UN NETWORKS ದೇರಳಕಟ್ಟೆ: ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಸಹಾಯ ಮಾಡುವುದಕ್ಕಿಂತಲೂ ಅವರನ್ನು ಸಾಮಾನ್ಯರಂತೆ ಸಮಾಜದಲ್ಲಿ ತೊಡಗೊಸಿಕೊಳ್ಳುವುದರಿಂದ ಅವರಿಗೆ ಎಲ್ಲರಂತೆ ಸುಂದರವಾದ ಒಂದು ಬದುಕು ಕಲ್ಪಿಸಿಕೊಡಲು ಸಾಧ್ಯವಿದ್ದು ಆ ನಿಟ್ಟಿನಲ್ಲಿ ನಾವೆಲ್ಲರೂ ಚಿಂತಿಸಬೇಕಿದೆ ಎಂದು ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಎನ್. ವಿಶಾಲ್ ಹೆಗ್ಡೆ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯಿತಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಮಗ್ರ ಶಿಕ್ಷಣ ಅಭಿಯಾನ ಕ್ಷೇತ್ರ ಶಿಕ್ಷಣಾಧಿಕಾರಿಯವರ ಕಚೇರಿ ಹಾಗೂ ಕ್ಷೇತ್ರ ಸಂಪನ್ಮೂಲ ಕೇಂದ್ರ ಮಂಗಳೂರು ದಕ್ಷಿಣ ವಲಯ ಹಾಗೂ ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವ ವಿದ್ಯಾಲಯದ ಅಧೀನದ ಎ.ಬಿ. ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು ಸಂಯುಕ್ತ ಆಶ್ರಯದಲ್ಲಿ ದೇರಳಕಟ್ಟೆಯ ನಿಟ್ಟೆ ವಿವಿ ಕ್ಯಾಂಪಸ್ ನ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿ ಸೋಮವಾರ ನಡೆದ ವಿಶ್ವ ವಿಶೇಷ ಅಗತ್ಯವುಳ್ಳ ಮಕ್ಕಳ ದಿನಾಚರಣೆ 2018-19ರಲ್ಲಿ ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಗಾಲಿಕುರ್ಚಿ ಹಾಗೂ ವಾಕರ್ ವಿತರಿಸಿ ಅವರು ಮಾತನಾಡಿದರು. ಸರಕಾರಗಳು ವಿಶೇಷ ಅಗತ್ಯವುಳ್ಳ ಮಕ್ಕಳ ಕುರಿತಾಗಿ ವಿಶೇಷ…
Author: UllalaVani
UN NETWORKS ಕೊಣಾಜೆ: ಲೈಂಗಿಕ ಅಲ್ಪಸಂಖ್ಯಾತರಿಗೂ ಸಮಾಜದಲ್ಲಿ ಸಮಾನ ಗೌರವ, ಶಿಕ್ಷಣ, ಮೀಸಲಾತಿಗಳು, ಸೌಲಭ್ಯಗಳು ದೊರೆಯಬೇಕಿದೆ. ಅವರನ್ನು ಸಮಾಜ ನೋಡುವ ದೃಷ್ಟಿಕೋನ ಬದಲಾಗಬೇಕಿದೆ ಎಂದು ಕರ್ನಾಟಕ ರಾಜೋತ್ಸವ ಪುರಸ್ಕೃತೆ ಹಾಗೂ ಖ್ಯಾತ ಹೋರಾಟಗಾರ್ತಿ ಬೆಂಗಳೂರಿನ ಡಾ.