UN NETWORKS ಕೊಣಾಜೆ : ಗ್ರಾಮೀಣ ಜನರ ಬದುಕು, ಸಂಸ್ಕೃತಿ, ಸಂಪ್ರದಾಯಗಳನ್ನು ಇಂದಿನ ಯುವಜನ ಸಮುದಾಯ ಅರಿಯುವಂತಹ ಪ್ರಯತ್ನ ಮಾಡಬೇಕಿದೆ. ನಮ್ಮ ಹಿರಿಯರ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಆಚರಣೆ, ಪದ್ದತಿ, ಸಂಪ್ರದಾಯಗಳು ತಮ್ಮದೇ ಆದ ಮಹತ್ವವನ್ನು ಹೊಂದಿವೆ. ಕೊಣಾಜೆಯ ಬ್ರಹ್ಮಶ್ರೀ ನಾರಾಯಣ ಗುರುಸೇವಾ ಸಂಘವು ಸಮಾಜದಲ್ಲಿ ಹಲವಾರು ಧಾರ್ಮಿಕ, ಶೈಕ್ಷಣಿಕ, ಬಡವರಿಗೆ ನೆರವು ಮೊದಲಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಅಭಿಪ್ರಾಯಪಟ್ಟರು. ಅವರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ(ರಿ) ಗ್ರಾಮಚಾವಡಿ ಇದರ ಕೊಣಾಜೆ ಗ್ರಾಮ ಸಮಿತಿ, ಯುವ ಘಟಕ ಮತ್ತು ಮಹಿಳಾ ಘಟಕದ ಜಂಟಿ ಆಶ್ರಯದಲ್ಲಿ ಬೊಳ್ಮದ ಕಂಡೊಡೊಂಜಿ ದಿನತ್ತ ಗಮ್ಮತ್ತ್ ಮತ್ತು ಕೊಣಾಜೆ ಯುವ ಘಟಕದ 12ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ನಮ್ಮ ಸಂಸ್ಕøತಿ ಸಂಪ್ರದಾಯದೊಂದಿಗೆ ಸೌಹಾರ್ದ ಸಮಾಜವನ್ನು ಕಟ್ಟಬೇಕು. ಇಂತಹ ಉತ್ತಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಮೂಲಕ ದಾರಿ ತಪ್ಪುತ್ತಿರುವ ಜನರ ಮನಸ್ಸನ್ನು,…
Author: UllalaVani
UN NETWORKS ತೊಕ್ಕೊಟ್ಟು: ಗೂಡುದೀಪ ನಿರ್ಮಿಸುವುದು ಸುಲಭದ ಕೆಲಸವಲ್ಲ, ಹಲವು ದಿನದ ಕ್ಲಿಷ್ಟಕರ ಪ್ರಯತ್ನದಿಂದ ಗೂಡುದೀಪ ತಯಾರಿಸುವವರು ಅಭಿನಂದನೆಗೆ ಅರ್ಹರು ಎಂದು ಸಾಮಾಜಿಕ ಮುಂದಾಳು ಸುರೇಶ್ ಭಟ್ನಗರ ಅಭಿಪ್ರಾಯಪಟ್ಟರು.ತೊಕ್ಕೊಟ್ಟು ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ವತಿಯಿಂದ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ಶನಿವಾರ ನಡೆದ11ನೇ ವರ್ಷದ ಗೂಡುದೀಪ ಸಂಗಮ, ದೀಪಾವಳಿ ಸಂಭ್ರಮ ಗೂಡುದೀಪ ಸ್ಪರ್ಧೆ ಸಭಾ ಕಾರ್ಯಕ್ರಮದಲ್ಲಿ ಸಾಧಕ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದರು. ಭಗತ್ ಸಿಂಗ್ ಹೆಸರೇ ರೋಮಾಂಚಕ. ಅವರ ಹೆಸರಿಗೆ ಕಿಂಚಿತ್ ಕಳಂಕ ಬರದಂತೆ ಸಮಾಜ ಸೇವೆ ಮಾಡುತ್ತಿರುವ ಸಂಘಟನೆಯನ್ನು ಜನ ಗುರುತಿಸುವಂತಾಗಿದೆ ಎಂದು ಹೇಳಿದರು.