UN NETWORKS ಕೊಣಾಜೆ: ನಮ್ಮ ದೇಶದಲ್ಲಿರುವ ಧರ್ಮ ಜಾಗೃತಿ, ಧಾರ್ಮಿಕ ಚಿಂತನೆಗಳು ಬೇರೆ ಯಾವ ದೇಶಗಳಲ್ಲೂ ಕಾಣಲು ಸಾಧ್ಯವಿಲ್ಲ. ಧಾರ್ಮಿಕ ಚಿಂತನೆಗಳು ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳನ್ನು ಬೆಳೆಸುವುದರೊಂದಿಗೆ ಉತ್ತಮ ಸಮಾಜ, ಸದೃಢ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ ಎಂದು ಮೂಡಬಿದಿರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ.ಮೋಹನ್ ಆಳ್ವ ಆವರು ಹೇಳಿದರು. ಅವರು ಕೊಣಾಜೆ, ಮುಲಾರ ಬೊಲ್ಯ ಶ್ರೀ ಉಳ್ಳಾಲ್ತಿ ಕೇತ್ರದ ಬ್ರಹ್ಮಕಲಶೋತ್ಸವದ ಆಮಂತ್ರಣ ಪತ್ರಿಕೆಯನ್ನು ಭಾನುವಾರ ಬಿಡುಗಡೆಗೊಳಿಸಿ ಮಾತನಾಡಿದರು. ನಮ್ಮ ದೇಶಕ್ಕೆ ಎಷ್ಟೋ ಭಾರಿ ಜಾಗತಿಕ ದಾಳಿಯಾದರೂ ಭಾರತವು ಸದೃಢವಾಗಿ ನೆಲೆನಿಲ್ಲಲು ಇಲ್ಲಿಯ ಧಾರ್ಮಿಕ ಚಿಂತನೆಗಳು ಗಟ್ಟಿಯಾಗಿರುವುದೇ ಕಾರಣವಾಗಿದೆ. ನಮ್ಮ ತುಳುನಾಡಿನಲ್ಲಿ ಅದೆಷ್ಟೋ ವರ್ಷಗಳಿಂದ ನಮ್ಮ ಹಿರಿಯರ ಕಾಲದಿಂದ ಆರಾಧಿಸಿಕೊಂಡು ಬಂದಿರುವ ದೈವ ದೇವಾಸ್ಥಾನಗಳು ಇವೆ. ಇದು ನಮ್ಮಲ್ಲಿ ನಂಬಿಕೆ ವಿಶ್ವಾಸವನ್ನು ಬೆಳೆಸುವುದರೊಂದಿಗೆ ಧಾರ್ಮಿಕ ಶಕ್ತಿಯನ್ನು ಬೆಳೆಸಿದೆ. ಇದೀಗ ನೂತನವಾಗಿ ನಿರ್ಮಾಣಗೊಂಡ ಉಳ್ಳಾಲ್ತಿ ಸಾನಿಧ್ಯವು ಕೂಡಾ ಪವಿತ್ರವಾದ ಕ್ಷೇತ್ರವಾಗಿದ್ದು, ಕ್ಷೇತ್ರದ ಅಭಿವೃದ್ಧಿಯೊಂದಿಗೆ ಈ ಊರು ಕೂಡಾ ಅಭಿವೃದ್ಧಿಯಾಗಲಿದೆ ಎಂದರು. ಸಮಾರಂಭವನ್ನು…
Author: UllalaVani
UN NETWORKS ಕೊಣಾಜೆ: ಇಂದಿನ ಚಲನಚಿತ್ರಗಳಲ್ಲಿ ಕೇವಲ ಮನರಂಜನೆಯನ್ನೇ ಗುರಿಯಾಗಿಸಿವೆ. ಪ್ರಮುಖವಾಗಿ ಚಿತ್ರಗಳು, ಕಿರುಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುವುದರೊಂದಿಗೆ ಸಮಾಜದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದು ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ.ಪ್ರಶಾಂತ್ ಮಾರ್ಲ ಅವರು ಅಭಿಪ್ರಾಯಪಟ್ಟರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಪೀಠ ಕ್ರಿಯೇಷನ್ಸ್ ತಂಡದ ಕರೆ ಎನ್ನುವ ಕನ್ನಡ ಕಿರು ಚಿತ್ರವನ್ನು ಶುಕ್ರವಾರ ಬಿಡುಗಡೆಗೊಳಿಸಿ ಮಾತನಾಡಿದರು. ಶಿಕ್ಷಣ ಇವತ್ತಿನ ಯುಗದಲ್ಲಿ ಬಹಳ ಪ್ರಾಮುಖ್ಯತೆಯನ್ನು ಹೊಂದಿದೆ. ಶಿಕ್ಷಣಕ್ಕೆ ಮಹತ್ವ ನೀಡುವ ಮತ್ತು ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ನೀಡುವಂತಹ ಚಿತ್ರವನ್ನು ನೀಡಬೇಕಾಗಿದೆ. ಕರೆ ಕಿರುಚಿತ್ರವು ಯುವಕರ ತಂಡದಿಂದ ನಿರ್ಮಾಣಗೊಂಡಿದ್ದು ಉತ್ತಮ ಪ್ರಯತ್ನವಾಗಿದೆ. ಇದರಲ್ಲಿ ಸಮಾಜಕ್ಕೊಂದು ಸಂದೇಶವಿದ್ದು, ಮುಂದಿನ ದಿನಗಳಲ್ಲಿ ಈ ತಂಡದಿಂದ ಇನ್ನಷ್ಟು ಪ್ರಯತ್ನಗಳು ನಡೆಯಲಿ ಎಂದು ಹೇಳಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಡಾ. ಎ.ಎಮ್.ಖಾನ್‍ರವರು ಮಾತಾನಾಡಿ ಈಗಿನ ಜನಾಂಗಕ್ಕೆ ತಂತ್ರಜ್ಞಾನ ಮುಂದುವರಿದ ಹಾಗೆ ಮಾಧ್ಯಮ ಕ್ಷೇತ್ರದಲ್ಲಿ ಅವಕಾಶಗಳು…
UN NETWORKS ಉಳ್ಳಾಲ: ಸಂಘಟನೆಯಲ್ಲಿ ಪೈಪೋಟಿ ಆಗುವುದು ಬೇಡ. ಎಲ್ಲರೂ ಜತೆಯಾಗಿ ಸೇರಿಕೊಂಡು ಸಂಘಟನೆ ಬೆಳೆಸುತ್ತಾ ಅಪವಾದಗಳು ಬಾರದಂತೆ, ಸಂಘದ ರೀತಿಯಲ್ಲಿ ತೆರೆಮರೆಯಲ್ಲಿ ಕಾರ್ಯಕರ್ತರು ಸಮಾಜಮುಖಿ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕಿದೆ ಎಂದು ಮಾತೃಭೂಮಿ ಸೇವಾ ಪ್ರತಿಷ್ಠಾನ ದ ಅಧ್ಯಕ್ಷ ಕೆ.ಟಿ ಸುವರ್ಣ ಅಭಿಪ್ರಾಯಪಟ್ಟರು. ತೊಕ್ಕೊಟ್ಟು ಚಾವಡಿ ಸಭಾಂಗಣದಲ್ಲಿ ಭಾನುವಾರ ಹಿಂದೂ ಯುವಸೇನೆ ಪಾಂಚಜನ್ಯ ಶಾಖೆ ತೊಕ್ಕೊಟ್ಟು ಇದನ್ನು ಉದ್ಘಾಟಿಸಿ ಮಾತನಾಡಿದರು.ಉಳ್ಳಾಲ ಭಾಗದಲ್ಲಿನ ಹಿಂದೂ ಸಂಘಟನೆಗಳಲ್ಲಿ ಒಗ್ಗಟ್ಟಿನ ಕೊರತೆಯಿದೆ. ಆದರೆ ಹಿಂದೆ ಇದ್ದಂತಹ ಹಿಂದೂ ಯುವಸೇನೆ ಮರುಸ್ಥಾಪನೆಯಾಗುವ ಮೂಲಕ ಎಲ್ಲಾ ಯುವಕರನ್ನು ಒಗ್ಗೂಡಿಸುವ ಕಾರ್ಯ ಆಗಲಿದೆ. ಹಿಂದೂಗಳ ರಕ್ಷಣೆಯ ಜಾಗ ಎಕ್ಕೂರು ಎಂಬ ಮಾತು ಇದೆ. ಅಲ್ಲಿ ಹಿಂದೂ ಯುವಸೇನೆ ಹಿಂದೆಯೂ , ಈಗಲೂ ಬಲಿಷ್ಠವಾಗಿದೆ. ಸಮಾಜಮುಖಿ ಕಾರ್ಯಗಳೊಂದಿಗೆ ಸಮಾಜದಲ್ಲಿ ಅಸಹಾಯಕರಿಗೆ ಧ್ವನಿಯಾಗಿ ನಿಲ್ಲುತ್ತಾ ಸಂಘಟನೆ ಬೆಳೆದುನಿಂತಿದೆ. ಉಳ್ಳಾಲದಲ್ಲಿಯೂ ತಿಂಗಳಲ್ಲಿ ಸಭೆ ಕರೆದು ಸಂಘಟನೆಯನ್ನು ಬಲಿಷ್ಠಗೊಳಿಸುವ ಪ್ರಯತ್ನ ನೂತನ ಸಮಿತಿಯಿಂದ ನಡೆಯಬೇಕಿದೆ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ…
