UN NETWORKS ಮುಡಿಪು: ಸಖಾಫಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮ ಮುಡಿಪುನ ಎಜ್ಯು ಪಾರ್ಕ್ ನಲ್ಲಿ ಶುಕ್ರವಾರ ರಾತ್ರಿ ನಡೆಯಿತು. ಮಾಸಿಕವಾಗಿ ನಡೆಯುತ್ತಿರುವ ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ಆಸ್ಸಖಾಫ್ ತಂಙಳ್ ಅದೂರು ವಹಿಸಿದ್ದರು. ಸಂಸ್ಥೆಯ ಮ್ಯಾನೇಜರ್ ಜಲಾಲುದ್ದೀನ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು. ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣಗೈದರು.ಅಯೂಬ್ ಹಾಜಿ ಮುದುಂಗಾರು, ಬಶೀರ್, ಕುಂಞ ಹಾಜಿ ಬಾಳೆಪುಣಿ, ಸಂಸ್ಥೆಯ ಸಮಿತಿ ಸದಸ್ಯರಾದ ಪುತ್ತುಬಾವ ಹಾಜಿ ಸಂಬರ್ ತೋಟ, ಮುಹಮ್ಮದ್ ಹಾಜಿ ಪುರುಷಕೋಡಿ, ಅಬ್ಬು ಪುರುಷಕೋಡಿ, ಬಶೀರ್ ಹಾಜಿ ಸಿಟಿ, ಬಶೀರ್ ಕುರ್ನಾಡು, ಜಮಾಲುದ್ದೀನ್ ಸಖಾಫಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಎ.ಇ ಅಬ್ದುರ್ರಹ್ಮಾನ್ ರಝ್ವಿ ಸಾಲೇತೂರು ಸ್ವಾಗತಿಸಿದರು. ಬಾಳೆಪುಣಿ ಗ್ರಾ.ಪಂ ಉಪಾಧ್ಯಕ್ಷ ಬಶೀರ್ ಸಾಜ್‍ಗಾರ್ ವಂದಿಸಿದರು.
Author: UllalaVani
UN NETWORKS ಉಳ್ಳಾಲ: ವಿವಿಧ ಪ್ರಕರಣಗಳಲ್ಲಿ ಪ್ರಕರಣಗಳಲ್ಲಿ ಭಾಗಿಯಾಗಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯೋರ್ವನನ್ನು ಉಳ್ಳಾಲ ಠಾಣಾ ಪೊಲೀಸರು ಬಂಧಿಸಿದ್ದಾರೆ. ಉಳ್ಳಾಲ ಧರ್ಮನಗರದ ಬೊಟ್ಟು ನಿವಾಸಿ ಮುಖ್ತಾರ್(24) ಬಂಧಿತ ಆರೋಪಿ. ಈತನ ವಿರುದ್ಧ ಉಳ್ಳಾಲ ಮತ್ತು ಬರ್ಕೆ ಠಾಣೆಯಲ್ಲಿ ಕೊಲೆ ಯತ್ನ, ಹಲ್ಲೆ ಸೇರಿದಂತೆ ವಿವಿಧ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನ್ಯಾಯಾಲಯದಿಂದ ನಾಲ್ಕು ಬಾರಿ ವಾರಂಟ್ ಜಾರಿಯಾಗಿತ್ತು. ಆದರೆ ಆರೋಪಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದನೆನ್ನಲಾಗಿದೆ. ಆರೋಪಿಯನ್ನು ಶನಿವಾರ ಉಳ್ಳಾಲ ಧರ್ಮನಗರ ಪರಿಸರದಿಂದ ಬಂಧಿಸಿರುವ ಉಳ್ಳಾಲ ಠಾಣಾ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