ಶ್ರೀ ಮಂಗಳಾದೇವಿ ದೇವಸ್ಥಾನದ ಆಡಳಿತ ಮೊಕ್ತೇಸರ ರಮಾನಾಥ ಹೆಗ್ಡೆ ಸಭಾ ಕಾರ್ಯಕ್ರಮ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಧಾರ್ಮಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿನ ಸೇವೆಗಾಗಿ ಸುರೇಶ್ ಭಟ್ನಗರ ಇವರಿಗೆ ಭಗತ್ ಸಿಂಗ್ ಸಾಧಕ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಉಳ್ಳಾಲ ಸದ್ಭಾವನಾ ವೇದಿಕೆ ಅಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್ ಅಧ್ಯಕ್ಷತೆ ವಹಿಸಿ, ಇಂದು ಯಾರಿಗೂ ಸಮಯ ಇಲ್ಲ, ಇಂತಹ ಸಂದರ್ಭದಲ್ಲೂ ಹಲವು ತಿಂಗಳುಗಳನ್ನು…
UN NETWORKS ಉಳ್ಳಾಲ: ಫಿಝಾ ಗ್ರೂಪ್‍ನ ಮಾಲೀಕ, ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಅವರ ಪುತ್ರಿ ಫಿಜಾ ಹಾಗೂ ಕೇರಳದ ಉದ್ಯಮಿ ರೋಶನ್ ಅವರ ಅದ್ದೂರಿ ನಿಖಾಹ್ ಸಮಾರಂಭ ಉಳ್ಳಾಲ ಸಮುದ್ರತಟದ ವಿಶಾಲ ಬಂಗ್ಲೆಯ ಕ್ಯಾಂಪಸ್‍ನಲ್ಲಿ ಶುಕ್ರವಾರ ಸಂಜೆ ನಡೆಯಿತು. ಸಮಾರಂಭದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹಾಗೂ ಕುಟುಂಬದ ಸದಸ್ಯರು ಸೇರಿದಂತೆ ಗಣ್ಯರು ಪಾಲ್ಗೊಂಡರು. ಫಾರೂಕ್ ಅವರ ಮನೆ ಸೇರಿದಂತೆ ಕ್ಯಾಂಪಸ್‍ನ್ನು ಕೋಟಿ ಕೋಟಿಗೂ ಅಧಿಕ ವೆಚ್ಚದಲ್ಲಿ ವಿದ್ಯುತ್ ದೀಪ, ಹೂವಿನಿಂದ ಅಲಂಕರಿಸಲಾಗಿತ್ತು. ಫಾರೂಕ್ ಪುತ್ರಿ ವಧುವಿಗೆ ಹಾಗೂ ವರ ರೋಶನ್‍ಗೆ ನಿಖಾಹ್ ಹಾಗೂ ವಿಶ್ರಾಂತಿಗಾಗಿ ವಿಶೇಷ ವೇದಿಕೆ ನಿರ್ಮಿಸಲಾಗಿತ್ತು. ಮನೆಯ ಮುಂಭಾಗದಲ್ಲಿ ಅತಿಥಿಗಳನ್ನು ಸ್ವಾಗತಿಸಿದ ಬಳಿಕ ಮನೆಯ ಹಿಂಭಾಗದ ಸಮುದ್ರತಟದ ಕ್ಯಾಂಪಸ್‍ನಲ್ಲಿ ಭೋಜನ, ಸಂಗೀತ ರಸಿಕರಿಗಾಗಿ ಗಝಲ್ ಎಲ್ಲವೂ ಒಂದಕ್ಕಿಂತ ಒಂದು ಮೇಳೈಸಿತ್ತು. ಸಂಜೆ ವಿಮಾನದಲ್ಲಿ ಬಜ್ಪೆಯಲ್ಲಿ ಬಂದು ಇಳಿದ ಅವರು ನೇರವಾಗಿ ಉಳ್ಳಾಲ ರಾಣಿ ಅಬ್ಬಕ್ಕ ಸರ್ಕಲ್ ಬಳಿಯ ಫಾರೂಕ್ ಅವರ ಬಂಗಲೆಗೆ ಆಗಮಿಸಿದರು. https://www.youtube.com/watch?v=8r9YGLNVAWo&t=446s ಮದುವೆ…
UN NETWORKS ಉಳ್ಳಾಲ: ವಿವಾಹ ಅಮಂತ್ರಣ ಪತ್ರಿಕೆಯಲ್ಲಿ ಮದುವೆಯ ಕರೆಯೊಂದಿಗೆ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. “ಮೋದಿಗೆ ಮತ ಹಾಕಿದ್ರೆ ಅದೇ ವಧು ವರರಿಗೆ ನೀಡಿ ಉಡುಗೊರೆ ” ಎಂದು ಆಮಂತ್ರಣದಲ್ಲಿ ಮುದ್ರಿಸಿದ್ದಾರೆ. ಈ ರೀತಿಯ ವಿವಾಹ ಆಮಂತ್ರಣವನ್ನು ಮುದ್ರಿಸಿದವರು ಸೋಮೇಶ್ವರ ನಿವಾಸಿಯಾಗಿ ಪ್ರವೀಣ್. ಇವರು ಇದೇ ಮುಂಬರುವ ಡಿ.31 ರಂದು ಕೇದಿಗೆ ನಿವಾಸಿ ಹೇಮಲತಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.ಮದುವೆ ಕಾಗದದಲ್ಲಿ ಪ್ರಧಾನಿ ಮೋದಿ ಮೇಲಿನ ಅಭಿಮಾನವನ್ನು ಮೆರೆದು, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ಪರ ಮತ ಚಲಾಯಿಸುವಂತೆ ಮದುವೆ ಕಾಗದಲ್ಲಿ ವಿನಂತಿಸಿದ್ದಾರೆ. ಅಲ್ಲದೆ ಕೇಂದ್ರ ಸರಕಾರ ವಿವಿಧ ಯೋಜನೆಗಳನ್ನು ಮದುವೆ ಕಾಗದಲ್ಲಿ ಮುದ್ರಿಸಿದ್ದಾರೆ. ಇದೀಗ ಇವರ ಮದುವೆ ಕರೆಯೋಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
UN NETWORKS ಮುಡಿಪು : ಕುರ್ನಾಡು ಜಿಲ್ಲಾ ಪಂಚಾಯಿತಿ ಕ್ಷೇತ್ರದ ಮುಡಿಪು ನನ್ನ ಕ್ಷೇತ್ರ ವ್ಯಾಪ್ತಿಗೆ ಬಂದ ಬಳಿಕ ಅಭೂತಪೂರ್ವ ಪ್ರಗತಿ ಕಂಡಿದೆ. ಕೆಲವು ವರ್ಷಗಳ ಹಿಂದೆ ಇಲ್ಲಿನ ಕಾಲೇಜು ಕೂಡಾ ಅಭಿವೃದ್ಧಿ ಕಾಣಲಿಲ್ಲ. ಕಾಲೇಜಿನಲ್ಲಿ ಮೂಲ ಸೌಲಭ್ಯಗಳ ಕೊರತೆ ಇರುವುದನ್ನು ಮನಗಂಡು ಈ ಕಾಲೇಜಿನ ಸರ್ವತೋಮುಖ ಅಭಿವೃದ್ಧಿಯ ಬಗ್ಗೆ ಆದ್ಯತೆ ನೀಡಿದೆ. ಹಾಗಾಗಿ ನನ್ನಿಂದಲೇ ಬಹಳಷ್ಟು ಯೋಜನೆ ತರಲು ಸಾಧ್ಯವಾಗಿರುವುದು ನನಗೆ ತುಂಬ ಸಂತೋಷ ತಂದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಹೇಳಿದರು. ಬಂಟ್ವಾಳ ತಾಲೂಕಿನ ಕುರ್ನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಡಿಪಿನಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ನೂತನ ಕಟ್ಟಡಕ್ಕೆ ಶುಕ್ರವಾರ ಶಿಲಾನ್ಯಾಸಗೈದು ಅವರು ಮಾತನಾಡಿದರು.ಕಡಿಮೆ ಅಂಕ ಗಳಿಸಿದ ಅಥವಾ ಮೂಲ ಸೌಲಭ್ಯ ಕೊರತೆಯ ಕಾರಣದಿಂದ ಶಿಕ್ಷಣದಿಂದ ವಂಚಿತರಾದ ವಿದ್ಯಾರ್ಥಿಗಳಿಗೆ ಇತರ ಕಾಲೇಜಿನಲ್ಲಿ ಕಲಿಯಲು ಡೊನೇಶನ್, ಶುಲ್ಕ ಸೇರಿದಂತೆ ಬಹಳಷ್ಟು ಸಮಸ್ಯೆ ಎದುರಾಗುವುದನ್ನು ಮನಗಂಡು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳಿಗೆ ಇದೇ ಕಾಲೇಜಿನಲ್ಲಿ ಶಿಕ್ಷಣ ಸಿಗಬೇಕು…
UN NETWORKS ಮುಡಿಪು: ಗ್ರಾಮೀಣ ಪ್ರದೇಶದ ಬಡ ಜನರು ನೆಮ್ಮದಿಯುತ ಜೀವನ ನಡೆಸುವುದಕ್ಕಾಗಿ ರಾಜ್ಯ ಸರಕಾರವು ಬಡವರಿಗೆ ಮುಖ್ಯಮಂತ್ರಿ ಉಚಿತ ಅನಿಲ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಎಷ್ಟೋ ಬಡ ಮಹಿಳೆಯರು ಸ್ವಾಭಿಮಾನದ ಬದುಕು ನಡೆಸುತ್ತಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರು ಹೇಳಿದರು. ಅವರು ಮುಡಿಪುವಿನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಮುಖ್ಯಮಂತ್ರಿ ಅನಿಲ ಭಾಗ್ಯ ಯೋಜನೆಯ ಉಚಿತ ಗ್ಯಾಸ್ ಸಿಲಿಂಡರ್ ಹಾಗೂ ಸ್ವೌವ್ ವಿತರಣೆ ಹಾಗೂ ಅಡುಗೆ ಅನಿಲ ಬಳಕೆ ಬಗ್ಗೆ ಸುರಕ್ಷಾ ಕ್ರಮಗಳ ಕುರಿತು ಕಾರ್ಯಗಾರವನ್ನು ಉದ್ಘಾಟಿಸಿ ಮಾತನಾಡಿದರು. ಆಹಾರ ಸಚಿವನಾಗಿದ್ದ ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಉಚಿತ ಅನಿಲ ಭಾಗ್ಯ ಯೋಜನೆಯ ಬಗ್ಗೆ ತಿಳಿಸಿದಾಗ ಬಡವರಿಗೆ ಅನುಕೂಲವಾಗುವ ಯೋಜನೆಗೆ ಪ್ರೋತ್ಸಾಹ ನೀಡಿ ಯೋಜನೆಯನ್ನು ಜಾರಿಗೆ ತಂದಿದ್ದು, ಇದೀಗ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಯೋಜನೆಯನ್ನು ಮುಂದುವರಿಸಿದ್ದಾರೆ. ಈ ಯೋಜನೆಯಲ್ಲಿ ಸಿಲಿಂಡರ್, ಸ್ವೌವ್, ರೆಗ್ಯುಲೇಟರ್ ಜೊತೆಗೆ ಎರಡು ಸಲ ಉಚಿತ ರಿಫಿಲ್ ಕೂಡಾ ಮಾಡಲಾಗುತ್ತಿದೆ.…
