Author: UllalaVani

Kannada News From Coastal Karnataka

UN NETWORKS ಕುತ್ತಾರು : ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಕಂಕನಾಡಿ `ಡನ್ ಗ್ರೂಪ್ ‘ ಯುವಕರ ತಂಡದ  ವತಿಯಿಂದ ಕುತ್ತಾರು ಬಾಲಸಂರಕ್ಷಣಾ ಕೇಂದ್ರದ ಮಕ್ಕಳಿಗೆ  ಹೊಸ ಬಟ್ಟೆಗಳನ್ನು ವಿತರಿಸಲಾಯಿತು. ತಂಡ ಮಂಗಳೂರಿನ ಭಗಿನಿ ಸಮಾಜ,  ಪಂಪ್ ವೆಲ್  ಆಶ್ರಮ, ವಾಮಂಜೂರು ಡಂಪಿಂಗ್ ಯಾರ್ಡ್ ಕಾಲನಿ ಮಕ್ಕಳಿಗೆ ಮತ್ತು ಆರ್ಯ ಸಮಾಜದಲ್ಲಿರುವವರಿಗೆ ಹೊಸ ಬಟ್ಟೆಗಳನ್ನು ವಿತರಿಸಿದೆ. ಈ ಸಂದರ್ಭ ಗಣೇಶ್ ಮಾಡೂರು, ವಿಕ್ರಂ ಶೆಟ್ಟಿ,  ನೀತು ಶೆಟ್ಟಿ,  ಸೌರಜ್, ಪವನ್ ಕುಮಾರ್,  ನಾಗರಾಜ್ ಕುಂಪಲ,  ಉದಯ ಸುವರ್ಣ, ಚರಣ್ ಶೆಟ್ಟಿ,  ಗಂಗಾಧರ ಎಕ್ಕೂರು,  ಸಂಕೇತ್, ಸಂಜಯ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ತೊಕ್ಕೊಟ್ಟು: ತುಳುನಾಡು ರಕ್ಷಣಾ ವೇದಿಕೆ ಕಚೇರಿಯ ಬಳಿ ಹಾಕಲಾದ ಬ್ಯಾನರ್‍ಗಳನ್ನು ಕಿಡಿಗೇಡಿಗಳು ಹರಿದು, ಶಟರನ್ನು ತೆರೆಯಲು ಯತ್ನಿಸಿರುವ ಘಟನೆ ಸೋಮವಾರ ಮಧ್ಯಾಹ್ನ ವೇಳೆ ಬೆಳಕಿಗೆ ಬಂದಿದೆ. ತುಳುನಾಡು ರಕ್ಷಣಾ ವೇದಿಕೆಯ ಮಂಗಳೂರು ವಿಧಾನಸಭಾ ಕ್ಷೇತ್ರದ ಕಚೇರಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಕಾರ್ಯಾಚರಿಸುತ್ತಿದೆ. ಇಲ್ಲಿ ಕಚೇರಿಯ ಹೊರ ಆವರಣದ ಗೋಡೆಯಲ್ಲಿ ಎರಡು ಬೃಹತ್ ಗಾತ್ರದ ಬ್ಯಾನರ್ ಗಳನ್ನು ಅಳವಡಿಸಲಾಗಿತ್ತು. ಇದರಲ್ಲಿ ಒಂದು ಬ್ಯಾನರನ್ನು ಸಂಪೂರ್ಣ ಹರಿದು ಕೊಂಡೊಯ್ದಿರುವ ಕಿಡಿಗೇಡಿಗಳು ಇನ್ನೊಂದು ಬ್ಯಾನರಿಗೆ ಭಾಗಶ: ಹಾನಿ ಮಾಡಿದ್ದಾರೆ. ಹೋರಾಟ ಹತ್ತಿಕ್ಕುವ ಪ್ರಯತ್ನ : ತುಳುನಾಡು ರಕ್ಷಣಾ ವೇದಿಕೆ ಹಲವು ಸಾಮಾಜಿಕ ಪಿಡುಗುಗಳ ವಿರುದ್ಧ , ದುರ್ಬಲರ ಪರವಾಗಿ ದನಿ ಎತ್ತಿರುವುದಲ್ಲದೆ ಉಳ್ಳಾಲ ವ್ಯಾಪ್ತಿಯಲ್ಲಿ ಅವ್ಯಾಹತವಾಗಿರುವ ಗಾಂಜಾ ವಿರುದ್ಧ ಹೋರಾಟ ನಡೆಸಿತ್ತು. ಇಂತಹ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕಿಡಿಗೇಡಿಗಳು ದುಷ್ಕøತ್ಯ ಎಸಗಿದ್ದಾರೆ ಎಂಬುದು ತು.ರ.ವೇ ಮುಖಂಡ ಸಿರಾಜ್ ಅಡ್ಕರೆ ಆರೋಪಿಸಿದ್ದಾರೆ.

