UN NETWORKS ಮಂಜನಾಡಿ: ಕೊಡಗು ಜಿಲ್ಲೆಯಲ್ಲಿ ನಡೆದ ಭೀಕರ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡಿರುವ ನಿರ್ವಸಿತರಿಗೆ ಮನೆಗಳನ್ನು ನಿರ್ಮಿಸಿಕೊಡಲು ಕರ್ನಾಟಕ ರಾಜ್ಯ ಸುನ್ನೀ ಸಂಘಟನೆಗಳು ನಿರ್ಧರಿಸಿದ್ದು, ಕೊಡಗು ಸುನ್ನೀ ಯುವ ನಾಯಕ ಅಬ್ದುಲ್ ಲತೀಫ್ ಶುಂಠಿಕೊಪ್ಪ ಸಂತ್ರಸ್ತರಿಗಾಗಿ ನೀಡಿರುವ ಒಂದು ಎಕ್ರೆ ಜಾಗದಲ್ಲಿ 20 ರಿಂದ 25 ಮನೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕರ್ನಾಟಕ ಸುನ್ನೀ ಸಂಘಟನೆಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಪಿ.ಪಿ ಅಹ್ಮದ್ ಸಖಾಫಿ ಕಾಶಿಪಟ್ನ ಹೇಳಿದರು. ಅವರು ಮಂಜನಾಡಿಯ ಅಲ್ ಮದೀನಾ ದಲ್ಲಿ ಶನಿವಾರ ನಡೆಸಿದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಮಾಹಿತಿ ನೀಡಿದರು. ಮನೆಗಳ ನಿರ್ಮಾಣಕ್ಕೆ ರೂ.35 ಲಕ್ಷ ಸಂಗ್ರಹವಾಗಿದೆ. ಸರ್ಕಾರ ಹಾಗೂ ದಾನಿಗಳ ನೆರವಿನಿಂದವಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ. ಉಲಮಾ ನಾಯಕರ ಆಶಯದಂತೆ ಎಸ್ ವೈಎಸ್ , ಎಸ್ಸೆಸ್ಸೆಫ್ ಮತ್ತು ಕೆಸಿಎಫ್ ಕಾರ್ಯಕರ್ತರು ಧನ ಸಂಗ್ರಹಕ್ಕೆ ಇಳಿದಿದ್ದಾರಡ. ಮುಅಲ್ಲಿಂ ಮತ್ತು ಮೆನೇಜ್ ಮೆಂಟ್ ನಾಯಕರು ಸಹಕರಿಸಿದ್ದಾರೆ. ಭೂಮಿ ದಾಖಲೆಗಳಿಗೆ ಸಂಬಂಧಿಸಿದ ಪ್ರಕ್ರಿಯೆಗಳು ಪೂರ್ಣ ಗೊಂಡ ಬಳಿಕ ಮನೆ ನಿರ್ಮಾಣ…
Author: UllalaVani
UN NETWORKS ಉಳ್ಳಾಲ : SKSSF ವಿಖಾಯ ಮಲಾರ್ ಶಾಖೆ ವತಿಯಿಂದ ಮುಆವನಃ ಕಾರ್ಯಕ್ರಮವು ಸಮುದಾಯ ಭವನ ಮಲಾರ್ ಜಂಕ್ಷನ್ ನಲ್ಲಿ ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಮುಹಮ್ಮದ್ ಮೋನು ಮಲಾರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು .ಸ್ಥಳೀಯ ಖತೀಬರಾದ ಅಬ್ದುಸ್ಸಲಾಂ ಫೈಝಿ ಇರ್ಫಾನಿ ದುಃಆ ನೆರವೇರಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಂ.ಎಸ್ ರಿಯಾಝ್ ಫೈಝಿ ಮಲಾರ್ ಪ್ರಸ್ತಾವಿಕವಾಗಿ ಮಾತನಾಡಿದರು .ಸಯ್ಯಿದ್ ಮದನಿ ಅರಬಿಕ್ ಕಾಲೇಜು ವಿದ್ಯಾರ್ಥಿ ಉವೈಸ್ ತೋಕೆ ಕನ್ನಡ ಭಾಷಣಗೈದರು .ಸಮಾಜ ಸೇವೆ ಯಲ್ಲಿ ನಮ್ಮ ಗ್ರಾಮದ ಅಭಿವೃದ್ಧಿ ಸಾಧ್ಯವೆಂದು ಪಾವೂರು ಪಂಚಾಯತ್ ಅಧ್ಯಕ್ಷರಾದ ಫಿರೋಝ್ ಮಲಾರ್ ಅವರು ಭಾಷಣ ಮಾಡಿದರು. ಸಮಸ್ತ ದಕ್ಷಿಣ ಕರ್ನಾಟಕ ಮುಶಾವರ ಕಾರ್ಯದರ್ಶಿ ಉಸ್ತಾದ್ ಕುಕ್ಕಿಲ ದಾರಿಮಿ ಮುಖ್ಯ ಭಾಷಣಗೈದರು . ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ವಿಖಾಯ ಸಹಿತ SKSSF ಕಾರ್ಯಕರ್ತರನ್ನು ಫಾರೂಖ್ ಹಾಜಿ ಕಲ್ಲಡ್ಕ , ಮಂಗಳೂರು ತಾಲೂಕು ಪಂಚಾಯತ್ ಸದಸ್ಯ ಬಿ.ಎಸ್ ಬಶೀರ್ ಜೋಕಟ್ಟೆ , ಅಝಾದ್ ಯೂತ್ ಕಲ್ಚರಲ್ ಅಸೋಸಿಯೇಶನ್ ಜೋಕಟ್ಟೆ ಅಧ್ಯಕ್ಷ…
UN NETWORKS ಕೈರಂಗಳ: ಸಿನಿಮಾ ಚಿತ್ರೀಕರಣಕ್ಕೆ ಒಂದು ಬಾರಿ ಅವಕಾಶ ಕೊಟ್ಟ ಸಂಸ್ಥೆ ಅಥವಾ ಮಾಲೀಕರು ಮತ್ತೆ ಬೇರೊಂದು ಸಿನಿಮಾ ಅಲ್ಲಿ ಚಿತ್ರೀಕರಣ ಮಾಡುತ್ತೇವೆ, ದೊಡ್ಡ ಮೊತ್ತ ಕೊಡುತ್ತೇವೆ ಎಂದು ಜಪ್ಪಯ್ಯ ಅಂದರೂ ಅವಕಾಶ ಕೊಡುವುದಿಲ್ಲ. ಚಿತ್ರೀಕರಣದುದ್ದಕ್ಕೂ ಚಿತ್ರದ ಕಥೆ ಹಾಗೂ ಪತ್ರಾದ ಬಗ್ಗೆ ಗಮನ ಇರುತ್ತದೆಯೇ ಹೊರತು ಆ ತಂಡ ನೈರ್ಮಲ್ಯತೆಗೆ ಆದ್ಯತೆ ಕೊಡುವುದಿಲ್ಲ ಎಂಬ ಕಾರಣದಿಂದ ಮತ್ತೆ ಅಲ್ಲಿ ಬೇರೆ ಸಿನಿಮಾ ತಂಡಕ್ಕೆ ಅವಕಾಶ ಸಿಗುವುದಿಲ್ಲ. ಇನ್ನು ನಿರ್ದೇಶಕನ ಮುಂದಿನ ಸಿನಿಮಾದ ಕಥೆಯೂ ಬೇರೆಯದ್ದೇ ಆಗಿರುವುದರಿಂದ ಲೋಕೇಶನ್ ಬದಲಾಗುತ್ತಿರುವುದರಿಂದ ಸಹಜವಾಗಿಯೇ ತಂಡ ಸಿಹಿ, ಕಹಿ ಘಟನೆಗಳ ಹೊರತುಪಡಿಸಿ ಲೊಕೇಶನ್ ಮರೆಯುತ್ತದೆ. ಸಿನಿಮಾ ಸೋತರೂ ಗೆದ್ದರೂ ಮತ್ತೆ ಶೂಟಿಂಗ್ ಸ್ಪಾಟ್‍ಗೆ ಹೋಗೋದು ವಿರಳ. ಆದರೆ ಈ ಸಾಲಿನ ಯಶಸ್ವಿ ಚಿತ್ರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೊಡುಗೆ: ರಾಮಣ್ಣ ರೈ ಚಿತ್ರದ ನಿರ್ದೇಶಕ ರಿಷಬ್ ಶೆಟ್ಟಿ ಅವರೆಲ್ಲರಿಗಿಂತ ಭಿನ್ನವಾಗಿ ಕಾಣುತ್ತಾರೆ. ತನ್ನ ಚಿತ್ರಕ್ಕೆ ಅತಿ ಮುಖ್ಯವಾಗಿದ್ದ ಶಾಲೆಯ ಹಾಗೂ ಊರಿನ…
