UN NETWORKS ಉಳ್ಳಾಲ: ಬಾವಿ ನೀರಿನಲ್ಲಿ ತೈಲಾಂಶ ಪತ್ತೆಯಾದ ದೇರಳಕಟ್ಟೆಯ ಕಾನೆಕೆರೆ ಪ್ರದೇಶಕ್ಕೆ ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದರು. ಬೆಳ್ಮ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷೆ ಜತೆಗೆ ಚರ್ಚಿಸಿದ ಸಚಿವರು , ಬಾವಿ ನೀರಿನ ದುರ್ವಾಸನೆ ನೋಡಿ ಪೆಟ್ರೋಲ್ ಅಂಶ ಇರುವುದಾಗಿ ತಿಳಿಸಿದರು. ಸ್ಥಳೀಯರು ಬಾವಿ ನೀರಿಗೆ ಬೆಂಕಿ ಇಟ್ಟು ಸಚಿವರಿಗೆ ನೀರಿನಲ್ಲಿರುವ ತೈಲಾಂಶವನ್ನು ತೋರಿಸಿದರು. ಇದೇ ವೇಳೆ ಮಾಧ್ಯಮದ ಜತೆಗೆ ಮಾತನಾಡಿದ ಸಚಿವರು, ಜಿಲ್ಲಾಧಿಕಾರಿ ಜೊತೆಗೆ ಮಾತನಾಡಿ, ನೀರಿನಲ್ಲಿರುವ ತೈಲಾಂಶ ಪತ್ತೆಗಾಗಿ ಎನ್. ಐ.ಟಿ.ಕೆ, ಎಂಆರ್ ಪಿಎಲ್ ಮುಖಾಂತರ ಉತ್ತಮ ಏಜೆನ್ಸಿಯನ್ನು ಸಂಪರ್ಕಿಸಿ ಅತ್ಯುತ್ತಮ ತಜ್ಞರಿಗೆ ಪರೀಕ್ಷೆಗೆ ಕಳುಹಿಸಲು ಸೂಚಿಸಲಾಗಿದೆ. ತೈಲಾಂಶ ಪತ್ತೆಯಾದ ಮೂರು ಬಾವಿಗಳ ನೀರು ಸಂಪೂರ್ಣ ಹೊರತೆಗೆದು ಸ್ವಚ್ಛಗೊಳಿಸಿ, ಮರು ಶೇಖರಣೆಯಾಗುವ ನೀರಿನಲ್ಲಿ ತೈಲದ ಅಂಶ ಇರುತ್ತದೋ ಅನ್ನುವುದನ್ನು ಪತ್ತೆಹಚ್ಚಬೇಕಾಗಿದೆ. ನಂತರ ನೀರು ಪರೀಕ್ಷಿಸಿದಾಗ ವಿಚಾರ ಗೊತ್ತಾಗುತ್ತದೆ. ಸ್ಥಳೀಯರಿಗೆ ಕುಡಿಯುವ ನೀರಿನ ಕೊರತೆಯಾಗದ ಹಾಗೆ ಗ್ರಾಮ ಪಂಚಾಯಿತಿ ವಿಶೇಷವಾಗಿ ಒಂದು ಗಂಟೆ ನೀರು…
Author: UllalaVani
UN NETWORKS ಉಳ್ಳಾಲ: ಸುರತ್ಕಲ್ ಹೊನ್ನಕಟ್ಟೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಕುತ್ತಾರು ಸುಭಾಷ್ ನಗರ ನಿವಾಸಿ ಶೇಖರ್ ಎಂಬವರ ಪುತ್ರ ಅಕ್ಷಯ್ (24) ಸೋಮವಾರ ಚಿಕಿತ್ಸೆ ಫಲಕಾರಿಯಾಗದೆ ನಗರದ ಎ.ಜೆ. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇದೇ ಅಪಘಾತದಲ್ಲಿ ಪಾದಚಾರಿ ಹೊನ್ನಕಟ್ಟೆ ಕೋಡಿಕೆರೆಯ ನಾರಾಯಣ ಕುಲಾಲ್ (78) ಅಪಘಾತ ನಡೆದ ಸ್ಥಳದಲ್ಲೇ ಮೃತಪಟ್ಟಿದ್ದರು. ಅಕ್ಷಯ್ ಅವರು ಸುರತ್ಕಲ್ ಕಡೆಯಿಂದ ಮಂಗಳೂರು ಕಡೆಗೆ ಬೈಕಿನಲ್ಲಿ ಬರುತ್ತಿದ್ದಾಗ ಹೊನ್ನಕಟ್ಟೆ ಸಿಗ್ನಲ್ ಬಳಿ ರಸ್ತೆ ದಾಟುತ್ತಿದ್ದ ನಾರಾಯಣ ಎಂಬವರಿಗೆ ಢಿಕ್ಕಿ ಹೊಡೆದು ಬಳಿಕ ಬೈಕ್ ರಸ್ತೆ ವಿಭಾಜಗಕ್ಕೆ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಪಾದಚಾರಿ ನಾರಾಯಣ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಗಂಭೀರ ಗಾಯಗೊಂಡಿದ್ದ ಅಕ್ಷಯ್ ಅವರನ್ನು ನಗರದ ಎ.ಜೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಮೃತ ಅಕ್ಷಯ್ ನಾಲ್ವರು ಮಕ್ಕಳಲ್ಲಿ ಎರಡನೇಯ ಪುತ್ರನಾಗಿದ್ದರು. ಮಂಗಳೂರು ಉತ್ತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ಪಜೀರು: ಧರ್ಮ ಜಾಗೃತಿಯೊಂದಿಗೆ ಸಂಘಟನೆಯಾದರೆ ಮಾತ್ರ ಸನಾತನ ಹಿಂದೂ ಧರ್ಮವನ್ನು ವಿಶ್ವದಲ್ಲಿ ಯಾರಿಗೂ ಎದುರಿಸಲು ಸಾಧ್ಯವಿಲ್ಲ, ಸಂಘಟಿತವಾಗಿ ಮುನ್ನಡೆದಾಗ ಹಿಂದೂ ಸಮಾಜ ಬಲಿಷ್ಠವಾಗಲು ಸಾಧ್ಯ ಎಂದು ಪೊಳಲಿ ರಾಮಕೃಷ್ಣ ತಪೋವನದ ಸ್ವಾಮಿ ವಿವೇಕ ಚೈತನ್ಯಾನಂದ ಅಭಿಪ್ರಾಯಪಟ್ಟರು. ಗೋವನಿತಾಶ್ರಯ ಟ್ರಸ್ಟ್ ಮಂಗಳೂರು ಇದರ ಆಶ್ರಯದ ಪಜೀರು, ಬೀಜಗುರಿಯಲ್ಲಿರುವ ಗೋಶಾಲಾ ವಠಾರದಲ್ಲಿ ರವಿವಾರ ನಡೆದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದಲ್ಲಿ ಗೋಪೂಜೆ ನೆರವೇರಿಸಿ ಆಶೀರ್ವಚನ ನೀಡಿದರು.ಭಾರತದಲ್ಲಿ ನಾವು ಬಹುಸಂಖ್ಯಾತರಾದರೂ ಹಿಂದೂ ಧರ್ಮ ಮತ್ತು ನಾವು ಪೂಜಿಸುವ ಗೋವುಗಳಿಗೆ ಅಭದ್ರತೆ ಇದೆ ಅದಕ್ಕೆ ಮುಖ್ಯ ಕಾರಣ ನಾವು ಸಂಘಟಿತರಾಗದೇ ಇರುವುದು. ಮುಖ್ಯವಾಗಿ ಅನ್ಯಮತಿಯರು ನಮ್ಮ ಮೇಲೆ ದಾಳಿ ಮಾಡುವಾಗ ಮಾತ್ರ ಸಂಘಟಿತರಾಗದೆ ನಮ್ಮ ಅಧ್ಯಾತ್ಮಿಕ ಸೇರಿದಂತೆ ಧಾರ್ಮಿಕ ವಿಚಾರಗಳಿಗೆ ಸಂಗಟಿತರಾಗಿ ಮುನ್ನಡೆದರೆ ನಮ್ಮನ್ನು ಯಾರಿಗೂ ಎದುರಿಸಲು ಸಾಧ್ಯವಿಲ್ಲ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳಾ ಸೇವಾ ಟ್ರಸ್ಟ್ ನ ಅಧ್ಯಕ್ಷ ಎಲ್.ಶ್ರೀಧರ್ ಭಟ್ ವಹಿಸಿದ್ದರು.ಗೋವನಿತಾಶ್ರಯ ಟ್ರಸ್ಟ್ ನ ಕೋಶಾಧಿಕಾರಿ ಅನಂತ ಲಕ್ಷ್ಮೀ ಭಟ್ , ಟ್ರಸ್ಟಿಗಳಾದ…
UN NETWORKS ಮುಡಿಪು: ಹೃದಯ ಎನ್ನುವುದು ಮಾನವನಿಗೆ ದೇವನು ಕೊಟ್ಟ ಅಕ್ಷಯ ಪಾತ್ರೆ, ಹೃದಯ ವೈಶಾಲ್ಯದಿಂದ ಮಾಡುವ ಸಮಾಜ ಸೇವೆ ಎಂದಿಗೂ ಅಳಿಯದ ಕಾರ್ಯವಾಗಿದೆ. ರಕ್ತ ಎಷ್ಟು ಬಾರಿ ದಾನ ಮಾಡಿದರೂ ಕಡಿಮೆಯಾಗದ ವಸ್ತುವಾಗಿದೆ ಎಂದು ಮುಡಿಪು ಸಂತ ಜೋಸೆಫ್‍ವಾಜ್ ಚರ್ಚ್‍ನ ಧರ್ಮಗುರುವ ರೆ.ಫಾ.ಬೆಂಜಮಿನ್ ಪಿಂಟೋ ಅಭಿಪ್ರಾಯಪಟ್ಟರು. ಜೋಸೆಫ್‍ವಾಜ್ ಚರ್ಚ್, ಕೆಥೋಲಿಕ್ ಸಭಾ ಮುಡಿಪು ಘಟಕ, ಐಸಿವೈಎಂ, ಎಸ್‍ವಿಪಿ ಹಾಗೂ ಮಹಿಳಾ ಸಂಘಟನೆಗಳ ಸಹಭಾಗಿತ್ವದಲ್ಲಿ ಫಾದರ್ ಮುಲ್ಲರ್ ವೈದ್ಯಕೀಯ ಸಮೂಹ ಸಂಸ್ಥೆಯ ಸಹಕಾರದಲ್ಲಿ ಭಾನುವಾರ ಮುಡಿಪು ಚರ್ಚ್ ಸಭಾಂಗಣದಲ್ಲಿ ನಡೆದ ರಕ್ತದಾನ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯ ಅತಿಥಿ ತಾಲೂಕು ಪಂಚಾಯಿತಿ ಸದಸ್ಯ ಹೈದರ್ ಕೈರಂಗಳ ಮಾತನಾಡಿ, ಕ್ರೈಸ್ತ ಸಮುದಾಯ ಸದಾ ಸಾಮಾಜಿಕ ನೆಲೆಯಲ್ಲಿ ಕಾರ್ಯಾಚರಿಸುತ್ತಾ ಬಂದಿದೆ. ಅಗತ್ಯ ಸಂದರ್ಭದಲ್ಲಿ ಮಾತ್ರವಲ್ಲದೆ ಶಿಬಿರಗಳ ಮೂಲಕವೂ ಹಲವು ಬಾರಿ ನಿರಂತರ ರಕ್ತದಾನ ಮಾಡುತ್ತಿರುವ ಕೆಥೋಲಿಕ್ ಸಭಾ ಕಾರ್ಯಚಟುವಟಿಕೆ ಇದಕ್ಕೊಂದು ನಿದರ್ಶನ ಎಂದು ಹೇಳಿದರು. ಕಾಂಗ್ರೆಸ್ ಕಿಸಾನ್ ಘಟಕದ ಅಧ್ಯಕ್ಷ ಅರುಣ್ ಡಿಸೋಜ…
