Close Menu
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
Asasas asasa
UllalavaniUllalavani
  • Home
  • Contact Us
  • ಗ್ರಾಮ
    • ಉಳ್ಳಾಲ
    • ತೊಕ್ಕೊಟ್ಟು
    • ಕೊಣಾಜೆ
    • ಮುಡಿಪು
    • ತಲಪಾಡಿ
    • ಕೋಟೆಕಾರು
    • ಸೊಮೇಶ್ವರ
  • ಪ್ರಮುಖ ಸುದ್ಧಿಗಳು
  • ಅಪರಾಧ ಸುದ್ದಿಗಳು
  • E-Paper
  • News Upload
UllalavaniUllalavani
ಅಪರಾಧ ಸುದ್ದಿಗಳು

ರಾ.ಹೆ.66 ಅವ್ಯವಸ್ಥೆ ಖಂಡಿಸಿ ತೊಕ್ಕೊಟ್ಟುವಿನಿಂದ ತಲಪಾಡಿಗೆ ಪಾದಯಾತ್ರೆ

UllalaVaniBy UllalaVaniAugust 6, 2018No Comments3 Mins Read
Facebook Twitter Pinterest LinkedIn Tumblr Email WhatsApp
Share
Facebook Twitter LinkedIn Pinterest Email WhatsApp

UN NETWORKS

ಉಳ್ಳಾಲ: ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಂಕ ವಸೂಲಿ ಮಾಡುತ್ತಿರುವುದು ಪೊಲೀಸರು ಮತ್ತು ಜಿಲ್ಲಾಡಳಿತದ ಎದುರಲ್ಲೇ ನಡೆಯುತ್ತಿರುವ ಹಗಲುದರೋಡೆ ಮತ್ತು ಡಕಾಯಿತಿ ಎಂದು ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಆರೋಪಿಸಿದ್ದಾರೆ.

ಅವರು ಪಂಪ್ ವೆಲ್ , ತೊಕ್ಕೊಟ್ಟು, ತಲಪಾಡಿ ಹೆದ್ದಾರಿ ದುರವಸ್ಥೆಯ ವಿರುದ್ಧ ಸರ್ವಿಸ್ ರಸ್ತೆಗಳನ್ನು ತಕ್ಷಣ ಪೂರ್ಣಗೊಳಿಸಲು ಒತ್ತಾಯಿಸಿ ತಲಪಾಡಿಯಲ್ಲಿ ಅಕ್ರಮ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ ತೊಕ್ಕೊಟ್ಟುವಿನಿಂದ ತಲಪಾಡಿ ಟೋಲ್ ವರೆಗೆ ಡಿವೈ ಎಫ್ ಐ ಉಳ್ಳಾಲ ವಲಯ ಸಮಿತಿ ಹಮ್ಮಿಕೊಂಡ ಪಾದಯಾತ್ರೆಯ ಸಮಾರೋಪದಲ್ಲಿ ಮಾತನಾಡಿದರು.

