UN NETWORKS ಸೋಮೇಶ್ವರ: ಸೋಮೇಶ್ವರದ ಪರಿಜ್ಞಾನ ಪದವಿಪೂರ್ವ ಕಾಲೇಜಿನಲ್ಲಿ ಸೈನ್ಷಿಯಾ- 2K18 ವಿಜ್ಞಾನ ವಸ್ತು ಪ್ರದರ್ಶನ ನಡೆಯಿತು.ಕಾರ್ಯಕ್ರಮವನ್ನು ರಸಾಯನ ಶಾಸ್ತ್ರ ಉಪನ್ಯಾಸಕಿ ಪವನಾ ರವಿ ಪ್ರಕಾಶ್ ಉದ್ಘಾಟಿಸಿದರು. ಕಾಲೇಜಿನ ವಿಜ್ಞಾನ ವಿಭಾಗದ ಮಕ್ಕಳು ವಿವಿಧ ವೈಜ್ಞಾನಿಕ ಮಾದರಿಗಳನ್ನು ಪ್ರದರ್ಶಿಸಿದರು. ವಿಜ್ಞಾನಕ್ಕೆ ಸಂಬಂಧ ಪಟ್ಟ ಪ್ರಾತ್ಯಕ್ಷಿಕೆಗಳನ್ನು ಪ್ರದರ್ಶಿಸಲಾಯಿತು. ಚಿಣ್ಣರಿಗಾಗಿ ಕಾಲೇಜು ವಿದ್ಯಾರ್ಥಿಗಳು ಮ್ಯಾಜಿಕ್ ಶೋ ಪ್ರದರ್ಶನ ಮಾಡಿದರು. ಕಾರ್ಯಕ್ರಮದಲ್ಲಿ ಆನಂದಾಶ್ರಮ ಪ್ರೌಢಶಾಲೆ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಚಂದ್ರಶೇಖರ್, ಸಾರಸ್ವತ ವಿದ್ಯಾ ಸಂಸ್ಥೆಯ ಕಾರ್ಯದರ್ಶಿ ಮಹೇಶ್ ಎಲ್ ಬೊಂಡಾಲ್, ಮುಖ್ಯ ಕಾರ್ಯನಿರ್ವಹಣಾಧೀಕಾರಿ ಎ.ಎಸ್. ರಾಮಚಂದ್ರರಾವ್ ಹಾಗೂ ಪ್ರಾಂಶುಪಾಲ ವಿಕ್ರಮ ಉಪಸ್ಥಿತರಿದ್ದರು. ದ್ವಿತೀಯ ಪಿಯುಸಿ ವಿದ್ಯಾರ್ಥಿ ವೈಭವ್ ಶೆಟ್ಟಿ ಸ್ವಾಗತಿಸಿದರು. ಚರಿತ್ ರಾಜ್ ಕಾರ್ಯಕ್ರಮ ನಿರೂಪಿಸಿದರು. ನವ್ಯಶ್ರೀ ನಾಯಕ್ ವಂದಿಸಿದರು.
