಸ ನಿರ್ವಹಿಸುತ್ತಿದ್ದ ಹಾಗೂ ಕೋಡಂಗಿಯ ವೇಷವನ್ನು ಧರಿಸುತ್ತಿದ್ದ ದೇವಪ್ಪರಿಗೆ ಮತ್ತೆ ಮನೆ ಕಟ್ಟಲು ಹಣವಿರಲಿಲ್ಲ. ವಿಷಯ ತಿಳಿದ ಮೇಳದ ಖ್ಯಾತ ಭಾಗವತರಾದ ಸತೀಶ್ ಪಟ್ಲರವರು…
UN NETWORKS ದೇರಳಕಟ್ಟೆ : ಯೆನೆಪೋಯ ಆಸ್ಪತ್ರೆಗೆ ಸಂಬಂಧಿಸಿದ ಎಂಟು ಕಾರುಗಳನ್ನು ಪುಡಿಗೈದ ತಂಡ ಮತ್ತು ದರೋಡೆ ಸಹಿತ ಹಿಂದು ಯುವಕರ ಕೊಲೆಗೆ ಯತ್ನಿಸಿದ ಐದು ಮಂದಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ದೇರಳಕಟ್ಟೆ ಯೆನೆಪೋಯ ಆಸ್ಪತ್ರೆ ಬಾಡಿಗೆಗೆ ಪಡೆದಿದ್ದ ಜಾಗದಲ್ಲಿ ನಿಲ್ಲಿಸಲಾಗಿದ್ದ ಎಂಟು ಕಾರುಗಳನ್ನು ಪುಡಿಗೈದ ಮದನಿನಗರದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿಗಳು ಕುತ್ತಾರು ಕಡೆಯಿಂದ ರಾಣಿಪುರ ಕಡೆಗೆ ಹಾದುಹೋಗುವ ಒಬ್ಬಂಟಿ ಬೈಕ್ ಸವಾರರನ್ನು ಮತ್ತು ವಾಹನಗಳಲ್ಲಿ ಪ್ರಯಾಣಿಸುವ ಸಾರ್ವಜನಿಕರನ್ನು ನಿರ್ಜನ ಸ್ಥಳದಲ್ಲಿ ತಡೆದು ಚಿನ್ನಾಭರಣ, ಸೊತ್ತುಗಳನ್ನು ಲೂಟಿಗೈಯ್ಯಲು ಸಂಚು ರೂಪಿಸಿದ್ದರೆಂದು ತಿಳಿದುಬಂದಿದೆ. ಕುತ್ತಾರು ಸಮೀಪ ಗಂಗಾಧರ್ ಎಂಬವರಿಗೆ ಹಲ್ಲೆ, ಪಂಡಿತ್ ಹೌಸ್ ಮೊಬೈಲ್ ಅಂಗಡಿ ಕಳವು, ಕುತ್ತಾರು ಬೇಕರಿ ಅಂಗಡಿ ಕಳವು ನಡೆಸಿದ ಪ್ರಮುಖ ಆರೋಪಿಗಳಾಗಿದ್ದಾರೆ. ದರೋಡೆ ನಡೆಸುವ ಉದ್ದೇಶದಿಂದಲೇ ಪಾರ್ಕಿಂಗ್ ನಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಗಾಜನ್ನು ಪುಡಿಗೈದಿರುವುದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಎಲ್ಲರೂ ಹಿಂದಿನಿಂದಲೂ ಕಳವು ಸಹಿತ ಹಲ್ಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದವರೆಂದು…
N NETWORKS ಉಳ್ಳಾಲ :ಇತಿಹಾಸ ಪ್ರಸಿದ್ಧ ಖುತುಬುಝ್ಝಮಾನ್ ಹಝ್ರತ್ ಅಸ್ಸೆಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ. ದರ್ಗಾ ಮತ್ತು ಕೇಂದ್ರ ಜುಮಾ ಮಸೀದಿ ಉಳ್ಳಾಲ ಇದರ ಜಮಾಅತ್ ವ್ಯಾಪ್ತಗೊಳಪಟ್ಟ 29 ಮೊಹಲ್ಲಾಗಳನ್ನು ಸಂಘಟಿಸಿ ‘ಸೆಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ’ವು ಮಂಚಿಲ ದಾರುಲ್ ಬದ್ರ್‍ನಲ್ಲಿ ಅಸ್ಸೆಯ್ಯಿದ್ ಜಲಾಲ್ ತಂಙಳ್ ಅಳೇಕಲ ಇವರ ನೇತೃತ್ವದಲ್ಲಿ ಅಸ್ತಿತ್ವಕ್ಕೆ ತರಲಾಯಿತು. ಬಹುವನ್ಯ ಉಳ್ಳಾಲ ಖಾಝಿ ಸೆಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್-ಬುಖಾರಿರವರ ನಿರ್ದೇಶನದಲ್ಲಿ ಈ ಸಂಸ್ಥೆಯು ಮುಂದುವರಿಯಲಿದೆ. ಉಳ್ಳಾಲ ದರ್ಗಾ ಮಾಜಿ ಅಧ್ಯಕ್ಷರಾಗಿದ್ದ, ಹಾಲಿ ಅಳೇಕಲ ಜಮಾಅತ್ ಅಧ್ಯಕ್ಷರಾಗಿರುವ ಯು.