ಡಿವೈಎಫ್‍ಐ ಉಳ್ಳಾಲ ವಲಯ ಸಮಿತಿ ಹಮ್ಮಿಕೊಂಡಿರುವ ಪ್ರತಿಭಟನೆ ಕಾಟಾಚಾರದ ಹೋರಾಟ ಆಗಿರದೆ , ಜನರ ನಿಜವಾದ ಸಮಸ್ಯೆ ತೀವ್ರ ಆದ ಹಿನ್ನೆಲೆಯಲ್ಲಿ ಹೋರಾಟವನ್ನು ಆರಂಭಿಸಿದೆ. ವಾಹನ ಸವಾರರು ರಸ್ತೆಗೆ ತೆರಿಗೆ ಕಟ್ಟಿದ ನಂತರ ಸುಂಕ ಕಟ್ಟುವುದೇ ಅಕ್ರಮ ಹಾಗೂ ಕಾನೂನು ವಿರೋಧಿ. ವಾಹನ ಖರೀದಿಸುವಾಗಲೇ ತೆರಿಗೆ ಕಟ್ಟಲಾಗುತ್ತದೆ. ಜೊತೆಗೆ ಮಾಸಿಕ ಹಾಗೂ ವಾರ್ಷಿಕವಾಗಿ ವಿವಿಧ ರೀತಿಯ ತೆರಿಗೆಯನ್ನು ಕಟ್ಟುತ್ತಲೇ ಇರುತ್ತಾರೆ. ಆದರೆ ಸಾರ್ವಜನಿಕ ಸೊತ್ತುಗಳು ವ್ಯಾಪಾರೀಕರಣವಾಗುವ ಇಂತಹ ಸಂದರ್ಭ ರಸ್ತೆಗಳನ್ನು ಖಾಸಗೀಕರಣಗೊಳಿಸಿ ಟೋಲ್ ಸಂಗ್ರಹಿಸಲಾಗುತ್ತಿದೆ. 60 ಕಿ.ಮೀ ದೂರದಲ್ಲಿ ಟೋಲ್ ಇರಬಾರದು ಅನ್ನುವ ಕಾನೂನು ಇದೆ. ಆದರೆ ಹೆದ್ದಾರಿ ಪ್ರಾಧಿಕಾರದವರೇ ಹಲವೆಡೆ ರಸ್ತೆ ನಿರ್ಮಿಸಿ ಟೋಲ್ ಸಂಗ್ರಹಿಸುವ ಗುತ್ತಿಗೆಯನ್ನು ಖಾಸಗಿಯವರಿಗೆ ವಹಿಸಿರುವುದು ವಿಪರ್ಯಾಸ. ಶೇ.75 ರಷ್ಟು ರಸ್ತೆ ಕಾಮಗಾರಿ ಪೂರ್ಣಗೊಂಡ ಬಳಿಕ ಸುಂಕ ಸಂಗ್ರಹಿಸಬೇಕು ಅನ್ನುವ ಕಾನೂನಿದೆ. ಜೊತೆಗೆ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಬೇಕಿದೆ. ಆದರೆ ನಂತೂರಿನಿಂದ ತಲಪಾಡಿವರೆಗೆ ಸರ್ವಿಸ್ ರಸ್ತೆಯೇ ನಿರ್ಮಾಣವಾಗಿಲ್ಲ. ಫ್ಲೈಓವರ್ ಕಾಮಗಾರಿ ಸಂಪೂರ್ಣವಾಗಿ ನಿಂತಿದೆ. ಆದರೂ ಸುಂಕ ವಸೂಲಿ ನಡೆಸಲಾಗುತ್ತಿರುವುದು ಹಗಲು ದರೋಡೆಯಾಗಿದೆ. ಪೊಲೀಸರು ಮತ್ತು ಜಿಲ್ಲಾಡಳಿತದ ಎದುರು ಮಾಡುತ್ತಿರುವ ಡಕಾಯಿತಿ ಮತ್ತು ಹಗಲುದರೋಡೆಯಾಗಿದೆ. ಅಲ್ಲಲ್ಲಿ ಸಂಸದ ನಳಿನ್ ಕಟೀಲ್ ಅವರು ನಂ.1 ಸಂಸದನೆಂಬ ಫ್ಲೆಕ್ಸ್ ಅನ್ನು ಹಾಕಲಾಗಿತ್ತು. ಮೊದಲಿಗೆ ತೊಕ್ಕೊಟ್ಟು ಫ್ಲೈಓವರ್ ಮತ್ತು ತಲಪಾಡಿ ಟೋಲ್ ಗೇಟಿನಲ್ಲಿ ಬ್ಯಾನರ್ ಹಾಕಬೇಕಿತ್ತು. ಕೆಲ ದಿನಗಳ ಹಿಂದೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳನ್ನು ಭೇಟಿ ಮಾಡಿದ ಸಂಸದ ನಳಿನ್ ಅರೆಬರೆ ಹಿಂದಿಯಲ್ಲಿ ಅವರನ್ನು ತರಾಟೆಗೆ ಪಡೆದುಕೊಂಡು ರಸ್ತೆ ಕಾಮಗಾರಿ ಸರಿಯಾಗದೇ ಇದ್ದಲ್ಲಿ ಟೋಲ್ ಸಂಗ್ರಹವನ್ನು ನಿಲ್ಲಿಸುವುದಾಗಿ ಗಡುವು ನಿಗದಿ ಮಾಡಿದ್ದರು. ಆದರೆ ಬರೀ ಡೈಲಾಗ್ ಕಿಂಗ್ ಆಗಿರುವ ಸಂಸದರ ಮಾತಿಗೆ ಬೆಲೆಯೇ ಇಲ್ಲವಾಗಿದೆ. ಗಡುವಿನ ದಿನಾಂಕ ಮುಗಿದರೂ ಟೋಲ್ ನಿರಂತರವಾಗಿ ಸಂಗ್ರಹಿಸಲಾಗುತ್ತಿದೆ. ನಿಗದಿತ ಸಮಯದಲ್ಲಿ ಕಾಮಗಾರಿ ಪೂರ್ಣಗೊಳಿಸದ ನವಯುಗ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸದ ಸಂಸದರ, ಸರಕಾರದ ಮೇಲೆ ಅನುಮಾನ ಹುಟ್ಟುವಂತಾಗಿದೆ. ರಾಜ್ಯ ಸರಕಾರಕ್ಕೂ ಟೋಲ್ ಸಂಗ್ರಹಿಸುವುದನ್ನು ನಿಲ್ಲಿಸುವ ಅಧಿಕಾರ ಇದೆ. ಸದ್ಯ ಉಸ್ತುವಾರಿ ಸಚಿವ ಯು.ಟಿ.ಖಾದರ್ ಅವರಿಗೆ ಅವರದೇ ಕ್ಷೇತ್ರದಲ್ಲಿ ಆಗುತ್ತಿರುವ ಹಗಲು ದರೋಡೆಯನ್ನು ನಿಲ್ಲಿಸಲು ಸಾಧ್ಯವಿದೆ. ಸೂಪರ್ ಪವರ್ ದೇಶದಲ್ಲೇ ಇದ್ದೇವೆ ಅನ್ನುವ ಪವರ್‍ಫುಲ್ ಪ್ರಧಾನಿಯಡಿ ಇರುವ ನಂ. 1 ಸಂಸದನ ಕ್ಷೇತ್ರದಲ್ಲಿ ನಂತೂರು, ಮೂಡಬಿದ್ರಿ, ಕಾರ್ಕಳ , ಪಂಪ್ ವೆಲ್, ತೊಕ್ಕೊಟ್ಟು ಪ್ರದೇಶದಲ್ಲಿ ನಿರಂತರ ಬ್ಲಾಕ್ ಆಗುತ್ತಿರುವುದೇ ಅಭಿವೃದ್ಧಿಯಾಗಿದೆ.

ಜಿಲ್ಲೆಯ ಹೆದ್ದಾರಿ ಅವ್ಯವಸ್ಥೆಯಿಂದ ಆದ ಹಲವರ ಸಾವಿಗೆ ನ್ಯಾಯವಿಲ್ಲ. ಕೋಮುಗಲ¨sಯಲ್ಲಿ ಸಾವನ್ನಪ್ಪಿದ ತಕ್ಷಣ ಸಂಸದರ ಬೆಂಬಲಿಗರು ಏಳುತ್ತಾರೆ. ಹೆಣದಲ್ಲೂ ರಾಜಕೀಯ ಮಾಡುವ ಸಂಸದರು ತಮ್ಮ ಬೇಜವಾಬ್ದಾರಿಯಿಂದ ಆದ ಸಾವುಗಳಿಗೆ ಪರಿಹಾರವನ್ನು ದೊರಕಿಸುವಲ್ಲಿ ವಿಫಲರಾಗಿದ್ದಾರೆ. ಹೆದ್ದಾರಿ ಅವ್ಯವಸ್ಥೆಯಿಂದ ಕೆಲಸ ಕಳೆದುಕೊಂಡವರಿದ್ದಾರೆ, ಕಾಲೇಜು, ಶಾಲೆಗೆ ತಲುಪಲು ಅಸಾಧ್ಯವಾದವರಿದ್ದಾರೆ, , ವಾಹನಗಳು ಹಾಳಾಗುತ್ತಿವೆ, ಆರೋಗ್ಯ ಹಾಳಾಗಿದೆ, ವಾಹನ ಸವಾರರು ಸಂಪಾದನೆಯ ಬಹುಭಾಗ ಟೋಲ್ ಮತ್ತು ರಸ್ತೆ ಅವ್ಯವಸ್ಥೆಗೆ ವಿನಿಯೋಗಿಸುವ ಸ್ಥಿತಿಯಿದೆ. ಸದ್ಯ ಸ್ಥಳೀಯರಿಗೆ ಸುಂಕ ತೆಗೆಯದೆ , ಜನರನ್ನು ಮೋಸ ಮಾಡಲಾಗುತ್ತಿದೆ. ಮುಂದೆ ರಸ್ತೆ ಸರಿಯಾದಲ್ಲಿ ಸ್ಥಳೀಯರನ್ನು ಬಿಡದೆ ಎಲ್ಲರಿಂದಲೂ ಹಣ ಪಡೆಯುತ್ತಾರೆ. ಇದೊಂದು ಸಾಂಕೇತಿಕವಾದ ಪ್ರತಿಭಟನೆ ಮುಂದೆಯೂ ಪರಿಹಾರ ಕಾಣದೇ ಇದ್ದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ರಾಜಕೀಯ ಪಕ್ಷಗಳನ್ನು ಸೇರಿಸಿಕೊಂಡು ಅನಿರ್ದಿಷ್ಟ ಮುಷ್ಕರದ ಜೊತೆಗೆ ಟೋಲ್ ನಿರಾಕರಣೆ ಚಳುವಳಿಯನ್ನು ಹಮ್ಮಿಕೊಳ್ಳುವುದು ಅನಿವಾರ್ಯವಾದೀತು . ಡಿವೈಎಫ್ ಐ ಸಾಂವಿಧಾನಿಕಾವಗಿ ಹೋರಾಡುತ್ತದೆ. ಆದರೆ ತಲಪಾಡಿ, ಮಂಜೇಶ್ವರದ ಜನತೆ ಎದ್ದರೆಂದರೆ ಟೋಲ್ ಅನ್ನು ಮುಚ್ಚಿಯೇ ಕಂಪೆನಿಯವರು ತೆರಳಬೇಕಾಗಬಹುದು ಎಂದು ಎಚ್ಚರಿಸಿದರು.

