UN NETWORKS ತೊಕ್ಕೊಟ್ಟು: ವಿಶ್ವ ಸಾಕ್ಷರತಾ ದಿನ ಪ್ರಯುಕ್ತ Red Plus ಉಪಸಮಿತಿಯ ಸಹಯೋಗದೊಂದಿಗೆ ಸೆಕ್ಟರ್ ಮಟ್ಟದಲ್ಲಿ ಸಾಕ್ಷರತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ತೊಕ್ಕೊಟ್ಟುವಿನಲ್ಲಿ ನಡೆಯಿತು. ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಸಾಕ್ಷರತೆ ಬಗ್ಗೆ ತರಗತಿ ನಡೆಸಿಕೊಟ್ಟರು. ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ ರವರಿಗೆ Read Plus ಹೊರತಂದ ಪುಸ್ತಕವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್. ಕ್ಯಾಂಪಸ್ ಕಾರ್ಯದರ್ಶಿ ಬಾತಿಶ್ ಮಂಚಿಲ, ಮೀಡಿಯಾ ಕನ್ವೀನರ್ ಮನ್ಸೂರ್ ಚೆಂಬುಗುಡ್ಡೆ, ಎಸ್.ಬಿ.ಎಸ್ ಕನ್ವೀನರ್ ಸಾಲಿಂ ಪಟ್ಲ, ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯರಾದ ಶಮೀರ್ ಹಿದಾಯತ್ ನಗರ , ಮಹ್ರೂಫ್ ಹಿದಾಯತ್ ನಗರ, ಅಲ್ಫಾಝ್ ಪಟ್ಲ ಉಪಸ್ಥಿತರಿದ್ದರು.
Author: UllalaVani
UN NETWORKS ಉಳ್ಳಾಲ: ವಿಶ್ವದಾದ್ಯಂತ ಸ್ಪೇನ್ ದೇಶ ಅಂಗಾಂಗ ದಾನಗಳಲ್ಲಿ ಮುಂಚೂಣಿಯಲ್ಲಿದ್ದು, ಭಾರತ ದ್ವಿತೀಯ ಸ್ಥಾನವನ್ನು ಹೊಂದಿದೆ. ಇಲ್ಲಿ ಕೇರಳ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಕಿಡ್ನಿ ಫೆಡರೇಷನ್ ಆಫ್ ಇಂಡಿಯಾದ ಚೇರ್‍ಮೆನ್ ಫಾ.ಡೇವಿಸ್ ಚಿರಾಮೆಲ್ ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯಗಳು ಅಂಗಾಂಗ ದಾನಗಳ ಕುರಿತ ಜಾಗೃತಿಯನ್ನು ಮಾಸಿಕವಾಗಿ ಹಮ್ಮಿಕೊಳ್ಳಬೇಕಿದೆ. ಇಂತಹ ಕಾರ್ಯಕ್ರಮಗಳಲ್ಲಿ ಅಂಗಾಂಗ ದಾನಗೈದವರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿಸಿ, ಅವರನ್ನು ಗೌರವಿಸುವಂತಹ ಕೆಲಸವೂ ಆಗಬೇಕಿದೆ. ಸ್ವಾರ್ಥ ಸಮಾಜದಲ್ಲಿ ಸಾವು ಸಂಭವಿಸಿದ ನಂತರ ಎಲ್ಲರೂ ನಿಸ್ವಾರ್ಥಿಗಳಾಗುತ್ತಿದ್ದಾರೆ. ಆದರೆ ಅಂಗಾಂಗ ದಾನ ಮಾಡುವ ಒಪ್ಪಂದಕ್ಕೆ ಸಹಿ ಹಾಕುವ ಮುನ್ನವೂ ಕಣ್ಣೀರು ಹಾಕುವಂತಹ ಪ್ರಮೇಯವೂ ದಾನಿಗಳಿಂದ ನಡೆಯುತ್ತಿದೆ. ಸ್ವಾರ್ಥವಿದ್ದಲ್ಲಿ ನಿಶ್ಶಕ್ತಿ ಇರುತ್ತದೆ, ನಿಸ್ವಾರ್ಥವಿದ್ದಲ್ಲಿ ಶಕ್ತಿ ಹೆಚ್ಚಾಗುವುದು. ಸಾವು ನಂತರ ಅಂಗಾಂಗ ದಾನಗೈಯ್ಯುವ ಮೂಲಕ 10 ಜನರಿಗೆ ಖುಷಿಯನ್ನು ನೀಡಿದಲ್ಲಿ ಯಾವುದನ್ನೂ ಕಳೆದುಕೊಳ್ಳುವುದಿಲ್ಲ. ಮಾನವೀಯತೆಯುಳ್ಳ ಸಮಾಜದಲ್ಲಿ ಪರಸ್ಪರ ಸಹಕರಿಸುವ ಮೂಲಕ ಎಲ್ಲರೂ ಬಾಳಬೇಕಿದೆ ಎಂದರು. ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್ ಶೃತಿ ಮಾತನಾಡಿ ಅಂಗಾಂಗ…
