UN NETWORKS ಉಳ್ಳಾಲ: ಒರಿಮಪ್ಪಾಡ್ ಚಂಙಾಯಿಮಾರ್ WhatsApp ಗ್ರೂಪ್ ಕಾರ್ಯಕ್ರಮದಲ್ಲಿ ಪುರುಷಂಗೋಡಿ ಬದ್ರಿಯಾ ಜುಮಾ ಮಸೀದಿಯ ವತಿಯಿಂದ ಒರಿಮಪ್ಪಾಡ್ ಚಂಙಾಯಿಮ್ಮಾರ್ ಇದರ ಸಹಕಾರದೊಂದಿಗೆ ಬದ್ರಿಯಾ ಮಸೀದಿ ವಠಾರದಲ್ಲಿ ಅನುಸ್ಮರಣೆ ಕಾರ್ಯಕ್ರಮ ಕುಂಬೋಳ್ ತಂಙಳವರ ನೇತ್ರತ್ವದಲ್ಲಿ ನಡೆಯಿತು. ಅಧುನಿಕ ಯುಗದಲ್ಲಿ ಯುವ ಸಮೂಹ ತಪ್ಪು ದಾರಿಗೆ ಚಲಿಸುವ ಈ ಸಮಯದಲ್ಲಿ ಒರಿಮಪ್ಪಾಡ್ ಚಂಙಾಯಿಮಾರ್ WhatsApp ಗ್ರೂಪ್ ಇತರ ಯುವಕರಿಗೆ ಉತ್ತಮ ಸಲಹೆ ನೀಡುತ್ತಿದ್ದು ವಿವಿಧ ಸಾಮಾಜಿಕ ಸೇವೆಯು ಕಾಲದ ಬೇಡಿಕೆಯಾಗಿದ್ದು ತಮ್ಮ ಪರಿಶ್ರಮ ಅಲ್ಲಾಹನ ಸನ್ನಿಧಿಯಲ್ಲಿ ಪ್ರತಿಫಲ ಗಳಿಸುವ ಕಾರ್ಯಕ್ರಮ ವಾಗಿದೆ ಎಂದರು.WhatsApp groupಗಳು ಸಮುದಾಯದ ಒಳಿತಿಗಾಗಿರಬೇಕು ಎಂದು ಕರೆ ನೀಡಿದರು.ಬದ್ರಿಯಾ ಮಸೀದಿ ಖತೀಬ್ ಶರೀಪ್ ಸಹದಿ ಮಾತನಾಡಿ ಮರಣ ಹೊಂದಿದ ವ್ಯಕ್ತಿಗಳ ಸ್ಮರಣೆ ಪುಣ್ಯ ಕರ್ಮವಾಗಿದೆ ಎಂದರು. ಒರಿಮಪ್ಪಾಡ್ ಚಂಙಾಯಿಮಾರ್ WhatsApp groupಸದಸ್ಯರಾದ ಸಾಲೆತ್ತೂರ್ ಖತೀಬ್ ಕೆ.ವಿ ದಾರಿಮಿ ಕುಂಬ್ರ ಮಾತನಾಡಿ ಸಹಾಯ ಸಹಕಾರ ಕೇವಲ ಸಂಘಟನೆ ಹೆಸರಿಗೆಬೇಕಾಗಿ ಸೀಮಿತಗೊಳ್ಳದೆ ಅಲ್ಲಾಹನ ಪ್ರತಿಫಲಗಳಿಸುವ ಪುಣ್ಯ ಕರ್ಮಗಳಾಗಿರಬೇಕು ಎಂದರು. ಒರಿಮಪ್ಪಾಡ್ ಚಂಙಾಯಿಮಾರ್ ಗ್ರೂಪ್ ಗೆ…
Author: UllalaVani
