Author: UllalaVani

Kannada News From Coastal Karnataka

UN NETWORKS ಕೈರಂಗಳ: ಕರ್ನಾಟಕ ರಕ್ಷಣಾ ವೇದಿಕೆ ಕೈರಂಗಳ ಘಟಕ, ಮೋಂಟುಗೋಳಿ ಇದರ ವತಿಯಿಂದ ಕರ್ನಾಟಕ ರಾಜ್ಯೋತ್ಸವದ ಪ್ರಯುಕ್ತ ದ್ವಜಾರೋಹಣ ಕಾರ್ಯಕ್ರಮ ನಡೆಯಿತು. ಜಲೀಲ್ ಮೋಂಟುಗೋಳಿ ದ್ವಜಾರೋಹಣ ನೆರವೇರಿಸಿ ಕೊಟ್ಟರು. ಅಬುಶಾಲಿ ತಡಂಗಾಯಿ, ವಿಶ್ವನಾಥ ಪೂಜಾರಿ, ಇಸ್ಮಾಯಿಲ್ ಎರ್ಮಾಡಿ, ಅಬ್ಬಾಸ್ ಕೋಟ್ರಸ್, ಅಬ್ಬಾಸ್ ಲಾಡ, ಅಬೂಬಕ್ಕರ್ ಆಳ್ವರಬೆಟ್ಟು, ಶಾಫಿ ದೆಂಬಲೆ, ಮಹಮ್ಮದ್ ಮೋಂಟುಗೋಳಿ , ಅಲಿ ತಡಂಗಾಯಿ , ನಾಸಿರ್ ಮೋಂಟುಗೋಳಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು. ಭಾಗವಹಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು.

Read More

UN NETWORKS ಉಳ್ಳಾಲ: ಕಳೆದ ಕೆಲವು ತಿಂಗಳಿಂದ ಮರಳು ಸಿಗದೆ ಹಲವಾರು ಕಾರ್ಮಿಕರು ಕೆಲಸ ಇಲ್ಲದೆ ಕುಟುಂಬ ಕಂಗಾಲಾಗಿದೆ. ಹಲವು ಧಾರ್ಮಿಕ ಕ್ಷೇತ್ರಗಳ ಕೆಲಸ ಸ್ಥಗಿತಗೊಂಡಿದೆ. ಇದರ ವಿರುದ್ಧ ಶನಿವಾರ ತೊಕ್ಕೊಟ್ಟು ಬಸ್ ನಿಲ್ದಾಣ ಬಳಿ ಸಾಂಕೇತಿಕ ಪ್ರತಿಭಟನೆ ನಡೆಸಲಾಗುತ್ತಿದ್ದು ಸಮಸ್ಯೆ ಪರಿಹಾರ ಆಗದಿದ್ದಲ್ಲಿ ಜಿಲ್ಲಾ ಮಟ್ಟದಲ್ಲಿ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಂಗಳೂರು ಕ್ಷೇತ್ರ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಹೇಳಿದರು. ರಾಜ್ಯದಲ್ಲಿ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಜಮೀನು ಕನ್ವರ್ಷನ್ ಆಗುತ್ತಿಲ್ಲ, ಇದರಿಂದಾಗಿ ಜನರು ಸಮಸ್ಯೆಗೆ ಸಿಲುಕಿದ್ದಾರೆ. ಹದಿನೈದು ದಿನದಲ್ಲಿ ಸಮಸ್ಯೆ ಪರಿಹರಿಸುವ ಬಗ್ಗೆ ಸಚಿವರು ಹೇಳಿದ್ದರೂ ಪ್ರಯೋಜನವಾಗಿಲ್ಲ. ಜಿಲ್ಲೆಯಲ್ಲಿ ಅಡಿಕೆಗೆ ಕೊಳೆರೋಗ ಬಂದಿದ್ದು ಸಾವಿರಾರು ಅರ್ಜಿಗಳು ಬಂದಿರುವುದರಿಂದ ಪರಿಹಾರ ನೀಡಲು ಹಣವಿಲ್ಲ ಎಂದು ಸರ್ಕಾರ ಹೇಳುತ್ತಿರುವುದು ಖೇದಕರ ಎಂದು ತೊಕ್ಕೊಟ್ಟುವಿನಲ್ಲಿರುವ ಕ್ಷೇತ್ರ ಬಿಜೆಪಿ ಕಚೇರಿಯಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಮುಖಂಡರಾದ ಸಂಜೀವ ಶೆಟ್ಟಿ ಅಂಬ್ಲಮೊಗರು, ಹರಿಯಪ್ಪ ಸಾಲ್ಯಾನ್, ಮೋಹನ್ ರಾಜ್, ಹೇಮಂತ್ ಶೆಟ್ಟಿ,…

