Author: UllalaVani

Kannada News From Coastal Karnataka

UN NETWORKS ಕೋಟೆಕಾರು: ಶೃಂಗೇರಿ ಶ್ರೀ ಜಗದ್ಗುರು ಶಂಕರಾಚಾರ್ಯ ಮಹಾಸಂಸ್ಥಾನಂ ದಕ್ಷಣಾಮ್ನಾಯ ಶ್ರೀ ಶಾರದಾ ಪೀಠ ಕೋಟೆಕಾರು ಶಾಖಾ ಮಠದಲ್ಲಿ ಸೆ. 21ರಿಂದ 30ರವರೆಗೆ ಶ್ರೀ ಶಾರದಾ ಶರನ್ನವರಾತ್ರಿ ಮಹೋತ್ಸವ ನಡೆಯಲಿದೆ ಎಂದು ಉತ್ಸವ ಸಮಿತಿಯ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹೇಳಿದರು. ಶುಕ್ರವಾರ ಶಾಖಾ ಮಠದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಸೆ. 21ರಂದು ಸಂಜೆ ಗಂಟೆ 5.00ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಗಣ್ಯರು ಭಾಗವಹಿಸಲಿದ್ದಾರೆ. ಬಳಿಕ ಹರಿಕಥೆ, ಹರಿದಾಸರ ಶ್ರೀ ದೇವಕೀ ತನಯ ಕೋಡುಲ, ಪಾಶುಪಥ ಪ್ರದಾನ ಕಥಾಭಾಗ ನಡೆಯಲಿದೆ. ಸೆ. 22ರಂದು ಸಂಜೆ 5.30ಕ್ಕೆ ವಾಲಿಮೋಕ್ಷ ಯಕ್ಷಗಾನ ತಾಳಮದ್ದಲೆ, 23ರಂದು ಸಾಂಸ್ಕøತಿಕ ಕಾರ್ಯಕ್ರಮ, 24ರಿಂದ29ರವರೆಗೆ ಸಂಜೆ ಗಂಟೆ 5.30ಕ್ಕೆ ಕರ್ನಾಟ ಸಂಗೀತ ಕಛೇರಿ ಸೆ. 30ರಂದು ಹರಿಕಥೆ ಹಾಗೂ ಶ್ರೀ ದೇವಿ ಮಹಾತ್ಮೆ ಕಥಾಭಾಗ ನಡೆಯಲಿದೆ. ಕಾರ್ಯಕ್ರಮದ ಪ್ರಯುಕ್ತ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಲಾಯಿತು. ಶಾಖಾ ಮಠದ ಧರ್ಮಾಧಿಕಾರಿ ಬೊಳ್ಳಾವ…

Read More

UN NETWORKS ಉಳ್ಳಾಲ: ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಮಂಗಳೂರು ದಕ್ಷಿಣ ವಲಯ ಮತ್ತು ಮದನಿ ಪ್ರೌಢ ಶಾಲೆ ಅಳೇಕಲ ಉಳ್ಳಾಲ ಇದರ ಸಂಯುಕ್ತ ಆಶ್ರಯದಲ್ಲಿ ನಡೆದ ಮಂಗಳೂರು ತಾಲೂಕು ಮಟ್ಟದ ಪ್ರೌಢ ಶಾಲಾ ಬಾಲಕರ ಕಬಡ್ಡಿ ಪಂದ್ಯಾಟದಲ್ಲಿ ಸರಕಾರಿ ಪ್ರೌಢ ಶಾಲೆ ಕಲ್ಕಟ್ಟ, ಮಂಜನಾಡಿ, ಪ್ರಥಮ ಸ್ಥಾನವನ್ನು ಗಳಿಸಿ ಜಿಲ್ಲಾಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿರುತ್ತದೆ.