UN NETWORKS ಉಳ್ಳಾಲ: ಮೊಂಟೆಪದವಿನಲ್ಲಿ ಮೀಲಾದುನ್ನಬಿ ಜಾಥಾದಲ್ಲಿ ಸಾಗಿದವರಿಗೆ ಇಲ್ಲಿನ ಶ್ರೀ ಶಾರದಾಂಭ ಭಜನಾ ಮಂದಿರದ ಸದಸ್ಯರು ಸಿಹಿತಿಂಡಿ, ಪಾನೀಯವನ್ನು ನೀಡಿ ಕೋಮು ಸೌಹಾರ್ದ ಮೆರೆದರು. ಕಳೆದ ಹಲವು ವರ್ಷಗಳಿಂದ ಇಲ್ಲಿ ನಡೆಯುವ ಮೊಸರು ಕುಡಿಕೆ ಉತ್ಸವದ ಸಂದರ್ಭದಲ್ಲಿ ನಡೆಯುವ ರ್ಯಾಲಿಗೆ ಮುಸ್ಲಿಮರು ಸಿಹಿತಿಂಡಿ ಪಾನೀಯ ನೀಡಿದರೆ, ಮೀಲಾದುನ್ನಬಿ ಸಂದರ್ಭ ಹಿಂದೂ ಸಹೋದರರು ಒಟ್ಟಾಗಿ ಸಿಹಿತಿಂಡಿಯನ್ನು ನೀಡುತ್ತಾ ಬಂದಿದ್ದಾರೆ. ಅದೇ ರೀತಿ ಮಂಗಳವಾರ ಮೀಲಾದ್ ರ್ಯಾಲಿಯಲ್ಲಿ ಸಾಗಿ ಬಂದ ಮುಸ್ಲಿಮರನ್ನು ಶಾರದಾ ಭಜನಾ ಮಂದಿರದ ಸದಸ್ಯರು ಸ್ವಾಗತಿಸಿ ಪಾನೀಯ, ಸಿಹಿತಿಂಡಿ ವಿತರಿಸಿದರು.
UN NETWORKS ಉಳ್ಳಾಲ: ಸಹನೆ, ಪ್ರೀತಿ, ವಿಶ್ವಾಸ, ಸಹೋದರತೆಯನ್ನು ಬೋಧಿಸಿದ ಪ್ರವಾದಿಯವರ ಸಂದೇಶವನ್ನು ಎಲ್ಲರೂ ವ್ಯಕ್ತಿತ್ವದಲ್ಲಿ ರೂಪಿಸಿಕೊಳ್ಳುವ ಮೂಲಕ ಎಲ್ಲರಿಗೂ ಆದರ್ಶರಾಗಿ ಬಾಳಲು ಸಾಧ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು. ಅವರು ಈದ್ ಮಿಲಾದ್ ಪ್ರಯುಕ್ತ ಉಳ್ಳಾಲದ ಕೋಟೆಪುರ ಜುಮಾ ಮಸೀದಿಯಿಂದ ಉಳ್ಳಾಲ ಸೈಯ್ಯಿದ್ ಮದನಿ ದರ್ಗಾ ವಠಾರದವರೆಗೆ ಮಂಗಳವಾರ ಜರಗಿದ ಬೃಹತ್ ಸ್ವಲಾತ್ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯದ ಜನತೆಗೆ ಮುಖ್ಯಮಂತ್ರಿಗಳ ಪರವಾಗಿ ಈದ್ ಹಬ್ಬದ ಶುಭಾಷಯಗಳನ್ನು ಕೋರಿದ ಸಚಿವರು, ಶಾಂತಿಗೆ, ಸೌಹಾರ್ದತೆ ಈದ್ ಹಬ್ಬದ ಸಂದೇಶವಾಗಿದೆ. ಅದನ್ನು ಪ್ರತಿಪಾದಿಸುವ ಮೂಲಕ ಸಮಾಜಕ್ಕೆ ಪೂರಕವಾಗಿ ಎಲ್ಲರೂ ಬಾಳುವಂತಹ ಕಾರ್ಯ ಆಗಬೇಕಿದೆ ಎಂದರು.