UN NETWORKS ಉಳ್ಳಾಲ: ಉಜ್ವಲ ಭವಿಷ್ಯ ರೂಪಿಸುವ ನಿಟ್ಟಿನಲ್ಲಿವಿದ್ಯಾರ್ಥಿ ಕಾಲಘಟ್ಟದಲ್ಲಿಯೇ ಶಿಸ್ತನ್ನು ಮೈಗೂಡಿಸಿಕೊಳ್ಳಬೇಕು. ಬದುಕಿನ ಪ್ರತಿಕ್ಷಣ ಸಂತಸವಾಗಿರಲು ಒಂದು ನಿರ್ದಿಷ್ಟ ಗುರಿ ಹೊಂದಿರಬೇಕು. ಅದನ್ನು ತಲುಪಿದಾಗ ಬದುಕು ಸಾರ್ಥಕವಾಗುತ್ತದೆ. ಹಾಗೆಯೇ ಅದೇ ಕ್ಷೇತ್ರದಲ್ಲಿ ಏನಾದರೂ ಸಾಧಿಸಿದರೆ ಕೀರ್ತಿ ಸಂಪಾದಿಸಲು ಸಾಧ್ಯ ಎಂದು ಮಂಗಳೂರು ವಿವಿಯ ಕುಲಸಚಿವ ಪ್ರೊ. ಎ.ಎಂ. ಖಾನ್ ಅಭಿಪ್ರಾಯಪಟ್ಟರು. ಉಳ್ಳಾಲ ಸುಭಾಷ ನಗರದ ಕೆ. ಪಾಡ್ಯರಾಜ ಬಲ್ಲಾಳ್ ಪದವಿಪೂರ್ವ ಕಾಲೇಜಿನಲ್ಲಿ ಶನಿವಾರ ನಡೆದ ಕಾಲೇಜಿನ ನಾಲ್ಕನೇ ವಾರ್ಷಿಕೋತ್ಸವದಲ್ಲಿ ಅವರು ಮಾತನಾಡಿದರು.ತಂತ್ರಜ್ಞಾನ ಬಹಳಷ್ಟು ಮುಂದುವರಿದಿದ್ದುಸಾಧನೆಗೆ ವಿಫುಲ ಅವಕಾಶಗಳಿವೆ. ವಿದ್ಯಾರ್ಥಿಗಳು ಸತ್ಯಕ್ಕೆ ದೂರವಾಗಿರುವ ಅಂತೆ ಕಂತೆಗೆ ಅವಕಾಶ ಕೊಡಬೇಡಿ. ಸತ್ಯಕ್ಕೆ ಬೆಲೆ ಕೊಡಿ. ನಮ್ಮಲ್ಲಿ ಏನಿದೆಯೋ ಅದರಲ್ಲಿ ತೃಪ್ತಿ ಬೇಕು. ಇನ್ನೊಬ್ಬರಿಗೆ ನಮನ್ನು ಹೋಲಿಸಿ ನೋಡಬಾರದು. ಪೋಷಕರು ಮಕ್ಕಳ ಗುಣ, ನಡತೆ, ಶಿಕ್ಷಣದ ಕಡೆಗೆ ಸದಾ ಗಮನ ಕೊಡಬೇಕು. ಮಕ್ಕಳ ಜೊತೆಗೆ ಬೆರೆಯಬೇಕು. ಯಾಕೆಂದರೆ ಕಷ್ಟಪಟ್ಟು ಕಲಿತ ಮಕ್ಕಳು ಮನೆತನಕ್ಕೆ ಉತ್ತಮ ಹೆಸರು ತರುವುದು ಖಂಡಿತ. ರಾಷ್ಟ್ರಮಟ್ಟದಲ್ಲಿ ಸಾಧನೆಗೈದಿರುವ ಪಾಂಡ್ಯರಾಜ ಬಲ್ಲಾಳ್…
Author: UllalaVani
UN NETWORKS ಉಳ್ಳಾಲ: ಏಡ್ಸ್ ಸಂತ್ರಸ್ತ ಮಕ್ಕಳ ಆರೈಕೆ ಅತ್ಯಗತ್ಯ. ಈ ನಿಟ್ಟಿನಲ್ಲಿ ಮಂಗಳೂರು ಹೃದಯಭಾಗದಲ್ಲಿ ಸರಕಾರದಿಂದ ನಿರ್ಮಿಸಲು ಉದ್ದೇಶಿಸಲಾದ ಸಂತ್ರಸ್ತ ಮಕ್ಕಳ ಆಶ್ರಯತಾಣಕ್ಕಾಗಿ ಕಣಚೂರು ಸಂಸ್ಥೆ ವತಿಯಿಂದ ಸಹಕಾರಿಸಲಾಗುತ್ತಿದೆ ಎಂದು ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಅಧ್ಯಕ್ಷ ಯು. ಕಣಚೂರು ಮೋನು ಅಭಿಪ್ರಾಯಪಟ್ಟರು. ಅವರು ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಆಶ್ರಯದಲ್ಲಿ ಆಸ್ಪತ್ರೆ ಆವರಣದಲ್ಲಿ ಶನಿವಾರ ಜರಗಿದ ವಿಶ್ವ ಏಡ್ಸ್ ದಿನ-2018 ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.