UN NETWORKS ಕುಂದಾಪುರ: ತಾಲೂಕಿನ ಅಂಪಾರು ಸಮೀಪದ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಖಾಸಗಿ ಬಸ್ ಹಾಗೂ ಕಾರು ನಡುವಿನ ಮುಖಾಮುಖಿ ಡಿಕ್ಕಿಯಲ್ಲಿ ಕಾರಿನಲ್ಲಿದ್ದ ಐವರಲ್ಲಿ ಇಬ್ಬರು ಸಾವನ್ನಪ್ಪಿದ್ದು ಮೂವರು ಗಾಯಗೊಂಡ ಘಟನೆ ರವಿವಾರ ಸಂಜೆ ನಡೆದಿದೆ. ಕುಂದಾಪುರ ತಾಲೂಕಿನ ಹೊಸ್ಮಠ ನಿವಾಸಿ ಕಿರಣ ಶೆಟ್ಟಿ (23) ಹಾಗೂ ಮಲ್ಯಾಡಿ ಮೂಲದ ದೀಕ್ಷಿತ್ ಶೆಟ್ಟಿ (23) ಮೃತ ದುರ್ದೈವಿಗಳು. ಅಪಘಾತದಲ್ಲಿ ಅರುಣ ಎಂಬಾತನಿಗೆ ಗಂಭೀರ ಗಾಯವಾಗಿದ್ದು ಮಣಿಪಾಲದಲ್ಲಿ ಹಾಗೂ ಮನೀಷ್ ಹಾಗೂ ಜೀವನ್ ಎನ್ನುವವರು ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ರಜಾ ದಿನವಾದ್ದರಿಂದ ಸ್ನೇಹಿತರೆಲ್ಲರೂ ಎರಡು ಕಾರಿನಲ್ಲಿ ಜೋಗ ಜಲಪಾತ ನೋಡಲು ತೆರಳುತ್ತಿದ್ದು ಸಂಜೆ ವೇಳೆ ಊರಿಗೆ ವಾಪಾಸಾಗುತ್ತಿದ್ದರು. ಕುಂದಾಪುರದ ಸಿದ್ದಾಪುರ ಮಾರ್ಗವಾಗಿ ಕುಂದಾಪುರದತ್ತ ಸಾಗುವಾಗ ಒಂದಷಟ್ಟು ಮಂದಿ ಚಲಿಸುತ್ತಿದ್ದ ಕಾರು ಮುಂಭಾಗದಲ್ಲಿ ತೆರಳುತ್ತಿದ್ದು ಈ ಕಾರು ಹಿಂದಿನಿಂದ ಸಂಚರಿಸುತ್ತಿತ್ತು. ಇದೇ ವೇಳೆ ಕುಂದಾಪುರದಿಂದ ಸಿದ್ದಾಪುರದತ್ತ ಸಾಗಿಬಂದ ಖಾಸಗಿ ಬಸ್ ಸ್ಯಾಂಟ್ರೋ ಕಾರಿಗೆ ಮುಖಾಮುಖಿಯಾಗಿ ಡಿಕ್ಕಿಯಾಗಿದ್ದು ಡಿಕ್ಕಿಯ ರಭಸಕ್ಕೆ ಕಾರಿನಲ್ಲಿದ್ದ…
UN NETWORKS ಕೊಣಾಜೆ : ಬ್ಯಾರಿಗಳು ಅತ್ಯಧಿಕ ಸಂಖ್ಯೆಯಲ್ಲಿರುವ ಮದ್ರಸ ಮತ್ತು ಮಸೀದಿಗಳ ಕಾರ್ಯಕ್ರಮಗಳಲ್ಲಿ ಬ್ಯಾರಿ ಭಾಷೆಯನ್ನು ಬಳಸಲು ಖತೀಬರು, ಮುಅಲ್ಲಿಮರು ಹಾಗೂ ಆಡಳಿತ ಕಮಿಟಿ ಮತ್ತು ಜಮಾಅತರು ಮುಂದಾಗಬೇಕು ಎಂದು ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕರಂಬಾರ್ ಮುಹಮ್ಮದ್ ಕರೆ ನೀಡಿದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯು ದೇರಳಕಟ್ಟೆಯ ಬ್ಯಾರಿ ಲೇಖಕರು ಮತ್ತು ಕಲಾವಿದರ ಬಳಗವಾದ `ಮೇಲ್ತೆನೆ’ ಸಂಘಟನೆಯ ಸಹಕಾರದೊಂದಿಗೆ ರವಿವಾರ ಕೊಣಾಜೆ ಸಮೀಪದ ಅಸೈಗೋಳಿಯ ಲಯನ್ಸ್ ಸೇವಾ ಸದನದಲ್ಲಿ ಹಮ್ಮಿಕೊಂಡ `ಪೆರ್ನಾಲ್ ಸಂದೋಲ 2018′ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬ್ಯಾರಿ ಅಕಾಡಮಿ ನೀಡಬೇಕು ಎಂಬ ಸರ್ವ ಬ್ಯಾರಿಗಳ ಕೂಗಿಗೆ 11 ವರ್ಷದ ಹಿಂದೆಯೇ ರಾಜ್ಯ ಸರಕಾರ ಅಕಾಡಮಿಯನ್ನು ನೀಡುವ ಮೂಲಕ ಬ್ಯಾರಿ ಭಾಷೆಗೆ ಮಾನ್ಯತೆ ನೀಡಿದೆ. ಸರಕಾರ ಭಾಷೆಗೆ ಸಲ್ಲಿಸಿದ ಗೌರವವನ್ನು ಉಳಿಸಲು ಎಲ್ಲ ಬ್ಯಾರಿಗಳು ಪ್ರಯತ್ನಿಸಬೇಕು. ಬ್ಯಾರಿ ಭಾಷೆಯ ಬೆಳವಣಿಗೆಯಲ್ಲಿ ಕವಿ, ಸಾಹಿತಿಗಳು, ಲೇಖಕರಲ್ಲದೆ ಬ್ಯಾರಿ ಸಮುದಾಯದ ಧಾರ್ಮಿಕ ವಿದ್ವಾಂಸರು, ಮುಖಂಡರ ಜವಾಬ್ದಾರಿ ಕೂಡಾ…