ತಲಪಾಡಿ ಚಲೋ ಕಾರ್ಯಕ್ರಮಕ್ಕೆ ಸಿಪಿಎಂ ಪಕ್ಷದ ಉಳ್ಳಾಲ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ಜೆಡಿಎಸ್ ಮುಖಂಡರಾದ ನಜೀರ್ ಉಳ್ಳಾಲ್, ವಕೀಲರಾದ ರಾಮಚಂದ್ರ ಬಬ್ಬುಕಟ್ಟೆ ಡಿವೈಎಫ್‍ಐ ಬಾವುಟವನ್ನು ಡಿವೈಎಫ್ ಐ ಉಳ್ಳಾಲ ವಲಯ ಅಧ್ಯಕ್ಷರಾದ ಜೀವನ್ ರಾಜ್ ಕುತ್ತಾರ್ ಗೆ ಹಸ್ತಾಂತರ ಮಾಡುವ ಮೂಲಕ ಚಾಲನೆ ನೀಡಲಾಯಿತು. ನಂತರ ಪಾದಯಾತ್ರೆ ತಲಪಾಡಿ ಸಾಗಿತು. ಕೋಟೆಕಾರ್ ಮತ್ತು ಕುಂಪಲ ಪ್ರದೇಶದ ನಾಗರಿಕರು ಉಪಹಾರದ ವ್ಯವಸ್ಥೆ ಮಾಡಿದರು. ಕೆ.ಸಿ ರೋಡ್ ಪ್ರದೇಶದ ಜನರು ಪಟಾಕಿ ಸಿಡಿಸಿ ಸ್ಬಾಗತಿಸಿದರು. ನಂತರ ತಲಪಾಡಿ ಟೋಲ್ ಗೇಟ್ ನಲ್ಲಿ ಸಮಾರೋಪ ನಡೆಯಿತು.

