UN NETWORKS ಕೊಣಾಜೆ: ಹಿಂದಿನ ಕಾಲದಲ್ಲಿ ಬಡತನವಿದ್ದರೂ ಪ್ರತಿಯೊಂದು ಮನೆಯಲ್ಲಿಯೂ ಭಜನೆ, ದೇವರ ನಾಮಸ್ಮರಣೆಯಂತಹ ಧಾರ್ಮಿಕ ಕಾರ್ಯಗಳು ನಿರಂತರವಾಗಿ ನಡೆಯುತ್ತಿದ್ದ ಪರಿಣಾಮ ಕುಟುಂಬದಲ್ಲಿ ಪ್ರೀತಿ, ವಿಶ್ವಾಸ, ಪ್ರಾಮಾಣಿಕತೆ ಎಲ್ಲವೂ ಇತ್ತು. ಆದರೆ ಇಂದು ಕಾಲ ಬದಲಾಗುತ್ತಿದ್ದಂತೆ ಮನೆಗಳಲ್ಲಿ ಧಾರ್ಮಿಕತೆ, ಭಜನೆಯಂತಹ ಕಾರ್ಯಗಳು ಕಡಿಮೆಯಾಗುತ್ತಿದ್ದು ಜೊತೆಗೆ ಜನರಲ್ಲಿ ಪ್ರೀತಿ ವಿಶ್ವಾಸ ಪ್ರಾಮಾಣಿಕತೆ ಕಡಿಮೆಯಾಗುತ್ತಿದೆ ಎಂದು ಮಂಜೇಶ್ವರ ಧರ್ಮಜಾಗೃತಿ ಅಭಿಮಾನಿ ಬಳಗದ ಅಧ್ಯಕ್ಷರಾದ ಶ್ರೀ ಕೃಷ್ಣ ಶಿವಕೃಪಾ ಕುಂಜತ್ತೂರು ಅವರು ಅಭಿಪ್ರಾಯಪಟ್ಟರು. ಅವರು ಪಟ್ಟೋರಿಯ ಶ್ರೀ ನಾಗಬ್ರಹ್ಮ ಭಜನಾ ಮಂಡಳಿ ಹಾಗೂ ಅಖಂಡ ಭಜನಾ ಸಪ್ತಾಹ ಸಮಿತಿ ವತಿಯಿಂದ ನಡೆಯುತ್ತಿರುವ ಅಖಂಡ ಭಜನಾ ಸಪ್ತಾಹದ ಅಂಗವಾಗಿ ಮಂಗಳವಾರ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು. ಇಂದು ನಮ್ಮಲ್ಲಿ ಕಾರು, ಬಂಗಲೆ ಎಲ್ಲವೂ ಇದ್ದರು ಕೂಡಾ ನೆಮ್ಮದಿ ಮಾತ್ರ ಮರೀಚಿಕೆಯಾಗಿದೆ. ಆದ್ದರಿಂದ ನಮ್ಮಲ್ಲಿ ಧಾರ್ಮಿಕತೆಯ ಅಂಶಗಳೆಉ ಬೆಳೆಯಬೇಕು. ಧಾರ್ಮಿಕತೆ ಬೆಳೆಯಬೇಕಾದರೆ ಭಕ್ತಿಭಾವವನ್ನು ನಾವು ಬೆಳೆಸಿಕೊಳ್ಳಬೇಕು. ಮನುಷ್ಯ ಎಷ್ಟೇ ಅನಾಚಾರ ಮಾಡಿದರೂ ಧರ್ಮ…
Author: UllalaVani
UN NETWORKS ಉಳ್ಳಾಲ: ಉಳ್ಳಾಲ ನಗರಸಭಾ ವ್ಯಾಪ್ತಿ ಸೌಂದರ್ಯಗೊಳಿಸಲು ವಿಶೇಷ ಗಮನ ನೀಡಲಾಗಿದೆ. ಆದಾಯ ಹೆಚ್ಳ ನಿಟ್ಟಿನಲ್ಲಿ 15 ಕಡೆ ಹೋರ್ಡಿಂಗ್ಸ್ ಅಳವಡಿಕೆಗೆ ಯೋಚಿಸಲಾಗಿದ್ದು ಇದರಿಂದ 21.60 ಲಕ್ಷ ಆದಾಯ ನಿರೀಕ್ಷಿಸಲಾಗಿದೆ. ಸೌಂದರ್ಯದ ನಿಟ್ಟಿನಲ್ಲಿ ಮೂರು ಕಡೆ ಹೈಮಾಸ್ಟ್ ದೀಪ ಅಳವಡಿಕೆ, ದಾರಿದೀಪ ವಿಸ್ತರಣೆ, ಎಲ್‍ಇಡಿ, ಸೋಡಿಯಂ ಟ್ಯೂಬ್‍ಲೈಟ್ ಖರೀದಿಗಾಗಿ 75 ಲಕ್ಷ ಮೀಸಲಿರಿಸಲಾಗಿದೆ ಎಂದು ಪೌರಾಯುಕ್ತೆ ವಾಣಿ ವಿ.