UN NETWORKS ಮುಡಿಪು: ಸರ್ಕಾರದ ಸಬ್ಸಿಡಿ, ಸಾಲಮನ್ನಾ ನೇರವಾಗಿ ಫಲಾನುಭವಿಗಳಿಗೇ ಸೇರುವುದರಿಂದ ಸಹಕಾರಿ ಸಂಘಗಳು ಜನಸಾಮಾನ್ಯರ ಬಂಡವಾಳದಿಂದಲೇ ಮುನ್ನಡೆಯುತ್ತಿದೆ, ಆದರೆ ಸರ್ಕಾರದ ಕೆಲಸ ಸಂಘಗಳು ಮಾಡುತ್ತಿವೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಅಧ್ಯಕ್ಷ ಡಾ.ಎಂ.ಎನ್.ರಾಜೇದ್ರ ಕುಮಾರ್ ಹೇಳಿದರು. ಅಮ್ಮೆಂಬಳ ಸೇವಾ ಸಹಕಾರಿ ಬ್ಯಾಂಕ್, ರಾಜ್ಯ ಸಹಕಾರ ಮಹಾಮಂಡಳ, ದ.ಕ.ಜಿಲ್ಲ ಕೇಂದ್ರ ಸಹಕಾರಿ ಬ್ಯಾಂಕ್, ಜಿಲ್ಲಾ ಸಹಕಾರಿ ಯೂನಿಯನ್, ಸಹಕಾರಿ ಇಲಾಖೆ ಹಾಗೂ ಬಂಟ್ವಾಳ ತಾಲೂಕಿನ ಪತ್ತಿನ ಪ್ರಾಥಮಿಕ ಸಹಕಾರಿ ಸಂಘಗಳ ಸಂಯುಕ್ತ ಆಶ್ರಯದಲ್ಲಿ 65ನೇ ಅಖಿಲ ಭಾರತ ಸಹಕಾರ ಸಪ್ತಾಹ-2018ರ ಪ್ರಯುಕ್ತ ಮುಡಿಪುವಿನಲ್ಲಿ ಶುಕ್ರವಾರ ನಡೆದ `ಸಹಕಾರ ಸಂಸ್ಥೆಗಳ ಮೂಲಕ ಮೌಲ್ಯವರ್ಧನೆ ಮತ್ತು ಬ್ರಾಂಡ್ ನಿರ್ಮಾಣ’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲೆಯಲ್ಲಿ ಎಷ್ಟೇ ದೊಡ್ಡ ಬ್ಯಾಂಕ್‍ಗಳಿದ್ದರೂ ಕಟ್ಟಕಡೆಯ ರೈತನನ್ನು ತಲುಪುವುದು ಸಹಕಾರಿ ಬ್ಯಾಂಕ್‍ಗಳು ಮಾತ್ರ, ರೈತರ ಆರ್‍ಟಿಸಿ ಪಡೆದು ಸಾಲ ನೀಡುವ ರಾಷ್ಟ್ರೀಯ ಬ್ಯಾಂಕ್‍ಗಳು ಸಾಲಮನ್ನಾಕ್ಕೆ ಹಿಂದೇಟು ಹಾಕುತ್ತಿದ್ದರೂ ಸಹಕಾರಿ ಬ್ಯಾಂಕ್‍ಗಳು ರೈತರಿಗಾಗಿ ಪ್ರಾಮಾಣಿಕ ನೆಲೆಯಲ್ಲಿ ಕಾರ್ಯ…
UN NETWORKS ಕೊಣಾಜೆ: ಇಂದು ವಿದ್ಯಾರ್ಥಿಗಳಲ್ಲಿ ಓದಿನ ಹಸಿವು ಕಡಿಮೆಯಾಗುತ್ತಿರುವುದನ್ನು ನಾವು ಗಮನಿಸುತ್ತೇವೆ. ಓದಿನ ಹಸಿವಿಲ್ಲದಿದ್ದರೆ ನಾವು ಓದಿಯೂ ಪ್ರಯೋಜನವಿರುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳು ಹೆಚ್ಚೆಚ್ಚು ಓದುವ ಹವ್ಯಾಸವನ್ನು ಬೆಳೆಸಿಕೊಂಡು ಜ್ಞಾನವಂತರಾಗಿ ಹೊಸ ಜಗತ್ತನ್ನು ಸೃಷ್ಟಿಸುವವರಂತಾಗಬೇಕು