UN NETWORKS ಉಳ್ಳಾಲ: ತಾಯಿಯಲ್ಲಿರುವ ಪ್ರತಿಯೊಂದು ಅಂಶಗಳು ಮಗುವಿಗೆ ಹಾಲುಣಿಸುವ ಮೂಲಕ ದೊರೆಯುವ ಹಿನ್ನೆಲೆಯಲ್ಲಿ ಸತತ ಆರು ತಿಂಗಳುಗಳ ಕಾಲ ತಾಯಂದಿರು ಮಕ್ಕಳಿಗೆ ಮೊಲೆಹಾಲು ಒದಗಿಸುವುದು ಸೂಕ್ತ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಪೋಷಣೆ ಮತ್ತು ಪಥ್ಯಶಾಸ್ತ್ರ, ಮಕ್ಕಳ ವಿಭಾಗ ಮತ್ತು ಎನ್‍ಎಸ್‍ಪಿಇಸಿಸಿ ವಿಭಾಗಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹ-2017 (ನ್ಯಾಷನಲ್ ನ್ಯೂಟ್ರಿಷಿಯನ್ ವೀಕ್) ಕುರಿತ ಒಂದು ವಾರ ನಡೆಯಲಿರುವ `ಮಗುವಿನ ಉತ್ತಮ ಆರೋಗ್ಯಕ್ಕಾಗಿ’ ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಸೇವನೆ ಜಾಗೃತಿ ಕಾರ್ಯಕ್ರಮಕ್ಕೆ ಎ. ಬಿ.ಶೆಟ್ಟಿ ದಂತ ಕಾಲೇಜಿನ ತ್ರಿಂಶತಿ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿರುವ ಪೌಷ್ಠೀಕರಣ ವೃದ್ಧಿಸಲು ತಾಯಿ ಹಾಲಿನಿಂದ ಮಾತ್ರ ಸಾಧ್ಯ. ರಾಷ್ಟ್ರೀಯ ಪೌಷ್ಠಿಕತೆ ದಿನಾಚರಣೆಯನ್ನು ಮಾಡುವ ಮೂಲಕ ತಾಯಂದಿರಿಗೆ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನಾರ್ಹ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಗುಂಗಿನ ತಾಯಂದಿರು ಮಗು ಹುಟ್ಟಿಸಿದ ನಂತರದ ಎರಡೇ ತಿಂಗಳುಗಳಲ್ಲಿ ಮೊಲೆ…
UN NETWORKS ಉಳ್ಳಾಲ: ದೇರಳಕಟ್ಟೆ ಪಾನೀರು ಧರ್ಮಕೇಂದ್ರದಲ್ಲಿ ತೆನೆಹಬ್ಬವನ್ನು ಆಚರಿಸಲಾಯಿತು. ಪ್ರಧಾನ ಧರ್ಮ ಗುರುಗಳು ರೆ| ಫಾ| ಪಾವುಲ್ ದಿವ್ಯ ಬಲಿ ಪೂಜೆಯನ್ನು ನೆರವೇರಿಸಿದರು. ಈ ಸಂದರ್ಭ ಧರ್ಮ ಗುರು ರೆ| ಫಾ| ಕ್ಲೊಡ್ ಮಸ್ಕರೇನೆಸ್ ಹಾಗೂ ಪಾನೀರು ಚರ್ಚ್ ಧರ್ಮ ಗುರು ರೆ| ಫಾ| ಡೆನ್ನಿಸ್ ಸುವಾರಿಸ್, ಚರ್ಚ್ ಪಾಲನ ಮಂಡಳಿ ಉಪಾಧ್ಯಕ್ಷರು, ಕಾರ್ಯದರ್ಶಿ ಸರ್ವ ಸದಸ್ಯರು, ಧರ್ಮ ಭಗಿನಿಯರು ಮತ್ತು ಗುರಿಕಾರು ಸರ್ವ ಕ್ರೈಸ್ತ ಭಾಂದವರು ಹಾಜರಿದ್ದರು.
