UN NETWORKS ಉಳ್ಳಾಲ: ಅಸ್ಸಾಲಾಮು ಅಲೈಕುಮ್ ನಮ್ಮೆಲ್ಲರ ಅಭಿಮಾನದ ಬದ್ರಿಯ ಜುಮಾ ಮಸೀದಿ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಹಯಾತುಲ್ ಇಸ್ಲಾಂ ಮದರಸ ಇದರ ಹಳೆ ವಿದ್ಯಾರ್ಥಿಗಳು ಮಸೀದಿ,ಮದರಸ ಅಭಿವೃದ್ಧಿ ಹಾಗೂ ಸಮಾಜದ ಹಿತಗೋಸ್ಕರ ಕಟ್ಟಿ ಬೆಳಸಿದ ಸಂಸ್ಥೆ ಯಾದ ಓಲ್ಡ್ ಸ್ಟೂಡೆಂಟ್ ಅಸೋಸಿಯೇಷನ್ ಹಯಾತುಲ್ ಇಸ್ಲಾಂ ಮದರಸ ದೇರಳಕಟ್ಟೆ ಇದರ 2ನೇ ಮಹಾ ಸಭೆಯು ಸಂಸ್ಥೆಯ ಕಚೇರಿಯಲ್ಲಿ ಕೆ.ಎಂ ರಶೀದ್ ರವರ ಅಧ್ಯಕ್ಷತೆ ಯಲ್ಲಿ ನಡೆಯಿತು. ಸದರ್ ಉಸ್ತಾದ್ ದುವ ದೊಂದಿಗೆ ಆರಂಭಗೊಂಡಿತು ಅಶ್ರಫ್ ಡಿ.ಎ ಸ್ವಾಗತಿಸಿ ವಾರ್ಷಿಕ ವರದಿ ಮಂಡಿಸಿದರು ಶಿಹಾಬುದ್ದಿನ್ ಡಿ ಲೆಕ್ಕ ಪತ್ರ ಮಾಡಿಸಿದರು. ಸೇರಿದ ಸದಸ್ಯರು ಸಲಹೆ ಸೂಚನೆಗಳನ್ನು ನೀಡಿದರು. ಕೆ.ಎಂ ರಶೀದ್ ರವರು ಅಧ್ಯಕ್ಷ ಭಾಷಣ ಮಾಡಿದರು. 2018-2019ನೇ ಸಾಲಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ 15 ಮಂದಿ ಯನ್ನು ಆಯ್ಕೆ ಮಾಡಲಾಯಿತು. ಈ ಪೈಕಿ ಗೌರವಾಧ್ಯಕ್ಷರಾಗಿ ಅಬ್ದುಲ್ ಆರ್ ಅಹ್ಮದ್ ಶೇಟ್, ಯಾಸರ್ ಡಿ ರವರನ್ನು ಅಧ್ಯಕ್ಷರಾಗಿ, ಇಕ್ಬಾಲ್ ಎಚ್ ಆರ್ ರವರನ್ನು ಉಪಾಧ್ಯಕ್ಷ…
Author: UllalaVani
UN NETWORKS ಕೊಣಾಜೆ: ಕೊಣಾಜೆ ಪದವಿನ ಸರ್ಕಾರಿ ಪ್ರೌಢಶಾಲೆಯಲ್ಲಿ 2018-19ನೇ ಸಾಲಿನ ವಿಶ್ವಾಸ ಕಿರಣ ಕಾರ್ಯಕ್ರಮವು ಸೋಮವಾರ ನಡೆಯಿತು. ತಾಲೂಕು ಪಂಚಾಯಿತಿ ಸದಸ್ಯರಾದ ಪದ್ಮಾವತಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ವಿದ್ಯಾರ್ಥಿಗಳು ಯಾವುದೇ ಆತಂಕವಿಲ್ಲದೆ ಆತ್ಮವಿಶ್ವಾಸದ ಮೂಲಕ ಪರೀಕ್ಷೆಯನ್ನು ಬರೆಯುವಂತಾಗಬೇಕು. ಇದಕ್ಕೆ ಪೂರಕವಾಗಿ ಇಂತಹ ಕಾರ್ಯಕ್ರಮಗಳು ಬಹಳಷ್ಟು ಉಪಯೋಗಕಾರಿಯಾಗಿದೆ ಎಂದರು.