UN NETWORKS ಉಳ್ಳಾಲ: ಕ್ರೀಡೆಯ ಮೂಲಕ ಸಾಮಾಜಿಕ ಸಾಮರಸ್ಯದೊಂದಿಗೆ ಸಮಾನತೆಯನ್ನು ಕಾಣಲು ಸಾಧ್ಯವಿದ್ದು, ಕ್ರೀಡಾಪಟುಗಳು ಸ್ಪರ್ಧಾ ಸ್ಪೂರ್ತಿಯೊಂದಿಗೆ ಆಟವಾಡುವ ಮೂಲಕ ಕ್ರೀಡಾ ದಕ್ಷತೆಯನ್ನು ಮೆರೆಯಬೇಕು ಎಂದು ಕಣಚೂರು ಶಿಕ್ಷಣ ಸಂಸ್ಥೆಗಳ ಹಣಕಾಸು ನಿರ್ದೇಶಕ ಅಬ್ದುಲ್ ರಹ್ಮಾನ್ ಕಣಚೂರು ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಚೆಂಬುಗುಡ್ಡೆ ಮಂಗಳೂರು ಒನ್ ಶಿಕ್ಷಣ ಸಂಸ್ಥೆಯ ಮೈದಾನದಲ್ಲಿ ಕೆರೆಬೈಲ್ ಫ್ರೆಂಡ್ಸ್ ವತಿಯಿಂದ ನಡೆದ ಕೆಪಿಎಲ್ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ನಗರಸಭಾ ಸದಸ್ಯೆ ಶಶಿಕಲಾ ಕೀಡಾಂಗಣ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಡಾ| ಯು.ಟಿ.ಇಫ್ತಿಕಾರ್, ಉದ್ಯಮಿ ಅಬ್ದುಲ್ ರಹ್ಮಾನ್, ನಝೀರ್ ಅಹ್ಮದ್, ಗುತ್ತಿಗೆದಾರ ಮನ್ಸೂರ್ ಮಂಚಿಲ,ಉಪಸ್ಥಿತರಿದ್ದರು. ಕೀಡಾಕೂಟದ ಸಂಘಟಕ ಅಶ್ರಫ್ ಕೆರೆಬೈಲ್ ಸ್ವಾಗತಿಸಿದರು. ಅಖ್ತರ್ ಅಲಿ ವಂದಿಸಿದರು.
Author: UllalaVani
UN NETWORKS ಉಳ್ಳಾಲ: ಮುಂದಿನ ಹತ್ತು ದಿನಗಳ ಒಳಗೆ ಮರಳು ನೀತಿಯನ್ನು ಜಿಲ್ಲಾಡಳಿತ ಜಾರಿಗೊಳಿಸದೇ ಇದ್ದಲ್ಲಿ ಉಗ್ರ ರೀತಿಯ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್( ಸಿಡಬ್ಲ್ಯುಎಫ್ ಐ) ನ ಜಿಲ್ಲಾಧ್ಯಕ್ಷ ಸುನಿಲ್ ಕುಮಾರ್ ಬಜಾಲ್ ಹೇಳಿದ್ದಾರೆ. ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ (ಸಿಡಬ್ಲ್ಯುಎಫ್ ಐ) ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಕಚೇರಿಯಲ್ಲಿ ಭಾನುವಾರ ಮರಳು ನೀತಿಗೆ ಆಗ್ರಹಿಸಿ ನಡೆದ ವಿಶೇಷ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಕಟ್ಟಡ ಕಾರ್ಮಿಕರು ಸರಿಯಾದ ಮರಳು