UN NETWORKS ಉಳ್ಳಾಲ: ಸೋಮೇಶ್ವರ ಉಚ್ಚಿಲದ ಬಟ್ಟಪ್ಪಾಡಿ ಅಳಿವೆಯಲ್ಲಿ ಹೂಳು ಸಮಸ್ಯೆಯಿಂದ ಉಂಟಾಗಿದ್ದ ಕೃತಕ ನೆರೆ ಹಾವಳಿಗೆ ಸಂಬಂಧಿಸಿದಂತೆ ಸೋಮೇಶ್ವರ ಗ್ರಾಮ ಪಂಚಾಯತ್ ಆಡಳಿತ ಬುಧವಾರ ಸ್ಪಂದನೆ ನೀಡಿದ್ದು ಬಟ್ಟಪ್ಪಾಡಿ ಬಳಿ ತುಂಬಿರುವ ಹೂಳನ್ನು ಹಿಟಾಚಿ ಮೂಲಕ ತೆಗೆಯುವ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗಿದೆ. ಕಳೆದೆರಡು ದಿನಗಳಿಂದ ಬಟ್ಟಪ್ಪಾಡಿ ಅಳಿವೆ ಬಾಗಿಲಿನಲ್ಲಿ ಹೂಳು ತುಂಬಿ ಸೋಮೇಶ್ವರ ಬಳಿಯ ಹೊಳೆ ಸಮೀಪದ ಮನೆಗಳು ಕೃತಕ ನೆರೆಯಿಂದ ಜಲಾವೃತಗೊಂಡಿತ್ತು. ಬುಧವಾರ ಸಮಸ್ಯೆ ತೀವ್ರವಾದಾಗ ಸ್ಥಳೀಯರು ಆಕ್ರೋಶಿತಗೊಂಡಿದ್ದು ಬಳಿಕ ತಹಶೀಲ್ದಾರ್ ಗುರುಪ್ರಸಾದ್ ಸ್ಥಳಕ್ಕೆ ಭೇಟಿ ನೀಡಿ ಹೂಳು ತೆಗೆಯುವಂತೆ ಸೋಮೇಶ್ವರ ಗ್ರಾಮ ಪಂಚಾಯತ್‍ಗೆ ಆದೇಶ ನೀಡಿದ್ದರು. ತಾತ್ಕಾಲಿಕ ಸಮಸ್ಯೆ ಪರಿಹಾರ : ಸೋಮೇಶ್ವರ ಗ್ರಾಮ ಪಂಚಾಯತ್‍ನಿಂದ ಬುಧವಾರ ಬೆಳಗ್ಗಿನಿಂದಲೇ ಬಟ್ಟಪ್ಪಾಡಿಯಲ್ಲಿ ಹೂಳು ತೆಗೆಯುವ ಕಾರ್ಯಕ್ಕೆ ಚಾಲನೆ ನಿಇಡಲಾಗಿತ್ತು. ಒಂದು ಹಿಟಾಚಿ ಸಂಜೆವರೆಗೆ ಹೂಳು ತೆಗೆಯುವ ಕಾರ್ಯ ಮುಗಿಸಿದ್ದು ಹೊಳೆಯ ನೀರು ಸಮುದ್ರಕ್ಕೆ ಹರಿಯಲು ಆರಂಭಿಸಿದ್ದು ಕೃತಕ ನೆರೆ ತೆರವಾಗಿದ್ದು ಸ್ಥಳೀಯರು ನಿಟ್ಟುಸಿರು…
Author: UllalaVani
UN NETWORKS ಉಳ್ಳಾಲ: ಸೋಮೇಶ್ವರ ಉಚ್ಚಿಲದ ಬೆಟ್ಟಪ್ಪಾಂಡಿಯಲ್ಲಿ ಅಳಿವೆ ಬಾಗಿಲಿನಲ್ಲಿ ಶೇಖರಣೆಗೊಂಡ ಹೂಳಿನಿಂದ ಹೊಳೆ ನೀರು ಸಮುದ್ರಕ್ಕೆ ಹರಿಯದೆ ಕೃತಕ ನೆರೆ ಸೃಷ್ಟಿಯಾಗಿ ಹೊಳೆ ಬದಿಯ ಮನೆಗಳು ಜಲಾವೃತಗೊಂಡು ಸ್ಥಳೀಯ ನಿವಾಸಿಗಳು ಸಂಕಷ್ಟದಲ್ಲಿದ್ದಾರೆ. ಸೋಮೇಶ್ವರ ಗ್ರಾಮದ ಕಜೆ, ಬಟ್ಟಪ್ಪಾಡಿ ಮತ್ತು ಹೊೈಗೆ ಪ್ರದೇಶದಲ್ಲಿ ಜಲಾವೃತಗೊಂಡಿದ್ದು, ಕಳೆದ 10 ದಿನಗಳಿಂದ ಹೂಳು ತುಂಬಿ ಈ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಿದೆ. ಈ ಪ್ರಧೇಶದಲ್ಲಿ ಮಳೆಗಾಲ ಮುಗಿದ ಬಳಿಕ ಹೊಳೆಯ ನೀರು ಹರಿವಿನ ಪ್ರಮಾಣ ಕಡಿಮೆಯಾಗಿದ್ದು