ಉದ್ಯಮಿ ನಾಸೀರ್ ಕೆ. ಅವರು ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ ವಿದ್ಯಾರ್ಥಿ ಹಂತದಲ್ಲೇ ಶಿಕ್ಷಣದೊಂದಿಗೆ ಉತ್ತಮ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು. ಈ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳಲ್ಲಿ ಅರಿವನ್ನು ಹೆಚ್ಚಿಸುವಲ್ಲಿ ಪರಿಣಾಮಕಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಕೊಣಾಜೆ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಅಚ್ಯುತಗಟ್ಟಿ, ಶಾಲಾ ಮುಖ್ಯೋಪಾಧ್ಯಾಯಿನಿ ಮೀನಾ ಗಾಂವ್ಕರ್, ಮಹಮ್ಮದ್ ಹನೀಫ್ ಹಾಗೂ ಶಾಲಾಭಿವೃದ್ಧಿ ಸಮಿತಿಯ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಕುಸ್ತಿ ಪಂದ್ಯಾಟ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆಯುತ್ತಿದ್ದು, ಈ ಕ್ರೀಡೆಯನ್ನು ಗ್ರಾಮೀಣ ಪ್ರದೇಶದಲ್ಲಿ ಯುವಜನತೆ ಅಭ್ಯಾಸ ಮಾಡಿ ನಮ್ಮ ಊರು ಸೇರಿದಂತೆ ದೇಶಕ್ಕೆ ಹೆಸರು ತರುವ ಕಾರ್ಯ ಮಾಡಬೇಕು ಯುವ ಪ್ರತಿಭೆಗಳಿಗೆ ಇಂತಹ ಪಂದ್ಯಾಟ ವೇದಿಕೆಯಾಗಲಿ ಎಂದು ಉಳ್ಳಾಲ ನಗರಸಭೆಯ ಸದಸ್ಯೆ ಹಾಗೂ ಅಂತರಾಷ್ಟ್ರೀಯ ಫವರ್ ಲಿಫ್ಟರ್ ಗೀತಾಬಾಯಿ ತೊಕ್ಕೊಟ್ಟು ಅಭಿಪ್ರಾಯಪಟ್ಟರು. ಶ್ರೀ ವೀರಮಾರುತಿ ವ್ಯಾಯಾಮ ಶಾಲೆ ಹಾಗೂ ಮೊಗವೀರ ಹಿ.ಪ್ರಾ. ಶಾಲಾ ಹಳೇ ವಿದ್ಯಾರ್ಥಿ ಸಂಘ, ಬ್ರದರ್ಸ್ ಸ್ಪೋಟ್ರ್ಸ್ ಕ್ಲಬ್ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲ ಶಾರದನಿಕೇತನದಲ್ಲಿ ನಡೆಯುತ್ತಿರುವ 71ನೇ ಉಳ್ಳಾಲ ದಸರಾ ಪ್ರಯುಕ್ತ ಸೋಮವಾರ ಶಾರದನಿಕೇತನದ ಸಭಾಂಗಣದಲ್ಲಿ ನಡೆದ ದಿ| ಪೈಲ್ವಾನ್ ಮೋತಿ ಪುತ್ರನ್ ಉಳ್ಳಾಲ ಇವರ ಸ್ಮರಣಾರ್ಥ 18ನೇ ವರ್ಷದ ಬೆಳ್ಳಿಗದೆಯ ಕುಸ್ತಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.ಉಳ್ಳಾಲ ಶ್ರೀ ಶಾರದೋತ್ಸವ ಸಮಿತಿ ಅಧ್ಯಕ್ಷ ಶ್ರೀಕರ ಕಿಣಿ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಶ್ರೀ ವ್ಯಾಘ್ರಚಾಮುಂಡೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕ ಸುಭಾಶ್ ಅಮೀನ್ ದೀಪ…