Read More

UN NETWORKS ಉಳ್ಳಾಲ: ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ ಗುರುವಾರ ಬಾಲಯೋಗಿ ಅಮೃತಾನಂದ ಸ್ವಾಮೀಜಿಯ ನೇತೃತ್ವದಲ್ಲಿ ವಿಜೃಂಭಣೆಯಿಂದ ನಡೆಯಿತು. ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಕ್ಷೇತ್ರದಲ್ಲಿ ಶ್ರೀ ಕೃಷ್ಣ ಮೂರ್ತಿಯ ಪ್ರತಿಷ್ಠೆಯೊಂದಿಗೆ ನಡೆದ ಧಾರ್ಮಿಕ ಕಾರ್ಯಕ್ರಮ ವಿಜೃಂಭಣೆಯ ಮೊಸರು ಕುಡಿಕೆಯೊಂದಿಗೆ ಸಮಾರೋಪ ಕಂಡಿತು. ದೇವರ ನಾಮದ ಜಯಕಾರದೊಂದಿಗೆ ಕುಂಪಲದಲ್ಲಿ ನಡೆದ ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ಕೃಷ್ಣನ ಮೂರ್ತಿಯೊಂದಿಗೆ ಮೆರವಣಿಗೆಯಲ್ಲಿ ಹೆಜ್ಜೆ ಹಾಕಿದ ಭಕ್ತರು ದಾರಿಯಲ್ಲಿ ಹಾಕಲಾದ ಕುಡಿಕೆ ಯನ್ನು ಒಡೆದು ಸಂಭ್ರಮಿಸಿದರು. ಮೊಸರು ಕುಡಿಕೆ ಕಾರ್ಯಕ್ರಮಕ್ಕೆ ಸಂಬಂಧಿಸಿ ನಡೆದ ವಿವಿಧ ಆಟೋಟ ಸ್ಪರ್ಧೆ ಯನ್ನು ಉದ್ಯಮಿ ದೇವೀಶ್ ಸರಳಾಯ ಕುಂಪಲ ಉದ್ಘಾಟಿಸಿದರು. ಲಗೋರಿ, ಕಬಡ್ಡಿ, ಚೆಂಡಾಟ ಮತ್ತು ಮಡಿಕೆ ಒಡೆಯುವ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.

Read More

UN NETWORKS ಉಳ್ಳಾಲ: ಕೇಂದ್ರ ಸಾಹಿತ್ಯ ಅಕಾಡಮಿ ವತಿಯಿಂದ ತುಳು ಭಾಷೆಗೆ ನೀಡಿದ ಕೊಡುಗೆಗಾಗಿ ಪ್ರೋ. ಅಮೃತ ಸೋಮೇಶ್ವರ ಅವರಿಗೆ ನೀಡಲಾದ ಭಾಷಾ ಸಮ್ಮಾನ್ ಪ್ರಶಸ್ತಿಯನ್ನು ನಿಟ್ಟೆಯ ವೈದ್ಯಕೀಯ ಕಾಲೇಜಿನಲ್ಲಿ ಗುರುವಾರ ಪ್ರದಾನ ಮಾಡಲಾಯಿತು. ಅನಾರೋಗ್ಯದ ನಿಮಿತ್ತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೋ. ಅಮೃತ ಸೋಮೇಶ್ವರ ಅವರಿಗೆ ಆಸ್ಪತ್ರೆಯ ಸಭಾಂಗಣದಲ್ಲೇ ಇಂದು ಅತಿಥಿಗಳ ಸಮ್ಮುಖದಲ್ಲಿ ಈ ಪ್ರತಿಷ್ಠಿತ ಸಮ್ಮಾನ್ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರಧಾನ ಮಾಡಿದ ಕೇಂದ್ರ ಸಾಹಿತ್ಯ ಅಕಾಡಮಿಯ ಉಪಾಧ್ಯಕ್ಷ ಹಾಗೂ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರು ಮಾತನಾಡಿ ಪಾಡ್ದನಗಳನ್ನು ಅನುವಾದ ಮಾಡಿ ಕನ್ನಡಕ್ಕೆ ಭಾಷಾಂತರ ನಡೆಸಿದ ಅಮೃತ ಸೋಮೇಶ್ವರ ಜತೆಗಿನ 30 ವರ್ಷಗಳ ಸ್ನೇಹ. ಸಿರಿ ಪಾಡ್ದನ ಸೇರಿದಂತೆ ತನ್ನ ಕೃತಿಯನ್ನು ತುಳುವಿಗೆ ಅನುವಾದಿಸಿದ ಕೀರ್ತಿ ಅಮೃತ ಸೋಮೇಶ್ವರ ಅವರಿಗೆ ಸಲ್ಲುತ್ತದೆ. ಸೋಮೇಶ್ವರ್ ಅವರ ಕೃತಿಗಳು ಯಕ್ಷಗಾನದ, ಕನ್ನಡ ಮತ್ತು ತುಳು ಭಾಷಾ ಕೃತಿಗಳು ಮೂರು ಸಂಪುಟಗಳಲ್ಲಿ ಬಿಡುಗಡೆ ಮಾಡಬೇಕಿದೆ ಎಂದ ಅವರು ಆಸ್ಪತ್ರೆಯಲ್ಲಿದ್ದಾರೆ…