ಡಿವೈಎಫ್‍ಐ ಜಿಲ್ಲಾಧ್ಯಕ್ಷರಾದ ಬಿ.ಕೆಇಮ್ತಿಯಾಜ್, ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಡಿವೈಎಫ್ ಐ ಉಳ್ಳಾಲವಲಯ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸಿ ಡಬ್ಲ್ಯುಎಫ್‍ಐ ಉಳ್ಳಾಲ ವಲಯ ನಾಯಕರಾದ ಜನಾರ್ದನ್ ಕುತ್ತಾರ್, ಜೈ ವೀರಾಂಜನೆಯ ವ್ಯಾಯಾಮ ಶಾಲೆಯ ಅಧ್ಯಕ್ಷರಾದ ದಿವ್ಯಾನ್ ತೇವುಲ, ಮುನ್ನೂರು ಯುವಕ ಮಂಡಲ ಅಧ್ಯಕ್ಷರಾದ ಶಶೀಂದ್ರ ಕುಕ್ಯಾನ್, ಹನುಮಾನ್ ಕ್ರೀಡಾಮಂಡಳಿಯ ಅಧ್ಯಕ್ಷರಾದ ಕರುಣಾಕರ್ ಕಂಪ, ದ.ಕ ಜಿಲ್ಲಾ ಓನ್ ಲೈನ್ ಟ್ಯಾಕ್ಸಿ ಚಾಲಕರ ಸಂಘದ ಅಧ್ಯಕ್ಷರಾದ ಜಗರಾಜ್ ರೈ, ಡಿವೈಎಫ್‍ಐ ಮಾಜಿ ಮಖಂಡರಾದ ಮಹಾಬಲ ದೆಪ್ಪಲಿಮಾರ್, ಅರುಣ್ ಕುಮಾರ್, ಡಿವೈಎಫ್‍ಐ ಉಳ್ಳಾಲ ಮುಖಂಡರಾದ ನಿತಿನ್ ಕುತ್ತಾರ್, ಸುನೀಲ್ ತೇವುಲ, ರಪೀಕ್ ಹರೇಕಳ, ಪಂಚಾಯತ್ ಸದಸ್ಯರಾದ ಅಶ್ರಪ್ ಹರೇಕಳ, ಹನೀಪ್ ಹರೇಕಳ ಉಪಸ್ಥಿತಿರಿದ್ದರು.
ಅಶ್ರಪ್ ಟಿ.ಸಿ ರೋಡ್ ವಂದಿಸಿದರು.

ದು:ಖದ ನಡುವೆ ಹೋರಾಟ
ಡಿವೈಎಫ್ ಐ ಸಕ್ರಿಯ ಕಾರ್ಯಕರ್ತ ಹಾಗೂ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ಉಪಕಾರ್ಯದರ್ಶಿ , ಪಿಲಾರು ಘಟಕದ ಕಾರ್ಯದರ್ಶಿ ಸಂದೇಶ್ ಶೆಟ್ಟಿ ಪಿಲಾರ್ ಅನಾರೋಗ್ಯದ ಹಿನ್ನೆಲೆಯಲ್ಲಿ ಭಾನುವಾರ ಬೆಳಿಗ್ಗೆ ನಿಧನ ಹೊಂದಿದ್ದರು. ವಿಚಾರ ತಿಳಿದರೂ ದಿನಾಂಕ ನಿಗದಿಯಾಗಿದ್ದ ಹಿನ್ನೆಲೆಯಲ್ಲಿ ಹೋರಾಟವನ್ನು ಮುಂದುವರಿಸಿದ ಡಿವೈಎಫ್ ಐ ಉಳ್ಳಾಲ ವಲಯ ಸಮಿತಿ ಸಮಾರೋಪದ ಮುನ್ನ ಅಗಲಿದ ಕಾರ್ಯಕರ್ತನಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಇದೊಂದು ದು:ಖದ ನಡುವೆಯೂ ಹೋರಾಟ ಎಂದು ರಾಜ್ಯಾಧ್ಯಕ್ಷ ಮುನೀರ್ ಶ್ರದ್ಧಾಂಜಲಿ ಅರ್ಪಿಸಿ ಹೇಳಿದರು.

Share. Facebook Twitter Pinterest LinkedIn Tumblr Email WhatsApp
UllalaVani

Kannada News From Coastal Karnataka

Related Posts

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

June 30, 2026

ಬೀರಿ ಜಂಕ್ಷನ್‌ ತರಕಾರಿ ಅಂಗಡಿ ಮೇಲೆ ಬಿದ್ದ ಮರ

June 29, 2026

ಜೀವನದ ಹಾಡು ನಿಲ್ಲಿಸಿದ ಜ್ಯೂನಿಯರ್‌ ಎಸ್.ಪಿ ಖ್ಯಾತಿಯ ಚಂದ್ರಹಾಸ್‌ ಸುವರ್ಣ

June 29, 2026
Leave A Reply

Advertise
ಸಂಪರ್ಕಿಸಿ

ಕರ್ನಾಟಕದಾದ್ಯಂತ ಆರೋಗ್ಯ ಇಲಾಖೆಯಲ್ಲಿ ಮೆಗಾ ನೇಮಕಾತಿ: ಸಾರ್ವಜನಿಕ ಆರೋಗ್ಯ ಸೇವೆ ಬಲಪಡಿಸಲು ಮಹತ್ವದ ಹೆಜ್ಜೆ