ಆಳ್ವ ಬಜೆಟ್ ಮಂಡಿಸಿ ವಿವರಿಸಿದ್ದಾರೆ. ನಗರಸಭೆಯ 2018-19ನೇ ಸಾಲಿನ ಬಜೆಟ್ ಮಂಡನಾ ಸಭೆ ಬುಧವಾರ ನಡೆಯಿತು,ನಗರಸಭೆಯ ಅಧ್ಯಕ್ಷ ಹುಸೈನ್ ಕುಂಞಮೋನು ಅಧ್ಯಕ್ಷತೆ ವಹಿಸಿದ್ದರು. ಸ್ವಚ್ಛತೆ ಬಹುಮಾನ ಘೋಷಣೆ ಸ್ವಚ್ಛ ಹಾಗೂ ಕುಡಿಯುವ ನೀರು ಸಮಸ್ಯೆ ಮುಕ್ತ ಉಳ್ಳಾಲ ನಿರ್ಮಾಣಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗಿದ್ದು, ಸ್ವಚ್ಛತೆ ಕಾಪಾಡುವವರಿಗೆ ಬಹುಮಾನವನ್ನೂ ಘೋಷಿಸಲಾಗಿದೆ. ನಗರಸಭಾ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಮುಂದಡಿಯಿರಿಸಲಾಗಿದ್ದು ಬಹುಮಾನ ನೀಡುವ ವಿಶಿಷ್ಟ ಯೋಜನೆ ರೂಪಿಸಲಾಗಿದೆ. 2018ರಲ್ಲಿ ಗಾಂಧಿ ಜಯಂತಿಯಂದು ಪ್ರತೀ ವಾರ್ಡುಗಳನ್ನು ಪರಿಶಿಲೀಸಿ ಸ್ವಚ್ಛ ವಾರ್ಡ್‍ಗೆ ಪ್ರಥಮ 1ಲಕ್ಷ, ದ್ವಿತೀಯ…
UN NETWORKS ಕೊಣಾಜೆ: ಆರ್ಥಿಕವಾಗಿ ಹಿಂದುಳಿದ ಕುಟುಂಬದ ನೆರವಿಗೆ ನಿಂತ ಟ್ರಸ್ಟ್‍ನ ಕಾರ್ಯ ಜನಮೆಚ್ಚುವ ಕಾರ್ಯಕ್ರವಾಗಿದೆ, ಎಲ್ಲರ ಸಹಕಾರದಿಂದ ಸುಸಜ್ಜಿತ ಮನೆ ನಿರ್ಮಿಸಲಾಗಿದೆ ಎಂದು ಇಂಟರನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಹೇಳಿದ್ದಾರೆ. ಅವರು ಕೊಣಾಜೆ ಸಮೀಪ ಇಂಟರನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ಹಾಗೂ ಗ್ರಾಮದ ಯುವಕರ ಸಹಕಾರದ ಜತೆಗೆ ನಳಿನಿ ಶೆಟ್ಟಿ ಎಂಬವರಿಗೆ ನಿರ್ಮಿಸಿಕೊಡಲಾದ `ಸದಾಶಯ’ ಮನೆಯನ್ನು ಹಸ್ತಾಂತರಿಸಿ ಮಾತನಾಡಿದರು. ಉತ್ತಮ ಪರಿಸರದ ಜತೆಗೆ, ಸುಸಜ್ಜಿತ ಮನೆಯ ನಿರ್ಮಾಣವಾಗಿದೆ. ಎಲ್ಲರ ಒಗ್ಗೂಡುವಿಕೆ ಇದ್ದಲ್ಲಿ ಸಮಾಜಮುಖಿ ಕಾರ್ಯ ಯಶಸ್ವಿಯಾಗಲು ಸಾಧ್ಯ. ಟ್ರಸ್ಟ್ ಹಿಂದಿನಿಂದಲೂ ಅಶಕ್ತರ ಬಾಳಿಗೆ ಬೆಳಕಾಗುತ್ತಾ ಬಂದಿದೆ ಎಂದರು. ಪ್ರಸಾದ್ ರೈ ಕಲ್ಲಿಮಾರ್ ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಕುಟುಂಬದವರಾದ ನಳಿನಿ ಶೆಟ್ಟಿ ಹತ್ತು ವರ್ಷಗಳ ಹಿಂದೆ ಸಾಲ ಮಾಡಿ ಕೊಣಾಜೆ ಸಮೀಪ ಜಾಗವನ್ನು ಖರೀದಿಸಿದ್ದರು. ನಾಲ್ಕು ವರ್ಷಗಳಿಂದ ಹಾಕಿರುವ ಫೌಂಡೇಷನ್ನಿನಲ್ಲಿ ಸಣ್ಣ ಮನೆ ನಿರ್ಮಿಸಿದ್ದರು. ಆದರೆ ಅದರಲ್ಲಿ ಅವರು ಪಡುತ್ತಿದ್ದ ಸಂಕಷ್ಟವನ್ನು ಗಮನಿಸಿ ಊರಿನ ಮಂದಿ ಸಂಘಸಂಸ್ಥೆಗಳಿಂದ…
