Author: UllalaVani

Kannada News From Coastal Karnataka

UN NETWORKS ಕೈರಂಗಳ: ` ಕಳೆದ ಹತ್ತು ವರ್ಷದಲ್ಲಿ ಸುಮಾರು 35 ಗೋವುಗಳನ್ನು ಕಳೆದುಕೊಂಡಿದ್ದೇನೆ. ಮನಸ್ಸಿಗೆ ತುಂಬಾ ನೋವಾಗುತ್ತಿದೆ, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ಹೋದರೆ ಮೇಯಲು ಯಾಕೆ ಬಿಡುತ್ತೀರಿ ಎಂದು ಬೈಯ್ದು ನಮ್ಮನ್ನು ವಾಪಸ್ಸು ಕಳುಹಿಸುತ್ತಾರೆಯೇ ಹೊರತು ದನಕಳವು ನಡೆಸಿದವರನ್ನು ಹುಡುಕುವ ಪ್ರಯತ್ನ ಮಾಡುತ್ತಿಲ್ಲ ಎಂದು ಕೊಣಾಜೆ ನಡುಪದವು ನಿವಾಸಿ ಸುಮಾರು 65 ರ ಹರೆಯದ ಹೈನುಗಾರಿಕೆ ನಡೆಸುತ್ತಿರುವ ಕಲ್ಯಾಣಿ ಅಲವತ್ತುಕೊಂಡರು. ಗೋದರೋಡೆಗೈದವರ ಪತ್ತೆಗಾಗಿ ಟಿ.ಜಿ.ರಾಜಾರಾಂ ಭಟ್ ನೇತೃತ್ವದಲ್ಲಿ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಗೋಶಾಲೆಯಲ್ಲಿ ಕೈಗೊಳ್ಳಲಾದ ಅಮರಣಾಂತ ಉಪವಾಸ ಸತ್ಯಾಗ್ರಹದ ಮೂರನೇ ದಿನವಾದ ಮಂಗಳವಾರ ನಡೆದ ಗೋ ಸಂತ್ರಸ್ತರ ಸಭೆಯಲ್ಲಿ ನೊಂದವರ ಮಾತು ಕೇಳಿಬಂತು. ಗೋಕಳ್ಳರ ಅಟ್ಟಹಾಸಕ್ಕೆ ಜಗ್ಗದೆ ಇದೀಗ 6 ಹಸುವನ್ನು ಮನೆಯಲ್ಲಿ ಸಾಕುತ್ತಿದ್ದೇನೆ ಆದರೆ ಅದನ್ನು ಯಾವ ಕಟುಕ ಬಂದು ಕದ್ದುಕೊಂಡು ಹೋಗುತ್ತಾನೆ ಅನ್ನುವ ಭಯವೂ ಮನದಲ್ಲಿದೆ. ರಾತ್ರಿ ಮಲಗಿರುವ ಸಂದರ್ಭದಲ್ಲಿ ಗೋ ಹಂತಕರು ಬಂದು ಸ್ವಂತ ಮಗುವಿನಂತೆ ಸಾಕಿದ ಹಸುಗಳನ್ನು ಕದ್ದು…

