UN NETWORKS
ನರಿಂಗಾನ : ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮದ ಮೋರ್ಲ ಬಳಿ ಮನೆಯೊಂದರ ಸಮೀಪವೇ ಮಣ್ಣುಕುಸಿದ ಪರಿಣಾಮ ಮನೆ ಅಪಾಯದಂಚಿನಲ್ಲಿದೆ.
ನರಿಂಗಾನದ ತೌಡುಗೋಳಿ ಸಮೀಪದ ಮೋರ್ಲ ಬಳಿಯ ಗುಲಾಬಿ ಶೆಟ್ಟಿ ಎಂಬವರ ಮನೆಯ ಬಳಿ ಶುಕ್ರವಾರ ಮಧ್ಯರಾತ್ರಿ ಸುರಿದ ಭಾರೀ ಮಳೆಗೆ ಮಣ್ಣು ಕುಸಿದು ಬಿದ್ದಿದೆ. ಇವರ ಮನೆ ಸಮೀಪ ನೀರು ಹರಿಯುವ ತೋಡು ಇದ್ದು ಇದರ ಬಳಿ ಭೂಕುಸಿತ ಉಂಟಾಗಿದೆ. ಇದರಿಂದಾಗಿ ತೆಂಗಿನ ಮರವೊಂದು ಬೀಳುವ ಸ್ಥಿತಿಯಲ್ಲಿದ್ದು ಅಲ್ಲದೆ ಮನೆಯು ಕೂಡಾ ಕುಸಿತದ ಅಪಾಯದಲ್ಲಿದೆ. ಘಟನಾ ಸ್ಥಳಕ್ಕೆ ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಗಟ್ಟಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗ್ರಾಮ ಕರಣಿಕ ತೌಫಿಕ್ ಹಾಗೂ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಜನಿ ಅವರು ಜೊತೆಗಿದ್ದರು.