UN NETWORKS ಉಳ್ಳಾಲ: `ಹೆಳವನಾಗಿ, ಕುರುಡನಾಗಿಯಾದರೂ ಬದುಕಬಹುದು. ಆದರೆ ಅನಾಥನಾಗಿ ಬಾಳುವ ಸಂಕಷ್ಟ ಯಾರಿಗೂ ಬರಬಾರದು. ಇಂತಹ ದುರ್ವಿಧಿ ಕರ್ಣನ ಬದುಕಿನೊಂದಿಗೇ ಕೊನೆಯಾಗಲಿ…’ ಹೀಗೆಂದು ಬಳ್ಕೂರು ಕೃಷ್ಣಯಾಜಿ ಅವರು ಕರ್ಣನಾಗಿ ಪರಕಾಯ ಪ್ರವೇಶವೆಂಬಂತೆ ತೋರಿದ ಪ್ರದರ್ಶನದಲ್ಲಿ ಕರ್ಣಾವಸಾನದ ಅಂತಿಮ ಹಂತದಲ್ಲಿ ಹೇಳಿದ ಸಂಭಾಷಣೆಗೆ ಅಕ್ಷರಶಃ ಕಿಕ್ಕಿರಿದ ಸಭೆ ಕಣ್ಣೀರಾಗಿತ್ತು. ಸ್ಥಳ-ತಲಪಾಡಿ ಟೋಲ್ ಗೇಟ್ ಹತ್ತಿರದ ಫಿಜಾ ಮೈದಾನ. ಸಂದರ್ಭ-ತಲಪಾಡಿ ಯಕ್ಷಮಿತ್ರ ಸೇವಾ ಬಳಗದವರು ಶನಿವಾರ ರಾತ್ರಿ, ನಿರಂತರವಾಗಿ ಐದನೇ ವರ್ಷ ಆಯೋಜಿಸಿದ್ದ ರಾತ್ರಿ ಪೂರ್ತಿಯ `ತಲಪಾಡಿ ಯಕ್ಷೋತ್ಸವದ’ ಕರ್ಣ ಪರ್ವ ಬಯಲಾಟ ಪ್ರಸಂಗ. ಒಟ್ಟು ಮೂರು ಪ್ರಸಂಗಗಳ ಪೈಕಿ ಆರಂಭದ ಎರಡೂ ಪ್ರಸಂಗಗಳು ತೆಂಕು ಮತ್ತು ಬಡಗು ತಿಟ್ಟುಗಳ ಶೈಲಿಯ ಜುಗಲ್ ಬಂಧಿಗೆ ಸಾಕ್ಷಿಯಾಗಿದ್ದು, ಉಭಯ ತಿಟ್ಟುಗಳ ಕಲಾರಸಿಕರನ್ನು ರಂಜಿಸುವಲ್ಲಿ ಯಶಸ್ವಿಯಾಯಿತು. ರಂಗದ ಮೇಲೆ ಜೊತೆ ಜೊತೆಯಾಗಿ ಉಭಯ ತಿಟ್ಟುಗಳ ಹಿಮ್ಮೇಳ ಪ್ರದರ್ಶನಕ್ಕೆ ಹೊಸ ಕಳೆ ತಂದುಕೊಟ್ಟಿತು. ರವಿಚಂದ್ರ ಕನ್ನಡಿಕಟ್ಟೆ ಮತ್ತು ರಾಮಕೃಷ್ಣ ಹೆಗಡೆ ಹಿಲ್ಲೂರು ಭಾಗವತಿಕೆಯಲ್ಲಿ `ಕೀಚಕ ವಧೆ’, ಬಳಿಕ…
UN NETWORKS ಉಳ್ಳಾಲ: ಪ್ರವಾದಿ ಮುಹಮ್ಮದ್ ಮುಸ್ತಫಾ ರನ್ನು ನಿಂದಿಸಿದ ಅಂಕಣಕಾರ ಸಂತೋಷ್ ತಮ್ಮಯ್ಯ ವಿರುದ್ದ ಕ್ರಮ ಕೈಗೊಳ್ಳುವಂತೆ ಬಂಟ್ವಾಳ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಕೆಪಿಸಿಸಿ ಕಾರ್ಮಿಕ ಘಟಕದ ಉಪಾಧ್ಯಕ್ಷರಾದ ಅಮೀರ್ ತುಂಬೆ ನೇತೃತ್ವದಲ್ಲಿ ಬಂಟ್ವಾಳ ಠಾಣಾಧಿಕಾರಿಗೆ ಮನವಿ ಸಲ್ಲಿಸಲಾಯಿತು. ಈ ಸಂಧರ್ಭ ಮೊಹಮ್ಮದ್ ನಂದಾವರ, ಕರೀಂ ಬೊಳ್ಳಾಯಿ, ಕಾರಾಜೆ ಸುಲೈಮಾನ್,ಮಜೀದ್,ಕಮಾಲ್ ವಳವೂರು ಮುಂತಾದವರು ಉಪಸ್ಥಿತರಿದ್ದರು.