Read More

UN NETWORKS ಬಾಯರ್: ಮ್ಯಾನ್ಮರ್‍ನಲ್ಲಿ ರೋಹಿಂಗ್ಯಾ ಮುಸ್ಲಿಮರನ್ನು ಗುರಿಯಾಗಿಸಿ ನಡೆಯುತ್ತಿರುವ ಮಾರಣ ಹೋಮ ಕ್ರೌರ್ಯ ಕಳವಳಕಾರಿಯಾದುದ್ದು ಮತ್ತು ಹೃದಯ ವಿದ್ರಾವಕವಾದುದು. ಮ್ಯಾನ್ಮರ್ ಸರಕಾರದ ಆದೇಶದ ಮೇರೆಗೆ ಆ ದೇಶದ ಸೈನ್ಯ ಮತ್ತು ಅರಕಾನ್ ಬೌದ್ಧರು ರೋಹಿಂಗ್ಯಾ ಮುಸ್ಲಿಮರನ್ನು ಸರ್ವನಾಶ ಮಾಡುತ್ತಿದ್ದು ಮ್ಯಾನ್ಮರ್ ಸರಕಾರದ ಈ ತೀರ್ಪನ್ನು ಮರುಪರಿಶೀಲನೆ ನಡೆಸಿ ಮುಸ್ಲಿಮರಿಗೆ ರಕ್ಷಣೆ ನೀಡಬೇಕು ಎಂದು ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿ ಕೋಯ ಅಲ್-ಬುಖಾರಿ ಬಾಯಾರ್ ತಂಙಳ್ ಹೇಳಿದರು. ಅವರು ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸುವ ಕಾಸರಕೋಡುವಿನ ಬಾಯಾರ್ ಮುಜಮ್ಮವುಸಖಾಪತಿ ಸುನ್ನಿಯ್ಯಾ ಸಂಸ್ಥೆಯಲ್ಲಿ ಮಾಸಿಕ ನಡೆಸಿ ಬರುವ ಸ್ವಲಾತ್ ಮಜ್ಲಿಸ್ ಮತ್ತು ಮರ್ಹೂಂ ಪೊಸೋಟು ಉಮರುಲ್ ಫಾರೂಕ್ ತಂಙಳ್ ಅನುಸ್ಮರಣೆ ಕಾರ್ಯಕ್ರಮದ ನೇತೃತ್ವವಹಿಸಿ ಮತನಾಡಿದರು. ಇತ್ತಿಚೆಗಿನ ಎಲ್ಲಾ ಪ್ರಕರಣಗಳನ್ನು ನೋಡಿದಾಗ ಪ್ರವಾದಿ ಹೆಳೀದ ಜಗತ್ತಿನ ಅಂತ್ಯ ದಿನದ ಎಲ್ಲಾ ಲಕ್ಷಣಗಳು ಕಂಡುಬರುತ್ತಿದೆ. ಮುಸ್ಲಮಾನರು ತನ್ನ ಜೀವನದಲ್ಲಿ ನಡೆದ ತಪ್ಪುಗಳನ್ನು ಅಲ್ಲಾಹನದಲ್ಲಿ ಕ್ಷಮೆಯಾಚಿಸಲು ಮುಂದಾಗಬೇಕು ಎಂದು ಹೇಳಿದರು.ಬಾಯಾರ್ ಮುಜಮ್ಮವುಸಖಾಪತಿ ಸುನ್ನಿಯ್ಯಾ ಸಂಸ್ಥೆಯ ಶಿಲ್ಫಿ ಅಸ್ಸಯ್ಯಿದ್ ಅಬ್ದುರ್ರಹ್ಮಾನ್ ಇಂಬಿಚ್ಚಿ…

