Author: UllalaVani

Kannada News From Coastal Karnataka

UN NETWORKS ಹರೇಕಳ: ಹರೇಕಳ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ವಿನೂತನವಾಗಿ “ಚಿಣ್ಣರ ನಡಿಗೆ ವಿದ್ಯಾದೇಗುಲ ಕಡೆಗೆ” ಎನ್ನುವ ಶೀರ್ಷಿಕೆ ಅಡಿಯಲ್ಲಿ ಆಚರಿಸಲ್ಪಡಲಾಯಿತು. ಎಂಟನೇಯ ತರಗತಿಗೆ ನೂತನವಾಗಿ ಸೇರ್ಪಡೆಗೊಂಡ 88 ವಿದ್ಯಾರ್ಥಿಗಳನ್ನು ಮಾವಿನ ಎಲೆ ತೋರಣ ಮತ್ತು ಬಾಳೆಗಿಡಗಳಿಂದ ಶೃಂಗರಿಸಲ್ಪಟ್ಟ ಸ್ವಾಗತ ಕಮಾನುನಲ್ಲಿ ಬ್ಯಾಂಡ್ ಸೆಟ್ ವಾದ್ಯ ಘೋಷಗಳೊಂದಿಗೆ ಶಾಲಾ ಸಭಾಂಗಣದ ಕಡೆ ಬರಮಾಡಿಕೊಳ್ಳಲಾಯಿತು. ಮೊದಲಿಗೆ ಶಾಲಾ ಶಿಕ್ಷಕಿ ವೃಂದದವರಾದ ಉಷಾಲತ, ಮೋಹಿನಿ, ಕುಮುದ, ಸ್ಮಿತಾ, ನೂತನ ಇವರುಗಳು ನೂತನ ಮಕ್ಕಳನ್ನು ಆರತಿ ಬೆಳಗಿ, ಹಣೆಗೆ ಕುಂಕುಮವನ್ನಿಟ್ಟು ಸ್ವಾಗತಿಸಿದರು. ನಂತರ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದ ಮುಟ್ಟಿ ಆಶೀರ್ವಾದ ತೆಗೆದುಕೊಂಡಾಗ ಮಕ್ಕಳಿಗೆ ಅಕ್ಷತೆ ಮತ್ತು ಹೂವನ್ನು ಹಾಕಿ ಗೌರವಿಸಲಾಯಿತು. ಅದರಂತೆ ಹೆತ್ತವರು ಶಿಕ್ಷಕ ವೃಂದದವರಿಗೆ ಗುರುದಕ್ಷಿಣೆಯನ್ನು ನೀಡಿ ಗೌರವ ಸಲ್ಲಿಸಿದರು. ತದ ನಂತರ ನಡೆದ ಸೊಗಸಾದ ಸಭಾ ಕಾರ್ಯಕ್ರಮವನ್ನು ಹಿಂಗಾರವನ್ನು ಅರಳಿಸುವುದರೊಂದಿಗೆ ಉದ್ಘಾಟಿಸಿ ಮಾತನಾಡಿದ ರಾಜ್ಯ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕಿ ಸಾವಿತ್ರಿ ಎಸ್.ರಾವ್‍ರವರು ಮಕ್ಕಳು ಅತ್ಯಧಿಕ ಅಂಕಗಳನ್ನು ಪಡೆದ…

