UN NETWORKS ಉಳ್ಳಾಲ: ಸಹನೆ, ಪ್ರೀತಿ, ತ್ಯಾಗ, ವಿಶ್ವಾಸ ದ ಜೊತೆಗೆ ಇನ್ನೊಬ್ಬರ ಕಷ್ಟವನ್ನು ಅರ್ಥೈಸಿಕೊಂಡು ಬಾಳಿಕೊಂಡು ಸಹೋದರತೆಯನ್ನು ಸಾರುವುದು ಹಬ್ಬದ ಸಂದೇಶವಾಗಿದೆ. ಪರಸ್ಪರ ತಮ್ಮ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಶಾಂತಿಯಿಂದ ಬಾಳುವ ಮೂಲಕ ಬಲಿಷ್ಠ ಭಾರತ ನಿರ್ಮಾಣದಲ್ಲಿ ಎಲ್ಲರೂ ಕೈಜೋಡಿಸಬೇಕಿದೆ ಎಂದು ವಸತಿ ಮತ್ತು ನಗರಾಭಿವೃದ್ಧಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಯು.ಟಿ.ಖಾದರ್ ಹೇಳಿದರು. ಅವರ ಈದ್ ಹಬ್ಬದ ಪ್ರಯುಕ್ತ ಉಳ್ಳಾಲ ಸೈಯ್ಯದ್ ಮದನಿ ದರ್ಗಾಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ಒಂದು ತಿಂಗಳ ಶ್ರದ್ಧಾಪೂರ್ವಕ ಉಪವಾಸದಲ್ಲಿ ಭಾಗಿಯಾಗಿ ಇಂದು ಪವಿತ್ರ ರಂಝಾನ್ ಹಬ್ಬವನ್ನು ಆಚರಿಸುತ್ತಿರುವ ರಾಜ್ಯದ ಜನತೆಗೆ ಶುಭಾಷಯಗಳು. ಹಬ್ಬದ ಸಂದೇಶವನ್ನು ಎಲ್ಲರಿಗೂ ಸಾರುವ ಮೂಲಕ ಶಾಂತಿಯ ಸಮಾಜ ನಿರ್ಮಾಣದ ಜವಾಬ್ದಾರಿ ಎಲ್ಲರಿಗೂ ಇದೆ. ಪಕ್ಷದ ಹೈಕಮಾಂಡಿಗೆ ಸಮರ್ಥರು ಅಂದಾಗ ಅಧಿಕಾರ ಕೊಟ್ಟಿದ್ದಾರೆ. ಸಮುದಾಯ ಒಬ್ಬರ ಕಿಸೆಯಲ್ಲಿ ಇರುವುದಿಲ್ಲ. ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಿರುವುದು ನನಗೆ ಕೊಟ್ಟಿರುವ ದೊಡ್ಡ ಅಗ್ನಿ ಪರೀಕ್ಷೆ. ಹೆಚ್ಚು…
Author: UllalaVani
UN NETWORKS ಉಳ್ಳಾಲ: ವಿದ್ಯೆಗೆ ಮಾತ್ರವಲ್ಲ, ಧಾರ್ಮಿಕ, ಸಾಮಾಜಿಕ ಎಲ್ಲ ಕ್ಷೇತ್ರಗಳಲ್ಲಿ ಅಶೋಕನಗರ ಫ್ರೆಂಡ್ಸ್ ಸರ್ಕಲ್ ನ ಯುವಕರು ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಮಾಜ ಸೇವೆಯಲ್ಲಿ ಮುಂದುವರಿಯುತ್ತಾ ಬಡಮಕ್ಕಳಿಗೆ ಸಂಘ ದಾರಿದೀಪವಾಗುತ್ತಾ ಬೆಳೆಯಲಿ ಎಂದು ಮಂಗಳೂರು ಮಹಾನಗರ ಪಾಲಿಕೆ ಕಾರ್ಪೊರೇಟರ್ ರಾಧಾಕೃಷ್ಣ ಹೇಳಿದರು. ಅವರು ಅಶೋಕನಗರ ಫ್ರೆಂಡ್ಸ್ ಸರ್ಕಲ್ ವತಿಯಿಂದ 25 ನೇ ವರ್ಷದ ಅಶೋಕನಗರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೀಡುವ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಸ್ಥೆ ಎಲ್ಲಾ ಕ್ಷೇತ್ರಗಳಲ್ಲೂ ತೊಡಗಿಸಿಕೊಂಡು ಸಮಾಜಪೂರಕ ಕೆಲಸದಲ್ಲಿ ಭಾಗಿಯಾಗುತ್ತಿರುವುದು ಶ್ಲಾಘನೀಯ. ಇಂತಹ ಕಾರ್ಯಗಳಿಗೆ ತಮ್ಮ ಬೆಂಬಲ ಸದಾ ಇದೆ ಎಂದರು. ಶಾಲಾ ಮುಖ್ಯೋಪಾಧ್ಯಾಯರಾದ ಕೆ.ಜಿ. ಪಾಟೀಲ್ ಮಾತನಾಡಿ ಹಿಂದಿನಿಂದಲೂ ಶಾಲೆಯ ಶೇ.95 ರಷ್ಟು ವಿದ್ಯಾರ್ಥಿಗಳಿಗೆ ಸಂಘದ ಯುವಕರು ಪುಸ್ತಕವನ್ನು ನೀಡುತ್ತಲೇ ಬಂದಿದ್ದಾರೆ. ಇದರಿಂದ ಬಡ ಮಕ್ಕಳು ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ನಾಗೇಶ್ ಬಜಿಲಕೇರಿಯವರ ಅಧ್ಯಕ್ಷತೆಯಲ್ಲಿ ಆರಂಭಗೊಂಡ ಸೇವೆ ಇನ್ನೂ ಮುಂದುವರಿದು ವಿದ್ಯಾ ದಾನದ ಒಂದು…
UN NETWORKS ದೇರಳಕಟ್ಟೆ: ರಕ್ತ ಅನ್ನುವುದು ಮಾರುಕಟ್ಟೆಯಲ್ಲಿ ಸಿಗುವಂತಹ ವಸ್ತುವಲ್ಲ, ಜನರೇ ದಾನವಾಗಿ ನೀಡುವುದರ ಮೂಲಕ ಹಲವು ಜೀವಗಳನ್ನು ಉಳಿಸಬಹುದು. ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ಕಾರ್ಯಕ್ರಮ ಸಹಕಾರಿಯಾಗಿದೆ ಎಂದು ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಡಾ| ಪಿ.ಯಸ್. ಪ್ರಕಾಶ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆ ಜಸ್ಟೀಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್ , ನಿಟ್ಟೆ (ಸ್ವಾಯುತ್ತೆ ಆಗಲಿರುವ ವಿ.ವಿ) ಇದರ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ಅಸೈಗೋಳಿ ಕೆ.ಎಸ್.ಆರ್.ಪಿಯ ಏಳನೇ ಬೆಟಾಲಿಯನ್ ಪಡೆ ಆಶ್ರಯದಲ್ಲಿ ಕ್ಷೇಮ ಆಸ್ಪತ್ರೆಯ ಬ್ಲಡ್ ಬ್ಯಾಂಕಿನಲ್ಲಿ ವಿಶ್ವ ರಕ್ತದಾನಿಗಳ ದಿನದ ಪ್ರಯುಕ್ತ ನಡೆದ ರಕ್ತದಾನ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಿ ಮಾತನಾಡಿದರು. ಹಿಂದೆ ಒಂದು ಬಾಟಲಿ ರಕ್ತ ಮಾತ್ರ ಒಬ್ಬನಿಗೆ ಸಿಗುತಿತ್ತು. ಆದರೆ ವೈಜ್ಞಾನಿಕತೆಯಿಂದ ಸದ್ಯ ಒಂದು ಬಾಟಲಿ ರಕ್ತವನ್ನು ನಾಲ್ಕು ಜನರಿಗೆ ಉಪಯೋಗಿಸಬಹುದಾಗಿದೆ. ಕ್ಷೇಮ ಆಸ್ಪತ್ರೆಯಲ್ಲಿ ಸೆಲ್ ಸಪರೇಟರ್, ಏರ್ ಫೆರಿಸಿಸ್ ಅನ್ನುವ ಸಾಧನಗಳನ್ನು ಅಳವಡಿಸಲಾಗಿದು. ಇದರಲ್ಲಿ ಡೆಂಗ್ಯು, ಮಲೇರಿಯಾ, ರಕ್ತದ…
UN NETWORKS ಉಳ್ಳಾಲ: ಬಿಲ್ಲವ ಸೇವಾ ಸಮಾಜ ಕೊಲ್ಯ ಸೋಮೇಶ್ವರ ಇದರ ಅಧ್ಯಕ್ಷರಾಗಿ ಆನಂದ ಎಸ್ ಕೊಂಡಾಣ ಆಯ್ಕೆಯಾಗಿದ್ದಾರೆ. ಬ್ರಹ್ಮಶ್ರೀ ನಾರಾಯಣ ಗುರು ಸಭಾ ಭವನದಲ್ಲಿ ಸಂಘದ ಅಧ್ಯಕ್ಷ ಈಶ್ವರ ಸುವರ್ಣ ಇವರ ಅಧ್ಯಕ್ಷತೆಯಲ್ಲಿ ನಡೆದ ಮಹಾಸಭೆಯಲ್ಲಿ 2018-19ರ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಂಘದ ಗೌರವಾಧ್ಯಕ್ಷರಾಗಿ ಡಾ| ಪಿ. ರಾಮಾನುಜಂ, ಉಪಾಧ್ಯಕ್ಷರಾಗಿ ಶಶಿಕಾಂತ್ ಪರ್ಯತ್ತೂರು, ಪ್ರಧಾನ ಕಾರ್ಯದರ್ಶಿಯಾಗಿ ಡಿ.ಎನ್. ರಾಘವ, ಜೊತೆ ಕಾರ್ಯದರ್ಶಿಯಾಗಿ ಆನಂದ ಮಲಯಾಳಕೋಡಿ, ಕೋಶಾಧಿಕಾರಿಯಾಗಿ ಜಯಂತ ಪಿ.ಎಸ್., ಕ್ರೀಡಾ ಕಾರ್ಯದರ್ಶಿಯಾಗಿ ಯತೀಶ್ ಕುಮಾರ್, ಮಾಧವ ಕುಂದರ್, ಸಂಘಟನಾ ಕಾರ್ಯದರ್ಶಿಗಳಾಗಿ ಪದ್ಮನಾಭ ಕೊಲ್ಯ, ಸುರೇಶ್ ಮಾಡೂರು, ಲೋಕನಾಥ, ಸುರೇಶ್ ಬಿ., ಹರಿಶ್ಚಂದ್ರ ಅಡ್ಕ, ಪೂಜಾ ಸಂಚಾಲಕರಾಗಿ ಜಯರಾಮ ಪಿಲಿಕೂರು, ಗೋಪಾಲ ಕೊಂಡಾಣ, ದೇವದಾಸ ಮಡ್ಯಾರು, ಸಾಂಸ್ಕೃತಿಕ ಸಂಚಾಲಕರಾಗಿ ಗೋಪಾಲಕೃಷ್ಣ ಸೋಮೇಶ್ವರ, ರಮಾನಾಥ ಕೋಟೆಕಾರ್, ಪುರುಷೋತ್ತಮ ಅಡ್ಕ, ಮುತ್ತಪ್ಪ ಪೂಜಾರಿ, ಕುಸುಮಾಕರ್ ಕುಂಪಲ, ಯಕ್ಷಗಾನ ಸಂಚಾಲಕರಾಗಿ ಬಾಳಪ್ಪ ಪೂಜಾರಿ, ಶೇಷಪ್ಪ ಸುವರ್ಣ, ಉಳಿತಾಯ ನಿಧಿ ಸಂಚಾಲಕರಾಗಿ ತುಕಾರಾಮ ಎನ್.,…