ಮೆರವಣಿಗೆ ನಂತರ ದರ್ಗಾ ವಠಾರದಲ್ಲಿ ಜರಗಿದ ಕಾರ್ಯಕ್ರಮದಲ್ಲಿ ಭಾಗವಹಿಸಿದ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ ಪಾಶ್ಚಾತ್ಯ ರಾಷ್ಟ್ರಗಳಲ್ಲೂ ಮುಸಲ್ಮಾನರ ಸಂಖ್ಯೆ ಹೆಚ್ಚಳವಾಗುತ್ತಿದೆ, ಇಂದು ಪ್ರವಾದಿಯವರ ಹೆಸರಿನಲ್ಲಿ ಹಲವು ಕಾರ್ಯಕ್ರಮ ನಡೆಸಲಾಗುತ್ತಿದ್ದು, ಸ್ಥಳೀಯ ಪ್ರದೇಶದಲ್ಲಿ ಸೌಹಾರ್ದ, ಶಾಂತಿಯ ವಾತಾವರಣ ನಿರ್ಮಿಸಿದಾಗ ಪರಿಪೂರ್ಣ ಜೀವನ…
UN NETWORKS ಉಳ್ಳಾಲ: ಮಸೀದಿಯಲ್ಲಿ ಪ್ರಾರ್ಥನೆ ನಡೆಯುವ ಸಂದರ್ಭ ತಂಡವೊಂದು ಬೈಕಿನಲ್ಲಿ ಹಾರ್ನ್ ಹಾಕುತ್ತಾ, ಬೊಬ್ಬೆ ಹಾಕುತ್ತಿರುವುದನ್ನು ಖಂಡಿಸಿದ ಸ್ಥಳೀಯರ ಹಾಗೂ ತಂಡದ ನಡುವೆ ಮಾತಿನ ಚಕಮಕಿ ನಡೆದಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಸಂತೋಷನಗರದಲ್ಲಿ ಮಂಗಳವಾರ ಮಧ್ಯಾಹ್ನ ನಡೆದಿದೆ. ಮದಕ ನಿವಾಸಿ ತಂಡ ಮಿಲಾದ್ ರ್ಯಾಲಿಯಲ್ಲಿ ಭಾಗವಹಿಸಿತ್ತು. ಮದಕದಿಂದ ಉಳ್ಳಾಲ ಕಡೆಗೆ ಮಿಲಾದ್ ರ್ಯಾಲಿಯಲ್ಲಿ ಭಾಗವಹಿಸುವ ಸಂದರ್ಭ ಬೈಕಿನಲ್ಲಿ ಹಾರ್ನ್, ಘೋಷಣೆಗಳನ್ನು ಕೂಗುತ್ತಾ ಯುವಕರ ತಂಡ ಸಾಗುತಿತ್ತು. ಇದೇ ಸಂದರ್ಭ ಸಂತೋಷನಗರದ ಮಸೀದಿಯಲ್ಲಿ ಮಧ್ಯಾಹ್ನದ ಪ್ರಾರ್ಥನೆ ನಡೆಯುತಿತ್ತು. ಕರ್ಕಶ ಶಬ್ದದಿಂದಾಗಿ ಮಸೀದಿಯಲ್ಲಿದ್ದವರು ಮತ್ತು ಸ್ಥಳೀಯರು ಹೊರಬಂದು ಯುವಕರ ನಡೆಯನ್ನು ಆಕ್ಷೇಪಿಸಿದ್ದರು. ಇದರಿಂದ ಇತ್ತಂಡಗಳ ನಡುವೆ ಮಾತಿನ ಚಕಮಕಿ ನಡೆದಿತ್ತು. ಘಟನೆ ಹೊಡೆದಾಟದ ಹಂತ ತಲುಪುತ್ತಿದ್ದಂತೆ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಇದೇ ವೇಳೆ ಯುವಕನೋರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಈ ಕುರಿತು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗಿಲ್ಲ.