ಸಿಗದೆ ಕೆಲಸವಿಲ್ಲದೆ ಅತಂತ್ರರಾಗಿದ್ದಾರೆ. ಇದು ಇನ್ನೂ ಮುಂದುವರಿದಲ್ಲಿ ಕಾರ್ಮಿಕರ ಕುಂಟುಂಬ ಬೀದಿಗೆ ಬರುವುದರಲ್ಲಿ ಸಂಶಯವಿಲ್ಲ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಟ ದಂಧೆಗಳು ಎಗ್ಗಿಲ್ಲದೆ ನಡೆಯುತ್ತಾ, ಜಿಲ್ಲೆಯ ಮರಳು ಬೇರೆ ರಾಜ್ಯಕ್ಕೆ ಕೊಂಡೊಯ್ಯಲಾಗುತ್ತಿದೆ. ಆದರೆ ಜಿಲ್ಲೆಯ ಜನ ಮರಳು ಇಲ್ಲದೆ, ಕೆಲಸವಿಲ್ಲದೆ, ಅತಂತ್ರರಾಗಿರುವುದು ಖಂಡನೀಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಡಬ್ಲ್ಯು ಎಫ್ ಐ.ನ ಉಳ್ಳಾಲ…
UN NETWORKS ಯೇನೆಪೊಯ: ಯೇನೆಪೊಯ ಸಂಸ್ಥೆಯ ಪ್ರತಿಯೊಂದು ಚಟುವಟಿಕೆ ಭಿನ್ನವಾಗಿದ್ದು ಪಠ್ಯಕ್ರಮದ ಜೊತೆಗೆ ಇತರ ಪಠ್ಯೇತರ ಚಟುವಟಿಕೆಗಳಿಗೂ ಹೆಚ್ಚಿನ ಪ್ರೋತ್ಸಾಹ ನೀಡುತ್ತಾ ಬಂದಿರುವುದು ಶ್ಲಾಘನೀಯ ಎಂದು ಮಂಗಳೂರು ವಿಶ್ವವಿದ್ಯಾಲಯದ ಪ್ರಭಾರ ಕುಲಪತಿ ಡಾ. ಕಿಶೋರ್ ಕುಮಾರ್ ಸಿ.ಕೆ. ಅಭಿಪ್ರಾಯಪಟ್ಟರು. ಮಂಗಳೂರಿನ ಯೇನೆಪೊಯ ಸ್ಕೂಲ್ ವತಿಯಿಂದ ದೇರಳಕಟ್ಟೆಯ ಯೇನೆಪೊಯ ವಿವಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಎಐಸಿಎಸ್ ಫುಟ್ಬಾಲ್ ಟೂನೃಮೆಂಟ್-2018 ಕ್ಕೆ ಚಾಲನೆ ನೀಡಿ ಮಾತನಾಡಿದರು.ಫುಟ್ಬಾಲ್ ಕ್ರೀಡೆ ಮಾನಸಿಕ ಹಾಗೂ ದೈಹಿಕ ಸದೃಢತೆಗೆ ಪೂರಕ. ಫರ್ಹಾದ್ ಯೇನೆಪೊಯ ಅವರು ಫುಟ್ಬಾಲ್ ಕ್ರೀಡೆಯ ಉತ್ತೇಜನಕ್ಕಾಗಿ ಮಂಗಳೂರು ಫುಟ್ಬಾಲ್ ಕ್ಲಬ್ ಆರಂಭಿಸಿರುವುದು ಈ ಭಾಗದ ಅದೆಷ್ಟೋ ಪ್ರತಿಭಾವಂತರಿಗೆ ವೇದಿಕೆ ಆಗಲಿದೆ ಎಂದರು. ಯೇನೆಪೊಯ ಸ್ಕೂಲ್‍ನ ಆಡಳಿತ ನಿರ್ದೇಶಕ ಫರ್ಹಾದ್ ಯೇನೆಪೊಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯೇನೆಪೊಯ ಗ್ರೂಪ್‍ನ ನಿರ್ದೇಶಕ ಜಾವೆದ್ ಯೇನೆಪೊಯ, ಯೇನೆಪೊಯ ಶಾಲೆಯ ಪ್ರಾಂಶುಪಾಲ ಜೋಸೆಫ್ ಮಖೀರತ್ ಹಾಗೂ ಕಾರ್ಯಕ್ರಮ ವ್ಯವಸ್ಥಾಪಕಿ ರೇಶ್ಮಾ ನಾಯಕ್ ಉಪಸ್ಥಿತರಿದ್ದರು. ವಿಷ್ಣು ಅಲೋಕನ್ ಸ್ವಾಗತಿಸಿದರು. ಸಾರಾ ಝೇವಿಯರ್ ಕಾರ್ಯಕ್ರಮ ನಿರೂಪಿಸಿದರು.…