UN NETWORKS ಉಳ್ಳಾಲ: ಆ ಮನೆಯಲ್ಲಿ ಪೆರ್ನಾಲ್ ಹಬ್ಬ ಕಳೆಗುಂದಿದೆ. ಗಾಳಿ, ಮಳೆ, ಸಿಡಿಲಿಗೆ ದಂಪತಿ ಮಕ್ಕಳನ್ನು ರಕ್ಷಿಸಿ ಮುರುಕು ಮನೆಯಲ್ಲೇ ರಾತ್ರಿ ಹಗಲು ಬಾಳುವಂತಹ ದುಸ್ಥಿತಿ. ಪ್ರತಿ ಮನೆಯಲ್ಲಿ ಹಬ್ಬದ ತಯಾರಿಯ ಪೂರ್ವಭಾವಿಯಾಗಿ ಹೊಸ ಬಟ್ಟೆಬರೆಗಳನ್ನು ಖರೀದಿಸುವ ಧಾವಂತದಲ್ಲಿ ಇದ್ದರೆ, ಇಲ್ಲಿ ಮನೆಮಂದಿ ಗಾಳಿ-ಮಳೆ ನಡುವೆ ಬದುಕುವುದು ಹೇಗೆ? ನಾಳೆಯ ಊಟಕ್ಕೆ ಏನು ಮಾಡುವುದು ಅನ್ನುವ ಚಿಂತೆಯಲ್ಲಿ ಮುಳುಗಿದ್ದಾರೆ. ಬೆಳ್ಮ ಕನಕೂರು ಪದವು ನಿವಾಸಿ ಶೇಖ್ ಸಂಶುದ್ದೀನ್ ಕುಟುಂಬ ಇದೀಗ ಆರ್ಥಿಕವಾಗಿ ಕಂಗೆಟ್ಟು ಮುರುಕಲು ಮನೆಯಲ್ಲಿ ಇಬ್ಬರು ಎಳೆಯ ಹರೆಯದ ಮಕ್ಕಳು ಮತ್ತು ಪತ್ನಿ ಜತೆಗೆ ವಾಸಿಸುವ ಅನಿವಾರ್ಯತೆ ಎದುರಾಗಿದೆ. ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಸಂಶುದ್ಧೀನ್ ಬಂದ ಆದಾಯದಲ್ಲೇ ಕನಕೂರುಪದವು ತಾನು ನೆಲೆಸಿದ್ದ ಸರಕಾರಿ ಜಾಗದಲ್ಲೇ ಮನೆಯನ್ನು ಕಟ್ಟಲು ಆರಂಭಿಸಿದ್ದರು. ಆದರೆ ಮನೆಯ ಗೋಡೆಯ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲೇ ಕೆಲಸಕ್ಕೆ ಹೋದಲ್ಲಿ ಸಂಶುದ್ದೀನ್ ಕಟ್ಟಡದ ಮೇಲಿನಿಂದ ಕೆಳಗೆ ಬಿದ್ದು ಸೊಂಟದ ಭಾಗಕ್ಕೆ ತೀವ್ರವಾಗಿ ಗಾಯಗೊಂಡಿದ್ದರು. ಆನಂತರ ಉಂಟಾದ…
UN NETWORKS ಉಳ್ಳಾಲ : ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಗುರುವಾರ ಸೋಮೇಶ್ವರ ಉಚ್ಚಿಲ ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು. ಕಡಲ್ಕೊರೆತ ಪ್ರದೇಶಕ್ಕೆ ಭೇಟಿ ನಿಗದಿಯಾಗಿದ್ದರಿಂದ ನೇರವಾಗಿ ಸೋಮೇಶ್ವರ ಉಚ್ಚಿಲಕ್ಕೆ ಆಗಮಿಸಿದರು. ಕಡಲ್ಕೊರೆತ ತಡೆಗೆ ತಾತ್ಕಾಲಿಕ ಪರಿಹಾರವಾಗಿ ತಟದಲ್ಲಿ ಅಳವಡಿಸಲಾಗಿದ್ದ ಕಲ್ಲಿನ ತಡೆಗೋಡೆ ಬಳಿ ನಿಂತು ಜಿಲ್ಲಾಧಿಕಾರಿಯಿಂದ ಮಾಹಿತಿ ಪಡೆದರು. ಕಲ್ಲಿನ ಮೇಲೇರಲು ಅವರಿಗೆ ಆಗದ ಕಾರಣ ಸ್ಥಳೀಯರು ಏಣಿಯನ್ನು ತಂದು ಕಲ್ಲಿಗೆ ತಾಗಿಸಿ ಇಟ್ಟು ಮೇಲೇರಿ ಸಮುದ್ರ ವೀಕ್ಷಿಸುವಂತೆ ತಿಳಿಸಿದರೂ ಸಚಿವರು ನಿರಾಕರಿಸಿದರು. ಕೆಲವೇ ನಿಮಿಷ ಅಲ್ಲಿದ್ದ ಸಚಿವರು ನಂತ ನೇರವಾಗಿ ಮಂಗಳೂರಿಗೆ ತೆರಳಿದರು. ಈ ಸಂದರ್ಭ ಸಚಿವ ಯು.