Author: UllalaVani
UN NETWORKS ತೊಕ್ಕೊಟ್ಟು: ಪರಿಸ್ಥಿತಿಯ ಲಾಭ ಪಡೆದು ಭಾವನಾತ್ಮಕವಾಗಿ ಜನ ಬೆಂಬಲ ಪಡೆದು ಆಕಸ್ಮಿಕವಾಗಿ ಎರಡು ಬಾರಿ ಸಂಸದರಾಗಿರುವ ನಳಿನ್ ಕುಮಾರ್ ಕಟೀಲು ಈ ಜಿಲ್ಲೆಗೆ ಜನಪರವಾದ ಯಾವುದೇ ಅಭಿವೃದ್ಧಿ ಕಾರ್ಯಕ್ರಮ ಮಾಡಿಲ್ಲ. ಆದರೆ ಈ ಜಿಲ್ಲೆಯ ಸಂಸದರಾಗಿದ್ದ ಶ್ರೀನಿವಾಸ ಮಲ್ಯ ಅವರು ಸಂಸದರಾಗಿದ್ದ ಸಂದರ್ಭ ಜಿಲ್ಲೆಯಲ್ಲಿ ಬಹಳಷ್ಟು ಅಭಿವೃದ್ಧಿ ಕಂಡಿದ್ದು ಬಿಟ್ಟರೆ ಆ ಬಳಿಕ ಆಯ್ಕೆಯಾದ ಸಂಸದರು ಚುನಾವಣೆಯಲ್ಲಿ ಗೆಲ್ಲುವ ತಂತ್ರ ಹೂಡಿದರೆ ಹೊರತು ಜನಪರವಾದ ಯಾವುದೇ ಯೋಜನೆ ಅನುಷ್ಠಾನಕ್ಕೆ ತರಲಿಲ್ಲ ಎಂದು ಯಾದವ ಶೆಟ್ಟಿ ಆರೋಪಿಸಿದರು. ಜನರ ಅತ್ಯಾವಶ್ಯಕ ಬೇಡಿಕೆಗಳನ್ನು ಆಗ್ರಹಿಸಿ ಹೋರಾಟಕ್ಕೆ ಸಮಜ್ಜುಗೊಳಿಸುವ ನಿಟ್ಟಿನಲ್ಲಿ ಸಿಪಿಎಂ ಉಳ್ಳಾಲ ವಲಯ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟಿನ ಉಳ್ಳಾಲ ಪುರಸಭೆಯ ಬಸ್ ನಿಲ್ದಾಣದ ಬಳಿ ಸೋಮವಾರ ನಡೆದ ವಾರ್ಷಿಕ ಸಾರ್ವಜನಿಕ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.ಕೇಂದ್ರ ಸರಕಾರ ಈ ಬಾರಿ 27ಲಕ್ಷ ಕೋಟಿ ರೂ. ಬಜೆಟ್ ಇದ್ದರೂ ಸಂಸದ ಕಟೀಲು ಅವರು ಈ ಜಿಲ್ಲೆಗೆ 15ಸಾವಿರ ಕೋಟಿ ರೂ. ಅನುದಾನ ತಂದಿದ್ದಾರೆ…
UN NETWORKS ಉಳ್ಳಾಲ: ನವ ದೆಹಲಿಯ ರಾಷ್ಟ್ರೀಯ ಪರೀಕ್ಷಾ ಮಂಡಳಿ, ಖ್ಯಾತ ಆರ್ಥೋಪೆಡಿಕ್ ಸರ್ಜನ್, ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಪ್ರೊ. ಡಾ. ಎಂ. ಶಾಂತಾರಾಮ ಶೆಟ್ಟಿ ಅವರಿಗೆ ನವದೆಹಲಿಯ ಪರೀಕ್ಷಾ ಮಂಡಳಿ ಕೇಂದ್ರದಲ್ಲಿಇತ್ತೀಚೆಗೆ ನಡೆದ 2018ರ ಘಟಿಕೋತ್ಸವದಲ್ಲಿ “ಶ್ರೇಷ್ಠ ಅಧ್ಯಾಪಕ ರಾಷ್ಟ್ರ ಪ್ರಶಸ್ತಿ’ ನೀಡಿ ಗೌರವಿಸಿದೆ. ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಪ್ರಶಸ್ತಿ ವಿತರಿಸಿದರು.