UN NETWORKS ಕೋಟೆಕಾರ್: ಕೋಟೆಕಾರ್ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಾರ್ಯಕರ್ತರಿಂದ ಬೈಕ್ ರ್ಯಾಲಿಗೆ ಕೋಟೆಕಾರ್ ಶ್ರೀ ವಿಷ್ಣು ಮೂರ್ತಿ ದೇವಸ್ಥಾನದಲ್ಲಿ ನಾರಾಯಣ ಕುಂಪಲ ಚಾಲನೆಯನ್ನು ನೀಡಿದರು. ಈ ಸಂದರ್ಭ ಕೋಟೆಕಾರ್ ಬಿಜೆಪಿ ಅಧ್ಯಕ್ಷ ಮೋಹನ್ ರಾಜ್ ಕನೀರುತೋಟ, ವಾರ್ಡ್ ಆಧ್ಯಕ್ಷ ಶಂಕರ ನಾರಾಯಣ ಆಚಾರ್ಯ, ಉದಯಕುಮಾರ್ ಸುಳ್ಳೆಂಜೀರು, ವಿದ್ಯಾ ಶೆಟ್ಟಿ, ಭಾರತಿ ಗಟ್ಟಿ, ದೇವದಾಸ್ ಕೋಟೆಕಾರ್, ಸುಜಿತ್ ಕೋಟೆಕಾರ್, ಸುನಿಲ್ ಕೋಟೆಕಾರ್, ಪ್ರಸಾದ್ ಕೋಟೆಕಾರ್, ಪ್ರಮೋದ್ ಕೋಟೆಕಾರ್, ಯತೀಶ್ ಶೆಟ್ಟಿ, ಕೃಷ್ಣ ಶೆಟ್ಟಿ ತಾಮರ್ ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ರೋಟರಿ ಕ್ಲಬ್ ಮಂಗಳೂರು ಇದರ ವತಿಯಿಂದ ನೀಡಲ್ಪಡುವ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿಯನ್ನು ಕುಂಪಲ ಹಿ.ಪ್ರಾ. ಶಾಲೆಯ ಮುಖ್ಯ ಶಿಕ್ಷಕ ವಿಶ್ವನಾಥ್ ಇವರು ಪಡೆದಿದ್ದು ಮಂಗಳೂರಿನ ಮೋತಿಮಹಲ್ ಹೊಟೇಲ್ ನಲ್ಲಿ ಗುರುವಾರ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ವೆಂಕಟೇಶ್ ಪೈ, ಉಷಾ ಪೈ, ನೀತಾ ಕಾಮತ್, ನಿಖಿತಾ ಕಾಮತ್ ಡಾ| ನರೇಂದ್ರ ಕಾಮತ್, ರೊ| ರೋಹಿನಾಥ್, ಆಧ್ಯಕ್ಷ ರೊ| ವಸಂತ್ ಶೆಣೈ, ರೊ| ಸಂಜೀವ ಪೂಜಾರಿ, ರೊ| ವಸಂತ್ ಪೈ, ರೊ| ಡಾ| ಅರ್ಜುನ್ ನಾಯಕ್, ರೊ| ಡಾ| ಸಿದ್ದಾರ್ಥ್ ಶೆಟ್ಟಿ, ಕಾರ್ಯದರ್ಶಿ ರೊ| ಸಿ.ಎ. ನವೀನ್ ನಾರಾಯಣ, ನಾರಾಯಣ ಕುಂಪಲ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ರೋಟರಿ ಮಹಿಳಾ ವಿಭಾಗದಿಂದ ಕುಂಪಲ ಶಾಲಾ ಗ್ರಂಥಾಲಯಕ್ಕೆ ರೂ. 5000 ಮೌಲ್ಯದ ಪುಸ್ತಕಗಳನ್ನು ಶಿಕ್ಷಕ ವಿಶ್ವನಾಥ್ ರವರಿಗೆ ಹಸ್ತಾಂತರಿಸಿದರು.
