UN NETWORKS ಕುತ್ತಾರು: ಮನುಷ್ಯನಿಗೆ ಕಾಯಿಲೆಗಳು ಬರುವುದು ಸಾಮಾನ್ಯ, ಈ ಸಂದರ್ಭ ಮಾನಸಿಕವಾಗಿ ಕುಗ್ಗದೆ ಮನೋಸ್ಥೈರ್ಯದ ಜೊತೆ ದೇವಬಲವೂ ನಮ್ಮಲ್ಲಿದ್ದರೆ ಎಂತಹ ಕಾಯಿಲೆಗಳಿಂದಲೂ ಮುಕ್ತಿ ಪಡೆಯಲು ಸಾಧ್ಯ ಎಂದು ಬಬ್ಬುಕಟ್ಟೆ ಸರ್ಕಾರಿ ಪ್ರಾಥಮಿಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕಿ ಸೀತಾಲಕ್ಷ್ಮಿ ಅಭಿಪ್ರಾಯಪಟ್ಟರು. ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಸಮಿತಿಯಿಂದ ದಿ. ರಾಜಮಾತೆ ವಿಜಯರಾಜೇ ಸಿಂಧ್ಯಾ ಅವರ ಜನ್ಮಶತಾಬ್ಧಿ ಪ್ರಯುಕ್ತ ಮಹಿಳಾ ಮೋರ್ಚಾ ಮಂಗಳೂರು ಸಮಿತಿ ಹಾಗೂ ಬಿಜೆಪಿ ವೈದ್ಯಕೀಯ ಪ್ರಕೋಷ್ಠ ಸಹಭಾಗಿತ್ವದಲ್ಲಿ ಭಾನುವಾರ ಕುತ್ತಾರು ದುರ್ಗಾವಾಹಿನಿ ಮಹಿಳಾ ಮಂಡಳಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಉಚಿತ ಆರೋಗ್ಯ ಹಾಗೂ ಸ್ತನ ಕ್ಯಾನ್ಸರ್ ತಪಾಸಣಾ ಶಿಬಿರದಲ್ಲಿ ಅಭಿನಂದನೆ ಸ್ವೀಕರಿಸಿ ಮಾತನಾಡಿದರು. ತನ್ನ 32ನೇ ವಯಸ್ಸಿನಲ್ಲಿ ಸ್ತನ ಕ್ಯಾನ್ಸರ್‍ಗೆ ಗುರಿಯಾಗಿದ್ದರೂ ಬದುಕಬೇಕೆನ್ನುವ ಛಲ ಹುಟ್ಟಿ ಕಿಮೋಥೆರಪಿ ಮಾಡಿಸಿಕೊಂಡಿದ್ದೆ. ತನ್ನಲ್ಲಿದ್ದ ಮನೋಸ್ಥೈರ್ಯದಿಂದಾಗಿ ವೃತ್ತಿ ಜೀವನ ಪೂರೈಸಿ ನಿವೃತ್ತಿಯೂ ಆದೆ. ಕಿಮೋಥೆರಪಿ ಬಳಿಕ ತಲೆಕೂದಲೂ ಉದುರಲಿಲ್ಲ. ವೃತ್ತಿಯಲ್ಲಿ ಪ್ರಾಮಾಣಿಕತೆ ಹೊಂದಿದ ಫಲವಾಗಿ ದೇವಬಲ ಬಂದು ಕಿಮೋಥೆರಪಿ…
Author: UllalaVani
UN NETWORKS ಕೆ.ಸಿ.ರೋಡು: ಇಂದು ನಾವು ಸೇವಿಸುವ ಅನಗತ್ಯ ಆಹಾರ, ಅನಗತ್ಯ ನಿದ್ದೆ ಸಹಿತ ಇಂದಿನ ನಮ್ಮ ಜೀವನ ಶೈಲಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಮುಳ್ಳುಗುಡ್ಡೆ ಅಲ್ ಹಿದಾಯ ಜುಮಾ ಮಸೀದಿ ಅಧ್ಯಕ್ಷ ಎನ್.ಎಸ್. ಉಮ್ಮರ್ ಮಾಸ್ಟರ್ ಅಭಿಪ್ರಾಯಪಟ್ಟರು. ಅಜ್ಜಿನಡ್ಕ ಯು.ಟಿ.