UN NETWORKS
ಉಳ್ಳಾಲ: ಕೊಲ್ಯ ಮಲಯಾಳಕೋಡಿ ನೇಮೋತ್ಸವ ಮಂಗಳವಾರ ವಿಜೃಂಭಣೆಯಿಂದ ನಡೆಯಿತು. ಬೆಳಿಗ್ಗೆ ಭಂಡಾರ ಆಗಮನದ ನಂತರ
ಬಂಟ ದೈವದ ನೇಮೋತ್ಸವದಲ್ಲಿ ಜಾತ್ರೋತ್ಸವ ಆರಂಭಗೊಂಡಿತು. ಈ ಬಾರಿ ಪ್ರಥಮವಾಗಿ ಮಲಯಾಳ ಚಾಮುಂಡಿ ನೇಮೋತ್ಸವ
ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ಭಾಗವಹಿಸುವಿಕೆಯಿಂದ ನಡೆದಿರುವುದು ವಿಶೇಷವಾಗಿತ್ತು.
ರಾತ್ರಿ ಶ್ರೀ ವೈದ್ಯನಾಥ ದೈವದ ವಾಳಸ್ಸರಿ ಉತ್ಸವದ ಮೂಲಕ ಜಾತ್ರೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಸಮಾಪನಗೊಂಡಿತು.
ಕೇರಳದ ದೈವ
ದೈವದ ನುಡಿ (ಪರಪು) ವಿನಂತೆ ಕೇರಳದಿಂದ ಬಂದಿರುವ ದೈವವಾಗಿದ್ದು, ನಂದಿನಿ ಗಟ್ಟಿದಿ ಅನ್ನುವ ಸಾತ್ವಿಕ ಮಹಿಳೆಯ ಪ್ರಾರ್ಥನೆಗೆ ಒಲಿದು ಬಂದ ದೈವ . ಕನೀರುತೋಟದ ಕೆರೆಯಲ್ಲಿ ಬಟ್ಟೆ ಒಗೆಯುವ ಸಂದರ್ಭದಲ್ಲಿ ದೈವದ ಮೂರ್ತಿ ಸಿಕ್ಕಿದ್ದು, ಆನಂತರ ಪ್ರತಿಷ್ಠಾಪನೆಗೊಂಡು ಇದೀಗ ಪ್ರತಿವರ್ಷವೂ ವಿಜೃಂಭಣೆಯ ಜಾತ್ರೋತ್ಸವ ನಡೆಯುತ್ತಿದೆ.
ಸೋಮೇಶ್ವರ, ಕೊಲ್ಯ, ಕೋಟೆಕಾರು, ಬೀರಿ, ಮಾಡೂರು, ಕುಂಪಲ, ಬಗಂಬಿಲ ಭಾಗದ ಜನ ಜಾತ್ರೋತ್ಸವವನ್ನು ಆಚರಿಸುತ್ತಾ ಬಂದಿದ್ದಾರೆ.