Read More

UN NETWORKS ಉಳ್ಳಾಲ: ಮಹಿಳೆಯರ ಸಬಲೀಕರಣಕ್ಕಾಗಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಪ್ರತಿ ಗ್ರಾಮಗಳಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದು, ಮಹಿಳೆಯರು ಸ್ವಉದ್ಯೋಗದ ಮೂಲಕ ಜೀವನ ರೂಪಿಸಿಕೊಳ್ಳುವ ಉದ್ದೇಶ ಇಟ್ಟುಕೊಂಡು ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯೆ ರಶೀದಾ ಭಾನು ಅಭಿಪ್ರಾಯಪಟ್ಟರು. ಅವರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ವತಿಯಿಂದ ಬೆಳ್ಮ ರೆಂಜಾಡಿ ಕೇಂದ್ರ ಜುಮಾ ಮಸೀದಿ ಮದರಸ ಕಟ್ಟಡದಲ್ಲಿ ಗುರುವಾರ ಅಯೋಜಿಸಿದ ಟೈಲರಿಂಗ್ ತರಬೇತಿ ಶಿಬಿರ “ವಿನ್ಯಾಸ ಟೈಲರಿಂಗ್ ಸೆಂಟರ್” ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಆರು ತಿಂಗಳ ಕಾಲ ಸತತ ಪ್ರಯತ್ನ ಪಟ್ಟು ತರಬೇತಿ ಪಡೆದುಕೊಂಡು ತರಬೇತಿ ಪಡೆಯುವವರು ಉತ್ತಮ ಟೈಲರ್‍ಗಳಾಗಬೇಕಿದೆ. ಪ್ರತಿ ಗ್ರಾಮಗಳಲ್ಲಿ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡು ಮಹಿಳೆಯರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ಟ್ಯಾಲೆಂಟ್ ರಿಸರ್ಚ್ ಫೌಂಡೇಷನ್ನಿನ ಕಾರ್ಯಕ್ರಮ ಸಮಾಜಕ್ಕೆ ಪೂರಕ ಎಂದರು. ಬೆಳ್ಮ ಗ್ರಾ.ಪಂ ಅಧ್ಯಕ್ಷ ವಿಜಯ ಕೃಷ್ಣ ಪೂಜಾರಿ ತರಬೇತಿಯನ್ನು ಉದ್ಘಾಟಿಸಿದರು. ಬೆಳ್ಮ ಗ್ರಾ.ಪಂ ಸದಸ್ಯೆ ಶರ್ಮಿಳಾ , ಆಸರೆ ವುಮೆನ್ಸ್ ಫೌಂಡೇಶನ್ ಸ್ಥಾಪಕ ಅಧ್ಯಕ್ಷೆ ಶಬೀನ…