UN NETWORKS ಉಳ್ಳಾಲ : ಮುನ್ನೂರು ಗ್ರಾಮದ ಶ್ರೀ ಸೋಮನಾಥ ಉಳಿಯದ ಶ್ರೀ ಸೋಮೇಶ್ವರೀ ದೇವಿಗೆ ಸ್ವರ್ಣ ಮುಖವಾಡ ಸಮರ್ಪಣೆಯು ಗುರುವಾರ ನಡೆಯಿತು. ಬ್ರಹ್ಮಶ್ರೀ ಕುಂಟಾರು ರವೀಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ಧಾರ್ಮಿಕ ವಿಧಿವಿಧಾನಗಳ ಬಳಿಕ ಉಡುಪಿ ಅದಮಾರು ಮಠಾಧೀಶರಾದ ಶ್ರೀ ವಿಶ್ವ ಪ್ರಿಯ ತೀರ್ಥ ಸ್ವಾಮೀಜಿಯವರ ಉಪಸ್ಥಿತಿಯಲ್ಲಿ ಶ್ರೀದೇವಿಗೆ ಸರ್ಣಮುಖವಾಡವನ್ನು ಸಮರ್ಪಿಸಲಾಯಿತು. ಈ ಸಂದರ್ಭ ಆಶೀರ್ವವಚನಗೈದ ಶ್ರೀಗಳು ಮಕ್ಕಳಿಗೆ ಎಳೆಪ್ರಾಯದಲ್ಲಿಯೇ ಸಂಸ್ಕಾರ ತಿಳಿಹೇಳುವುದರ ಜತೆಗೆ ತಪ್ಪುದಾರಿ ಹಿಡಿದಾಗ ತಿದ್ದುವ ಕೆಲಸವು ಹೆತ್ತವರಿಂದಾಗಬೇಕು ಎಂದು ನುಡಿದರು. ಭಜನೆಯಿಂದ ವಿಭಜನೆಯಿಲ್ಲ, ಕೇವಲ ನವರಾತ್ರಿಯಲ್ಲದೆ ಪ್ರತಿನಿತ್ಯವು ದುರ್ಗೆಯ ನಾಮಸ್ಮರಣೆ ಮಾಡುವ ಮೂಲಕ ತಮ್ಮ ಜೀವನವನ್ನು ಸುವರ್ಣಮಯಗೊಳಿಸಬೇಕು ಎಂದರು. ದೇವಳದ ಆಡಳಿತ ಸಮಿತಿ ಅಧ್ಯಕ್ಷ ಜೆ.ರವೀಂದ್ರ ನಾಯ್ಕ್, ಗೌರವಾಧ್ಯಕ್ಷ ವಿಶ್ವನಾಥ ನಾಯ್ಕ್ ಕಲ್ಲಾಪು,ಪ್ರಧಾನ ಕಾರ್ಯದರ್ಶಿ ಯು.ದಯಾನಂದ ನಾಯ್ಕ್ ಕುಲಶೇಖರ,ಕಾರ್ಯಾಧ್ಯಕ್ಷ ಶಿವಾನಂದ ನಾಯ್ಕ್ ಸೋಮನಾಥ ಉಳಿಯ, ಕೋಶಾಧಿಕಾರಿ ಧರ್ಮಪಾಲ್ ನಾಯ್ಕ್, ಶ್ರೀ ಅರಸು,ಧೂಮಾವತಿ ಬಂಟ ದೈವಸ್ಥಾನದ ಮಧ್ಯಸ್ಥರಾದ ಎಸ್.ರಾಮ ನಾಯ್ಕ್, ಗಾಳದ ಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ…
UN NETWORKS ಉಳ್ಳಾಲ: ಶೀಘ್ರದಲ್ಲೇ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ರಾಜ್ಯದಲ್ಲಿ ಆಡಳಿತ ನಡೆಸಲಿದೆ. ಬಳಿಕ ವಿಶೇಷ ಅನುದಾನವನ್ನು ಕೋಟೆಕಾರು ಗ್ರಾಮಕ್ಕೆ ಬಿಡುಗಡೆಗೊಳಿಸುವ ಮೂಲಕ ಜಿಲ್ಲೆಯಲ್ಲೇ ಮಾದರಿ ಪಟ್ಟಣ ಪಂಚಾಯಿತಿಯಾಗಿ ರೂಪುಗೊಳಿಸಲಾಗುವುದು ಎಂದು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಹೇಳಿದರು. ಅವರು ಕುಂಪಲದ ಬಗಂಬಿಲ ಮಹಾದೇವಿ ಮಂದಿರದ ಅಡ್ಡರಸ್ತೆಗೆ ಕೋಟೆಕಾರು ಪಟ್ಟಣ ಪಂಚಾಯಿತಿಯಿಂದ ಮಂಜೂರಾದ ರೂ. 5 ಲಕ್ಷ ಅನುದಾನದಲ್ಲಿ ಅಳವಡಿಸಲಾದ ಇಂಟರ್‍ಲಾಕ್ ರಸ್ತೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕೋಟೆಕಾರು ಗ್ರಾಮದ ಮೂಲೆಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದು ಪಂಚಾಯಿತಿನ ಮೂಲ ಉದ್ದೇಶವಾಗಿದೆ. ವಿಶೇಷ ಅನುದಾನವನ್ನು ಭಾಗದ ಸದಸ್ಯರು ತರುವ ಮೂಲಕ ಗ್ರಾಮದ ಜನರ ಅಭಿಲಾಷೆಯನ್ನು ಈಡೇರಿಸಲಾಗಿದೆ. ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಸಂಘ ಸಂಸ್ಥೆಗಳು -ಜನಪ್ರತಿನಿಧಿಗಳು ಜೊತೆಯಾಗಿ ಕಾರ್ಯ ನಿರ್ವಹಿಸುತ್ತಿರುವಂತಹ ಪ್ರದೇಶ ಬಗಂಬಿಲವಾಗಿದೆ. ಪ್ರದೇಶದ ಅಭಿವೃದ್ಧಿಗೆ ಶ್ರಮ ವಹಿಸಿ ಎಲ್ಲರೂ ದುಡಿಯುತ್ತಿರುವ ಕಾರ್ಯ ಶ್ಲಾಘನೀಯ. ಕೋಟೆಕಾರು ಪಟ್ಟಣ ಪಂಚಾಯಿತಿ…
UN NETWORKS ಯೆನೆಪೋಯ: ಜೀವನದ ಪ್ರತಿಯೊಂದು ಕ್ಷಣಗಳು ಕಲೆಯಾಗಿದೆ. ಬದುಕು, ಆಲೋಚನೆಗಳು ಎಲ್ಲವೂ ಕಲೆ ಆಧಾರಿತವಾಗಿದೆ. ಕಲೆಯಲ್ಲಿಯೂ ವಿಜ್ಞಾನವಿದೆ. ಇದನ್ನು ತೋರಿಸುವಂತಹ ಕೆ¯ಸ ಗ್ರೂಪ್ ಏಸ್ತೇಟ್ ನಿಂದ ಆಗಿದೆ ಎಂದು ಯೆನೆಪೋಯ ಸ್ವಾಯುತ್ತೆ ಆಗಲಿರುವ ವಿಶ್ವವಿದ್ಯಾಲಯದ ಉಪಕುಲಪತಿ ಡಾ| ಎಂ ವಿಜಯಕುಮಾರ್ ಅಭಿಪ್ರಾಯಪಟ್ಟರು. ಅವರು ದೇರಳಕಟ್ಟೆಯ ಯೆನೆಪೋಯ ಸ್ವಾಯುತ್ತೆಗೊಳ್ಳಲಿರುವ ವಿಶ್ವವಿದ್ಯಾಲಯದ ಯೆಂಡ್ಯುರೆನ್ಸ್ ಝೋನ್ ನಲ್ಲಿ ` ಗ್ರೂಪ್ ಏಸ್ತೇಟ್ ಮೆಡಿಕಲ್ ಆರ್ಟ್ ಗ್ಯಾಲರಿ’ ಡಾ.ಅಖ್ತರ್ ಹುಸೈನ್ ಇವರ ಕೈಚಳಕದಲ್ಲಿ ಬಿಡಿಸಿದ ವೈದ್ಯಕೀಯ ವಿಜ್ಞಾನದ ಕಲಾಕೃತಿಗಳ ಗ್ಯಾಲರಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ನಾಸ್ರೀನ್ ಅಬ್ದುಲ್ಲಾ ಕುಂಞ ಯೆನೆಪೋಯ ಉದ್ಘಾಟಿಸಿದರು. ಗ್ರೂಪ್ ಏಸ್ತೇಟ್ ಇದರ ಮುಖ್ಯಸ್ಥ ಡಾ| ಅಖ್ತರ್ ಹುಸೈನ್ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಪುಸ್ತಕಗಳಿಗಿಂತ ಚಿತ್ರಗಳು ಆಕರ್ಷಕವಾಗಿರುತ್ತದೆ. ವೈದ್ಯಕೀಯ ಕಲೆಯನ್ನು ರಚಿಸಿರುವ ಮೂಲಕ ಯುವ ವೈದ್ಯರಿಗೆ ಸುಲಭವಾಗಿ ಪಾಠಕ್ಕಿಂತ ಚಿತ್ರಗಳು ಅರ್ಥವಾಗುವುದು. ವಿಶ್ವವಿದ್ಯಾಲಯಗಳಲ್ಲಿ ಇಂತಹ ಆರ್ಟ್ ಗ್ಯಾಲರಿಗಳು ಅನನ್ಯ. ವಿದ್ಯಾರ್ಥಿಗಳು ಕೌಶಲ್ಯವೃದ್ಧಿಗೆ ಕಲೆಯೂ ಒಂದು ಸಾಧನ. ಇದನ್ನು ಬೆಳೆಸುವ, ವಿದ್ಯಾರ್ಥಿಗಳಲ್ಲಿ ಅಡಗಿರುವ…