UN NETWORKS ಮುಡಿಪು: ಬಂಟ್ವಾಳ ತಾಲೂಕಿನ ಕುರ್ನಾಡು ಮಿತ್ತಕೋಡಿ ಬಳಿ ಟಿಪ್ಪರೊಂದು ಸ್ಕೂಟರ್ ಗೆ ಡಿಕ್ಕಿ ಹೊಡೆದು ಸ್ಕೂಟರ್ ಸಹ ಸವಾರೆ ಸ್ಥಳದಲ್ಲೇ ಮೃತಪಟ್ಟಿದ್ದು, ಚಾಲಕನ ಅಜಾರೂಕತೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಆಕ್ರೋಶಿತಗೊಂಡ ಸ್ಥಳೀಯರು ಟಿಪ್ಪರ್ ನ ಗಾಜಿಗೆ ಹಾನಿ ಮಾಡಿದ ಘಟನೆ ಶುಕ್ರವಾರ ರಾತ್ರಿ ಸಂಭವಿಸಿದೆ. ಪಾನೆಲ ನಿವಾಸಿ ಜುಬೈದಾ (35) ಮೃತಪಟ್ಟ ದುರ್ದೈವಿಯಾಗಿದ್ದು, ಪತಿ ಇಸ್ಮಾಯಿಲ್ ಅವರೊಂದಿಗೆ ಸ್ಕೂಟರ್ ನಲ್ಲಿ ಮನೆ ಕಡೆ ತೆರಳುತ್ತಿದ್ದಾಗ ಅಜಾಗರೂಕತೆ ಮತ್ತು ಅತೀವೇಗದಲ್ಲಿ ಬಂದ ಟಿಪ್ಪರ್ ಡಿಕ್ಕಿ ಹೊಡೆದಿದ್ದು ಗಂಭೀರ ಗಾಯಗೊಂಡಿದ್ದ ಜುಬೈದಾ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಉಳ್ಳಾಲ ಮತ್ತು ಸಂಚಾರಿ ದಕ್ಷಿಣ ಠಾಣಾ ಪೋಲೀಸರು ಆಗಮಿಸಿದ್ದು, ಪ್ರಕರಣ ದಾಖಲಾಗಿದೆ.
UN NETWORKS ಕೊಣಾಜೆ: ರಕ್ತದಾನದಂತಹ ಕಾರ್ಯಕ್ಕೆ ಯಾವುದೇ ಜಾತಿ ಧರ್ಮದ ಹಂಗಿಲ್ಲ. ಹಲವಾರು ಸಂಘ ಸಂಸ್ಥೆಗಳು ರಕ್ತದಾನ ಶಿಬಿರದ ಮೂಲಕ ಜೀವಗಳನ್ನು ಉಳಿಸುವಂತಹ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿವೆ. ಇಂತಹ ಮಾದರಿ ಕಾರ್ಯದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಮಂಗಳೂರು ವಿವಿ ಪ್ರಭಾರ ಕುಲಪತಿ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಆಶ್ರಯದಲ್ಲಿ ಮಂಗಳಗಂಗೋತ್ರಿ, ಅಶೋಕ್ ನಗರ ಹಾಗೂ ಕುರ್ನಾಡು ಲಯನ್ಸ್ ಕ್ಲಬ್‍ಗಳು, ಬಂಟರ ಸಂಘ ಉಳ್ಳಾಲ ವಲಯ ಹಾಗೂ ಎ.ಜೆ.ಆಸ್ಪತ್ರೆಯ ಸಂಶೋಧನಾ ಕೇಂದ್ರದ ಸಹಯೋಗದೊಂದಿಗೆ ಮಂಗಳೂರು ವಿವಿಯಲ್ಲಿ ಶುಕ್ರವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಲಯನ್ಸ್‍ನ ಜಿಲ್ಲಾ ಗವರ್ನರ್ ದೇವದಾಸ್ ಭಂಡಾರಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಮಂಗಳಗಂಗೋತ್ರಿ ಲಯನ್ಸ್ ಕ್ಲಬ್ ಆಶ್ರಯದಲ್ಲಿ ಕಳೆದ ಹಲವಾರು ವರ್ಷಗಳ ಹಿಂದೆಯೇ ಮಂಗಳೂರು ವಿವಿ ಸಹಯೋಗದೊಂದಿಗೆ ಹಲವು ಸಮಾಜ ಮುಖಿ ಕಾರ್ಯಕ್ರಮಗಳನ್ನು ನಾವು ಹಮ್ಮಿಕೊಳ್ಳುತ್ತಿದ್ದೆವು. ರಕ್ತದಾನದಂತಹ ಕಾರ್ಯಕ್ರಮವು ಒಂದು…
UN NETWORKS ಉಳ್ಳಾಲ: ದೇರಳಕಟ್ಟೆಯ ಯೆನೆಪೋಯ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ 8ನೇ ವಾರ್ಷಿಕ ಘಟಿಕೋತ್ಸವ ವಿವಿ ಕ್ಯಾಂಪಸ್‍ನ ಯೆನ್‍ಡ್ಯುರೆನ್ಸ್ ಸಭಾಂಗಣದಲ್ಲಿ ಅ. 27ರಂದು ಬೆಳಗ್ಗೆ 10.15ಗಂಟೆಗೆ ನಡೆಯಲಿದೆ. ಕುಲಾಧಿಪತಿ ವೈ. ಅಬ್ದುಲ್ಲ ಕುಂಞ ಅಧ್ಯಕ್ಷತೆ ವಹಿಸಿ ಪಿಎಚ್‍ಡಿ, ಎಂಸಿಎಚ್, ಡಿಎಂ, ಎಂಡಿ, ಎಂಎಸ್, ಎಂಡಿಎಸ್, ಎಂಎಸ್ಸಿ, (ಶುಶ್ರೂಷೆ), ಎಂಪಿಟಿ. ಸ್ನಾತಕೋತ್ತರ ಡಿಪ್ಲೊಮಾ ಮತ್ತು ಎಂಬಿಬಿಎಸ್, ಬಿಡಿಎಸ್, ಬಿಎಸ್ಸಿ( ಶುಶ್ರೂಷೆ) ಹಾಗೂ ಬಿಪಿಟಿ ಪದವೀಧರರಿಗೆ ಪದವಿ ಪ್ರದಾನ ಮಾಡಲಿರುವರು. ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವ ಜೋಧ್ಪುರ್‍ನ ಅಖಿಲ ಭಾರತೀಯ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ , ಡಾ. ಸಂಜೀವ್ ಮಿಶ್ರ, ಘಟಿಕೋತ್ಸವ ಭಾಷಣ ಮಾಡುವರು. ಮಹಾರಾಷ್ಟ್ರದ ಕರಾಡ್‍ನ ಕೃಷ್ಣ ವೈದ್ಯಕೀಯ ಶಿಕ್ಷಣ ಸಂಸ್ಥೆಯ ಕುಲಾಧಿಪತಿ ಡಾ. ವೇದ್‍ಪ್ರಕಾಶ್ ಮಿಶ್ರ ಅವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಕುಲಸಚಿವ ಡಾ. ಗಂಗಾಧರ ಸೋಮಯಾಜಿ ಕೆ. ಎಸ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