ಏಡ್ಸ್ ಸಂತ್ರಸ್ತ ಮಕ್ಕಳ ಆಶ್ರಯಕ್ಕಾಗಿ ರೂ. 45 ಲಕ್ಷ ರೂ ಹಲವರು ಸೇರಿಕೊಂಡು ಸಂಗ್ರಹಿಸಲಾಗಿದೆ. ಕಣಚೂರು ಸಂಸ್ಥೆಯೂ ಇದರಲ್ಲಿ ಕೈ ಜೋಡಿಸಿದೆ. ಸ್ವಂತ ಕಟ್ಟಡ ನಿರ್ಮಿಸುವ ಉದ್ದೇಶದೊಂದಿಗೆ ದೇಣಿಗೆ ಸಂಗ್ರಹಿಸಲಾಗಿದೆ. ಕಂದಾಯ ಇಲಾಖೆಯಿಂದ ನಗರದ ಹೃದಯಭಾಗದಲ್ಲಿ ಜಾಗ ಕೊಡುವ ವಿಶ್ವಾಸ ಇದೆ. ಶೀಘ್ರವೇ ಸುಸಜ್ಜಿತ ಕಟ್ಟಡ ನಿರ್ಮಾಣದ ಭರವಸೆ ಇದೆ. ಏಡ್ಸ್ ಜಾಗೃತಿ ಕಾರ್ಯಕ್ರಮಗಳಿಂದ ಜನರಲ್ಲಿ ಅರಿವು ಮೂಡಿಸುವುದು ವೈದ್ಯಕೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ಕಣಚೂರು…
UN NETWORKS ಮಲಾರ್: ಎಸ್ ವೈ ಎಸ್ ಮತ್ತು ಎಸ್ಸೆಸ್ಸೆಫ್ ಮಲಾರ್ ಇದರ ಜಂಟಿ ಆಶ್ರಯದಲ್ಲಿ ಬೃಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್ ಹಾಗೂ ಬುರ್ದಾ ಮಜ್ಲಿಸ್ ಡಿಸೆಂಬರ್ 2 ಆದಿತ್ಯವಾರ ಮಗ್ರಿಬ್ ನಮಝ್ ಬಳಿಕ ಮಲಾರ್ ಪದವು ಮೈದಾನದಲ್ಲಿ ನಡೆಯಲಿದೆ.ಸಮಸ್ತ ಕೇಂದ್ರ ಮುಶಾವರ ಉಪಾಧ್ಯಕ್ಷರಾದ ಶೈಖುನಾ ಅಲಿ ಕುಂಞಿ ಉಸ್ತಾದರು ಸಮಾರಂಭವನ್ನು ಉಧ್ಘಾಟಿಸಲಿದ್ದಾರೆ. ಸಯ್ಯಿದ್ ಶರಫುದ್ದೀನ್ ತಂಙಳ್ ದುಆ ಆಶೀರ್ವಚನ ನೀಡಲಿದ್ದಾರೆ.ಖ್ಯಾತ ಯುವ ವಾಗ್ಮಿ ಮೌಲಾನಾ ರಾಶಿದ್ ಬುಖಾರಿ ಕುಟ್ಯಾಡಿ ಹುಬ್ಬುರ್ರಸೂಲ್ ಪ್ರಭಾಷಣ ಮಾಡಲಿದ್ದಾರೆ.ಬುರ್ದಾ ಆಲಾಪನೆಯ ನೇತ್ರತ್ವವನ್ನು ಅನ್ವರ್ ಅಲಿ ಸಖಾಫಿ ಶಿರಿಯಾ ವಹಿಸಲಿದ್ದಾರೆ.ಕರ್ನಾಟಕ ಸರ್ಕಾರದ ನಗರಾಭಿವೃದ್ಧಿ ಮತ್ತು ವಸತಿ ಸಚಿವರೂ ದಕ್ಷಿಣ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವರೂ ಆಗಿರುವ ಸನ್ಮಾನ್ಯ ಯು.ಟಿ ಖಾದರ್ ಮುಖ್ಯ ಅತಿಥಿ ಯಾಗಿ ಆಗಮಿಸಲಿದ್ದಾರೆ. ಹಾಗೂ ಇನ್ಮಿತರ ಉಲಮಾ ಉಮರಾ ರಾಜಕೀಯ ನೇತಾರರು ಭಾಗವಹಿಸಲಿದ್ದಾರೆಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