Read More

UN NETWORKS ಉಳ್ಳಾಲ: ಮನೆ ಮಂದಿಯೆಲ್ಲ ಮಲಗಿದ್ದ ವೇಳೆಯೇ ಮನೆ ಹಿಂಬಾಗಿಲಿನಿಂದ ನುಗ್ಗಿದ ಕಳ್ಳರು 9 ಪವನ್ ಚಿನ್ನ, 1 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾದ ಘಟನೆ ಅಂಬಿಕಾರೋಡ್ ಲೇಔಟ್ ಬಿ.ಬ್ಲಾಕಲ್ಲಿ ಬುಧವಾರ ತಡರಾತ್ರಿ ನಡೆದಿದೆ. ನಿರ್ಮಲ ಬಡಾವಣೆ ನಿವಾಸಿ ನವೀನ್ ಗಟ್ಟಿ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದೆ. ನವೀನ್ ಅವರು ಪತ್ನಿ ಉಷಾ ಮತ್ತು ಮಗ ಚಿರಾಗ್ ನೊಂದಿಗೆ ಬುಧವಾರ ರಾತ್ರಿ ಊಟ ಮುಗಿಸಿ ಒಂದೇ ಕೋಣೆಯಲ್ಲಿ ಮಲಗಿದ್ದರು.ಪಕ್ಕದ ಕೋಣೆಯಲ್ಲಿ ಉಷಾರ ತಾಯಿ (ನವೀನ್ ಅವರ ಅತ್ತೆ) ವಿಮಲಾ ಅವರು ಮಲಗಿದ್ದು ಎರಡೂ ಕೋಣೆಗಳ ಬಾಗಿಲು ತೆರೆದಿತ್ತೆನ್ನಲಾಗಿದೆ.ಮನೆ ಹಿಂಬಾಗಿಲಿನ ಕಿಟಕಿಯ ಬಾಗಿಲು ತೆರೆದಿದ್ದು ಇದರ ಲಾಭ ಪಡೆದ ಕಳ್ಳರು ಕಿಟಕಿಯ ಮೂಲಕ ಹಿಂಬಾಗಿಲಿನ ಒಳಗಿನ ಚಿಲಕ ಸರಿಸಿ ಬಾಗಿಲು ತೆರೆದು ಒಳ ನುಗ್ಗಿದ್ದು, ನವೀನ್ ಅವರು ಮಲಗಿದ್ದ ಕೋಣೆಗೆ ನುಗ್ಗಿ ಟೇಬಲ್ ಮೇಲಿಟ್ಟಿದ್ದ ಉಷಾರವರ 6 ಪವನ್ ತೂಕದ ಕರಿಮಣಿ ಸರ, ಶೋಕೇಸ್ ನಲ್ಲಿಟ್ಟಿದ್ದ 3 ಪವನ್ ತೂಕದ…