UN NETWORKS ಮುಡಿಪು : 24 ಗಂಟೆಗಳೊಳಗೆ ಸಂಸದರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಹಿಂಪಡೆಯದೇ ಇದ್ದಲ್ಲಿ, ಮಂಗಳೂರು ಕ್ಷೇತ್ರ ವ್ಯಾಪ್ತಿಯಲ್ಲಿ ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದಾಗಿ ಕುರ್ನಾಡು ತಾಲೂಕು ಪಂಚಾಯತ್ ಸದಸ್ಯ ಹಾಗೂ ಕುರ್ನಾಡು ಶಕ್ತಿ ಕೇಂದ್ರದ ಅಧ್ಯಕ್ಷ ನವೀನ್ ಪಾದಲ್ಪಾಡಿ ಎಚ್ಚರಿಸಿದ್ದಾರೆ. ಅವರು ಬೈಕ್ ರ್ಯಾಲಿ ವೇಳೆ ಪೊಲೀಸರು ಕಾರ್ಯಕರ್ತರನ್ನು ಕೂಡಿಹಾಕಿರುವುದನ್ನು ಪ್ರಶ್ನಿಸಿದ ಸಂಸದ ನಳಿನ್ ಕಟೀಲ್ ವಿರುದ್ಧ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಬಿಜೆಪಿ ಕುರ್ನಾಡು ಶಕ್ತಿ ಕೇಂದ್ರದ ವತಿಯಿಂದ ಮುಡಿಪು ಜಂಕ್ಷನ್ನಿನಲ್ಲಿ ಶುಕ್ರವಾರ ತಡರಾತ್ರಿ ವೇಳೆ ಹಮ್ಮಿಕೊಂಡ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು. ತುರ್ತು ಪರಿಸ್ಥಿತಿಯ ಕಾಲಕ್ಕಿಂತಲೂ ಕಡೆಯದಾಗಿ ರಾಜ್ಯದಲ್ಲಿ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಜನತೆಗೆ ನಿದ್ರೆಯಿಲ್ಲದ ರಾತ್ರಿಗಳು ನಿರ್ಮಾಣವಾಗುತ್ತಿದೆ. ಬಿಹಾರದಂತಹ ವಾತಾವರಣ ರಾಜ್ಯದಲ್ಲಿ ನಿರ್ಮಾಣವಾಗಿದ್ದು, ಅಲ್ಲಲ್ಲಿ ನಿರಂತರ ಹತ್ಯೆಗಳು ನಡೆಯುತ್ತಲೇ ಇವೆ. ಪ್ರಜಾಪ್ರಭುತ್ವದ ವ್ಯವಸ್ಥೆಯಡಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಬಿಡದ ರಾಜ್ಯ ಸರಕಾರದ ಧೋರಣೆಯೇ ಜನವಿರೋಧಿಯಾಗಿದೆ. ಕಾರ್ಯಕರ್ತರ ಪರ ಮಾತನಾಡಿದ ಸಂಸದರ ವಿರುದ್ಧವೇ ಪ್ರಕರಣ ದಾಖಲಿಸಿರುವ ರಾಜ್ಯ ಸರಕಾರದ ಉಸ್ತುವಾರಿ ಸಚಿವರು…
UN NETWORKS ತೊಕ್ಕೊಟ್ಟು: ಮೇರಿ ಮಾತೆಯ ಜನ್ಮ ದಿನ ಹಾಗೂ ತೆನೆ ಹಬ್ಬದ ಸಂಭ್ರಮವನ್ನು ಸಂತ ಸೆಬೆಸ್ಟಿಯನ್ ಧರ್ಮ ಕೇಂದ್ರದಲ್ಲಿ ಸಪ್ಟೆಂಬರ್ 8 ರಂದು ವಿಜೃಂಭಣೆಯಿಂದ ಆಚರಿಸಲಾಯಿತು. Photo: Pacchu Permannur ಆತೀ ವಂದನೀಯ ಡಾ|ಜೋಸೆಪ್ ಮಾರ್ಟಿನ್,ರೆಕ್ಟರ್ ಸಂತ ಜೋಸೆಪ್ ಸೆಮಿನರಿ ಮಂಗಳೂರು ಇವರು ಸಂಭ್ರಮದ ಬಲಿಪೂಜೆಯನ್ನು ಅರ್ಪಿಸಿದರು.800 ಕ್ಕೂ ಅಧಿಕ ಮಂದಿ ಮಕ್ಕಳು ಮೇರಿ ಮಾತೆಗೆ ಭಕ್ತಿ ಪೂರ್ವಕವಾಗಿ ಹೂಗಳನ್ನು ಅರ್ಪಿಸಿದರು. ಈ ಸಂಧರ್ಭದಲ್ಲಿ ಆತೀ ವಂದನೀಯ ಡಾ|ಜೆ.ಬಿ ಸಲ್ಡಾನ್ಹಾ.ಪ್ರದಾನ ಧರ್ಮಗುರುಗಳು,ವಂದನೀಯ ಸ್ಟ್ಯಾನಿ ಪಿಂಟೋ ಹಾಗೂ ವಂದನೀಯ ಲೈಝಿಲ್ ಡಿ’ಸೋಜ ಸಹಾಯಕ ಧರ್ಮಗುರುಗಳು,ವಂದನೀಯ ಪ್ರವೀಣ್ ಜೋಯ್ ಸಲ್ಡಾನ್ಹ ವಂದನೀಯ ಫೆಲಿಕ್ಸ್ ನೊರೊನ್ಹ ,ಉಪ ಯಾಜಕರಾದ ವಂದನೀಯ ತ್ರಿಶಾನ್ ಡಿ’ಸೋಜ ಉಪಸ್ಥಿರಿದ್ದು ಬಲಿಪೂಜೆ ಅರ್ಪಿಸಿದರು.ಸುಮಾರು 3000 ಕ್ಕೂ ಅಧಿಕ ಭಕ್ತಾಧಿಗಳು ಈ ಸಂಭ್ರಮದ ಬಲಿಪೂಜೆಯಲ್ಲಿ ಪಾಲ್ಗೊಂಡು ದೈವಿಕ ಅನುಭವವನ್ನು ಪಡೆದರು.