UN NETWORKS ತಲಪಾಡಿ: ಕ್ರೀಡೆಯು ವಿದ್ಯಾರ್ಥಿಗಳ ಮಾನಸಿಕ ಮತ್ತು ಬೌದ್ಧಿಕ ಮಟ್ಟವನ್ನು ವಿಸ್ತರಿಸುತ್ತದೆ. ಕ್ರೀಡೆಯಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿ ಕ್ರೀಡಾಸ್ಪೂರ್ತಿಯಿಂದ ಭಾಗವಹಿಸಿ ಶಾಲೆಯ ಕೀರ್ತಿಯನ್ನು ಬೆಳಗಬೇಕು ಎಂದು ಜೀವವಿಮಾ ವಿಭಾಗದ ಉದ್ಯೋಗಿ ಹಾಗೂ ರಾಷ್ಟ್ರೀಯ ಕ್ರೀಡಾಪಟು ಪಿ. ಚಂದ್ರಶೇಖರ್ ಹೇಳಿದರು. ತಲಪಾಡಿಯ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಶಾಲೆ ಹಾಗೂ ಪದವಿಪೂರ್ವ ಕಾಲೇಜಿನ 2018-19ನೇ ಸಾಲಿನ ಜಂಟಿ ವಾರ್ಷಿಕ ಕ್ರೀಡಾಕೂಟದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ, ಧ್ವಜಾರೋಹಣ ಗೈದು ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಡಿದ ಶಾರದಾ ಸಮೂಹ ಸಂಸ್ಥೆಗಳ ಅಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್ ಮಾತನಾಡಿ `ಶಾರದಾ’ ಎಂಬ ಹೆಸರು ಸಂಸ್ಕಾರ ಹಾಗೂ ಶ್ರೇಷ್ಠತೆಗೆ ಹೆಸರುವಾಸಿಯಾಗಿದ್ದು, ಶಾರದಾ ವಿದ್ಯಾಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ಉತ್ತಮ ಆದರ್ಶಗಳನ್ನು ತಮ್ಮ ವಿದ್ಯಾರ್ಥಿಜೀವನದಲ್ಲಿ ಅಳವಡಿಸಿಕೊಂಡು,ಉತ್ತಮ ನಾಗರೀಕರಾಗಿ ಬೆಳೆದು ಕಲಿಸಿದ ಶಾಲೆಗೆ ಮತ್ತು ದೇಶಕ್ಕೆ ಮಾದರಿಯಾಗಬಲ್ಲ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು. ಕ್ರೀಡಾಜ್ಯೋತಿ ಮತ್ತು ಕ್ರೀಡಾ ಪ್ರತಿಜ್ಞಾವಿಧಿಯೊಂದಿಗೆ ಕ್ರೀಡೋತ್ಸವ ಉದ್ಘಾಟನೆಗೊಂಡಿತು. ವಿದ್ಯಾರ್ಥಿಗಳ ಆಕರ್ಷಕ ಪಥಸಂಚಲನದ ಬಳಿಕ ವಿವಿಧ ಆಟೋಟ ಸ್ಪರ್ಧೆಗಳು ನಡೆದವು.…