Read More

UN NETWORKS ಉಳ್ಳಾಲ: ಕನ್ನಡ ಭಾಷೆ ಕೆಳ ಮಟ್ಟದ್ದಾಗಬಾರದು ಎನ್ನುವ ನೆಲೆಯಲ್ಲಿ ನಿಟ್ಟೆ ವಿಶ್ವವಿದ್ಯಾಲಯ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಕುಲಪತಿ ಡಾ.ಸತೀಶ್ ಕುಮಾರ್ ಭಂಡಾರಿ ಹೇಳಿದರು. ನಿಟ್ಟೆ ಡೀಮ್ಡ್ ವಿಶ್ವವಿದ್ಯಾಲಯ ಅಧೀನದ ದೇರಳಕಟ್ಟೆ ಕೆ.ಎಸ್.ಹೆಗ್ಡೆ ವೈದ್ಯಕೀಯ ಆಸ್ಪತ್ರೆ ವತಿಯಿಂದ ಗುರುವಾರ ನಡೆದ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣಗೈದು ಮಾತನಾಡಿದರು.ಕನ್ನಡಿಗರು ಎಷ್ಟೇ ಕಷ್ಟ ಬಂದರೂ ಛಲ ಬಿಡುವುದಿಲ್ಲ ಎನ್ನುವುದಕ್ಕೆ ಧ್ವಜ ಬಣ್ಣ ಸಾಕ್ಷಿ. ನಿಟ್ಟೆ ವಿಶ್ವವಿದ್ಯಾಲಯದಲ್ಲಿ ಆಂಗ್ಲ ಭಾಷೆ ಹೆಚ್ಚು ಬಳಕೆಯಲ್ಲಿದ್ದರೂ ನಾಡಿನ ಭಾಷೆ ಕಡಿಗಣಿಸಿಲ್ಲ. ವಿವಿಯಲ್ಲಿ ಕನ್ನಡ ಸಿಬ್ಬಂದಿ ನೇಮಕ, ಕನ್ನಡೇತರರಿಗೆ ಭಾಷೆ ಕಲಿಸುವಿಕೆ, ಕನ್ನಡ ತುಳು ಇಂಗ್ಲೀಷ್ ಡಿಕ್ಷಿನರ್ ತಯಾರಿ ಸಹಿತ ಹಲವು ಯೋಜನೆಗಳನ್ನು ರೂಪಿಸಲಾಗಿದೆ. ವಿವಿಧ ವಿಭಾಗದಿಂದ ಹಮ್ಮಿಕೊಳ್ಳುವ ಕಾರ್ಯಕ್ರಮಗಳಿಗೆ ಸಹಕಾರ ನೀಡಲು ವಿವಿ ಬದ್ಧ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಸಾಹಿತಿ ಡಾ.ಶಿವಾನಂದ ಪ್ರಭು, ನಿಟ್ಟೆ ವಿವಿ ಕುಲಸಚಿವೆ ಡಾ.ಇಂದ್ರಾಣಿ ಕರುಣಾಸಾಗರ್, ಕೆ.ಎಸ್.ಹೆಗ್ಡೆ ವೈದ್ಯಕೀಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಶಿವಕುಮಾರ್ ಹಿರೇಮಠ, ಕ್ಷೇಮಾ ವೈಸ್ ಡೀನ್…

Read More

UN NETWORKS ತೊಕ್ಕೊಟ್ಟು: ಗ್ರಾಮೀಣ ಭಾಗದಲ್ಲಿ ಮೊದಲ ಬಾರಿಗೆ ಆರಂಭವಾಗಿರುವ ಜಿಎಸ್ ಟಿ ಸುವಿಧಾ ಕೇಂದ್ರ ಜನರ ಸೇವೆಗಾಗಿ ಪರಿವರ್ತನೆ ಆಗಲಿ ಹಾಗೂ ತೆರಿಗೆ ಕುರಿತ ಜನಜಾಗೃತಿಯನ್ನು ಮೂಡಿಸುವ ಕೇಂದ್ರವಾಗಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ತೊಕ್ಕೊಟ್ಟು ದ್ವಾರಕಾ ಕಾಂಪ್ಲೆಕ್ಸ್ ನಲ್ಲಿ ಕೇಂದ್ರ ಸರಕಾರ ಅನುಮೋದಿಸಿದ ಜಿಎಸ್ ಟಿ ಸುವಿಧಾ ಕೇಂದ್ರವನ್ನು ಗುರುವಾರ ಉದ್ಘಾಟಿಸಿದರು. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ಉದ್ದೇಶದಿಂದ ಸ್ಥಾಪನೆಗೊಂಡ ಕೇಂದ್ರ ಜನಸಾಮಾನ್ಯರಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕಿದೆ. ಸದ್ಯ ಸ್ಥಿತಿಯಲ್ಲಿ ಪ್ರತಿಯೊಬ್ಬರಿಗೂ ಜಿಎಸ್ ಟಿ ಹಾಗೂ ಬ್ಯಾಂಕ್ ಖಾತೆ ಹೊಂದಿರುವುದು ಅತೀ ಅಗತ್ಯ. ಈ ಕುರಿತು ಜನರಿಗೆ ಮಾರ್ಗದರ್ಶನ ಮಾಡಲು ಕೇಂದ್ರ ಬೆಳವಣಿಗೆಯಾಗಲಿ ಎಂದರು. ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ರಹೀಂ ಉಚ್ಚಿಲ್ ಮಾತನಾಡಿ ಚಾಟರ್ಡ್ ಅಕೌಂಟೆಂಟ್ ಮಾಡುವ ಬಹುತೇಕ ಕೆಲಸಗಳನ್ನು ಸುವಿಧಾ ಕೇಂದ್ರ ನಿರ್ವಹಿಸಲಿದೆ. ಕೇಂದ್ರ ಸರಕಾರ ಆಯೋಜಿಸಿದ್ದ 3,600 ಮಂದಿ ಆಯ್ಕೆ ಪ್ರಕ್ರಿಯೆಯಲ್ಲಿ ದೇಶಾದ್ಯಂತ 36…