UN NETWORKS ಬೈಕಂಪಾಡಿ: ಶಾಲೆಯ ಪಕ್ಕದಲ್ಲೇ ಸಂಗ್ರಹಿಸಿಡಲಾಗಿದ್ದ ಬೃಹತ್ ಲಾರಿ ಕಂಟೈನರ್ ಬಾಕ್ಸ್ ಗಳು ಶಾಲೆಯ ಮೇಲೆಯೇ ಉರುಳಿ ಬಿದ್ದ ಘಟನೆ ಬೈಕಂಪಾಡಿ ಅಂಗರಗುಂಡಿ ಸರಕಾರಿ ಶಾಲೆಯಲ್ಲಿ ಸೋಮವಾರ ನಡೆದಿದೆ. ಬೈಕಂಪಾಡಿ ಕೈಗಾರಿಕಾ ಪ್ರದೇಶದ ಅಂಗರಗುಂಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪಕ್ಕದ ಜಮೀನಿನಲ್ಲಿ ಎನ್.ಎಂ.ಪಿ.ಟಿ.ಯಿಂದ ಬಂದ ಬೃಹತ್ ಗಾತ್ರದ ಕಂಟೈನರ್‍ಗಳನ್ನು ಖಾಸಗೀ ಸಂಸ್ಥೆಯೊಂದು ಕಳೆದ ಕೆಲವು ವರ್ಷಗಳಿಂದ ಸಂಗ್ರಹಿಸಿಟ್ಟು ವ್ಯವಹಾರ ನಡೆಸುತ್ತಿತ್ತು. ಕಂಟೈನರ್‍ಗಳನ್ನು ಒಂದರ ಮೇಲೊಂದರಂತೆ ಇಡಲಾಗಿತ್ತು. ಸೋಮವಾರ ಬೆಳಿಗ್ಗೆ ಶಾಲೆ ತೆರೆದ ಸಂದರ್ಭದಲ್ಲಿ ಶಾಲೆಯ ಒಂದು ಬದಿಯ ಗೋಡೆಯ ಕಲ್ಲುಗಳು ಕುಸಿದು ಬಿದ್ದಿದ್ದು, ಪರಿಶೀಲಿಸಿದಾಗ ಪಕ್ಕದ ಜಮೀನಿನಲ್ಲಿದ್ದ ಕಂಟೈನರ್‍ಗಳು ಶಾಲೆಯ ಮೇಲೆಯೇ ಕುಸಿದುಬಿದ್ದಿರುವುದು ಕಂಡು ಬಂದಿದೆ. ಇದರಿಂದ ಶಾಲೆಯ ಪಶ್ಚಿಮ ದಿಕ್ಕಿನ ಗೋಡೆ ತೀವ್ರ ಬಿರುಕು ಬಿಟ್ಟಿದ್ದು, ಗೋಡೆಯ ಕೆಲವು ಕಲ್ಲುಗಳೂ ಉರುಳಿ ಬಿದ್ದಿದೆ. ಅಲ್ಲದೇ ಶಾಲೆಯ ಕಂಪೌಂಡ್ ಸಂಪೂರ್ಣ ಜಖಂಗೊಂಡಿದೆ. ಸುದ್ದಿ ತಿಳಿದು ಮಂಗಳೂರು ಉತ್ತರ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ ಸ್ಥಳಕ್ಕೆ ಭೇಟಿ ನೀಡಿದರು. ಬೈಕಂಪಾಡಿ ಕಾರ್ಪೋರೇಟರ್…
UN NETWORKS ಉಳ್ಳಾಲ: ದೇರಳಕಟ್ಟೆ ಜಂಕ್ಷನ್ನಿನಲಲ್ಲಿರುವ ಬಂಕ್ ತೊಟ್ಟಿಯಲ್ಲಿ ನೀರು ಸೋರಿಕೆಯಾಗಿದ್ದು ಈ ಹಿನ್ನೆಲೆಯಲ್ಲಿ ಕಾನಕರೆ ಬಾವಿಗಳಲ್ಲಿ ಕಂಡು ಬಂದ ತೈಲ ಮಾದರಿ ಪ್ರಕರಣಕ್ಕೆ ಹೊಸ ತಿರುವು