ಅಕ್ಕಯಿ ಪದ್ಮಶಾಲಿ ಅವರು ಹೇಳಿದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಮಹಿಳಾ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ಸೋಮವಾರ ವಿವಿಯ ಮಂಗಳಾ ಸಭಾಂಗಣದಲ್ಲಿ ನಡೆದ `ಭಾರತದಲ್ಲಿ ಲೈಂಗಿಕ ಅಲ್ಪಸಂಖ್ಯಾತರು: ಸಮಸ್ಯೆಗಳು ಮತ್ತು ಸವಾಲುಗಳು’ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದರು.ಲೈಂಗಿಕ ಅಲ್ಪಸಂಖ್ಯಾತರನ್ನು ಅವರ ಕುಟುಂಬವೇ ಪರಿಗಣಿಸುವ ಸ್ಥಿತಿಯಲ್ಲಿಲ್ಲ. ಬಳಿಕ ಸ್ನೇಹಿತರು, ಸಮಾಜ ಅವರನ್ನು ತುಚ್ಚವಾಗಿ ನೋಡುವುದಲ್ಲದೆ ಅವರ ಬದುಕನ್ನೇ ಅತಂತ್ರವಾಗಿಸುತ್ತದೆ. ಇದರಿಂದಾಗಿ ಅನಿವಾರ್ಯವಾಗಿ ಇತ್ತ ಶಿಕ್ಷಣವೂ ಇಲ್ಲದೆ ಬೀದಿಗೆ ತಳ್ಳಲ್ಪಡುತ್ತಾರೆ. ಹೀಗೆ ಏನೂ ತಪ್ಪು ಮಾಡದೆ ಬೀದಿಗೆ ತಳ್ಳಲ್ಪಟ್ಟು ನರಕಸದ್ರಶ್ಯವಾಗಿ ಜೀವನ ನಡೆಸುವ ಇವರ ಸ್ಥಿತಿಯನ್ನು ನಾವು ಮಾನವೀಯ ನೆಲೆಯಲ್ಲಿ ನೋಡುವಂತಾಗಬೇಕು. ಪ್ರಮುಖವಾಗಿ ಕುಟುಂಬದಲ್ಲಿ ಅವರಿಗೆ ಮನ್ನಣೆ ಸಿಕ್ಕಿದರೆ ಮುಂದೆ ಸಮಾಜದಲ್ಲಿಯೂ ಮನ್ನಣೆ ಸಿಗುತ್ತದೆ ಎಂದು ಹೇಳಿದರು.…
UN NETWORKS ಉಳ್ಳಾಲ: ಕೆಲಸ ಮಾಡುವವರು ಬೇರೆ, ಹೆಸರು ಗಳಿಸುವವರು ಬೇರೆ. ಸೋಮೇಶ್ವರ ಬೀಚ್‍ನಿಂದ ಸಾರಸ್ವತ ಕಾಲನಿ ಆಗಿ ಉಳ್ಳಾಲಕ್ಕೆ ಸಂಪರ್ಕಿಸುವ ರಸ್ತೆಯ ಅಭಿವೃದ್ಧಿಗಾಗಿ ವಿಶ್ವ ಬ್ಯಾಂಕ್ ನಿಂದ ಶೇ.80 ಸಾಲ ಮತ್ತು ಶೇ.20 ರಾಜ್ಯ ಸರಕಾರದ ಅನುದಾನವನ್ನು ಒದಗಿಸಿ ಕಾಮಗಾರಿ ನಡೆಸಲಾಗುತ್ತಿದೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲ ಬೇಡ ಎಂದು ಜಿಲ್ಲಾ ಉಸ್ತುವಾರಿ ಹಾಗೂ ರಾಜ್ಯ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹೇಳಿದರು. ಉಳ್ಳಾಲ ಬೀಚ್‍ನಿಂದ ಅಬ್ಬಕ್ಕ ಸರ್ಕಲ್ ಆಗಿ ಪ್ಯಾರೀಸ್ ಜಂಕ್ಷನ್, ದರ್ಗಾ, ಮೇಲಂಗಡಿ, ಅಕ್ಕರೆಕೆರೆ, ಸಂತ ಸೆಬೆಸ್ತಿಯನ್ನರ ಚರ್ಚ್ ಮೂಲಕ ತೊಕ್ಕೊಟ್ಟು ಒಳಪೇಟೆ ಸಂಪರ್ಕಿಸುವ ಪ್ರಮುಖ ರಸ್ತೆಯ ಕಾಂಕ್ರೀಟಿಕರಣದ ಮೊದಲ ಹಂತದ ಕಾಮಗಾರಿಯ ಉದ್ಘಾಟನೆಯನ್ನು