Read More

UN NETWORKS ಬಾಳೆಪುಣಿ: ಮಂಗಳೂರು ಬಲ್ಮಠದ ದ.ಕ. ಜಿಲ್ಲಾಧಿಕಾರಿ ನಿವಾಸದಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಬುಲ್ ಬುಲ್ಸ್ ನಲ್ಲಿ ಸ.ಉ.ಹಿ.ಪ್ರಾ.ಶಾಲೆ ಬಾಳೆಪುಣಿಯ ವಿದ್ಯಾರ್ಥಿನಿಗಳಾದ ಸಮೀರಾ ಬಾನು ಹಾಗೂ ಸಹನಾಬಾನು ಜಿಲ್ಲಾಧಿಕಾರಿಗಳಿಂದ `ಸುವರ್ಣ ಗರಿ’ ಪ್ರಶಸ್ತಿ ಸ್ವೀಕರಿಸಿದರು. ಶಿಕ್ಷಕಿ ಫ್ಲಾಕ್ ಲೀಡರ್ಸ್ ಚಂದ್ರಾವತಿ ಬಿ.ಬಿ. ಹಾಗೂ ವೀಡಾ ಡಿ’ಸೋಜ ಇವರಿಂದ ತರಬೇತಿ ಪಡೆದಿದ್ದರು.

Read More

UN NETWORKS ಉಳ್ಳಾಲ: ಒಳ್ಳೆಯ ಕೆಲಸ ಮಾಡುವ ಮೂಲಕ ನಮ್ಮ ಸಮಾಜವನ್ನು ಒಟ್ಟು ಮಾಡುವ ಕೆಲಸ ಆಗಬೇಕು. ಸೌಹಾರ್ದತೆಯ ಬೇರು ಬೆಳೆಸಬೇಕು ಎಂದು ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಕೃಷ್ಣ ಗಟ್ಟಿ ಕೋಟೆಕಾರು ಹೇಳಿದರು. ಪೊಸಕುರಲ್ ಬಳಗದ ವತಿಯಿಂದ ಬಿಲ್ಲವ ಸೇವಾ ಸಮಾಜ ಕೊಲ್ಯ, ಸದ್ಬಾವನಾ ವೇದಿಕೆ ಉಳ್ಳಾಲ, ರೋಟರಿ ಸಮುದಾಯ ದಳ ಕೊಲ್ಯ ಸೋಮೇಶ್ವರ ಸಂಯುಕ್ತ ಆಶ್ರಯದಲ್ಲಿ ಕೊಲ್ಯ ನಾರಾಯಣ ಗುರು ಮಂದಿರದಲ್ಲಿ ಮಂಗಳವಾರ ನಡೆದ ಸೌಹಾರ್ದ ದೀಪಾವಳಿ ಸಂಭ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಉಳ್ಳಾಲದಲ್ಲಿ ಸುದ್ದಿವಾಹಿನಿಯೊಂದು ಆರಂಭವಾಗಿ 16ವರ್ಷ ಉರುಳಿದೆ. ಪೊಸಕುರಲ್ ಕಳೆದ ಐದು ವರ್ಷಗಳಿಂದ ಬೇರೆ ಬೇರೆ ಸಂಘ ಸಂಸ್ಥೆಗಳನ್ನು ಒಟ್ಟುಗೂಡಿಸಿ ಸೌಹಾರ್ದ ಇಫ್ತಾರ್, ದೀಪಾವಳಿ, ಕ್ರಿಸ್‍ಮಸ್ ಹಬ್ಬವನ್ನು ನಡೆಸುತ್ತಾ ಬಂದಿದೆ. ಈ ಬಾರಿ ಕೂಡಾ ಇಫ್ತಾರ್ ಕೂಟ ನಡೆಸಿದ್ದಾರೆ. ಉತ್ತಮ ಕೆಲಸ ಮಾಡಿ ನಮ್ಮ ಸಮಾಜವನ್ನು ಉಳಿಸಬೇಕು. ಸೌಹಾರ್ದತೆ ಬೆಳೆಸಬೇಕು ಜತೆಗೆ ಸಂಸ್ಕೃತಿಯನ್ನು ಉಳಿಸಬೇಕು ಎಂದು ಕರೆ ನೀಡಿದರು. ಆಶೀರ್ವಚನ ನೀಡಿದ ಪೆರ್ಮನ್ನೂರು ಚರ್ಚ್‍ನ ಧರ್ಮಗುರು…