Read More

UN NETWORKS ದೇರಳಕಟ್ಟೆ: ದೇರಳಕಟ್ಟೆಯ ಬ್ಯಾರಿ ಸಾಹಿತಿ ಮತ್ತು ಕಲಾವಿದರ ಒಕ್ಕೂಟವಾದ `ಮೇಲ್ತೆನೆ’ ಸಂಘಟನೆಯ ವತಿಯಿಂದ ಸಂಘಟನೆಯ ಸದಸ್ಯ, ಯೆನೆಪೊಯ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ನಿಯಾಝ್ ಪಿ. ಅವರ ಮನೆಯಲ್ಲಿ ರವಿವಾರ ಬ್ಯಾರಿ ಸಾಹಿತ್ಯ ಸಂವಾದ ಕೂಟ ನಡೆಯಿತು. “ಕಾಲೇಜುಗಳಲ್ಲಿ ಬ್ಯಾರಿ ಭಾಷೆ” ಎಂಬ ವಿಷಯದಲ್ಲಿ ನಿಯಾಝ್ ಮಂಡಿಸಿದ ಪ್ರಬಂಧದ ಮೇಲೆ ಸಂಘಟನೆಯ ಸದಸ್ಯರು ವಿಸ್ತೃತ ಚರ್ಚೆ ನಡೆಸಿದರು.ಕಾಲೇಜು ಆವರಣದಲ್ಲಿ ಬ್ಯಾರಿ ಮಕ್ಕಳು ಬ್ಯಾರಿ ಭಾಷೆಯಲ್ಲಿ ಮಾತನಾಡಲು ಹಿಂಜರಿಯುತ್ತಿದ್ದಾರೆ. ಕೆಲವು ಕಡೆ ದಂಡ ಹಾಕುವ ಪ್ರಕ್ರಿಯೆಯೂ ಇದೆ. ಇದಕ್ಕೆ ಕಡಿವಾಣ ಹಾಕಬೇಕಿದೆ. ಅಲ್ಲದೆ, ಶಾಲಾ-ಕಾಲೇಜುಗಳಲ್ಲಿ ತುಳು, ಕೊಂಕಣಿ ಸಾಹಿತ್ಯ ಸಂಘ ರಚಿಸಿದಂತೆ ಬ್ಯಾರಿ ಸಾಹಿತ್ಯ ಸಂಘ ರಚಿಸಲು ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ಮುಂದಾಗಬೇಕು. ಶಾಲಾ-ಕಾಲೇಜುಗಳ ಗೋಡೆಬರೆಹ ಸಂಚಿಕೆಗಳಲ್ಲಿ ಬ್ಯಾರಿ ಭಾಷೆಗೂ ಅವಕಾಶ ಸಿಗುವಂತಾಗಬೇಕು ಎಂದು ನಿಯಾಝ್ ಅಭಿಪ್ರಾಯಪಟ್ಟರು. ಇದಕ್ಕೆ ಇತರ ಸದಸ್ಯರೂ ಧ್ವನಿಗೂಡಿಸಿದರು. `ಮೇಲ್ತೆನೆ’ ಸಂಘಟನೆಯ ಅಧ್ಯಕ್ಷ ಆಲಿಕುಂಞ ಪಾರೆ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಮೇಲ್ತೆನೆಯ ಪದಾಧಿಕಾರಿಗಳಾದ ಇಸ್ಮಾಯೀಲ್ ಟಿ.,…