UN NETWORKS ತಲಪಾಡಿ: ಮಂಗಳೂರಿನಿಂದ ಕಾಸರಗೋಡು ಕಡೆಗೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರು ಮರಳು ಲಾರಿಗಳನ್ನು ತಲಪಾಡಿ ಬಳಿ ರಾತ್ರಿ ಗಸ್ತು ತಿರುತ್ತಿದ್ದ ಉಳ್ಳಾಲ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಚಾಲಕರು ಪರಾರಿಯಾದ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮಂಗಳೂರು ಕಣ್ಣೂರು ನೇತ್ರಾವತಿ ಬದಿಯಿಂದ ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್ ಗಳಲ್ಲಿ ಮರಳು ತುಂಬಿಸಿ ಕೇರಳ ಕಡೆಗೆ ಸಾಗಿಸುವ ಮಾಹಿತಿ ಪಡೆದ ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ ಅವರ ಸೂಚನೆ ಮೇರೆಗೆ ತಲಪಾಡಿ ಬಳಿ ಗಸ್ತು ತಿರುಗುತ್ತಿದ್ದ ಉಳ್ಳಾಲ ಪೊಲೀಸರು ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್ ಮರಳು ಸಮೇತ ವಶಕ್ಕೆ ತೆಗದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.ಪೊಲೀಸರು ದಾಳಿ ನಡೆಸುತ್ತಿದ್ದಂತೆಯೇ ಲಾರಿ ಹಾಗೂ ಟಿಪ್ಪರ್‍ನ್ನು ರಸ್ತೆಯಲ್ಲಿಯೇ ಬಿಟ್ಟು ಚಾಲಕರು ಪರಾರಿಯಾಗಿದ್ದಾರೆ. ವಶಕ್ಕೆ ಪಡೆದ ನಾಲ್ಕು ಲಾರಿ ಹಾಗೂ ಎರಡು ಟಿಪ್ಪರ್‍ಗಳನ್ನು ಗಣಿ ಹಾಗೂ ಭೂವಿಜ್ಞಾನ ಇಲಾಖೆಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಿದ್ದಾರೆ. ಜಿಲ್ಲೆಯಲ್ಲಿ ಮರಳು ಲಭ್ಯ ಇಲ್ಲದಿರುವುದರಿಂದ ಕೆಲವೇ ಮಂದಿಗೆ ನಿಯಮಾನುಸಾರ ಮರಳು ಸಾಗಾಟಕ್ಕೆ ಪರವಾನಗಿ…
UN NETWORKS ಕೊಲ್ಯ : ನಾಟ್ಯನಿಕೇತನ ಕೊಲ್ಯ ಸೋಮೇಶ್ವರ ಇವರ ತಂಡದ ಸಾಹಿತಿ ಅಮೃತ ಸೋಮೇಶ್ವರ ರಚಿಸಿದ ಎಲುವೆರ್ ದೈಯ್ಯರ್ ನೃತ್ಯರೂಪಕ ದುಬೈ ವಿಶ್ವ ತುಳು ಸಮ್ಮೇಳನದಲ್ಲಿ ಪ್ರದರ್ಶನಗೊಂಡಿತು.
UN NETWORKS ದುಬಾಯಿ : ತುಳುವರು ಇರುವಲ್ಲಿ ಊರಿನ ಕೀರ್ತಿ ಹೆಚ್ಚಳವಾಗುತ್ತಲೇ ಇರುತ್ತದೆ. ವಿದೇಶದಲ್ಲಿ ನಡೆದ ಸಮ್ಮೇಳನ ಸಾರ್ಥಕವಾಗಬೇಕಾದರೆ ಮನೆಯಲ್ಲಿ ತುಳು ಭಾಷೆ ಮಾತನಾಡುವ ಶಪಥ ಅಗತ್ಯ ಎಂದು ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು. ಕಡಲಂಚಿನ ತುಳುವೆರ್, ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ತುಳು ಒಕ್ಕೂಟ ಇವುಗಳ ಸಹಕಾರದಲ್ಲಿ ದುಬಾಯಿಯ ದುಬಾಯಿಯ ಅಲ್ ಲೀಸರ್ ಲ್ಯಾಂಡ್ ಐಸ್ ರಿಂಕ್ ಒಳಾಂಗಣ ಸಭಾಂಗಣದಲ್ಲಿ ಎರಡು ದಿನ ನಡೆದ ವಿಶ್ವ ತುಳು ಸಮ್ಮೇಳನ-2018ರ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಮಾನವನ ಅಭಿವೃದ್ಧಿ ಗಾಳಿಪಟದಂತೆ, ಎಷ್ಟೇ ಎತ್ತರ ಹೋದರೂ ಮೂಲಸ್ಥಾನ ನೂಲಿನಲ್ಲಿರುತ್ತದೆ. ಅದರಂತೆ ನಾವು ಎಲ್ಲೇ ಎಷ್ಟು ಎತ್ತರಕ್ಕೆ ಹೋದರೂ ತುಳು ಅಭಿಮಾನ ಹೊಂದಿರಬೇಕು ಎಂದು ಹೇಳಿದರು. ಒಡಿಯೂರು ಮಠದ ಶ್ರೀ ಗುರುದೇವಾನಂದ ಸ್ವಾಮೀಜಿ ಮಾತನಾಡಿ, ಕ್ರಿಯೆ, ಪ್ರೀತಿ, ವಿಶ್ವಾಸಕ್ಕೊಂದು ಹೆಸರೇ ತುಳು. ಈ ಭಾಷೆಯಲ್ಲಿ ಆಧ್ಯಾತ್ಮದ ತಿರುಳು ಇದೆ. ಸಂಸ್ಕೃತಿ ಉಳಿಯಬೇಕಾದರೆ ಭಾಷೆ ಉಳಿಯಬೇಕಿದೆ ಎಂದರು.ಮಾಣಿಲ ಮಠದ ಶ್ರೀ…
UN NETWORKS ದುಬಾಯಿ: ತುಳು ಭಾಷೆ, ಸಂಸ್ಕೃತಿಗೆ ಸಾವಿರ ವರ್ಷದ ಇತಿಹಾಸವಿದ್ದು ತುಳು ಭಾಷೆಯನ್ನು 8ನೇ ಪರಿಚ್ಚೇದಕ್ಕೆ ಸೇರಿಸುವ ನಿಟ್ಟಿನಲ್ಲಿ ಕಳೆದ ಬಾರಿ ಧರ್ಮಸ್ಥಳಕ್ಕೆ ಆಗಮಿಸಿದ್ದ ಪ್ರದಾನಿ ನರೇಂದ್ರ ಮೋದಿ ಅವರಲ್ಲಿ ಮನವಿ ಮಾಡಿದ್ದು, ಇದೀಗ ಎರಡನೇ ಬಾರಿಗೆ ವಿದೇಶದ ಮಣ್ಣಿನಲ್ಲಿ ನಡೆಯುವ ವಿಶ್ವ ತುಳು ಸಮ್ಮೇಳನದ ಮೂಲಕ ಕೇಂದ್ರ ಸರಕಾರಕ್ಕೆ ಇನ್ನೊಮ್ಮೆ ಮನವಿ ಮಾಡುತ್ತಿದ್ದು, ತುಳು ಭಾಷೆಯನ್ನು ಎಂಟನೇ ಪರಿಚ್ಚೇದಕ್ಕೆ ಸೇರಿಸುವ ಮೂಲಕ ವಿಶ್ವದ ಮಾನ್ಯತೆ ನೀಡುವ ಕಾರ್ಯ ಆಗಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ವಿರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು. ಕಡಲಂಚಿನ ತುಳುವೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಅಖಿಲ ಭಾರತ ತುಳು ಒಕ್ಕೂಟಗಳ ಸಹಕಾರದೊಂದಿಗೆ ಶುಕ್ರವಾರ ದುಬಾಯಿಯ ಅಲ್ ನಾಸರ್ ಲೀಸರ್‍ಲ್ಯಾಂಡ್‍ನ ಐಸಿರಿಂಕ್ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭಗೊಂಡ ಎರಡು ದಿನಗಳ ಕಾಲ ನಡೆಯಲಿರುವ ವಿಶ್ವ ತುಳು ಸಮ್ಮೇಳನ ದುಬಾಯಿ-2018ಗೆ ಚಾಲನೆ ನೀಡಿ ಮಾತನಾಡಿದರು. ತುಳುನಾಡಿನ ವಿಶೇಷತೆ ಎಂದರೆ ಯಾವುದೇ ಪ್ರದೇಶಕ್ಕೆ ನಮ್ಮವರು ಹೋದರೆ ಅಲ್ಲಿನ ಸಂಸ್ಕೃತಿ,ಆಚಾರ ವಿಚಾರಗಳನ್ನು ಆಳವಡಿಸಿಕೊಂಡುಬಾಳುತ್ತಾರೆ.…
