Author: UllalaVani

Kannada News From Coastal Karnataka

UN NETWORKS ಉಳ್ಳಾಲ: ದೇರಳಕಟ್ಟೆ ಕಾನೆಕೆರೆ ಮೂರು ಬಾವಿಗಳಲ್ಲಿ ಪತ್ತೆಯಾದ ತೈಲಾಂಶ ಪ್ರಕರಣ ಇನ್ನಷ್ಟು ಕಗ್ಗಂಟಾಗಿದೆ. ಗುರುವಾರ ಮೂರು ಬಾವಿಗಳ ನೀರನ್ನು ಸಂಪೂರ್ಣ ಹೊರತೆಗೆದರೂ ಮತ್ತೆ ಬಾವಿಯಲ್ಲಿನ ಒರತೆಯಲ್ಲಿ ಅಧಿಕ ಪ್ರಮಾಣದಲ್ಲಿ ತೈಲಾಂಶ (ಪೆಟ್ರೋಲ್ ) ಪತ್ತೆಯಾಗಿದೆ. ಬೆಳ್ಮ ಗ್ರಾಮ ಪಂಚಾಯಿತಿ ವತಿಯಿಂದ ನೀರು ಸಂಪೂರ್ಣ ಹೊರತೆಗೆದು ಗ್ರಾಮಕರಣಿಕರು ಬಾವಿ ನೀರು ಜನ ಉಪಯೋಗಿಸದಂತೆ ಮೊಹರು ಹಾಕಿದ್ದಾರೆ. ನ.13 ರಂದು ಕಾನೆಕೆರೆ ಪ್ರದೇಶಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಭೇಟಿ ನೀಡಿದ್ದರು. ಬೆಳ್ಮ ಗ್ರಾಮ ಪಂಚಾಯಿತಿಗೆ ಬಾವಿ ನೀರು ಸಂಪೂರ್ಣವಾಗಿ ಖಾಲಿ ಮಾಡಿ , ನೀರಿನ ಸ್ಯಾಂಪಲ್ ಅನ್ನು ಎಂ.ಆರ್ ಪಿಎಲ್ ಮತ್ತು ಎನ್ ಐ ಟಿಕೆ ಮುಖೇನ ಉತ್ತಮ ಸಂಶೋಧನಾ ಏಜೆನ್ಸಿಗೆ ಕಳುಹಿಸುವಂತೆ ಜಿಲ್ಲಾ ಆರೋಗ್ಯ ಅಧಿಕಾರಿ ಬಳಿ ಆದೇಶಿಸಿದ್ದರು. ಕಾನೆಕೆರೆಯ ಇಸ್ಮಾಯಿಲ್ .ಕೆ, ಇಸ್ಮಾಯಿಲ್.ಎನ್ ಮತ್ತು ಹುಸೈನ್ ಎಂಬವರಿಗೆ ಸೇರಿದ ಮೂರು ಬಾವಿಗಳಿಂದ ನೀರು ಗುರುವಾರ ಸಂಜೆ ವೇಳೆ ಸಂಪೂರ್ಣ ಹೊರತೆಗೆಯಲಾಯಿತು. ಪಂಪ್ ಮುಖೇನ ನೀರು ಸಿಂಟೆಕ್ಸ್ ಗೆ…