Read More

UN NETWORKS ತೊಕ್ಕೊಟ್ಟು: ಎಡಬಿಡದೆ ಸುರಿದ ಮಳೆಯಿಂದಾಗಿ ತೊಕ್ಕೊಟ್ಟು ಜಂಕ್ಷನ್‍ನಲ್ಲಿರುವ ಪ್ರದೇಶವು ಜಲಾವೃತಗೊಂಡಿದ್ದು ಅಂಗಡಿ ಮುಂಗಟ್ಟುಗಳಿಗೆ ಮಳೆ ನೀರು ನುಗ್ಗಿ , ಸಾರ್ವಜನಿಕರಿಗೆ ಹಾಗೂ ವರ್ತಕರಿಗೆ ತುಂಬಾ ತೊಂದರೆಯಾಗಿರುವುದನ್ನು ಗಮನಿಸಿದ ಸಂಸದ ನಳಿನ್ ಕುಮಾರ್ ಕಟೀಲ್‍ರವರು ತ್ವರಿಗ ಕಾಮಗಾರಿಗೆ ಆದೇಶಿಸಿದ್ದು ಬುಧವಾರ ಕಾಮಗಾರಿ ನಡೆದಿದೆ. ಮಂಗಳವಾರ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಮಳೆ ನೀರಿನಿಂದಾಗುತ್ತಿರುವ ತೊಂದರೆಯನ್ನು ಪರಿಶೀಲಿಸುವಂತೆ ರಾಷ್ಟ್ರೀಯ ಹೆದ್ದಾರಿ ಮತ್ತು ನಗರಸಭೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕಳುಹಿಸಿ ಆ ಪ್ರದೇಶದ ಕಾಮಗಾರಿಗಳ ತೊಂದರೆ ಮತ್ತು ಸರಾಗವಾಗಿ ನೀರು ಹರಿದು ಹೋಗಲು ವ್ಯವಸ್ಥೆಗಳನ್ನು ಮಾಡುವಂತೆ ಸೂಚಿಸಿದ್ದು ಅದರಂತೆ ಬುಧವಾರ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ನೇತೃತ್ವದಲ್ಲಿ ಕಾಮಗಾರಿಗಳು ಬಾಕಿ ಇದ್ದ ಎಲ್ಲ ಪ್ರದೇಶಗಳ ವೀಕ್ಷಣೆ ನಡೆಸಿ ತಕ್ಷಣ ಕಾಮಗಾರಿಗೆ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಇಂಜಿನಿಯರ್ ಅಜಿತ್, ಶಿವಪ್ರಸಾದ್, ನವಯುಗ್‍ನ ಯೋಗೇಂದ್ರ ರೆಡ್ಡಿ, ಉಳ್ಳಾಲ ನಗರ ಸಭೆಯ ಅಧಿಕಾರಿಗಳಾದ ಗೋಪಾಲಕೃಷ್ಣ, ದಿನಕರ ಶೆಟ್ಟಿ, ಮಾಜಿ ಕೌನ್ಸಿಲರ್ ದಯಾನಂದ ತೊಕ್ಕೊಟ್ಟು, ಜೀವನ್ ಕುಮಾರ್ ತೊಕ್ಕೊಟ್ಟು,…

Read More

UN NETWORKS ಉಳ್ಳಾಲ : ಉಳ್ಳಾಲದಾದ್ಯಂತ ಮಂಗಳವಾರ ಸುರಿದ ಮಳೆಗೆ ತೊಕ್ಕೊಟ್ಟು ಜಂಕ್ಷನ್, ಕುತ್ತಾರು ಜಂಕ್ಷನ್ ಜಲಾವೃತಗೊಂಡಿದ್ದು, ತೊಕ್ಕೊಟ್ಟುವಿನಲ್ಲಿ ಹೋಟೆಲ್ ಅಂಗಡಿ ಮಳಿಗೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಉಳ್ಳಾಲದಲ್ಲಿ ಸಮುದ್ರ ಬಿರುಸುಗೊಂಡಿದ್ದು, ಯಾವುದೇ ಹಾನಿಯಾಗಿಲ್ಲ. ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಫ್ಲೈಓವರ್ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದ್ದು, ಕಾಮಗಾರಿಗೆ ಸಂಬಂಧಪಟ್ಟಂತೆ ರಸ್ತೆಯನ್ನು ಅಗೆದಿದ್ದು, ಮಂಗಳವಾರ ಸುರಿದ ಭಾರೀ ಮಳೆಗೆ ಫ್ಲೈ ಓವರ್‍ಗೆ ತೆಗೆದಿದ್ದ ಹೊಂಡದಲ್ಲಿ ನೀರು ತುಂಬಿ ರಸ್ತೆ ಮತ್ತು ಪಕ್ಕದ ಮೂರು ಕಟ್ಟಡಗಳಲ್ಲಿರುವ ಅಂಗಡಿಗಳಿಗೆ ನೀರು ತುಂಬಿದೆ. ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸಂಚರಿಸುವ ವಾಹನಗಳಿಗೆ ಸಂಚಾರಕ್ಕೆ ತಡೆಯಾಯಿತು. ಘಟನೆಗೆ ಸಂಬಂ„ಸಿದಂತೆ ಉಳ್ಳಾಲ ಮುಖ್ಯಾ„ಕಾರಿಗಳು ಜನಪ್ರತಿನಿಧಿಗಳು ಭೇಟಿ ನೀಡಿದ್ದು, ಹೆದ್ದಾರಿ ಇಲಾಖೆಯ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದರು. ರಾತ್ರಿ ವೇಳೆಯೂ ಅಂಗಡಿಗಳಿಗೆ ನೀರು ತುಂಬಿರುವುದನ್ನು ಅಂಗಡಿ ಮಾಲೀಕರುಇ ಸೇರಿದಂತೆ ನೌಕರರು ಶ್ರ,ಮಪಟ್ಟರು. ಕೃತಕ ನೆರೆಯಿಂದ ಲಕ್ಷಾಂತರ ನಷ್ಟ ಅಂದಾಜಿಸಲಾಗಿದೆ. ಬಿರುಸುಗೊಂಡ ಸಮುದ್ರ : ಉಳ್ಳಾಲ ಸೇರಿದಂತೆ…