ಖಾದರ್ ಅಭಿಮಾನಿ ಬಳಗ, ದೇರಳಕಟ್ಟೆ ರೋಟರಿ ಕ್ಲಬ್ ಹಾಗೂ ಯೇನೆಪೋಯ ವೈದ್ಯಕೀಯ ಮತ್ತು ದಂತ ಕಾಲೇಜಿನ ಸಹಭಾಗಿತ್ವದಲ್ಲಿ ಅಜ್ಜಿನಡ್ಕ ಶಾಲೆಯಲ್ಲಿ ನಡೆದ ಉಚಿತ ವೈದ್ಯಕೀಯ ಮತ್ತು ದಂತ ಚಿಕಿತ್ಸಾ ಶಿಬಿರ ಹಾಗೂ ಆರೋಗ್ಯ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಉತ್ತಮ ಆರೋಗ್ಯ ಎನ್ನುವುದು ಸುಲಭವಾಗಿ ಸಿಗುವ ವಸ್ತುವಲ್ಲ. ಮನುಷ್ಯ ಆರೋಗ್ಯವಂತನಾಗಿರಬೇಕಾದರೆ ಮಾನಸಿಕ, ದೈಹಿಕ ನೆಮ್ಮದಿಯೂ ಅಗತ್ಯ, ಸಾಮಾಜಿಕವಾಗಿ ತೊಡಗಿಸಿಕೊಂಡಾಗ ಇಂತಹ ಅವಕಾಶ ಸಿಗಲು ಸಾಧ್ಯ ಎಂದು ಹೇಳಿದರು. ಕಾರ್ಯಕ್ರಮ ಉದ್ಘಾಟಿಸಿದ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕಾಧ್ಯಕ್ಷ ಆಲ್ವಿನ್ ಡಿಸೋಜ ಮಾತನಾಡಿ ಹಿಂದೆ ಹಣ ಇರದಿದ್ದರೂ ಆರೋಗ್ಯ ಇತ್ತು. ಆದರೆ ಇಂದು ಹಣವಿದೆ, ಆರೋಗ್ಯ ಇಲ್ಲ. ಆರೋಗ್ಯವಂತ ಮನುಷ್ಯನೇ ಶ್ರೀಮಂತನಾಗಿದ್ದಾನೆ…
UN NETWORKS ನರಿಂಗಾನ: ನರಿಂಗಾನದ ಯೇನೆಪೋಯ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ನಡೆಯಿತು. ಆಸ್ಪತ್ರೆಯ ಮರ್ಮ ಚಿಕಿತ್ಸಾ ವಿಭಾಗವನ್ನು ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ ಉದ್ಘಾಟಿಸಿದರು. ಪ್ರಥಮ ವರ್ಷದ ಬಿ.ಎ.ಎಂ.ಎಸ್ ವಿದ್ಯಾರ್ಥಿಗಳಿಗೆ ಶಿಷ್ಯೋಪನಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಪ್ರೊ. ಡಾ. ರಾಘವೇಂದ್ರ ಉಡುಪ ವಿದ್ಯಾರ್ಥಿಗಳನ್ನು ಆಯುರ್ವೇದ ಶಿಕ್ಷಣ ಪಡೆಯುವಂತೆ ಪ್ರೋತ್ಸಾಹಿಸಿದರು.ವಿದ್ಯಾರ್ಥಿಗಳನ್ನು ಉತ್ತೇಜಿಸುವ ಸಲುವಾಗಿ ವೈದ್ಯಕೀಯ ಸೌಲಭ್ಯಗಳ ವ್ಯಾಪಾರೀಕರಣದ ಪ್ರಭಾವ ಈ ವಿಷಯದ ಕುರಿತಾಗಿ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ವಿಜೇತರಿಗೆ ಆಯುರ್ವೇದ ಡೀನ್ ಡಾ. ಪ್ರಸನ್ನ ಐತಾಳ್ ಬಹುಮಾನ ವಿತರಿಸಿದರು. ಯೇನೆಪೋಯ ಸಂಸ್ಥೆಯ ಉಪ ಕುಲಪತಿ ಡಾ. ಸಿ. ವಿ. ರಘುವೀರ್ ಹಾಗೂ ಯೇನೆಪೊಯ ಹೋಮಿಯೋಪತಿ ಆಸ್ಪತ್ರೆ ಮತ್ತು ಕಾಲೇಜಿನ ಡೀನ್ ಡಾ.ವಿ.ವಿ. ವರ್ಣೆಕರ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ವಿದಾರ್ಥಿಗಳು ಕ್ಯಾಂಪಸ್ ಪರಿಸರದಲ್ಲಿ ಆಯುರ್ವೇದ ಗಿಡಮೂಲಿಕೆಗಳನ್ನು ನೆಟ್ಟರು.
