UN NETWORKS
ಸೋಮೇಶ್ವರ: ಸೋಮೇಶ್ವರ ದೇವಸ್ಥಾನದ ದೇವರ ಕೆರೆಯಲ್ಲಿ ಮೀನು ಮರಿ ಬಿತ್ತನೆ ಕಾರ್ಯಕ್ರಮ ಭಾನುವಾರ ನಡೆಯಿತು.
ಕುಂಪಲ ಕೇಸರಿ ಮಿತ್ರ ವೃಂದ ಸೇವಾ ಟ್ರಸ್ಟ್ , ಕೇಸರಿ ಮಾತೃ ಮಂಡಳಿ ಇದರ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮೀನುಗಾರಿಕಾ ಇಲಾಖೆ, ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ, ರೋಟರಿ ಕ್ಲಬ್ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ್ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕರಾದ ಸುಶ್ಮಿತಾ ರಾವ್ ಇವರು ಕೆರೆಗಳ ಸ್ವಚ್ಛತೆಯಲ್ಲಿ ಮೀನುಗಳ ಪಾತ್ರಗಳ ಬಗ್ಗೆ ತಿಳಿಸಿದರು.
ಈ ಸಂದರ್ಭ ಜಿ.ಪಂ ಸದಸ್ಯೆ ಧನಲಕ್ಷ್ಮೀ ಗಟ್ಟಿ , ಸೋಮೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ ಗಟ್ಟಿ ವಗ್ಗ, ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಉಚ್ಚಿಲ್, ರೊಟೇರಿಯನ್ ಮಾಧವ ಸುವರ್ಣ, ಕೇಸರಿ ಮಿತ್ರ ವೃಂದದ ಅಧ್ಯಕ್ಷ ನವೀನ್ ಕುಜುಮಗದ್ದೆ, ಟ್ರಸ್ಟಿ ಬಿ. ನಾರಾಯಣ ಕುಂಪಲ, ಶಿವಪ್ರಕಾಶ್ ಉಪಸ್ಥಿತರಿದ್ದರು.
ಸಂದೀಪ್ ಕುಂಪಲ ಸ್ವಾಗತಿಸಿದರು. ಚಂದ್ರಶೇಖರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭ ಸುಮಾರು 2000 ಮೀನುಮರಿಗಳ ಬಿತ್ತನೆ ಮಾಡಲಾಯಿತು.