ಇದರಿಂದ ಹೊೈಗೆ ಶೇಖರಣೆಗೊಳ್ಳುತ್ತಿದ್ದು ಅಲೆಯೊಂದಿಗೆ ಮರಳೂ ಬಂದು ರಾಶಿ ಬೀಳುತ್ತಿದೆ. ಪ್ರತಿವರ್ಷ ಇಂತಹ ಪ್ರಸಂಗ ಸರ್ವೇ ಸಾಮಾನ್ಯವಾಗಿದ್ದು ಸೋಮೇಶ್ವರ ಪಂಚಾಯಿತಿ ಅನುದಾನದಲ್ಲಿ ಜೆಸಿಬಿ ಮುಖಾಂತರ ಹೂಳು ತೆಗೆಯಲಾಗುತ್ತಿತ್ತು. ಅದರೆ ಕೆಲವೊಂದು ತಾಂತ್ರಿಕ ಕಾರಣಗಳಿಂದ ಈ ಬಾರಿ ಪಂಚಾಯತ್ ಹೂಳು ತೆಗೆದಿರಲಿಲ್ಲ ಈ ಕಾರಣದಿಂದ ಹೂಳಿನ ಸಮಸ್ಯೆ ಹಗೇಯೇ ಉಳಿದಿತ್ತು. ಮರಳುಗಾರಿಕೆ ತಡೆಯಿಂದ ಸಮಸ್ಯೆ : ಕಳೆದ ಹಲವು ದಿನಗಳಿಂದ ಈ ಪ್ರದೇಶದಲ್ಲಿ ಆಕ್ರಮ ಮರಳುಗಾರಿಕೆ ನಡೆಯುತ್ತಿತ್ತು ಈ…
UN NETWORKS ದೇರಳಕಟ್ಟೆ: ಗ್ರಾಮೀಣ ಭಾಗದ ಶಸ್ತ್ರಚಿಕಿತ್ಸಕರು ನಗರದ ವೈದ್ಯರಂತೆ ಹೆಚ್ಚಿನ ಜ್ಞಾನ ಹೊಂದಿದ್ದರೂ ಅವರನ್ನು ಗುರುತಿಸುವ ಕಾರ್ಯ ನಡೆದಿಲ್ಲ. ಗ್ರಾಮೀಣ ಭಾಗ ಹಾಗೂ ನಗರದ ವೈದ್ಯರ ನಡುವಿನ ವೈದ್ಯರ ಹೊಂದಾಣಿಕೆಯ ಕೊರತೆಯನ್ನು ಸರಿದೂಗಿಸಲು ರಾಷ್ಟ್ರಮಟ್ಟದಲ್ಲಿ ಗ್ರಾಮೀಣ ಶಸ್ತ್ರಚಿಕಿತ್ಸಾ ತಜ್ಞರ ರಾಷ್ಟ್ರಮಟ್ಟದ ಎಸೋಸಿಯೇಶನ್ ಆರಂಭಿಸಲಾಯಿತು ಎಂದು ಡಾ. ಗ್ರಾಮೀಣ ಶಸ್ತ್ರಚಿಕಿತ್ಸಾ ತಜ್ಞರ ರಾಷ್ಟ್ರಮಟ್ಟದ ಎಸೋಸಿಯೇಶನ್ ಅಧ್ಯಕ್ಷ ಡಾ. ಜಿ.ಎಸ್. ಜ್ಞಾನಗುರು ಸ್ವಾಮಿ ಹೇಳಿದರು. ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನದ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಶಸ್ತ್ರಚಿಕಿತ್ಸಾ ವಿಭಾಗದ ಆಶ್ರಯದಲ್ಲಿ ಕ್ಷೇಮ ಆಸ್ಪತ್ರೆಯ ಸೆಮಿನಾರ್ ಹಾಲ್‍ನಲ್ಲಿಎರಡು ದಿನಗಳ ಕಾಲ ನಡೆದ ಗ್ರಾಮೀಣ ಭಾಗದ ಶಸ್ತ್ರಚಿಕಿತ್ಸಕ ತಜ್ಞರ ರಾಷ್ಟ್ರೀಯ ಸಮ್ಮೇಳನ “ಆಸ್ರಿಕಾನ್” -2018ರ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ಜನರ ಜೊತೆಗೆ ಬೆರೆತು ಅವರಿಗೆ ಉತ್ತಮ ಗುಣಮಟ್ಟದ ಸೇವೆ ನೀಡಲು ಶ್ರಮಿಸಬೇಕು. ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸುವುದು ಅಷ್ಟೊಂದು ಸುಲಭ ಸಾಧ್ಯವಿಲ. ಸವಾಲುಗಳನ್ನು ಎದುರಿಸಿ ಮುನ್ನಡೆಯಬೇಕು ಎಂದು ನುಡಿದರು.ಕ್ಷೇಮ ಡೀನ್…
