UN NETWORKS ಬೆಂಗಳೂರು : ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರು ಕರ್ನಾಟಕದ 24ನೇ ಮುಖ್ಯಮಂತ್ರಿಯಾಗಿ ಗುರುವಾರ ಬೆಳಗ್ಗೆ 9 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಿದರು. 2018ರ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳನ್ನು ಪಡೆದು ಜಯಗಳಿಸಿತ್ತು. ರಾಜಭವನದ ಗಾಜಿನ ಮನೆಯಲ್ಲಿ ನಡೆದ ಸರಳ ಸಮಾರಂಭದಲ್ಲಿ 75 ವರ್ಷದ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯಪಾಲ ವಜುಭಾಯಿ ವಾಲಾ ಅವರು ಪ್ರಮಾಣ ವಚನ ಬೋಧಿಸಿದರು. ಹಸಿರು ಶಾಲು ಹೊದ್ದು ಮತ್ತೆ ಮುಖ್ಯಮಂತ್ರಿಯಾದ ಯಡಿಯೂರಪ್ಪ ಬಿಳಿಯ ಸಫಾರಿ ಸೂಟು ಧರಿಸಿದ್ದ ಬಿ.ಎಸ್.ಯಡಿಯೂರಪ್ಪ ಅವರು, ಹಸಿರು ಶಾಲು ಹೊದ್ದಿದ್ದಾರೆ. ದೇವರು ಮತ್ತು ರೈತರ ಹೆಸರಿನಲ್ಲಿ ಯಡಿಯೂರಪ್ಪ ಅವರು ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
Author: UllalaVani
UN NETWORKS ಉಳ್ಳಾಲ: ಯೆನೆಪೋಯ ವಿಶ್ವವಿದ್ಯಾನಿಲಯದ ಪರಿಸರ ಅಧ್ಯಯನ ಕೇಂದ್ರವು ವಿದ್ಯಾರ್ಥಿಗಳಲ್ಲಿ ಪಕ್ಷಿಗಳ ಸಂರಕ್ಷಣೆಗೆ ನೀರು, ಆಹಾರ ಹಾಗೂ ಮಣ್ಣಿನ ಗೂಡು ಅಳವಡಿಸುವ ಜಾಗೃತಿ ಕಾರ್ಯಕ್ರಮ ಯೆನೆಪೋಯ ವಿವಿಯಲ್ಲಿ ನಡೆಯಿತು. ಪರಿಸರ ಅಧ್ಯಯನ ಕೇಂದ್ರದ ಸಹಾಯಕ ನಿರ್ದೇಶಕಿ ಡಾ| ಭಾಗ್ಯ ಬಿ. ಶರ್ಮ ಭೂಮಿಯು ಕೇವಲ ಮಾನವರಿಗಲ್ಲ, ಎಲ್ಲಾ ಜೀವಿಗಳಿಗೆ ಸೇರಿದ್ದು ಹಾಗೂ ಮಾನವನು ವಿವಿಧ ರೀತಿಯ ಜೀವಿಗಳೊಂದಿಗೆ ಭೂಮಿಯನ್ನು ಹಂಚಿಕೊಂಡಿರುತ್ತಾನೆ ಎಂದರು. ಸಂಪನ್ಮೂಲ ವ್ಯಕ್ತಿ ನಿತ್ಯಾನಂದ ಶೆಟ್ಟಿ ಬದ್ಯಾರು ಮಾತನಾಡಿ ವಲಸೆ ಪಕ್ಷಿಗಳ ಸಂಖ್ಯೆಯನ್ನು ಕಡಿಮೆ ಮಾಡದೆ ಇದ್ದರೆ ನಮ್ಮ ಪರಿಸರದ ಸುತ್ತ ಹಕ್ಕಿಗಳ ಕಲರವವನ್ನು ಕೇಳಲು ಅಸಾದ್ಯ. ವಿನಾಶದ ಅಂಚಿಗೆ ಸಾಗುತ್ತಿರುವ ಪಕ್ಷಿಗಳನ್ನು ಕಾಪಾಡುವ ಜವಾಬ್ದಾರಿ ಬುದ್ಧಿವಂತ ಪ್ರಾಣಿಯದ ಮಾನವನಿಗೆ ಸೇರಿದ್ದು ಎಂದರು. ಸಂಪನ್ಮೂಲ ವ್ಯಕ್ತಿ ರಮ್ಯ ಮಾತನಾಡಿ ಪರಿಸರ ರಕ್ಷಣೆ ನಮ್ಮ ಹೊಣೆ ಪಕ್ಷಿ ಪತಂಗಗಳ ಉಳಿವಿಗೆ ನಮ್ಮ ಪಾತ್ರ ಮಹತ್ತರವಾದದ್ದು ಅದನ್ನು ಚೆನ್ನಾಗಿ ನಿಭಾಯಿಸಬೇಕು ಎಂದರು. ದಿನದ ಕಾರ್ಯಕ್ರಮವಾಗಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ಮಣ್ಣಿನ ಮಡಕೆಯ ಕೃತಕ…
UN NETWORKS ದೇರಳಕಟ್ಟೆ: ನಿಟ್ಟೆ ವಿವಿ ಸಾರ್ವಜನಿಕ ಆರೋಗ್ಯ ವಿಭಾಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಯುನೈಟೆಡ್ ಸ್ಟೇಟ್ಸ್‍ನ ಮಿನ್ನೇಸೋಟ ವಿಶ್ವವಿಶ್ವವಿದ್ಯಾನಿಲಯದಲ್ಲಿ ಸಾರ್ವಜನಿಕ ಆರೋಗ್ಯ ವಿಚಾರದಲ್ಲಿ ಮೂರು ವಾರಗಳ ನಡೆಯಲಿರುವ ಬೇಸಿಗೆ ಶಿಕ್ಷಣ ತರಭೇತಿಯಲ್ಲಿ ಭಾಗವಹಿಸಲಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯ ಮತ್ತು ಯು.ಎಸ್.ನ ಮಿನ್ನೆಸೋಟ ವಿಶ್ವವಿದ್ಯಾನಿಲಯ ಶೈಕ್ಷಣಿಕ ಒಡಂಬಡಿಕೆಯಂತೆ ವಿವಿಯ ಸಾರ್ವಜನಿಕ ಆರೋಗ್ಯ ವಿಭಾಗದ ವಿದ್ಯಾರ್ಥಿಗಳ ನಾಲ್ಕನೇ ಬ್ಯಾಚ್ ಮೇ 21 ರಿಂದ ಜೂನ್ 9ರವರೆಗೆ ನಡೆಯುವ ತರಭೇತಿಯಲ್ಲಿ ಭಾಗವಹಿಸಲಿದ್ದಾರೆ. ಸಾರ್ವಜನಿಕ ಆರೋಗ್ಯದ ವಿಭಾಗದ ಡಾ| ಸುಗಂಧ ಬಿ.