UN NETWORKS
ನಾಟೆಕಲ್: ನಾಟೆಕಲ್ ಕಣಚೂರು ಆಸ್ಪತ್ರೆ ಎದುರುಗಡೆ ಸರಣಿ ಅಪಘಾತ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಪ್ರಯಾಣಿಕರನ್ನು ಹತ್ತಿಸಲೆಂದು ಆಸ್ಪತ್ರೆ ಎದುರುಗಡೆ ಬಿ.ಸಿ.ರೋಡಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ಸು ನಿಂತಿತ್ತು. ಈ ವೇಳೆ ಹಿಂಬದಿ ಯಿಂದ ಅತಿವೇಗವಾಗಿ ಬಂದ ಕಾರು ಬಸ್ಸಿನ ಹಿಂಬದಿಗೆ ಡಿಕ್ಕಿ ಹೊಡೆದಿದೆ.ಅಷ್ಟರಲ್ಲಿ ಗುದ್ದಿದ ಕಾರಿನ ಹಿಂಬದಿಯಿದ್ದ ಇನ್ನೊಂದು ವ್ಯಾಗನಾರ್ ಕಾರು, ಕಾರಿನ ಹಿಂಬದಿಗೆ ಗುದ್ದಿದ ಪರಿಣಾಮ ಸರಣಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಎರಡು ಕಾರುಗಳಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಘಟನೆಯಿಂದ ಕೆಲಕಾಲ ವಾಹನ ಸಂಚಾರಕ್ಕೆ ಅಡ್ಡಿಯುಂಟಾಯಿತು. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬಸ್ಸು ಚಾಲಕರು ಎಲ್ಲೆಂದರಲ್ಲಿ ಬಸ್ಸುಗಳನ್ನು ನಿಲ್ಲಿಸುತ್ತಿರುವುದರಿಂದ ಅನೇಕ ಅಪಘಾತಗಳು ಸಂಭವಿಸುತ್ತಿದ್ದು, ಇಂದು ನಡೆದ ಘಟನೆಗೂ ಸಾರ್ವಜನಿಕರು ಬಸ್ಸು ಚಾಲಕರ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ್ದಾರೆ.