UN NETWORKS ಮಂಗಳೂರು : 2019ರ ಲೋಕಸಭಾ ಚುನಾವಣೆಯ ಕಾವು ಗರಿಗೆದರುತ್ತಿದ್ದಂತೆ ಮಂಗಳೂರು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ನಲ್ಲೂ ಕಾವು ರಂಗೇರಿದೆ. ಕಳೆದ ಹಲವು ದಶಕಗಳಿಂದ ಜನಾರ್ಧನ ಪೂಜಾರಿಯ ಆಧಿಪತ್ಯದಲ್ಲಿದ್ದ ಈ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿಯ ಹುಡುಕಾಟ ಶುರುವಾಗಿದೆ. ಇದೀಗ ಮುಸ್ಲಿಂ ಅಭ್ಯರ್ಥಿಗೆ ಟಿಕೆಟ್ ನೀಡಬೇಕೆನ್ನುವ ಕೂಗು ಮತ್ತಷ್ಟು ಬಲಗೊಂಡಿದ್ದು, ಈ ನಿಟ್ಟಿನಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಮಹತ್ವದ ಸಭೆಯೊಂದನ್ನೂ ನಡೆಸಿದೆ. ಈ ಸಭೆಯಲ್ಲಿ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವಂತೆ ಕಾಂಗ್ರೆಸ್ ಹೈಕಮಾಂಡ್ಗೆ ಒತ್ತಡ ಹೇರುವ ಕುರಿತಂತೆ ಚರ್ಚೆಗಳಾಗಿವೆ. ಆದರೆ ಜಿಲ್ಲೆಯಲ್ಲಿ ಹಲವು ಮುಸ್ಲಿಮರು ಆಕಾಂಕ್ಷಿಗಳಾಗಿದ್ದರೂ ಸಮರ್ಥರ ಹುಡುಕಾಟ ಪ್ರಾರಂಭಗೊಂಡಿದೆ. ಯುಟಿ ಕಾದರ್, ಕೆಎಸ್ ಮಸೂದ್, ಮೊಯಿದ್ಬಾವಾ, ಕೋಡಿಜಾಲ್ ಇಬ್ರಾಹಿಂ, ಅಮೀರ್ ತುಂಬೆ ಮೊದಲಾದ ಘಟಾನುಘಟಿಗಳ ಹೆಸರು ಮುಂಚೂಣಿಯಲ್ಲಿದ್ದರೂ ಹೈಕಮಾಂಡ್ ನಿರ್ಧಾರ ಏನೆಂದು ಇನ್ನೂ ಸ್ಪಷ್ಟಗೊಂಡಿಲ್ಲ. ಕಾಂಗ್ರೆಸ್ ಪಾಲಿಗೆ ಹೈಕಮಾಂಡೇ ಎಲ್ಲವೂ ಆಗಿರುವುದರಿಂದ ಹೈಕಮಾಂಡ್ಗೆ ಮನವರಿಕೆ ಮಾಡುವ ಪ್ರಯತ್ನಗಳು ನಡೆಯುತ್ತಿವೆ. ಮಂಗಳೂರು ಕ್ಷೇತ್ರ ಮೊದಲೇ ಹಿಂದುತ್ವದ ಪ್ರಯೋಗ ಭೂಮಿ. ಹಾಲಿ ಸಂಸದರು ಮಾತಿನ…