UN NETWORKS ಮುಡಿಪು: ಯಾವುದೇ ಮೂಲಸೌಲಭ್ಯಗಳ ಕೊರತೆ ಇಲ್ಲದೆ ಅತ್ಯುತ್ತಮ ವಿದ್ಯಾರ್ಥಿಗಳನ್ನು ಹೊಂದಿರುವ ಕುರ್ನಾಡು ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅತ್ಯುತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳುವ ಮೂಲಕ ಈ ನಾಡಿನ ಈ ದೇಶದ ಸಂಪತ್ತಾಗಿ ಬೆಳೆಯಬೇಕು ಎಂದು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು. ಟಿ. ಖಾದರ್ ಹೇಳಿದರು. ಮುಡಿಪಿನ ಕುರ್ನಾಡು ಪದವಿಪೂರ್ವ ಕಾಲೇಜಿನಲ್ಲಿ ಶುಕ್ರವಾರ ನಡೆದ ಪ್ರತಿಭಾ ದಿನಾಚರಣೆಯಲ್ಲಿ ಅವರು ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಮಮತಾ ಡಿ.ಎಸ್. ಗಟ್ಟಿ ಮಾತನಾಡಿ ವಿದ್ಯಾರ್ಥಿ ಜೀವನ ಎಲ್ಲ ದಿನಗಳಲ್ಲೂ ಸಿಗುವುದಿಲ್ಲ. ಮುಡಿಪಿನ ಕುರ್ನಾಡು ಪದವಿಪೂರ್ವ ಕಾಲೇಜು ಹಲವು ವರ್ಷಗಳಿಂದ ಉತ್ತಮ ಫಲಿತಾಂಶ ದಾಖಲಿಸುತ್ತಾ ಬಂದಿದೆ. ಹಾಗೆಯೇ ಪ್ರೌಢಶಾಲಾ ವಿಭಾಗದಲ್ಲಿ ಆಂಗ್ಲ ಮಾಧ್ಯಮ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದು ಕನ್ನಡ ಮಾಧ್ಯಮ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು ಕೂಡಾ ಉತ್ತಮ ಫಲಿತಾಂಶ ದಾಖಲಿಸುವಂತಾಗಬೇಕು ಎಂದು ಹೇಳಿದರು. ಕುರ್ನಾಡು ಕಾಲೇಜಿಗೆ ಈ ಭಾಗದ ಶಾಸಕರು, ಸಚಿವರು ಆಗಿರುವ ಯು.ಟಿ. ಖಾದರ್ ಬಹಳಷ್ಟು ಅಭಿವೃದ್ಧಿ…
UN NETWORKS ಮುಡಿಪು: ವಿಚಾರಗಳಲ್ಲಿ ಕುತೂಹಲ ಇದ್ದಾಗ ಸಾಧನೆ ನಡೆಸಲು ಸಾಧ್ಯ . ಅಂತಹ ಕುತೂಹಲ ಬೆಳೆಸುವ ಕಾರ್ಯ ಸೂರಜ್ ಶಿಕ್ಷಣ ಸಂಸ್ಥೆಯ ಸೂರಜ್ ಕಲಾಸಿರಿ ಕಾರ್ಯಕ್ರಮದಿಂದ ಆಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು. ಮುಡಿಪುವಿ ನ ಸೂರಜ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಸೂರಜ್ ಕಲಾಸಿರಿ-2018ನ್ನು ಸೂರಜ್ ಪದವಿಪೂರ್ವ ಕಾಲೇಜಿನ ಸಭಾಂಗಣದ ಗುಲಾಬಿ ಶ್ರೀಪಾದ ವೇದಿಕೆಯಲ್ಲಿ ಶುಕ್ರವಾರ ಉದ್ಘಾಟಿಸಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸೂರಜ್ ಸೇವಾ ಪ್ರಶಸ್ತಿ ಪ್ರಧಾನಗೈದು ಮಾತನಾಡಿದರು.