ಲಭಿಸಿದೆ. ಕಳೆದ ವಾರದಿಂದ ಬೆಳ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾನಕೆರೆ ಬಾವಿಗಳಲ್ಲಿ ಪೆಟ್ರೋಲ್ ಮಾದರಿಯ ತೈಲ ಪತ್ತೆಯಾಗಿತ್ತು. ಇದು ತೀವ್ರ ಕುತೂಹಲ ಕೆರಳಿಸಿದ್ದಲ್ಲದೆ ಸ್ಥಳಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿದ್ದರು. ನೀರನ್ನು ಹಲವು ಬಾರಿ ಪರೀಕ್ಷೆಗೊಳಪಡಿಸಲಾಗಿತ್ತು. ಕಾನಕೆರೆಯಿಂದ ಸುಮಾರು 120 ಅಡಿ ಎತ್ತರದ ದೇರಳಕಟ್ಟೆಯಲ್ಲಿರುವ ಪೆಟ್ರೋಲ್ ಬಂಕ್ ಇವೆಲ್ಲಕ್ಕೂ ಕಾರಣ ಎಂದು ಅನುಮಾನದ ಹಿನ್ನೆಲೆಯಲ್ಲಿ ಪಂಚಾಯಿತಿ ಸೂಚನೆ ಮೇರೆಗೆ ಒಂದು ದಿನ ಬಂಕ್ ಮುಚ್ಚಲಾಗಿತ್ತು. ಮರುದಿನ ಯಾವುದೇ ರೀತಿಯಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ಸೋರಿಕೆಯಾಗದ ಹಿನ್ನೆಲೆಯಲ್ಲಿ ಬಂಕ್ ಕಾರ್ಯಾಚರಣೆಗೆ ಅವಕಾಶ ನೀಡಲಾಗಿತ್ತು. ಕಳೆದ ಮೂರು ಬಾವಿಗಳ ನೀರು ಖಾಲಿ ಮಾಡಿದ ಸಂದರ್ಭ ಒಂದು ಬಾವಿಯಲ್ಲಿ ಕೆಂಪು ಬಣ್ಣದಿಂದ ಕೂಡಿದ ಪೆಟ್ರೋಲ್ ಕಂಡು ಬಂದಿತ್ತು. ಈ ನಿಟ್ಟಿನಲ್ಲಿ ಮೂರು ಬಾವಿಗಳನ್ನು ಪಂಚಾಯಿತಿ ವಶಕ್ಕೆ…
UN NETWORKS ಮಂಗಳೂರು: ಮೀಲಾದುನ್ನಬಿ ಪ್ರಯುಕ್ತ ನ.20ರಂದು ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸಾರ್ವತ್ರಿಕ ರಜೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಮಂಗಳೂರು ವಿಶ್ವವಿದ್ಯಾನಿಲಯದ ಎಲ್ಲಾ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಬದಲಾವಣೆಯಾದ ಪರೀಕ್ಷಾ ವೇಳಾಪಟ್ಟಿ ಇಂತಿವೆ ನ.20ರಂದು ಪೂರ್ವಾಹ್ನ ನಡೆಯಬೇಕಿದ್ದ ಬಿ.