June 11, 2026

ರಾಜ್ಯದಲ್ಲಿ ಖಾಸಗಿ ಅಸ್ಪತ್ರೆಯಲ್ಲಿ ಆಯುಷ್ಮಾನ್ ಯೋಜನೆ ಸಮರ್ಪಕ ಜಾರಿಗೆ ಜ್ಯಾರಿ ಆಗದಿದ್ದರೆ ಜಿಲ್ಲೆಯ ಅರೋಗ್ಯಧಾರಿಗಳ ಮೇಲೆ ಕ್ರಮ :- ಅರೋಗ್ಯ ಸಚಿವ ಯು.ಟಿ ಖಾದರ್

June 9, 2026

ಫೀಲ್ಡ್ ಗೆ ಇಳಿದ ಯು.ಟಿ. ಖಾದರ್ – ಸರ್ಕಾರಿ ಆಸ್ಪತ್ರೆ ವೈದ್ಯರಿಗೆ ಕ್ಲಾಸ್…!

June 5, 2026

ವೆನ್ಲಾಕ್ ಆಸ್ಪತ್ರೆಯಲ್ಲಿ ಮನೋವೈದ್ಯರು ಮತ್ತು ಕ್ಲಿನಿಕಲ್ ಸೈಕಾಲಜಿಸ್ಟ್‌ಗಳ ತೀವ್ರ ಕೊರತೆ – ಬಡ ರೋಗಿಗಳ ನಿರ್ಲಕ್ಷ್ಯ ಯಾಕೆ ಎಂದು ಸಾರ್ವಜನಿಕರ ಪ್ರಶ್ನೆ

May 26, 2026
suddi

ಶಾಲಾ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣೆ

By UllalaVaniJune 30, 20260

ಉಳ್ಳಾಲ ನುಸ್ರತುಲ್ ಮಸಾಕೀನ್ ಚಾರಿಟೇಬಲ್ ಟ್ರಸ್ಟ್ ಹಾಗೂ ಮದನಿ ಎಜುಕೇಶನ್ ಅಸೋಸಿಯೇಷನ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಶಾಲಾ ಮಕ್ಕಳಿಗೆ ಉಚಿತ…

ಮಂಗಳೂರು: ಮೀನುಗಾರಿಕಾ ಬೋಟ್ ಮುಳುಗಡೆ; 6 ಮಂದಿ ಮೀನುಗಾರರ ರಕ್ಷಣೆ

June 30, 2026

ತುಳುವ ಮಹಾಸಭೆ ಇಂಟರ್ನ್ಯಾಷನಲ್‌ನ ತಾಲೂಕು ಸಂಚಾಲಕರಾಗಿ ಮೂವರ ಮರುನೇಮಕ

June 30, 2026

ಸುಳ್ಯ : ಜುಲೈ 6 ರಂದು ಸಚಿವ ಯು.ಟಿ. ಖಾದರ್‌ಗೆ ಸಾರ್ವಜನಿಕ ಅಭಿನಂದನಾ ಸಮಾರಂಭ

June 30, 2026
1 2 3 … 1,991 Next
Automatic YouTube Gallery

ನಾಟೆಕಲ್ ಅ*#ಪಘಾ*ತ; ಮಾಜಿ ಪ್ರಯಾಣಿಕನೋರ್ವನ ಸ್ಪೋಟಕ ಕಾಮೆಂಟ್...!!

ನಾಟೆಕಲ್ ಬಸ್ ಅ**ಪಘಾ#ತ;# ಕಾಮೆಂಟ್ ಮಾಡಿದ ಮಾಜಿ ಪ್ರಯಾಣಿಕ;ಪಿ.ಎ.ಕಾಲೇಜು ಬಸ್ ನಿರ್ವಹಣೆ ಕುರಿತು ಕಾಮೆಂಟ್

