UN NETWORKS ಮಂಗಳೂರು: ಡಿಗ್ರೀ ಕಾಲೇಜು ವಿದ್ಯಾರ್ಥಿಗಳೆಂದರೆ ಟ್ರಾಫಿಕ್ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುವವರೇ ಜಾಸ್ತಿ. ಅದರ ನಡುವೆಯೇ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಅನ್ನುವ ಕಾಲೇಜಿನ ಆಜ್ಞೆಯಂತೆ ಸೋಮವಾರ ಸಂಜೆ ಅಲೋಷಿಯಸ್ ಕಾಲೇಜಿನ ಬಿ.ಕಾಂ ವಿಭಾಗದ ವಿದ್ಯಾರ್ಥಿಗಳು ಪಿವಿಎಸ್, ಜ್ಯೋತಿ ವೃತ್ತಗಳಲ್ಲಿ ಟ್ರಾಫಿಕ್ ಪೊಲೀಸರ ಜತೆಗೂಡಿ ವಾಹನಗಳನ್ನು ನಿಯಂತ್ರಿಸಿದರು. ಪಿವಿಎಸ್ ವೃತ್ತದಲ್ಲಿ ಆರು ಮಂದಿ ವಿದ್ಯಾರ್ಥಿಗಳು ಟ್ರಾಫಿಕ್ ಪೊಲೀಸರಾದ ಸಂಪತ್ ಅವರ ನಿರ್ದೇಶನದಂತೆ ವಾಹನಗಳನ್ನು ನಿಯಂತ್ರಿಸಿದರು. ಸಂಜೆ ಹೊತ್ತಿನಲ್ಲಿ ವಾಹನಗಳ ಸಾಲು ಅತಿಯಾಗಿರುವ ಸಮಯದಲ್ಲೇ ವಿದ್ಯಾರ್ಥಿಗಳು ಮೂರು ಭಾಗಗಳಲ್ಲಿ ನಿಂತು , ವಾಹನ ಸವಾರರಿಗೆ ಸೂಚನೆ ನೀಡುವುದರ ಜತೆಗೆ ಹೆಲ್ಮೆಟ್ ಧರಿಸದ ಮಂದಿಗೆ ಬುದ್ಧಿಮಾತನ್ನು ಹೇಳಿದರು. ಹೆಚ್ಚಾಗಿ ದ್ವಿಚಕ್ರ ವಾಹನ ಚಲಾಯಿಸುವ ವಿದ್ಯಾರ್ಥಿಗಳು ಟ್ರಾಫಿಕ್ ನಿಯಮಗಳನ್ನೇ ಪಾಲಿಸದೆ, ನಗರವ್ಯಾಪ್ತಿಯಲ್ಲಿ ಎರ್ರಾಬಿರ್ರಿಯಾಗಿ ಸುತ್ತಾಡುತ್ತಿರುತ್ತಾರೆ. ಅಲ್ಲದೆ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಂಡವರಲ್ಲಿ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಿದೆ. ಆದರೆ ಕಾಲೇಜಿನ ಇಂತಹ ಶಿಕ್ಷಣ ವಿದ್ಯಾರ್ಥಿಗಳನ್ನು ತಮ್ಮನ್ನು ತಾವೇ ತಿದ್ದುವಂತೆ ಮಾಡುತ್ತದೆ. ಇದರ ಜತೆಗೆ ಸಾಮಾಜಿಕ ಜಾಗೃತಿಯೂ…
Author: UllalaVani
UN NETWORKS ಮಂಗಳೂರು : ನೆಹರುಮೈದಾನದಲ್ಲಿ ನಡೆದ ಕೋಸ್ಟಲ್ ವುಡ್ ಪ್ರೀಮಿಯರ್ ಲೀಗ್ (ಸಿಪಿಎಲ್ -2018 ಕ್ಕೆ ಕರಾವಳಿ ಸಮೂಹ ಕಾಲೇಜುಗಳ ಅಧ್ಯಕ್ಷ ಗಣೇಶ್ ರಾವ್ ಚಾಲನೆ ನೀಡಿದರು. ಕೋಸ್ಟಲ್ವುಡ್ ಕಲಾವಿದರು ಮತ್ತು ತಂತ್ರಜ್ಞರ ಅಸೋಸಿಯೇಷನ್ ( ಸಿಎಟಿಸಿಎ) ನೇತೃತ್ವದಲ್ಲಿ ಪಂದ್ಯಾಟ ಆಯೋಜಿಸಲಾಗಿತ್ತು. ಮೂರು ದಿನಗಳ ಟೂರ್ನಮೆಂಟಿನಲ್ಲಿ ಕಲಾವಿದರು, ತಂತ್ರಜ್ಞರು ಹಾಗೂ ಮಾಧ್ಯಮದವರು ಪಾಲ್ಗೊಳ್ಳುತ್ತಿರುವುದು ಬಲು ಅಪರೂಪದ ಸನ್ನಿವೇಶ. ಕೋಸ್ಟಲ್ ವುಡ್ ಯುವಕಲಾವಿದರು ಇನ್ನಷ್ಟು ಬೆಳೆದು ಸ್ಯಾಂಡಲ್ ವುಡ್, ಬಾಲಿವುಡ್ ನಲ್ಲಿ ಹೆಸರು ಪಡೆಯುವಂತಾಗಬೇಕು ಎಂದು ಹಾರೈಸಿದರು. ಈ ಸಂದರ್ಭ ನಮ್ಮ ಟಿವಿ ಮುಖ್ಯಸ್ಥ ಶಿವಶರಣ್ ಶೆಟ್ಟಿ, ಮಿಸಸ್ ಇಂಡಿಯಾ -2017 ತೃಪ್ತಿ ರಾವ್, ರಾಜ್ಯಪ್ರಶಸ್ತಿ ಪುರಸ್ಕೃತ ನಟ ನವೀನ್ ಡಿ ಪಡೀಲ್ ಹಾಗೂ ಜಯಕಿರಣ ಪತ್ರಿಕೆ ಮಾಲೀಕರು ಹಾಗೂ ತುಳು ಚಿತ್ರ ನಿರ್ಮಾಪಕ, ನಿರ್ದೇಶಕರಾಗಿರುವ ಪ್ರಕಾಶ್ ಪಾಂಡೇಶ್ವರ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೋಸ್ಟಲ್ ವುಡ್ ನ ತುಳುವೆರೆ ಸ್ಟಾರ್ಸ್, ಕುಡ್ಲ ರಾಕ್ ಸ್ಟಾರ್ಸ್, ಕರಾವಳಿ ಕಿಂಗ್ಸ್, ಕುಡ್ಲ ಲಿಜೆಂಡ್ಸ್, ಕೋಸ್ಟಲ್…
UN NETWORKS ಉಳ್ಳಾಲ: ರಾಷ್ಟ್ರಪ್ರಶಸ್ತಿ ಪುರಸ್ಕೃತ ಪೊಲೀಸ್ ಕಮೀಷನರ್ ಟಿ.ಆರ್.ಸುರೇಶ್ ಇವರನ್ನು ಉಳ್ಳಾಲದ ಯುನೈಟೆಡ್ ಸೋಷಿಯಲ್ ಮೂವ್‍ಮೆಂಟ್ ಟ್ರಸ್ಟ್ ಇವರ ವತಿಯಿಂದ ಮಂಗಳೂರಿನ ಕಮೀಷನರ್ ಕಚೇರಿಯಲ್ಲಿ ಸೋಮವಾರ ಸನ್ಮಾನಿಸಲಾಯಿತು. ಈ ಸಂದರ್ಭ ಟ್ರಸ್ಟ್ ಅಧ್ಯಕ್ಷರಾದ ಅಹಮ್ಮದ್ ಬಾವಾ ಕೊಟ್ಟಾರ, ಉಪಾಧ್ಯಕ್ಷರುಗಳಾದ ಅಬ್ದುಲ್ಲಾ ಬಸ್ತಿಪಡ್ಪು, ಹನೀಫ್ ಸೋಲಾರ್, ಖಜಾಂಚಿ ನೌಷಾದ್ ಅಬೂಬಕರ್ , ಕಾರ್ಯದರ್ಶಿ ಯು.ಯನ್.ಇಬ್ರಾಹಿಂ ಹಾಗೂ ಟ್ರಸ್ಟೀ ಯು.ಡಿ.ಅಝೀಝ್ ಉಪಸ್ಥಿತರಿದ್ದರು.