ಕೆ, ಡಾ| ನಿವೇದಿತಾ ಲೈಮಾಯಂ ಮತ್ತು ಡಾ| ಸುನೀಲಾ ದೀಕ್ಷಿತ್ ಅವರು ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಜಾಗತಿಕ ಮಾನ್ಯತೆಯ ವಿಚಾರ ಮತ್ತು ತಂತ್ರಜ್ಞಾನದ ಬಳಕೆ, ಜಾಗತಿಕ ಆಹಾರ ವ್ಯವಸ್ಥೆಗಳ ಬಗ್ಗೆ ಮಂಡಿಸಿದ ಅಧ್ಯಯನಕ್ಕೆ ವಿದ್ಯಾರ್ಥಿವೇತನದಲ್ಲಿ ತರಭೇತಿಯನ್ನು ಪಡೆಯಲು ತೆರಳಲಿದ್ದು, ಮಿನ್ನೆಸೋಟ ವಿದ್ಯಾರ್ಥಿಗಳು ಚಳಿಗಾಲದ ಸಂದರ್ಭದಲ್ಲಿ ಮಂಗಳೂರಿನ ನಿಟ್ಟೆ ವಿವಿಗೆ ಭೇಟಿ ನೀಡಿ ಅಧ್ಯಯನ ನಡೆಸುತ್ತಿದ್ದಾರೆ. ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಸತೀಶ್ ಕುಮಾರ್ ಭಂಡಾರಿ, ಕುಲಸಚಿವೆ ಡಾ|…
UN NETWORKS ಉಳ್ಳಾಲ: ಮಂಗಳೂರಿನ ಬೋಂದೇಲ್‍ನಲ್ಲಿ ಮತ ಎಣಿಕೆ ಒಂದೆಡೆಯಾದರೆ ಕ್ಷೇತ್ರದ ವಿಜಯ ಮಾಲೆ ಯಾರಿಗೆ, ಮತ್ತು ರಾಜ್ಯದಲ್ಲಿ ಯಾರು ಅಧಿಕಾರಕ್ಕೆ ಬರುತ್ತಾರೆ ಎನ್ನುವ ಕುತೂಹಲ ಕ್ಷೇತ್ರದ ಜನತೆಯಲ್ಲಿ ಕುತೂಹಲ. ಮಂಗಳೂರು ಕ್ಷೇತ್ರದ(ಉಳ್ಳಾಲ)ಲ್ಲಿ ಬೆಳಗ್ಗಿನಿಂದಲೇ ಜಂಕ್ಷನ್ ಪ್ರದೇಶಗಳಲ್ಲಿ ಜನರಿದೆ ಬಿಕೋ ಎನ್ನುತ್ತಿದ್ದರೆ, ಜನರೆಲ್ಲ ಟಿ.ವಿ. ಅಳವಡಿಸಿರುವ ಅಂಗಡಿಗಳಲ್ಲಿ, ತಮ್ಮ ತಮ್ಮ ಮನೆಗಳಲ್ಲಿ ಕುತೂಹಲದಿಂದ ಫಲಿತಾಂಶ ವೀಕ್ಷಣೆಯಲ್ಲಿ ತೊಡಗಿಸಿಕೊಂಡರು. ಮಂಗಳೂರು ಕ್ಷೇತ್ರದಲ್ಲಿ ಮಂಗಳವಾರ ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು.ಬೋಳಿಯಾರ್, ಮುಡಿಪು, ದೇರಳಕಟ್ಟೆ, ತೊಕ್ಕೊಟ್ಟು, ಉಳ್ಳಾಲ ಸೇರಿದಂತೆ ಹೆಚ್ಚಿನ ಜಂಕ್ಷನ್‍ಗಳಲ್ಲಿ ಜನಸಂಖ್ಯೆ ವಿರಳವಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಅಂಗಡಿಗಳ ಮುಂದೆ ಜನರು ಕುತೂಹಲದಲ್ಲಿ ಟಿ.ವಿ.ಯನ್ನು ವೀಕ್ಷಿಸುವುದು ಕಂಡು ಬಂದರೆ, ಬೋಳಿಯಾರ್ ಪ್ರದೇಶದಲ್ಲಿ ಬೆಳಗ್ಗೆ 10 ಗಂಟೆಯಾದರೂ ಅಂಗಡಿಗಳು ತೆರೆದಿರಲಿಲ್ಲ.