Read More

UN NETWORKS ಉಳ್ಳಾಲ: ಸಿಡಿಲು ಬಡಿದು ಸೋಮೇಶ್ವರ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮನೆಗೆ ಅಪಾರ ಹಾನಿಯುಂಟಾಗಿದ್ದು, ಇದೇ ವೇಳೆ ಸಮೀಪದ ಮನೆಗಳಿಗೂ ಹಾನಿಯಾಗಿರುವ ಘಟನೆ ಕುಂಪಲ ಕೃಷ್ಣನಗರದ ಎರಡನೇ ಕ್ರಾಸಿನಲ್ಲಿ ಭಾನುವಾರ ತಡರಾತ್ರಿ ವೇಳೆ ಸಂಭವಿಸಿದೆ. ಸೋಮೇಶ್ವರ ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ.ಯಸ್.ನಾಯಕ್ ಹಾಗೂ ಅವರ ಪತಿ ನಿವೃತ್ತ ತಹಶೀಲ್ದಾರ್ ಆಗಿರುವ ಎಸ್.ಎಸ್ ನಾಯಕ್ ಅವರು ಮನೆಯೊಳಗಿದ್ದ ಸಂದರ್ಭ ಘಟನೆ ಸಂಭವಿಸಿದೆ. ಭಾನುವಾರ ಸಂಜೆಯಿಂದ ಭಾರೀ ಗುಡುಗು ಸಹಿತ ಮಳೆಯಾಗಿದ್ದು, ಪರಿಣಾಮವಾಗಿ ತಡರಾತ್ರಿ ಸುಶೀಲಾ ಅವರ ಮನೆಯ ತಾರಸಿಗೆ ಬಡಿದು ಸಿಮೆಂಟು ಎದ್ದುಬಂದಿದ್ದು, ತಾರಸಿಯ ಮೇಲೆ ಕಿರಿದಾದ ಹೊಂಡ ಉಂಟಾಗಿದೆ. ಮನೆಯೊಳಗಿದ್ದ ಇಲೆಕ್ಟ್ರಾನಿಕ್ಸ್ ಸಾಮಗ್ರಿಗಳೆಲ್ಲ ಹಾನಿಯಾಗಿದೆ. ಎರಡು ತಿಂಗಳ ಹಿಂದೆಯಷ್ಟೇ ಮನೆಯ ಗೃಹಪ್ರವೇಶವಾಗಿತ್ತು. ಸ್ಥಳಕ್ಕೆ ಸೋಮೇಶ್ವರ ಗ್ರಾ.ಪಂ ಅಧ್ಯಕ್ಷ ರಾಜೇಶ್ ಉಚ್ಚಿಲ್ ಭೇಟಿ ನೀಡಿದರು.