Read More

UN NETWORKS ಉಳ್ಳಾಲ: ಇಸ್ಲಾಂ ಸ್ವಚ್ಛತೆಯನ್ನು ಪ್ರತಿಪಾದಿಸುವ ಧರ್ಮ, ಈ ನಿಟ್ಟಿನಲ್ಲಿ ಜಾಗತಿಕ ಮುಸ್ಲಿಮರು ಸ್ವಚ್ಛತೆಗೆ ಪ್ರಥಮ ಸ್ಥಾನ ನೀಡುತ್ತಾರೆ ಎಂದು ಮದ್ರಸ ಅದ್ಯಾಪಕರ ವೇದಿಕೆಯ ಕೆ.ಎ ಅಬ್ದುಲ್ ಅಝೀಝ್ ಝುಹ್‍ರಿ ಪುಣಚ ಹೇಳಿದರು. ಅವರು ಮಂಗಳೂರಿನ ಮದ್ರಸ ಅದ್ಯಾಪಕರ ವೇದಿಕೆ ವತಿಯಿಂದ ಕುತ್ತಾರು ಮದನಿ ನಗರದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಹಯೋಗದಲ್ಲಿ ನಡೆದ ಪರಿಸರ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಇಸ್ಲಾಂ ಧರ್ಮವೆಂದರೆ ಪ್ರಕೃತಿ ಧರ್ಮ, ಇಸ್ಲಾಮಿನ ಹಲವು ಪಾಠಗಳು ಪ್ರಕೃತಿಯನ್ನು ಸಂರಕ್ಷಿಸಲು ಎಚ್ಚರಿಸುತ್ತಿದೆ. ಪರಿಸರವನ್ನು ಸಂಬಂಧವಿಡದೆ ಕಡೆಗಣಿಸಿ ಮುಂದಕ್ಕೆ ಸಾಗುವುದು ಭೂಷಣವಲ್ಲ. ಮದರಸ ಅಧ್ಯಾಪಕರೆಂದಲ್ಲಿ ಕೇವಲ ಸಂದೇಶ ನೀಡುವವರು ಮಾತ್ರವಲ್ಲ, ಪ್ರಾಯೋಗಿಕವಾಗಿ ಮಾಡಿ ತೋರಿಸುವವರು ಎಂದು ಈ ಸಾಮಾಜಿಕ ಕಾರ್ಯದ ಮೂಲಕ ಸಾಬೀತಾಗಿದೆ. ಎಲ್ಲರ ಸಹಕಾರವನ್ನು ಯಾಚಿಸುತ್ತಾ ಸ್ವಸ್ಥ್ಯ ಸಮಾಜ ನಿರ್ಮಿಸಲು ಮದರಸ ಅಧ್ಯಾಪಕರಿಂದ ಪ್ರಯತ್ನವಾಗಿದೆ ಎಂದರು. ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‍ನ ಸಲಹೆಗಾರ ರಫೀಕ್ ಮಾಸ್ಟರ್ ಮಾತನಾಡಿ ಸ್ವಚ್ಛತೆ ಎಂಬುದು ಮುಸ್ಲಿಮನ ಸತ್ಯವಿಶ್ವಾಸದ ಅರ್ಧ ಭಾಗವಾಗಿದೆ. ಸ್ವಚ್ಛ ಭಾರತ…

