UN NETWORKS
ಸೋಮೇಶ್ವರ: ಸೋಮೇಶ್ವರ ಗ್ರಾಮದಲ್ಲಿ ಧಾರ್ಮಿಕ ಸ್ಥಳಗಳ ಸಮೀಪ ಕಾನೂನು ಬಾಹಿರವಾಗಿ ಮಧ್ಯದ ಅಂಗಡಿ ಕಟ್ಟಡ ನಿರ್ಮಾಣಾಗುತ್ತಿದ್ದು, ಇದಕ್ಕೆ ತಡೆ ಹೇರಬೇಕು ಎಂದು ಒತ್ತಾಯಿಸಿ ಕಾಟುಂಗರೆ ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಜಿಲ್ಲಾಧಿಕಾರಿ, ಅಬಕಾರಿ ಇಲಾಖೆ ಹಾಗೂ ಸೋಮೇಶ್ವರ ಗ್ರಾಮ ಪಂಚಾಯಿತಿಗೆ ಮನವಿ ಸಲ್ಲಿಸಿದೆ.
ಸೋಮೇಶ್ವರ ಗ್ರಾಮದ 18ನೇ ವಾರ್ಡ್ ಕದಿ ಎಂಬಲ್ಲಿ ವಿಷ್ಣುಮೂರ್ತಿ ದೇವಸ್ಥಾನ, ಮುಹಿಯುದ್ದೀನ್ ಜುಮಾ ಮಸೀದಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ಶಾಲೆ ಸಹಿತ 200ಕ್ಕೂ ಅಧಿಕ ಮನೆಗಳಿಂದ ಜನನಿಬಿಡ ಪ್ರದೇಶವಾಗಿದೆ. ಆದರೆ 100 ಮೀಟರ್ ಅಂತರದಲ್ಲಿ ವೈನ್‍ಶಾಪ್ ಕಟ್ಟಡ ನಿರ್ಮಾಣವಾಗುತ್ತಿದ್ದು ಅಬಕಾರಿ ನಿಯಮದ ಉಲ್ಲಂಘನೆಯಾಗಿರುವುದರಿಂದ ಇದಕ್ಕೆ ಅನುಮತಿ ನೀಡಬಾರದು ಎಂದು ಡೈಮಂಡ್ ವೆಲ್ಫೇರ್ ಅಸೋಸಿಯೇಶನ್ ಅಧ್ಯಕ್ಷ ಸಂಶುದ್ದೀನ್ ಉಚ್ಚಿಲ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದ್ದು, ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೇಶ್ ಉಚ್ಚಿಲ್ ಹಾಗೂ ಅಬಕಾರಿ ಇಲಾಖೆಯ ಉಪನಿರೀಕ್ಷಕಿ ಶೈಲಜಾ ಮನವಿ ಸ್ವೀಕರಿಸಿದ್ದಾರೆ.