UN NETWORKS ಹರೇಕಳ: ಶಿಕ್ಷಣ ಪಡೆದ ಬಳಿಕ ತಾನು ಏನಾಗಬೇಕು ಎನ್ನುವ ತೀರ್ಮಾನ ಶಾಲಾ ಜೀವನದಲ್ಲಿಯೇ ಕೈಗೊಳ್ಳಬೇಕಿದ್ದು ಈ ನಿಟ್ಟಿನಲ್ಲಿ ಶಿಸ್ತಿನ ವಿದ್ಯೆ ಪಡೆದು ಶಿಸ್ತಿನ ಜೀವನ ನಡೆಸಿದರೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಬಹುದು ಎಂದು ಕೊಣಾಜೆ ಠಾಣಾ ವೃತ್ತ ನಿರೀಕ್ಷಕ ರವಿ ನಾಯಕ್ ಅಭಿಪ್ರಾಯಪಟ್ಟರು. ಹರೇಕಳ ಶ್ರೀ ರಾಮಕೃಷ್ಣ ಅನುದಾನಿತ ಪ್ರೌಢ ಮತ್ತು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಹಕಾರದಲ್ಲಿ ಶನಿವಾರ ನಡೆದ ವಾರ್ಷಿಕ ಕ್ರೀಡಾಕೂಟದ ವಂದನೆ ಸ್ವೀಕರಿಸಿ ಮಾತನಾಡಿದರು.ಶಿಸ್ತು ಮತ್ತು ಶಿಕ್ಷಣ ಒಂದೇ ನಾಣ್ಯದ ಎರಡು ಮುಖವಿದ್ದಂತೆ, ಹೂವು ಬಂಗಾರದ್ದಾದರೂ ಪರಿಮಳವಿಲ್ಲದಿದ್ದರೆ ನಿಷ್ಪ್ರಯೋಜಕ, ಕಲಿತ ಶಿಕ್ಷಣ ಇನ್ನೊಬ್ಬರಿಗೂ ಪ್ರಯೋಜನ ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದು ಹೇಳಿದರು.ಸಭಾ ಕಾರ್ಯಕ್ರಮ ಉದ್ಘಾಟಿಸಿದ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಸುರೇಶ್ಚಂದ್ರ ಶೆಟ್ಟಿ ಮಾತನಾಡಿ, ಕನ್ನಡ ಶಾಲೆಗಳನ್ನು ಮುನ್ನಡೆಸುವುದು ಸುಲಭದ ಕೆಲಸವಲ್ಲ, ಆದರೂ ಅತಿ ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿರುವ ಶಿಸ್ತು ಬದ್ಧ ಕಲಿಕೆ, ಪಠ್ಯೇತರ ಚಟುವಟಿಕೆಗಳನ್ನು ನಡೆಸುತ್ತಿರುವ ರಾಮಕೃಷ್ಣ ಶಾಲೆ…
UN NETWORKS ಇರಾ: ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆ ಹಾಗು ಗ್ರಾಮ ಪಂಚಾಯಿತಿ ಅನುದಾನದಲ್ಲಿ ಕಾಂಕ್ರೀಟಿಕರಣಗೊಳ್ಳಲಿರುವ ರಸ್ತೆ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ ಶುಕ್ರವಾರ ಚಾಲನೆ ನೀಡಿದರು. ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಮೇಶ್ ಪೂಜಾರಿ, ಎಂ.ಬಿ. ಉಮರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಳಿನಿ ಎ.ಕೆ., ಗುತ್ತಿಗೆದಾರ ಸಾಹುಲ್ ಹಮೀದ್ ಹಾಗೂ ಎಂಜಿನಿಯರ್ ಗುರುಕಿರಣ್ ಪಾಲ್ಗೊಂಡಿದ್ದರು.