ಪಾಶ್ಚಾತ್ಯೀಕರಣ ಅನುಕರಿಸುವ ಕಾಲ ಇದಾಗಿದ್ದು ಹಿಂದುಳಿಯುವ ಪ್ರಜ್ಞೆ ನಮ್ಮಲ್ಲಿತ್ತು. ಆದರೆ ಇನ್‍ಫೋಸಿಸ್ ಸಂಸ್ಥೆ, ಸಹಿತ ಸಾಧಕರರಿಂದಾಗಿ ಪ್ರಪಂಚಕ್ಕೆ ಭಾರತ ಸವಾಲು ಹಾಕಿದೆ. ಆ ಮೂಲಕ ಇತರರಿಗೆ ಸರಿ ಸಮಾನರಾಗಿ ತಲೆ ಎತ್ತಿ ನಿಲ್ಲುವ ಕೆಲಸ ಆಗಿದೆ. ಧರ್ಮದಲ್ಲಿ, ನ್ಯಾಯಾಂಗದಲ್ಲಿ ವ್ಯವಹಾರದಲ್ಲಿ ದೇಶ ಹಿಂದುಳಿದಿಲ್ಲ. ಅದನ್ನೆಲ್ಲ ಗಮನದಲ್ಲಿಟ್ಟುಕೊಂಡು ಭಾರತೀಯತೆಯನ್ನು ಎತ್ತಿ ಹಿಡಿಯುವ ಪ್ರಯತ್ನ ನಿರಂತರವಾಗಿ ನಡೆಯಬೇಕು ಎಂದು ನುಡಿದರು. ಬದುಕಿಗಾಗಿ…
UN NETWORKS ಕೋಟೆಕಾರ್: ವಿದ್ಯಾರ್ಥಿಗಳು ಎಲ್ಲಾ ಚಟುವಟಿಕೆಗಳಿಗೆ ಉತ್ತಮ ರೀತಿಯಲ್ಲಿ ಭಾಗವಹಿಸಿ ಬಹುಮಾನ ಪಡೆದರು. ಬಹುಮಾನ ಸಿಗದವರು ಬೇಸರ ಮಾಡದೇ ಇನ್ನು ಮುಂದಿನ ಚಟುವಟಿಕೆಯಲ್ಲಿ ಭಾಗವಹಿಸಿ ಬಹುಮಾನ ಪಡೆಯಬೇಕು ಎಂದು ಕೊಣಾಜೆ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಮತ್ತು ಹಳೇ ವಿದ್ಯಾರ್ಥಿ ಸವಿತಾ ಗಟ್ಟಿ ಹೇಳಿದರು. ಅವರು,ಸಾರಸ್ವತ ವಿದ್ಯಾ ಸಂಸ್ಥೆಯ ಆಶ್ರಯದಲ್ಲಿ ಗುರುವಾರ ನಡೆದ ಕೋಟೆಕಾರ್ ಆನಂದಾಶ್ರಮ ಪ್ರೌಢ ಶಾಲೆಯಲಿ ಶಾಲಾ ವಾರ್ಷಿಕೋತ್ಸವ ಸಂಭ್ರಮ ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.ಶಾಲಾ ವಾರ್ಷಿಕೋತ್ಸವ ಮಕ್ಕಳಿಗೆ ಒಂದು ಸಂಭ್ರಮದ ದಿನ. ವಿವಿಧ ಸ್ಪರ್ಧೆಗಳು ಮಕ್ಕಳಿಗೆ ಖುಷಿ ಕೊಡುತ್ತದೆ. ಶಿಕ್ಷಣ ಸಂಸ್ಥೆಯ ಮೇಲೆ ಪ್ರೀತಿ ಕೂಡಾ ಮೂಡುತ್ತದೆ. ಉತ್ತಮ ರೀತಿಯಲ್ಲಿ ನಡೆಯಲಿ ಎಂದು ಮುರಳೀಧರ ರಾವ್ ಹೇಳಿದರು .ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಸಹಾಯಕ ಕೃಷಿ ನಿರ್ದೇಶಕರ ಕಚೇರಿ ತಾಂತ್ರಿಕಾಧಿಕಾರಿ ಮತ್ತು ಶಾಲಾ ಹಳೆ ವಿದ್ಯಾರ್ಥಿ ತಾರನಾಥ್ ಗಟ್ಟಿ ಮಾತನಾಡಿದರು. ಪ್ರತಿಭ ಪುರಸ್ಕಾರ ಮತ್ತು ಸಾಂಸ್ಕøತಿಕ ಸ್ಪರ್ಧೆಯಲ್ಲಿ ಗೆದ್ದವರಿಗೆ ಬಹುಮಾನ ವಿತರಣೆ ಮಾಡಲಾಯಿತು.ಹಳೇ ವಿದ್ಯಾರ್ಥಿ…