UN NETWORKS ಕೊಣಾಜೆ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳೂರು ತಾಲೂಕು ಇದರ ವತಿಯಿಂದ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ , ಕೊಣಾಜೆ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘದ ಒಕ್ಕೂಟ, ವಿಜಯ ಗ್ರಾಮೀಣಾಭಿವೃದ್ಧಿ ಪ್ರತಿಷ್ಠಾನ,ವಿಜಯ ಗ್ರಾಮೀಣಾಭಿವೃದ್ಧಿ ಸಮಿತಿ, ವಿಜಯ ಬ್ಯಾಂಕ್, ಕೊಣಾಜೆ ಗ್ರಾಮ ಪಂಚಾಯತ್, ವಿಶ್ವಮಂಗಳ ವಿದ್ಯಾಸಂಸ್ಥೆ , ಜನಜಾಗೃತಿ ಕೊಣಾಜೆ ವಲಯ ಸಮಿತಿ ಇದರ ಸಹಕಾರದಲ್ಲಿ ಡಾ ಡಿ. ವೀರೇಂದ್ರ ಹೆಗ್ಗಡೆ ಮತ್ತು ಮಾತೃಶ್ರೀ ಹೇಮಾವತಿ ವಿ. ಹೆಗ್ಗಡೆಯವರ ಮಾರ್ಗದರ್ಶನದೊಟ್ಟಿಗೆ ಮಹಾತ್ಮ ಗಾಂದೀಜಿ ಯವರ 150ನೇ ಜಯಂತಿ ಸಂಭ್ರಮಾಚರಣೆಯ ಪ್ರಯುಕ್ತ ದುಶ್ಚಟಮುಕ್ತ ಸಮಾಜ ನಿರ್ಮಾಣಕ್ಕಾಗಿ ಜನಜಾಗೃತಿ ಜಾಥಾ ಮತ್ತು ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಕೊಣಾಜೆ ವಿಶ್ವಮಂಗಳದಲ್ಲಿ ಗುರುವಾರ ನಡೆಯಿತು. ವಿಜಯಬ್ಯಾಂಕ್ ಕೇಂದ್ರೀಯ ಮುಖ್ಯ ವ್ಯವಸ್ಥಾಪಕ ರಾಜರಾಜೇಶ್ ಕುಲಕರ್ಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಜೀವನದ ಮೊದಲ ಹಂತ ಸುಂದರವಾಗಿದ್ದರೂ ಕೂಡಾ ವಿದ್ಯಾರ್ಥಿ ಜೀವನ ಭದ್ರಬುನಾದಿ ಆಗಬೇಕು. ವಿದ್ಯಾರ್ಥಿಗಳನ್ನು ಸಮರ್ಪಕವಾದ ಹಾದಿಯಲ್ಲಿ…
UN NETWORKS ದೇರಳಕಟ್ಟೆ: ಪರಿಸರಕ್ಕೆ ಅನುಗುಣವಾಗಿ ಅಧ್ಯಯನ ನಡೆಸಿ ಪೋಷಕಾಂಶ ಕುರಿತ ನೂತನ ಸಂಶೋಧನೆ ವರದಿ ರಚಿಸಿ ಅದನ್ನು ನೀತಿಯನ್ನಾಗಿ ರಚಿಸುವತ್ತ ಯೇನೆಪೊಯ ವಿಶ್ವವಿದ್ಯಾಲಯದ ಅಧ್ಯಯನ ಕೇಂದ್ರ ಕಾರ್ಯಾಚರಿಸಬೇಕು ಎಂದು ಇಂಡಿಯನ್ ಮೆಡಿಕಲ್ ರಿಸರ್ಚ್ ಕೌನ್ಸಿಲ್‍ನ ನಿವೃತ್ತ ಮಹಾ ನಿರ್ದೇಶಕ ಪ್ರೊ. ವಿಶ್ವ ಮೋಹನ್ ಕಟೋಚ್ ಹೇಳಿದರು. ದೇರಳಕಟ್ಟೆಯ ಯೇನೆಪೊಯ ಪರಿಗಣಿಸಲಾಗಿರುವ ವಿವಿಯ ಕ್ಯಾಂಪಸ್‍ನ ಇಎಂಡಿ ಆಡಿಟೋರಿಂಯನಲ್ಲಿಗುರುವಾರ ನಡೆದ ಯೇನೆಪೊಯ ನ್ಯೂಟ್ರಿಶಿಯನ್ ಅಧ್ಯಯನ ಕೇಂದ್ರವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಯೇನೆಪೊಯ ವಿಶ್ವವಿದ್ಯಾಲಯದಲ್ಲಿ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವ ಚಿಂತನೆಗಳ ಮೂಲಕ ಸಂಶೋಧನೆಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಹಲವು ದಶಕಗಳಿಂದ ನಡೆದುಕೊಂಡು ಬಂದಿರುವಂತೆ ಪಾಶ್ಚಿಮಾತ್ಯ ದೇಶಗಳ ಬರಹಗಾರರು ಬರೆದಿರುವ ಪಠ್ಯಕ್ರಮಗಳ ಆಧಾರದಲ್ಲಿ ಪೋಷಕಾಂಶದ ನಿರ್ಧಾರವಾಗುತ್ತಿದೆ. ಆದರೂ ದೇಶದಲ್ಲಿ ಅಪೌಷ್ಠಿಕತೆ ಕೊರತೆಗಳು ಇದೆ. ಅಪೌಷ್ಠಿಕತೆ ಸಾಮಾಜಿಕ ಸ್ವಾಸ್ಥ್ಯದ ಮೇಲೆ ಅಡ್ಡ ಪರಿಣಾಮ , ಮಾನಸಿಕ ಹಾಗೂ ದೈಹಿಕ ನ್ಯೂನ್ಯತೆಗಳು , ರೋಗ ನಿರೋಧಕ ಶಕ್ತಿ ಕುಂಠಿತವಾಗುತ್ತಿದೆ. ಈ ನಿಟ್ಟಿನಲ್ಲಿ ಉತ್ತಮ ಉದ್ದೇಶದಿಂದ ಸ್ಥಾಪನೆಗೊಂಡ ಅಧ್ಯಯನ ಕೇಂದ್ರದಲ್ಲಿ ಪೌಷ್ಠಿಕತೆಗೆ…
UN NETWORKS ಮಂಗಳೂರು: ಬೆಂದೂರ್ ವೆಲ್ ಸಿಟಿ ಆರ್ಕೇಡ್ ಕಟ್ಟಡದಲ್ಲಿ `ಒಲಿವ್’ ಹೋಮ್ ಡೆಕೋರ್ ಮತ್ತು ಡಿಸೈನಿಂಗ್ ಮಳಿಗೆಯ ಉದ್ಘಾಟನೆಯನ್ನು ರಾಜ್ಯ ವಿಧಾನಪರಿಷತ್ ಸದಸ್ಯ , ಜೆಡಿಎಸ್ ರಾಜ್ಯ ಮಹಾಪ್ರಧಾನ ಕಾರ್ಯದರ್ಶಿ ಬಿ.ಎಂ ಫಾರೂಕ್ ಗುರುವಾರ ಉದ್ಘಾಟಿಸಿದರು. ಆಧುನಿಕ ಡಿಸೈನ್ ಗಳನ್ನು ಮಳಿಗೆ ಒಳಗೊಂಡಿದೆ. ಹಲವು ವಿನ್ಯಾಸಗಳಿರುವ ಕಲಾಕೃತಿಗಳು ಇರುವುದು ಮಳಿಗೆಯ ವಿಶೇಷತೆ. ಮಂಗಳೂರಿನಲ್ಲಿ ಇಂತಹ ಮಳಿಗೆಯ ಅಗತ್ಯತೆ ಇದೆ. ಬೆಳವಣಿಗೆ ಹೊಂದುತ್ತಿರುವ ನಗರದಲ್ಲಿ ಆಧುನಿಕ ಶೈಲಿಯ ಮ್ಯಾಟಿಂಗ್, ವಿದೇಶಿ ವಿನ್ಯಾಸದ ಬೆಡ್ ಎಲ್ಲವೂ ಅಗತ್ಯ. ಮಳಿಗೆ ಗ್ರಾಹಕರಿಗೆ ಉತ್ತಮ ಸೇವೆಯನ್ನು ನೀಡಲಿ ಎಂದು