ಉಳ್ಳಾಲ ಬೀಚ್ ಸಮೀಪ ನಡೆಸಿದರು. ಪ್ರವಾಸಿಗರನ್ನು ಉಳ್ಳಾಲ ಪ್ರದೇಶಕ್ಕೆ ಆಕರ್ಷಿಸುವ ಉದ್ದೇಶದೊಂದಿಗೆ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಜನಪ್ರತಿನಿಧಿಗಳು ಸೇರಿಕೊಂಡು ರೂಪಿಸಿದ್ದೇವೆ. ಈ ವರ್ಷದ ಅಬ್ಬಕ್ಕ ಉತ್ಸವವನ್ನು ಬೀಚ್ ಉತ್ಸವದ ಜೊತೆಗೆ ವಿಜೃಂಭಣೆಯಿಂದ ಆಚರಿಸಲು ಉದ್ದೇಶಿಸಲಾಗಿದೆ. ಸೋಮೇಶ್ವರ ಬೀಚ್‍ನಿಂದ ಸಾರಸ್ವತ ಕಾಲನಿ ಆಗಿ…
UN NETWORKS ಉಳ್ಳಾಲ: ಮನೆಯೊಂದರಲ್ಲಿ ಇಬ್ಬರು ಯುವತಿಯರನ್ನು ಕೂಡಿಟ್ಟು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಇಬ್ಬರು ಯುವಕರನ್ನು ಉಳ್ಳಾಲ ಪೊಲೀಸರು ಬಂಧಿಸಿರುವ ಘಟನೆ ಮುನ್ನೂರು ಸಮೀಪ ನಡೆದಿದೆ. ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಮುನ್ನೂರು ನಿವಾಸಿ ಆರೀಫ್ ಎಂಬಾತನ ಮನೆಯಲ್ಲಿ ರಮೀಝ್, ರಮಾಲ್, ಪರ್ವೇಜ್ ಎಂಬವರು ಸೇರಿಕೊಂಡು ದಂಧೆ ನಡೆಸುತ್ತಿದ್ದರು. ಪಶ್ಚಿಮ ಬಂಗಾಳದ ನಸೀಮಾ ಮತ್ತು ರಿಯಾ ಎಂಬವರನ್ನು ಕೂಡಿಟ್ಟು, ದಂಧೆ ನಡೆಸುತ್ತಿದ್ದವರ ನಾಲ್ವರ ಪೈಕಿ ಸೈಯದ್ ಸಮೀರ್ ಮತ್ತು ರಮೀಝ್ ಎಂಬವರನ್ನು ಬಂಧಿಸಲಾಗಿದೆ. ಉಳಿದವರು ಪರಾರಿಯಾಗಿದ್ದಾರೆ. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಲಾಗಿದೆ. ಬಂಧಿತರಿಂದ ಎರಡು ರಿಕ್ಷಾ ಮತ್ತು 24,000 ರೂ. ನಗದು ವಶಪಡಿಸಿಕೊಂಡಿದ್ದಾರೆ.
UN NETWORKS ಸೋಮೇಶ್ವರ: ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ಮುಖಮಂಟಪ ನಿರ್ಮಾಣಕ್ಕೆ ರಾಜ್ಯದ ಮುಖ್ಯಮಂತ್ರಿ ಜೊತೆಗೆ ಚರ್ಚಿಸಿ ರೂ.1 ಕೋಟಿ ಅನುದಾನ ಬಿಡುಗಡೆಗೊಳಿಸುವ ವಿಶ್ವಾಸವನ್ನು ಜಿಲ್ಲಾ ಉಸ್ತುವಾರಿ ಹಾಗೂ ರಾಜು ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ನೀಡಿದರು. ಅವರು ಉಳ್ಳಾಲ ಸೋಮೇಶ್ವರದ ಶ್ರೀ ಸೋಮನಾಥ ಕ್ಷೇತ್ರದ ರಥಬೀದಿಯನ್ನು ಉದ್ಘಾಟಿಸಿ ಮಾತನಾಡಿದರು.