UN NETWORKS ಕೊಣಾಜೆ: ಭಕ್ತಿ ಪರಂಪರೆ ಒಂದು ಒಳಗೊಳ್ಳುವಿಕೆಯ ಪರಂಪರೆಯಾಗಿದೆ. ಶ್ರೇಣೀಕೃತ ಸಮಾಜದ ವ್ಯವಸ್ಥೆಯನ್ನು ಖಂಡಿಸಿ ಅದನ್ನು ದೂರಗೊಳಿಸುವ ಪ್ರಯತ್ನಗಳು ಭಕ್ತಿಪರಂಪರೆಯ ಕಾಲಘಟ್ಟದಲ್ಲಿ ನಡೆದಿತ್ತು ಎಂದು ಖ್ಯಾತ ಚಿಂತಕ ಪ್ರೊ.ಬಸವರಾಜ ಕಲ್ಗುಡಿ ಅವರು ಅಭಿಪ್ರಾಯಪಟ್ಟರು. ಅವರು ಮಂಗಳೂರು ವಿಶ್ವವಿದ್ಯಾಲಯದ ಕನಕದಾಸ ಸಂಶೋಧನಾ ಕೇಂದ್ರದ ಆಶ್ರಯದಲ್ಲಿ ಕನಕ ಜಯಂತಿ ಪ್ರಯುಕ್ತ ಬುಧವಾರ ಮಂಗಳೂರು ವಿವಿಯ ಹಳೆಸೆನೆಟ್ ಸಭಾಂಗಣದಲ್ಲಿ ಕನಕ ತತ್ವಚಿಂತನ ಮತ್ತು ಕನಕಗಂಗೋತ್ರಿ ಕಾರ್ಯಕ್ರಮದಲ್ಲಿ `ಭಕ್ತಿಪರಂಪರೆಯ ಲೋಕಯಾನ ಮತ್ತು ಕನಕದಾಸರು: ಸಮಕಾಲೀನ ಸಂವಾದ’ ವಿಷಯದಲ್ಲಿ ಉಪನ್ಯಾಸ ನೀಡುತ್ತಾ ಮಾತನಾಡಿದರು. ಭಕ್ತಿ ಪರಂಪರೆಯ ಒಳಗೊಳ್ಳುವಿಕೆಯ ಪ್ರಕ್ರಿಯೆಯಲ್ಲಿ ಒಬ್ಬ ವ್ಯಕ್ತಿಯನ್ನು ಯಾವುದೇ ಜಾತಿ ಧರ್ಮದಲ್ಲಿ ನೋಡದೆ ಆತನನ್ನು ಅಂತಸತ್ವದ ಮೂಲಕ ವ್ಯಕ್ತಿಯನ್ನಾಗಿ ನೋಡುವ ದೃಷ್ಟಿಕೋನವನ್ನು ಇಟ್ಟುಕೊಂಡಿತ್ತು. ಪರಂಪರಾಗತ ಶೇಣೀಕೃತ ಸಮಾಜ ವ್ಯವಸ್ಥೆಯನ್ನು ವಿರೋದಿಸಿದ ಮೊದಲ ಪರಂಪರೆ ಅದು ಭಕ್ತಿಪರಂಪರೆಯಾಗಿದೆ. ಭಕ್ತಿ ಪರಂಪರೆಯಲ್ಲಿ ಕನಕದಾಸರಿಗೆ ಬಹು ದೊಡ್ಡ ಹೆಸರು ಇದೆ. ಕನಕ ಭಕ್ತ ಮಾತ್ರವಲ್ಲ ಒಂದು ದೊಡ್ಡ ಕವಿ ಹೃದಯವುಳ್ಳ ದಾರ್ಶನಿಕನೂ ಹೌದು. ಸಾಮಾಜಿಕ ವ್ಯವಸ್ಥೆಯ ಬಗ್ಗೆ…
UN NETWORKS ಮಂಗಳೂರು : ಸಂತ ಜೋಸೆಫರ ಶಾಲೆ ಬಜಾಲ್ ವಿದ್ಯಾಸಂಸ್ಥೆಯ ವಾರ್ಷಿಕ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಮಂಗಳೂರು ತಾಲೂಕು ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ತ್ಯಾಗಂ ಹರೇಕಳ ಇವರು ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳಾದ ಆತ್ಮವಿಶ್ವಾಸ, ಶಿಸ್ತು, ಧೈರ್ಯ, ಸಮಯಪ್ರಜ್ಞೆ, ತಾಳ್ಮೆ, ಸಕರಾತ್ಮಕ ಚಿಂತನೆ ಮುಂತಾದ ಗುಣಗಳು ಬೆಳೆಯುತ್ತದೆ. ಈ ಗುಣಗಳನ್ನು ವಿದ್ಯಾರ್ಥಿಗಳು ತನ್ನ ಜೀವನದಲ್ಲಿ ಅಳವಡಿಸಿಕೊಂಡಲ್ಲಿ ಮಾನಸಿಕ ಒತ್ತಡ, ಜೀವನದಲ್ಲಿ ಜಿಗುಪ್ಸೆ ಇಂತಹ ಮಾರಕ ರೋಗಗಳಿಂದ ಹೊರಬರಲು ಸಾಧ್ಯವೆಂದು ಹೇಳಿದರು. ಮುಖ್ಯ ಅತಿಥಿಯಾಗಿ ರೋಟರಿ ಕ್ಲಬ್ ಮಂಗಳೂರು ದಕ್ಷಿಣ ಇದರ ಅಧ್ಯಕ್ಷರಾದ ರೊಟೇರಿಯನ್ ಸೂರ್ಯಕಾಂತ್ ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಲು ಕ್ರೀಡೆ ಬಹು ಪ್ರಾಮುಖ್ಯ. ಹಾಗಾಗಿ ಎಲ್ಲಾ ವಿದ್ಯಾರ್ಥಿಗಳು ಕೂಡ ಯಾವುದಾದರೊಂದು ಕ್ರೀಡೆಗಳಲ್ಲಿ ಭಾಗವಹಿಸುವುದು ಅಷ್ಟೇ ಮುಖ್ಯವೆಂದರು.ಅಧ್ಯಕ್ಷತೆಯನ್ನು ಶಾಲಾ ವ್ಯವಸ್ಥಾಪಕರಾದ ಸಿಸ್ಟರ್ ಆಗ್ನೇಸ್‍ಕ್ಲೇರ್ ವಹಿಸಿ ಶುಭವನ್ನು ಹಾರೈಸಿದರು. ಇದೇ ಸಂದರ್ಭದಲ್ಲಿ ವಿವಿಧ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿ ಗಳಿಸಿದ ವಿದ್ಯಾರ್ಥಿಗಳನ್ನು ಪ್ರಶಸ್ತಿ ನೀಡಿ ಗೌರವಿಸಲಾಯಿತು.…
UN NETWORKS ಉಳ್ಳಾಲ: ಮಾಜಿ ತಾಲೂಕು ಪಂಚಾಯತ್ ಸದಸ್ಯ ಇಬ್ರಾಹಿಂ ಮಂಜನಾಡಿ(ಮೈಸೂರು) (42) ಅವರು ಹೃದಯಾಘಾತದಿಂದ ಮೈಸೂರಿನ ಕೊಲಂಬೋ ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ಮಂಗಳವಾರ ಮೃತಪಟ್ಟಿದ್ದಾರೆ. ಮೃತರು ಪತ್ನಿ ಮತ್ತು ಒಂದು ಹೆಣ್ಣು ಒಂದು ಮಕ್ಕಳನ್ನು ಅಗಲಿದ್ದಾರೆ.ಮೃತ ಇಬ್ರಾಹಿಂ ಅವರು ಶನಿವಾರ ತನ್ನ ತಂಗಿಯ ಮಕ್ಕಳ ಮದುವೆಗೆಂದು ದೇರಳಳಕಟ್ಟೆಗೆ ಬಂದವರು ಸೋಮವಾರ ಸಂಜೆ ಮೈಸೂರಿಗೆ ತೆರಳಿದ್ದರು. ಅಲ್ಲಿ ಅವರು ಆರೋಗ್ಯದಲ್ಲಿ ಏರು ಪೇರು ಕಂಡು ಕೊಲಂಬಿಯಾ ಆಸ್ಪತ್ರೆಯಲ್ಲಿ ದಾಖಲಾಗಿದ್ದು, ಮಂಗಳವಾರ ಸಂಜೆ ಹೃದಯಾಘಾತದಿಂದ ಮೃತರಾಗಿದ್ದಾರೆ.