UN NETWORKS ಉಳ್ಳಾಲ: ಕರ್ನಾಟಕದ ಅಭಿಮಾನವಾಗಿ ಆತ್ಮೀಯ ನೆರಲಾಗಿ ಮೂಡಿಬಂದು ಸಮಾಜದ ನೊಂದವರ, ನಿರ್ಗತಿಕರ ಆಶಾಕೇಂದ್ರವಾಗಿ, ಶರಫುಲ್ ಉಲಮಾ ಎಂಬ ಸಾತ್ವಿಕ ಉಲಮಾ ಪಾದದಡಿಯಲ್ಲಿ ಬೆಳೆದು ಬಂದಿರುವ ಅಲ್-ಮದೀನಾ ಕರ್ನಾಟಕದಾದ್ಯಂತ ತನ್ನ ಸಾಂತ್ವನ ಸೇವೆಗಳ ಮೂಲಕವೂ ಹೆಸರುಗಳಿಸಿರುವ ಸಂಸ್ಥೆ ನೂರಾರು ಅನಾಥ, ನಿರ್ಗತಿಕರ ಬಾಳನ್ನು ಬೆಳಗಿಸುವ ಮೂಲಕ ಇಸ್ಲಾಮಿ ಸಂಸ್ಕೃತಿಯ ಬೆಳಕನ್ನು ವಿಶ್ವಾಸಿ ಸಮೂಹಕ್ಕೆ ಪಸರಿಸುವಲ್ಲಿಯೂ ಯಶಸ್ವಿಯಾಗಿದೆ. ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ 25 ನೇ ವರುಷದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಅಲ್-ಮದೀನ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ ಪ್ರಚಾರ ಸಭೆಯು ದಿನಾಂಕ 02 ನವಂಬರ್ 2018 ರಂದು ಕುವೈತ್ ಸಿಟಿಯಲ್ಲಿರುವ ದಾಸ್ಮಾ ಹಾಲ್ ನಲ್ಲಿ ಮಗ್ರಿಬ್ ನಮಾಝ್ ನ ನಂತರ ಸಮಸ್ತ ಮುಶಾವರ ಅಂಗ,ಅಲ್-ಮದೀನ ಇದರ ಸಾರಥಿ ಬಹುಮಾನ್ಯ ಶರಪುಲ್ ಉಲಮಾ ಶೈಕುನಾ ಅಬ್ಬಾಸ್ ಉಸ್ತಾದರ ನೇತ್ರತ್ವದಲ್ಲಿ,ಅಲ್-ಮದೀನ ಕುವೈತ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ಬಾವಕ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಇಂದು ಕೇರಳ, ಕರ್ನಾಟಕದಾದ್ಯಂತ ಯುವ ಮನಸ್ಸುಗಳ ಆವೇಶವಾಗಿ, ತನ್ನ…
UN NETWORKS ಉಳ್ಳಾಲ: ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಫುಟ್ಬಾಲ್ ಪಂದ್ಯದಲ್ಲಿ ಮಂಗಳೂರು ನಗರ ತಂಡವನ್ನು ಸೋಲಿಸಿದ ಉಳ್ಳಾಲದ ಕೆ. ಪಾಂಡ್ಯರಾಜ ಬಲ್ಲಾಳ್ ಪದವಿಪೂರ್ವ ಕಾಲೇಜು ಫುಟ್ಬಾಲ್ ತಂಡ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು ನ. 4, 5 ಹಾಗೂ 6ರಂದು ಮಂಡ್ಯದಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯದಲ್ಲಿ ಜಿಲ್ಲೆಯನ್ನು ಪ್ರತಿನಿಧಿಸಲಿದ್ದಾರೆ.