Read More

UN NETWORKS ಮಂಗಳೂರು: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಎಸ್‍ಐಸಿ ಕಿನ್ಯ ಇದರ ವಾರ್ಷಿಕ ಮಹಾಸಭೆಯು ಸೈಯ್ಯದ್ ಅಮೀರ್ ತಂಙಳ್‍ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಾರೂನ್ ಅಹ್ಸನಿ ಉದ್ಘಾಟನೆಗೈದು, ಕೆ. ಪಿ. ಅಬ್ದುರ್ರಹ್ಮಾನ್ ದಾರಿಮಿ ತಬೂಕ್ ಪ್ರಾಸ್ತಾವಿಕವಾಗಿ ಮಾತನಾಡಿ ನೂತನ ಸಾರಥಿಗಳನ್ನು ಆಯ್ಕೆಮಾಡಲಾಯಿತು. ಗೌರವ ಅಧ್ಯಕ್ಷರುಗಳಾಗಿ-ಸೈಯ್ಯದ್ ಅಮೀರ್ ತಂಙಳ್, ಸೈಯ್ಯದ್ ಬಾತಿಷ್ ತಂಙಳ್, ಅಧ್ಯಕ್ಷರಾಗಿ-ಅಬ್ದುಲ್ ಖಾದರ್ ಕಾಯಿಂಞ ಹಾಜಿ, ಉಪಾಧ್ಯಕ್ಷರುಗಳಾಗಿ-ಹಾರೂನ್ ಅಹ್ಸನಿ ಕಿನ್ಯ, ಅಬ್ಬೂಹಾಜಿ, ಮೊೈದಿನ್ ಮೀಂಪ್ರಿ, ಪ್ರಧಾನ ಕಾರ್ಯದರ್ಶಿಯಾಗಿ-ಮುಸ್ತಫ ಫೈಝಿ, ಜೊತೆ ಕಾರ್ಯದರ್ಶಿಗಳಾಗಿ- ಆರಿಫ್ ಎಂ. ಎನ್., ಹಮೀದ್ ಕುತುಬಿಯಾನಗರ, ಸಿರಾಜುದ್ದೀನ್ ಸಾಫಿ, ಸಂಘಟನಾ ಕಾರ್ಯದರ್ಶಿಯಾಗಿ-ಇಬ್ರಾಹಿಂ ಸಾಗ್, ಸಂಚಾಲಕರಾಗಿ-ಫಾರೂಕ್ ಕುತುಬಿಯಾನಗರ, ಸುಹೈಲ್ ಕೂಡಾರ, ಕಛೇರಿ ಕಾರ್ಯದರ್ಶಿಯಾಗಿ-ಟಿ. ಎಂ. ಮುಹಮ್ಮದ್, ಕೋಶಾಧಿಕಾರಿಯಾಗಿ-ಕೆ. ಎಸ್. ಶೇಖಬ್ಬ ಹಾಜಿ, ಮಜ್ಲಿಸುನ್ನೂರ್ ಅಮೀರ್ ಆಗಿ-ಅಮೀರ್ ತಂಙಳ್, ಸಹಚಾರಿ ಮೆಡಿಕಲ್ ಡಿಪಾಟ್‍ಮೆಂಟ್-ಎ. ಟಿ. ಅಬ್ದುಲ್ ಹಮೀದ್, ರೂಂ ಬಾಡಿಗೆ ಉಸ್ತುವಾರಿಯಾಗಿ-ಕೆ. ಎಸ್. ಶೇಖಬ್ಬ ಹಾಜಿ, ಚೀಟ್‍ಫಂಡ್ ಉಸ್ತುವಾರಿಗಳಾಗಿ-ಅಬ್ದುಲ್ ಖಾದರ್ ಹಾಜಿ, ಶೇಖಬ್ಬ ಹಾಜಿ, ಹಮೀದ್ ಕುತುಬಿಯಾ ನಗರ,…