UN NETWORKS ತಲಪಾಡಿ: ಥಾಯ್ಲೆಂಡ್‍ನಲ್ಲಿ ನಡೆದ ಅಂತರಾಷ್ಟ್ರೀಯ ಟಿಕ್ವಾಂಡೋಂ ಚಾಂಪಿಯನ್‍ಶಿಪ್‍ನಲ್ಲಿ ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳ ತಂಡ ಸ್ಪರ್ಧಿಸಿ ಮೂರು ಬೆಳ್ಳಿ ಮತ್ತು 6 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. ವಿದ್ಯಾರ್ಥಿಗಳಾದ ರಕ್ಷತ್ ಒಂದು ಬೆಳ್ಳಿ ಮತ್ತು ಒಂದು ಕಂಚಿನ ಪದಕ ಗೆದ್ದುಕೊಂಡರೆ, ಗೌತಮ್ ಮತ್ತು ಗಣೇಶ್ ತಲಾ ಒಂದೊ ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ರಚನಾ 2ಕಂಚಿನ ಪದಕ, ಯಶಸ್, ವಿಲಾಸ್ ಮತ್ತು ಕೀರ್ತನ್ ತಲಾ ಒಂದೊಂದು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ. ಗುರುರಾಜ್ ಇಟಗಿ ಅವರಿಂದ ತರಬೇತು ಪಡೆದಿದ್ದರು. ಮೂರು ಬೆಳ್ಳಿ ಮತ್ತು ಕಂಚಿನ ಪದಕ ಮಹಾರಾಷ್ಟ್ರದ ಪುಣೆಯ ಛತ್ರಪತಿ ಅಂತರಾಷ್ಟ್ರೀಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಟಿಕ್ವಾಂಡೋಂ ಚಾಂಪಿಯನ್ ಶಿಪ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ ಮತ್ತು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಚಾಂಪಿಯನ್ ಶಿಪ್‍ನಲ್ಲಿ ಅತ್ಯಧಿಕ ಪದಕಗಳನ್ನು ಪಡೆಯುವ ಮೂಲಕ ದೆಹಲಿಯ ತಂಡ…
UN NETWORKS ತೊಕ್ಕೊಟ್ಟು : ಚರ್ಚ್ ವಾಳೆಗಳ ನಡುವೆ ಒಗ್ಗಟ್ಟು ಮತ್ತು ಬಲವನ್ನು ಹೆಚ್ಚಿಸುವ ಉದ್ದೇಶದಿಂದ ವಾಳೆಗಳ ನಡುವಿನ ಕ್ರೀಡಾಕೂಟ ಸಹಕಾರಿ ಎಂದು ತೊಕ್ಕೊಟ್ಟು ಸಂತ ಸೆಬೆಸ್ತಿಯನ್ನರ ಚರ್ಚಿನ ಪ್ರಧಾನ ಧರ್ಮಗುರು ಫಾ. ಜೆ.ಬಿ ಸಲ್ದಾನ್ಹ ಅಭಿಪ್ರಾಯಪಟ್ಟರು. ಅವರು ಸಿ.ಎಲ್.ಸಿ ಪೆರ್ಮನ್ನೂರು ತೊಕ್ಕೊಟ್ಟು ಪೆರ್ಮನ್ನೂರು ಚರ್ಚ್ ಮೈದಾನದಲ್ಲಿ ವಾಳೆಗಳ ನಡುವೆ ಭಾನುವಾರ ಆಯೋಜಿಸಿದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.ಸಿ.ಎಲ್.ಸಿ ಸಮುದಾಯ ದ ನಿರ್ದೇಶಕ ಫಾ.