UN NETWORKS ಕುರ್ನಾಡು: ಒಂದು ಕಾಲದಲ್ಲಿ ರಿಕ್ಷಾದವರು ಬರಲು ಒಲ್ಲದ ಪ್ರದೇಶದ ಕಾಂಕ್ರೀಟಿಕರಣ ಯುವಜನರ ಹಾಗೂ ಪಂಚಾಯಿತಿ ಸದಸ್ಯರ ಸಹಕಾರದಿಂದ ನೆರವೇರುವ ಮೂಲಕ ದಶಕಗಳ ಜನರ ಬೇಡಿಕೆ ಈಡೇರಿದೆ ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದ್ದಾರೆ. ಅವರು ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಗಣೆಮಾರ್ ಪಿದಮಲೆ ಕೂಡುರಸ್ತೆಗೆ ಕಾಶಿಹಿತ್ಲು ಎಂಬಲ್ಲಿ ಕಾಂಕ್ರೀಟಿಕರಣಗೊಂಡ ರಸ್ತೆಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದರು. ಬಿಜೆಪಿಯವರು ಶಿಲಾನ್ಯಾಸ ನೆರವೇರಿಸಿದ ಎಲ್ಲಾ ಕಾಮಗಾರಿಗಳು ಮುಗಿದಿವೆ. ಪಕ್ಷದ ಮುಖಂಡರು ಮಾತ್ರವಲ್ಲ ಪಂಚಾಯಿತಿ ಸದಸ್ಯರು ಚಾಲನೆ ನೀಡಿರುವ ಕಾಮಗಾರಿಗಳು ಯಶಸ್ವಿಯಾಗಿ ಪೂರ್ಣವಾಗಿವೆ. ಹಿಂದೆ ಪಕ್ಷದ ಮುಖಂಡರು ತಮ್ಮ ಭೂಮಿಯನ್ನು ಮಾರಿ ರಸ್ತೆ ನಿರ್ಮಿಸಿದ ಇತಿಹಾಸವಿದೆ. 13,14 ನೇ ಹಣಕಾಸು ಮತ್ತು ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಮಂಜೂರಾದ ರೂ. 3 ಲಕ್ಷ ಅನುದಾನದಲ್ಲಿ 69 ಮೀ ಕಾಂಕ್ರೀಟಿಕರಣ ಕಾಮಗಾರಿಯನ್ನು ಪೂರೈಸುವ ಮೂಲಕ ಊರಿಗೆ ಕಿರೀಟ ಇಟ್ಟಂತಾಗಿದೆ. ದಶಕಗಳಿಂದ ಸೇತುವೆಯಿಲ್ಲದೆ ಪ್ರದೇಶ ಕುಗ್ರಾಮದಂತಿತ್ತು. ರಿಕ್ಷಾದವರು ಬರಲು…
UN NETWORKS ಮಂಗಳೂರು: ಮಜ್ಲಿಸುನ್ನೂರು ಕಾರ್ಯಕ್ರಮದಲ್ಲಿ ಕರೆಯಲ್ಪಡುವ ಪ್ರತಿಯೊಂದು ಪ್ರವಾದಿ ವರ್ಯರ ಹೆಸರುಗಳಲ್ಲಿ ವಿಶೇಷವಾದ ಅರ್ಥವಿದೆ. ಧಾರ್ಮಿಕ ಚೌಕಟ್ಟಿನೊಳಗೆ ಇರುವ ಹಿಂದಿನಿಂದಲೇ ಆಚರಣೆಯಲ್ಲಿ ಬಂದ ಮಾಲೆ, ಮೌಲೂದು ಮುಂತಾದ ಉತ್ತಮ ಕಾರ್ಯಗಳಿಗೆ ಪ್ರೋತ್ಸಾಹ ನೀಡಬೇಕಾಗಿದೆ ಎಂದು ಸಯ್ಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಹೇಳಿದರು. ಅವರು ಕುಂಡೂರು ಕೇಂದ್ರ ಜುಮ್ಮಾ ಮಸೀದಿ ಮತ್ತು ನುಸ್ರತುಲ್ ಇಸ್ಲಾಂ ಸಮಿತಿ ಇದರ ಆಶ್ರಯದಲ್ಲಿ ಮಂಗಳವಾರ ನಡೆದ ಬೃಹತ್ ಅಹ್ಲ್‍ಬೈತ್ ಸಂಗಮ ಮತ್ತು ಮಜ್ಲಿಸುನ್ನೂರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಚೌಕಟ್ಟು ಮೀರಿದ ಕಾರ್ಯಕ್ರಮಗಳು ಬೇಡ. ಪ್ರವಾದಿಯವರು ಏನನ್ನು ಕಲಿಸಿದ್ದಾರೆಯೋ ಅದನ್ನು ಜೀವನದಲ್ಲಿ ಅಳವಡಿಸಿಕೊಂಡು ಬರಬೇಕಾದ ಕೆಲಸ ನಮ್ಮದು ಎಂದರು. ಸಚಿವ ಖಾದರ್ ಮಾತನಾಡಿ, ಧಾರ್ಮಿಕ ಕ್ಷೇತ್ರಗಳಲ್ಲಿ ಹಮ್ಮಿಕೊಳ್ಳುವ ಇಂತಹ ಉತ್ತಮ ಕಾರ್ಯಕ್ರಮಗಳಿಂದ ಸೌಹಾರ್ದತೆ ಬೆಳೆಯಲು ಸಾಧ್ಯವಾಗುತ್ತದೆ. ಜನರಿಗೆ ಸಮಾಜದ ಬಗ್ಗೆ ಅರ್ಥಮಾಡಿಕೊಳ್ಳಲು ಇಂತಹ ಕಾರ್ಯಕ್ರಮಗಳ ಅವಶ್ಯಕತೆ ಇದೆ ಎಂದರು. ಈ ಸಂದರ್ಭದಲ್ಲಿ ವಕ್ಪ್ ಬೋರ್ಡ್ ಜಿಲ್ಲಾಧ್ಯಕ್ಷ ಕಣಚೂರು ಮೋನು, ಉಪಾಧ್ಯಕ್ಷರಾದ ಶಾಹುಲ್ ಹಮೀದ್ ಮೆಟ್ರೋ, ನೆಕ್ಕರೆ…
UN NETWORKS ಉಳ್ಳಾಲ: ಭಾರತದಲ್ಲಿ ಹಿಂದಿನ ಕಾಲದಲ್ಲಿ ಮರದಡಿಯಲ್ಲಿ ಪಾಠ ಹೇಳಿ ಕೊಡುತ್ತಿದ್ದ ಗುರುಕುಲ ಶಿಕ್ಷಣ ವ್ಯವಸ್ಥೆಯಿಂದ ಹಂತಹಂತವಾಗಿ ಇಲ್ಲಿ ಬ್ರಿಟಿಷ್ ಶಿಕ್ಷಣ ವ್ಯವಸ್ಥೆ ಜಾರಿಗೆ ಬಂತು. ಹಾಗಿದ್ದರೂ ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ಹಾಗೂ ಕೌಶಲ್ಯ ಅಭಿವೃದ್ಧಿಗಾಗಿ ವಿವಿಧ ಆವಿಷ್ಕಾರಗಳು ನಿತ್ಯವೂ ನಡೆಯುತ್ತಿದೆ. ಹಾಗೆಯೇ ವಿದ್ಯಾರ್ಥಿಗಳ ಬುದ್ಧಿವಂತಿಕೆ ಜ್ಞಾನ ವಿವಿಧ ಬಗೆಯ ವಿವಿಧ ಪರೀಕ್ಷೆಯಲ್ಲಿ ಉತ್ತರಿಸುವ ಮೂಲಕ ಸಾದರಗೊಳ್ಳುವುದು ಎಂದು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಯ ಸಹಕುಲಾಧಿಪತಿ ಪ್ರೊ. ಎಂ ಶಾಂತಾರಾಮ ಶೆಟ್ಟಿ ಹೇಳಿದರು. ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ನಾಸಾಕರ್ಣಕಂಠಶಾಸ್ತ್ರ ವಿಭಾಗದ ಆಶ್ರಯದಲ್ಲಿ ಕೆ.ಎಸ್. ಹೆಗ್ಡೆ ಆಸ್ಪತ್ರೆಯ ಸೆಮಿನಾರ್ ಹಾಲ್ ನಲ್ಲಿ ಮಂಗಳವಾರ ಜರಗಿದ ಕ್ಷೇಮ ಇಎನ್ ಟಿ ಒಎಸ್ ಸಿ ಇ ಕಾರ್ಯಗಾರ -2018 ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ತಲೆ ಹಾಗೂ ಕುತ್ತಿಗೆ ಶಸ್ತ್ರಚಿಕಿತ್ಸೆ ಉಪನ್ಯಾಸ ಹಾಗೂ ಹದಿನಾಲ್ಕನೆಯ ಒಎಸ್ ಸಿ ಇ ಕಾರ್ಯಗಾರ ಉದ್ಘಾಟಿಸಿ ಅವರು ಮಾತನಾಡಿದರು. ರೋಗಿ ವೈದ್ಯರ ಪಾಲಿಗೆ ದೇವರು. ವೈದ್ಯರು ರೋಗಿಗಳಿಂದಲೇ…