UN NETWORKS ದೇರಳಕಟ್ಟೆ: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಮಂಗಳೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಪಕ್ಷದ ಕಾರ್ಯಕರ್ತರ ಸಮಾವೇಶ ದೇರಳಕಟ್ಟೆ ಬಿ.ಸಿ.ಸಿ.ಹಾಲ್ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕ್ಷೇತ್ರ ಸಮಿತಿ ಅಧ್ಯಕ್ಷ ಅಬ್ಬಾಸ್ ಕಿನ್ಯ ವಹಿಸಿದ್ದರು. ಮುಖ್ಯ ಭಾಷಣಕಾರರಾಗಿ ಎಸ್.ಡಿ.ಪಿ.ಐ ರಾಜ್ಯ ಕಾರ್ಯದರ್ಶಿ ಅಕ್ರಂ ಹಸನ್ , ಎಸ್.ಡಿ.ಪಿ.ಐ ರಾಜ್ಯ ಸಮಿತಿ ಸದಸ್ಯರಾದ ಜಲೀಲ್ ಕೃಷ್ಣಾಪುರ , ಎಸ್.ಡಿ.ಪಿ.ಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಎಸ್.ಎಚ್. ಭಾಗವಹಿಸಿದ್ದರು. ಜಿಲ್ಲಾ ಸಮಿತಿ ಸದಸ್ಯರಾದ ಝಾಹಿದ್ ಮಲಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು . ಕ್ಷೇತ್ರ ಕಾರ್ಯದರ್ಶಿ ಅಬ್ದುಲ್ ಲತೀಫ್ ಕೋಡಿಜಾಲ್ ಸ್ವಾಗತಿಸಿದರು. ಇರ್ಷಾದ್ ಅಜಿನಡ್ಕ ಕಾರ್ಯಕ್ರಮ ನಿರೂಪಿಸಿದರು. ಝಹೂರ್ ತುಂಬೆ ವಂದಿಸಿದರು.
UN NETWORKS ಉಳ್ಳಾಲ: ಯೇನೆಪೊಯ ವಿಶ್ವವಿದ್ಯಾಲಯದ ಡಾ| ಭುವನೇಶ್ ಸುಖ್ಲಾಲ್ ಕಲಾಲ್ ಮತ್ತು ಸೈಯದ್ ಇಮ್ರಾನ್ ಅವರಿಗೆ “ಯಂಗ್ ರಿಸೆರ್ಚ್” ಪ್ರಶಸ್ತಿ ಯನ್ನು ಕೊಟ್ಟು ಗೌರವಿಸಲಾಯಿತು. ಚೆನ್ನೈನಲ್ಲಿ ವೀನಸ್ ಇಂಟರ್‍ನ್ಯಾಷನಲ್ ಫೌಂಡೇಶನ್ ಆಯೋಜಿಸಿದ “ವಾರ್ಷಿಕ ಹೆಲ್ತ್ ಕೇರ್ ಮೀಟ್ 2018″ರಲ್ಲಿ ಯೇನೆಪೊಯ ವಿಶ್ವವಿದ್ಯಾಲಯದ ಮೈಕ್ರೋಬಯಾಲಜಿ ವಿಭಾಗದ ಡಾ| ಭುವನೇಶ್ ಸುಖ್ಲಾಲ್ ಕಲಾಲ್ ಮತ್ತು ನರ್ಸಿಂಗ್ ವಿಭಾಗದ ಸಯ್ಯದ್ ಇಮ್ರಾನ್ ಅವರಿಗೆ “ಯಂಗ್ ರಿಸೆರ್ಚ್” ಪ್ರಶಸ್ತಿಯನ್ನು ಕೊಟ್ಟು ಗೌರವಿಸಲಾಯಿತು. ಆರೋಗ್ಯ ಸೇವೆ, ರೋಗಿಗಳ ಸುರಕ್ಷತೆ ಮತ್ತು ಆರೈಕೆ ಗುಣಮಟ್ಟವನ್ನು ಸುಧಾರಿಸುವಲ್ಲಿ ಅವರ ಅತ್ಯುತ್ತಮ ಕೊಡುಗೆಗಾಗಿ ಮತ್ತು ಸಂಶೋಧನಾ ವೃತ್ತಿಪರರನ್ನು ಗುರುತಿಸಲು ಈ ಪ್ರಶಸ್ತಿಯನ್ನು ಕೊಡುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