Read More

UN NETWORKS ಕೊಣಾಜೆ: ಓಬೆಲೆ ಲೇಲೆ ಐಲೇ ಸಾ ಐ ಲೇಸಾ… ಹೀಗೆ ವಿದ್ಯಾರ್ಥಿಗಳ ಹಾಗೂ ಕೃಷಿ ಕಾರ್ಯದಲ್ಲಿ ತೊಡಗಿಕೊಂಡವರ ಜತೆಗೆ ಜಾನಪದ ಪದಗಳೊಂದಿಗೆ ದನಿಗೂಡಿಸಿ ನಾಟಿ ಕೆಲಸದಲ್ಲಿ ತೊಡಗಿಸಿಕೊಂಡವರು ರಾಜ್ಯದ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಾದ ಯು.ಟಿ.ಖಾದರ್ ಇವರು ಕೊಣಾಜೆಯ ಅಣ್ಣೆರೆಪಾಲು ಗದ್ದೆಯಲ್ಲಿ ಮಂಗಳೂರು ರಥಬೀದಿಯ ಡಾ.ಪಿ. ದಯಾನಂದ ಪೈ, ಪಿ.ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು , ರಾಷ್ಟ್ರೀಯ ಸೇವಾ ಯೋಜನೆಯ ಘಟಕಗಳು, ರೆಡ್ ರಿಬ್ಬನ್ ಮತ್ತು ಕೊಣಾಜೆ ಗ್ರಾಮ ಪಂಚಾಯತ್ , ರೈತ ಸಂಘ ಹಸಿರು ಸೇನೆ , ಮಾಧ್ಯಮ ಕೇಂದ್ರ ತೊಕ್ಕೊಟ್ಟು ಇದರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ವಿದ್ಯಾರ್ಥಿಗಳ ನಡಿಗೆ ರೈತರ ಹಡೀಲು ಭೂಮಿಯ ಕಡೆಗೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಬೇಕಾದ ಸಚಿವರು ತಡವಾಗಿ ಆಗಮಿಸಿ, ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸದೆ ವಿದ್ಯಾರ್ಥಿಗಳ ಜತೆಗಿನ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡು ವಿದ್ಯಾರ್ಥಿಗಳ ಕೃಷಿ ಕೆಲಸಕ್ಕೆ ಸ್ಪೂರ್ತಿ ತುಂಬಿದರು. ಟ್ರಾಫಿಕ್ ನಿರ್ವಹಿಸಿ, ಬಸ್ಸನ್ನು ಚಲಾಯಿಸಿ, ಬುಲ್ಡೋಜರ್ ನ್ನೂ ಚಲಾಯಿಸಿ…

Read More

UN NETWORKS  ಮುಡಿಪು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವ್ಯಕ್ತಿಯೊಬ್ಬನಿಗೆ ಹುಟ್ಟಿದ ನೆಲದ ಒಡೆತನ ಸಿಕ್ಕಾಗ ಸಿಗುವಷ್ಟು ಸಾರ್ಥಕತೆ ಮತ್ತೊಂದಿಲ್ಲ. ಹಾಗಾಗಿ ನೆಲದ ಒಡೆತನದ ಇಲ್ಲದ ಬಡವರು ತಮ್ಮ ಬದುಕಿನಲ್ಲಿ ಸಾರ್ಥಕ್ಯ ಕಾಣಬೇಕು, ನಮ್ಮ ನೆಲದಲ್ಲಿ ನಾವಿದ್ದೇವೆ ಎಂಬ ಭಾವನೆ ಮೂಡಬೇಕು ಎಂಬ ನೆಲೆಯಲ್ಲಿ ಹಕ್ಕುಪತ್ರ ಕೊಡಲಾಗಿದೆ ಹಕ್ಕುಪತ್ರ ಅರ್ಜಿ ಸಲ್ಲಿಕೆ ದಿನಾಂಕ ಅನಿವಾರ್ಯತೆ ಇದ್ದಲ್ಲಿ ವಿಸ್ತರಿಸಲಾಗುವುದು ಎಂದು ಹೇಳುತ್ತಿದ್ದಂತೆ , ನಡುವೆ ಮಾತನಾಡಿದ ಕುರ್ನಾಡು ಜಿ.ಪಂ ಸದಸ್ಯೆ ಮಮತಾ ಗಟ್ಟಿ ಮತ್ತು ಬಂಟ್ವಾಳ ತಾ.ಪಂ ಅಧ್ಯಕ್ಷ ಚಂದ್ರಹಾಸ್ ಕರ್ಕೇರ ಅವರನ್ನು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ` ಲೇ ಹುಚ್ಚರೇ. ಸರಿಯಾಗಿ ಕೆಲಸ ಮಾಡ್ರಿ’ ಎಂದು ತರಾಟೆಗೆ ತೆಗೆದುಕೊಂಡ ಘಟನೆ ಇತ್ತೀಚೆಗೆ ನಡೆಯಿತು. ಕರ್ನಾಟಕ ಸರಕಾರ ಕಂದಾಯ ಇಲಾಖೆ ಆಶ್ರಯದಲ್ಲಿ ಮುಡಿಪುವಿನ ಕುರ್ನಾಡು ಪದವಿಪೂರ್ವ ಕಾಲೇಜು ಕ್ರೀಡಾಂಗಣದಲ್ಲಿ ಗುರುವಾರ ನಡೆದ ಅರ್ಹ ಫಲಾನುಭವಿಗಳಿಗೆ 94ಸಿ, 94ಸಿಸಿ ಹಕ್ಕುಪತ್ರ ವಿತರಣೆ ಕಾರ್ಯಕ್ರಮದಲ್ಲಿ ಹಕ್ಕುಪತ್ರ ವಿತರಿಸುವ ವೇಳೆ ಇಬ್ಬರ ಮೇಲೆ ಸಚಿವರು ಗುಡುಗಿದರು. ಉಳುವವನೆ ಹೊಲದೊಡೆಯ…