Read More

UN NETWORKS ಉಳ್ಳಾಲ : ಇಂದು ಕೆಲವೊಂದು ವಿಷಯದಲ್ಲಿ ಪ್ಲಾಸ್ಟಿಕ್ ಬಳಕೆ ಅನಿವಾರ್ಯವಾಗಿದೆ, ಆದರೂ ಎಲ್ಲೆಂದರಲ್ಲಿ ಎಸೆಯದೆ ಜವಾಬ್ದಾರಿಯಿಂದ ಬಳಸುವುದು ಮುಖ್ಯ ಎಂದು ರೋಶನಿ ನಿಲಯದ ನಿರ್ದೇಶಕ ಕಿಶೋರ್ ಅತ್ತಾವರ ಅಭಿಪ್ರಾಯಪಟ್ಟರು. ಉಳ್ಳಾಲ ನಗರಸಭೆ ವತಿಯಿಂದ ಶಿಕ್ಷಣ ಇಲಾಖೆ, ರೋಶನಿ ನಿಲಯ ಹಾಗೂ ಜನಶಿಕ್ಷಣ ಟ್ರಸ್ಟ್ ಸಹಭಾಗಿತ್ವದಲ್ಲಿ ಗುರುವಾರ ನಗರಸಭೆಯ ಸಭಾಂಗಣದಲ್ಲಿ ನಡೆದ `ಶೂನ್ಯ ತ್ಯಾಜ್ಯ ನಿರ್ವಹಣಾ ಆಂದೋಲನ-2018-19′ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಜಿಲ್ಲಾ ಸ್ವಚ್ಛತಾ ರಾಯಭಾರಿ ಶೀನ ಶೆಟ್ಟಿ ಮಾತನಾಡಿ, ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ಸುಪ್ರೀಂಕೋರ್ಟ್ ಆದೇಶ ನೀಡಿದ್ದು ದಂಡ ಹಾಕಲಾಗುತ್ತದೆ, ಆದರೂ ಪ್ಲಾಸ್ಟಿಕ್ ಬಳಕೆ ಕಡಿಮೆಯಾಗಿಲ್ಲ. ಕಸ ಸೃಷ್ಟಿಸುವ ಜನರೇ ಪರಿಹಾರ ಕಂಡುಕೊಳ್ಳದಿದ್ದಲ್ಲಿ ಅಧಿಕಾರಿಗಳು, ಸ್ಥಳೀಯಾಡಳಿತ ಮಾಡುವ ಪ್ರಯತ್ನಗಳು ಫಲ ನೀಡದು ಎಂದು ಹೇಳಿದರು. ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಕೃಷ್ಣ ಮೂಲ್ಯ, ರೋಶನಿ ನಿಲಯದ ಪ್ರಾಂಶುಪಾಲೆ ಪ್ರೊ.ಎವ್ಲಿನ್ ಬೆನ್ನೆಸ್, ನಿವೃತ್ತ ಶಿಕ್ಷಕ ವಾಸುದೇವ ರಾವ್, ಅನುದಾನಿತ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ, ಸಂಘಟನಾ…

Read More

UN NETWORKS ಇರಾ: ಇರಾ ತಾಳಿತ್ತಬೆಟ್ಟು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ಕುಕ್ಕಾಜೆ ಉಪಸ್ಥಿತಿಯಲ್ಲಿ ಗುರುವಾರ ನಡೆಸಲಾಯಿತು. ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಚಂದ್ರಾವತಿ, ಗ್ರಾಮ ಪಂಚಾಯತ್ ಸದಸ್ಯರಾದ ದೇವದಾಸ ಅಡಪ, ರಮೇಶ್ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ‌, ಗಣ್ಯರಾದ ವಾಮನ ಪೂಜಾರಿ, ಅದ್ರಾಮ್ ಸಂಪಿಲ, ಕಿಶೋರ್, ರಾಮ್ ಇರಾ, ಮಕ್ಕಳ ಪೋಷಕರು, ಆಶಾ ಕಾರ್ಯಕರ್ತೆಯರು ಉಪಸ್ಥಿತಿತರಿದ್ದರು‌. ಅಂಗನವಾಡಿ ಕಾರ್ಯಕರ್ತೆ ಪ್ರೇಮ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸ್ಪರ್ಧೆಯಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಸೌಮ್ಯ.ಜೆ.ಶೆಟ್ಟಿಯವರು ಅಂಗನವಾಡಿ ಕೇಂದ್ರಕ್ಕೆ ರೇಡಿಯೋ ಸೆಟ್ಟನ್ನು ಹಸ್ತಾಂತರಿಸಿದರು.‌.