ಎ. ತೃತೀಯ ಸೆಮಿಸ್ಟರ್ ಪರೀಕ್ಷೆ ಡಿಸೆಂಬರ್ 7ರಂದು ಪೂರ್ವಾಹ್ನ ನಡೆಯಲಿದೆ. ಅಪರಾಹ್ನ ನಡೆಯಬೇಕಿದ್ದ ತೃತೀಯ ವರ್ಷದ ಬಿಎ ಪರೀಕ್ಷೆ ನ.22ರಂದು ಅಪರಾಹ್ನ ನಡೆಯಲಿದೆ. ನ.20ರಂದು ಪೂರ್ವಾಹ್ನ ನಡೆಯಬೇಕಿದ್ದ ತೃತೀಯ ಸೆಮಿಸ್ಟರ್ ಬಿಎಸ್‌ಡಬ್ಲು ಪರೀಕ್ಷೆ ನ.23ರಂದು ಪೂರ್ವಾಹ್ನ ನಡೆಯಲಿದೆ. ತೃತೀಯ ಸೆಮಿಸ್ಟರ್ ಬಿಎಸ್ಸಿ ಪರೀಕ್ಷೆ ನ.30ರಂದು ಪೂರ್ವಾಹ್ನ ನಡೆಯಲಿದೆ. ತೃತೀಯ ಸೆಮಿಸ್ಟರ್ ಬಿ.ಕಾಂ ಪರೀಕ್ಷೆಯು ಡಿಸೆಂಬರ್ 3ರಂದು ಪೂರ್ವಾಹ್ನ ನಡೆಯಲಿದೆ. ಪಂಚಮ ಸೆಮಿಸ್ಟರ್ ಬಿ.ಕಾಂ ಪರೀಕ್ಷೆ ನ.29ರಂದು ಅಪರಾಹ್ನ ನಡೆಯಲಿದೆ. ತೃತೀಯ ಸೆಮಿಸ್ಟರ್ ಬಿಬಿಎ/ಬಿಬಿಎಂ ಪರೀಕ್ಷೆಯು ನ.30ರಂದು ಪೂರ್ವಾಹ್ನ ನಡೆಯಲಿದೆ. ಪ್ರಥಮ ಸೆಮಿಸ್ಟರ್ ಬಿಎ(ಎಚ್.ಆರ್.ಡಿ.)ನ ಇಂಡಿವೀಜ್ಯುವಲ್ ಡೆವಲಪ್‌ಮೆಂಟ್ ವಿಷಯ ಪರೀಕ್ಷೆಯು ನ.22ರಂದು ಪೂರ್ವಾಹ್ನ, ಪ್ರಿನ್ಸಿಪಾಲ್ಸ್ ಆ್ಯಂಡ್ ಪ್ರಾಕ್ಟೀಸ್ ಆಫ್ ಮ್ಯಾನೇಜ್‌ಮೆಂಟ್ ವಿಷಯದ…
UN NETWORKS ಕೊಣಾಜೆ: ಮಂಗಳೂರು ವಿಧಾನ ಸಭಾ ಕ್ಷೇತ್ರದ ಕೊಣಾಜೆ ಗ್ರಾಮ ಪಂಚಾಯಿತಿಯ ಎರಡನೆ ಅವಧಿಯ ಅಧ್ಯಕ್ಷರಾಗಿ ನಝರ್ ಷಾ ಪಟ್ಟೋರಿ ಅಧಿಕಾರದ ಗದ್ದುಗೆ ಏರಿದರು.ಕೊಣಾಜೆ ಗ್ರಾಮ ಪಂಚಾಯಿತಿ ಸದಸ್ಯರಾಗಿ ಸತತ ಮೂರು ಬಾರಿ ವಿವಿಧ ವಾರ್ಡ್‍ಗಳಿಂದ ಆಯ್ಕೆಯಾಗಿರುವ ಹೆಗ್ಗಳಿಕೆ ಇರುವ ನಝರ್ ಷಾ ಪಟ್ಟೋರಿ ಅವರು 29ಸದಸ್ಯ ಬಲದ ಕೊಣಾಜೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ 18 ಹಾಗೂ ಬಿಜೆಪಿ ಬೆಂಬಲಿತ 11 ಸದಸ್ಯರ ಪೈಕಿ ಕಾಂಗ್ರೆಸ್ ಬೆಂಬಲಿತ ಎಲ್ಲ 18ಸದಸ್ಯರ ಮತಗಳನ್ನು ಪಡೆದರು. ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಬಿಜೆಪಿಯ ರಾಮಚಂದ್ರ ಗಟ್ಟಿ ಅವರು 11ಮತಗಳನ್ನು ಪಡೆದು ತೃಪ್ತರಾದರು. ಕಳೆದ ಬಾರಿ ಕಾಂಗ್ರೆಸ್ ಬೆಂಬಲಿತ 18ಸದಸ್ಯರು ಆಯ್ಕೆಯಾದಾಗಲೇ ಅಧ್ಯಕ್ಷ ಸ್ಥಾನಕ್ಕೆ ನಾಲ್ಕು ಸದಸ್ಯರು ಆಕಾಂಕ್ಷಿಗಳಾಗಿದ್ದರೂ ನಝರ್ ಷಾ ಹಾಗೂ ಶೌಕತ್ ಅಲಿ ನಡುವೆ ಸ್ಪರ್ಧೆ ಇದ್ದುದರಿಂದ ಪಕ್ಷದ ಮುಖಂಡರ ಸಮ್ಮುಖದಲ್ಲಿ ನಡುವೆ ನಡೆದ ಮಾತುಕತೆಯಂತೆ ಎರಡೂವರೆ ವರ್ಷ ಅವಧಿಯ ಅಧಿಕಾರ ಹಂಚುವ ಒಪ್ಪಂದ…
UN NETWORKS ಉಳ್ಳಾಲ: ಕಣಚೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯಂತಹ ವ್ಯವಸ್ಥೆ ದಕ್ಷಿಣದಲ್ಲಿಅಪರೂಪವಾಗಿದ್ದು ಕನಿಷ್ಠ ಐನೂರು ಬೆಡ್ ವ್ಯವಸ್ಥೆ ಇದ್ದರೂ ಕಾಲೇಜು, ಆಸ್ಪತ್ರೆ ಮಾಡುತ್ತೇವೆ ಎಂದರೂ ಸರಕಾರ ಅದಕ್ಕೆ ಅವಕಾಶ ಕೊಡುತ್ತದೆ. ಹಾಗಿದ್ದರೂ ಕಣಚೂರು ಸಂಸ್ಥೆಯ ಅಧ್ಯಕ್ಷರು ಸಾವಿರದ ಇನ್ನೂರು ಬೆಡ್‍ಗಳಿರುವ ಸುಸಜ್ಜಿತ ಮೆಡಿಕಲ್ ಕಾಲೇಜು ಆಸ್ಪತ್ರೆ ಆರಂಭಿಸಿದ್ದು ನಿಜಕ್ಕೂ ಇಲ್ಲಿ ಶಿಕ್ಷಣ ಪಡೆಯುವ ವೈದ್ಯಕೀಯ ಸೇರಿದಂತೆ ಎಲ್ಲ ವಿಭಾಗದ ವಿದ್ಯಾರ್ಥಿಗಳ ಅದೃಷ್ಟ ಎಂದು ವಕ್ಪ್ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದರು. ದೇರಳಕಟ್ಟೆಯ ಕಣಚೂರು ಕಾಲೇಜ್ ಆಫ್ ಫಿಸಿಯೋಥೆರಫಿ, ನರ್ಸಿಂಗ್ ಸೈನ್ಸಸ್ ಹಾಗೂ ಅಲೈಡ್ ಹೆಲ್ತ್ ಸೈನ್ಸ್‍ನ ನೂತನ ಶೈಕ್ಷಣಿಕ ವಿಭಾಗ ಉದ್ಘಾಟಿಸಿ ಅವರು ಮಾತನಾಡಿದರು.ನಾನು ರಾಜಕೀಯ ಸೇರಬೇಕು ಎಂದು ಬಯಸಿದ ವ್ಯಕ್ತಿ ಅಲ್ಲ. ನನಗೆ ಅದರ ಬಗ್ಗೆ ಒಲವು ಕೂಡಾ ಇರಲಿಲ್ಲ. ರಾಜಕೀಯಕ್ಕೆ ಬಂದ ಬಳಿಕ ಇಷ್ಟೊಂದು ಪ್ರಮಾಣದಲ್ಲಿ ಜನಬೆಂಬಲ ಪ್ರೀತಿ ವಿಶ್ವಾಸ ಸಿಕ್ಕಿರುವುದು ನನ್ನ ಅದೃಷ್ಟ. ಜಗತ್ತಿನಲ್ಲಿ ಅತಿ ಹೆಚ್ಚು ಪ್ರೀತಿಸುವ ಜನಪ್ರತಿನಿಧಿಯಾಗಿ ನನಗೆ ಹೆಮ್ಮೆ ಇದೆ. ನಾನು…