Read More

UN NETWORKS ಉಳ್ಳಾಲ: ಸದಾ ರೋಗಿಗಳ ಆರೈಕೆಯಲ್ಲಿ ತೊಡಗಿರುವ ದಾದಿಯರ ಕೆಲಸ ಸುಗಮವಾಗಲು ಹಾಗೂ ವೈದ್ಯರು, ಅರೆವೈದ್ಯಕೀಯ ವಿಭಾಗದವರಿಗೆ `ಪೇಷೆಂಟ್ ಲಿಪ್ಟ್ ಸಿಸ್ಟಂ’ನಿಂದ ಅನುಕೂಲವಾಗಲಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಸತೀಶ್ ಕುಮಾರ್ ಭಂಡಾರಿ ಹೇಳಿದ್ದಾರೆ. ಅವರು ನಿಟ್ಟೆ ವಿಶ್ವವಿದ್ಯಾಲಯದ ವೈದ್ಯಕೀಯ ಉಪಕರಣ ಅಭಿವೃದ್ಧಿ ಯೋಜನೆಯಡಿ ವಿನ್ಯಾಸಗೊಂಡು ತಯಾರಿಸಲಾದ `ಪೇಷಂಟ್ ಲಿಫ್ಟ್ ಸಿಸ್ಟಂ’ ಉಪಕರಣವನ್ನು ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಯಲ್ಲಿ ಬಿಡುಗಡೆಗೊಳಿಸಿ ಮಾತನಾಡಿದರು. ಆಸ್ಪತ್ರೆಯಲ್ಲಿ ರೋಗಿಗಳನ್ನು ಸ್ಥಳಾಂತರಗೊಳಿಸುವಾಗ ಸಿಬ್ಬಂದಿ ಬಹಳ ತೊಂದರೆ ಅನುಭವಿಸುತ್ತಾರೆ. ನರ್ಸುಗಳು, ವೈದ್ಯರು , ಅರೆವೈದ್ಯಕೀಯ ವಿಭಾಗದವರ ತೊಂದರೆಯನ್ನು ಗಮನಿಸಿ ಉಪಕರಣವನ್ನು ಬಿಡುಗಡೆಗೊಳಿಸಲಾಗಿದೆ ಎಂದರು. ಉಪಕರಣವನ್ನು ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಮೆಲ್ವಿನ್ ಕ್ಯಾಸ್ಟಲಿನೋ ಅವರ ನಿರ್ದೇಶನದಂತೆ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಅಂತಿಮ ವರ್ಷದ ಮೆಕ್ಯಾನಿಕಲ್ ವಿದ್ಯಾರ್ಥಿಗಳಾದ ಅಜಿತ್, ಕ್ಲಿವ್ ಜೇಮ್ಸ್, ರೋಶಿತ್ ರೋಹನ್, ಯಶ್ ರಾಜ್ ಉಪಕರಣ ತಯಾರಿಸುವಲ್ಲಿ ಸಹಕರಿಸಿದ್ದಾರೆ. ಕಾರ್ಯಕ್ರಮದಲ್ಲಿ ವೈದ್ಯಕೀಯ ಅಧೀಕ್ಷಕ ಮೇಜರ್ ಡಾ. ಶಿವಕುಮಾರ್ ಹಿರೇಮಠ್, ನಿಟ್ಟೆ ತಾಂತ್ರಿಕ…

Read More

UN NETWORKS ಮುಡಿಪು: ಕರ್ನಾಟಕ ರಾಜ್ಯ ಸುನ್ನಿ ಯುವಜನ ಸಂಘ ಇದರ ಎಸ್‍ವೈಎಸ್ ಮುಡಿಪು ಸೆಂಟರ್ ವತಿಯಿಂದ ಹತ್ತು ಜೋಡಿಯ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಗೂ ನಂದರಪಡ್ಪುವಿನಲ್ಲಿ ನೂತನವಾಗಿ ನಿರ್ಮಾಣಗೊಂಡ ಎಸ್.ಕೆ.ಮಲ್ಟಿ ಪರ್ಪಸ್ ಸಭಾಂಗಣದ ಉದ್ಘಾಟನೆ ಕಾರ್ಯಕ್ರಮವು  ನಡೆಯಿತು. ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ನಿಖಾಹ್ ನೇತೃತ್ವವನ್ನು ವಹಿಸಿ ಮಾತನಾಡಿದ ಸುಲ್ತಾನುಲ್ ಉಲಮಾ ಎ.ಪಿ.ಉಸ್ತಾದ್ ಅವರು, ಎಸ್‍ವೈಎಸ್ ವತಿಯಿಂದ ಕೆಲವು ವರ್ಷಗಳಿಂದ ನಡೆಯುತ್ತಿರುವ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪ್ರತೀ ವರ್ಷವೂ ಭಾಗವಹಿಸುತ್ತಿದ್ದೇನೆ. ಸಾಮೂಹಿಕ ವಿವಾಹದಂತಹ ಕಾರ್ಯಕ್ರಮವು ಮಾದರಿ ಕಾರ್ಯಕ್ರಮವಾಗಿದ್ದು ಪುಣ್ಯದ ಕಾರ್ಯವಾಗಿದೆ. ಇಂತಹ ಸಮಾಜದ ಬಡಜನರಿಗೆ ಅನುಕೂಲವಾಗುವಂತಹ ಕೆಲಸಗಳು ಹೆಚ್ಚೆಚ್ಚು ನಡೆಯಬೇಕಿದೆ. ಮುಸ್ಲಿಂ ಸಮುದಾಯ ಸರಳ ವಿವಾಹ ಕಾರ್ಯಕ್ಕೆ ಆದ್ಯತೆ ನೀಡುವುದರೊಂದಿಗೆ ಇಂತಹ ಮಾದರಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು ಎಂದರು. ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಖಾಝಿ ಇಬ್ರಾಹಿಂ ಬೇಕಲ್ ಉಸ್ತಾದ್ ಅವರು, ದಾನ ಮಾಡುವರು ಪ್ರಥಮವಾಗಿ ತಮ್ಮ ಕುಟುಂಬದಲ್ಲಿರುವವರಿಗೆ ದಾನ ಮಾಡಬೇಕು. ಪ್ರವಾದಿಯವರು ತಿಳಿಸಿದಂತೆ ಇನ್ನೊಂದು ಕಾಲ ಬರುತ್ತದೆ. ಅಲ್ಲಿ ದಾನ ಕೊಡುವವರು…