Read More

UN NETWORKS ದೇರಳಕಟ್ಟೆ: ಮಕ್ಕಳ ಆರೋಗ್ಯದ ಕಾಳಜಿಯಲ್ಲಿ ಪೋಷಕರ ಪಾತ್ರ ಮಹತ್ವದ್ದಾಗಿದ್ದು, ಬಾಲ್ಯದಿಂದಲೇ ಮಕ್ಕಳಲ್ಲಿ ಆರೋಗ್ಯ ಮತ್ತು ಸ್ವಚ್ಛತೆಯ ಬಗ್ಗೆ ಜಾಗೃತಿ ಮೂಡಿಸಿದಾಗ ಸಮಾಜಕ್ಕೆ ಆರೋಗ್ಯಯುತ ಯುವ ಪೀಳಿಗೆಯನ್ನು ಬೆಳೆಸಲು ಸಾಧ್ಯ ಎಂದು ಕಣಚೂರು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕ ಅಬ್ದುಲ್ ರಹೆಮಾನ್ ಅಭಿಪ್ರಾಯಪಟ್ಟರು. ಕಣಚೂರು ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಕಣಚೂರು ಆಸ್ಪತ್ರೆಯ ಮಕ್ಕಳ ಚಿಕಿತ್ಸಾ ವಿಭಾಗ ಮತ್ತು ಕಣಚೂರು ಕಾಲೇಜ್ ಆಫ್ ನರ್ಸಿಂಗ್ ಸಾಯನ್ಸಸ್ ವಿಭಾಗದ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಕ್ಕಳ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಮಕ್ಕಳ ಚಿಕಿತ್ಸಾ ವಿಭಾಗ ಮುಖ್ಯಸ್ಥ ಡಾ| ನೂರುಲ್ಲಾ ಮಾಹಿತಿ ನೀಡಿ ಮಕ್ಕಳಿಗೆ ಸ್ವಚ್ಛತೆಯ ಪಾಠ ಅಗತ್ಯ ಮುಖ್ಯವಾಗಿ ಮಕ್ಕಳು ಆಟವಾಡುವಾಗ ಮತ್ತು ಆಹಾರ ಸೇವನೆಯ ಸಂದರ್ಭದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಹೆತ್ತವರು ಮಾರ್ಗದರ್ಶನ ನೀಡಬೇಕು ಎಂದರು. ಕಣಚೂರು ಮೆಡಿಕಲ್ ಕಾಲೇಜಿನ ಡೀನ್ ಡಾ| ವಿರೂಪಾಕ್ಷ ಅಧ್ಯಕ್ಷತೆ ವಹಿಸಿದ್ದರು. ವೈದ್ಯಕೀಯ ಅಧೀಕ್ಷಕ ಡಾ| ದೇವಿ ಪ್ರಸಾದ್…

Read More

UN NETWORKS ದೇರಳಕಟ್ಟೆ: ದೇರಳಕಟ್ಟೆಯ ಯೇನೆಪೊಯ ವಿಶ್ವವಿದ್ಯಾನಿಲಯದ ಯೇನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನ ಕೇಂದ್ರದಲ್ಲಿ ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹ ಆಚರಿಸಲಾಯಿತು. “ಆರೋಗ್ಯಕರ ಭಾರತಕ್ಕಾಗಿ ಔಷಧಿಕಾರರು” ಎಂಬ ವಿಷಯದ ಮೇಲೆ ನಡೆದ ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹದಲ್ಲಿ ಸಂಸ್ಥೆಯ ಎಲ್ಲಾ ವೈದ್ಯಕೀಯ ಮತ್ತು ಅರೆ ವೈದ್ಯಕೀಯ ತರಬೇತಿಯ ಭೋಧಕ, ಭೋಧಕೇತರ ಮತ್ತು ವಿದ್ಯಾರ್ಥಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಮೈಸೂರಿನ ಉನ್ನತ ಶಿಕ್ಷಣ ಕೌಶಲ್ಯ ಅಭಿವೃದ್ಧಿ ಮತ್ತು ಸಂಶೋಧನಾ ಕೇಂದ್ರದ ಡಾ| ಬಿ.ಜಿ. ನಾಗವಿ ಹೆಸ್ದಾರ್ ಕಾರ್ಯಕ್ರಮ ಉದ್ಘಾಟಿಸಿ ಔಷಧಿಕಾರರ ಔಷಧಾಲಯದ ಪಾತ್ರ ಮತ್ತು ವ್ಯಾಪ್ತಿಯನ್ನು ವಿವರಿಸಿದರು. ಯೇನೆಪೊಯ ವಿಶ್ವವಿದ್ಯಾನಿಲಯದ ಕುಲಸಚಿವ ಡಾ| ಗಂಗಾಧರ ಸೋಮಾಯಾಜಿ ಕೆ. ಎಸ್. ಉಪಸ್ಥಿತರಿದ್ದರು.ಸಹಾಯಕ ಪ್ರಾಧ್ಯಾಪಕಿ ನಿಶ್ಮಿತಾ ಗ್ರೆಟ್ಟಾ ಡಿ’ಸೋಜಾ ಇವರು ರಾಷ್ಟ್ರೀಯ ಔಷಧ ವಿಜ್ಞಾನ ಸಪ್ತಾಹದ ಮಹತ್ವವನ್ನು ತಿಳಿಸಿದರು .ಯೇನೆಪೊಯ ಫಾರ್ಮಸಿ ಕಾಲೇಜು ಮತ್ತು ಸಂಶೋಧನ ಕೇಂದ್ರದ ಪ್ರಾಂಶುಪಾಲೆ ಡಾ| ಮೊಹಮ್ಮದ್ ಗುಲ್ಜಾರ್ ಅಹಮ್ಮದ್ ಸ್ವಾಗತಿಸಿದರು.ಡಾ| ಸುನಿಲ್ ಎಸ್ ಮೆಂಘಾನಿ ಅವರು ಕಾರ್ಯಕ್ರಮದ ವರದಿಯನ್ನು ವಿವರಿಸಿದರು.…