ಟಿ.ಖಾದರ್, ಜಿಲ್ಲಾಧಿಕಾರಿ ಸಸಿಕಾಂತ ಸೆಂಥಿಲ್, ಅಧಿಕಾರಿಗಳು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಶ್ರೀನಾರಾಯಣ ಗುರು ಮಹಿಳಾ ಸಂಘ ಇದರ ನೂತನ ಅಧ್ಯಕ್ಷರಾಗಿ ಮೀನಾಕ್ಷಿ ಐತಪ್ಪ ಆಯ್ಕೆಯಾಗಿದ್ದಾರೆ. ಕೊಲ್ಯ ನಾರಾಯಣ ಗುರು ಸಭಾಂಗಣದಲ್ಲಿ ನಡೆದ ಸಂಘದ ವಾರ್ಷಿಕ ಮಹಾಸಭೆಯಲ್ಲಿ 2018-19ನೇ ಸಾಲಿನ ನೂತನ ಪದಾಧಿಕಾರಿಗಳನ್ನು ಆಯ್ಕೆಮಾಡಲಾಯಿತು. ಗೌರವಾಧ್ಯಕ್ಷರಾಗಿ ವಿಶಲಾಕ್ಷಿ ಜೆ., ಉಪಾಧ್ಯಕ್ಷರಾಗಿ ಚಂದ್ರಾವತಿ, ಕಾರ್ಯದರ್ಶಿಯಾಗಿ ರೇವತಿ ವಿಶ್ವನಾಥ, ಉಪ ಕಾರ್ಯದರ್ಶಿಯಾಗಿ ಶಶಿಕಲ ಅಡ್ಕ, ಕೋಶಾಧಿಕಾರಿಯಾಗಿ ಕುಸುಮ ಭರತ್, ಸಂಗಟನಾ ಕಾರ್ಯದರ್ಶಿಯಾಗಿ ಶಶಿಕಲ ಕೊಲ್ಯ, ಗೀತಾ ಪುರುಷೋತ್ತಮ, ಕ್ರೀಡಾ ಕಾರ್ಯದರ್ಶಿಯಾಗಿ ಲವಿತ ಯತೀಶ್, ಚಂಚಲಾಕ್ಷಿ, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪುಷ್ಪ, ಹೇಮಾವತಿ ಮಾಧವ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಹೇಮಲತ ಎಸ್. ಕರ್ಕೇರಾ, ಉಷಾಲತ, ದೇವಕಿ ರಾಘವ, ಪುಷ್ಪ ಶೇಖರ್, ನವೀನ ಕೆ., ಆಶಾ ಆರ್. ಕೋಟೆಕಾರ್, ವಿಜಯ ರಾಮ್‍ದಾಸ್, ಗುಲಾಬಿ, ಸೌಮ್ಯ ಕುಸುಮಾಕರ್, ವೇದಾವತಿ ಬೀರಿ, ಮಂಗಳ ರಾಜೇಶ್, ಸುಜಯ ಹೇಮಚಂದ್ರ, ಕಸ್ತೂರಿ, ನಾಗವೇಣಿ ಶ್ರೀಧರ್, ಉಷಾ ಭಾಸ್ಕರ್, ಪ್ರಿಯಾಂಕ ವಿನೋದ್, ಮೋಹಿನಿ ಎಸ್. ಸುವರ್ಣ, ಮಾಲತಿ ಎಚ್., ಜಯಂತಿ, ಕುಮಾರಿ ಪ್ರಕಾಶ್, ಬೇಬಿ,…