ವಾಹನ ಸಂಚಾರ ವಿರಳತೆ ಮತ್ತು ಜನರೋಡಾಟ ಕಡಿಮೆಯಾದ್ದರಿಂದ ರಿಕ್ಷಾ ಚಾಲಕರು ಬಾಡಿಗೆಯಿಲ್ಲದೆ ಮೊಬೈಲ್‍ಗಳಲ್ಲಿ ಫಲಿತಾಂಶ ವೀಕ್ಷಿಸುವುದು ಕಂಡು ಬಂತು. ಚುನಾವಣಾ ಫಲಿತಾಂಶ ಕಾರ್ಯಕರ್ತರಲ್ಲಿ ನಿರಾಸಕ್ತಿ : ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಠಿಣ ಸ್ಪರ್ಧೆಯಿದೆ.…
UN NETWORKS ಮಂಗಳೂರು: ಸಿದ್ದರಾಮಯ್ಯ ಸಂಪುಟದಲ್ಲಿ ಆಹಾರ ಹಾಗೂ ನಾಗರೀಕ ಸರಬರಾಜು ಸಚಿವರಾಗಿದ್ದ ಯು.ಟಿ.ಖಾದರ್ ಕರ್ನಾಟಕ ವಿಧಾನಸಭೆ ಚುನಾವಣೆ 2018ರಲ್ಲಿ ಜಯಭೇರಿ ಬಾರಿಸಿದ್ದಾರೆ. ಹಾಲಿ ಶಾಸಕ ಯು.ಟಿ.ಖಾದರ್ ಕುಟುಂಬ ಮಂಗಳೂರು ಕ್ಷೇತ್ರದಲ್ಲಿ ಪ್ರಭಾವಿತರು. 1972, 1978, 1999 ಹಾಗೂ 2004 ರಲ್ಲಿ ಯು.ಟಿ.ಖಾದರ್ ತಂದೆ ಯು.ಟಿ.ಫರೀದ್ ಗೆಲುವು ಸಾಧಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳ ಪೈಕಿ ಕುತೂಹಲ ಕೆರಳಿಸಿರುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸಚಿವ ಯು ಟಿ ಖಾದರ್ ಗೆಲುವು ಸಾಧಿಸಿರುವುದಕ್ಕೆ ಹರ್ಷ ವ್ಯಕ್ತವಾಗುತ್ತಿದೆ. ಸೋಲಿಲ್ಲದ ಸರದಾರ ಎಂದೇ ಖ್ಯಾತಿ ಪಡೆದ ಸಚಿವ ಯು.ಟಿ.ಖಾದರ್ ಈ ಬಾರಿ ಅಧಿಕ ಮತಗಳ ಅಂತರದಿಂದ ಗೆದ್ದು ವಿಜಯದ ನಗೆ ಬೀರಿದ್ದಾರೆ. ಸಚಿವ ಯು ಟಿ ಖಾದರ್ ತಮ್ಮ ಕ್ಷೇತ್ರದ ಎಲ್ಲ ವರ್ಗದ ಜನರ ಅಭಿವೃದ್ಧಿಗೆ ಶಕ್ತಿ ಮೀರಿ ಶ್ರಮಿಸಿದ್ದು, ಅವರ ಅಭಿವೃದ್ಧಿ ಕಾರ್ಯಗಳೇ ಗೆಲುವಿಗೆ ಕಾರಣವಾಗಿದೆ. ಈ ಬಾರಿ ಸಂತೋಷ್ ರೈ ಬೋಳಿಯಾರ್ ವಿರುದ್ಧ ಕಣಕ್ಕೆ ಇಳಿದಿದ್ದ ಸಚಿವ ಯು.ಟಿ…