UN NETWORKS ತಲಪಾಡಿ: ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಕ್ರೀಡಾಂಗಣದಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ರಾಜ್ಯ ಮಟ್ಟದ ಫ್ಲೋರ್ಬಾಲ್ ಪಂದ್ಯಾಟದ ಬಾಲಕರ ವಿಭಾಗದಲ್ಲಿ ಬೆಂಗಳೂರು ಉತ್ತರ ಪ್ರಥಮ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ಪ್ರಥಮ ಸ್ಥಾನವನ್ನು ಪಡೆದರೆ, ಮೈಸೂರು ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಪದವಿ ಪೂರ್ವ ಶಿಕ್ಷಣ ಇಲಾಖೆ, ಉಪನಿರ್ದೇಶಕರ ಕಚೇರಿ, ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ.ಜಿಲ್ಲೆ ಶಾರದಾ ವಿದ್ಯಾನಿಕೇತನಪದವಿಪೂರ್ವ ಕಾಲೇಜು ತಲಪಾಡಿ ದೇವಿನಗರ, ಹಾಗೂ ದ.ಕ.ಜಿಲ್ಲಾ ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರರ ಸಂಘ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಡೆದ ಪಂದ್ಯಾಟದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಶಾರದಾ ಸಂಸ್ಥೆಗಳ ಅಧ್ಯಕ್ಷ ಪ್ರೊ| ಎಂ.ಬಿ. ಪುರಾಣಿಕ್, ಶೈಕ್ಷಣಿಕ ಸಲಹೆಗಾರರಾದ ಲೀಲಾ ಉಪಾಧ್ಯಾಯ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಗರಾಜಪ್ಪ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಹಾಗು ಮಧುಸೂಧನ್ ಕುಶೆ, ಕಾಲೇಜಿನ ಪ್ರಾಂಶುಪಾಲ ಕೆ. ಕೆ. ಉಪಾಧ್ಯಾಯ, ಪ್ರಾಂಶುಪಾಲರ ಸಂಘದ ಖಜಾಂಜಿ ವಿಠಲ್ ಎ.,…
UN NETWORKS ಉಳ್ಳಾಲ: ಕನ್ನಡ ರಾಜ್ಯ ಉದಯವಾಗಬೇಕಾದರೆ ಹಲವು ಸಾಹಿತಿಗಳು, ಕವಿಗಳು, ಕನ್ನಡ ಪ್ರೇಮಿಗಳು, ಮಹನೀಯರು ಹೋರಾಡಿದ್ದು ಅದನ್ನು ನೆನಪಿಸುವ ಹಾಗೂ ಸ್ಮರಿಸುವ ನಿಟ್ಟಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಿಸಲಾಗುತ್ತಿದೆ ಎಂದು ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ ಅಭಿಪ್ರಾಯಪಟ್ಟರು. ಉಳ್ಳಾಲ ನಗರಸಭಾ ವತಿಯಿಂದ ಗುರುವಾರ ನಡೆದ ಕನ್ನಡ ರಾಜ್ಯೋತ್ಸವ ಹಾಗೂ ಐಕ್ಯತಾ ದಿನ ಕಾರ್ಯಕ್ರಮದ ಧ್ವಜರೋಹಣಗೈದು ಅವರು ಮಾತನಾಡಿದರು.