Read More

UN NETWORKS ಅಂಬ್ಲಮೊಗರು: ತುಳುನಾಡಿನಲ್ಲಿ ಅತಿಥಿ ಗೌರವ ವಿಶಿಷ್ಟ ರೀತಿಯದ್ದಾಗಿದ್ದು, ಜನರ ಸೇವೆಗಾಗಿಯೇ ಹುಟ್ಟಿಕೊಂಡ ಜನಸೇವಾ ಯುವಕ ಮಂಡಲ ಗದ್ದೆಯಲ್ಲಿ ವಿಶೇಷ ಕ್ರೀಡೆ ಅಯೋಜಿಸುವ ಜೊತೆಗೆ ಅತಿಥಿ ಗೌರವದಲ್ಲೂ ವೈಶಿಷ್ಟ್ಯತೆ ಮೆರೆದಿದೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಮಹಮ್ಮದ್ ಮೋನು ಅಭಿಪ್ರಾಯಪಟ್ಟರು. ಅಂಬ್ಲಮೊಗರು ಜನಸೇವಾ ಯುವಕ ಮಂಡಲ ಹಾಗೂ ಜಿಲ್ಲಾ ಪಂಚಾಯಿತಿಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಜಂಟಿ ಆಶ್ರಯದಲ್ಲಿ ಭಾನುವಾರ ಅಂಬ್ಲಮೊಗರು ದೋಟೆಮಾರು ಗದ್ದೆಯಲ್ಲಿ ನಡೆದ `ಬಲೇ ಕೆಸರ್‍ಡ್ ಗೊಬ್ಬುಗ’ ಕ್ರೀಡಾಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ ಆಚಾರ, ವಿಚಾರ ವಿಭಿನ್ನ, ಇಲ್ಲಿ ಹಿಂದಿನ ಕಾಲದಲ್ಲಿದ್ದ ಕ್ರೀಡಾಕೂಟ ಸಂಸ್ಕøತಿಯ ಪ್ರತೀಕವಾಗಿತ್ತು, ಅದನ್ನು ಉಳಿಸುವ ನಿಟ್ಟಿನಲ್ಲಿ ಗದ್ದೆಗಳಲ್ಲಿ ನಡೆಯುವ ಕ್ರೀಡಾಕೂಟಗಳು ಸಹಕಾರಿ ಎಂದರು. ಅಂಬ್ಲಮೊಗರು ಪಡ್ಯಾರಮನೆ ಕಲ್ಲುರ್ಟಿ ಪಂಜುರ್ಲಿ ದೈವಸ್ಥಾನದ ಅಧ್ಯಕ್ಷ ದಿನೇಶ್ ಶೆಟ್ಟಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ಕೈಕಾಲು, ಶರೀರಕ್ಕೆ ಮಣ್ಣು ಮೆತ್ತಿಕೊಳ್ಳುತ್ತದೆ ಎನ್ನುವ ನೆಪವೊಡ್ಡಿ ಗದ್ದೆಗಿಳಿಯದಿದ್ದಲ್ಲಿ ಇಂದು ನಾವು ಇಷ್ಟೊಂದು ಅಭಿವೃದ್ಧಿ ಹೊಂದಲು ಅಸಾಧ್ಯವಾಗುತ್ತಿತ್ತು…