UN NETWORKS ಕೆ.ಸಿ.ರೋಡು: ಮಾನವೀಯ ಮೌಲ್ಯಗಳು, ಮನುಷ್ಯತ್ವ ಮಾಯವಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ರಕ್ತದಾನಗಳಂತಹ ಶಿಬಿರಗಳು ನಿರಂತರ ನಡೆಸುವ ಮುಖಾಂತರ ಮುಂದಿನ ಪೀಳಿಗೆಗೆ ಮಾನವೀಯ ಮೌಲ್ಯಗಳನ್ನು ಸಾರಬಹುದು ಎಂದು ಕೆ.ಸಿ.ರೋಡು ಎಸ್‍ವೈಎಸ್ ಅಧ್ಯಕ್ಷ ಎನ್.ಎಸ್.ಉಮರಬ್ಬ ಮಾಸ್ಟರ್ ಅಭಿಪ್ರಾಯಪಟ್ಟರು. ಕೆ.ಸಿ.ರೋಡು ಕಾಟುಂಗೆರೆಗುಡ್ಡೆ ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಇದರ ಜಂಟಿ ಆಶ್ರಯದಲ್ಲಿ ಫಾದರ್ ಮುಲ್ಲರ್ ಆಸ್ಪತ್ರೆಯ ಸಹಕಾರದಲ್ಲಿ ಭಾನುವಾರ ಕೆ.ಸಿ.ರೋಡು ಜಂಕ್ಷನ್‍ನಲ್ಲಿ ನಡೆದ ಮೂರನೇ ವರ್ಷದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು. ಕೈಕಾಲು ಗಟ್ಟಿ ಇರುವ ಸಂದರ್ಭ ನೆರೆಯವರು, ಪರಿಸರದವರ ಕಷ್ಟದಲ್ಲೂ ಭಾಗಿಯಾದಾಗ ಮುಂದಿನ ದಿನಗಳಲ್ಲಿ ನಮ್ಮ ಕಷ್ಟದಲ್ಲಿ ಇತರರು ಭಾಗಿಯಾಗುತ್ತಾರೆ. ಇಂದು ಪಾಶ್ಚಿಮಾತ್ಯ ಸಂಸ್ಕøತಿಯ ಅನುಕರಣೆಯಲ್ಲಿ ನಾವಿದ್ದು, ಅಪಘಾತ ನಡೆದಾಗ ಗಾಯಾಳುಗಳನ್ನು ರಕ್ಷಿಸುವ ಬದಲು ಫೊಟೋ ತೆಗೆದು ವಾಟ್ಸಾಪ್‍ನಲ್ಲಿ ಹಾಕುವಲ್ಲಿ ತಲ್ಲೀನರಾಗುತ್ತಿರುವುದು ದುರಂತ ಎಂದರು. ಕೋಟೆಕಾರ್ ಪಟ್ಟಣ ಪಂಚಾಯಿತಿ ಸದಸ್ಯ ಮೊಯಿದ್ದೀನ್ ಬಾವ ಶಿಬಿರ ಉದ್ಘಾಟಿಸಿದರು. ಸಾಮಾಜಿಕ ಹೋರಾಟಗಾರ ಅಬ್ಬಾಸ್ ಉಚ್ಚಿಲ್ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಪಂಚಾಯಿತಿ ಸದಸ್ಯ…
UN NETWORKS ಉಳ್ಳಾಲ: ವಾಕ್ ಚಾತುರ್ಯದಿಂದ ಮಂಗಳೂರು ಉಡುಪಿಯಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ಪರಿಸರ ಪ್ರೇಮಿ ರೇಡಿಯೋ ಜಾಕಿ ರಶ್ಮಿ ಅವರ ಮದುವೆ ಸಮಾರಂಭದಲ್ಲೂ ಪರಿಸರದ ಕುರಿತು