ಹಾಗಾದರೆ ಆ ಕಾಮೆಂಟ್‌ನಲ್ಲಿ ಏನಿದೆ..??
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ನಾಟೆಕಲ್ ಅ*#ಪಘಾ*ತ; ಮಾಜಿ ಪ್ರಯಾಣಿಕನೋರ್ವನ ಸ್ಪೋಟಕ ಕಾಮೆಂಟ್...!!
Now Playing
ನಾಟೆಕಲ್ ಅ*#ಪಘಾ*ತ; ಮಾಜಿ ಪ್ರಯಾಣಿಕನೋರ್ವನ ಸ್ಪೋಟಕ ಕಾಮೆಂಟ್...!!
ನಾಟೆಕಲ್ ಬಸ್ ಅ**ಪಘಾ#ತ;# ಕಾಮೆಂಟ್ ಮಾಡಿದ ಮಾಜಿ ಪ್ರಯಾಣಿಕ;ಪಿ.ಎ.ಕಾಲೇಜು ಬಸ್ ...
ನಾಟೆಕಲ್ ಬಸ್ ಅ**ಪಘಾ#ತ;# ಕಾಮೆಂಟ್ ಮಾಡಿದ ಮಾಜಿ ಪ್ರಯಾಣಿಕ;ಪಿ.ಎ.ಕಾಲೇಜು ಬಸ್ ನಿರ್ವಹಣೆ ಕುರಿತು ಕಾಮೆಂಟ್

ಹಾಗಾದರೆ ಆ ಕಾಮೆಂಟ್‌ನಲ್ಲಿ ಏನಿದೆ..??
📍 Ullal | Dakshina Kannada | Coastal Karnataka News Update
ಉಳ್ಳಾಲ, ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ...
ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
Now Playing
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ ಉಳ್ಳಾಲ ವೀರರಾಣಿ ...
ಪರಿಜ್ಞಾನ ಪದವಿಪೂರ್ವ ಕಾಲೇಜು, ಸೋಮೇಶ್ವರ ಸಹಯೋಗದೊಂದಿಗೆ
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ(ರಿ.) ವತಿಯಿಂದ
ದಿ.ಅಮೃತ ಸೋಮೇಶ್ವರ ಸಂಸ್ಮರಣಾ ಕಾರ್ಯಕ್ರಮ
ಭಾಷಣ ಸ್ಪರ್ಧೆ, ಬಹುಭಾಷಾ ಕವಿಗೋಷ್ಠಿ, ಕಾವ್ಯಗಾಯನ

📍 Ullal | Dakshina Kannada | Coastal Karnataka News Update
ಉಳ್ಳಾಲ, ...
ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ತಾಜಾ ಸುದ್ದಿಗಳಿಗೆ Ullalavaani ಅನ್ನು Subscribe ಮಾಡಿ.

Stay connected with Ullalavaani for trusted and fast local news from Ullal, Mangalore, and Dakshina Kannada district.

We focus on:
✔ Local news
✔ Political updates
✔ Social issues
✔ Public grievances
✔ Event coverage
✔ Exclusive ground reports

Ullalavaani – The Voice of Ullal.

If you like our work, support independent local journalism:
👍 Like
💬 Comment
🔔 Subscribe
📢 Share

Follow us for daily updates.

#Ullalavaani #UllalNews #DakshinaKannada #MangaloreNews #KannadaNews #CoastalKarnataka #LocalNews #BreakingNews #Ullal
#Ullalavaani #UllalVaani #UllalNews #VoiceOfUllal #UllalMedia #UllalUpdates
Show More
Follow us on Facebook
Recent Editions
Ullal Vaani February 5 to 25

Ullal Vaani February 5 to 25

Mangalore

Feb 9, 2026

JAN 19-FEB 6

JAN 19-FEB 6

Mangalore

Jan 20, 2026

JAN 1-15

JAN 1-15

Mangalore

Jan 8, 2026

Latest E-Papers
Loading editions...
Office Address:

ಉಳ್ಳಾಲವಾಣಿ
ಕನ್ನಡ ವಾರಪತ್ರಿಕೆ
RNI No. KARKAN28322
ಅಪ್ಪಚ್ಚಿ ಕಾಂಪ್ಲೆಕ್ಸ್‌, ಕುತ್ತಾರು, ಮುನ್ನೂರು,
ಸೋಮೇಶ್ವರ ಗ್ರಾಮ,
ಉಳ್ಳಾಲ ತಾಲೂಕು ದ.ಕ- 575017

Ullalavani 
Kannada Weekly
RNI No. KARKAN28322
Appachi Complex, Kuttaru
munnuuru, Someshwara Village,
Ullala Tq., D.K. – 575017
+91 98454 78858
+91 99725 28110

 

ಸಂಪರ್ಕಿಸಿ
Facebook X (Twitter) Instagram Pinterest
© 2026 ullalavani.com. Designed by wpwebsmartz.com.

Type above and press Enter to search. Press Esc to cancel.

Go to mobile version