UN NETWORKS ಉಳ್ಳಾಲ: ಮಹಾವಿಷ್ಣುವಿನ ವಾಮನಾವತಾರದ ಸ್ಮರಣೆಗಾಗಿ ಹಾಗೂ ಬಲಿ ಚಕ್ರವರ್ತಿಯ ಆಗಮನವನ್ನು ಪ್ರತಿನಿಧಿಸುವ ಹಬ್ಬವಾದ ‘ಓಣಂ’ಅನ್ನು ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು. ಓಣಂ ಹಬ್ಬದ ಮಹತ್ವವನ್ನು ವಿದ್ಯಾರ್ಥಿಗಳು ಭಾಷಣ, ಸಾಕ್ಷ್ಯಚಿತ್ರ ಮತ್ತು ತಿರುವಾದಿರ ನೃತ್ಯದ ಮೂಲಕ ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ವಿಷೇಶವಾದ ಪುಷ್ಪರಂಗವಲ್ಲಿ (ಪೂಕಳಂ)ನ್ನು ವಿದ್ಯಾರ್ಥಿಗಳು ರಚಿಸಿದರು. ಈ ಕಾರ್ಯಕ್ರಮವನ್ನು ಒಂಭತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಮಧುಪಾಲ್ ಮತ್ತು ಇಶಾ ನಿರೂಪಿಸಿದರು. ಈ ಕಾರ್ಯಕ್ರಮದಲ್ಲಿ ಶಾಲಾಪ್ರಾಂಶುಪಾಲರು, ಉಪಪ್ರಾಂಶುಪಾಲರು ಮತ್ತು ಶಿಕ್ಷಕವರ್ಗದವರು ಉಪಸ್ಥಿತರಿದ್ದರು.
UN NETWORKS ಮಂಗಳೂರು: ಭಾರತೀಯ ಜೀವ ವಿಮಾ ನಿಗಮ ಮಂಗಳೂರು ಪ್ರಥಮ ಶಾಖೆಯಲ್ಲಿ 61ನೇ ವರ್ಷದ ವಿಮಾ ಸಪ್ತಾಹದಂಗವಾಗಿ ಜ್ಯೂನಿಯರ್ ರಾಜ್‍ಕುಮಾರ್ ಖ್ಯಾತಿಯ ಜಗದೀಶ ಶಿವಪುರ ಇವರಿಂದ ಸ್ವರಾಂಜಲಿ ವೈವಿಧ್ಯಮಯ ಸಂಗೀತ ರಸಮಂಜರಿ ಕಾರ್ಯಕ್ರಮ ಜರಗಿತು. ಕಾರ್ಯಕ್ರಮವನ್ನು ಶಾಖೆಯ ಮುಖ್ಯಾಶಾಖಾಧಿಕಾರಿ ಹೆಚ್. ರಾಧಾಕೃಷ್ಣ ಭಟ್ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು. ಸಹಾಯಕ ಶಾಖಾಧಿಕಾರಿ ಮೋಹನ ಕುಮಾರ್ , ಕಂಕನಾಡಿ ಶಾಖಾಧಿಕಾರಿ ಸುದರ್ಶನ್ ಪೈ ,ಆಭಿವೃದ್ದಿ ಆಧಿಕಾರಿ ಆರ್.ಕೆ.ಉಪ್ಪೂರು.ಸಾಹಿತಿ ರಾಧಕೃಷ್ಣ,ರಿತೇಶ್ ಬಾಳಿಗ,ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಗೀತ ರಸಧಾರೆಯ ಮಧ್ಯೆ ಚಿತ್ರ ರಚನೆಯನ್ನು ರಚಿಸಿ ಮನರಂಜಿಸಿದ ಡಾ.ವರ್ಣೋದಯ , ಹಾಡುಗಾರ್ತಿ ಅಕ್ಷತಾ ಕಡೇಶಿವಾಲಯ ಮತ್ತುಜ್ಯೂನಿಯರ್ ರಾಜ್‍ಕುಮಾರ್ ಜಗದೀಶ ಶಿವಪುರ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರಾಧಾಕೃಷ್ಣ ಅವರು ನಿರೂಪಿಸಿ ,ಅರ್.ಕೆ ಉಪ್ಪೂರು ಸ್ವಾಗತಿಸಿ ,ಆಭಿವೃದ್ದಿ ಆಧಿಕಾರಿ ಧರ್ಮವತಿ ವಂದಿಸಿದರು.