Read More

UN NETWORKS ಕೈರಂಗಳ: ಮುಡಿಪು ವಲಯದ ಕೈರಂಗಳ ಪುಣ್ಯಕೋಟಿ ನಗರದ ಅಮೃತಧಾರಾ ಶಾಲೆಯಿಂದ ಇತ್ತೀಚೆಗೆ ನಡೆದ ದನ ದರೋಡೆ ಪ್ರಕರಣ ಖಂಡಿಸಿ, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಭಾನುವಾರ ಬೆಳಗ್ಗೆ ಅಮರಣಾತ ಉಪವಾಸ ಸತ್ಯಾಗ್ರಹ ಆರಂಭಗೊಂಡಿದೆ. ಅಮೃತಧಾರಾ ಗೋಶಾಲೆ ಸಮಿತಿ ಅಧ್ಯಕ್ಷ ಟಿ.ಜಿ.ರಾಜಾರಾಮ ಭಟ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದು, ಪರಿಸರದ ಗೋಪ್ರೇಮಿಗಳು ಬೆಂಬಲ ಸೂಚಿಸಿ ಧರಣಿ ಕುಳಿತಿದ್ದಾರೆ. ಸತ್ಯಾಗ್ರಹ ಆರಂಭಕ್ಕೂ ಮುನ್ನ ಸ್ಥಳೀಯ ಪೊಲೀಸ್ ಅಧಿಕಾರಿಗಳು ಧರಣಿ ಕೈಬಿಡುವಂತೆ ಮನವಿ ಮಾಡಿದಾರೂ ಪ್ರತಿಭಟನಾಕಾರರು ನಿರ್ಧಾರ ಬದಲಿಸಲಿಲ್ಲ. ಗೋಕಳ್ಳರನ್ನು ಬಂಧಿಸಿ, ಅವರು ತಪ್ಪೊಪ್ಪಿಕೊಳ್ಳುವ ತನಕ ಸತ್ಯಾಗ್ರದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಧರಣಿ ನಿರತರು ಘೋಷಿಸಿದ್ದಾರೆ. ಈ ಮೂಲಕ ಗೋಕಳ್ಳರಿಗೆ ಎಚ್ಚರಿಕೆ ಸಂದೇಶ ತಲುಪಿಸಲಾಗುವುದು. ಸತ್ಯಾಗ್ರಹಕ್ಕೆ ಸೂಕ್ತ ಸ್ಪಂಧನೆ ವ್ಯಕ್ತವಾಗದಿದ್ದಲ್ಲಿ ನಾಳೆಯಿಂದ ಸರಣಿ ಧರಣಿ ಮೂಲಕ ಪ್ರತಿಭಟನೆ ತೀವ್ರಗೊಳಿಸಲಾಗುವುದು, ಈ ಹಿಂದೆ ದುಷ್ಕರ್ಮಿಗಳಿಂದ ದನಗಳನ್ನು ಕರೆದುಕೊಂಡ ಸಂತ್ರಸ್ತರನ್ನೂ ಕರೆತಂದು ಹೋರಾಟ ತೀವ್ರಗೊಳಿಸಲಾಗುವುದು ಎಂದು ಧರಣಿ ನಿರತರು ತಿಳಿಸಿದ್ದಾರೆ. ಇದು ಸಾಮಾಜಿಕ ಆಂದೋಲನ,…

