UN NETWORKS
ಉಳ್ಳಾಲ : ಸಮ್ಮೇಳನ, ವಿಚಾರ ಸಂಕಿರಣಗಳು ದಾದಿಯರಲ್ಲಿರುವ ಕೌಶಲ್ಯ ವೃದ್ಧಿಗೆ ಪೂರಕ ಎಂದು ಯೆನೆಪೋಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಜಿ ಶ್ರೀಕುಮಾರ್ ಮೆನನ್ ಅಭಿಪ್ರಾಯಪಟ್ಟರು.
ಯೆನೆಪೋಯ ವಿಶ್ವವಿದ್ಯಾನಿಲಯ ಘಟಕ ಕಾಲೇಜಾದ ಯೆನೆಪೋಯ ನರ್ಸಿಂಗ್ ಕಾಲೇಜಿನ ಸಮುದಾಯ ಅರೋಗ್ಯ ವಿಭಾಗ ಇದರ ಆಶ್ರಯದಲ್ಲಿ ಸೋಂಕು ನಿಯಂತ್ರಣದಲ್ಲಿ ನರ್ಸಿಂಗ್‍ನ ಪಾತ್ರ ಎಂಬ ವಿಷಯದಲ್ಲಿ ನಡೆದ ಒಂದು ದಿನದ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಆಸ್ಪತ್ರೆಯಲ್ಲಿ ರೋಗಿಗಳ ಆರೈಕೆಯೊಂದಿಗೆ ಆಸ್ಪತ್ರೆಯ ಹೆಚ್ಚಿನ ಕಾರ್ಯದಲ್ಲಿ ದಾದಿಯರ ಪಾತ್ರ ಮಹತ್ವದ್ದಾಗಿದೆ. ದಾದಿಯರು ತಮ್ಮ ವೃತ್ತಿ ಸಂಬಂಧಿಸಿದ ಅನೇಕ ಹೊಸ ವಿಚಾರಗಳತ್ತ ಜ್ಞಾನವನ್ನು ಬೆಳೆಸುವಲ್ಲಿ ಪೂರಕ ಚಟುವಟಿಕೆಗಳಲ್ಲಿ ನಿರತರಾಗಬೇಕು. ಈ ನಿಟ್ಟಿನಲ್ಲಿ ವಿಚಾರ ಸಂಕಿರಣಗಳಿಂದ ತಮ್ಮಲ್ಲಿರುವ ಕೌಶಕ್ಯವನ್ನು ವೃದ್ಧಿಸಲು ಸಹಕಾರಿಯಾಗುತ್ತದೆ ಎಂದರು.
ಯೆನೆಪೋಯ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರು ಡಾ| ಲೀನಾ ಕೆ.ಸಿ.ದಿನದ ಮಹತ್ವವನ್ನು ವಿವರಿಸಿದರು. ಸಮ್ಮೇಳನದಲ್ಲಿ ಮಂಗಳೂರಿನ ವಿವಿಧ ಆಸ್ಪತ್ರೆಯ ಸಂಪನ್ಮೂಲ ವ್ಯಕ್ತಿಗಳು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದರು.ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ| ಶ್ರೀಪತಿ ರಾವ್, ಉಪಪ್ರಾಂಶುಪಾಲ ಡಾ| ಶ್ಯಾಮ್ ಭಟ್ ಉಪಸ್ಥಿತರಿದ್ದರು.
ಸಮುದಾಯ ಅರೋಗ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಆನಂದ ಅವರು ಸ್ವಾಗತಿಸಿದರು. ಶಿಶಿಲ್ ಮ್ಯಾಥ್ಯು ವಂದಿಸಿದರು. ಸಮ್ಮೇಳನದಲ್ಲಿ 270 ಮಂದಿ ಕರ್ನಾಟಕ ಮತ್ತು ಕೇರಳದ ಹಲವು ನರ್ಸಿಂಗ್ ಕಾಲೇಜು ಮತ್ತು ಆಸ್ಪತ್ರೆಗಳಿಂದ ಭಾಗವಹಿಸಿದರು.


