UN NETWORKS
ಉಳ್ಳಾಲ : ಸರಕಾರಗಳು ಅಭಿವೃದ್ಧಿಯ ನೆಪದಲ್ಲಿ ಅಧಿಕಾರಕ್ಕೆ ಬರುತ್ತಿದ್ದಾರೆ ಆದರೆ ಜನರ ಸಂಕಷ್ಟಗಳಿಗೆ, ಅವರ ಜೀವದ ಮೇಲೆ ಚೆಲ್ಲಾಟವಾಡುತ್ತಿದ್ದು, ಇದಕ್ಕೆ ಒಂದು ಉದಾಹರಣೆ ಕಳೆದ ಎಂಟು ವರ್ಷದಿಂದ ಕುಂಟುತ್ತಿರುವ ಪಂಪ್ವೆಲ್ ಮತ್ತು ತೊಕ್ಕೊಟ್ಟು ಫ್ಲೈಓವರ್ ಆಗಿದ್ದು, ಇದನ್ನೇ ಅಭಿವೃದ್ಧಿ ಮಾಡದವರು ಇನ್ನು ದೇಶವನ್ನು ಯಾವಾಗ ಅಭಿವೃದ್ಧಿ ಮಾಡುತ್ತಾರೆ ಎಂದು ರಾಜ್ಯ ಪ್ರ. ಕಾರ್ಯದರ್ಶಿ ತಾಹಿರ್ ಹುಸೇನ್ ಅಭಿಪ್ರಾಯಪಟ್ಟರು.
ತೊಕ್ಕೊಟ್ಟು ಜಂಕ್ಷನ್ನಲ್ಲಿ ವೆಲ್ಪೇರ್ ಪಾರ್ಟಿ ಆಫ್ ಇಂಡಿಯಾದ ಆಶ್ರಯದಲ್ಲಿ ಪಂಪ್ವೆಲ್ ತೊಕ್ಕೋಟು ಮೇಲ್ಸೇತುವೆ ಕಾಮಗಾರಿ ಸ್ಥಗಿತಗೊಂಡಿರುವುದನ್ನು ಪ್ರತಿಭಟಿಸಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ನಮ್ಮ ಪ್ರತಿಭಟನೆ ಯಾವುದೇ ಒಂದು ಪಕ್ಷದ ಸರಕಾರದ ವಿರುದ್ಧ ಪ್ರತಿಭಟನೆಯಲ್ಲ ಇದು ಸಾರ್ವಜನಿಕರಿಗೆ ಆಗುತ್ತಿರುವ ಸಮಸ್ಯೆಯನ್ನು ಹೇಳಲು ಈ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ಹೆದ್ದಾರಿ ಕಾಮಗಾರಿ ವಿಳಂಬದಿಂದ ಜನರು ಅಪಘಾತದಲ್ಲಿ ಜೀವ ಕಳೆದುಕೊಳ್ಳುತ್ತಿದ್ದಾರೆ. ಆದರೆ ಸರಕಾರದ ಎಲ್ಲಾ ಯೋಜನೆಗಳಲ್ಲಿ ಜನರಿಗೆ ಮೋಸವಾಗುತ್ತಿದ್ದು, ಇದು ಸರಕಾರದ ಚಾಳಿಯಾಗಿದೆ. ದುಡ್ಡುಕೊಟ್ಟು ಬೆದರಿಕೆ ಹಾಕಿ ರೈತರಿಂದ ಸಂವಾದ ಮಾಡಿ ದೇಶದ ಅಭಿವೃದ್ಧಿಯ ಸುಳ್ಳು ನಕ್ಷೆಯನ್ನು ದೇಶದ ಜನರ ಮುಂದೆ ಇಡುತ್ತಿದ್ದಾರೆ. ಮುಂದಿನ ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳದಿದ್ದರೆ ಸಂಸದರ ಕಚೇರಿ ಎದುರು ಆಹೋರಾತ್ರಿ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ರಾಜ್ಯ ಉಪಾಧ್ಯಕ್ಷ ಶ್ರೀಕಾಂತ್ ಸಾಲ್ಯಾನ್ ಮಾತನಾಡಿ ಸಂಸಸದ ನಳಿನ್ ಕುಮಾರ್ ಅವರಿಗೆ ಈ ಕಾರ್ಯ ನಡೆಸಲು ಆಗದಿದ್ದರೆ ರಾಜಿನಾಮೆ ಕೊಡಲಿ. ಅಭಿವೃದ್ಧಿ ಭಾರತದ ಹೆಸರು ಕೇವಲ ಪ್ರಚಾರಕ್ಕೆ ಮಾತ್ರ ಸೀಮಿತವಾಗಿದ್ದು, ಜನರು ಹಸಿವಿನಿಂದ ಸಾಯುತ್ತಿದ್ದಾರೆ ಎಂದ ಅವರು ಕಾಮಗಾರಿ ನಡೆಸುವವರೆಗೆ ತಲಪಾಡಿಯಲ್ಲಿ ಟೋಲ್ ನಿಲ್ಲಿಸಬೇಕು ಎಂದರು. ಸಾಮಾಜಿಕ ಕಾರ್ಯಕರ್ತ ರಾಝಿಕ್ ಉಳ್ಳಾಲ್ ಮಾತನಾಡಿ ಕಳೆದ ಕೆಲವು ವರ್ಷಗಳಿಂದ ಹೆದ್ದಾರಿಯ ಅವಾಂತರದಿಂದ ಹಲವಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ವಾಹನ ಚಾಲಕರು ಕಷ್ಟ ಪಡುತ್ತಿದ್ದು, ಜನರು ರಸ್ತೆಯಲ್ಲಿ ಸಂಚರಿಸಲು ಮಾರ್ಗ ಇಲ್ಲದಂತಾಗಿದ್ದು, ಈ ಹೋರಾಟಕ್ಕೆ ಎಲ್ಲರೂ ಒಗ್ಗಟ್ಟಿನಿಂದ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಕಾಮಗಾರಿ ವಿಳಂಬಕ್ಕೆ ಕಾರಣವಾದ ಗುತ್ತಿಗೆ ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಬೇಕು, ಮೇಲ್ಸೇತುವೆ ಕಾಮಗಾರಿ ನಡೆಯುವವರೆಗೆ ತಲಪಾಡಿ ಟೋಲ್ಗೇಟ್ ಮುಚ್ಚಬೇಕು, ತಿಂಗಳೊಳಗೆ ಮುಚ್ಚದಿದ್ದರೆ ಮಂಗಳೂರಿನಿಂದ ಕಾಸರಗೋಡುವರೆಗೆ ಬೃಹತ್ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ಮನವಿಯಲ್ಲಿ ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಸಭೆಯಲ್ಲಿ ನ್ಯಾಯವಾದಿ ಸಫ್ರಾಝ್,ಮೊಹಿಯುದ್ಧೀನ್ ಕಮರುಲ್, ಖಲೀಲ್ ಎಂ.ಎಷ್. ಜಗದೀಶ್ ಬಂಗೇರ, ಅರಾಫ ಮಂಚಿ ಉಪಸ್ಥಿತರಿದ್ದರು.