UN NETWORKS ದೇರಳಕಟ್ಟೆ: ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಕೆರೆಯ ಬಾವಿಯ ನೀರಿನಲ್ಲಿ ತೈಲದ ಅಂಶ ಪತ್ತೆಯಾಗಿರುವುದಕ್ಕೆ ಪೂರಕವಾಗಿ ಹಲವು ಮಂದಿ ಸ್ಥಳೀಯ ಪೆಟ್ರೋಲ್ ಬಂಕ್‍ನಿಂದ ತೈಲ ಸೋರಿಕೆ ಆಗುತ್ತಿರಬಹುದು ಎಂದು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ 1.00ಗಂಟೆಗೆ ಪೋಲೀಸರ ಸಮ್ಮುಖದಲ್ಲಿ ಬಂಕ್‍ನಲ್ಲಿ ತೈಲ ಪರಿಶೀಲನೆ ನಡೆಸಿ ಮರುದಿನ ಶುಕ್ರವಾರ ಮಧ್ಯಾಹ್ನ ತನಕ ಪರಿಶೀಲಿಸಲಾಗಿದ್ದು ಬಳಿಕ ಅಳತೆ ಮಾಡಿದಾಗ ಎಳ್ಳಷ್ಟೂ ತೈಲದಲ್ಲಿ ವ್ಯತ್ಯಾಸ ಕಂಡುಬರದಿರುವುದರಿಂದ ಪೆಟ್ರೋಲ್ ಬಂಕ್ ಮಾಲೀಕರು ನಿರಾಳರಾಗಿದ್ದಾರೆ. ಅಷ್ಟಕ್ಕೂ ಪೆಟ್ರೋಲ್ ಬಂಕ್ ಮಾಲೀಕರು ಹಲವು ಮನವಿಗೆ ಸ್ಪಂದಿಸಿ ಒಂದು ದಿನ ಪೂರ್ತಿ ಬಂಕ್ ಸ್ಥಗಿತಗೊಳಿಸುವ ಮೂಲಕ ಸಾರ್ವಜನಿಕರಿಗೆ ಸಹಕಾರ ನೀಡಿದ್ದು, ಶುಕ್ರವಾರ ಇಂಡಿಯನ್ ಆಯಿಲ್ ಕಾರ್ಪೊರೇಶನ್ ಅಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಯ ಸಮ್ಮುಖದಲ್ಲಿ ನಡೆಸಲಾದ ಪರೀಕ್ಷೆಯಲ್ಲಿ ಬಂಕ್‍ನಿಂದ ತೈಲ ಸೋರಿಕೆ ಆಗುತ್ತಿಲ್ಲ ಎಂಬುದು ದೃಢಪಟ್ಟಿದೆ. ಹಾಗಿದ್ದರೂ ಕುಡಿಯುವ ನೀರಿನಲ್ಲಿ ತೈಲದ ಅಂಶ ಕಂಡುಬರಲು ಸ್ಪಷ್ಟ ಕಾರಣ ಮುಂದಿನ ಎರಡು ಮೂರು ದಿನಗಳಲ್ಲಿ ಲಭ್ಯವಾಗಲಿದೆ. ಶುಕ್ರವಾರ ಇಂಡಿಯನ್ ಆಯಿಲ್…
UN NETWORKS ಕೊಣಾಜೆ: ಮಂಗಳೂರು ವಿವಿಯ ಪ್ರಭಾರ ಕುಲಪತಿಯಾಗಿ ವಾಣಿಜ್ಯ ವಿಭಾಗದ ಮುಖ್ಯಸ್ಥರು ಹಾಗೂ ಡೀನ್ ಆಗಿರುವ ಪ್ರೊ.ಈಶ್ವರ್ ಅವರು ಬುಧವಾರ ಅಧಿಕಾರ ವಹಿಸಿಕೊಂಡರು. ಪ್ರಭಾರ ಕುಲಪತಿಯಾಗಿದ್ದ ಡಾ.ಕಿಶೋರ್ ಕುಮಾರ್ ಸಿ.ಕೆ ಅವರು ನೂತನ ಪ್ರಭಾರ ಕುಲಪತಿಯವರಿಗೆ ಅಧಿಕಾರ ಹಸ್ತಾಂತರಿಸಿದರು. ಮಂಗಳೂರು ವಿವಿ ಕುಲಪತಿಯಾಗಿದ್ದ ಪ್ರೊ.