UN NETWORKS ಉಳ್ಳಾಲ: ನಕಲಿ ಹೆಸರಿನಲ್ಲಿ ವಂಚಿಸಿ ಯುವತಿಯೋರ್ವಳನ್ನು ವರಿಸಿದ್ದ ಯುವಕನಿಗೆ ಯುವತಿ ಮನೆಮಂದಿ ಧರ್ಮದೇಟು ನೀಡಿ ಉಳ್ಳಾಲ ಪೊಲೀಸರಿಗೆ ಒಪ್ಪಿಸಿರುವ ಘಟನೆ ಬುಧವಾರ ಮಧ್ಯಾಹ್ನ ವೇಳೆ ನಡೆದಿದೆ. ಸುಳ್ಯ ಮೂಲದ ಸೈಯ್ಯದ್ ಹಾರೂನ್ ಯುವತಿಗೆ ವಂಚಿಸಿದ ಭೂಪ. ಕುಂಪಲ ಚಿತ್ರಾಂಜಲಿನಗರದ ನಿವಾಸಿ ಹೇಮಲತಾ (35) ವಂಚನೆಗೆ ಒಳಗಾದವಳು. ಮೂರು ವರ್ಷಗಳಿಂದ ಮಂಗಳೂರಿನಲ್ಲಿ ಕೆಲಸದಲ್ಲಿದ್ದ ಹೇಮಲತಾಳಿಗೆ ಅಲ್ಲೇ ಕೆಲಸ ಮಾಡಿಕೊಂಡಿದ್ದ ಸೈಯ್ಯದ್ ಹಾರೂನ್ ಪರಿಚಯವಾಗಿತ್ತು. ಪರಿಚಯದ ಸಮಯ ತನ್ನನ್ನು ಅರುಣ್ ಎಂದು ಹೆಸರು ಬದಲಾಯಿಸಿ ಹೇಳಿಕೊಂಡಿದ್ದವ, ಹೇಮಲತಾ ಜತೆ ನಿರಂತರವಾಗಿ ಸಂಪರ್ಕ ಇಟ್ಟುಕೊಂಡಿದ್ದನು. ಮೂರು ವರ್ಷಗಳಿಂದ ಪರಿಚಯದಲ್ಲಿದ್ದ ಇವರಿಗೆ ವರ್ಷದ ಹಿಂದೆ ಮಂಗಳೂರಿನ ದೇವಸ್ಥಾನದಲ್ಲಿ ಸರಳವಾಗಿ ವಿವಾಹವಾಗಿದ್ದರು. ಕೆಲ ತಿಂಗಳ ಬಳಿಕ ಹಾರೂನ್ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಪತ್ನಿಗೆ ವಂಚಿಸಿರುವ ಕುರಿತು ಪ್ರಕರಣ ದಾಖಲಾಗಿತ್ತು. ತನ್ನದೇ ಧರ್ಮದ ಯುವತಿಯನ್ನು ವಿವಾಹವಾಗಿದ್ದವ ಲಕ್ಷಾಂತರ ಬೆಲೆಬಾಳುವ ಚಿನ್ನವನ್ನು ಪಡೆದು ವಂಚಿಸಿದ್ದ ಕುರಿತು ದೂರು ದಾಖಲಾಗಿತ್ತು. ಈ ವೇಳೆ ಹೇಮಲತಾ ಅವರಿಗೆ ತನ್ನ ಪತಿ ಅರುಣ್…
UN NETWORKS ಉಳ್ಳಾಲ: ಮುನ್ನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಂಚಾಯತ್ ಕಟ್ಟಡದ ಶೌಚಾಲಯದಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಬೆಳಿಗ್ಗೆ ನಡೆದಿದೆ. ಸುರತ್ಕಲ್ ಹೊನ್ನಕಟ್ಟೆ ನಿವಾಸಿ ಕೃಷ್ಣಸ್ವಾಮಿ ಬಿ.ಯಸ್ (42) ಆತ್ಮಹತ್ಯೆ ಮಾಡಿಕೊಂಡವರು. ಬುಧವಾರ ಬೆಳಿಗ್ಗೆ 9.30ರ ವೇಳೆಗೆ ಕರ್ತವ್ಯಕ್ಕೆ ಹಾಜರಾಗಿದ್ದ ಅವರು ಹಾಜರಾತಿ ದಾಖಲಿಸಿ, ತಮ್ಮ ಕಚೇರಿಯೊಳಗೆ ಡೆತ್ ನೋಟ್ ಬರೆದಿಟ್ಟು, ಶೌಚಾಲಯದೊಳಕ್ಕೆ ತೆರಳಿ ನೈಲಾನ್ ಹಗ್ಗವನ್ನು ಕಿಟಕಿಗೆ ಕಟ್ಟಿ ಆತ್ಮಹತ್ಯೆ ನಡೆಸಿದ್ದಾರೆ. ಇದೇ ವೇಳೆ ಪಂಚಾಯಿತಿನೊಳಗೆ ಇಬ್ಬರು ಸಿಬ್ಬಂದಿಗಳಿದ್ದು, ಅರ್ಧ ಗಂಟೆಯಾದರೂ ಶೌಚಾಲಯದಿಂದ ವಾಪಸ್ಸಾಗದ ಹಿನ್ನೆಲೆಯಲ್ಲಿ ಕಿಟಕಿಯ ಮೂಲಕ ನೋಡಿದಾಗ ಕಿಟಕಿಯಲ್ಲಿ ಹಗ್ಗ ಕಾಣಿಸಿಕೊಂಡಿತ್ತು. ಇಬ್ಬರು ಸಿಬ್ಬಂದಿ ಕೂಗಿ ಕರೆದರೂ ಬಾಗಿಲು ತೆರೆಯದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಖಚಿತವಾಗಿದೆ. ಬಳಿಕ ಸ್ಥಳೀಯರನ್ನು ಕರೆದು ಬಾಗಿಲು ಒಡೆದು ನೋಡಿದಾಗ ನೇಣುಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. 2017ರ ಆಗಸ್ಟ್ ತಿಂಗಳಿನಲ್ಲಿ ಮುನ್ನೂರು ಗ್ರಾಮ ಪಂಚಾಯಿತಿಗೆ ಪಿಡಿಓ ಆಗಿ ನೇಮಕಗೊಂಡಿದ್ದರು. ಆದರೆ ವಿಪರೀತ ಕುಡಿತವನ್ನು ಅಭ್ಯಾಸ ಮಾಡಿಕೊಂಡಿದ್ದ ಇವರು ಕರ್ತವ್ಯಕ್ಕೆ ಹಾಜರಾಗಲು…
UN NETWORKS ಉಳ್ಳಾಲ: ಸಂಚರಿಸುತ್ತಿದ್ದ ಬಸ್ಸೊಂದು ಹಠಾತ್ ಹಾಕಿದ್ದರಿಂದ ಹಿಂಬದಿಯಲ್ಲಿ ಬರುತ್ತಿದ್ದ ದ್ವಿಚಕ್ರ ವಾಹನ ಬಸ್‌ಗೆ ಢಿಕ್ಕಿ ಹೊಡೆದ ಘಟನೆ ಉಳ್ಳಾಲ ಸೇತುವೆಯಲ್ಲಿ ಇಂದು ಬೆಳಗ್ಗೆ ನಡೆದಿದೆ. ಇದರಿಂದ ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿವೆ. ವೇಗವಾಗಿ ಸಂಚರಿಸುತ್ತಿದ್ದ ಬಸ್ ಸೇತುವೆಯಲ್ಲಿ ಹಠಾತ್ ಬ್ರೇಕ್ ಹಾಕಿದ್ದರಿಂದ ಈ ಅಪಘಾತ ಸಂಭವಿಸಿದೆ ಎಂದು ಹೇಳಲಾಗಿದೆ. ಈ ವೇಳೆ ಬಸ್ಸಿನ ಹಿಂದೆಯೇ ಇದ್ದ ದ್ವಿಚಕ್ರ ವಾಹನದ ಚಾಲಕನಿಗೆ ನಿಯಂತ್ರಣ ತಪ್ಪಿದ್ದರಿಂದ ದ್ವಿಚಕ್ರ ವಾಹನವು ಬಸ್ಸಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ದ್ವಿಚಕ್ರ ವಾಹನ ಬಸ್ಸಿನಡಿಗೆ ನುಗ್ಗಿದೆ. ಇದರಿಂದ ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿದ್ದು, ಆವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಾಳು ಬಗ್ಗೆ ಹೆಚ್ಚಿನ ವಿವರಗಳು ತಿಳಿದುಬಂದಿಲ್ಲ.