Read More

UN NETWORKS ಉಳ್ಳಾಲ: ಸಮಾಜದ ಕಟ್ಟಕಡೆಯ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವ ಸಮಯದಲ್ಲಿ ಉಳ್ಳಾಲದ ಬ್ರಹ್ಮಶ್ರೀ ಬಿಲ್ಲವ ವೇದಿಕೆ ದತ್ತು ಸ್ವೀಕಾರದಂತಹ ಮಹತ್ಕಾರ್ಯ ನಡೆಸುತ್ತಿರುವ ಕಾರ್ಯ ಎಲ್ಲರಿಗೂ ಮಾದರಿ ಎಂದು ಅಖಿಲ ಭಾರತ ಬಿಲ್ಲವರ ಯೂನಿಯನ್ ಇದರ ಅಧ್ಯಕ್ಷ ನವೀನ್ ಚಂದ್ರ ಸುವರ್ಣ ಅಭಿಪ್ರಾಯಪಟ್ಟರು. ಅವರು ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಇದರ ಆಶ್ರಯದಲ್ಲಿ ಕೊಲ್ಯ ಸೌಭಾಗ್ಯ ಸದನದಲ್ಲಿ ಭಾನುವಾರ ಜರಗಿದ 16 ನೇ ವರ್ಷದ ಶೈಕ್ಷಣಿಕ ದತ್ತು ಸ್ವೀಕಾರ ಹಾಗೂ ಬ್ರಹ್ಮಶ್ರೀ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ 40 ವಿದ್ಯಾರ್ಥಿಗಳ ದತ್ತು ಸ್ವೀಕಾರ, 28 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, 10 ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಆರ್ಥಿಕ ನೆರವು ಮತ್ತು 100 ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ ನಡೆಸಿ ಮಾತನಾಡಿದರು. ಶೈಕ್ಷಣಿಕ ದತ್ತು ಸ್ವೀಕಾರದ ಮೂಲಕ ವಿದ್ಯಾರ್ಥಿಗಳಲ್ಲಿ ಶಕ್ತಿ, ಉತ್ಸಾಹ ನೀಡಿ ಶಿಕ್ಷಣಕ್ಕೆ ಪ್ರೋತ್ಸಾಹಿಸುವಂತಾಗುತ್ತದೆ. ಆರ್ಥಿಕ ಮುಗ್ಗಟ್ಟಿನಿಂದ ಹಲವರ ಶಿಕ್ಷಣ ಮೊಟಕು ಆಗುವ ಸಂದರ್ಭವಿತ್ತು. ಸಂಘಟನೆಗಳಿಂದ ದೊರೆಯುವ ಸಹಕಾರವನ್ನು ಪಡೆಯುವ ವಿದ್ಯಾರ್ಥಿಗಳು ಗುರಿ ಮತ್ತು…

Read More

UN NETWORKS ಉಳ್ಳಾಲ: ರಾಜ್ಯದಲ್ಲಿ ಶೇ.78 ರಷ್ಟು ಮುಸ್ಲಿಮರಿದ್ದು, ಅವರ ಮತದಾನದಿಂದ ರಾಜ್ಯದಲ್ಲಿ 78 ಕಾಂಗ್ರೆಸ್ ಸೀಟುಗಳು ಬಂದಿವೆ. ಈ ನಿಟ್ಟಿನಲ್ಲಿ ಹಿಂದಿನ ಸರಕಾರದ ಅವಧಿಯಲ್ಲಿ ಎರಡು ದೊಡ್ಡ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿದ ಯು.ಟಿ.ಖಾದರ್ ಅವರಿಗೆ ಸಮ್ಮಿಶ್ರ ಸರಕಾರದಲ್ಲಿ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ತಬೂಖ್ ದಾರಿಮಿ ಒತ್ತಾಯಿಸಿದ್ದಾರೆ. https://www.youtube.com/watch?v=qVLrmXr2oMw&feature=youtu.be ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕೋಮುವಾದಿ ಶಕ್ತಿಯನ್ನು ದೂರಮಾಡಲು ಕಾಂಗ್ರೆಸ್ -ಜೆಡಿಎಸ್ ರಚಿಸಿದ ನೂತನ ಸರಕಾರಕ್ಕೆ ಅಭಿನಂದನೆಗಳು. ರಾಜ್ಯದ ಬುದ್ಧಿವಂತರಿಂದಾಗಿ ಕೋಮುವಾದಿಗಳಿಗೆ ಅವಕಾಶವಿಲ್ಲ ಅನ್ನುವ ಸಂದೇಶ ದೇಶದ ಪ್ರಜೆಗಳಿಗೆ ತಲುಪಿದೆ. ಕಳೆದ ಚುನಾವಣೆಯಲ್ಲಿ ಶೇ . 20 ರಷ್ಟು ಲಿಂಗಾಯತರು, ಶೇ.11 ವಕ್ಕಲಿಗರು, ಶೇ. 78 ಮುಸ್ಲಿಮರು , ಶೇ. 60 ಕುರುಬರು, ಶೇ.37 ಎಸ್.ಸಿ , ಎಸ್.ಟಿ ಶೇ. 37 ಮತ್ತು ಒಬಿಸಿಯವರು ಮತ ಚಲಾಯಿಸಿದ್ದಾರೆ. ಆದರೆ ಶೇ. 78 ರಷ್ಟು ಮುಸ್ಲಿಮರ ಮತ ಚಲಾವಣೆಯಿಂದ ರಾಜ್ಯದಲ್ಲಿ 78 ಸೀಟುಗಳು ಕಾಂಗ್ರೆಸ್ಸಿಗೆ ಬಂದಿದೆ. ಈ ನಿಟ್ಟಿನಲ್ಲಿ ಉಪಮುಖ್ಯಮಂತ್ರಿ ಪಟ್ಟವನ್ನು ಮುಸ್ಲಿಂ…

Read More

UN NETWORKS ಉಳ್ಳಾಲ: ನಾಲ್ಕು ಕಾರುಗಳ ನಡುವೆ ಸರಣಿ ಅಪಘಾತ ನಡೆದಿರುವ ಘಟನೆ ರಾ.66 ರ ನೇತ್ರಾವತಿ ಸೇತುವೆಯಲ್ಲಿ ಶುಕ್ರವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಮಂಗಳೂರಿನಿಂದ ತೊಕ್ಕೊಟ್ಟು ಕಡೆಗೆ ಸಂಚರಿಸುತ್ತಿದ್ದ ಕಾರುಗಳ ನಡುವೆ ಅಪಘಾತ ಸಂಭವಿಸಿದೆ. ನೇತ್ರಾವತಿ ಸೇತುವೆಯಲ್ಲಿ ಅಮಿತ ವೇಗದಲ್ಲಿ ಕೇರಳ ಕಡೆಗೆ ಸಾಗುತ್ತಿದ್ದ ಡಸ್ಟರ್ ಕಾರಿನ ಚಾಲಕ ಹಠಾತ್ತನೆ ಬ್ರೇಕ್ ಹಾಕಿದ ಪರಿಣಾಮವಾಗಿ ಹಿಂಬದಿಯಲ್ಲಿದ್ದ ಹೋಂಡ ಸಿಟಿ ಕಾರು ಹಿಂಬದಿಗೆ ಗುದಿದ್ದು, ಅದೇ ರೀತಿಯಲ್ಲಿ ಅದರ ಹಿಂದೆ ಇದ್ದ ಇಕೋ ಸ್ಪೋಟ್ರ್ಸ್ ಕಾರು , ಅದರ ಹಿಂದೆಯಿದ್ದ ಆಲ್ಟೋ ಕಾರು ಢಿಕ್ಕಿ ಹೊಡೆದಿದೆ. ಏಕಕಾಲದಲ್ಲಿ ನಾಲ್ಕು ಕಾರುಗಳ ಮಧ್ಯೆ ಅಪಘಾತ ನಡೆದು ಸರಣಿ ಆಪಘಾತ ಸಂಭವಿಸಿದೆ. ಘಟನೆಯಲ್ಲಿ ಯಾರಿಗೂ ಗಾಯವಾಗಿಲ್ಲ. ಕಡಲ್ಕೊರೆತಕ್ಕೆ ಶಾಶ್ವತ ತಡೆಗೋಡೆ ಕಾಮಗಾರಿಯ ಸೊತ್ತುಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಸೇತುವೆಯ ಮಧ್ಯಭಾಗದಲ್ಲಿ ಕೆಟ್ಟು ನಿಂತ ಪರಿಣಾಮ ಡಸ್ಟರ್ ಕಾರಿನ ಚಾಲಕ ಹಠಾತ್ ಬ್ರೇಕ್ ಹಾಕಿದ್ದಾನೆ ಎನ್ನಲಾಗಿದೆ. ಇದರಿಂದಾಗಿ ಹಿಂಬದಿಯಲ್ಲಿದ್ದ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

UN NETWORKS ಉಳ್ಳಾಲ: ಸಯ್ಯದ್ ಮದನಿ ಅರಬಿಕ್ ಎಜುಕೇಶನಲ್ ಟ್ರಸ್ಟ್ ಉಳ್ಳಾಲ ವತಿಯಿಂದ ನಡೆಸಲಾದ 2018 ನೇಸಾಲಿನ ಮದ್ರಸ ಪಬ್ಲಿಕ್ ಪರೀಕ್ಷೆಯಲ್ಲಿ ಮೇಲಂಗಡಿ ಖಂಝುಲ್ ಉಲೂಂ ಮದ್ರಸದ 7ನೇ ತರಗತಿಯ ಮುಹಮ್ಮದ್ ಅಫ್ರಾಝ್ 523 (89%), ನಶೀಫಾ521(89%) , 5 ನೇ ತರಗತಿಯ ಮರ್ಯಂ ತಮನ್ನ591(85%) ನಶ್ವಾ 572 (82%) ಅಂಕಗಳನ್ನ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.

