Author: UllalaVani

Kannada News From Coastal Karnataka

UN NETWORKS ಬಂಟ್ವಾಳ: ಸುನ್ನೀ ಯುವಜನ ಸಂಘ (ಎಸ್. ವೈ. ಎಸ್) ಕಾರಾಜೆ ಶಾಖೆಯ ವಾರ್ಷಿಕ ಮಹಾಸಭೆಯು ಇತ್ತೀಚೆಗೆ ಕಾರಾಜೆ ನೂರುಲ್ ಹುದಾ ಮದ್ರಸ ಹಾಲ್ ನಲ್ಲಿ ಅಬ್ದುಲ್ ಜಲೀಲ್ ರವರ ಅಧ್ಯಕ್ಷತೆಯಲ್ಲಿ ಜರುಗಿತು. ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಬೊಳ್ಳಾಯಿ ಯೂಸುಫ್ ಮದನಿಯವರು ಉದ್ಛಾಟಿಸಿದರು. ಪ್ರಧಾನ ಕಾರ್ಯದರ್ಶಿ ಜೆಪ್ಪು ಅಬ್ದುಲ್ ರಹ್ಮಾನ್ ಮದನಿಯವರು ಮಂಡಿಸಿದ ವಾರ್ಷಿಕ ವರದಿ ಹಾಗೂ ವಾರ್ಷಿಕ ಆಯ-ವ್ಯಯ ಲೆಕ್ಕಪತ್ರವನ್ನು ಸಭೆಯು ಸರ್ವಾನುಮತಗಳಿಂದ ಅಂಗೀಕರಿಸಿದ ನಂತರ ಚುನಾವಣಾ ವೀಕ್ಷಕರಾದ ಕೊಳಕೆ ಅಬ್ದುಲ್ಲ ಹಾಗೂ ಮುಹಮ್ಮದ್ ರವರ ನಾಯಕತ್ವದಲ್ಲಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷ : ಅಬ್ದುಲ್ ಜಲೀಲ್ , ಪ್ರಧಾನ ಕಾರ್ಯದರ್ಶಿ : ಜೆಪ್ಪು ಅಬ್ದುರ್ರಹ್ಮಾನ್ ಮದನಿ, ಕೋಶಾಧಿಕಾರಿ : ಕೆ. ಇಬ್ರಾಹೀಂ (ಮೋನಾಕ),ಉಪಾಧ್ಯಕ್ಷರುಗಳು : ಮುಹಮ್ಮದ್ ರಫೀಖ್ , ರಫೀಖ್, ಕಾರ್ಯದರ್ಶಿಗಳು : ಮುಹಮ್ಮದ್ ಫಾರೂಖ್, ಮುಹಮ್ಮದ್ ಹನೀಫ್, ಸದಸ್ಯರುಗಳು : ಲತೀಫ್ ಹಾಜಿ , ಇಬ್ರಾಹೀಂ ಮೇಸ್ತ್ರಿ, ಮುಹಮ್ಮದ್ ಅನ್ಸಾರ್, ಅಶ್ರಫ್, ಇಬ್ರಾಹೀಂ, ಅಬ್ದುಲ್…