UN NETWORKS ಮಂಗಳೂರು: ಕಲಾವರ್ಧಕ ಯುವಕ ಮಂಡಲ (ರಿ) ಹಾಗೂ ಕಲಾಚೇತನ ಯುವತಿ ಮಂಡಲವಾರ ಸಂಕೇತ ಇವರ ಜಂಟಿ ಆಶ್ರಯದಲ್ಲಿ “ಚಿಣ್ಣರ ಚಿಗುರು-2018 ಕಾರ್ಯಕ್ರಮ ಶ್ರೀ ಸೀತಾರಾಮ ಭಜನಾ ಮಂದಿರ ನಾರ್ಲದಲ್ಲಿ ಇತ್ತೀಚೆಗೆ ನಡೆಯಿತು.ಕಾರ್ಯಕ್ರಮದಲ್ಲಿ ಎಸ್ ಎಸ್ ಎಲ್ ಸಿ ಯಲ್ಲಿ ಶೇಕಡಾ 96 ಅಂಕ ಗಳಿಸಿದ ನಿಷ್ರ್ಕಸ್ ಚೌಟ ಎಂಬ ವಿದ್ಯಾರ್ಥಿಯನ್ನು ಸನ್ಮಾನಿಸಲಾಯಿತು. ಸಿ.ಎ ಗಣೇಶ್ ರಾವ್, ರಮೇಶ್ ಆಚಾರ್ಯ, ಸೋಹನ್ ಅತಿಕಾರಿ ಗ್ರಾಮ ಪಂಚಾಯತ್ ಸದಸ್ಯರಾದ ಸಂದೀಪ್ ಶೆಟ್ಟಿ ಜಯಾನಂದ್ ಕುಲಾಲ್, ರಮಿತಾ ಶಿವರಾಜ್, ಶೃತಿ ಸುಶಾಂತ್ ಉಪಸ್ಥಿತರಿದ್ದರು.
UN NETWORKS ಉಳ್ಳಾಲ : ಜಮಾಅತೆ ಇಸ್ಲಾಂ ಹಿಂದ್ ಇದರ ಆಶ್ರಯದಲ್ಲಿ ಧಾರ್ಮಿಕ ಸಹಬಾಳ್ರವ ಮತ್ತು ಸಾಮರಸ್ಯದ ಬಗ್ಗೆ ಕೊಲ್ಯ ಜೋಯ್‍ಲ್ಯಾಂಡ್ ಶಾಲೆಯಲ್ಲಿ ಶಿಕ್ಷಕರ ಜತೆ ವಿಚಾರಗೋಷ್ಠಿ ವಿಶೇಷ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಜಮಾತೆ ಇಸ್ಲಾಮಿ ಹಿಂದ್‍ನ ನಾಯಕ ಪಿಎ. ಕಾಲೇಜಿನ ಫ್ರೋ. ಮಹಮ್ಮದ್ ಮುಬೀನ್ ಅವರು, ನಾವೆಲ್ಲ ಸೌಹಾರ್ದತೆಯನ್ನು ಬೆಳೆಸಬೇಕಾಗಿದೆ ಜಮಾತೆ ಇಸ್ಲಾಮಿ ಹಿಂದ್ ಈದ್ ಸೌಹಾರ್ದ ಕೂಟ, ದೀಪಾವಳಿ ಸೌಹಾರ್ದ ಕೂಟ, ಕ್ರಿಸ್‍ಮಸ್ ಸೌಹಾರ್ದ ಕೂಟ, ವಿಚಾರಗೋಷ್ಠಿ ಮಾಡುವ ಮೂಲಕ ಧರ್ಮದ ಬಗ್ಗೆ ಪರಸ್ಪರ ಅರಿತು ಉತ್ತಮ ವಾತಾವರಣ ಸೃಷ್ಟಿ ಮಾಡಲು ಸಾಮರಸ್ಯತೆ ಬೆಳೆಯಬೇಕಾಗಿದೆ ಎಂದರು. ಜಮಾತೆ ಇಸ್ಲಾಮಿ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಂ , ಉಪಾಧ್ಯಕ್ಷ ಅಬ್ದುಲ್ ರಹ್‍ಮಾನ್, ಬೋಳಾರ ಇನ್‍ಪೆಂಟ್ ಜಸಸ್ ಜೋಯ್‍ಲ್ಯಾಂಡ್ ಶಾಲೆಯ ಮುಖ್ಯೋಪಧ್ಯಾಯರಾದ ಸವಿತಾ ಜಲಂಧರ್ ಮೊದಲಾದವರು ಉಪಸ್ಥಿತರಿದ್ದರು. ಕೊಲ್ಯ ಜೋಯ್‍ಲ್ಯಾಂಡ್ ಶಾಲೆಯ ಮುಖ್ಯೊಪಾಧ್ಯಾಯರಾದ ವೀಣ ಭಟ್ ಸ್ವಾಗತಿಸಿದರು. ಇಸಾಕ್ ಹಸನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕಿ ಜ್ಯೋತಿ ವಂದಿಸಿದರು.