Read More

UN NETWORKS ಕೊಣಾಜೆ: ಯಾವುದೇ ಉದ್ಯಮಗಳನ್ನು ಸ್ಥಾಪಿಸುವಾಗ ಆತ್ಮ ವಿಶ್ವಾಸದೊಂದಿಗೆ ಛಲವಿದ್ದರೆ ಯಶಸ್ವಿಯಾಗಲು ಸಾಧ್ಯ ಎಂದು ಪಿ.ಎ.ಕಾಲೇಜಿನ ಹಳೆ ವಿದ್ಯಾರ್ಥಿ ಹಾಗೂ ಮಂಗಳೂರಿನ ಆಟಲ್ಲಿರ್ ಡಿಸೈನ್ಸ್ ಶೋರೂಮಿನ ಸಂಸ್ಥಾಪಕ ಮಹಮ್ಮದ್ ಅಷ್ಪಕ್ ಅಭಿಪ್ರಾಯಪಟ್ಟರು. ಪಿ.ಎ. ತಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ವಿಭಾಗದ ಬಯೋಟಿಕ್ ಫೇಸ್ ಫಾರಂ ವತಿಯಿಂದ ಪ್ರೀ-ಐಡೀಯಥಾನ್ ಎಂಬ ವಿಷಯದ ಬಗ್ಗೆ ನವೋದ್ಯಮ ಆಕಾಂಕ್ಷಿಗಳಿಗೆ ನಡೆದ ಕಾರ್ಯಾಗಾರದಲ್ಲಿ ಜೈವಿಕ ತಂತ್ರಜ್ಞಾನದಲ್ಲಿ ಉದ್ಯಮ ಶೀಲತಾ ಅವಕಾಶಗಳು ಎಂಬ ವಿಷಯದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಉದಯೋನ್ಮುಖ ಉದ್ಯಮಿಗಳಿಗೆ ಬೇಕಾದ ವಿಶಿಷ್ಟಗಳ ಬಗ್ಗೆ ಬೆಳಕು ಚೆಲ್ಲುತ್ತಾ ಹೊಸ ವ್ಯವಹಾರಗಳನ್ನು ಪ್ರಾರಂಭಿಸಲು ಸರ್ಕಾರದ ಅನೇಕ ಯೋಜನೆಗಳ ಪ್ರಯೋಜನ ಪಡೆಯಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿದರು. ಪಿ.ಎ. ತಾ.ತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ| ಅಬ್ದುಲ್ ಶರೀಫ್ ಅವರು ಅಧ್ಯಕ್ಷತೆ ವಹಿಸಿದ್ದರು. ಸಂವಾದ ಕಾರ್ಯಕ್ರಮದಲ್ಲಿ ಶೈಕ್ಷಣಿಕ ವಿಭಾಗದ ನಿರ್ದೇಶಕ ಪ್ರೊ| ಸರ್ಫ್‍ರಾಝ್ ಹಾಶಿಮ್, ಬಯೋಟೆಕ್ನಾಲಾಜಿ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ| ಕೃಷ್ಣ ಪ್ರಸಾದ್ ಎನ್., ಬಯೋಟೆಕ್ ಫೊರಂನ…

