UN NETWORKS
ಇನೋಳಿ: ನಾಗರ ಪಂಚಮಿಗೆಂದು ಕೇದಗೆ ಹೂ ಕಿತ್ತು ಮೀನಿಗೆ ಗಾಳ ಹಾಕಲು ತೆರಳಿದ್ದ ವ್ಯಕ್ತಿ ನೀರುಪಾಲಾಗಿ ಸಾವನ್ನಪ್ಪಿದ ಘಟನೆ ಇನೋಳಿಯ ಗುಂಡ್ಯ ಸಮೀಪದ ನೇತ್ರಾವತಿ ನದಿಯ ಹಿನ್ನೀರಿನ ಕೊಲದಲ್ಲಿ ಗುರುವಾರ ಸಂಜೆ ನಡೆದಿದೆ.
ಗುಂಡ್ಯ ನಿವಾಸಿ ಹರೀಶ್ ನಾಯ್ಕ್ (30)ಎಂಬವರೇ ಸಾವನ್ನಪಿದ ದುರ್ದೈವಿ.ಗುರವಾರ ಸಂಜೆ ಗುಂಡ್ಯದ ನೇತ್ರಾವತಿ ನದಿಗೆ ತಾಗಿರುವ ಖಾಸಗಿ ತೋಟದಲ್ಲಿರುವ ಕೃತಕ ಹಿನ್ನೀರಿನ ಕೊಳಕ್ಕೆ ಕೇದಗೆ ಹೂ ಕೀಳಲೆಂದು ಹೋದ ಹರೀಶ್ ಅವರು ನಂತರ ಮೀನಿಗೆ ಗಾಳ ಹಾಕುತ್ತಿದ್ದರೆನ್ನಲಾಗಿದೆ.ಈ ವೇಳೆ ನೀರಿನ ಸುಳಿಗೆ ಸಿಕ್ಕಿ ನೀರುಪಾಲಾಗಿ ಸಾವನ್ನಪ್ಪಿದ್ದಾರೆ.
ಅಗ್ನಿಶಾಮಕದಳ,ಪೊಲೀಸರು,ಸ್ಥಳೀಯ ಈಜುಗಾರರು ಸೇರಿ ಮೃತದೇಹವನ್ನು ಸಂಜೆಯೇ ಮೇಲಕ್ಕೆತ್ತಿದ್ದಾರೆ.ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