ರಾಜ್ಯ ಸರಕಾರದಿಂದ ಶ್ರೀ ಕ್ಷೇತ್ರದ ಸೋಮನಾಥೇಶ್ವರ ದೇವಸ್ಥಾನದ ಎಲ್ಲಾ ರೀತಿಯ ಅಭಿವೃದ್ಧಿಗಳಿಗೆ ಸಹಕರಿಸಲಾಗಿದೆ. ಇನ್ನಷ್ಟು ಅಭಿವೃದ್ಧಿಗೊಳಿಸುವ ಉದ್ದೇಶದಿಂದ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ದೇಶ-ವಿದೇಶಗಳಿಂದ ಬರುವ ಭಕ್ತಾಧಿಗಳಿಗೆ ಅನುಕೂಲವಾಗುವ ಉದ್ದೇಶ ಹಾಗೂ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ನಿರಂತರವಾಗಿ ನಡೆಸಲಾಗುವುದು ಎಂದರು. ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ಸೋಮನಾಥೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಶ್ವನಾಥ್ ಗಟ್ಟಿ ವಗ್ಗ ವಹಿಸಿದ್ದರು. ಶ್ರೀ ಕ್ಷೇತ್ರದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ರವೀಂದ್ರನಾಥ ರೈ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯರು ಕೃಷ್ಣ ಗಟ್ಟಿ ಸೋಮೇಶ್ವರ, ದೇವಸ್ಥಾನದ ಕಾರ್ಯನಿರ್ವಹಣಾ ಅಧಿಕಾರಿ ಅರವಿಂದ ಸುತಗುಂಡಿ, ಭಗವತಿ ವ್ಯವಸಾಯ ಸೇವಾ…
UN NETWORKS ಮಂಜನಾಡಿ: ಮಂಜನಾಡಿ ಗ್ರಾಮ ವ್ಯಾಪ್ತಿಯ ನಿವೇಶನರಹಿತ ಕುಟುಂಬಗಳಿಗೆ ಹಕ್ಕು ಪತ್ರ ವಿತರಣೆ ಈಗಾಗಲೇ ಕೊಡಲಾಗಿದೆ. ಬಾಕಿ ಉಳಿದಿರುವ ಫಲಾನುಭವಿಗಳಿಗೆ ಈ ಹಿಂದೆ ನೀಡಲಾದ ಭರವಸೆಯಂತೆ ಹಕ್ಕು ಪತ್ರ ವಿತರಣೆ ಆಗುತ್ತಿದೆ. ಎಲ್ಲರಿಗೂ ವಾಸ ಮಾಡಲು ಸ್ವಂತ,ಮನೆ ಜಾಗ ಇರಬೇಕೆಂಬ ಉದ್ದೇಶದಿಂದ ಸರಕಾರ ಕೈಗೊಂಡ ತೀರ್ಮಾನದಂತೆ ಹಕ್ಕು ಪತ್ರ ನೀಡುತ್ತಿದ್ದೇವೆ. ಇದನ್ನು ಯಾವ ಕಾರಣಕ್ಕೂ ದುರಪಯೋಗ ಮಾಡಬಾರದು ಎಂದು ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ ಹೇಳಿದರು. ಅವರು ಭಾನುವಾರ ಸಂಜೆ ಮಂಜನಾಡಿ ಗ್ರಾಮದ ಬಟ್ಯಡ್ಕದಲ್ಲಿ ನಡೆದ ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಕಾಂಗ್ರೆಸ್‍ನ ದ.ಕ. ಜಿಲ್ಲಾ ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಎನ್‍ಎಸ್ ಕರೀಂ, ಮಂಜನಾಡಿ ಗ್ರಾ.