ಕೆ.ಭೈರಪ್ಪ ಅವರ ಅಧಿಕಾರ ಅವಧಿ ಜೂ.5ಕ್ಕೆ ಮುಗಿದ ಬಳಿಕ ಸೀನಿಯರ್ ಡೀನ್ ಆಧಾರದಲ್ಲಿ ಡಾ.ಕಿಶೋರ್ ಕುಮಾರ್ ಸಿ.ಕೆ. ಅವರು ಪ್ರಭಾರ ಕುಲಪತಿಯಾಗಿ ನೇಮಕಗೊಂಡಿದ್ದರು. ಅವರ ಸೀನಿಯರ್ ಡೀನ್ ಅವಧಿಯು ಇದೀಗ ಪೂರ್ಣಗೊಂಡಿರುವುದರಿಂದ ಇದೀಗ ಪ್ರಭಾರ ಕುಲಪತಿಯಾಗಿ ಪ್ರೊ.ಈಶ್ವರ್ ಪಿ. ಅವರು ಅಧಿಕಾರವನ್ನು ವಹಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮಂಗಳೂರು ವಿವಿ ಕುಲಸಚಿವ ಪ್ರೊ.ಎಂ.ಖಾನ್, ಪರೀಕ್ಷಾಂಗ ಕುಲಸಚಿವ ಪ್ರೊ.ರವೀಂದ್ರ ಆಚಾರ್ಯ, ಮಂಗಳೂರು ವಿ.ವಿ.ವಿಶೇಷಾಧಿಕಾರಿ ಡಾ.ನಾಗಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇರಳಕಟ್ಟೆ ಜಂಕ್ಷನ್ ಸಮೀಪದ ಕಾನಕೆರೆಯ ನಾಲ್ಕು ಬಾವಿಗಳ ನೀರು ಪೆಟ್ರೋಲ್ ವಾಸನೆ ಬರುತ್ತಿರುವ ಬಗ್ಗೆ ಮಾಧ್ಯಮದಲ್ಲಿ ಪ್ರಸಾರವಾಗುತ್ತಿದ್ದಂತ್ತೆಯೇ ಐಒಸಿಎಲ್ ಹಾಗೂ ಅಗ್ನಶಾಮಕ ದಳದ ಅಧಿಕಾರಿಗಳು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಕುಡಿಯುವ ನೀರನ್ನು ಪರಿಶೀಲಿಸಿದ್ದಾರೆ. ಸ್ಥಳೀಯರ ಆರೋಪದ ಹಿನ್ನೆಲೆಯಲ್ಲಿ ದೇರಳಕಟ್ಟೆ ಜಂಕ್ಷನ್ನಿನಲ್ಲಿ ಕಾರ್ಯಚರಿಸುತ್ತಿರುವ ಪೆಟ್ರೋಲ್ ಬಂಕ್ ಅನ್ನು ತಾತ್ಕಾಲಿಕವಾಗಿ ಪೊಲೀಸರು ಬಂದ್ ಮಾಡಿಸಿದ್ದಾರೆ. ಬೆಳಿಗ್ಗೆ 9 ಗಂಟೆ ವೇಳೆ ಸ್ಥಳಕ್ಕೆ ಅಗ್ನಿ ಶಾಮಕ ದಳ ದೌಡಾಯಿಸಿ ಬಾವಿಯನ್ನು ಮತ್ತು ಸ್ಥಳವನ್ನು ಪರಿಶೀಲಿಸಿ ಮುಂಜಾಗ್ರತಾ ಕ್ರಮವನ್ನು ವಹಿಸಿಕೊಂಡರು. ಸಂಜೆವರೆಗೂ ಅಗ್ನಿ ಶಾಮಕ ಸಿಬ್ಬಂದಿ ಸ್ಥಳದಲ್ಲಿಯೇ ಠಿಕಾಣಿ ಹೂಡಿದ್ದರು. ಕೊಣಾಜೆ ಪೊಲೀಸರು ಸ್ಥಳಕ್ಕಾಗಮಿಸಿ ಸ್ಥಳದಲ್ಲಿ ಬಾವಿಯನ್ನು ನೋಡಲು ಬಂದ ಕುತೂಹಲಿಗರನ್ನು ನಿಯಂತ್ರಿಸಿದರು. ಪೆಟ್ರೋಲ್ ಬಂಕ್ ನಿಂದಾಗಿ ಸೋರಿಕೆ ಉಂಟಾಗುತ್ತಿದೆ ಅನ್ನುವ ಆರೋಪಕ್ಕೆ ಸಂಬಂಧಿಸಿ ಬಂಕ್ ಮಾಲೀಕರಿಗೆ ಪರಿಶೀಲನೆ ನಡೆಸಿ ದೃಢೀಕರಣ ನೀಡಿದ ನಂತರ ವೇ ತೆರೆಯುವಂತೆ ಆದೇಶಿಸಿದ ಎಸಿಪಿ ರಾಮರಾವ್, ಪೆಟ್ರೋಲ್ ಬಂಕ್ ಅನ್ನು…
UN NETWORKS ಇರಾ: ಇರಾ ಕುಂಡಾವು ಕಲ್ಲಾಡಿ ವಿಠಲ ಶೆಟ್ಟಿ ಸೇವಾ ಟ್ರಸ್ಟ್ ವತಿಯಿಂದ ಕಲ್ಲಾಡಿ ವಿಠಲ ಶೆಟ್ಟಿ ಸಂಸ್ಮರಣೆ ಹಾಗೂ ಯಕ್ಷಗಾನ, ಸನ್ಮಾನ ಕಾರ್ಯಕ್ರಮ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಬಯಲು ರಂಗಮಂದಿರದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದಲ್ಲಿ ನಿಟ್ಟೆ ಪರಿಗಣಿಸಲಾಗಿರುವ ವಿವಿ ಕುಲಪತಿ ಪ್ರೊ. ಡಾ. ಸತೀಶ್ ಕುಮಾರ್ ಭಂಡಾರಿ ಹಾಗೂ ಟ್ರಸ್ಟ್ ಪದಾಧಿಕಾರಿಗಳು ಹಿರಿಯ ಕಲಾವಿದ ಬಾಯಾರು ರಘುನಾಥ ಶೆಟ್ಟಿ, ಅವರನ್ನು ಸಹಾಯಧನ ವಿತರಿಸುವುದರೊಂದಿಗೆ ಸನ್ಮಾನಿಸಿದರು.ಟ್ರಸ್ಟ್ ಗೌರವಾಧ್ಯಕ್ಷ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ಡಿ. ಸುರೇಶ್ ರೈ, ಕಲಾಪೋಷಕ ಕುರಿಯಾಳಗುತ್ತು ರಘುನಾಥ ಪಯ್ಯಡೆ ಉಪಸ್ಥಿತರಿದ್ದರು. ಟ್ರಸ್ಟ್ ಅಧ್ಯಕ್ಷ ಇರಾಗುತ್ತು ಜಗದೀಶ್ ಶೆಟ್ಟಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಪುಷ್ಪರಾಜ ಕುಕ್ಕಾಜೆ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಸುರೇಶ್ ಕೊಟ್ಟಾರಿ ಸನ್ಮಾನ ಪತ್ರ ವಾಚಿಸಿದರು. ಜಯರಾಮ ಪೂಜಾರಿ ವಂದಿಸಿದರು. ಬಳಿಕ ಬಡಗುತಿಟ್ಟಿನ ಖ್ಯಾತ ಕಲಾವಿದರ ಕೂಡುವಿಕೆಯಿಂದ ಮಾರುತಿ ಪ್ರತಾಪ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಯಿತು.