ಎಂದು ಖ್ಯಾತ ಸಾಹಿತಿ ವೈದೇಹಿ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಮಂಗಳಾ ಸಭಾಂಗಣದಲ್ಲಿ 2018-19ನೇ ಸಾಲಿನ ಮಂಗಳೂರು ವಿವಿ ಸ್ನಾತಕೋತ್ತರ ವಿದ್ಯಾರ್ಥಿ ಪರಿಷತ್ ಉದ್ಘಾಟನೆ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು. ಇಂದು ಜಾತಿ, ಮತ, ಧರ್ಮಗಳ ನಡುವೆ ಮನುಷ್ಯ ಕಾಣುತ್ತಿಲ್ಲ. ಶಿಕ್ಷಣವು ನಮ್ಮಲ್ಲಿ ಉತ್ತಮ ಮನಸ್ಸುಗಳನ್ನು, ಮಾನವೀಯ ನೆಲೆಗಳನ್ನು ರೂಪಿಸದೇ ಇದ್ದರೆ ಶಿಕ್ಷಣದ ಅಗತ್ಯವಿದೇಯೇ? ಶ್ರೀಮಂತಿಯನ್ನು ಬೆಳೆಸಲು ಮಾತ್ರ ಶಿಕ್ಷಣವೇ? ಎಂಬುದನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ. ನಮಗೆ ನೈಜವಾದ ಜ್ಞಾನದ ಶಿಕ್ಷಣದ ಅಗತ್ಯವಿದೆ. ಅದು ನಮ್ಮಲ್ಲಿ ಮಾನವೀಯ ನೆಲೆಯನ್ನು ಒದಗಿಸಿ ಉತ್ತಮ ವ್ಯಕ್ತಿತ್ವವನ್ನು ರೂಪಿಸುವಂತಿರಬೇಕು ಎಂದು ಹೇಳಿದರು. ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಂಗಳೂರು ವಿವಿ ಪ್ರಭಾರ ಕುಲಪತಿ ಪ್ರೊ.ಈಶ್ವರ್…
UN NETWORKS ಮಂಗಳೂರು: ಡಿಸೆಂಬರ್ 2009ರಲ್ಲಿ ಉಜಿರೆಯಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನ ತುಳುನಾಡ ಐತಿಹಾಸದಲ್ಲೇ ಸ್ವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಮಹಾಸಮ್ಮೇಳನವಾಗಿ ಮೂಡಿತ್ತು. ಪ್ರತೀಯೋರ್ವ ತುಳುವರ ಹಿರಿಮೆಯ ಸಮ್ಮೇಳನವೂ ಆಗಿತ್ತು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಇವುಗಳ ಸಾರಥ್ಯದಲ್ಲಿ ಮಂಗಳೂರು ಅಡ್ಯಾರ್ ನಲ್ಲಿ ನಡೆಸಲ್ಪಟ್ಟ ವಿಶ್ವ ತುಳು ಸಮ್ಮೇಳನವೂ ಭಿನ್ನವಾಗಿಯೇ ಮೂಡಿತ್ತು. ಇದು ಸಾಗರೋತ್ತರ ದುಬಾಯಿನಲ್ಲಿ ಜರುಗುವ ಸಮ್ಮೇಳನ ಎಲ್ಲಕ್ಕೂ ಮೀರಿ ಮತ್ತೊಂದು ಮೈಲುಗಲ್ಲು ಆಗಿ ಮೂಡಲಿದೆ ಎನ್ನುವ ಆಶಯ ನನಗಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ವಿಶ್ವ ತುಳುವರೆ ಪರ್ಬ ಸಮಿತಿ ಗೌರವಾಧ್ಯಕ್ಷ, ಪದ್ಮಭೂಷಣ ಡಾ| ಡಿ.