UN NETWORKS ಉಳ್ಳಾಲ: ಬಿ.ಎಂ.ಪ್ರೌಢ ಶಾಲೆ,ಇದರ ಇಕೋ ಕ್ಲಬ್ ‘ಹನಿ’, ಎ.ಬಿ.ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜ್ – ಸಾರ್ವಜನಿಕ ದಂತ ಆರೋಗ್ಯ ವಿಭಾಗ, ಮತ್ತು ಕರ್ನಾಟಕ ಸರಕಾರ ಅರಣ್ಯ ಇಲಾಖೆ, ಮಂಗಳೂರು ವಲಯ, ಇವುಗಳ ಸಹಯೋಜಕತ್ವದಲ್ಲಿ ವನಮಹೋತ್ಸವ “ಪ್ರಕೃತಿ” ಕಾರ್ಯಕ್ರಮ ಬಿ.ಎಂ. ಪ್ರೌಢಶಾಲಾ ಸಭಾಂಗಣದಲ್ಲಿ ನೆರೆವೇರಿತು. ಅರಣ್ಯ ಇಲಾಖೆ, ಮಂಗಳೂರು ವಲಯ ಉಪವಿಭಾಗಾಧಿಕಾರಿ, ಎಸ್. ರವಿಕುಮಾರ್ ಗಿಡ ನೆಡುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಗಿಡ ಬೆಳೆಸಿ, ಪ್ರಕೃತಿಯನ್ನು ಉಳಿಸುವಂತೆ ಮಕ್ಕಳಿಗೆ ಮಾಹಿತಿ ನೀಡಿದರು.ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಪ್ರಾಚಾರ್ಯ, ಡಾ. ಯು. ಕೃಷ್ಣ ನಾಯಕ್ ಮುಖ್ಯ ಅತಿಥಿಯಾಗಿ, ಮಕ್ಕಳಿಗೆ ಗಿಡಗಳನ್ನು ವಿತರಿಸಿ, ಅದನ್ನು ಪೋಷಿಸಿ ರಕ್ಷಿಸಬೇಕೆಂದು ಸಲಹೆ ನೀಡಿದರು. ಶಾಲಾ ಮುಖ್ಯ ಶಿಕ್ಷಕಿ ಜಯವಂತಿ ಸೋನ್ಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜಿನ ಸಾರ್ವಜನಿಕ ದಂತ ಆರೋಗ್ಯ ವಿಭಾಗದ ಮುಖ್ಯಸ್ಥೆ, ಆಡ್ರಿ ಎಂ. ಖಕ್ಯೂಟ್, ಡಾ. ಸಹನಾ ಮಾಬೆನ್, ಬಿಎಂ. ಪ್ರೌಢಶಾಲೆಯ ಇಕೋ…
UN NETWORKS ಉಳ್ಳಾಲ: ಪಾದಚಾರಿ ವ್ಯಕ್ತಿಯೋರ್ವರಿಗೆ ಬಸ್ಸು ಢಿಕ್ಕಿ ಹೊಡೆದು ಸಾವನ್ನಪಿರುವ ಘಟನೆ ತೊಕ್ಕೊಟ್ಟು ಬಸ್ಸು ನಿಲ್ದಾಣದಲ್ಲಿ ಶನಿವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಅಪರಿಚಿತ ವ್ಯಕ್ತಿಯಾಗಿರುವ ಮೃತರು ಸುಮಾರು 60 ವರ್ಷ ಪ್ರಾಯದವರು ಎಂದು ಅಂದಾಜಿಸಲಾಗಿದೆ. ಕೇರಳ ಭಾಗದಿಂದ ಬಂದವರು ಹೆಚ್ಚಾಗಿ ತೊಕ್ಕೊಟ್ಟು ಬಸ್ಸು ನಿಲ್ದಾಣಗಳಲ್ಲೇ ಉಳಿಯುತ್ತಿದ್ದರು. ಮಂಗಳೂರಿನಿಂದ ಉಳ್ಳಾಲ ಕಡೆಗೆ ಬರುತ್ತಿದ್ದ ಖಾಸಗಿ ಬಸ್ಸು ನಿಲ್ದಾಣದೊಳಕ್ಕೆ ಪ್ರವೇಶಿಸುತ್ತಿದ್ದಂತೆ, ರಸ್ತೆ ಅಡ್ಡದಾಟುವ ಸಂದರ್ಭ ಅಪಘಾತ ಸಂಭವಿಸಿದೆ. ಸಂಬಂಧಿಕರು ಇದ್ದಲ್ಲಿ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರನ್ನು ಸಂಪರ್ಕಿಸಲು ಕೋರಲಾಗಿದೆ.