Read More

UN NETWORKS ಉಳ್ಳಾಲ: ಡಯಾಲಿಸ್ ಅವಶ್ಯವಿರುವ ರೋಗಿಗಳಿಗೆ ಉಚಿತವಾಗಿ ಡಯಾಲಿಸ್ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಮೇಲ್ದರ್ಜೆಗೇರಿರುವ ಉಳ್ಳಾಲ ಆರೋಗ್ಯ ಕೇಂದ್ರದಲ್ಲಿ ಡಯಾಲಿಸ್ ಕೇಂದ್ರ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಉಳ್ಳಾಲದಲ್ಲಿ ಮೇಲ್ದರ್ಜೆಗೇರಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಯಾಲಿಸ್ ಘಟಕದ ಸ್ಥಾಪನೆಗೆ ಸಂಬಂ„ಸಿದಂತೆ ಪರಿಶೀಲನೆ ನಡೆಸಿ ಮಾತನಾಡಿದ ಅವರು ಪೂರ್ಣ ಪ್ರಮಾಣದ ಆಸ್ಪತ್ರೆಯಾಗಿ ಕಾರ್ಯಾಚರಣೆಗೆ ಬೇಕಾದ ಸಿದ್ಧತೆಗಳು ನಡೆಯುತ್ತಿದ್ದು, ಮೂಲಭೂತ ಸೌಕರ್ಯದ ಅಭಿವೃದ್ಧಿಯನ್ನು ಹಂತ ಹಂತವಾಗಿ ಪೂರೈಸಲಾಗುತ್ತಿದೆ. ಆಸ್ಪತ್ರೆಗೆ ಸಂಬಂಧಿಸಿದ ಸಿಬ್ಬಂದಿಗಳ ನೇಮಕಕ್ಕೆ ಸರಕಾರ ಆದೇಶ ಹೊರಡಿಸಲಿದ್ದು, ಶೀಘ್ರವೇ ಆಸ್ಪತ್ರೆ ಪೂರ್ಣ ಪ್ರಮಾಣದಲ್ಲಿ ಕಾರ್ಯಾಚರಣೆ ಮಾಡಲಿದೆ ಎಂದರು. ಆಯುರ್ವೇದ ಥೆರಪಿಗೆ ಆದ್ಯತೆ : ಆಸ್ಪತ್ರೆಯಲ್ಲಿ ಆಯುರ್ವೇದ ಮತ್ತು ಯುನಾನಿ ಚಿಕಿತ್ಸೆಗೆ ಆದ್ಯತೆ ನೀಡುತ್ತಿದ್ದು ಪ್ರಥಮ ಹಂತದಲ್ಲಿ ಆಯುರ್ವೇದ ಥೆರಪಿ, ಪಂಚಕರ್ಮಕ್ಕೆ ಆದ್ಯತೆ ನೀಡಲಾಗುವುದು. ಇದರೊಂದಿಗೆ ಎಲ್ಲಾ ವಿಭಾಗದಲ್ಲಿ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಮಾದರಿ ಆಸ್ಪತ್ರೆಯನ್ನಾಗಿ ರೂಪಿಸಲಾಗುವುದು ಎಂದರು. ಜಿಲ್ಲಾ ಆರೋಗ್ಯಾಧಿಕಾರಿ ರಾಮಕೃಷ್ಣ ರಾವ್, ಸಹಾಯಕ…