ವೀರೇಂದ್ರ ಹೆಗ್ಗಡೆ ಎಂದರು. ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಪ್ರಥಮ ಬಾರಿಗೆ ವಿಶ್ವದ ಸಮಸ್ಥ ತುಳುವರ ಬೃಹತ್ ಸಮಾವೇಶ ಆಗಿಸಿ ಇದೇ ನ.23-24ರ ದ್ವಿದಿನಗಳಲ್ಲಿ ದುಬಾಯಿ (ಯುಎಇ) ಅಲ್ಲಿನ ಅಲ್ ನಾಸರ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಎನ್‍ಎಂಸಿ ಸಮೂಹ ಸಂಸ್ಥೆಯ ಸ್ಥಾಪಕ ಮತ್ತು…
UN NETWORKS ಉಳ್ಳಾಲ: ಶಿಕ್ಷಣ ಪಡೆದ ವಿದ್ಯಾರ್ಥಿಗಳು , ಶಿಕ್ಷಕರನ್ನು ಗುರುತಿಸಿ ಗೌರವಿಸುವಂತಹ ಕಾರ್ಯ ಶ್ಲಾಘನೀಯ ಎಂದು ಪಿಲಾರು ಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀಧರ್ ಮಾಸ್ತರ್ ಅಭಿಪ್ರಾಯಪಟ್ಟರು. ಪಿಲಾರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿ 2008ನೇ ಸಾಲಿನ ಹಳೇ ವಿದ್ಯಾರ್ಥಿಗಳಿಂದ ಶಾಲೆಯಲ್ಲಿ ಗುರುವಾರ ಶಿಕ್ಷಕರಿಗೆ ನಡೆದ ಗುರುವಂದನೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ವಿದ್ಯೆ ಪಡೆದ ವಿದ್ಯಾರ್ಥಿಗಳು ಗುರುತಿಸಿ ಗೌರವಿಸುವ ಕಾರ್ಯ ಸಂತಸ ಕೊಡುತ್ತದೆ. ಪಿಲಾರು ಶಾಲೆಯಲ್ಲಿ ಕಲಿತವರು ವೈದ್ಯರೂ ಆಗಿದ್ದಾರೆ. ಅಪಘಾತ ಪ್ರಕರಣ ಸಂದರ್ಭ ವಿದ್ಯಾರ್ಥಿನಿಯೊಬ್ಬಳು ವೈದ್ಯೆಯಾಗಿ ಸಿಕ್ಕಿದ್ದು, ಹೈಕೋರ್ಟಿನಲ್ಲಿ ವಕೀಲರಾಗಿ ಸಿಕ್ಕಿರುವುದು ವೃತ್ತಿ ಜೀವನದ ಸಾರ್ಥಕತೆಯನ್ನು ಕೊಡುತ್ತದೆ ಎಂದರು. ನಿವೃತ್ತ ಮುಖ್ಯೋಪಾಧ್ಯಾಯಿನಿ ಕಮಲಾ ಬಾೈ, ಹಿರಿಯ ಶಿಕ್ಷಕರುಗಳಾದ ಕಾತ್ಯಾಯಿನಿ, ಮೇರಿ, ಐಡಾ ಡಿಸೋಜ, ಪ್ರವೀಣಾ, ಪುಷ್ಪಾವತಿ ಉಚ್ಚಿಲ್, ವಿಶಾಲಾಕ್ಷಿ, ನಾಗವೇಣಿ, ಸ್ಮಿತಾ, ಭಾರತಿ, ಪ್ರೇಮಲತಾ, ಗುಲಾಬಿ ಹಾಗೂ ಎಸ್ ಡಿಎಂಸಿ ಅಧ್ಯಕ್ಷ ಆಸೀಫ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಹಳೇ ವಿದ್ಯಾರ್ಥಿಗಳಾದ ಅನುಷಾ .ಬಿ ಸ್ವಾಗತಿಸಿದರು. ತೇಜೇಶ್ ಮತ್ತು…