ಕಾಳಜಿ ವ್ಯಕ್ತಪಡಿಸಿದ್ದು, ಮದುವೆಗೆ ಬಂದ ಬಂಧುಗಳೆಲ್ಲರಿಗೂ ಉಚಿತವಾಗಿ ಗಿಡಗಳನ್ನು ಹಂಚುವ ಮೂಲಕ ಮಾದರಿಯಾಗಿದ್ದಾರೆ. ಉಳ್ಳಾಲ ಒಂಭತ್ತುಕೆರೆಯ ತಾಜ್‍ಮಹಲ್ ಸಭಾಂಗಣದಲ್ಲಿ ಭಾನುವಾರ ನಡೆದ ವಿವಾಹ ಸಮಾರಂಭದಲ್ಲಿ ಆರ್.ಜೆ ರಶ್ಮೀ ಯು.ಪಿ ಇವರು ಸಾಗರ್ ಅನ್ನುವ ವರನ ಜತೆಗೆ ದಾಂಪತ್ಯ ಜೀವನಕ್ಕೆ ಕಾಲಿರಿಸಿದರು. ತಮ್ಮ ಕರ್ತವ್ಯದಲ್ಲೂ ಹಾಗೂ ಪ್ರವೃತ್ತಿಗಳಲ್ಲಿ ಪರಿಸರ ಜಾಗೃತಿ ಕುರಿತ ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿರುವ ರಶ್ಮೀ, ಸಂಘಟನೆಗಳ ಮೂಲಕವೂ ತೊಡಗಿಸಿಕೊಂಡು ಕಾಳಜಿಯನ್ನು ತೋರ್ಪಡಿಸಿದವರು. ಮದುವೆ ಸಮಾರಂಭದಲ್ಲಿಯೂ ಬಂಧುಗಳಲ್ಲಿಯೂ ಜಾಗೃತಿ ಮೂಡಿಸುವುದರ ಜತೆಗೆ ಮದುವೆ ನೆನಪಿಗೆ ಗಿಡವನ್ನು ಎಲ್ಲರಿಗೂ ನೀಡುವ ಅನ್ನುವ ಉದ್ದೇಶವನ್ನು ಪೂರೈಸಿದ್ದಾರೆ. ಪರಿಸರ ಪ್ರೇಮಿ ಹಾಗೂ ಉಳ್ಳಾಲ ನಗರಸಭೆಯ ಪರಿಸರ ರಾಯಭಾರಿ ಮಾಧವ ಉಳ್ಳಾಲ್ ಅವರ ಸಹಕಾರದೊಂದಿಗೆ ಸಭಾಂಗಣ ಪ್ರವೇಶಿಸುವ ಮುಖದ್ವಾರದಲ್ಲೇ ಕೌಂಟರ್ ನಿರ್ಮಿಸಿ ಉಚಿತವಾಗಿ ಮದುವೆಯಲ್ಲಿ ಪಾಲ್ಗೊಂಡು ವಾಪಸ್ಸಾದವರಿಗೆ ಗಿಡಗಳನ್ನು…
UN NETWORKS ಉಳ್ಳಾಲ: ಕರಾವಳಿ ಜಿಲ್ಲೆಯಲ್ಲಿ ಸಮನ್ವಯತೆಯನ್ನು ಕಾಪಾಡದೇ ಇದ್ದಲ್ಲಿ, ಮುಂದೆ ಎಲ್ಲರೂ ಸಮುದ್ರದಲ್ಲಿ ಕೊಚ್ಚಿ ಹೋಗುವುದು ಖಂಡಿತ. ರಾಣಿ ಅಬ್ಬಕ್ಕ ದೇವಿ ಉತ್ಸವ ವೈಭವಕ್ಕಾಗಿ ಅಲ್ಲ, ಆಕೆಯ ಆದರ್ಶಗಳನ್ನು ರಕ್ತಗತವಾಗಿ ಮೈಗೂಡಿಸಿಕೊಳ್ಳುವಂತೆ ಮಾಡಲು ಜಿಲ್ಲೆಯ ಜನರಲ್ಲಿ ಆಕೆಯ ಚರಿತ್ರೆಯನ್ನು ಅಧ್ಯಯನ ನಡೆಸುವಂತೆ ಪ್ರೇರೇಪಿಸಿ ಎಲ್ಲಾ ಬೇಧಗಳನ್ನು ಮರೆತು ದೇಶಕ್ಕೆ ಮಾದರಿ ಜಿಲ್ಲೆಯಾಗಿ ಮಾಡುವ ಉದ್ದೇಶ ಉತ್ಸವದ ಮೂಲಕ ಆಗಬೇಕಿದೆ ಖ್ಯಾತ ಸಾಹಿತಿ ವೈದೇಹಿ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಸೋಮೇಶ್ವರ ಗ್ರಾಮದ ಕೊಲ್ಯ ನಾಗಮಂಡಲ ಮೈದಾನದಲ್ಲಿ ವೀರರಾಣಿ ಅಬ್ಬಕ್ಕ ಉತ್ಸವದ -2018ರ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯಲ್ಲಿ ಅನ್ಯಾಯ ಎದುರಿಸುವ ಶಕ್ತಿ ಯಾರಲ್ಲೂ ಇಲ್ಲದ ಸ್ಥಿತಿಯಿದೆ. ವೀರರಾಣಿ ಅಬ್ಬಕ್ಕಳ ಸ್ಮರಣೆಯನ್ನು ಇಡೀ ದೇಶ ಮಾಡಬೇಕಾದ ಕೆಲಸ, ಆದರೆ ದೇಶದ ಇತರೆಡೆ ವೀರರಾಣಿಯರನ್ನು ಸ್ಮರಿಸುವ ರೀತಿಯಲ್ಲಿ ಅಬ್ಬಕ್ಕಳ ಸ್ಮರಣೆಯಾಗುತ್ತಿಲ್ಲ. ಚರಿತ್ರೆಯಲ್ಲಿ ಪತಿಯೇ ಶತ್ರುವಾಗಿ ಹೋರಾಡಿದ…
UN NETWORKS ಉಳ್ಳಾಲ : ಅಬ್ಬಕ್ಕ ಉತ್ಸವದೊಂದಿಗೆ ಸಾಂಸ್ಕೃತಿಕ ಸ್ಪರ್ಧೆಗಳಿಂದ ಹೊಸ ಪ್ರತಿಭಾನ್ವಿತರಿಗೆ ಒಮದು ವೇದಿಕೆಯಾಗಿದ್ದು, ಉತ್ಸವದ ಮೂಲಕ ಕಲಾ ಪ್ರತಿಭೆಗಳಿಗೆ ಪ್ರೋತ್ಸಾಹ ಅಬಿನಂದನೀಯ ಎಂದು ನೃತ್ಯ ವಿಧುಷಿ ಆರತಿ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಕೊಲ್ಯ ನಾಗಮಂಡಲದ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವದ -2018ರ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಬ್ಬಕ್ಕ ಉಸ್ತವ ಸಮಿತಿಯ ಉಸ್ತುವಾರಿ ಸಮಿತಿಯ ಪ್ರಮುಖರಾದ ದಿನಕರ ಉಳ್ಳಾಲ್ ವಹಿಸಿದ್ದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಬಿಎಂಎಸ್ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ , ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಸದಸ್ಯ ಬಾಝಿಲ್ ಡಿಸೋಜ, ಮುಖಂಡರಾದ ಸೀತಾರಾಮ ಬಂಗೇರ, ಆನಂದ ಅಸೈಗೋಳಿ, ತಾರನಾಥ್ ,ದೇವಕಿ ಉಳ್ಳಾಲ್,ತೋನ್ಸೆ ಪುಷ್ಕಳ್ ಕುಮಾರ್, ರಾಘವ ಮಾಸ್ಟರ್, ಲಕ್ಷ್ಮಿನಾರಾಯಣ್, ವಾಸುದೇವ ರಾವ್, ರತ್ನಾವತಿ ಬೈಕಾಡಿ, ವಾಣಿ…