ಪಂ. ಅಧ್ಯಕ್ಷ ಮಹಮ್ಮದ್ ಅಸೈ ಮಾಜಿ ಅಧ್ಯಕ್ಷ ಇಸ್ಮಾಯಿಲ್ ದೊಡ್ಡ ಮನೆ, ಅರ್ಹ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ಈ ಸಂದರ್ಭ ಕಿನ್ಯ ಗ್ರಾ.ಪಂ. ಮಾಜಿ ಅಧ್ಯಕ್ಷ ಹಮೀದ್ ಕಿನ್ಯ, ಮಂಜನಾಡಿ ಗ್ರಾ.ಪಂ. ಸದಸ್ಯರಾದ ಕುಂಞಬಾವ್…
UN NETWORKS ಮುಡಿಪು: ಡಿಸೆಂಬರ್ 6ರಿಂದ 8ರತನಕ ನಡೆಯಲಿರುವ ಮುಡಿಪು ಸಂತ ಜೋಸೆಫ್ ವಾಜ್ ಪುಣ್ಯಕ್ಷೇತ್ರದ ವಾರ್ಷಿಕೋತ್ಸವದ ಹೊರೆ ಕಾಣಿಕೆ ಮೆರವಣಿಗೆ ಭಾನುವಾರ ನಡೆಯಿತು. ಈ ಸಂದರ್ಭ ಮಾತನಾಡಿದ ಕ್ಷೇತ್ರದ ಧರ್ಮಗುರು ವಂ.ಫಾ.ಬೆಂಜಮಿನ್ ಪಿಂಟೋ, ಮೂರು ದಿನಗಳಲ್ಲೂ ಮಧ್ಯಾಹ್ನದಿಂದ ರಾತ್ರಿವರೆಗೆ ನಿರಂತರ ನಡೆಯಲಿದೆ. ಪುಣ್ಯಕ್ಷೇತ್ರಕ್ಲೆ ಜಾತಿ ಭೇದವಿಲ್ಲದೆ ಹೊರೆಕಾಣಿಕೆ ನೀಡಿದ್ದಾರೆ. ಡಿ.6ರಂದು ರೋಗಿಗಳಿಗೆ ನಡೆಯುವ ವಿಶೇಷ ಪೂಜೆಯ ನೇತೃತ್ವ ಫಾ.ಪೀಯುಸ್ ಥೋಮಸ್ ಡಿಸೋಜ ವಹಿಸಲಿದ್ದಾರೆ. 7ರಂದು ಪೀಟರ್ ಪೌಲ್ ಸಲ್ದಾನ, 8ರಂದು ಫಾ.ಲೂವಿಸ್ ಪೌಲ್ ಡಿಸೋಜ ಹಾಗೂ ರಾತ್ರಿ 8ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಫಾ.ಮ್ಯಾಕ್ಸಿಂ ಎಲ್.ನೊರೋನ್ಹ ಪೂಜೆ ನೆರವೇರಿಸಲಿದ್ದಾರೆ ಎಂದು ತಿಳಿಸಿದರು. ಒಲವಿನ ಹಳ್ಳಿ ಪುನರ್ವಸತಿ ಕೇಂದ್ರದ ವಂ.ಫಾ.ಲಾರೆನ್ಸ್ ಡಿಸೋಜ ಬಲಿಪೂಜೆಯ ನೇತೃತ್ವ ವಹಿಸಿದ್ದರು. ವಂ.ಫಾ.ಮೈಕಲ್ ಮಸ್ಕರೇನಸ್, ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಡಿಸೋಜ, ಕಾರ್ಯದರ್ಶಿ ಮಾರ್ಸೆಲ್ ಡಿಸೋಜ, ಅರುಣ್ ಡಿಸೋಜ ಮುಡಿಪು ಇನ್ನಿತರರು ಉಪಸ್ಥಿತರಿದ್ದರು. ಭಾರೀ ಪ್ರಮಾಣದಲ್ಲಿ ಹೊರೆ ಕಾಣಿಕೆ ವಾರ್ಷಿಕೋತ್ಸವ ಪ್ರಯುಕ್ತ ನಡೆದ ಹೊರೆ ಕಾಣಿಕೆ ಮೆರವಣಿಗೆಯಲ್ಲಿ…