Read More

UN NETWORKS ಉಳ್ಳಾಲ : ವಿಶ್ವ ಸಾಕ್ಷರತಾ ದಿನದ ಅಂಗವಾಗಿ ತೊಕ್ಕೊಟ್ಟು ಸೆಕ್ಟರ್ ವತಿಯಿಂದ KCF Dubai Zone ಕಾರ್ಯಕರ್ತರಾದ ಮಹಮ್ಮದ್ ಆರಿಫ್ ರ ಮದುವೆಯ ಉಡುಗೊರೆಯಾಗಿ Read Plus ಪ್ರಕಾಶನದ ಪುಸ್ತಕಗಳನ್ನು ನೀಡಲಾಯಿತು. ತೊಕ್ಕೊಟ್ಟು ಸೆಕ್ಟರ್ ಕಾರ್ಯದರ್ಶಿ ಮನ್ಸೂರ್ ಚೆಂಬುಗುಡ್ಡೆ, ಚೆಂಬುಗುಡ್ಡೆ ಯೂನಿಟ್ ಉಪಾಧ್ಯಕ್ಷರಾದ ನದೀಮ್ BK, ಸೆಕ್ರೆಟರಿ ಶಿಯಾಬ್ ದಾರಂದಬಾಗಿಲು ಕಾರ್ಯಕರ್ತರಾದ ತೌಸಿಫ್ ಮುಂಡೋಳಿ, ನವಾಝ್ ಮುಂಡೋಳಿ, KCF Abudhabi Zone ಕಾರ್ಯಕರ್ತರಾದ ಸಂಶೀರ್ ದಾರಂದಬಾಗಿಲು ಮಜೀದ್ ದಾರಂದಬಾಗಿಲು ಉಪಸ್ಥಿತರಿದ್ದರು.

Read More

UN NETWORKS ಕಿನ್ಯಾ: ಸೋಶಿಯಲ್ ಡೆಮೊಕ್ರೆಟಿಕ್ ಆಫ್ ಇಂಡಿಯಾ ಕಿನ್ಯಾ ಶಾಖೆ ಮತ್ತು ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜು ಸಹಯೋಗದೊಂದಿಗೆ ರಕ್ತದಾನ ಶಿಬಿರ ಕಿನ್ಯಾ ರೆಹ್ಮಾತ್ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಎಸ್‍ಡಿಪಿಐ ದ.ಕ ಜಿಲ್ಲಾ ಕಾರ್ಯದರ್ಶಿ ಅಶ್ರಫ್ ಮಂಚಿ ಮಾತನಾಡಿ ನೊಂದವರಿಗೆ ಸಹಕರಿಸುವ ಕಾರ್ಯ ಮಹತ್ತರವಾದದ್ದು, ತುರ್ತು ಸಂದರ್ಭ ರಕ್ತಕ್ಕಾಗಿ ಪರದಾಡುವಂತಹ ಸ್ಥಿತಿ ಹಿಂದೆ ಇತ್ತು. ಆದರೆ ಸಂಘ ಸಂಸ್ಥೆಗಳು ಜಾಗೃತಿ ಮೂಡಿಸುವ ಹಾಗೂ ರಕ್ತದಾನ ಶಿಬಿರಗಳಿಂದಾಗಿ ಅಂತಹ ಸಮಸ್ಯೆಯನ್ನು ದೂರವಾಗಿಸಲಾಗಿದೆ ಎಂದರು. ಅಲ್ ಇಂಡಿಯಾ ಇಮಾಂ ಕೌನ್ಸಿಲ್ ದ.ಕ ಅಧ್ಯಕ್ಷ ಮಜೀದ್ ನಿಝಾಮಿ ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಯೆನೆಪೋಯ ಮೆಡಿಕಲ್ ಕಾಲೇಜಿನ ರಕ್ತ ಶೇಖರಣೆ ವಿಭಾಗದ ಡಾ. ಪ್ರಿಯಾಂಕ ರಕ್ತದಾನ ಮಹತ್ವದ ಬಗ್ಗೆ ಮಾಹಿತಿ ನೀಡಿದರು. ಈ ಸಂದರ್ಭ ಎಸ್‍ಡಿಪಿಐ ಕಿನ್ಯಾ ಶಾಖೆ ಅಧ್ಯಕ್ಷ ಕಾಸೀಂ ಕಿನ್ಯಾ, ಅಲ್ ಇಂಡಿಯಾ ಇಮಾಂ ಕೌನ್ಸಿಲ್ ಆಧ್ಯಕ್ಷ ರಫೀಕ್ ದಾರಿಮಿ, ಎಸ್‍ಡಿಪಿಐ ಮಂಗಳೂರು ವಿಧಾನ…

Read More

UN NETWORKS ನರಿಂಗಾನ: ಕಪ್ಪು ಕಲ್ಲು ಸಾಗಾಟ ನಡೆಸುತ್ತಿದ್ದ ಲಾರಿಯೊಂದು ತೋಡಿಗೆ ಮಗುಚಿಬಿದ್ದಿರುವ ಘಟನೆ ಕೊಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ನರಿಂಗಾನದ ಸರ್ಕುಡೇಲು ಎಂಬಲ್ಲಿ ಇಂದು ಬೆಳಿಗ್ಗೆ ಸಂಭವಿಸಿದೆ. ಸರ್ಕುಡೇಲು ಕಲ್ಲಿನ ಕೋರೆಯಿಂದ ಕಪ್ಪು ಕಲ್ಲು ಸಾಗಾಟ ನಡೆಸುವ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿದ ಲಾರಿ ಅಲ್ಲೇ ಸಮೀಪದಲ್ಲೇ ತೋಡಿಗೆ ಉರುಳಿ ವಾಲಿ ನಿಂತಿದೆ. ಘಟನೆಯಲ್ಲಿ ಲಾರಿ ಚಾಲಕ ಹಾಗೂ ಕ್ಲೀನರ್ ಗಾಯಗಳಿಲ್ಲದೆ ಪಾರಾಗಿದ್ದಾರೆ.