ಮ್ಯಾಕ್ಸಿಂ ಮಿಸ್ಕಿತ್, ಸಿ.ಎಲ್.ಸಿ ಕೇಂದ್ರದ ಅಧ್ಯಕ್ಷ ಉಲ್ಲಾಸ್ ಡಿಸೋಜ, ಸಹಾಯಕ ಧರ್ಮಗುರು ಫಾ. ಲೈಝಿಲ್ ಮುಖ್ಯ ಅತಿಥಿಗಳಾಗಿದ್ದರು.ಪ್ರಮೋದ್, ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ಮೆಲ್ವಿನ್ ಡಿಸೋಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್, ಉಪಸ್ಥಿತರಿದ್ದರು.ಸಿ.ಎಲ್.ಸಿ ಅಧ್ಯಕ್ಷ ಜೋಸೆಫ್ ಡಿಸೋಜ ಸ್ವಾಗತಿಸಿದರು. ಹೆರಾಲ್ಡ್ ಸೆರಾ ವಂದಿಸಿದರು. ಮೌರಿಸ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.
UN NETWORKS ದೇರಳಕಟ್ಟೆ: ಆರೋಗ್ಯಕರ ಶರೀರಕ್ಕೆ ಪ್ರತಿಯೊಂದು ಅವಯಗಳೂ ಆರೋಗ್ಯಯುತವಾಗಿರಬೇಕು, ಅದೇ ರೀತಿ ದೇಶದಲ್ಲಿರುವ ಪ್ರತಿಯೊಂದು ರಾಜ್ಯಗಳೂ ಅಭಿವೃದ್ಧಿ ಕಂಡಾಗ ಮಾತ್ರವೇ ಸರ್ಕಾರದ ಯೋಜನೆಗಳು ಫಲಪ್ರದವಾಗಲು ಸಾಧ್ಯ ಎಂದು ನಾಗಲ್ಯಾಂಡ್ ರಾಜ್ಯಪಾಲ ಪಿ.ಬಿ.ಆಚಾರ್ಯ ಅಭಿಪ್ರಾಯಪಟ್ಟರು. ಉತ್ತರ ರಾಜ್ಯಗಳಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಅಸ್ಸಾಂನ ರಾಮ್‍ಕುಯಿ ಜಿಮ್ ಹಾಗೂ ಅರುಣಾಚಲ ಪ್ರದೇಶದ ಲತ್ಸಮ್ ಕಿಮುನ್ ಅವರಿಗೆ ನಿಟ್ಟೆ ವಿಶ್ವವಿದ್ಯಾಲಯದ ವತಿಯಿಂದ ದೇರಳಕಟ್ಟೆ ಕ್ಷೇಮಾ ಸಭಾಂಗಣದಲ್ಲಿ ಗುರುವಾರ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ನಿಟ್ಟೆ ವಿಶ್ವವಿದ್ಯಾಲಯ ಉತ್ತರ ಭಾರತ ರಾಜ್ಯಗಳ ಹೆಣ್ಮಕ್ಕಳಿಗೆ ಉಚಿತ ಶಿಕ್ಷಣ ನೀಡುವ ಜೊತೆಗೆ ಆ ಭಾಗದಲ್ಲಿ ಸೇವೆ ಸಲ್ಲಿಸಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಮೂಲಕ ಸೇವೆಗೆ ಇನ್ನಷ್ಟು ಬಲ ತುಂಬುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ವಿಶ್ವವಿದ್ಯಾಲಯದ ಕುಲಾಧಿಪತಿ ಎನ್.ವಿನಯ್ ಹೆಗ್ಡೆ ಮಾತನಾಡಿ, ವಿದ್ಯಾರ್ಥಿಗಳು ಕಲಿಕೆಯ ಸಂದರ್ಭ ಸಾಧನೆ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು, ನಿಟ್ಟೆ ವಿಶ್ವವಿದ್ಯಾಲಯ ಸಾಮಾಜಿಕಾಗಿ ಸೇವೆಯಲ್ಲಿ ನಿರತರಾಗಿರುವವರನ್ನು ಸದಾ ಗುರುತಿಸುವ…