Read More

UN NETWORKS ದೇರಳಕಟ್ಟೆ: ಮಧುಮೇಹ ರೋಗಕ್ಕೆ ಚಿಕಿತ್ಸೆ ನೀಡುವುದಕ್ಕಿಂತ ಮಧುಮೇಹ ರೋಗ ಬರದ ಹಾಗೆ ಜಾಗೃತಿ ಮೂಡಿಸುವುದು ಯುವ ವೈದ್ಯರ ಕರ್ತವ್ಯವಾಗಿದ್ದು ಈ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಆಗಬೇಕು ಎಂದು ಡಾ| ಶ್ರೀಕಾಂತ್ ಆಚಾರ್ಯ ಅಭಿಪ್ರಾಯಪಟ್ಟರು. ವಿಶ್ವ ಮಧುಮೇಹ ದಿನಾಚರಣೆ ಅಂಗವಾಗಿ ನಿಟ್ಟೆ ವಿಶ್ವವಿದ್ಯಾನಿಲಯದ ಕೆ.ಎಸ್.ಹೆಗ್ಡೆ ಮೆಡಿಕಲ್ ಅಕಾಡೆಮಿ ಇದರ ಸಮುದಾಯ ಆರೋಗ್ಯ ವಿಭಾಗದ ಆಶ್ರಯದಲ್ಲಿ ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯ ಗ್ಲಾಸ್ ಹೌಸ್‍ನಲ್ಲಿ ಬುಧವಾರ ನಡೆದ ನಡೆದ ವಿಶ್ವ ಮಧುಮೇಹ ದಿನಾಚರಣೆ ಕಾರ್ಯಕ್ರಮಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು. ಮಧುಮೇಹ ಹೇಗೆ ಬರುತ್ತದೆ ಅದರ ಲಕ್ಷಣಗಳೇನು ಎನ್ನುವ ತಿಳುವಳಿಕೆ ಜನರಿಗೆ ನೀಡುವ ಕಾರ್ಯ ಕಳೆದ ಹಲವು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ. ಕಳೆದ ಹಲವು ವರ್ಷಗಳಿಂದ ಮಧುಮೇಹ ರೋಗಿಗಳ ಸಂಖ್ಯೆ ಹೆಚ್ಚುತ್ತಾ ಬಂದಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಅದರಲ್ಲೂ ಯುವ ವೈದ್ಯರು ಮಧುಮೇಹ ರೋಗಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಜನರಿಗೆ ನೀಡುವ ಕಾರ್ಯ ಮಾಡಬೇಕು ಎಂದರು. ಕೆ.ಎಸ್. ಮೆಡಿಕಲ್ ಅಕಾಡೆಮಿಯ…

Read More

UN NETWORKS ಉಳ್ಳಾಲ: ಬೃಹತ್ ಅಂತರಾಜ್ಯ ವಾಹನ ಕಳವು ಜಾಲವನ್ನು ಪತ್ತೆಹಚ್ಚಿರುವ ಉಳ್ಳಾಲ ಪೊಲೀಸರು 15 ಪ್ರಕರಣಗಳನ್ನು ಬೇಧಿಸಿ ಮೂವರು ಆರೋಪಿಗಳು ಹಾಗೂ 20 ಲಕ್ಷ ರೂ ಮೌಲ್ಯದ 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯುವಲ್ಲಿ ಉಳ್ಳಾಲ ಪೊಲೀಸರು ಯಶಸ್ವಿಯಾಗಿದ್ದಾರೆ. ಮಂಜೇಶ್ವರ ಬಪ್ಪಾಯಿ ತೊಟ್ಟಿ ನಿವಾಸಿ ಶಾಹಿರ್ (23), ಉಪ್ಪಳದ ಮೊಹಮ್ಮದ್ ಆದೀಲ್ (26) ಮತ್ತು ಕಾಸರಗೋಡು ಚೆಂಗಳದ ಅಬ್ದುಲ್ ಮುನಾವರ್ ಯಾನೆ ಮುನ್ನ (21) ಬಂಧಿತರು. ಉಳ್ಳಾಲ ಠಾಣಾ ವ್ಯಾಪ್ತಿಯ 4 ಪ್ರಕರಣಗಳ ಒಟ್ಟು ನಾಲ್ಕು ಬುಲೆಟ್ ಮೋಟಾರ್ ಬೈಕ್, ಮಂಗಳೂರು ಉತ್ತರ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಒಂದು ಬುಲೆಟ್ ಮತ್ತು 1 ಬೈಕ್, ಮಂಗಳೂರು ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ 2 ಪ್ರಕರಣಗಳಲ್ಲಿ ಎರಡು ಬೈಕ್, ಮಂಗಳೂರು ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯ 1 ಪ್ರಕರಣದಲ್ಲಿ ಒಂದು ಬೈಕ್ ಸೇರಿದಂತೆ ಕಳವು ನಡೆಸಿದ ಒಟ್ಟು 15 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ. ಷೋಕಿ ಜೀವನಕ್ಕಾಗಿ ಕಳವು…