UN NETWORKS ಕೊಣಾಜೆ : ಧಾರ್ಮಿಕತೆಯ ಮಹತ್ವವನ್ನು ಅರಿತುಕೊಂಡು ಮುನ್ನಡೆದರೆ ಸೌಹಾರ್ದತೆಯ ಸಮಾಜ ಹಾಗೂ ನೆಮ್ಮದಿಯ ಜೀವನವನ್ನು ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ಬೋಳಿಯಾರುಗುತ್ತು ಜಯರಾಮ್ ಸಾಂತ ಅವರು ಅಭಿಪ್ರಾಯಪಟ್ಟರು. ಅವರು ಸಪ್ತಸ್ವರ ಕಲಾತಂಡ(ರಿ) ಕೊಣಾಜೆ ಹಾಗೂ ಸಾರ್ವಜನಿಕ ಶಾರದೋತ್ಸವ ಸಮಿತಿ ಶಾರದಾನಗರ ಕೊಣಾಜೆ ಇದರ 14ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಹಾಗೂ ನೂತನ ಸಭಾಂಗಣದ ಉದ್ಘಾಟನಾ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ನೈಜವಾದ ದೇವತಾ ಕಾರ್ಯ ಎಂಬುದು ಪ್ರತಿಯೊಬ್ಬರಿಗೂ ಒಳ್ಳೆಯತನವನ್ನು ಬಯಸುವುದು. ಇಂತಹ ಮನೋಭಾವನೆಯು ನಮ್ಮನ್ನು ಎತ್ತರಕ್ಕೆ ಬೆಳೆಸುತ್ತದೆ. ಆದ್ದರಿಂದ ಬಾಲ್ಯದಲ್ಲಿಯೇ ಮಕ್ಕಳಲ್ಲಿ ನೈತಿಕತೆ, ಸಂಸ್ಕಾರವನ್ನು ಬೆಳೆಸುವಂತ ಕಾರ್ಯ ಖಂಡಿತವಾಗಿಯೂ ಆಗಬೇಕಿದೆ ಎಂದು ಹೇಳಿದರು. ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿದ ದೇರಳಕಟ್ಟೆಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದ ವಿಶ್ವನಾಥ ಗುರುಸ್ವಾಮಿ ಅವರು, ನವರಾತ್ರಿಯ ಉತ್ಸವವು ನಮ್ಮ ಭಾರತೀಯ ಆಚರಣೆಯಲ್ಲಿ ಬಹಳ ವೈಶಿಷ್ಟಪೂರ್ಣವಾದ ಆಚರಣೆಯಾಗಿದೆ. ಹಬ್ಬ, ಆಚರಣೆಗಳ ಮಹತ್ವವನ್ನು ನಾವು ಅರಿತುಕೊಳ್ಳುವ ಪ್ರಯತ್ನ ಮಾಡಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಮಂಗಳೂರು…