UN NETWORKS ಮೊಂಟೆಪದವು: ತಮ್ಮಲ್ಲಿರುವ ಪ್ರತಿಭೆಯನ್ನು ಪ್ರಕಟಿಸುವ ಶುಭ ದಿನವೇ ಪ್ರತಿಭಾ ಕಾರಂಜಿ. ಇದು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಪ್ರಗತಿಗೆ ವೇದಿಕೆ ಪೂರಕ. ಮಕ್ಕಳ ಪ್ರತಿಭೆ ಅನಾವರಣಗೊಂಡಾಗ ಮಕ್ಕಳ ಪೋಷಕರ ಮನ ಪುಳಕಿತವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಸದಸ್ಯೆ ಮಮತಾ ಡಿ. ಎಸ್ ಗಟ್ಟಿ ಹೇಳಿದರು. ಬಂಟ್ವಾಳ ತಾಲೂಕಿನ ನರಿಂಗಾನ ಗ್ರಾಮ ಪಂಚಾಯತಿಯ ನರಿಂಗಾನ ಸಂಯುಕ್ತ ಪದವಿಪೂರ್ವ ಕಾಲೇಜಿನ ಜಂಟಿ ಆಶ್ರಯದಲ್ಲಿ ಶುಕ್ರವಾರ ನಡೆದ ಪ್ರತಿಭಾ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.ವಿದ್ಯಾರ್ಥಿ ಜೀವನ ಅದು ಸುವರ್ಣಾಕ್ಷರದಲ್ಲಿ ಬರೆದಿಡುವಂತಹ ಸಂತಸ ಕೊಡುವ ದಿನಗಳು. ನಾವು ಶೈಕ್ಷಣಿಕವಾಗಿ ಹಾಗೂ ಪಠ್ಯೇತರ ಚಟುವಟಿಕೆಯಲ್ಲೂ ಉತ್ತಮ ಸಾಧನೆ ಮಾಡಬೇಕು. ಸರಕಾರ ಶಿಕ್ಷಣಕ್ಕಾಗಿ ಎಲ್ಲ ಸೌಲಭ್ಯ ಕೊಡುತ್ತಿದ್ದು ವಿದ್ಯಾರ್ಥಿಗಳು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು. ಹಾಗೆಯೇ ಶಾಲಾ ಅಭಇವೃದ್ಧೀ ಸಮಿತಿಯ ಬಹುಕಾಲದ ಬೇಡಿಕಯಾಗಿರುವ ಪ್ರಯಾಣಿಕರ ತಂಗುದಾಣ ನಿರ್ಮಾಣಕ್ಕೆ ಸ್ಥಳಾವಕಾಶ ದೊರೆತರೆ ಉತ್ತಮ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಲು ಒಂದು ಲಕ್ಷ ರೂ. ಅನುದಾನ ಮೀಸಲಿಡುತ್ತೇನೆ ಎಂದು ತಿಳಿಸಿದರು. ನರಿಂಗಾನ ಗ್ರಾಮ…
UN NETWORKS ಉಳ್ಳಾಲ: ಕ್ರೀಡಾ ಕ್ಷೇತ್ರಕ್ಕೆ ಯೆನೆಪೋಯ ವಿಶ್ವವಿದ್ಯಾಲಯ ಹೆಚ್ಚಿನ ಪ್ರೋತ್ಸಾಹವನ್ನು ನೀಡುತ್ತಿದೆ. ಈ ಮೂಲಕ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ತಮ್ಮನ್ನು ತೊಡಗಿಸಲು ಅವಕಾಶ ದೊರೆತಿದೆ ಎಂದು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ ಅಭಿಪ್ರಾಯಪಟ್ಟರು. ಅಂತರ್ ಕಾಲೇಜು ಫಿಸಿಯೋಥೆರಪಿ ಕ್ರಿಕೆಟ್ ಪಂದ್ಯಾಟ ಚ್ಯಾಂಪ್-ಯೆನ್ಸ್ ಟ್ರೋಫಿ 2018 ದೇರಳಕಟ್ಟೆ ಯೆನೆಪೋಯ ದ ಸಾಕ್ಸರ್ ಗ್ರೌಂಡಿನಲ್ಲಿ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.