ಎಸ್. ಹಂಝ ಹಾಜಿ ಗೌರವ ಅಧ್ಯಕ್ಷರಾಗಿ, ಪ್ರಖ್ಯಾತ ಧಾರ್ಮಿಕ ವಿದ್ವಾಂಸರೂ sಅಳೇಕಲ ಮೊಹಲ್ಲಾ ಮದ್ರಸ ಸಂಚಾಲಕರಾಗಿರುವ ಪಿ.ಎಸ್. ಶಿಹಾಬುದ್ದೀನ್ ಸಖಾಫಿ ಅಲ್-ಕಾಮಿಲ್ ಅಧ್ಯಕ್ಷರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಮಂಚಿಲ ಮಸೀದಿ ಪ್ರಧಾನ ಕಾರ್ಯದರ್ಶಿಯಾಗಿರುವ ಅಬ್ದುಲ್ ಹಮೀದ್ ಮಂಚಿಲ, ಕೋಶಾಧಿಕಾರಿಯಾಗಿ ದರ್ಗಾ ಆಡಳಿತ ಸಮಿತಿ ಸದಸ್ಯ ಮೊಹಮ್ಮದ್ ತೊಕ್ಕೊಟ್ಟು, ಉಪಾಧ್ಯಕ್ಷರುಗಳಾಗಿ ಮದನಿ ನಗರ ಜುಮಾ ಮಸೀದಿ ಆಡಳಿತ ಸಮಿತಿ ಸದಸ್ಯ…
UN NETWORKS ಉಳ್ಳಾಲ: ಕಳೆದ ನಾಲ್ಕು ತಿಂಗಳಿನಿಂದ ಕಸ ವಿಲೇವಾರಿಯಲ್ಲಿ ಗುತ್ತಿಗೆದಾರರು ವಿಫಲರಾಗಿದ್ದು, ಗುತ್ತಿಗೆದಾರರ ಬದಲು ಇರುವ ಪೌರಾಯುಕ್ತ ಕಾರ್ಮಿಕರನ್ನು ಬಳಸಿಕೊಂಡು ಈ ಹಿಂದೆ ಇದ್ದ ರೀತಿಯಲ್ಲೇ ಇನ್ನು ಮುಂದೆ ತ್ಯಾಜ್ಯ ವಿಲೇವಾರಿಯನ್ನು ನಡೆಸಲಾಗುವುದು ಎಂದು ಉಳ್ಳಾಲ ನಗರ ಸಭೆ ಪೌರಾಯುಕ್ತೆ ವಾಣಿ ಆಳ್ವ ಅಭಿಪ್ರಾಯಪಟ್ಟರು. ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೇನ್ ಕುಂಇಮೋನು ಅಧ್ಯಕ್ಷತೆಯಲ್ಲಿ ಉಳ್ಳಾಲ ನಗರಸಭೆಯ ಸಭಾಂಗಣದಲ್ಲಿ ಮಂಗಳವಾರ ನಡೆದ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸದಸ್ಯ ಅಶ್ರಫ್ ಬಾವಾ ಕೋಡಿ ಕಸ ವಿಲೇವಾರಿಗೆ ಬೇಕಾದರೆ ವಾಹನಗಳು ಇದ್ದರೂ ಸರಿಯಾದ ರೀತಿಯಲ್ಲಿ ಕಸ ವಿಲೇವಾರಿ ನಡೆಸಲು ವಿಫಲವಾಗಿದೆ. ಅದರಲ್ಲೂ ಗುತ್ತಿಗೆದಾರ ಫಕೀರಪ್ಪ ಸರಿಯಾಗಿ ಸ್ಪಂದಿಸುತ್ತಿಲ್ಲ. ನಾಯಿಗಳು ತ್ಯಾಜ್ಯವನ್ನು ಹಿಡಿದು ಓಡುತ್ತಿದ್ದು, ಎಲ್ಲೆಂದರಲ್ಲಿ ತ್ಯಾಜ್ಯ ಬೀಳುತ್ತಿದ್ದು, ಜನರಿಂದ ಶುಲ್ಕ ಪಡೆದು ತ್ಯಾಜ್ಯ ವಿಲೇವಾರಿಯಾಗದೆ ಇರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂದರು. ಪೌರಾಯುಕ್ತೆ ವಾಣಿ ಆಳ್ವ ಮಾತನಾಡಿ ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ಮೂರು ಬಾರಿ ಟೆಂಡರ್ ಆಗಿದೆ. ಟೆಂಡರ್‍ನಲ್ಲಿ ಒಬ್ಬರೇ ಭಾಗವಹಿಸಿದ್ದರಿಂದ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳದೆ…
UN NETWORKS ಕುತ್ತಾರು: ಚಲಿಸುತ್ತಿದ್ದ ಬಸ್ಸಿನಡಿಗೆ ಬಿದ್ದು ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಕುತ್ತಾರು ದೇವಸ್ಥಾನದ ಬಳಿ ಇದೀಗ ಸಂಭವಿಸಿದೆ. ಕೇರಳದ ಪಯ್ಯನ್ನೂರು ಮೂಲದ ವೈಸರಾಜ್ (೪೨) ಮೃತರು. ಬಗಂಬಿಲದ ಸಂಬಂಧಿಕರ ಮನೆಗೆ ಬಂದು ವಾಪಸ್ ಆಗುವ ಸಂದರ್ಭ ಘಟನೆ ನಡೆದಿದೆ. ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.