UN NETWORKS ಉಳ್ಳಾಲ: ದೇರಳಕಟ್ಟೆಯ ನಿಟ್ಟೆ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ| ಸತೀಶ್ ಭಂಡಾರಿ ಅವರಿಗೆ ಇಂಗ್ಲೆಂಡ್‍ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಫೆಲೋಶಿಪ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಯುನೈಟೆಡ್ ಕಿಂಗ್‍ಡಮ್‍ನ ಲಿವರ್‍ಪೂಲ್‍ನ ಸೇಂಟ್ ಜಾರ್ಜ್ಸ್ ಹಾಲ್‍ನಲ್ಲಿ ನಡೆದ ಸಭೆಯಲ್ಲಿ ಇಂಗ್ಲೆಂಡ್‍ನ ರಾಯಲ್ ಕಾಲೇಜ್ ಆಫ್ ಸರ್ಜನ್ಸ್ ಅಧ್ಯಕ್ಷ ಡರೆಕ್ ಆಲ್ಡರ್‍ಸನ್ ಅವರು ಫೆಲೋಷಿಪ್ ಪ್ರಶಸ್ತಿಯನ್ನು ಡಾ| ಸತೀಶ್ ಭಂಡಾರಿ ಅವರಿಗೆ ಪ್ರದಾನ ಮಾಡಿದರು.
UN NETWORKS ಉಳ್ಳಾಲ: ಉಳ್ಳಾಲ ನಗರ ಜಾತ್ಯತೀತ ಜನತಾದಳದ ಅಧ್ಯಕ್ಷರಾಗಿ ಯು.ಕೆ. ಮಹಮ್ಮದ್ ಮುಸ್ತಫ ಅವರನ್ನು ಮಂಗಳೂರು ವಿಧಾನ ಸಭಾ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮೋಹನ್ ಆಳ್ವ ಅವರು ನೇಮಕ ಮಾಡಿದ್ದಾರೆ.
UN NETWORKS ಉಳ್ಳಾಲ: ಅಸ್ಸಾಲಾಮು ಅಲೈಕುಮ್ ನಮ್ಮೆಲ್ಲರ ಅಭಿಮಾನದ ಬದ್ರಿಯ ಜುಮಾ ಮಸೀದಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಹಯಾತುಲ್ ಇಸ್ಲಾಂ ಮದರಸ ಇದರ ಹಳೆ ವಿದ್ಯಾರ್ಥಿಗಳು ಮಸೀದಿ,ಮದರಸ ಅಭಿವೃದ್ಧಿ ಹಾಗೂ ಸಮಾಜದ ಹಿತಗೋಸ್ಕರ ಕಟ್ಟಿ ಬೆಳಸಿದ ಸಂಸ್ಥೆ ಯಾದ ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ 2ನೇ ಮಹಾ ಸಭೆಯು ಸಂಸ್ಥೆಯ ಕಚೇರಿಯಲ್ಲಿ ಕೆ.ಎಂ ರಶೀದ್ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸದರ್ ಉಸ್ತಾದ್ ದುವ ದೊಂದಿಗೆ ಆರಂಭಗೊಂಡಿತು ಅಶ್ರಫ್ ಡಿ.ಎ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು ಶಿಹಾಬುದ್ದಿನ್ ಡಿ ಲೆಕ್ಕ ಪತ್ರ ಮಾಡಿಸಿದರು. ಸೇರಿದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ಕೆ.ಎಂ ರಶೀದ್ ರವರು ಅಧ್ಯಕ್ಷ ಭಾಷಣ ಮಾಡಿದರು. 2018-2019ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ 15 ಮಂದಿ ಯನ್ನು ಆಯ್ಕೆ ಮಾಡಲಾಯಿತು. ಈ ಪೈಕಿ ಗೌರವಾಧ್ಯಕ್ಷರಾಗಿ ಅಬ್ದುಲ್ ಆರ್ ಅಹ್ಮದ್ ಶೇಟ್, ಯಾಸರ್ ಡಿ ರವರನ್ನು ಅಧ್ಯಕ್ಷರಾಗಿ, ಇಕ್ಬಾಲ್ ಎಚ್ ಆರ್ ರವರನ್ನು ಉಪಾಧ್ಯಕ್ಷ…