Read More

UN NETWORKS ಉಳ್ಳಾಲ: ವಿದ್ಯಾರ್ಥಿನಿಯರು ಶೈಕ್ಷಣಿಕ ಜೀವನದೊಂದಿಗೆ ದೈಹಿಕ ಶಿಕ್ಷಣಕ್ಕೂ ಮಹತ್ವ ನೀಡಿದರೆ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ಉಳ್ಳಾಲ ನಗರ ಸಭೆಯ ಕೌನ್ಸಿಲರ್ ಹಾಗೂ ಅಂತರಾಷ್ಟೀಯ ಮಟ್ಟದ ಕ್ರೀಡಾಪಟು ಗೀತಾ ಬಾಯಿ ಅಭಿಪ್ರಾಯಪಟ್ಟರು. ಹಿರಾ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಆಶ್ರಯದಲ್ಲಿ ಬುಧವಾರ ನಡೆದ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ಸಿದ್ದಿಕ್ ತಲಪಾಡಿ ಹೆಣ್ಣು ಮಕ್ಕಳು ಮನೆಗೆಲಸಕ್ಕೆ ಮಾತ್ರ ಸೀಮಿತವಾಗಿರದೆ ಕ್ರೀಡೆ ಹಾಗೂ ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆಗೈಯಬೇಕು ಎಂದು ವಿದ್ಯಾರ್ಥಿನಿಯರಿಗೆ ಹಿತೋಪದೇಶ ನೀಡಿದರು.ಶಾಂತಿ ಎಜುಕೇಶನಲ್ ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್ ಕರೀಮ್‍ರವರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಹಿರಾ ಸಂಸ್ಥೆಯ ಸಂಚಾಲಕ ರಹಮತುಲ್ಲಾ, ಶಾಂತಿ ಎಜುಕೇಶನಲ್ ಟ್ರಸ್ಟ್ ನ ಸದ್ಯಸರು, ಕಾಲೇಜಿನ ಪ್ರಾಂಶುಪಾಲೆ ವಿಜಯಲಕ್ಷ್ಮಿ ಉಪಸ್ಥಿತರಿದ್ದರು.ಕಾಲೇಜಿನ ಉಪನ್ಯಾಸಕಿ ಸೀಮಾ ಅಸ್ಸಾದಿ ಸ್ವಾಗತಿಸಿ, ಶೃತಿ ವಂದಿಸಿದರು. ಗುಲ್ನಾಝ್ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ದೇರಳಕಟ್ಟೆ: ವಿದ್ಯಾರ್ಥಿಗಳ ಜೀವನದಲ್ಲಿ ದೈಹಿಕ ಹಾಗೂ ಮಾನಸಿಕ ಸಮತೋಲನ ಹೊಂದಲು ದೈಹಿಕ ಶಿಕ್ಷಣವೂ ಪರಿಣಾಮಕಾರಿಯಾದ ವ್ಯಾಯಾಮವಾಗಿದೆ ಎಂದು ಏಕಲವ್ಯ ಪ್ರಶಸ್ತಿ ಪುರಸ್ಕೃತ ಬಾಡಿಬಿಲ್ಡರ್ ರೇಮಂಡ್ ಡಿ’ಸೋಜ ಅಭಿಪ್ರಾಯಪಟ್ಟರು.ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್‍ನ ವಾರ್ಷಿಕ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರೊ| ಎಂ ಅಬ್ದುಲ್ ರಹಮಾನ್ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ಆಟೋಟ ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕ್ರೀಡಾಕೂಟದ ಉಪಯೋಗ ಪಡೆಯಲು ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಖಣಚೂರು ವಿದ್ಯಾ ಸಂಸ್ಥೆಯ ಹಣಕಾಸು ನಿರ್ದೇಶಕ ಅಬ್ದುಲ್ ರಹಮಾನ್ ಮಾತನಾಡಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಉತ್ತಮ ಪ್ರಯತ್ನಕ್ಕಾಗಿ ಶ್ಲಾಘಿಸಿದರು. ಕಣಚೂರು ವಿದ್ಯಾಸಂಸ್ಥೆಯ ವಿವಿಧ ವಿಭಾಗದ ಪ್ರಾಂಶುಪಾಲ ಪ್ರೊ| ಇಕ್ಬಾಲ್ ಅಹಮ್ಮದ್ ಯು.ಟಿ, ಹೇಮಲತಾ, ಲಿನೆಟ್ ಡಿ’ಸೋಜ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲೆ ವಿನಿಟಾ ಗಾಮ ರೋಸ್ ಮಥಾಯಸ್ ಸ್ವಾಗತಿಸಿದರು. ನಂತರ ರಾಷ್ಟ್ರೀಯ ಏಕತೆ ದಿವಸದ ಆಚರಣೆಯ ಸಲುವಾಗಿ ಏಕತೆಗಾಗಿ ಜಾಥಾ ಹಾಗೂ ಏಕತೆಯ ಪ್ರತಿಜ್ಞೆಯನ್ನು ಹಮ್ಮಿಕೊಳ್ಳಲಾಯಿತು. ಶಿಕ್ಷಕಿ ಲವಿನಾ ಜೊವಿಟಾ…