ಹಾರೈಸಿದರು. ಮಂಗಳೂರು ಉತ್ತರ ಕ್ಷೇತ್ರ ಮಾಜಿ ಶಾಸಕ ಮೊಯ್ದೀನ್ ಬಾವಾ ಮಾತನಾಡಿ, ಮಳಿಗೆ ಅಭಿವೃದ್ಧಿ ಹೊಂದಿ ಜಿಲ್ಲೆ ಮತ್ತು ರಾಜ್ಯಾದ್ಯಂತ ಶಾಖೆಗಳ ನಿರ್ಮಾಣವಾಗಲಿ. ಮಳಿಗೆ ಮಾಲೀಕರ ಸಾಧನೆ ನಗರದ ಎಲ್ಲಾ ಜನರಿಗೆ ಕೈಗೂಡಲಿ ಎಂದು ಹಾರೈಸಿದರು. ಮಂಗಳೂರು ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಯ ಖತೀಬರಾದ ಸದಖತುಲ್ಲಾ ಫೈಝಿ ದುಆ ನೆರವೇರಿಸಿದರು. ಸೈಯ್ಯಿದ್ ನೌಷಾದ್, ಅಮೀರ್…
UN NETWORKS ಹರೇಕಳ: ಬೆಳೆದು ನಿಂತಿರುವ ರಸ್ತೆ ಬದಿಯ ಗಿಡ ಗಂಟಿಗಳು, ಇಳಿಜಾರದ ರಸ್ತೆಯಲ್ಲಿ ಬಿದ್ದಿರುವ ದೊಡ್ಡ-ದೊಡ್ಡ ಹೊಂಡಗಳು. ಇದು ಹರೇಕಳ ಗ್ರಾಮದ ಒಡ್ಡೆದಗುಳಿಯಿಂದ ಫರೀದ್ ನಗರವನ್ನು ಸಂಪರ್ಕಿಸುವ ರಸ್ತೆಯ ಸ್ಥಿತಿ. ಎರಡು ಗ್ರಾಮಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆಯಾಗಿರುವ ಒಡ್ಡೆದಗುಳಿ ರಸ್ತೆ ಅಭಿವೃದ್ಧಿಗಾಗಿ ಈ ಪ್ರದೇಶದ ಜನರು ಕಾಯುತ್ತಿದ್ದಾರೆ. ಅಂಬ್ಲಮೊಗರು ಗ್ರಾಮದ ಎಲಿಯಾರ್ ಪದವಿನಿಂದ ರುದ್ರಭೂಮಿ ಬಳಿಯಾಗಿ ಹರೇಕಳ ಸಂಪರ್ಕಿಸುವ ಒಡ್ಡೆದಗುಳಿ ರಸ್ತೆ ಹರೇಕಳ ಗ್ರಾಮದ ಕಿಸಾನ್ ನಗರ, ಕಲ್ಲಾಯಿ, ಸೇರಿದಂತೆ ವಿವಿಧ ಪ್ರದೇಶಗಳನ್ನು ಸಂಪರ್ಕಿಸುವ ಪ್ರಮುಖ ರಸ್ತೆ. ಅತ್ಯಂತ ಇಳಿಜಾರು ಮತ್ತು ಕಿರಿದಾದ ಈ ರಸ್ತೆ ಅಭಿವೃದ್ಧಿಗೆ ಹಲವು ವರ್ಷಗಳಿಂದ ಈ ಪ್ರದೇಶದ ಜನರು ಹರೇಕಳ ಗ್ರಾಮ ಪಂಚಾಯತ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿಗೆ ಅರ್ಜಿ ಸಲ್ಲಿಸುತ್ತಾ ಬಂದಿದ್ದಾರೆ. ಆದರೆ ಈವರೆಗೆ ಸ್ಪಂದಿಸಿಲ್ಲ ಎನ್ನುವುದು ಸ್ಥಳೀಯರ ಆರೋಪ. ಹೇಗಿದೆ ರಸ್ತೆ ಸುಮಾರು 200ಕ್ಕೂ ಹೆಚ್ಚು ಮನೆಗಳನ್ನು ಸಂಪರ್ಕಿಸುವ ಈ ರಸ್ತೆಯ ಎಲಿಯಾರ್ ಪದವಿನ ರುದ್ರಭೂಮಿ ಬಳಿಯಿರುವ ಉಮ್ಮರಬ್ಬ ಮನೆಯ ಬಳಿ ಸಂಪೂರ್ಣ…