UN NETWORKS ಉಳ್ಳಾಲ: ಮಾರುಕಟ್ಟೆಗಳು ಗ್ರಾಹಕರ ಕೇಂದ್ರಗಳಾಗಿ ಬೆಳೆಯಬೇಕು. ಬಸ್ಸು ನಿಲ್ದಾಣ ಸ್ಥಾಪನೆಯ ಜೊತೆಗೆ ಪ್ರದೇಶವನ್ನು ಜನಸೇವಾ ಮಾರುಕಟ್ಟೆ ಕೇಂದ್ರಗಳಾಗಿ ಪರಿವರ್ತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದರು.ಅವರು ಕೋಟೆಕಾರು ಪಟ್ಟಣ ಪಂಚಾಯಿತಿಯ ಅನುದಾನದನದಡಿ ದೇರಳಕಟ್ಟೆ ಜಲಾಲ್‍ಬಾಗ್‍ನಲ್ಲಿ ನಿರ್ಮಿಸಲಾದ ಬಸ್ಸು-ಪ್ರಯಾಣಿಕರ ತಂಗುದಾಣವನ್ನು ಉದ್ಘಾಟಿಸಿ ಮಾತನಾಡಿದರು. ಪ್ರದೇಶದಲ್ಲಿ ಕೇವಲ ಮೀನು, ಕೋಳಿ ಮಾರಾಟಕ್ಕೆ ಮಾರುಕಟ್ಟೆ ಸೀಮಿತವಾಗಬಾರದು. ಕಾಮಗಾರಿ ನಡೆಸುವಾಗ ಮುಂದಿನ ಕೆಲ ವರ್ಷಗಳಿಗೆ ದೂರದೃಷ್ಟಿ ಇಟ್ಟುಕೊಂಡು ಮಾಡಬೇಕಿದೆ. ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆಗಳನ್ನು ನೀಡಿದಾಗ ನಗರವನ್ನು ಆಶ್ರಯಿಸುವಂತಿಲ್ಲ. ದೇರಳಕಟ್ಟೆ ಪ್ರದೇಶ ಈಗಾಗಲೇ ನಗರ ಪ್ರದೇಶವಾಗಿ ಬೆಳೆದಿದೆ ಎಂದರು. ಬ್ಲಾಕ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ತಾ.ಪಂ ಅಧ್ಯಕ್ಷ ಮಹಮ್ಮದ್ ಮೋನು ಮಲಾರ್, ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಂ, ಜೆಡಿಎಸ್ ಮುಖಂಡ ಹೈದರ್ ಪರ್ತಿಪ್ಪಾಡಿ, ಜಿ.ಪಂ ಮಾಜಿ ಸದಸ್ಯ ಮುಸ್ತಾಫ ಹರೇಕಳ, ಮಂಗಳೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಆಲ್ವಿನ್ ಡಿಸೋಜ, ಕೋಟೆಕಾರು ಪ.ಪಂ…