Read More

UN NETWORKS ಉಳ್ಳಾಲ: ಎಪ್ರೀಲ್ 7 ರಂದು ಉಳ್ಳಾಲ ಕಡಲ ಕಿನಾರೆಯಲ್ಲಿ ನಡೆಯಲಿರುವ ಸಮಸ್ತ ಮಹಾ ಸಮ್ಮೇಳನದ ಪ್ರಚಾರಾರ್ಥ ರಾಜ್ಯಾದ್ಯಂತ ಸಂಚರಿಸಲಿರುವ ಪ್ರಚಾರ ಜಾಥಾಕ್ಕೆ ಸಯ್ಯದ್ ಮದನಿ ದರ್ಗಾ ಸಮಿತಿ ಅದ್ಯಕ್ಷರಾದ ಹಾಜಿ ಅಬ್ದುಲ್ ರಶೀದ್ ಚಾಲನೆ ನೀಡಿದರು. ಅಮೀರ್ ತಂಙಳ್ ಕಿನ್ಯಾ ದರ್ಗಾ ಝಿಯಾರತ್ ಗೆ ನೇತೃತ್ವ ನೀಡಿದರು. ಜಾಥಾ ನಾಯಕ ಇಬ್ರಾಹೀಂ ಬಾತಿಷ್ ತಂಙಳ್, ಝೈನ್ ಸಖಾಫಿ ಉಳ್ಳಾಲ, ತಬೂಕ್ ದಾರಿಮಿ, ಬಶೀರ್ ಇಸ್ಮಾಯೀಲ್, ಹಾಫಿಲ್ ನಈಮೀ, ಸಿದ್ದೀಖ್ ಅಬೂಬಕರ್ ಇನ್ನಿತರರು ಉಪಸ್ಥಿತರಿದ್ದರು.

Read More

UN NETWORKS ಮಂಗಳೂರು : ಕರ್ನಾಟಕ ಇಸ್ಲಾಮಿಕ ಸಾಹಿತ್ಯ ಅಕಾಡೆಮಿ ಉಪಾಧ್ಯಕ್ಷರು, ದಾರುಲ್ ಖುರ್‍ಆನ್ ಕಿಸಾ ಶರೀಅತ್ ಕಾಲೇಜಿನ ಉಪಾಧ್ಯಕ್ಷರು, ಸುನ್ನೀಸಂದೇಶ ಪತ್ರಿಕೆಯ ನಿರ್ದೇಶಕರು  ಎ.ಎಚ್. ನೌಷಾದ್ ಹಾಜಿ ಸೂರಲ್ಪಾಡಿರವರ ಮಾವ ಸಮಾಜಸೇವಕರು ಬಿ.ಎಸ್. ಬಸ್, ಲಾರಿ ಮಾಲಕರಾಗಿದ್ದ ವಾದಿಸ್ಸಲಾಮ ಗಂಜಿಮಠ ಬಿ.ಎಸ್. ಮುಹಮ್ಮದ್ ಮೋನು (55)ರವರು 2 ಗಂಡು, 3 ಹೆಣ್ಣು ಹಾಗೂ ಪತ್ನಿ ಮತ್ತು ಅಪಾರ ಕುಟುಂಬಸ್ಥರನ್ನು ಅಗಲಿದ್ದಾರೆ. ಮುಹಮ್ಮದ್ ಮೋನುರವರ ನಿಧನಕ್ಕೆ ಸುನ್ನೀಸಂದೇಶ ಪತ್ರಿಕೆಯ ಪ್ರಧಾನ ನಿರ್ದೇಶಕರಾದ ಪಾಣಕ್ಕಾಡ್ ಸಾದಿಕಲಿ ಶಿಹಾಬ್ ತಂಙಳ್, ಖಾಸಿಮ್ ಉಸ್ತಾದ್ ಕುಂಬಳೆ, ಹಾಜಿ ಕೆ.ಎಸ್. ಹೈದರ್ ದಾರಿಮಿ, ಮುಸ್ತಫ ಫೈಝಿ ಕಿನ್ಯ, ಎಂ.ಎ. ಅಬ್ದುಲ್ಲ ಹಾಜಿ ಬೆಳ್ಮ ರೆಂಜಾಡಿ, ಸಿತಾರ್ ಅಬ್ದುಲ್ ಮಜೀದ್ ಹಾಜಿ ಕಣ್ಣೂರು, ಕುಕ್ಕಿಲ ಅಬ್ದುಲ್ ಖಾದರ್ ದಾರಿಮಿ, ಉಮರ್ ದಾರಿಮಿ ಪಟ್ಟೋರಿ, ಸಿದ್ಧೀಖ್ ಫೈಝಿ ಕರಾಯ, ಇಬ್ರಾಹಿಂ ಕುಂಬಂಕುದಿ, ಮುನೀರ್ ದಾರಿಮಿ ಗೂನಡ್ಕ, ಬಶೀರ್ ಅಝ್‍ಹರಿ ಬಾಯಾರ್, ರಫೀಕ್ ಅಜ್ಜಾವರ, ಜಲೀಲ್ ಅಲ್‍ರಮಿ, ಸಾಹುಲ್ ಹಮೀದ್ ಐವರ್ನಾಡ್,…

Read More

UN NETWORKS ಮಂಗಳೂರು : ಕುಂಬಳೆ ಇಮಾಮ್ ಶಾಫಿ ಅಕಾಡಮಿಯ ದಶವಾರ್ಷಿಕ ಮಹಾಸಮ್ಮೇಳನ ಎಪ್ರಿಲ್ 9ರಿಂದ 15ರ ತನಕ ಕುಂಬಳೆ ಬದ್ರಿಯಾ ನಗರದಲ್ಲಿ ನಡೆಯಲಿದೆ. ಇದರ ಪ್ರಚಾರಾರ್ಥ ಎಪ್ರಿಲ್ 1ರಿಂದ 9ರ ತನಕ ನಡೆಯುವ ಸಂದೇಶ ಯಾತ್ರೆಯು ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ಝಿಯಾರತ್‍ನೊಂದಿಗೆ ಸಮಸ್ತದ ಪತಾಕೆಯನ್ನು ಉಳ್ಳಾಲ ದರ್ಗಾ ಸಮಿತಿ ಅಧ್ಯಕ್ಷರಾದ ಅಬ್ದುರ್ರಶೀದ್ ಹಾಜಿಯವರು ಸಂದೇಶ ಯಾತ್ರೆಯ ನಾಯಕರಾದ ಅನಸ್ ತಂಙಳ್ ಹಾಗೂ ಎಂ.ಪಿ. ಮುಹಮ್ಮದ್ ಸಅದಿರವರಿಗೆ ಪತಾಕೆ ನೀಡುವ ಮೂಲಕ ಪ್ರಚಾರ ಸಂದೇಶ ಜಾಥಾಕ್ಕೆ ಚಾಲನೆ ನೀಡಿದರು. ಸಮಾರಂಭದಲ್ಲಿ ಉಳ್ಳಾಲ ಮಾಜಿ ಖತೀಬರಾದ ಅಬ್ದುರ್ರವೂಫ್ ಮುಸ್ಲಿಯಾರ್, ಜಿಲ್ಲಾ ಜಂಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷರಾದ ಕೆ.ಎಲ್. ಉಮರ್ ದಾರಿಮಿ ಪಟ್ಟೋರಿ, ಉಳ್ಳಾಲ ಸಮಸ್ತ ನೇತಾರ ಇಬ್ರಾಹಿಂ ತಂಙಳ್, ಸುನ್ನೀಸಂದೇಶ ಪತ್ರಿಕೆಯ ಸಂಪಾದಕ ಮುಸ್ತಫ ಫೈಝಿ ಕಿನ್ಯ, ದಾರುಲ್ ಖುರ್‍ಆನ್ ಕಿಸಾ ಶರೀಅತ್ ಕಾಲೇಜಿನ ಪ್ರಧಾನ ಕಾರ್ಯದರ್ಶಿ ಸಿತಾರ್ ಅಬ್ದುಲ್ ಮಜೀದ್ ಹಾಜಿ, ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿಯ ಉಪಾಧ್ಯಕ್ಷ ಎಂ.ಎ. ಅಬ್ದುಲ್ಲ…