Read More

UN NETWORKS ಬೋಳಿಯಾರು: ಬೋಳಿಯಾರು ಒಡಕ್ಕಿನಕಟ್ಟೆ ಶ್ರೀ ರಾಮ ಭಜನಾ ಮಂಡಳಿ ವತಿಯಿಂದ ಗೋವಿಗಾಗಿ ಮೇವು ಎಂಬ ಆಶಯದೊಂದಿಗೆ ಕೆಸರ್ದ ಕಂಡಡ್ ಒಂಜಿ ದಿನ ಗ್ರಾಮೀಣ ಕ್ರೀಡಾಕೂಟ ಹಾಗೂ ಭತ್ತದ ನಾಟಿ ಕಾರ್ಯ ಬೋಳಿಯಾರು ಜಕ್ರಿಬೆಟ್ಟು ಕುಂಟೆಪುಣಿ ಬಾಕಿಮಾರು ಗದ್ದೆಯಲ್ಲಿ ಜರಗಿತು. ಗದ್ದೆಯನ್ನು ಕೃಷಿ ಯೋಗ್ಯ ಭೂಮಿಯಾಗಿ ಪರಿವರ್ತನೆ, ಭತ್ತದ ಕೃಷಿಯನ್ನು ಮರೆತ ಯುವಜನತೆಗೆ ಕೃಷಿ ಚಟುವಟಿಕೆಯತ್ತ ಪ್ರೋತ್ಸಾಹ, ಉತ್ಪತ್ತಿಯಾದ ಭತ್ತದ ಹುಲ್ಲನ್ನು ಗೋ ಶಾಲೆಗೆ ಸಮರ್ಪಿಸುವುದು, ಜಾನಪದ ಕ್ರೀಡೆಗಳ ಜತೆಯಲ್ಲಿ ಮಣ್ಣಿನ ಸಂಪರ್ಕ ಯುವಕರಲ್ಲಿ ಬೆಳೆಯುವಂತೆ ಮಾಡುವುದು, ಊರಿನ ಜನರ ಒಗ್ಗಟ್ಟು, ಸಾಮರಸ್ಯ ಬಲಪಡಿಸುವ ಉದ್ದೇಶ ಕಾರ್ಯಕ್ರಮದ್ದಾಗಿತ್ತು. ಗದ್ದೆಗೆ ಕೋಣ ಇಳಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಪ್ರಗತಿಪರ ಕೃಷಿಕರಾದ ಗುಣಕರ ಆಳ್ವ ಬೋಳ್ಯಾರುಗುತ್ತು ಉದ್ಘಾಟಿಸಿದರು. ದೇಜಪ್ಪ ಮೂಲ್ಯ ಮನ್ಕಾರ್, ಸೀತಾರಾಮ ಶೆಟ್ಟಿ ಬೋಳ್ಯಾರು ಪೊಯ್ಯೆ, ಪದ್ಮನಾಭ ಮೂಲ್ಯ ಒಡಕ್ಕಿನಕಟ್ಟೆ, ಶಿವಪ್ಪ ನಾಯ್ಕ್ ಕಟ್ಟದಬಾಗಿಲು ಮುಖ್ಯ ಅತಿಥಿಗಳಾಗಿದ್ದರು. ಲಕ್ಷ್ಮೀಶ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಕೊಣಾಜೆ: ಇಂದಿನ ಆಧುನಿಕ ಜಗತ್ತು ಸ್ಪರ್ಧಾತ್ಮಕವಾಗಿದ್ದು ಹಾಗೆಯೇ ಇಂಜಿನಿಯರಿಂಗ್ ಕ್ಷೇತ್ರದಲ್ಲಿಯೂ ಹಲವಾರು ಸವಾಲುಗಳು ಎದುರಾಗುತ್ತಿದ್ದು ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಗಳು ಮೌಲ್ಯಯುತ ಶಿಕ್ಷಣದೊಂದಿಗೆ ಮುನ್ನಡೆಯುವುದರೊಂದಿಗೆ ವಿದ್ಯಾರ್ಥಿಗಳು ಕೂಡಾ ಜ್ಞಾನ ಕೌಶಲ್ಯದೊಂದಿಗೆ ಸವಾಲುಗಳನ್ನು ಸಮರ್ಥವಾಗಿ ಎದುರಿಸಬೇಕಿದೆ ಎಂದು ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ.ಎಂ.ಅಬ್ದುಲ್ ಸಲಾಮ್ ಅವರು ಅಭಿಪ್ರಾಯ ಪಟ್ಟರು. ಅವರು ಶನಿವಾರ ನಡುಪದವು ಪಿ.ಎ.ಇಂಜಿನಿಯರಿಂಗ್ ಕಾಲೇಜಿನಲ್ಲಿ 2017ನೇ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಉನ್ನತ ಮಾನವೀಯ ಮೌಲ್ಯಗಳೊಂದಿಗೆ ಇಂದಿನ ಆಧುನಿಕತೆಗೆ ಪೂರಕವಾಗುವುವಂತೆ ವಿದ್ಯಾರ್ಥಿಗಳು ತಮಗಿರುವ ಅವಕಾಶಗಳನ್ನು ಬಳಸಿಕೊಂಡು ಜೀವನದಲ್ಲಿ ಉನ್ನತ ಸಾಧನೆಯತ್ತ ಮುನ್ನಡೆಯಬೇಕು. ಅಲ್ಲದೆ ದೇಶದ ಪ್ರತಿಷ್ಟಿತ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪಿ.ಎ.ಇಂಜಿನಿಯರಿಂಗ್ ಕಾಲೇಜು ಒಂದಾಗಿ ಗುರುತಿಸಲ್ಪಟ್ಟಿದೆ ಎಂದರು. ಸಮಾಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಮ್‍ಎಸ್‍ಎಂಇ ಇಲಾಖೆಯ ನಿರ್ದೇಶಕ ಶ್ರೀನಿವಾಸ ಎಂ.ಜಮಖಂಡಿ ಅವರು, ಪದವಿ ಪ್ರದಾನ ಕಾರ್ಯಕ್ರಮವು ಜೀವನದ ಅಮೂಲ್ಯ ಕ್ಷಣಗಳಾಗಿದ್ದು ವಿದ್ಯಾರ್ಥಿಗಳ ಈ ಸಾಧನೆಯಲ್ಲಿ ಪೋಷಕರ ಪಾತ್ರವು ಪ್ರಮುಖವಾದುದು. ಭಾರತವು ಇಂದು ವರ್ಷಕ್ಕೆ…

Read More

UN NETWORKS ಕೊಣಾಜೆ: ಇಂದಿನ ಆಧುನಿಕ ಕಾಲಘಟ್ಟದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವು ಬಹಳಷ್ಟು ಅಭಿವೃದ್ದಿಯನ್ನು ಕಾಣುತ್ತಿದ್ದರೂ ಇದರ ವ್ಯಾಪ್ತಿಯು ದೇಶದ ಮೂಲೆ ಮೂಲೆಗೆ ಇನ್ನೂ ತಲುಪಿಲ್ಲ. ಆದ್ದರಿಂದ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದ ಅಭಿವೃದ್ದಿ ಯೋಜನೆಗಳು ಪ್ರತಿಯೊಬ್ಬರಿಗೂ ಹಾಗೂ ದೇಶದ ಉದ್ದಗಲಕ್ಕೂ ತಲುಪುವಲ್ಲಿ ಇಂತಹ ವಿಚಾರ ಸಂಕಿರಣಗಳು ಪೂರಕವಾಗಲಿ ಎಂದು ಅರಣ್ಯ ಮತ್ತು ಪರಿಸರ ವಿಜ್ಞಾನ ಸಚಿವರಾದ ಬಿ.ರಮಾನಾಥ ರೈ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗಗಳ ಹಾಗೂ ಭಾರತೀಯ ವಿಜ್ಞಾನ ಪರಿಷತ್ ಬೆಂಗಳೂರು ಇದರ ಆಶ್ರಯದಲ್ಲಿ `ರೀಚಿಂಗ್ ಆಂಡ್ ಅನ್‍ರೀಚ್‍ಡ್ ಥ್ರೂ ಸೈಯನ್ಸ್ ಆಂಡ್ ಟೆಕ್ನಾಲಜಿ’ ಎಂಬ ವಿಷಯದಲ್ಲಿ ಎರಡು ದಿನಗಳ ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣವನ್ನು ಶುಕ್ರವಾರ ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರವು ಅಭಿವೃದ್ಧಿಯಲ್ಲಿ ಪ್ರಧಾನವಾದ ಪಾತ್ರವಹಿಸುತ್ತದೆ. ಆದರೂ ಕೂಡಾ ಈ ಕ್ಷೇತ್ರದಲ್ಲಿ ನಿರೀಕ್ಷಿತ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಈ ಕ್ಷೇತ್ರದಲ್ಲಿ…

Read More

UN NETWORKS ತೊಕ್ಕೊಟ್ಟು:  ವಿಶ್ವ ಸಾಕ್ಷರತಾ ದಿನ ಪ್ರಯುಕ್ತ Red Plus ಉಪಸಮಿತಿಯ ಸಹಯೋಗದೊಂದಿಗೆ ಸೆಕ್ಟರ್ ಮಟ್ಟದಲ್ಲಿ ಸಾಕ್ಷರತೆಯ ಬಗ್ಗೆ ಜಾಗೃತಿ ಕಾರ್ಯಕ್ರಮ ತೊಕ್ಕೊಟ್ಟುವಿನಲ್ಲಿ ನಡೆಯಿತು. ಡಿವಿಜನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ  ಸಾಕ್ಷರತೆ ಬಗ್ಗೆ ತರಗತಿ ನಡೆಸಿಕೊಟ್ಟರು. ಸೆಕ್ಟರ್ ಉಪಾಧ್ಯಕ್ಷ ಇಮ್ರಾನ್ ಸ್ವಲಾತ್ ನಗರ ರವರಿಗೆ Read Plus ಹೊರತಂದ ಪುಸ್ತಕವನ್ನು ಹಸ್ತಾಂತರಿಸಲಾಯಿತು. ಈ  ಸಂದರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್. ಕ್ಯಾಂಪಸ್ ಕಾರ್ಯದರ್ಶಿ ಬಾತಿಶ್ ಮಂಚಿಲ, ಮೀಡಿಯಾ  ಕನ್ವೀನರ್ ಮನ್ಸೂರ್ ಚೆಂಬುಗುಡ್ಡೆ,  ಎಸ್.ಬಿ.ಎಸ್  ಕನ್ವೀನರ್ ಸಾಲಿಂ ಪಟ್ಲ,  ಸೆಕ್ಟರ್ ಕಾರ್ಯಕಾರಿ  ಸಮಿತಿ ಸದಸ್ಯರಾದ ಶಮೀರ್ ಹಿದಾಯತ್ ನಗರ , ಮಹ್ರೂಫ್ ಹಿದಾಯತ್ ನಗರ, ಅಲ್ಫಾಝ್ ಪಟ್ಲ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ವಿಶ್ವದಾದ್ಯಂತ ಸ್ಪೇನ್ ದೇಶ ಅಂಗಾಂಗ ದಾನಗಳಲ್ಲಿ ಮುಂಚೂಣಿಯಲ್ಲಿದ್ದು, ಭಾರತ ದ್ವಿತೀಯ ಸ್ಥಾನವನ್ನು ಹೊಂದಿದೆ. ಇಲ್ಲಿ ಕೇರಳ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದು ಕಿಡ್ನಿ ಫೆಡರೇಷನ್ ಆಫ್ ಇಂಡಿಯಾದ ಚೇರ್‍ಮೆನ್ ಫಾ.ಡೇವಿಸ್ ಚಿರಾಮೆಲ್ ಅಭಿಪ್ರಾಯಪಟ್ಟರು. ವಿಶ್ವವಿದ್ಯಾನಿಲಯಗಳು ಅಂಗಾಂಗ ದಾನಗಳ ಕುರಿತ ಜಾಗೃತಿಯನ್ನು ಮಾಸಿಕವಾಗಿ ಹಮ್ಮಿಕೊಳ್ಳಬೇಕಿದೆ. ಇಂತಹ ಕಾರ್ಯಕ್ರಮಗಳಲ್ಲಿ ಅಂಗಾಂಗ ದಾನಗೈದವರನ್ನೇ ಸಂಪನ್ಮೂಲ ವ್ಯಕ್ತಿಗಳನ್ನಾಗಿಸಿ, ಅವರನ್ನು ಗೌರವಿಸುವಂತಹ ಕೆಲಸವೂ ಆಗಬೇಕಿದೆ. ಸ್ವಾರ್ಥ ಸಮಾಜದಲ್ಲಿ ಸಾವು ಸಂಭವಿಸಿದ ನಂತರ ಎಲ್ಲರೂ ನಿಸ್ವಾರ್ಥಿಗಳಾಗುತ್ತಿದ್ದಾರೆ. ಆದರೆ ಅಂಗಾಂಗ ದಾನ ಮಾಡುವ ಒಪ್ಪಂದಕ್ಕೆ ಸಹಿ ಹಾಕುವ ಮುನ್ನವೂ ಕಣ್ಣೀರು ಹಾಕುವಂತಹ ಪ್ರಮೇಯವೂ ದಾನಿಗಳಿಂದ ನಡೆಯುತ್ತಿದೆ. ಸ್ವಾರ್ಥವಿದ್ದಲ್ಲಿ ನಿಶ್ಶಕ್ತಿ ಇರುತ್ತದೆ, ನಿಸ್ವಾರ್ಥವಿದ್ದಲ್ಲಿ ಶಕ್ತಿ ಹೆಚ್ಚಾಗುವುದು. ಸಾವು ನಂತರ ಅಂಗಾಂಗ ದಾನಗೈಯ್ಯುವ ಮೂಲಕ 10 ಜನರಿಗೆ ಖುಷಿಯನ್ನು ನೀಡಿದಲ್ಲಿ ಯಾವುದನ್ನೂ ಕಳೆದುಕೊಳ್ಳುವುದಿಲ್ಲ. ಮಾನವೀಯತೆಯುಳ್ಳ ಸಮಾಜದಲ್ಲಿ ಪರಸ್ಪರ ಸಹಕರಿಸುವ ಮೂಲಕ ಎಲ್ಲರೂ ಬಾಳಬೇಕಿದೆ ಎಂದರು. ಪಶ್ಚಿಮ ವಲಯ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ವರಿಷ್ಠಾಧಿಕಾರಿ ಎನ್.ಎಸ್ ಶೃತಿ ಮಾತನಾಡಿ ಅಂಗಾಂಗ…