Read More

UN NETWORKS ದೇರಳಕಟ್ಟೆ: ಮಂಗಳೂರು ವಿಧಾನಸಭಾ ಕ್ಷೇತ್ರದ ಬೆಳ್ಮ ಗ್ರಾಮದ ದೇರಳಕಟ್ಟೆ-ಕಾನೆಕೆರೆ ಪ್ರದೇಶದ ಗಂಭೀರ ಸಮಸ್ಯೆಗಳಾದ ಬಹುಮಹಡಿ ವಸತಿ, ವಾಣಿಜ್ಯ ಸಂಕೀರ್ಣಗಳಿಂದ ಅವೈಜ್ಞಾನಿಕ ಡ್ರೈನೇಜ್ ಸಮಸ್ಯೆಗಳಿಂದಾಗಿ ಹೊರಡುವ ಮಲಿನ ನೀರು, ದುರ್ನಾತಯುತ ತ್ಯಾಜ್ಯಗಳನ್ನು ತೆರೆದ ಕೆರೆ ಮತ್ತು ಬಾವಿಯಲ್ಲಿ ಶೇಕರಿಸುತ್ತಿರುವ ದುರವಸ್ಥೆ, ಸ್ಥಳೀಯ ಕೆಲವು ನಿವಾಸಿಗಳ ಬಾವಿಯಲ್ಲಿ ಉರಿಸಾಧ್ಯವಾದ ತೈಲ ಅಂಶ ಪತ್ತೆ, ಕೆಲವು ನಿರ್ದಿಷ್ಟ ಮನೆಗಳಿಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯ, ನಿರ್ಮಾಣ ಪೂರ್ವ ನೀತಿ ನಿಯಮಗಳನ್ನು ಪಾಲಿಸದೆ ಕಟ್ಟಡ ನಿರ್ಮಾಣಗಳ ಅವ್ಯವಸ್ಥೆ. ಈ ಎಲ್ಲಾ ಸಮಸ್ಯೆಗಳನ್ನು ಹಲವು ವರ್ಷಗಳಿಂದ ಹಲವು ಬಾರಿ ಮನವಿಗಳನ್ನು ನೀಡಿ ಗಮನಕ್ಕೆ ತಂದಿದ್ದರೂ ನಿರ್ಲಕ್ಷತನ ತೋರಿಸಿ, ಪಕ್ಷ ಪಾತ ಧೋರಣೆ ತಳೆದ ಸ್ಥಳೀಯ ಬೆಳ್ಮ ಗ್ರಾಮ ಪಂಚಾಯತ್ ಆಡಳಿತ ಮತ್ತು ಇತರ ಸಂಬಂಧಿ ಇಲಾಖೆಗಳ ನಾಗರಿಕ ವಿರೋಧಿ ನೀತಿ ವಿರುದ್ಧ ಕಾನೆಕೆರೆ ನಿವಾಸಿಗಳು ಮತ್ತು ಸ್ಥಳೀಯ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಬೆಳ್ಮ ಸಮಿತಿ ವತಿಯಿಂದ ಜಿಲ್ಲಾಧಿಕಾರಿಗಳನ್ನು ಭೇಟಿ ನೀಡಿ, ತಕ್ಷಣ ಖುದ್ದಾಗಿ…

Read More