Read More

UN NETWORKS ಮುಂಬಯಿ: ತುಳುಕನ್ನಡಿಗರ ಅಂತರಾಷ್ಟ್ರೀಯ ಪ್ರಸಿದ್ಧ ವೃತ್ತಿಪರ ಶಿಕ್ಷಣ ಸಂಸ್ಥೆ ಎಂದೆಣಿಸಿದ ಇಂಡಿಯಾ ಇಂಟರ್‍ನೇಶನ ಲ್ ಟ್ರೇಡ್ ಸೆಂಟರ್ (ಐಐಟಿಸಿ) ಸಂಸ್ಥಾಪಕ ಎಸ್.ಕೆ ಉರ್ವಾಲ್ ಅವರು ಐಐಟಿಸಿ ಮೂಲಕ ರಾಷ್ಟ್ರ್ರದ ಸಾವಿರಾರು ಮಕ್ಕಳು ಸ್ವದ್ಯಮಿಗಳಾಗಿ ಬದುಕು ರೂಪಿಸುವಲ್ಲಿ ಯಶಸ್ವಿ ಆಗಿದ್ದಾರೆ. ದೃಢವಿಶ್ವಾಸ, ಅಭಿಲಾಷೆ, ಶ್ರಮಜೀವನದಿಂದಲೇ ಸಫಲತಾ ಬದುಕು ರೂಪಿಸಲು ಸಾಧ್ಯವಾಗಿದ್ದು ಇವೆಲ್ಲಕ್ಕೂ ಆತ್ಮವಿಶ್ವಾಸ ಮುಖ್ಯವಾದದ್ದು. ಫ್ಯಾಶನ್‍ರಂಗ ಬರೇ ಜೀವನ ನಿರ್ಹಹಣೆ ಮಾತ್ರವಲ್ಲ ಬದುಕಿಗೆ ಪ್ರತಿಷ್ಠೆಯನ್ನೂ ತಂದೊದಗಿಸುವ ಕ್ಷೇತ್ರವಾಗಿದೆ. ಈ ಮೂಲಕ ವಿಶೇಷವಾಗಿ ಮಹಿಳೆಯರು ಸ್ವದ್ಯಮಿಗಳಾಗುವ ವಿಫುಲ ಅವಕಾಶಗಳಿವೆ ಎಂದು ಬಾಲಿವುಡ್‍ನ ಹೆಸರಾಂತ ವಿನ್ಯಾಸಗಾರ ಆ್ಯಶ್ಲೀ ರೆಬೆಲ್ಲೋ ತಿಳಿಸಿದರು. ಅಂಧೇರಿ ಪೂರ್ವದ ಹೊಟೇಲ್ ಲೀಲಾ ಕೆಂಪೆನ್‍ಸ್ಕಿ ಬಾಲ್‍ರೂಮ್ ಸಭಾಗೃಹದಲ್ಲಿ ತುಳುಕನ್ನಡಿಗರ ಅಂತರಾಷ್ಟ್ರೀಯ ಪ್ರಸಿದ್ಧ ವೃತ್ತಿಪರ ಶಿಕ್ಷಣ ಸಂಸ್ಥೆ ಎಂದೆಣಿಸಿದ ಐಐಟಿಸಿ ಸಂಸ್ಥೆ ತನ್ನ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ `ಫ್ಯಾಶನ್ ರಂಗದ ಭವಿಷ್ಯ’ ಕುರಿತಾದ ಕಾರ್ಯಗಾರ ನಡೆಸಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಆ್ಯಶ್ಲೀ ರೆಬೆಲ್ಲೋ ಮಾತನಾಡಿದರು. ನಿವೃತ್ತಿಯಿಲ್ಲದ ಉದ್ಯೋಗಕ್ಕೆ ಫ್ಯಾಶನ್‍ರಂಗ ಸಹಕಾರಿ. ಫ್ಯಾಶನ್‍ರಂಗ ಸ್ವಬದುಕು ರೂಪಿಸುವ…

Read More

UN NETWORKS ಕೊಣಾಜೆ: ಮಂಗಳೂರು ವಿವಿಯಲ್ಲಿ ಸುಮಾರು 4.80ಕೋಟಿ ರೂ. ಅವ್ಯವಹಾರ ನಡೆದ ಕುರಿತಾಗಿ ಸರಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದ್ದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಂದ ರಾಜ್ಯದ ನಂ. 1ವಿವಿ ಎಂದು ಹೊಗಳ್ಪಟ್ಟ ಮಂಗಳೂರು ವಿವಿಯ ಅವ್ಯವಹಾರದ ಕುರಿತಾಗಿ ಸಿದ್ಧರಾಮಯ್ಯನವರ ಸರಕಾರದ ತಂಡವೇ ತನಿಖೆ ನಡೆಸುವ ಹಂತಕ್ಕೆ ತಲುಪಿದ್ದು ಮಂಗಳೂರಿಗರ ಪಾಲಿಗೆ ಬೇಸರ ತರುವಂತದ್ದು, ಅದಕ್ಕೆ ಕಾರಣೀಕರ್ತರಾದ ವಿವಿಯ ಕುಲಪತಿ ಪ್ರೋ . ಕೆ. ಭೈರಪ್ಪ ಮಂಗಳೂರು ವಿವಿಗೆ ಕಳಂಕ ಎಂದು ದಲಿತ ಸಂಘಟನೆಗಳ ಒಕ್ಕೂಟದ ಜಿಲ್ಲಾ ಸಂಚಾಲಕ ಅಶೋಕ್ ಕೊಂಚಾಡಿ ಅಭಿಪ್ರಾಯಪಟ್ಟರು. ಕೆಲಸದಿಂದ ವಜಾಗೊಳಿಸಿದ ಕಾರ್ಮಿಕರನ್ನು ಸೇವೆಗೆ ನಿಯುಕ್ತಿಗೊಳಿಸಬೇಕು, ಕಾರ್ಮಿಕ ವಿರೋಧಿ ಕ್ಯಾನನ್ ಏಜೆನ್ಸಿಯನ್ನು ತಕ್ಷಣ ಬದಲಾಯಿಸಬೇಕು, ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸಲು ಕುಲಪತಿ ತಕ್ಷಣ ಮಧ್ಯಪ್ರವೇಶಿಸಬೇಕು ಎಂದು ಅಗ್ರಹಿಸಿ ದಕ್ಷಿಣ ಕನ್ನಡ ಜಿಲ್ಲ ದಲಿತ ಸಂಘಟನೆಗಳ ಒಕ್ಕೂಟ ಹಾಗೂ ಸಿಐಟಿಯು ಉಳ್ಳಾಲ ವಲಯ ಸಮಿತಿ ಜಂಟಿ ಆಶ್ರಯದಲ್ಲಿ ಮಂಗಳೂರು ವಿವಿಯ ಆಡಳಿತ ಸೌಧದ ಬಳಿ ಸೋಮವಾರ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು…