UN NETWORKS ಪುತ್ತೂರು: ಎಸ್.ಡಿ.ಪಿ.ಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಇದರ ವತಿಯಿಂದ ಇತ್ತೀಚೆಗೆ ನಮ್ಮನ್ನಗಲಿದ ಎಸ್.ಡಿ.ಪಿ.ಐ ಪುತ್ತೂರು ನಗರಾಧ್ಯಕ್ಷರಾದ ಹಂಝಾ ಅಫ್ನಾನ್ ರವರ ಸಾರ್ವಜನಿಕ ಸಂತಾಪ ಸಭೆಯು ಪುತ್ತೂರು ಟೌನ್ ಬ್ಯಾಂಕ್ ಹಾಲ್ ನಲ್ಲಿ ನಡೆಯಿತು. ಕಾರ್ಯಕ್ರಮದ ಅದ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿ ಅಧ್ಯಕ್ಷರಾದ ಕೆ.ಎ ಸಿದ್ಧೀಕ್ ವಹಿಸಿದರು. ಪುತ್ತೂರು ವಿದಾನಭಾ ಸಮಿತಿ ಉಪಾದ್ಯಕ್ಷರಾದ ಇಬ್ರಾಹಿಂ ಹಾಜಿ ಸಾಗರ್ ರವರು ಪ್ರಾಸ್ತಾವಿಕ ಮಾತುಗಳನ್ನಾಡಿ ಸಂತಾಪ ಸೂಚಿಸಿದರು. ಎಸ್.ಡಿ.ಪಿ.ಐ ರಾಜ್ಯ ಉಪಾದ್ಯಕ್ಷರಾದ ಮಜೀದ್ ಖಾನ್, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ಸದಸ್ಯರಾದ ಶಾಫಿ ಬೆಳ್ಳಾರೆ, SDPI ಜಿಲ್ಲಾ ಉಪಾದ್ಯಕ್ಷ ಆನಂದ ಮಿತ್ತಬೈಲ್,SDPI ಜಿಲ್ಲಾ ಕಾರ್ಯದರ್ಶಿ ಇಕ್ಬಾಲ್ ಬೆಳ್ಳಾರೆ, ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪುತ್ತೂರು ಜಿಲ್ಲಾಧ್ಯಕ್ಷರಾದ ಅಬೂಬಕ್ಕರ್ ರಿಜ್ವಾನ್, SDPI ಜಿಲ್ಲಾ ಸಮಿತಿ ಸದಸ್ಯರಾದ ಜಾಬೀರ್ ಅರಿಯಡ್ಕ, ಪುತ್ತೂರು ನಗರ ಸಭಾ ಸದಸ್ಯೆ ಕೆ ಫಾತಿಮತ್ ಝೂರಾ ಹಾಗೂ ಹಲವಾರು ನಾಯಕರು ಅಗಲಿದ ನಾಯಕನಿಗೆ ಸಂತಾಪ…
UN NETWORKS ಉಳ್ಳಾಲ: ದೇರಳಕಟ್ಟೆಯ ಅನ್ಸಾರುಲ್ ಮುಸ್ಲಿಮೀನ್ ಅಸೋಶಿಯೇಸನ್ ಇದರ 2018-19ನೇ ಸಾಲಿನ ನೂತನ ಅಧ್ಯಕ್ಷರಾಗಿ ಹಾಜಿ ಇಲ್ಯಾಸ್.ಡಿ ಆಯ್ಕೆ. ಉಪಾಧ್ಯಕ್ಷರಾಗಿ ಸಿದ್ದೀಕ್ ಡಿ.ಎಂ ಕೋಶಾಧಿಕಾರಿಯಾಗಿ ಮುಹಮ್ಮದ್ ಯಾಸೀನ್, ಕಾರ್ಯದರ್ಶಿಯಾಗಿ ಅಮೀರ್ ಹುಸೈನ್, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಮುತ್ತಲಿಬ್, ಅಬ್ದುಲ್ ಖಾದರ್ ಐ, ಲೆಕ್ಕಪರಿಶೋಧಕರಾಗಿ ಅಬ್ದುಲ್ ಲತೀಫ್ ಡಿ, ಮತ್ತು 22 ಕಾರ್ಯಕಾರಿ ಸಮಿತಿ ಸದಸ್ಯರನ್ನು ಅಯ್ಕೆ ಮಾಡಲಾಯಿತು.
