UN NETWORKS
ಮುಡಿಪು: ಸಖಾಫಿಯ್ಯಾ ರಾತೀಬ್ ಮಜ್ಲಿಸ್ ಕಾರ್ಯಕ್ರಮ ಮುಡಿಪುನ ಎಜ್ಯು ಪಾರ್ಕ್ ನಲ್ಲಿ ಶುಕ್ರವಾರ ರಾತ್ರಿ ನಡೆಯಿತು. ಮಾಸಿಕವಾಗಿ ನಡೆಯುತ್ತಿರುವ ಕಾರ್ಯಕ್ರಮದ ನೇತೃತ್ವವನ್ನು ಅಸ್ಸಯ್ಯಿದ್ ಮುಹಮ್ಮದ್ ಅಶ್ರಫ್ ಆಸ್ಸಖಾಫ್ ತಂಙಳ್ ಅದೂರು ವಹಿಸಿದ್ದರು.
ಸಂಸ್ಥೆಯ ಮ್ಯಾನೇಜರ್ ಜಲಾಲುದ್ದೀನ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿದರು.
ರಫೀಕ್ ಸಅದಿ ದೇಲಂಪಾಡಿ ಮುಖ್ಯ ಪ್ರಭಾಷಣಗೈದರು.ಅಯೂಬ್ ಹಾಜಿ ಮುದುಂಗಾರು, ಬಶೀರ್, ಕುಂಞ ಹಾಜಿ ಬಾಳೆಪುಣಿ, ಸಂಸ್ಥೆಯ ಸಮಿತಿ ಸದಸ್ಯರಾದ ಪುತ್ತುಬಾವ ಹಾಜಿ ಸಂಬರ್ ತೋಟ, ಮುಹಮ್ಮದ್ ಹಾಜಿ ಪುರುಷಕೋಡಿ, ಅಬ್ಬು ಪುರುಷಕೋಡಿ, ಬಶೀರ್ ಹಾಜಿ ಸಿಟಿ, ಬಶೀರ್ ಕುರ್ನಾಡು, ಜಮಾಲುದ್ದೀನ್ ಸಖಾಫಿ ಮುಂತಾದವರು ಉಪಸ್ಥಿತರಿದ್ದರು. ಕಾರ್ಯದರ್ಶಿ ಎ.ಇ ಅಬ್ದುರ್ರಹ್ಮಾನ್ ರಝ್ವಿ ಸಾಲೇತೂರು ಸ್ವಾಗತಿಸಿದರು. ಬಾಳೆಪುಣಿ ಗ್ರಾ.ಪಂ ಉಪಾಧ್ಯಕ್ಷ ಬಶೀರ್ ಸಾಜ್‍ಗಾರ್ ವಂದಿಸಿದರು.