ಕನ್ನಡ ಸುಂದರ ಭಾಷೆಯಾಗಿದ್ದು, ಅದನ್ನು ಉಳಿಸಿ ಬೆಳೆಸುವ ಜವಬ್ದಾರಿ ನಮ್ಮದು. ಕೇವಲ ಒಂದು ದಿನ ರಾಜ್ಯೋತ್ಸವ ಆಚರಿಸಿದ ಮಾತ್ರಕ್ಕೆ ಭಾಷಾ ಉಳಿವು ಅಸಾಧ್ಯ. ಭಾಷೆಯ ಉಳಿವಿಗಾಗಿ ಪ್ರತಿಯೊಬ್ಬರೂ ಪಣ ತೊಡಬೇಕಿದೆ ಎಂದು ಹೇಳಿದರು. ಕಾರ್ಯಕ್ರಮದ ಪ್ರಯುಕ್ತ ರೋಶನಿ ನಿಲಯದ ವಿದ್ಯಾರ್ಥಿಗಳಿಂದ ಸ್ವಚ್ಛತಾ ಬೀದಿ ನಾಟಕ ನಡೆಯಿತು. ನಗರಸಭೆಯ ಪೌರಕಾರ್ಮಿಕರಾದ ನಳಿನಿ ಹಾಗೂ ಕೆಂಚಪ್ಪ ಅವರ ವೈದ್ಯಕೀಯ ವೆಚ್ಚವಾಗಿ ತಲಾ 10 ಸಾವಿರ ರೂಪಾಯಿಯ ಚೆಕ್ ವಿತರಿಸಲಾಯಿತು. ಅಧಿಕಾರಿಗಳಾದ ರಾಜೇಶ್, ರೇಣುಕಾ, ಕೌನ್ಸಿಲರುಗಳಾದ ಮುಹಮ್ಮದ್ ಮುಕಚ್ಚೇರಿ, ರವಿಚಂದ್ರ, ಗೀತಾ ಬಾಯಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: SKSSF ದೇರಳಕಟ್ಟೆ ಕ್ಲಸ್ಟರ್ ಇದರ ವತಿಯಿಂದ ಲಹರಿ ವಿರುದ್ಧ ಜನಜಾಗೃತಿ ಸಭೆ SKSSF ದೇರಳಕಟ್ಟೆ ಕ್ಲಸ್ಟರ್ ಅಧ್ಯಕ್ಷರಾದ ಜನಾಬ್ ಸಯ್ಯದ್ ಅಲಿ ಇವರ ಅಧ್ಯಕ್ಷತೆಯಲ್ಲಿ ಉಳ್ಳಾಲದಲ್ಲಿ ನಡೆಯಿತು .ಉಸ್ತಾದ್ ಉಸ್ಮಾನ್ ಫೈಝಿ ತೋಡಾರ್ ದುಃಆಗೈದರು . ವಲಯ ಕೌನ್ಸಿಲರ್ ಫಾರೂಖ್ ದಾರಿಮಿ ಗ್ರಾಮಚಾವಡಿ ಸ್ವಾಗತಿಸಿದರು. ವಲಯ ಪ್ರಧಾನ ಕಾರ್ಯದರ್ಶಿ ಹಾಫಿಲ್ ಝೈನ್ ಸಖಾಫಿ,ಪ್ರತಿಜ್ಞಾ ಭೋದಿಸಿದರು . ಬಹು ಶರೀಫ್ ಅರ್ಶದಿ ದೇರಳಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು . ಮುಸ್ತಫಾ ಅಬ್ದುಲ್ಲಾ.