UN NETWORKS ತೊಕ್ಕೊಟ್ಟು: ಬೇಡಿಕೆ, ಬೆಲೆ ಹೆಚ್ಚಿರುವ ಗೋಡಂಬಿ ಬೆಳೆ ಬೆಳೆಸುವಲ್ಲಿ ರೈತರು ದಿವ್ಯ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದನ್ನು ಗಣನೆಗೆ ತೆಗೆದುಕೊಳ್ಳುವ ಮೂಲಕ ವಿದೇಶಗಳಿಗೆ ಕಳುಹಿಸುವ ವಿಪುಲ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಬೆಳೆ ಬೆಳೆಯುವಲ್ಲಿ ಇನ್ನಷ್ಟು ಪ್ರಬಲವಾಗಬೇಕಿದೆ ಎಂದು ಎಂದು ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ. ನಾರಾಯಣ ಸ್ವಾಮಿ ಹೇಳಿದರು. ಅವರು ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ ಶಿವಮೊಗ್ಗ, ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರ ಉಳ್ಳಾಲ ಮತ್ತು ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ತೊಕ್ಕೊಟ್ಟುವಿನ ಸಂಶೋಧನಾ ಕೇಂದ್ರದ ವಠಾರದಲ್ಲಿ `ಗೇರು ಬೆಳೆ ಕ್ಷೇತ್ರೋತ್ಸವ-2018′ ನ್ನು ಉದ್ಘಾಟಿಸಿ ಮಾತನಾಡಿದರು. ವಿಭಿನ್ನ ಬೆಳೆಯಾಗಿರುವ ಗೋಡಂಬಿ ಬೆಲೆ ಎಂದಿಗೂ ಕಡಿಮೆಯಾಗಿಲ್ಲ. ಏಲಕ್ಕಿ ಬೆಲೆಯಲ್ಲಿ ವ್ಯತ್ಯಾಸಗಳಾಗಿವೆ, ಮೆಣಸಿನ ಬೆಳೆ ಸದ್ಯ ಬೀಳುತ್ತಿದೆ. ದೇಶದಿಂದ 28 ದೇಶಗಳಿಗೆ ಗೋಡಂಬಿ ರಫ್ತಾಗುತ್ತಿದೆ. ಇದರಿಂದ ವಾರ್ಷಿಕ 5,169 ಕೋಟಿ ರೂಗಳ ವರಮಾನ ಬರುತ್ತಿದೆ. ಆದರೆ 5,000 ಕೋಟಿ ರೂ.ಗಳಲ್ಲಿ ಕಚ್ಚಾ ವಸ್ತುಗಳನ್ನು ವಾಪಸ್ಸು ಪಡೆಯಲಾಗುತ್ತಿದೆ. ಇದರಿಂದ…
UN NETWORKS ಉಳ್ಳಾಲ: ಮಾದಕ ದ್ರವ್ಯಗಳ ನಿರ್ಮೂಲನೆ ಮಾಡದೇ ಇದ್ದಲ್ಲಿ ಭವಿಷ್ಯದಲ್ಲಿ ಬಹುದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಲಿದ್ದು, ಯುವಸಮುದಾಯವೇ ಹೆಚ್ಚಾಗಿ ದುಶ್ಚಟಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಅವರಲ್ಲಿ ಜಾಗೃತಿಯನ್ನು ಮೂಡಿಸುವ ಕಾರ್ಯ ಶಿಕ್ಷಕರಿಂದಲೇ ಆಗಬೇಕಿದೆ ಎಂದು ಮಂಗಳೂರು ಪೊಲೀಸ್ ಕಮೀಷನರ್ ಸುರೇಶ್ ಟಿ.