UN NETWORKS ಉಳ್ಳಾಲ: ತಂತ್ರಜ್ಞಾನ ಎಂಬುದು ಇಂಜಿನಿಯರ್ ಗಳಿಗೆ ಮಾತ್ರ ಸೀಮಿತವಾಗಿರದೆ ಪ್ರತಿ ಕ್ಷೇತ್ರದಲ್ಲೂ ಬಳಕೆಯಾಗುತ್ತಿದ್ದು, ಹತ್ತು ವರ್ಷಗಳ ತಂತ್ರಜ್ಞಾನದ ಬೆಳವಣಿಗೆಯಿಂದ ಹಲವು ಕಂಪೆನಿಗಳು ಮುಚ್ಚಿದ್ದರೂ, ಇನ್ನು ಹಲವು ಅಭಿವೃದ್ಧಿಯನ್ನು ಹೊಂದಿದೆ ಎಂದು ಇನ್ಫೋಸಿಸ್ ನ ಹಿರಿಯ ಉಪಾಧ್ಯಕ್ಷ ಗೋಪಿಕೃಷ್ಣನ್ ಹೇಳಿದರು. ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ನಡೆದ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನ ಸಂಸ್ಥೆ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಹತ್ತೊಂಬತ್ತನೇ ಕಾಲೇಜು ವಾರ್ಷಿಕೋತ್ಸವ, ಪ್ರಶಸ್ತಿ ಪ್ರದಾನ ಹಾಗೂ ನೂತನ ಸಾಲಿನ ಕಾಲೇಜು ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು. ಭವಿಷ್ಯದಲ್ಲಿ ನಿರೀಕ್ಷೆಗೂ ಮೀರಿ ವಿನೂತನ ತಂತ್ರಜ್ಞಾನಗಳು ಬರಲಿದ್ದು ಉದ್ಯಮ ರಂಗಕ್ಕೆ ದೊಡ್ಡ ಪ್ರಮಾಣದಲ್ಲಿ ಪ್ರಯೋಜನವಾಗಲಿದೆ. ತಾಂತ್ರಿಕವಾಗಿ ಮುಂದುವರಿಯದ ಹಿನ್ನೆಲೆಯಲ್ಲಿ ಹಿಂದಿನ ಶೇ.70 ರಷ್ಟು ಸಂಸ್ಥೆಗಳು ನಷ್ಟ ಅನುಭವಿಸಿದೆ. ಮುಂದುವರಿದಂತೆ ಮನುಷ್ಯನ ಪ್ರತಿಯೊಂದು ಕೆಲಸಗಳು ಸೆನ್ಸಾರ್ ಮೂಲಕ ನಡೆಯುವ ಯಂತ್ರಗಳು ತಯಾರಾಗಬಹುದು. ಟೆಸ್ಲಾ ಇಲೆಕ್ಟ್ರಾನಿಕ್ ಕಾರುಗಳು ಸೆನ್ಸಾರ್ ಮೂಲಕ ಕಾರ್ಯಾಚರಿಸಲಿದೆ. ಚಾಲಕನ ಪ್ರತಿಯೊಂದು ಲೋಪಗಳು ಸೆನ್ಸಾರ್ ಮೂಲಕ ಪತ್ತೆಹಚ್ಚುವಿಕೆ, ದಿನಕ್ಕೆ…
UN NETWORKS ಉಳ್ಳಾಲ: ಸಮುದ್ರ ತೀರದಿಂದ ಜೆಸಿಬಿ ಮೂಲಕ ಅಗೆದು ರೆಸಾರ್ಟ್ ಸುತ್ತಲೂ ದಾಸ್ತಾನಿರಿಸಿರುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರು ಉಳ್ಳಾಲ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉಳ್ಳಾಲ ಸಮ್ಮರ್ ಸ್ಯಾಂಡ್ ಸಮೀಪವಿರುವ ಗಿಲ್ಟೆಕ್ ಹೆಸರಿನಲ್ಲಿ ನೋಂದಾವಣೆಯಲ್ಲಿರುವ ರೆಸಾರ್ಟ್‍ನಲ್ಲಿ ಅಕ್ರಮ ಮರಳುಗಾರಿಕೆ ನಡೆದಿದೆ. ಮದುವೆ ಸಮಾರಂಭದ ನಿಮಿತ್ತ ಎಕರೆಯಷ್ಟು ಸ್ಥಳದಲ್ಲಿರುವ ರೆಸಾರ್ಟ್‍ನ ನವೀಕರಣ ಕಾಮಗಾರಿ ನಡೆಯುತ್ತಿದೆ. ರೆಸಾರ್ಟ್ ಸುತ್ತಲೂ ಇಂಟರ್ ಲಾಕ್ ಅಳವಡಿಸುವ ಸಲುವಾಗಿ ಸಮುದ್ರ ತೀರದ ಮರಳನ್ನು ಶನಿವಾರ ತಡರಾತ್ರಿಯಿಂದ ಭಾನುವಾರ ಬೆಳಿಗ್ಗೆಯಾಗುಷ್ಟರಲ್ಲಿ ಜೆಸಿಬಿ ಮೂಲಕ ಅಗೆದು ರೆಸಾರ್ಟ್ ಹಿಂಭಾಗದಲ್ಲಿ ಹಲವು ದಿಬ್ಬಗಳಾಗಿ ಶೇಖರಿಸಿಡಲಾಗಿತ್ತು. ಇದನ್ನು ಕಂಡ ಸ್ಥಳೀಯ ಮೀನುಗಾರರು ಆತಂಕ ವ್ಯಕ್ತಪಡಿಸಿ ಕಾಮಗಾರಿ ನಿರ್ವಹಿಸುತ್ತಿರುವ ಜೆಸಿಬಿ ಸಿಬ್ಬಂದಿಯನ್ನು ತಡೆದು, ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಉಳ್ಳಾಲ ಪೊಲೀಸರು ಮರಳು ತೆಗೆಯುವುದನ್ನು ಸ್ಥಗಿತಗೊಳಿಸಿದ್ದಾರೆ. ಮರಳು ತೆಗೆದಲ್ಲಿ ಹೆಚ್ಚಾಗುವುದು ಕಡಲ್ಕೊರೆತ! ಸದ್ಯ ಉಳ್ಳಾಲ ಭಾಗದಲ್ಲಿ ಕಡಲ್ಕೊರೆತ ಹೆಚ್ಚಾಗಿದ್ದು, ಕಡಲಿಗೆ ಮರಳಿನ ಗೋಣಿ ಮತ್ತು ಕಲ್ಲುಗಳನ್ನ ಹಾಕಿ ಕೊರೆತವನ್ನು ನಿಯಂತ್ರಣಕ್ಕೆ ತರುವ…
UN NETWORKS ಉಳ್ಳಾಲ: ಇಲ್ಲಿನ ಸೈಯ್ಯದ್ ಮದನಿ ದರ್ಗಾ ಅಧೀನದಲ್ಲಿ ಕಾರ್ಯಾಚರಿಸುವ ಹಿಫ್ಲ್ ಕುರ್ ಆನ್ . ದ ಅವಾ ಶರೀಯತ್ ಕಾಲೇಜಿನ ವಿದ್ಯಾರ್ಥಿಗಳು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರ 48 ನೇ ಜನ್ಮದಿನಾಚರಣೆಯ ಪ್ರಯುಕ್ತ ದರ್ಗಾ ವಠಾರದಲ್ಲಿ ಸಚಿವರ ದೀರ್ಘಾಯುಷ್ಯ ಮತ್ತು ಆರೋಗ್ಯ ಕಾಪಾಡುವಂತೆ ಹಾಗೂ ಉತ್ಸಾಹದಿಂದ ಜನಸೇವೆಯನ್ನು ಮುಂದುವರಿಸುವಂತೆ ಕುರ್ ಆನ್ ಪಾರಾಯಣ ಹಾಗೂ ದುಆ ನೆರವೇರಿಸಿದರು. ಕೇಂದ್ರ ಜುಮಾ ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಬಾಖವಿ, ಇಬ್ರಾಹಿಂ ಅಹ್ಸನಿ, ಪ್ರ. ಕಾ ಮಹಮ್ಮದ್ ತ್ವಾಹ, ಕಾರ್ಯದರ್ಶಿ ಆಸೀಫ್ ಅಬ್ದುಲ್ಲ, ಕಾರ್ಯಕ್ರಮ ಸಂಯೋಜಕ ಅಹಮ್ಮದ್ ಬಾವಾ ಕೊಟ್ಟಾರ, ಯು.ಟಿ.ಇಲ್ಯಾಸ್, ಇಬ್ರಾಹಿಂ ಕಕ್ಕೆತೋಟ, ಉಪಾಧ್ಯಕ್ಷರುಗಳಾದ ಬಾವ ಮಹಮ್ಮದ್, ಯು.ಕೆ ಮೋನು ಇಸ್ಮಾಯಿಲ್, ಯು.ಕೆ ಇಲ್ಯಾಸ್ ಬಸ್ತಿಪಡ್ಪು, ಅಬೂಬಕರ್ ಕಲ್ಲೂರು, ಹನೀಫ್ ಸೋಲಾರ್, ಎ.ಕೆ ಮೊಯ್ಯುದ್ದೀನ್ ಉಪಸ್ಥಿತರಿದ್ದರು.