Read More

UN NETWORKS ಹರೇಕಳ : ಸ್ಕೂಲ್‍ಆಫ್ ಸೋಶಿಯಲ್ ವರ್ಕ್, ರೋಶನಿ ನಿಲಯ ಮಂಗಳೂರಿನ ಎನ್.ಎಸ್.ಎಸ್. ಘಟಕ, ಗ್ರಾಮೀಣ ಅಭಿವೃದ್ಧಿ ವಿಭಾಗ ಹಾಗೂ ಕ್ರೀಡಾ ವಿಭಾಗದ ಜಂಟಿ ಆಶ್ರಯದಲ್ಲಿ ಮತ್ತು ವಿಜಯಗ್ರಾಮೀಣ ಅಭಿವೃದ್ಧಿ ಪ್ರತಿಷ್ಟಾನದ ಸಹಯೋಗದೊಂದಿಗೆ ದೆಬ್ಬೇಲಿ ಹರೇಕಳ ಪಂಚಾಯಿತಿ ಬಳಿ ಒಂದು ದಿನದ `ಗ್ರಾಮೀಣ ಕ್ರೀಡೆ-2017’ ಕಾರ್ಯಕ್ರಮವು ಭಾನುವಾರ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಉದಯ ಹೆಗ್ಡೆ ಅವರು, ಇಂದು ನಾವು ಆಧುನಿಕತೆಯತ್ತ ಹೆಜ್ಜೆ ಇಡುತ್ತಿದ್ದರೂ ನಮ್ಮ ಗ್ರಾಮೀಣ ಸಂಸ್ಕøತಿ, ಸೊಗಡನ್ನು ಎಂದಿಗೂ ಮರೆಯಬಾರದು ಎಂದರು. ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಪ್ರಸಾದ್ ರೈ ಕಲ್ಲಿಮಾರ್ ಅವರು ಮಾತನಾಡಿ, ಆಧುನಿಕ ಕಾಲಘಟ್ಟದಲ್ಲಿ ಇಂದು ಜನರು ಗ್ರಾಮೀಣ ಕ್ರೀಡೆಯಿಂದ ದೂರವಾಗುತ್ತಿದ್ದಾರೆ. ಆದ್ದರಿಂದ ಗ್ರಾಮೀಣ ಕ್ರೀಡೆ ಹಾಗೂ ಸಂಸ್ಕøತಿಯ ಮಹತ್ವವನ್ನು ಮುಂದಿನ ಜನಾಂಗಕ್ಕೂ ತಿಳಿಯಪಡಿಸುವ ಕೆಲಸವನ್ನು ನಾವು ಮಾಡಬೇಕಾಗಿದೆ ಎಂದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಹರೇಕಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಮಹಾಬಲ ಹೆಗ್ಡೆ,…

Read More

UN NETWORKS ಬಂಟ್ವಾಳ: ಸುನ್ನೀ ಯುವಜನ ಸಂಘ (ಎಸ್. ವೈ. ಎಸ್) ಕಾರಾಜೆ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಾರಾಜೆ ನೂರುಲ್ ಹುದಾ ಮದ್ರಸ ಹಾಲ್ ನಲ್ಲಿ ಅಬ್ದುಲ್ ಜಲೀಲ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಬೊಳ್ಳಾಯಿ ಯೂಸುಫ್ ಮದನಿಯವರು ಉದ್ಛಾಟಿಸಿದರು. ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿಯವರು ಮಂಡಿಸಿದ ವಾರ್ಷಿಕ ವರದಿ ಹಾಗೂ ವಾರ್ಷಿಕ ಆಯ-ವ್ಯಯ ಲೆಕ್ಕಪತ್ರವನ್ನು ಸಭೆಯು ಸರ್ವಾನುಮತಗಳಿಂದ ಅಂಗೀಕರಿಸಿದ ನಂತರ ಚುನಾವಣಾ ವೀಕ್ಷಕರಾದ ಕೊಳಕೆ ಅಬ್ದುಲ್ಲ ಹಾಗೂ ಮುಹಮ್ಮದ್ ರವರ ನಾಯಕತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ : ಅಬ್ದುಲ್ ಜಲೀಲ್ , ಪ್ರಧಾನ ಕಾರ್ಯದರ್ಶಿ : ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಕೋಶಾಧಿಕಾರಿ : ಕೆ. ಇಬ್ರಾಹೀಂ (ಮೋನಾಕ),ಉಪಾಧ್ಯಕ್ಷರುಗಳು : ಮುಹಮ್ಮದ್ ರಫೀಖ್ , ರಫೀಖ್, ಕಾರ್ಯದರ್ಶಿಗಳು : ಮುಹಮ್ಮದ್ ಫಾರೂಖ್, ಮುಹಮ್ಮದ್ ಹನೀಫ್, ಸದಸ್ಯರುಗಳು : ಲತೀಫ್ ಹಾಜಿ , ಇಬ್ರಾಹೀಂ ಮೇಸ್ತ್ರಿ, ಮುಹಮ್ಮದ್ ಅನ್ಸಾರ್, ಅಶ್ರಫ್, ಇಬ್ರಾಹೀಂ, ಅಬ್ದುಲ್…

Read More