Read More

UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾಲಯದ ಭೌತಶಾಸ್ತ್ರ ವಿಭಾಗದ ಸಂಶೋಧನ ವಿದ್ಯಾರ್ಥಿ ಸಿ.ಎಸ್.ಕಾಳಿಪ್ರಸಾದ್ ಅವರು ಮಂಡಿಸಿದ `ಸ್ಡಡೀಸ್ ಆನ್ ಟ್ರಾನ್ಸ್‍ಪೋರ್ಟ್ ಆಂಡ್ ಡಿಸ್ಟ್ರಿಬ್ಯೂಷನ್ ಆಫ್ ರೇಡಿಯೋ ನ್ಯೂಕ್ಲೈಡ್ಸ್ ಇನ್ ಮೇಜರ್ ರಿವರ್ ಎಕೋ ಸಿಸ್ಟಮ್ ಆಫ್ ಸೌಥ್ ಕರ್ನಾಟಕ’ ಎಂಬ ಸಂಶೋಧನಾ ಮಹಾಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯವು ಪಿಎಚ್‍ಡಿ ಪದವಿ ನೀಡಿದೆ. ಹಾಸನ ಜಿಲ್ಲೆಯ ಬಾಗೇಶ್‍ಪುರ ಗ್ರಾಮದ ಬಿ.ಶಿವಾನಂದಪ್ಪ ಮತ್ತು ಆರ್.ಲೀಲಾವತಿ ದಂಪತಿಗಳ ಪುತ್ರನಾಗಿರುವ ಇವರು ವಿವಿ ಭೌತಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ವೈ.ನಾರಾಯಣ ಅವರು ಮಾರ್ಗದರ್ಶನ ನೀಡಿದ್ದರು.

Read More

UN NETWORKS ದೇರಳಕಟ್ಟೆ: ಜ್ಯಾತಿಯಾತೀತ ಜನತಾದಳ ಯುವ ಘಟಕ ಇದರ ಸಭೆಯು ಇಂದು ದೇರಳಕಟ್ಟೆ ಪಕ್ಷದ ಕಚೇರಿಯಲ್ಲಿ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಮೋಹನ್ ದಾಸ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.ಈ ಸಭೆಯಲ್ಲಿ ಜೆ.ಡಿ.ಎಸ್.ಜಿಲ್ಲಾ ಮುಖಂಡರುಗಳಾದ ಮಾಜಿ ಮೇಯರ್ ಕೆ.ಅಶ್ರಫ್.ನಝೀರ್ ಉಳ್ಳಾಲ್.ಅಝೀಝ್ ಮಲಾರ್.ಉಸ್ಮಾನ್ ಅಕ್ಶಾ.ಸ್ವಾಲಿಹ್ ಹರೇಕಳ.ಮುಂತಾದ ಹಲವಾರು ಪ್ರಮುಖರು ಬಾಗವಹಿಸಿದರು. ಸಭೆಯಲ್ಲಿ ನೂತನ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.ಜೆ.ಡಿ.ಎಸ್.ಯುವ ಘಟಕ ಬೆಲ್ಮ ದೇರಳಕಟ್ಟೆ ಇದರ ನೂತನ ಅಧ್ಯಕ್ಷರಾಗಿ ನೌಷಾದ್ ದೇರಳಕಟ್ಟೆ,ಉಪಾಧ್ಯಕ್ಷರಾಗಿ ಅಶ್ರಫ್ ಕಾನೆಕೆರೆ,ಪ್ರದಾನ ಕಾರ್ಯದರ್ಶಿಯಾಗಿ ಪವಾಝ್.ದೇರಳಕಟ್ಟೆ,ಹಾಗೂ ಕೋಶಾಧಿಕಾರಿಯಾಗಿ ಸುಹೈಬ್ ದೇರಳಕಟ್ಟೆ, ಹಾಗೂ 30 ಮಂದಿ ಕಾರ್ಯಕರ್ತರನ್ನು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಆಯ್ಕೆಗೊಳಿಸಲಾಯಿತು.

Read More