UN NETWORKS ಉಳ್ಳಾಲ:ಬದ್ರಿಯಾ ಯಂಗ್ ಮೆನ್ಸ್ ಅಸೋಸಿಯೇಷನ್ ದೇರಳಕಟ್ಟೆ ಎಂಬ ಹೆಸರಿನಲ್ಲಿ ಸಮಾಜ ಸೇವೆ.ಹಾಗೂ ಸಮುದಾಯದ ಬಡ ನಿರ್ಗತಿಕ ಹೆಣ್ಣು ಮಕ್ಕಳ ಉಚಿತ ವಿವಾಹ ಕಾರ್ಯಕ್ರಮದ ಗುರಿಯನ್ನಿಟ್ಟುಕೊಂಡು ನೂತನ ಸಂಘಟನೆಗೆ ಚಾಲನೆಯನ್ನು ನೀಡಲಾಯಿತು. ಇದರ ನೂತನ ಅಧ್ಯಕ್ಷರಾಗಿ ಫೈಝಲ್ ಡಿ.ಎಂ ಆಯ್ಕೆಗೊಂಡಿದ್ದಾರೆ. ದೇರಳಕಟ್ಟೆ ಕಚೇರಿಯಲ್ಲಿ ಜನಾಬ್ ಆಶಿಖ್ ಉಳ್ಳಾಲ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಘಟನೆಯ ಗೌರವಾದ್ಯಕ್ಷರಾಗಿ ಜನಾಬ್ ಹರ್ಷಾದ್ ಕುದ್ರೋಳಿ,ಉಪಾಧ್ಯಕ್ಷರುಗಳಾಗಿ ಹಾರಿಸ್ ಬದ್ಯಾರ್ಮು,ಝಮ್ಮಿಲ್ ಕಣ್ಣೂರ್ನೌ,ಫಾಲ್.ಬಿ. ಕಲಂದರ್ ಹಾಗೂ ಪ್ರದಾನ ಕಾರ್ಯದರ್ಶಿಯಾಗಿ ನೌಷಾದ್ ಬದ್ಯಾರ್, ಜೊತೆ ಕಾರ್ಯದರ್ಶಿಯಾಗಿ ಹಫೀಝ್ ಡಿ.ಎಂ.,ವರ್ಕಿಂಗ್ ಕಾರ್ಯದರ್ಶಿಯಾಗಿ ಪವಾಝ್ ದೇರಳಕಟ್ಟೆ,ಕೋಶಾಧಿಕಾರಿಯಾಗಿ ಆಶಿಖ್ ಉಳ್ಳಾಲ,ಹಾಗೂ 30 ಮಂದಿ ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಆಯ್ಕೆಗೊಳಿಸಲಾಯಿತು.ಸಭೆಯಲ್ಲಿ ಸಂಘಟನೆಯ ನಿರ್ದೇಶಕರಾದ ಜನಾಬ್ ಸಯ್ಯದ್ ಅಲಿ.ಹನೀಫ್ ಜಿ.ಎಂ K.S.A ಘಟಕದ ಸದಸ್ಯರಾದ ಮೊಹಮ್ಮದ್ ಕಲಂದರ್ಜ, ಜನಾಬ್ ಅಝ್ಮಲ್ ಶಾಫಿ,ಸಫ್ರಾನ್,ಆಶಿಕ್ ಜಲಾಲ್ ಬಾಗ್, ಮುಂತಾದವರು ಉಪಸ್ಥಿತರಿದ್ದರು.