UN NETWORKS ಹರೇಕಳ: ಯಾವುದೇ ಒಂದು ಶಿಕ್ಷಣ ಸಂಸ್ಥೆ ಬೆಳವಣಿಗೆ ಕಾಣಬೇಕಾದರೆ ಹಿರಿಯ ವಿದ್ಯಾರ್ಥಿಗಳ ಸಹಕಾರ, ನಿರಂತರ ಪಾಲ್ಗೊಳ್ಳುವಿಕೆ ಮುಖ್ಯ ಎಂದು ದೇರಳಕಟ್ಟೆ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ಮೂಳೆ ತಜ್ಞ ಡಾ.ವಿಕ್ರಮ್ ಶೆಟ್ಟಿ ಅಭಿಪ್ರಾಯಪಟ್ಟರು. ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಹಳೆ ವಿದ್ಯಾರ್ಥಿ ಸಂಘದ ಜಂಟಿ ಆಶ್ರಯದಲ್ಲಿ ನಡೆಯುವ ವಾರ್ಷಿಕೋತ್ಸವದ ಪೂರ್ವಭಾವಿಯಾಗಿ ಭಾನುವಾರ ಶಾಲಾ ಮೈದಾನದಲ್ಲಿ ನಡೆದ ಹಳೆ ವಿದ್ಯಾರ್ಥಿಗಳ ಕ್ರೀಡಾಕೂಟದ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಒಂದು ಶಾಲೆಯಲ್ಲಿ ಕಲಿತು ಯಾವುದೇ ದೇಶದಲ್ಲಿದ್ದರೂ ಊರಿನ ಶಾಲೆ ಬಗ್ಗೆ ವಿಶೇಷ ಅಭಿಮಾನ ಇರುತ್ತದೆ. ಹಿರಿಯ ವಿದ್ಯಾರ್ಥಿಗಳು ಶಾಲೆಯೊಂದಿಗೆ ನಿಕಟ ಸಂಪರ್ಕ ಹೊಂದಿದಾಗ ಆಡಳಿತ ಮಂಡಳಿಗೂ ಆತ್ಮವಿಶ್ವಾಸ ಮೂಡುತ್ತದೆ ಎಂದು ಹೇಳಿದರು.ಮುಖ್ಯ ಅತಿಥಿ ಪ್ರಗತಿಪರ ಕೃಷಿಕ ಡಿ.ಪದ್ಮನಾಭ ಶೆಟ್ಟಿ ದೆಬ್ವೇಲಿ ಗುತ್ತುದೋಟ ಮಾತನಾಡಿ, ಕ್ರೀಡೆ ಎಂಬುದು ತಮಾಷೆಯ ವಿಚಾರವಲ್ಲ, ಯಾವುದೇ ಒಂದು ಆಟದಲ್ಲಿ ಸಕ್ರಿಯವಾಗಿ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರು ಪಡೆದರೆ ಉತ್ತಮ ಉದ್ಯೋಗ ತನ್ನಿಂತಾನೇ ಅರಸಿ…
UN NETWORKS ಉಳ್ಳಾಲ: ಪ್ರಸ್ತುತ ಕಬ್ಬಡ್ಡಿ ಆಟ ಅಂತರಾಷ್ಟ್ರೀಯ ಮಟ್ಟದಲ್ಲಿ ಜನಪ್ರಿಯ ಆಟವಾಗಿ ಹೊರಹೊಮ್ಮಿದೆ. ಇದರಿಂದ ಆಟಗಾರರಿಗೆ ವಿಪುಲ ಅವಕಾಶವಿದೆ. ರಾಷ್ಟ್ರಮಟ್ಟದಲ್ಲಿ ಸ್ಟಾರ್ ಆಟಗಾರರಾಗಿ ಅನೇಕರು ಹೊರಹೊಮ್ಮಿದ್ದಾರೆ ಎಂದು ಸೋಮೇಶ್ವರ ಆನಂದಾಶ್ರಮ ಶಾಲೆ ಸೋಮೇಶ್ವರದ ನಿವೃತ್ತ ಮುಖ್ಯೋಪಾಧ್ಯಾಯ ಜಗನ್ನಾಥ್ ಅಭಿಪ್ರಾಯಪಟ್ಟರು. ಅವರು ಶ್ರೀ ರಾಮ್ ಫ್ರೆಂಡ್ಸ್ ಸರ್ಕಲ್ ಕೊಲ್ಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ದ.ಕ ಹಾಗೂ ದ.ಕ ಅಮೆಚೂರ್ ಕಬ್ಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ಕೊಲ್ಯ ಶ್ರೀ ರಾಮ್ ಫ್ರೆಂಡ್ಸ್ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ಕೊಲ್ಯ ಶ್ರೀ ರಾಮ ಭಜನಾ ಮಂದಿರ ಬಳಿ ಮೈದಾನದಲ್ಲಿ ಶ್ರೀ ರಾಮ್ ಫ್ರೆಂಡ್ಸ್ ಸರ್ಕಲ್ ಕೊಲ್ಯ ಇದರ ಸುವರ್ಣ ಮಹೋತ್ಸವದ ಪ್ರಯುಕ್ತ ದ.