Read More

UN NETWORKS ಉಳ್ಳಾಲ: ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮ ದಿನದ ಅಂಗವಾಗಿ ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ವತಿಯಿಂದ ಬುಧವಾರ ಏಕತಾ ಓಟವು ತೊಕ್ಕೊಟ್ಟು ಬಸ್ ನಿಲ್ದಾಣದಿಂದ ಉಳ್ಳಾಲದ ವೀರರಾಣಿ ಅಬ್ಬಕ್ಕ ಸರ್ಕಲ್‍ವರೆಗೆ ನಡೆಯಿತು. ಹಿರಿಯ ಮುಖಂಡರಾದ ರಾಜಾರಾಮ ಭಟ್ ಅವರು ಮಂಗಳೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ಅವರಿಗೆ ಧ್ವಜವನ್ನು ಹಸ್ತಾಂತರಿಸುವ ಮೂಲಕ ಏಕತಾ ಓಟಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ರಾಜಾರಾಮ ಭಟ್ ಅವರು, ಸರ್ದಾರ್ ವಲ್ಲಭಬಾಯಿ ಪಟೇಲ್ ಅವರು ದೇಶ ಕಂಡ ಅಪ್ರತಿಮ ನಾಯಕರಾಗಿದ್ದಾರೆ. ಅಂದಿನ ಕಾಲದಲ್ಲಿ ರಾಷ್ಟ್ರದೆಲ್ಲೆಡೆ ಹರಡಿಕೊಂಡಿದ್ದ ಕೋಮುದ್ವೇಷವನ್ನು ನಿಯಂತ್ರಣಗೊಳಿಸಿದಲ್ಲದೆ, ಸುಮಾರು 200ಕ್ಕೂ ಹೆಚ್ಚು ಸ್ಥಳಿಯಾಡಳಿತವನ್ನು ಒಟ್ಟುಗೂಡಿಸಿ ಏಕತೆಯನ್ನು ಮೂಡಿಸಿದ ನಾಯಕರಾಗಿದ್ದಾರೆ. ಆದರೆ ಇಂತಹ ಮಹಾನ್ ನಾಯಕನ ಹೆಸರನ್ನು ಕೆಲವು ಸರ್ಕಾರವು ಅಳಿಸುವಂತಹ ಕೆಲಸ ಮಾಡಿತ್ತು. ಆದರೆ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಸರ್ದಾರ್ ವಲ್ಲಭಾಯಿ ಅವರ ನೆನಪನ್ನು ಮತ್ತು ಅವರ ಕೊಡುಗೆಯನ್ನು ಸ್ಮರಿಸುವಂತಹ ಕಾರ್ಯವನ್ನು ಮಾಡುತ್ತಿದೆ…

Read More