Read More

UN NETWORKS ಸೋಮೇಶ್ವರ: ಸೋಮೇಶ್ವರದ ಶ್ರೀ ಸೋಮನಾಥ ದೇವಸ್ಥಾನದಲ್ಲಿ ನಡೆಯುತ್ತಿರುವ ವಾರ್ಷಿಕ ಜಾತ್ರಾ ಮಹೋತ್ಸವದ ಅಂಗವಾಗಿ ಬಲಿಪೂಜೆ, ಚಂದ್ರಮಂಡಲ ರಥೋತ್ಸವ ದೇವರ ಜಳಕ ಸ್ನಾನ ವಿಜೃಂಭಣೆಯಿಂದ ಸೋಮವಾರ ನಡೆಯಿತು. https://www.youtube.com/watch?v=qpUmH6rYHow

Read More

UN NETWORKS ಮಲಪ್ಪುರಂ : ದಕ್ಷಿಣ ಭಾರತದ ಪ್ರಸಿದ್ಧ ಧಾರ್ಮಿಕ ವಿದ್ಯಾಲಯವಾದ ಪಟ್ಟಿಕ್ಕಾಡ್ ಜಾಮಿಅ ನೂರಿಯ್ಯಾದಲ್ಲಿ ಏಪ್ರಿಲ್ ಏಳರಂದು ನಡೆಯಲಿರುವ ಐತಿಹಾಸಿಕ ಸಮಸ್ತ ಮಹಾ ಸಮ್ಮೇಳನದ ಪ್ರಚಾರ ಸಂಗಮ ಉಳ್ಳಾಲದಲ್ಲಿ ಇತ್ತೀಚೆಗೆ ನಡೆಯಿತು. ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ಕೇಂದ್ರ ಮುಶಾವರ ಸದಸ್ಯರೂ , ಮಲಪ್ಪುರಂ ಜಿಲ್ಲಾ ಪ್ರಧಾನ ಕಾರ್ಯದರ್ಶಿಯೂ ಆದ ಶೈಖುನಾ ಕುಜ್ಞಾನಿ ಉಸ್ತಾದರ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಾಮಿಅ ನೂರಿಯ್ಯಾದ ಮುದರ್ರಿಸರಾದ ಶೈಖುನಾ ಕೋಟುಮಲ ಮುಹಿಯುದ್ದೀನ್ ಕುಟ್ಟಿ ಉಸ್ತಾದ್, ಉಸ್ತಾದ್ ಹಂಝ ಫೈಝಿ ಹೈತಮಿ , ಳಿಯಾವುದ್ದೀನ್ ಫೈಝಿ ಮೇಲ್ಮುರಿ , ಸುಲೈಮಾನ್ ಫೈಝಿ ಚುಂಗತ್ತರ, ಮುಹಮ್ಮದ್ ಶಿಹಾಬ್ ಫೈಝಿ ಕೂಮಣ್ಣ ಮುಂತಾದವರು ಉಪಸ್ಥಿತರಿದ್ದರು. ಜಾಮಿಅ ನೂರಿಯ್ಯಾದಲ್ಲಿ ವಿದ್ಯಾರ್ಜನೆ ನಡೆಸುತ್ತಿರುವ ಕರ್ನಾಟಕದ ವಿದ್ಯಾರ್ಥಿಗಳು ಕಾರ್ಯಕ್ರಮನ್ನು ಆಯೋಜಿಸಿದರು.

Read More