UN NETWORKS ಉಳ್ಳಾಲ: ಉಚ್ಚಿಲದ ಬೆಟ್ಟಂಪಾಡಿ, ಪೆರಿಬೈಲು, ಸೀರೋಡ್, ಮುಕ್ಕಚ್ಚೇರಿ ಸೋಮೇಶ್ವರ ಭಾಗದಲ್ಲಿ ಸಮುದ್ರದ ಅಲೆಗಳ ಅಬ್ಬರ ಮುಂದುವರಿದಿದ್ದು, ಉಚ್ಚಿಲ ಉಳ್ಳಾಲದ ರಸ್ತೆಗಳಿಗೆ ಅಲೆಗಳು ಹೊಡೆಯಲಾರಂಭಿಸಿದ್ದು, ಸಮುದ್ರ ತೀರದ ವಿದ್ಯುತ್ ಕಂಬಗಳು, ಗಾಳಿ ಮರಗಳನ್ನು ತೆರವುಗೊಳಿಸಲಾಗಿದೆ. ಜಿಲ್ಲಾಡಳಿತದ ಸೂಚನೆಯಲ್ಲಿ ಕರಾವಳಿಯಲ್ಲಿ ರೆಡ್ ಅಲರ್ಟ್ ಇದೆ. ಬೆಳಿಗ್ಗೆ 11 ರಿಂದ ಮಧ್ಯಾಹ್ನ 3 ಗಂಟೆಯವರೆಗೆ 1.7 ಮೀ ಎತ್ತರದ ಅಲೆಗಳು ಸಮುದ್ರ ತೀರಕ್ಕೆ ಅಪ್ಪಳಿಸುವ ಸಾಧ್ಯತೆಗಳಿವೆ. ಅದನ್ನು ಗಮನದಲ್ಲಿಟ್ಟುಕೊಂಡು ಎರಡು ಹಿಟಾಚಿಗಳನ್ನು ಸ್ಥಳದಲ್ಲೇ ಕಾರ್ಯಾಚರಣೆಗೆ ಇರಿಸಲಾಗಿದೆ. ಮನೆಗಳಿರುವ ಪ್ರದೇಶಗಳಲ್ಲಿ ಕಲ್ಲುಗಳನ್ನು ಹಾಕಲಾಗಿದೆ. ಒಂದು ಹಂತದ ಕಾಮಗಾರಿ ಮುಗಿದ ತಕ್ಷಣವೇ ರಸ್ತೆಯ ಭಾಗದಲ್ಲಿಯೂ ಕಲ್ಲುಗಳನ್ನು ಹಾಕುವ ಕೆಲಸ ಮಾಡಲಾಗುವುದು. ಇಂಜಿನಿಯರುಗಳ ಸಲಹೆಯಂತೆ ಕಲ್ಲುಗಳನ್ನು ಹಾಕುವ ಕಾರ್ಯ ಮುಂದುವರಿದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿರುವ ಕಂದಾಯ ಇಲಾಖೆಯ ಪ್ರೊಬೆಷನರಿ ಸಹಾಯಕ ಆಯುಕ್ತ ಸಂತೋಷ್ ತಿಳಿಸಿದ್ದಾರೆ. ಮರ ತೆರವಿಗೆ ಗೊಂದಲ : ಗಾಳಿ ಮರಗಳಿಂದಾಗಿ ವಿದ್ಯುತ್ ತಂತಿಗಳು ತುಂಡಾಗುತ್ತಿವೆ. ಇತ್ತೀಚೆಗೆ ಓಖಿ ಚಂಡಾಮಾರುತದ ಸಂದರ್ಭ ಉಚ್ಚಿಲ ಪೆರಿಬೈಲಿನ…
UN NETWORKS ಉಳ್ಳಾಲ : ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಹಳೆಕೋಟೆಯಲ್ಲಿ ನಡೆಸಲ್ಪಡುತ್ತಿರುವ ಸಯ್ಯದ್ ಮದನಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಮತ್ತು ಸಯ್ಯದ್ ಮದನಿ ಪ್ರೌಡ ಶಾಲೆ ಯಲ್ಲಿ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷರಾದ ಜನಾಬ್ ಮುಸ್ತಫಾ ಅಬ್ದುಲ್ಲರವರ ಅಧ್ಯಕ್ಷತೆಯಲ್ಲಿ ವನಮಹೋತ್ಸವವನ್ನು ಆಚರಿಸಲಾಯಿತು. ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ವನ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಉಳ್ಳಾಲ ಕ್ರೇಂದ್ರ ಜುಮಾಮಸೀದಿ ಕಾರ್ಯದರ್ಶಿ ಜನಾಬ್ ಹಾಜಿ ಮಹಮ್ಮದ್ ತ್ವಾಹರವರು ಇಂದು ನಮ್ಮ ಅವ್ಯಶಕತೆಗಳ ದಾಗಿ ಮರಗಳ ನಾಶವಾಗುತ್ತಿದೆ ಮರ ನಾಶವಾದಲ್ಲಿ ಇನ್ನೆರಡು ಗಿಡಗಳನ್ನು ನೆಟ್ಟು ಪೋಷಿಸಿ ಅದನ್ನು ಮರವಾಗಿ ಬೆಳಸುವ ಮೂಲಕ ನಾವು ಕಾಡನ್ನು ಬೆಳಸಿ ನಾಡನ್ನು ಉಳಿಸಬೇಕಾಗಿದೆ ಎಂದರು . ಶಾಲಾ ಮಕ್ಕಳ ಪ್ರಾರ್ಥನೆ ಯೊಂದಿಗೆ ಪ್ರಾರಂಭವಾದ ಸಮಾರಂಭದಲ್ಲಿ ಶಾಲಾಭಿವೃಧ್ಧಿ ಸಮಿತಿಯ ಉಪಾಧ್ಯಕ್ಷ ಜನಾಬ್ ಯು. ಎನ್ ಇಬ್ರಾಹಿಂ ಕೋಶಾಧಿಕಾರಿ ಅಬ್ದುಲ್ ಕರೀಂ ಹಾಗೂ ಸಯ್ಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಗೆ ಆಡಳಿತಾಧಿಕಾರಿ ಜನಾಬ್ ಅಬ್ದುಲ್ ಲತೀಫ್…
UN NETWORKS ಉಳ್ಳಾಲ: ಉಳ್ಳಾಲ ರೈಲ್ವೇ ನಿಲ್ದಾಣದಲ್ಲಿರುವ 125 ವರ್ಷಗಳ ಹಳೇಯದಾದ ಕಟ್ಟಡದ ಮೇಲ್ಛಾವಣಿ ಸಂಪೂರ್ಣವಾಗಿ ಕುಸಿದುಬಿದ್ದಿರುವ ಘಟನೆ ಶುಕ್ರವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಕಟ್ಟಡದಲ್ಲಿ ಇದ್ದಂತಹ ಕ್ಯಾಂಟೀನ್ ಅನ್ನು ಕಟ್ಟಡ ಶಿಥಿಲಾವಸ್ಥೆಯಲ್ಲಿರುವುದರಿಂದ ಮೂರು ತಿಂಗಳ ಹಿಂದೆಯಷ್ಟೇ ಅಧಿಕಾರಿಗಳ ಸೂಚನೆಯಂತೆ ಸ್ಥಳಾಂತರಿಸಲಾಗಿತ್ತು. ನಿಯಂತ್ರಣ ಕೊಠಡಿ ಸಮೀಪವೇ ಇದ್ದಂತಹ ಕಟ್ಟಡವನ್ನು ಇಲಾಖೆ ಉಪಯೋಗಿಸುತ್ತಿರಲಿಲ್ಲ. ಆದರೂ ರೈಲಿಗಾಗಿ ಕಾಯುವ ಕೆಲ ಪ್ರಯಾಣಿಕರು ಅಲ್ಲೇ ಕುಳಿತುಕೊಳ್ಳುತ್ತಿದ್ದರು. ಸ್ಥಳದಲ್ಲಿರುವ ರಿಕ್ಷಾ ಪಾರ್ಕಿನ ರಿಕ್ಷಾ ಚಾಲಕರು ಕೂಡಾ ಅಲ್ಲಿ ವಿಶ್ರಾಂತಿಸುತ್ತಿದ್ದರು. ಆದರೆ ಕುಸಿತದ ಸಂದರ್ಭ ಒಳಗೆ ಯಾರು ಇರಲಿಲ್ಲ. ಇದರಿಂದ ಸಂಭಾವ್ಯ ಅನಾಹುತ ತಪ್ಪಿದಂತಾಗಿದೆ. ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಅವರು ಸ್ಥಳಕ್ಕೆ ಇಂದು ಭೇಟಿ ನೀಡಲಿದ್ದಾರೆ ಎಂದು ಉಳ್ಳಾಲದಲ್ಲಿರುವ ಅಧಿಕೃತರು ತಿಳಿಸಿದ್ದಾರೆ. ಬ್ರಿಟೀಷರ ಕಾಲದಲ್ಲಿ ನಿರ್ಮಿಸಲಾದ ಉಳ್ಳಾಲ ರೈಲ್ವೇ ನಿಲ್ದಾಣದ ಕಟ್ಟಡ ಇದಾಗಿದ್ದು, ಸುಮಾರು 125 ವರ್ಷಗಳು ಕಳೆದಿರಬಹುದು. ಕೆಲ ವರ್ಷಗಳ ಹಿಂದೆ ನೂತನ ಕಟ್ಟಡ ನಿರ್ಮಿಸಿದ ಬಳಿಕ ಸ್ಟೇಷನ್ ಮಾಸ್ಟರ್ ಕಚೇರಿ ಮತ್ತು ನಿಯಂತ್ರಣ ಕೊಠಡಿಯನ್ನು…
UN NETWORKS ಉಳ್ಳಾಲ : ಸರಕಾರಗಳು ಅಭಿವೃದ್ಧಿಯ ನೆಪದಲ್ಲಿ ಅಧಿಕಾರಕ್ಕೆ ಬರುತ್ತಿದ್ದಾರೆ ಆದರೆ ಜನರ ಸಂಕಷ್ಟಗಳಿಗೆ, ಅವರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದು, ಇದಕ್ಕೆ ಒಂದು ಉದಾಹರಣೆ ಕಳೆದ ಎಂಟು ವರ್ಷದಿಂದ ಕುಂಟುತ್ತಿರುವ ಪಂಪ್‍ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಆಗಿದ್ದು, ಇದನ್ನೇ ಅಭಿವೃದ್ಧಿ ಮಾಡದವರು ಇನ್ನು ದೇಶವನ್ನು ಯಾವಾಗ ಅಭಿವೃದ್ಧಿ ಮಾಡುತ್ತಾರೆ ಎಂದು ರಾಜ್ಯ ಪ್ರ. ಕಾರ್ಯದರ್ಶಿ ತಾಹಿರ್ ಹುಸೇನ್ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಜಂಕ್ಷನ್‍ನಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಆಶ್ರಯದಲ್ಲಿ ಪಂಪ್‍ವೆಲ್ ತೊಕ್ಕೋಟು ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದನ್ನು ಪ್ರತಿಭಟಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ಪ್ರತಿಭಟನೆ ಯಾವುದೇ ಒಂದು ಪಕ್ಷದ ಸರಕಾರದ ವಿರುದ್ಧ ಪ್ರತಿಭಟನೆಯಲ್ಲ ಇದು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಹೇಳಲು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಹೆದ್ದಾರಿ ಕಾಮಗಾರಿ ವಿಳಂಬದಿಂದ ಜನರು ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದರೆ ಸರಕಾರದ ಎಲ್ಲಾ ಯೋಜನೆಗಳಲ್ಲಿ ಜನರಿಗೆ ಮೋಸವಾಗುತ್ತಿದ್ದು, ಇದು ಸರಕಾರದ ಚಾಳಿಯಾಗಿದೆ. ದುಡ್ಡುಕೊಟ್ಟು ಬೆದರಿಕೆ ಹಾಕಿ ರೈತರಿಂದ ಸಂವಾದ ಮಾಡಿ ದೇಶದ…