ನಝೀರ್ ಉಳ್ಳಾಲ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು . ಯುವ ವಾಗ್ಮಿ, SKSSF ಬೆಳ್ತಂಗಡಿ ವಲಯ ಅಧ್ಯಕ್ಷರಾದ ನಝೀರ್ ಅಝ್ಹರಿ ಪ್ರಮೇಯ ಭಾಷಣಗೈದರು. ಹನೀಫ್ ಉಚ್ಚಿಲ ವೀಕ್ಷಕರಾಗಿ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ತಬೂಕ್ ಅಬ್ದುರ್ರಹ್ಮಾನ್ ದಾರಿಮಿ, ಕ್ಲಸ್ಟರ್ ಕೋಶಾಧಿಕಾರಿ ಮೊಹಮ್ಮದ್ ಮೋನು ಇನೋಳಿ,ಅಬ್ದುಲ್ ಲತೀಫ್ ದಾರಿಮಿ,ಆಸಿಫ್ ಅಬ್ದುಲ್ಲಾ,ಇಬ್ರಾಹಿಂ ತಂಗಳ್ ಉಳ್ಳಾಲ,ಇಬ್ರಾಹಿಂ ಕೊಣಾಜೆ, ಹರ್ಷಾದ್ ಕುದ್ರೋಳಿ,ಮೊಹಮ್ಮದ್ ನಡುಪದವು, ರಹ್ಮಾನ್ ದಾರಿಮಿ ಪರೇಕ್ಕಳ, ಯು.ಟಿ.ಮೊಹಮ್ಮದ್ ಹಾಜಿ,ಅಬ್ದುಲ್ಲಾ ರೆಂಜಾಡಿ, ಮತ್ತಿತ್ತರರು ಉಪಸ್ಥಿತರಿದ್ದರು. ಕ್ಲಸ್ಟರ್ ಪ್ರದಾನ ಕಾರ್ಯದರ್ಶಿ…
UN NETWORKS ಉಳ್ಳಾಲ: ಶಾಶ್ವತ ಕುಡಿಯುವ ನೀರಿನ ಯೋಜನೆ ತನ್ನ ಕ್ಷೇತ್ರಕ್ಕೆ ಒದಗಿಸುವುದು ಬಹುಮುಖ್ಯ ಗುರಿಯಾಗಿದೆ. ಈ ನಿಟ್ಟಿನಲ್ಲಿ 170 ಕೋಟಿ ಅನುದಾನವನ್ನು ಈಗಿನ ಸರಕಾರವೂ ಬಿಡುಗಡೆಗೊಳಿಸುವ ಎಲ್ಲಾ ಪ್ರಕ್ರಿಯೆಗಳು ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಅಭಿಪ್ರಾಯಪಟ್ಟರು. ಅವರು ಮಂಜನಾಡಿ ಗ್ರಾಮ ಪಂಚಾಯಿತಿನ ದಿ. ಯು.ಟಿ . ಫರೀದ್ ಸಭಾಂಗಣ ಮತ್ತು ಗ್ರಾಮಸ್ಥರಿಗೆ ಹಕ್ಕುಪತ್ರವನ್ನು ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.ಮಂಜನಾಡಿ ಗ್ರಾಮದ 800 ಮನೆಗಳಿಗೆ ಹಕ್ಕುಪತ್ರ ವಿತರಿಸಲಾಗಿದೆ. ಒಂದು ಮನೆಯಲ್ಲಿ ನಾಲ್ವರಂತೆ 2,400 ಮಂದಿಗೆ ಸ್ವಾಭಿಮಾನ ದ ಬದುಕು ನೀಡುವ ಕೆಲಸ ಸರಕಾರದಿಂದ ಆಗಿದೆ. ಆಧಾರ ಅನ್ನುವುದು ಯಾರಿಗೂ ಇರಲಿಲ್ಲ. ಕುಮಾರಸ್ವಾಮಿ ಸರಕಾರ ವೂ ಹಿಂದಿನ ಸರಕಾರದ ಕಾರ್ಯಕ್ರಮಗಳನ್ನು ಮುಂದುವರಿಸುತ್ತಾ ಬರುತ್ತಿದೆ. ರೇಷನ್ ಕಾರ್ಡು ಎಲ್ಲರಲ್ಲಿಯೂ ಇದೆ. 35 ಲಕ್ಷ ಕುಟುಂಬಗಳಿಗೆ ರೇಷನ್ ಕಾರ್ಡು ಕೊಡುವ ಕೆಲಸ ತನ್ನ ಅವಧಿಯಲ್ಲಿ ನಡೆದಿದೆ. ಸರಕಾರದಿಂದ ಸಿಗುವ ಸವಲತ್ತುಗಳನ್ನು ಪಡೆಯುವಂತಹ ಕೆಲಸ ಜನರಿಂದ ಆಗಬೇಕಿದೆ. ನೇತ್ರಾವತಿಯಲ್ಲಿ ನೀರಿನ ಕೊರತೆಯಾದರೂ, ಅಣೆಕಟ್ಟು…

