UN NETWORKS
ಕುಂಪಲ: ಕುಂಪಲದಲ್ಲಿ ಶ್ರೀ ಕೃಷ್ಣನ ಆರಾಧನೆಯ ಮೂಲಕ ಈ ಭಾಗದಲ್ಲಿ ಧಾರ್ಮಿಕ ಜಾಗೃತಿಯೊಂದಿಗೆ ಸಮಾಜದ ಸಂಘಟನೆಗೆ ಮಂದಿರವು ಕೆಲಸ ಮಾಡುತ್ತಿದೆ. ಒಂದು ಊರಿನ ಜನರು ಉತ್ಸವಗಳ ಮೂಲಕ ಒಂದಾಗುವುದರಿಂದ ಕೃಷ್ಣನ ಗೀತ ಸಂದೇಶ ಸಾಕಾರವಾಗಿದೆ ಎಂದು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಅಧ್ಯಕ್ಷ ಸತೀಶ್ ಕುಂಪಲ ಹೇಳಿದ್ದಾರೆ
ಅವರು ಕುಂಪಲ ಶ್ರೀ ಬಾಲಕೃಷ್ಣ ಮಂದಿರದ ಸಭಾಭವನದಲ್ಲಿ ಭಾನುವಾರ ಜರಗಿದ 21ನೇ ವರ್ಷದ ಕುಂಪಲ ಶ್ರೀ ಕೃಷ್ಣ ಜನ್ಮಾಷ್ಟಮಿ ಉತ್ಸವದ ಸಮಾಲೋಚನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದುರ್ಗಾಪರಮೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಭವಾನಿ ಶಂಕರ ಶಾಂತಿ ಕಾರ್ಯಕ್ರಮ ಉದ್ಘಾಟಿಸಿದರು. ಮಂದಿರದ ಗೌರವಾದ್ಯಕ್ಷ ಕೇಶವದಾಸ್ ಬಗಂಬಿಲ, ಉತ್ಸವ ಸಮಿತಿ ಅಧ್ಯಕ್ಷ ಶಿವಾನಂದ ಟೈಲರ್, ಗೌರವಾದ್ಯಕ್ಷ ಎಸ್.ಎಸ್.ನಾಯ್ಕ್, ಕಾರ್ಯದರ್ಶಿ ಹರೀಶ್ ಮೂರುಕಟ್ಟ, ಕೋಶಾಧಿಕಾರಿ ಆನಂದ.ಎನ್.ಕುಂಪಲ, ಸಲಹೆಗಾರ ಲಕ್ಷ್ಮಣ್ ಕಿರೋಡಿಯನ್, ಮಂದಿರದ ಕಾರ್ಯದರ್ಶಿ ರವೀಂದ್ರ ಕುಂಪಲ, ಅರ್ಚಕ ಉಗ್ಗಪ್ಪ ಟೈಲರ್, ಶ್ರೀನಿದಿ ಜುವೆಲ್ಲರ್ ಮಾಲಕ ಜಗದೀಶ್ ಆಚಾರ್ಯ, ಆಡಳಿತ ಮಂಡಳಿ ಸದಸ್ಯರಾದ ಮಾಧವ ಬಂಗೇರ, ಪ್ರವೀಣ್ ಕುಲಾಲ್, ಚಂದ್ರಹಾಸ್ ಮೂರುಕಟ್ಟ, ಪುರುಷೋತ್ತಮ ರಾವ್, ಸುಶೀಲ ದೇವಪ್ಪ, ಚಂದ್ರಶೇಖರ್ ಬಿ.ಜೆ, ಅಶೋಕ್ ಕುಂಪಲ, ಮಹಿಳಾ ಸಮಿತಿಯ ಜಯಲಕ್ಷ್ಮಿ ಬಿ.ಜೆ, ಲಕ್ಷ್ಮಿ ಸುರೇಶ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಉತ್ಸವ ಸಮಿತಿ ಅದ್ಯಕ್ಷರಾಗಿ ಪ್ರಕಾಶ್ ಕುಂಪಲ, ಗೌರವಾದ್ಯಕ್ಷರಾಗಿ ಸೋಮಶೇಖರ್ ಜಗತಾಪ್, ಪ್ರಧಾನ ಕಾರ್ಯದರ್ಶಿಯಾಗಿ ರಾಜೇಶ್ ಬಲ್ಯ, ಸಂಚಾಲಕರಾಗಿ ಹರೀಶ್ ಕುಂಪಲ, ಮಹಿಳಾ ಸಮಿತಿ ಅದ್ಯಕ್ಷರಾಗಿ ರೇಖಾ ವೆಂಕಟೇಶ್, ಪ್ರಧಾನ ಕಾರ್ಯದರ್ಶಿಯಾಗಿ ಕೃತಿ ಶೆಟ್ಟಿ, ಕೋಶಾಧಿಕಾರಿಯಾಗಿ ಕುಮುದಾ ಅಡಪ್ಪ ಆಯ್ಕೆಯಾದರು.
ವೆಂಕಟೇಶ್ ಕುಂಪಲ ಸ್ವಾಗತಿಸಿದರು. ಗೋಪಾಲಕೃಷ್ಣ ರಾವ್ ವಂದಿಸಿದರು. ಪ್ರವೀಣ್.ಎಸ್.ಕುಂಪಲ ನಿರೂಪಿಸಿದರು.