Read More

UN NETWORKS ಉಳ್ಳಾಲ: ದೇಯಿ ಬೈದ್ಯೆತಿ ಪ್ರತಿಮೆಗೆ ಅವಮಾನ ಮಾಡಿದ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಮತ್ತು ಔಷಧಿ ವನಕ್ಕೆ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಹಾಗೂ ನಗರ  ಪೊಲೀಸ್ ಆಯುಕ್ತರಿಗೆ ಉಳ್ಳಾಲ ವಲಯದ ದೇಯಿ ಬೈದ್ಯೆತಿ ಕೋಟಿ-ಚೆನ್ನಯ್ಯ ಮೂಲಸ್ಥಾನ, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತಿಲ್ ವತಿಯಿಂದ ಮನವಿ ನೀಡಲಾಯಿತು. ಈ ಸಂದರ್ಭ ಗೆಜ್ಜೆಗಿರಿ ನಂದನ ಬಿತ್ತಿಲ್, ಉಳ್ಳಾಲ ವಲಯ ಸಮಿತಿ ಅಧ್ಯಕ್ಷ ಚಂದ್ರಶೇಖರ್ ಉಚ್ಚಿಲ , ಕಾರ್ಯಾಧ್ಯಕ್ಷ ಯಶವಂತ ದೇರಾಜೆ, ಮಹಿಳಾ ಸಮಿತಿ ಗೌರವಾಧ್ಯಕ್ಷೆ ಲಕ್ಷ್ಮಿ ಪಿಲಾರ್, ಗೆಜ್ಜೆಗಿರಿ ಉಳ್ಳಾಲ ವಲಯ ಮಹಿಳಾ ಸಮಿತಿ ಅಧ್ಯಕ್ಷೆ ನಮಿತಾ ಶ್ಯಾಂ, ರವೀಂದ್ರ ಬಂಗೇರ , ಆನಂದ ಅಸೈಗೋಳಿ, ಜಯಶ್ರೀ ಕರ್ಕೇರ, ಬಿಲ್ಲವ ಸಂಘ ಗ್ರಾಮಚಾವಡಿ ಅಧ್ಯಕ್ಷ ಲಕ್ಷ್ಮಣ ಕೋಟ್ಯಾನ್ , ಬಿಲ್ಲವ ಸಂಘ ಕೊಲ್ಯ ಮಾಜಿ ಅಧ್ಯಕ್ಷ ಬಾಳಪ್ಪ ಪೂಜಾರಿ, ಟಿ.ಮೋಹನ ಕೋಟ್ಯಾನ್ , .ನಾರಾಯಣ ಪೂಜಾರಿ , ಮುತ್ತಪ್ಪ ಪೂಜಾರಿ, ರವಿಚಂದ್ರ ಅಮೀನ್, ಉಮೇಶ್ ಕೈರಂಗಳ…