UN NETWORKS ತಲಪಾಡಿ: ಭಾರತದ ಈ ಪುಣ್ಯಭೂಮಿಯಲ್ಲಿ ರಕ್ಷಣೆಗೆ ದುರ್ಗೆ, ಸಮೃದ್ಧಿಗೆ ಲಕ್ಷ್ಮೀ, ಜ್ಞಾನಕ್ಕೆ ಸರಸ್ವತಿ ಸೇರಿ ಉತ್ಕಟಗೊಳ್ಳುವ ಆದಿಶಕ್ತಿಯ ಆರಾಧನೆಯೊಂದಿಗೆ ಹತ್ತು ದಿನಗಳ ಕಾಲ ಶ್ರದ್ಧಾಭಕ್ತಿಯಿಂದ ಪೂಜಿಸುವ ನವರಾತ್ರಿ ಹಬ್ಬವು ನಾಡಿನೆಲ್ಲೆಡೆ ಚೈತನ್ಯದ ಅಲೆ ಬೀಸಿದೆ. ನಾವೆಲ್ಲರೂ ಯಾವುದೇ ಫಲಾಪೇಕ್ಷೆಯಿಲ್ಲದೆ ಭಗವಂತನ ಆರಾಧನೆಯನ್ನು ಪ್ರತಿಯೊಂದು ಜೀವಿಯಲ್ಲೂ ಅಂತರ್ಗತವಾಗಿರುವ ದೇವಿಯನ್ನು ಪೂಜಿಸುವ ಮೂಲಕ ಮಾಡಬೇಕು. ವ್ಯಕ್ತಿತ್ವದ ಪರಿಪೂರ್ಣತೆಗೆ ಭಗವಂತನ ಸ್ಮರಣೆಯನ್ನು ಮಾಡುತ್ತಾ ಆ ಮೂಲಕ ಬುದ್ದಿಯ ಜೊತೆಗೆ ನಮ್ಮ ಸಂಸ್ಕಾರವೂ ಬೆಳೆಯಬೇಕೆಂದು ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷರಾರ ಪ್ರೊ.ಎಂ.ಬಿ.ಪುರಾಣಿಕ್ ಅಭಿಪ್ರಾಯಪಟ್ಟರು. ಅವರು ತಲಪಾಡಿಯ ಶಾರದಾ ವಿದ್ಯಾನಿಕೇತನದಲ್ಲಿ ನವರಾತ್ರಿ ಉತ್ಸವದ ಪ್ರಯುಕ್ತ ಹಮ್ಮಿಕೊಳ್ಳಲಾದ ಶಾರದಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳನ್ನು, ಉದ್ದೇಶಿಸಿ ಮಾತನಾಡಿದರು. ವಿಶೇಷವಾಗಿ ಅಲಂಕರಿಸಲಾದ ವೇದಿಕೆಯಲ್ಲಿ ಪ್ರತಿಷ್ಠಾಪಿಸಿದ ಶಾರದಾ ದೇವಿಯನ್ನು ಅಷ್ಟವಧಾನ ಸೇವೆಯ ಮೂಲಕ ಪೂಜಿಸಲಾಯಿತು. ಶಾಲೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ಭಗವದ್ಗೀತೆಯ ಪಠಣ ಹಾಗೂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು, ಶಿಕ್ಷಕ ಹಾಗೂ ಶಿಕ್ಷಕೇತರ ವರ್ಗದವರಿಂದ ಭಜನಾ ಕಾರ್ಯಕ್ರಮವು ನೆರವೇರಿತು. ಈ ಸಂದರ್ಭದಲ್ಲಿ…