Read More

UN NETWORKS ಉಳ್ಳಾಲ: ತಾಯಿಯಲ್ಲಿರುವ ಪ್ರತಿಯೊಂದು ಅಂಶಗಳು ಮಗುವಿಗೆ ಹಾಲುಣಿಸುವ ಮೂಲಕ ದೊರೆಯುವ ಹಿನ್ನೆಲೆಯಲ್ಲಿ ಸತತ ಆರು ತಿಂಗಳುಗಳ ಕಾಲ ತಾಯಂದಿರು ಮಕ್ಕಳಿಗೆ ಮೊಲೆಹಾಲು ಒದಗಿಸುವುದು ಸೂಕ್ತ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಸಹಕುಲಾಧಿಪತಿ ಪ್ರೊ. ಎಂ. ಶಾಂತಾರಾಮ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ನಿಟ್ಟೆ ವಿಶ್ವವಿದ್ಯಾನಿಲಯದ ಪೋಷಣೆ ಮತ್ತು ಪಥ್ಯಶಾಸ್ತ್ರ, ಮಕ್ಕಳ ವಿಭಾಗ ಮತ್ತು ಎನ್‍ಎಸ್‍ಪಿಇಸಿಸಿ ವಿಭಾಗಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಪೌಷ್ಠಿಕಾಂಶ ಸಪ್ತಾಹ-2017 (ನ್ಯಾಷನಲ್ ನ್ಯೂಟ್ರಿಷಿಯನ್ ವೀಕ್) ಕುರಿತ ಒಂದು ವಾರ ನಡೆಯಲಿರುವ `ಮಗುವಿನ ಉತ್ತಮ ಆರೋಗ್ಯಕ್ಕಾಗಿ’ ಶಿಶು ಮತ್ತು ಚಿಕ್ಕ ಮಕ್ಕಳ ಆಹಾರ ಸೇವನೆ ಜಾಗೃತಿ ಕಾರ್ಯಕ್ರಮಕ್ಕೆ ಎ. ಬಿ.ಶೆಟ್ಟಿ ದಂತ ಕಾಲೇಜಿನ ತ್ರಿಂಶತಿ ಭವನದಲ್ಲಿ ಚಾಲನೆ ನೀಡಿ ಮಾತನಾಡಿದರು. ಮಕ್ಕಳಲ್ಲಿರುವ ಪೌಷ್ಠೀಕರಣ ವೃದ್ಧಿಸಲು ತಾಯಿ ಹಾಲಿನಿಂದ ಮಾತ್ರ ಸಾಧ್ಯ. ರಾಷ್ಟ್ರೀಯ ಪೌಷ್ಠಿಕತೆ ದಿನಾಚರಣೆಯನ್ನು ಮಾಡುವ ಮೂಲಕ ತಾಯಂದಿರಿಗೆ ಜಾಗೃತಿ ಮೂಡಿಸುವ ಕಾರ್ಯ ಶ್ಲಾಘನಾರ್ಹ. ಇತ್ತೀಚಿನ ದಿನಗಳಲ್ಲಿ ಫ್ಯಾಶನ್ ಗುಂಗಿನ ತಾಯಂದಿರು ಮಗು ಹುಟ್ಟಿಸಿದ ನಂತರದ ಎರಡೇ ತಿಂಗಳುಗಳಲ್ಲಿ ಮೊಲೆ…

Read More