UN NETWORKS ಮಂಗಳೂರು : ಕರ್ನಾಟಕ ವಿಧಾನ ಸಭೆ ಚುನಾವಣೆಯ ದಕ ಜಿಲ್ಲೆ ಹಾಗೂ ಉಡುಪಿ ವಿಧಾನಸಭಾ ಕ್ಷೇತ್ರದ ಎಲ್ಲಾ ಫಲಿತಾಂಶ ಹೊರ ಬಿದ್ದಿದ್ದು , ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಮಂಗಳೂರು (ಹಳೇ ಉಳ್ಳಾಲ )ಕ್ಷೇತ್ರ ಹೊರತು ಪಡಿಸಿ ಉಳಿದೆಲ್ಲ ಕಡೆ ಬಿಜೆಪಿ ಭರ್ಜರಿ ಜಯ ಸಾಧಿಸಿದೆ. ಕುಂದಾಪುರ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಹಾಲಾಡಿ ಶ್ರೀನಿವಾಸ ಶೆಟ್ಟಿ ಗೆಲುವನ್ನು ಸಾಧಿಸಿದ್ದಾರೆ. ಇದು ಕರಾವಳಿ ಜಿಲ್ಲೆಯಲ್ಲಿಯೇ ದಾಖಲೆಯ ಗೆಲುವು ಆಗಿದೆ. ಮಂಗಳೂರು ದಕ್ಷಿಣದಲ್ಲಿ ವೆದವ್ಯಾಸ ಕಾಮತ್ 9,248 ಮತಗಳ ಅಂತರ ಮಂಗಳೂರು ಉತ್ತರ ಡಾ ಭರತ್ ಶೆಟ್ಟಿ 23,384 ಮತಗಳ ಅಂತರ ಮಂಗಳೂರು (ಉಳ್ಳಾಲ) ಯುಟಿ ಖಾದರ್ 15,866 ಮತಗಳ ಅಂತರ ಮೂಡಬಿದಿರೆ ಉಮಾನಾಥ ಕೋಟ್ಯಾನ್ 25964 ಮತಗಳ ಅಂತರ ಬಂಟ್ವಾಳ ರಾಜೇಶ್ ನೈಕ್ 8541 ಮತಗಳ ಅಂತರ ಬೆಳ್ತಂಗಡಿ ಹರೀಶ್ ಪೂಂಜ 7836 ಮತಗಳ ಅಂತರ ಪುತ್ತೂರು ಸಂಜೀವ ಸುಳ್ಯ ಎಸ್ ಅಂಗಾರ…
UN NETWORKS ಉಳ್ಳಾಲ: ಇನ್ನೋವಾ ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಮಾಡೂರು ನಿವಾಸಿ ಶಿವಮೊಗ್ಗ ಸಾಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ರಾತ್ರಿ ಸಾವನ್ನಪ್ಪಿದ್ದಾರೆ. ಮಾಡೂರು ಬಲ್ಯ ನಿವಾಸಿ ಪ್ರವೀಣ್ ಅಜಿಲ ಬಲ್ಯ(35) ಮೃತರು. ಮಂಗಳೂರಿನ ಎ.ಬಿ ಶೆಟ್ಟಿ ವೃತ್ತದಲ್ಲಿರುವ ಮಾರ್ಗದರ್ಶಿ ಚಿಟ್ ಫಂಡ್ಸ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇವರು ಸಂಸ್ಥೆಯ ಏಳು ಮಂದಿ ಸಹುದ್ಯೋಗಿಗಳೊಂದಿಗೆ ಮಂತ್ರಾಲಯ ದರ್ಶನಕ್ಕೆ ತೆರಳಿದ್ದರು. ಅಲ್ಲಿಂದ ಶುಕ್ರವಾರ ವಾಪಸ್ಸಾಗುತ್ತಿದ್ದ ಸಂದರ್ಭ ಶಿವಮೊಗ್ಗದ ಸಾಗರ ಸಮೀಪ ಇನೋವಾ ಕಾರು ಮರಕ್ಕೆ ಢಿಕ್ಕಿ ಹೊಡೆದಿದೆ. ಪರಿಣಾಮ ಪ್ರವೀಣ್ ಗಂಭೀರವಾಗಿ ಗಾಯಗೊಂಡಿದ್ದರು. ಬೆನ್ನು ಮೂಳೆ ಮುರಿತಕ್ಕೆ ಒಳಗಾಗಿದ್ದವರನ್ನು ಶಿವಮೊಗ್ಗದ ಆಸ್ಪತ್ರೆ ಗೆ ದಾಖಲಿಸಲಾಗಿತ್ತು. ಭಾನುವಾರ ರಾತ್ರಿ ಚಿಕಿತ್ಸೆಗೆ ಸ್ಪಂಧಿಸದೆ ಮೃತಪಟ್ಟಿದ್ದಾರೆ. ಕಾರಿನಲ್ಲಿ ದ್ದ ಇನ್ನೊಬ್ಬರಿಗೆ ಕಾಲಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
UN NETWORKS ಉಳ್ಳಾಲ: ಮತದಾನ ಕೇಂದ್ರಕ್ಕೆ ದ್ವಿಚಕ್ರ, ರಿಕ್ಷಾ ಸೇರಿದಂತೆ ಕಾರುಗಳಲ್ಲಿ ಮತ ಚಲಾಯಿಸಲು ಆಗಮಿಸುವುದು ಸರ್ವೇ ಸಾಮಾನ್ಯ. ಆದರೆ ಈ ಮತದಾನ ಕೇಂದ್ರದಲ್ಲಿ ಒಂದು ಪ್ರದೇಶದ ಜನರಿಗೆ ಮತ ಚಲಾಯಿಸ ಬೇಕಾದರೆ ಇವರಿಗೆ ದೋಣಿಯೇ ಸಂಪರ್ಕ ಸೇತುವೆ . ಇದು ಮಂಗಳೂರು ವಿಧಾನಸಭಾ ಕ್ಷೇತ್ರದ ಪಾವೂರು ಉಳಿಯ ನಿವಾಸಿಗಳ ಸ್ಥಿತಿ. ನೇತ್ರಾವತಿ ನದಿಯ ನಡುಗುಡ್ಡೆಯಾಗಿರುವ ಉಳಿಯ ಕುದ್ರುವಿನಲ್ಲಿ ಸುಮಾರು 51 ಮನೆಗಳಿದ್ದು, 150ಕ್ಕೂ ಹೆಚ್ಚು ಮತದಾರರಿದ್ದಾರೆ ಮತ ಚಲಾಯಿಸಲಿ ಇವರು ದೋಣಿಗಳನ್ನೇ ಆಶ್ರಯಿಸಬೇಕಾಗಿದ್ದು, ಶನಿವಾರ ಬೆಳಗ್ಗೆಯೇ ಇಲ್ಲಿನ ಹೆಚ್ಚಿನ ಮತದಾರರು ಮತದಾನ ಕೇಂದ್ರ ಸಂಕ್ಯೆ 61ರ ಗಾಡಿಗದ್ದೆ ದ.ಕ.ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಗೆ ದೋಣಿಯಲ್ಲಿ ಆಗಮಿಸಿ ಮತ ಚಲಾಯಿಸಿದರು. ಮತದಾನ ಕೇಂದ್ರಕ್ಕೆ ಮತದಾರರಿಗೆ ಸಾರಿಗೆ ವ್ಯವಸ್ಥೆಯನ್ನು ವಿವಿಧ ರಾಜಕೀಯ ಪಕ್ಷಗಳು ಮಾಡಿದಂತೆ ಇಲ್ಲಿಯೂ ದೋಣಿಯ ವ್ಯವಸ್ಥೆಯನ್ನು ರಾಜಕೀಯ ಪಕ್ಷವೊಂದು ವಹಿಸಿಕೊಂಡಿದೆ. ದೋಣಿಯಿಂದ ಇಳಿದು ಸುಮಾರು ಒಂದು ಕಿ.ಮೀ. ದಾರಿಯನ್ನು ರಸ್ತೆಯಲ್ಲಿ ಕ್ರಮಿಸಲಿದ್ದು, ಇಲ್ಲಿನ ಮತದಾರರಿಗೆ ಕಾರಿನ ವ್ಯವಸ್ಥೆಯನ್ನು ಮಾಡಿದ್ದಾರೆ.