UN NETWORKS ಉಳ್ಳಾಲ: ಬ್ಲಡ್ ಡೋನರ್ಸ್ ಮಂಗಳೂರು ಮತ್ತು ಸ್ಪೈಸ್ ಸ್ಪೋರ್ಟ್ಸ್ ಕ್ಲಬ್ ಹಾಗೂ ಮಂಗಳೂರು ಫಾದರ್ ಮುಲ್ಲರ್ ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಶಿಬಿರ ತಲಕ್ಕಿ ಜಂಕ್ಷನ್ ನಲ್ಲಿ ನಡೆಯಿತು. ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷ ಸಿದ್ದೀಕ್ ಮಂಜೇಶ್ವರ, ಪ್ರ.ಕಾರ್ಯದರ್ಶಿ ನವಾಝ್ ಕೋಲ್ಲಕೋಡಿ, ಸದಸ್ಯರಾದ ಸೀರಾಜ್ ಪಜೀರ್, ಫಯಾಝ್ ಮಾಡೂರು, ನೌಫಲ್ ಬಜ್ಪೆ, ಇಮ್ರಾನ್ ಮೊಂಟೆಪದವು, ಸ್ಪೈಸ್ ಸ್ಪೋರ್ಟ್ಸ್ ಕ್ಲಬ್ ಮತ್ತು ಚಾರಿಠಿನ ಗೌರವಾಧ್ಯಕ್ಷ ಉಮರಬ್ಬ ತಲೆಕ್ಕಿ, ಅಧ್ಯಕ್ಷ ಅಶ್ರಫ್ ಯು.ಎಸ್.ಎ ಸದಸ್ಯರಾದ ಶರೀಫ್ ತಲೆಕ್ಕಿ, ನಾಸೀರ್ ತಲೆಕ್ಕಿ, ಉಮರ್ ಫಾರೂಕ್ ತೆಲಕ್ಕಿ, ಬತೀಷ್ , ಜಲಾಲ್, ಅಲ್ತಾಫ್, ಉಸ್ಮಾನ್ ಫಝಲ್, ರಿಝಾಝ್ ಉಪಸ್ಥಿತರಿದ್ದರು.
UN NETWORKS ಮಲಾರ್ :ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ದೇಶದಾದ್ಯಂತ ಜನಾರೋಗ್ಯವೇ ರಾಷ್ಟ್ರ ಶಕ್ತಿ ಅಭಿಯಾನದ ಅಂಗವಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಮಲಾರ್ ವಲಯದ ವತಿಯಿಂದ ಮ್ಯಾರಾಥಾನ್ ಓಟ ಹಾಗೂ ಯೋಗ ಪ್ರದರ್ಶನ ಮತ್ತು ಸಭಾ ಕಾರ್ಯಕ್ರಮ ನಡೆಯಿತು. ಹರೇಕಳ ಕೊಜಪಾಡಿಯಿಂದ ಪಾವೂರು ಕಡವಿನ ಬಳಿ ವರೆಗೆ ನಡೆದ ಮ್ಯಾರಾಥಾನ್ ಓಟಕ್ಕೆ ಪಾಪ್ಯುಲರ್ ಫ್ರಂಟ್ ಮಲಾರ್ ವಲಯ ಅಧ್ಯಕ್ಷರಾದ ಎಸ್.ಎಂ.ಬಶೀರ್ ರವರು ಧ್ವಜವನ್ನು ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ “ಸದೃಢ ,ಭಯಮುಕ್ತ ಭಾರತ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ದೈಹಿಕ ಹಾಗೂ ಮಾನಸಿಕ ವಾಗಿ ಸನ್ನದ್ಧರಾಗಬೇಕೆಂದು” ಕರೆ ನೀಡಿದರು. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯ ಮಲಾರ್ ವಲಯ ಕಾರ್ಯದರ್ಶಿ ನಾಸಿರ್ ಮಲಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು ಈ ಸಂದರ್ಭದಲ್ಲಿ ಪಿಎಫ್ಐ ಮಲಾರ್ ವಲಯ ಸಮಿತಿ ಸದಸ್ಯರಾದ ಹಾರೀಶ್ ಮಲಾರ್, SDPI ಜಿಲ್ಲಾ ಸಮಿತಿ ಸದಸ್ಯರಾದ…