ಕ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬ್ಬಡ್ಡಿ ಪಂದ್ಯಾಟದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಯಾಗಿದ್ದ ಅಮೆಚೂರು ಕಬ್ಬಡ್ಡಿ ಅಸೋಸಿಯೇಷನ್ ಉಳ್ಳಾಲ ವಲಯ ಅಧ್ಯಕ್ಷ ಸುರೇಶ್ ಭಟ್ನಗರ ಮಾತನಾಡಿ ಹಿರಿಯ ಆಟಗಾರರ ಕೂಡುವಿಕೆ ಹಾಗೂ ಯುವ ಆಟಗಾರರಿಗೆ ಪಂದ್ಯಾಟದ ಮೂಲಕ ಅವಕಾಶ…
UN NETWORKS ದೇರಳಕಟ್ಟೆ: ಪ್ರವಾದಿ ಮಹಮ್ಮದ್ ಧಾರ್ಮಿಕ ,ಶೈಕ್ಷಣಿಕ ಕ್ಷೇತ್ರಕ್ಕೆ ಉತ್ತಮ ಕೊಡುಗೆ ಕೊಟ್ಟವರು. ಸೌಹಾರ್ದತೆಯ ಮನೋಭಾವ ಅವರಲ್ಲಿತ್ತು. ಶಾಂತಿಯ ಸಂದೇಶವನ್ನೇ ಲೋಕಕ್ಕೆ ಸಾರಿದ್ದಾರೆ. ಸಾರ್ವಕಾಲಿಕ ಚಿಂತಕರಲ್ಲಿ ಅವರೂ ಕೂಡಾ ಒಬ್ಬರಾಗಿದ್ದಾರೆ ಎಂದು ಮಸ್ಜುದುಲ್ ಹುದಾ ತೊಕ್ಕೊಟ್ಟುವಿನ ಖತೀಬ್ ಮುಹಮ್ಮದ್ ಕುಂಞ ಹೇಳಿದರು. ಪ್ರವಾದಿ ಮಹಮ್ಮದ್ ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಎಂಬ ವಿಚಾರಕ್ಕೆ ಸಂಬಂಧಿಸಿ ದೇರಳಕಟ್ಟೆಯಲ್ಲಿ ಶುಕ್ರವಾರ ನಡೆದ ಸೀರತ್ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಮಾನವ ಪರಸ್ಪರ ಹೊಂದಾಣಿಕೆಯಿಂದ ಸೌಹಾರ್ದತೆಯಿಂದ ಬೆಳೆಯಬೇಕು. ವಿಕಲತೆ, ವಿಭಿನ್ನತೆ ಬಿಟ್ಟು ಶಾಂತಿಯ ಬದುಕು ಸಾಗಿಸಬೇಕು ಎಂದು ಹೇಳಿದ್ದರು. ಅವರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕಾದ ಕೆಲಸ ನಮ್ಮದಾಗಿದೆ ಎಂದರು. ಬೋಳಂಗಡಿ ಜುಮಾ ಮಸೀದಿ ಖತೀಬ್ ಯಹ್ಯಾ ತಂಙಳ್ ಮದನಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಪಿ.ಎ. ಫಾರ್ಮಸಿ ಕಾಲೇಜಿನ ಡಾ. ಮುಹಮ್ಮದ್ ಮುಬೀನ್, ಎರ್ನಾಕುಲಂ ಮಸೀದಿ ಖತೀಬ್ ಟಿ.ಇ.ಎಂ ರಾಫಿ ಆಲಿಯ, ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್‍ನ ಅಧ್ಯಕ್ಷ ಸಈದ್ ಇಸ್ಮಾಯಿಲ್, ಬೆಳ್ಮ ಗ್ರಾಮ ಪಂಚಾಯಿತಿ ಸದಸ್ಯ…