UN NETWORKS ಉಳ್ಳಾಲ: ಮಂಗಳೂರು ವಿಧಾನ ಸಭಾ ಕ್ಷೇತ್ರದಲ್ಲಿ ಮತದಾರರಿಂದ ಮಧ್ಯಾಹ್ನ ತನಕ ನೀರಸ ಪ್ರಕ್ರಿಯೆ ಆದರೂ ಸಂಜೆಯಾಗುತ್ತಲೇ ಐವತ್ತು ಶೇ. ಮತ ಚಲಾವಣೆ ಆಗಿದೆ. ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಸಚಿವ ಯು.ಟಿ ಖಾದರ್ ಅವರು ತಾಲೂಕು ಪಂಚಾಯಿತಿ ಸದಸ್ಯ ಜಬ್ಬಾರ್ ಬೋಳಿಯಾರ್ ಸೇರಿದಂತೆ ಕಾರ್ಯಕರ್ತರೊಂದಿಗೆ ಆಗಮಿಸಿ ಬೋಳಿಯಾರಿನ ರಂತಡ್ಕ ಕರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಗ್ಗೆ 7.30ಕ್ಕೆ ಮತ ಚಲಾಯಿಸಿದರು. ರಾಜ್ಯ ಸರಕಾರದ ಜನಪರ ಕಾರ್ಯಕ್ರಮಗಳು ಹಾಗೂ ಮಂಗಳೂರು ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾರ್ಯಕ್ರಮಗಳು ಜನತೆ ಮತ್ತೆ ಮತ್ತೆ ಶಾಸಕನನ್ನಾಗಿ ಆರಿಸುವ ಪೂರ್ಣ ವಿಶ್ವಸ ವ್ಯಕ್ತಪಡಿಸಿದರು. ಬಿಜೆಪಿ ಅಭ್ಯರ್ಥಿ ಸಂತೋಷ್ ಕುಮಾರ್ ರೈ ಬೋಳಿಯಾರು ಅವರು ಸರಿಯಾಗಿ 7.00ಗಂಟೆಗೆ ಪಜೀರು ಪಾನೆಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಂಧುಗಳ ಜೊತೆಗೂಡಿ ಆಗಮಿಸಿ ಮತ ಚಾಲಯಿಸಿದರು. ಬಳಿಕ ಮಾತನಾಡಿದ ಅವರು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ಅಡಳಿತ ವೈಫಲ್ಯ, ಕೇಂದ್ರದಲ್ಲಿ ಮೋದಿ ಸರಕಾರದ ಜನಪರ ಯೋಜನೆಗಳು ಮಂಗಳೂರು ಕ್ಷೇತ್ರ ಬಿಜೆಪಿ ಶಾಸಕನನ್ನು ವಿಧಾನ ಸಭೆ…
UN NETWORKS ಮಂಗಳೂರು: ಬಂಟ್ವಾಳದ ವಾಮದಪದವಿನ ಎಚ್.ಅಬ್ದುಲ್ ರಹಿಮಾನ್ ಹಾಗೂ ಜಮೀಳಾ ರವರ ಪುತ್ರರಾದ, ಪ್ರಸ್ತುತ ಮಂಗಳೂರಿನ ಬ್ಯಾರೀಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ ಕಂಪ್ಯೂಟರ್ ಸೈನ್ಸ್ ಆಂಡ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಮುಸ್ತಫಾ ಬಸ್ತಿಕೋಡಿ ರವರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ಮುಸ್ತಫಾ ಬಸ್ತಿಕೋಡಿ ರವರು “High Performance Computing” ಫೀಲ್ಡ್ ನ ” Programing Paradigm for Parallel Architectures ” ಎಂಬ ವಿಷಯದಲ್ಲಿ ಸಂಶೋಧನೆ ಮಾಡಿ ಸಲ್ಲಿಸಿದ ಪ್ರಬಂಧಕ್ಕೆ ಪಿಎಚ್ಡಿ ಪದವಿ ಲಭಿಸಿದೆ. ‘ King Abdul Azeez University, Jiddah’ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ.ವಸೀಂ ಅಹ್ಮದ್ ರವರ ಮಾರ್ಗದರ್ಶನದಲ್ಲಿ ಹಾಗೂ NITK ಸುರತ್ಕಲ್ ಇದರಲ್ಲಿ ಪ್ರಾಧ್ಯಾಪಕರಾಗಿರುವ ಡಾ.ಚಂದ್ರಶೇಖರ್ ರವರ ಸಹಮಾರ್ಗದರ್ಶನದಲ್ಲಿ ಕಳೆದ ವರುಷ ಇದೇ ವಿಷಯದಲ್ಲಿ ‘University of central Florida, Orlando, USAಯಲ್ಲಿ ನಡೆದ ಅಂತರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ಪ್ರಬಂಧ ಮಂಡನೆ ಮಾಡಿದ್ದರು.