Read More

UN NETWORKS ಕುಂಪಲ: ಕುಂಪಲದ ಗುರುನಗರ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಜರಗಿದ ಮೊಸರುಕುಡಿಕೆ ಉತ್ಸವ ಸಂದರ್ಭ ಶ್ರೀ ಕೃಷ್ಣ ದೇವರ ವಿಶೇಷ ಪೂಜೆಯನ್ನು ಗೋವು ಬಂದು ನಿಂತು ವೀಕ್ಷಿಸಿದ ವಿಚಿತ್ರ ಪ್ರಸಂಗದ ಚಿತ್ರ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ. ಎರಡು ದಿನಗಳ ಕಾಲ ದೇವಸ್ಥಾನದಲ್ಲಿ ಶ್ರೀ ಕೃಷ್ಣ ಜನಮಾಷ್ಟಮಿ ಪ್ರಯುಕ್ತ ಪೂಜೆ ನಡೆಯುತಿತ್ತು. ಮೊದಲ ದಿನದ ರಾತ್ರಿ ಪೂಜೆಯ ಸಂದರ್ಭ ಗೋವು ದೇವಸ್ಥಾನದ ಅಂಗಳದಲ್ಲಿ ಹಾಕಲಾಗಿದ್ದ ರಂಗವಲ್ಲಿಯಲ್ಲಿ ನಿಂತು ಪೂಜೆಯನ್ನು ನೋಡಲು ನಿಂತಿತ್ತು. ಕೆಲ ನಿಮಿಷಗಳವರೆಗೆ ನಡೆದ ಪೂಜೆಯನ್ನು ನೋಡಿದ ಗೋವು ಬಳಿಕ ಪ್ರಸಾದ ವಿತರಣೆ ಬಳಿಕ ವಾಪಸ್ಸಾಗಿದೆ. ಗೋಪಾಲಕನ ಪೂಜೆಯನ್ನು ಕಣ್ತುಂಬಿಕೊಳ್ಳಲು ಗೋವೊಂದು ಬಂದಿತ್ತು. ಶ್ರೀಕೃಷ್ಣನಿಗೆ ಪೂಜೆ ನೆರವೇರಿಸಿ ಮಹಾ ಮಂಗಳಾರತಿ ನಡೆಯುವವರೆಗೂ ದೇವಾಲಯದ ಗರ್ಭಗುಡಿಯ ಹೊರಗೆ ನಿಂತು ಶ್ರೀಕೃಷ್ಣನ ಬಿಂಬವನ್ನು ಕಣ್ತುಂಬಿಕೊಂಡಿಕೊಂಡಿರುವುದು ವಿಶೇಷವಾಗಿತ್ತು ಎಂಬುದು ಭಕ್ತರೋರ್ವರ ಅಭಿಪ್ರಾಯವಾಗಿದೆ. ಈ ಹಿಂದೆ ದೇವಸ್ಥಾನದಲ್ಲಿ ಮಧ್ಯಾಹ್ನ ಪೂಜೆಯ ವೇಳೆ ಗರುಡವೊಂದು ದೇವಸ್ಥಾನದ ಸುತ್ತ…

Read More

UN NETWORKS ನಾಟೆಕಲ್‌: ನಾಟೆಕಲ್‌ ಕಣಚೂರು ಆಸ್ಪತ್ರೆ ಎದುರುಗಡೆ ಸರಣಿ ಅಪಘಾತ ಶನಿವಾರ ಬೆಳಿಗ್ಗೆ ಸಂಭವಿಸಿದೆ. ಪ್ರಯಾಣಿಕರನ್ನು ಹತ್ತಿಸಲೆಂದು ಆಸ್ಪತ್ರೆ ಎದುರುಗಡೆ ಬಿ.ಸಿ.ರೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸು ನಿಂತಿತ್ತು. ಈ ವೇಳೆ ಹಿಂಬದಿ ಯಿಂದ ಅತಿವೇಗವಾಗಿ ಬಂದ ಕಾರು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ.ಅಷ್ಟರಲ್ಲಿ ಗುದ್ದಿದ ಕಾರಿನ ಹಿಂಬದಿಯಿದ್ದ ಇನ್ನೊಂದು ವ್ಯಾಗನಾರ್ ಕಾರು, ಕಾರಿನ ಹಿಂಬದಿಗೆ ಗುದ್ದಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡು ಕಾರುಗಳಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಬಸ್ಸು ಚಾಲಕರು ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸುತ್ತಿರುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಇಂದು ನಡೆದ ಘಟನೆಗೂ ಸಾರ್ವಜನಿಕರು ಬಸ್ಸು ಚಾಲಕರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ.

Read More