UN NETWORKS ಉಳ್ಳಾಲ : ರಾಜ್ಯದ ವಿವಿದೆಡೆಗಳಿಂದ ಆಗಮಿಸಿರುವ ಕುಸ್ತಿಪಟುಗಳು ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಮುಂದಿನ ದಿನಗಳಲ್ಲಿ ರಾಷ್ಟ್ರ ಆಂತರಾಷ್ಟ್ರೀಯ ಕುಸ್ತಿಪಟುಗಳಾಗಿ ರಾಜ್ಯಕ್ಕೆ ಹೆಸರು ತರುವ ಕಾರ್ಯ ಆಗಬೇಕು ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ಅಭಿಪ್ರಾಯಪಟ್ಟರು. ಅವರು ಕೊಲ್ಯ ಸೋಮೆಶ್ವರದ ನಾಗಮಂಡಲ ಮೈದಾನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವದ -2018ರ ಅಂಗವಾಗಿ ರಾಜ್ಯಮಟ್ಟದ ಮಹಿಳಾ ಕುಸ್ತಿಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು. ಬಿಎಂಎಸ್ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಕುಸ್ತಿ ಪಂದ್ಯಾಟದ ಸ್ಪರ್ಧೆಗೆ ಚಾಲನೆ ನೀಡಿದರು. ಉತಸ್ವ ಸಮಿತಿ ಉಸ್ತುವಾರಿ ದಿನಕರ ಉಳ್ಳಾಲ್ ಜಿಲ್ಲಾ ಪಂಚಾಯತ್ ಸದಸ್ಯೆ ಧನಲಕ್ಷ್ಮೀ ಗಟ್ಟಿ, ಉಳ್ಳಾಲ ನಗರಸಭಾ ಅಧ್ಯಕ್ಷ ಹುಸೈನ್ ಕುಂಇಮೋನು, ಸದಸ್ಯ ಬಾಝಿಲ್ ಡಿಸೋಜ, ಮುಖಂಡರಾದ ಸೀತಾರಾಮ ಬಂಗೇರ, ಆನಂದ ಅಸೈಗೋಳಿ, ತಾರನಾಥ್ ರೈ ,ದೇವಕಿ ಉಳ್ಳಾಲ್,ತೋನ್ಸೆ ಪುಷ್ಕಳ್ ಕುಮಾರ್, ತ್ಯಾಗಂ ಹರೇಕಳ, ಮೋಹನ್…
UN NETWORKS ಉಳ್ಳಾಲ: ದಕ್ಷಿಣ ಕನ್ನಡ ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಅಬ್ಬಕ್ಕ ಉತ್ಸವ ಸಮಿತಿ ಆಶ್ರಯದಲ್ಲಿ ಶನಿವಾರ ಪ್ರಾರಂಭಗೊಂಡ ವೀರರಾಣಿ ಅಬ್ಬಕ್ಕ ಉತ್ಸವ-2018ರ ಪ್ರಯುಕ್ತ ಕೋಟೆಕಾರು ಸಂಕೊಳಿಗೆ ಬೋವಿ ಶಾಲೆಯಿಂದ ಉತ್ಸವ ನಡೆಯಲಿರುವ ಕೊಲ್ಯ ನಾಗಮಂಡಲದ ಮೈದಾನದ ತನಕ ಅಕರ್ಷಕ ಮೆರವಣಿಗೆ ನಡೆಯಿತು. ಆಕರ್ಷಕ ಕೊಡೆ, ಕೀಲುಕುದುರೆ, ಯಕ್ಷಗಾನ ವೇಷಧಾರಿಗಳು, ಮರದ ಕಾಲಲ್ಲಿ ನಡಿಗೆ, ಹಾಲಕ್ಕಿ ಕುಣಿತ, ಸ್ತಬ್ಧ ಚಿತ್ರ, ನೃತ್ಯ ಕುಣಿತ, ಡೊಳ್ಳುಕುಣಿತ, ನೈಜ ಕುದುರೆಯ ಮೇಲೆ ಅಬ್ಬಕ್ಕ ಪಾತ್ರಧಾರಿ ಸವಾರಿ ನಡೆಯಿತು.