ಆರ್ ಐಪಿಎಸ್ ಹೇಳಿದ್ದಾರೆ. ಅವರು ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಯ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯ ಫಾರೆನ್ಸಿಕ್ ಮತ್ತು ಟಾಕ್ಸಿಕಾಲಜಿ ವಿಭಾಗಗಳ ಜಂಟಿ ಆಶ್ರಯದಲ್ಲಿ ದೇರಳಕಟ್ಟೆ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯಲ್ಲಿ ಮಂಗಳವಾರ ಜರಗಿದ `ಡ್ರಗ್ ಮೇನಿಯಾ ತಡೆಯುವಲ್ಲಿ ಶಿಕ್ಷಕರ ಪಾತ್ರ ‘ ಅನ್ನುವ ವಿಚಾರದ ಕುರಿತ ಕಾರ್ಯಾಗರವನ್ನು ಉದ್ಘಾಟಿಸಿ ಮಾತನಾಡಿದರು. ನಗರಪ್ರದೇಶಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಆತ್ಮಹತ್ಯೆ ಪ್ರಕರಣಗಳು ಇದೀಗ ಗ್ರಾಮೀಣ ಭಾಗದಲ್ಲೂ ವ್ಯಾಪಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಸಮಸ್ಯೆಯಾಗಿ ಪರಿಣಮಿಸಿದೆ. ಹಲವರು ವ್ಯಸನಗಳಿಗೆ ಒಳಗಾಗಿಯೇ ಆತ್ಮಹತ್ಯೆ ಗೈಯ್ಯುತ್ತಿದ್ದರೆ, ಇದರಲ್ಲಿ ಯುವಸಮುದಾಯದವರೇ ಹೆಚ್ಚಿದ್ದಾರೆ. ಯುವಸಮುದಾಯದ ಪಿಡುಗು ತೊಡಗಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ. ಸಾರ್ವಜನಿಕರು, ಹೆತ್ತವರು ಶಿಕ್ಷಕರು ಜಂಟಿಯಾಗಿ ಕಾರ್ಯನಿರ್ವಹಿಸಿದಲ್ಲಿ ನಿರ್ಮೂಲನೆ ಸಾಧ್ಯ. ಹದಿ…
UN NETWORKS ಕೊಲ್ಯ: ಸೋಮೇಶ್ವರ ಕೊಲ್ಯ ಬಿಲ್ಲವ ಸೇವಾ ಸಮಾಜದ 40ನೇ ವಾರ್ಷಿಕೋತ್ಸವದ ಅಂಗವಾಗಿ ಧಾರ್ಮಿಕ ಸಭಾ ಕಾರ್ಯಕ್ರಮವನ್ನು ರಾಜ್ಯ ಧಾರ್ಮಿಕ ಪರಿಷತ್ ಸದಸ್ಯರಾದ ಪದ್ಮನಾಭ ಕೋಟ್ಯಾನ್ ಉದ್ಘಾಟಿಸಿದರು.ಬಳಿಕ ಮಾತನಾಡಿದ ಅವರು ಕೊಲ್ಯ ಬ್ರಹ್ಮಶ್ರೀ ನಾರಾಯಣ ಗುರು ದ್ಯಾನ ಮಂದಿರದಲ್ಲಿ ಆಯೋಜಿಸಿದ ವಾರ್ಷಿಕ ಭಜನಾ ಮಂಗಳೋತ್ಸವ ಉತ್ತಮ ಧಾರ್ಮಿಕ ಕಾರ್ಯವಾಗಿದೆ, ಭಜನೆಗೆ ವಿಶೇಷವಾದ ಶಕ್ತಿ ಇದೆ,ಪ್ರತಿ ಮನೆಯಲ್ಲೂ ಭಜನೆ ಮಾಡಬೇಕು ಎಂದು ಹೇಳಿದರು. ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಕವಿತಾ ಸನಿಲ್, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯಶವಂತ್ ಪೂಜಾರಿ, ಕೊಲ್ಯ ಹಿರಿಯ ರಿಕ್ಷಾ ಚಾಲಕ ಮಾದವ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಮಂಗಳೂರು ಆತ್ಮ ಶಕ್ತಿ ವಿವಿದ್ದೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ನೆಮಿರಾಜ್ ಅಧ್ಯಕ್ಷತೆ ವಹಿಸಿದರು,ಮೈಸೂರು ಉದ್ಯಮಿ ಗೋಪಾಲ್ ಕನೀರ್ ತೋಟ, ರಾಷ್ಟ್ರೀಯ ಕರಾಟೆಪಟು ವೇಣುಗೋಪಾಲ್, ಶಿವಗಿರಿ ಯಾತ್ರೆ ಸಂಚಾಲಕ ಯತೀಶ್ ಕೊಲ್ಯ, ಗಂಗಾಧರ್ ಕುಂಪಲ, ದೇರಳೆಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಸಹಾಯಕ ಪ್ರೊಫೆಸರ್ ಡಾ|ವಸಂತಿ.ಎ.ಬಂಗೇರ, ಮಂಗಳೂರು ಕಟ್ಟಡ ಗುತ್ತಿಗೆದಾರರಾದ ಸುರೇಶ್ ದಂಡಕೇರಿ, ಕೊಲ್ಯ…
UN NETWORKS ಉಳ್ಳಾಲ: ಒಂಟಿ ಮಹಿಳೆಯಿದ್ದ ಮನೆಯೊಳಗೆ ನುಗ್ಗಿ ಆಕೆಯನ್ನು ಬೆದರಿಸಿ ಚಿನ್ನದ ಸರ ದರೋಡೆಗೈದು ತಲಮರೆಸಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಸುಂದರಿಭಾಗ್ ನಿವಾಸಿ ಕಳ್ಳ ರಮೀಝ್ ಯಾನೆ ಲೆಮನ್ ಟೀ ರಮೀಝ್ (26) ಬಂಧಿತ. ರೌಡಿಶೀಟರ್ ಆಗಿರುವ ಈತನ ವಿರುದ್ಧ ಹಲವು ಕಳವು ಪ್ರಕರಣಗಳಿವೆ. ಡಿ. 1 ರಂದು ಉಳ್ಳಾಲ ಠಾಣಾ ವ್ಯಾಪ್ತಿಯ ಸುಭಾಷನಗರದ ಪುಷ್ಪ ರೆಡ್ಡಿ (70) ಎಂಬವರು ಮನೆಯಲ್ಲಿ ಒಬ್ಬರೇ ಇದ್ದಾಗ ರಮೀಝ್ ಮತ್ತು ತಂಡ ಮನೆಯೊಳಗೆ ನುಗ್ಗಿ ವೃದ್ಧ ಮಹಿಳೆಯನ್ನು ಬೆದರಿಸಿ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದರೋಡೆ ನಡೆಸಿ ತಲೆಮರೆಸಿಕೊಂಡಿದ್ದರು. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿಯನ್ನು ಹಿಂದೆಯೇ ಬಂಧಿಸಲಾಗಿತ್ತು. ರಮೀಝ್ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಒಟ್ಟು ಮೂರು ಸುಲಿಗೆ ಮತ್ತು ಕಳವು ಪ್ರಕರಣಗಳಿವೆ. ಆರೋಪಿಗಳು ದರೋಡೆಗೈದ ಚಿನ್ನದ ಸರವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ…