UN NETWORKS ಹಳೆಕೋಟೆ: ಹಳೆಕೋಟೆ ಅನುದಾನಿತ ಸಯ್ಯದ್ ಮದನಿ ಉರ್ದು ಹಿ.ಪ್ರಾ. ಶಾಲೆ ಮತ್ತು ಸಯ್ಯದ್ ಮದನಿ ಪ್ರೌಢ ಶಲೆಯ ವತಿಯಿಂದ ಪ್ಲಾಸ್ಟಿಕ್ ನಿರ್ಮೂಲನದ ಬಗೆ ಜಾಗೃತಿ ಸಮಾವೇಶ ಮತ್ತು ಶಾಲೆ ಬಿಟ್ಟುಹೋದ ಮಕ್ಕಳ ಸಮೀಕ್ಷೆ ಮಾಡುವ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು. ಉಳ್ಳಾಲ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹಾಜಿ ಮಾತನಾಡಿ, ಮಕ್ಕಳು ಸಂಗ್ರಹ ಮಾಡಿದ ತ್ಯಾಜ್ಯವನ್ನು ಉಳ್ಳಾಲ ನಗರಸಭೆಯ ಆಯುಕ್ತ ವಾಣಿ ವಿ. ಆಳ್ವವರಿಗೆ ಕೊಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಪ್ಲಾಸ್ಟಿಕ್ ನಿರ್ಮೂಲನದ ಬಗ್ಗೆ ಜಾಗೃತಿ ಸಮಾವೇಶ ವಿದ್ಯಾರ್ಥಿಗಳಿಗೆ ಅರ್ಥ ಆಗುವ ರೀತಿಯಲಿ ಮಾಡಿದ್ದಾರೆ.ಇನ್ನು ಮುಂದೆ ನಮ್ಮ ಮನೆಯಲ್ಲಿ ಅಥವಾ ಪರಿಸರದಲ್ಲಿ ಎಲ್ಲಿಯೂ ಕಸ ಕಂಡರೂ ಅದನ್ನು ತೆಗೆದು ಶೇಖರಣೆ ಮಾಡುವ ಕೆಲಸ ಮಕ್ಕಳಿಂದ ಆಗುತ್ತಿದೆ ಎನ್ನುವ ನಂಬಿಕೆ ನನಗಿದೆ ಎಂದರು. ಉಳ್ಳಾಲ ನಗರಸಭಾ ಆಯುಕ್ತ ವಾಣಿ ಮಾತನಾಡಿ, ಇಷ್ಟೊಂದು ಪ್ಲಾಸ್ಟಿಕ್‍ನ್ನು ಸಂಗ್ರಹ ಮಾಡಿ ಅದನ್ನು ಕ್ರಮಬದ್ಧವಾಗಿಟ್ಟು ಒಳ್ಳೆಯ ಕೆಲಸ ಮಾಡುವುದರಲ್ಲಿ ಹಳೆಕೋಟೆ…