UN NETWORKS ಕೊಣಾಜೆ: ಭಾರತೀಯ ಸಂಸ್ಕೃತಿ ಅತ್ಯಂತ ಶ್ರೇಷ್ಠವಾದುದು. ಸಮಾಜ ಸೇವೆಯೊಂದಿಗೆ ನಮ್ಮ ಸಂಸ್ಕೃತಿಯ ರಕ್ಷಣೆಯಲ್ಲಿ ನಾವೆಲ್ಲರೂ ತೊಡಗಿಸಿಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರಾದ ಕೃಷ್ಣ ಗಟ್ಟಿ ಅಡ್ಕ ಹೇಳಿದರು. ಅವರು ಪಟ್ಟೋರಿಯ ಶ್ರೀ ನಾಗಬ್ರಹ್ಮ ಉಳ್ಳಾಲ್ತಿ ದೈವಸ್ಥಾನದಲ್ಲಿ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ವತಿಯಿಂದ ನಡೆಯುತ್ತಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಶನಿವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಭಜನೆಯಿಂದ ಐಕ್ಯತೆಯನ್ನು ಬೆಳೆಸಿಕೊಳ್ಳಲು ಸಾಧ್ಯವಿದ್ದು, ಭಜನೆಯಿಂದ ಯಾವತ್ತೂ ವಿಭಜನೆ ಸಾಧ್ಯವಿಲ್ಲ. ಯುವ ಪೀಳಿಗೆಯು ಇಂತಹ ಭಜನಾ ಸಂಕೀರ್ತನೆಯಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜವನ್ನು ನಿರ್ಮಿಸಬೇಕಿದೆ ಎಂದು ಹೇಳಿದರು. ಸಮಾರಂಭ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ವಿದ್ಯಾರತ್ನ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ರವೀಂದ್ರ ಶೆಟ್ಟಿ ಉಳಿದೊಟ್ಟು ಅವರು, ಸಮಾಜಸೇವಾ ಮನೋಭಾವನೆಯೊಂದಿಗೆ ನಾವು ಧಾರ್ಮಿಕತೆಯ ಬಗ್ಗೆಯೂ ನಾವು ಅರಿತುಕೊಳ್ಳಬೇಕು. ಇಂತಹ ಭಜನಾ ಸಂಕಿರ್ತನೆಯಿಂದ ಸಮಾಜದಲ್ಲಿ ಉತ್ತಮ ಬಾಂಧವ್ಯದೊಂದಿಗೆ ಆರೋಗ್ಯಪೂರ್ಣ ಸಮಾಜವನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ…