ಫಿಸಿಯೋಥೆರಪಿ ವಿಭಾಗದಲ್ಲಿ ಕಲಿಕೆಯೇ ಹೆಚ್ಚಿದ್ದ ಕಾಲವೊಂದಿತ್ತು. ಈ ವೇಳೆ ಬೆರಳೆಣಿಕೆಯ ತಂಡಗಳು ಮಾತ್ರ ಪಂದ್ಯಾಟಗಳಲ್ಲಿ ಭಾಗವಹಿಸುತ್ತಿದ್ದವು. ಆದರೆ ಇದೀಗ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹವನ್ನು ಫಿಸಿಯೋಥೆರಪಿ ವಿಭಾಗವೂ ನೀಡುತ್ತಿದೆ. ಇದರಿಂದ ಯೆನೆಪೋಯ ಆಯೋಜಿಸಿರುವ ಟ್ರೋಫಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಂಡಗಳು ಭಾಗವಹಿಸಿರುವುದು ಸಾಕ್ಷಿಯಾಗಿದೆ ಎಂದರು. ಮುಖ್ಯ ಅತಿಥಿಯಾಗಿದ್ದ ಅಂತರಾಷ್ಟ್ರೀಯ ದಿವ್ಯಾಂಗಿಗಳ ಕ್ರಿಕೆಟ್ ಆಟಗಾರ ವಿಜಯಕಾಂತ್ ತಿವಾರಿ ಮಾತನಾಡಿ ಕ್ರಿಕೆಟ್ ಆಟದಲ್ಲಿ ಹೆಣ್ಮಕ್ಕಳು ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಬಹಳಷ್ಟು ಕಡಿಮೆ. ಆದರೆ ಯೆನೆಪೋಯ ಆಯೋಜಿಸಿರುವ ಟ್ರೋಫಿಯಲ್ಲಿ…
UN NETWORKS ಕೊಣಾಜೆ: ಮಂಗಳಗಂಗೋತ್ರಿ ಜ್ಯೂನಿಯರ್ ಚೇಂಬರ್ ಇಂಟರ್‍ನ್ಯಾಷನಲ್ ಕೊಣಾಜೆ ಘಟಕ `ಮಂಗಳೂರು ಹಿರಿಯ ನಾಗರಿಕರ ಸಂಘ , ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಜಂಟಿ ಸಹಭಾಗಿತ್ವದಲ್ಲಿ `ಹಿರಿಯ ನಾಗರಿಕರಿಗೆ ಗುರುತಿನ ಚೀಟಿ ನೋಂದಾವಣಿ ಹಾಗೂ ವಿತರಣೆ’ ಕಾರ್ಯಕ್ರಮ ಕೊಣಾಜೆ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಭವನದಲ್ಲಿ ನಡೆಯಿತು. ಉದ್ಯಮಿ ಸೀತಾ ಆರ್. ಪಾವಸ್ಕರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ `ಹಿರಿಯ ನಾಗರಿಕರನ್ನು ಗುರುತಿಸುವ ಹಾಗೂ ಅವರಿಗೆ ಪ್ರಯೋಜನಗಳನ್ನು ತಲುಪಿಸುವ ಕಾರ್ಯಕ್ರಮ ಯಶಸ್ವಿಯಾಗಲಿ. ಇಂತಹ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವ ಜೇಸಿ ಹಾಗೂ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸಂಸ್ಥೆಗಳ ಕರ್ಯ ಅಭಿನಂದನೀಯ ಎಂದರು. ಅಧ್ಯಕ್ಷತೆ ವಹಿಸಿದ ಜೆಸಿಐ ಮಂಗಳಗಂಗೋತ್ರಿ ಘಟಕದ ಅಧ್ಯಕ್ಷ ಡಾ. ಪ್ರಶಾಂತ ನಾಯ್ಕ ಮಾತನಾಡಿ `ಹಿರಿಯ ನಾಗರಿಕರು ಸಮಾಜದ ಅತ್ಯಮೂಲ್ಯವಾದ ಆಸ್ತಿ. ಅವರ ಜೀವನಾನುಭವಗಳು ಕಿರಿಯರ ಉಜ್ವಲ ಭವಿಷ್ಯಕ್ಕೆ ದಾರಿದೀಪ. ಹಿರಿಯ ನಾಗರಿಕರಿಗಾಗಿ ಸರಕಾರಿ ಹಾಗೂ ಸರಕಾರೇತರ ಸಂಘ ಸಂಸ್ಥೆಗಳಿಂದ ಹಲವು ವಿಶೇಷ ಯೋಜನೆಗಳು…
UN NETWORKS ಉಳ್ಳಾಲ: ಕ್ರಿಕೆಟ್ ಬೆಟ್ಟಿಂಗ್ ಹಾಕುತ್ತಿದ್ದ ಇಬ್ಬರನ್ನು ಸಿಸಿಬಿ ಪೊಲೀಸರು ಉಳ್ಳಾಲ ಠಾಣಾ ವ್ಯಾಪ್ತಿಯ ಚೆಂಬುಗುಡ್ಡೆ ಪರಿಸರದಿಂದ ಬಂಧಿಸಿದ್ದು, ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದಾನೆ. ಚೆಂಬುಗುಡ್ಡೆ ಮೊಂತೇರೊ ಮನೆಯ ಆಲ್ವಿನ್ ಕಿರಣ್ ಮೊಂತೇರೊ (23) ಪಿಲಾರು ಶಾಲೆ ಬಳಿಯ ಕಿಶೋರ್ ಡಿಸೋಜ (39) ಬಂಧಿತರು. ಅಕ್ರಮ ಬೆಟ್ಟಿಂಗ್ ಗೆ ಸಾರ್ವಜನಿಕರಿಂದ ಸಂಗ್ರಹಿಸಿದ್ದ ನಗದು ರೂ.2,06,000, 7 ಮೊಬೈಲ್ ಫೋನುಗಳು, ಒಂದು ಟ್ಯಾಬ್, 2 ಲ್ಯಾಪ್ ಟಾಪ್, ಮತ್ತು ಕ್ರಿಕೆಟ್ ಬೆಟಿಂಗ್ ವಿವರ ಹಾಕಿದ್ದ ಪುಸ್ತಕಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಮುಖ ಆರೋಪಿ ವಿಶ್ವಾಸ್ ಎಂಬಾತ ತಲೆಮರೆಸಿಕೊಂಡಿದ್ದಾನೆ.
UN NETWORKS ದೇರಳಕಟ್ಟೆ: ಧಾರ್ಮಿಕತೆಯನ್ನು ಧ್ವಂಸ ಮಾಡುವ ಮೆಟೀರಿಯಲಿಸಂ ಸಿದ್ಧಾಂತವನ್ನು ಹಿಮ್ಮೆಟ್ಟಿಸೋಣ ಎಂಬ ದ್ಯೇಯ ವಾಕ್ಯದೊಂದಿಗೆ ಸಮಸ್ತ ಶರೀಅತ್ ಸಂರಕ್ಷಣಾ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ದಿನಾಂಕ 09-12-2018ನೇ ಆದಿತ್ಯವಾರ ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ಹಮ್ಮಿಕೊಂಡಿರುವ ಶರೀಅತ್ ಸಂರಕ್ಷಣಾ ಸಮ್ಮೇಳನವನ್ನು ಯಶಸ್ವಿಗೊಳಿಸಲು ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ಕರೆ ನೀಡಿದೆ. ಅಸೋಸಿಯೇಷನ್ ನ ಅಧ್ಯಕರಾದ ಇಸ್ಮಾಯಿಲ್ ಹಾಜಿ ದೇರಳಕಟ್ಟೆ, ಗೌರವ ಅಧ್ಯಕ್ಷ ರಾದ ಮಜಲ್ ಅಬ್ಬಾಸ್ ಹಾಜಿ , ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ , ಕೋಶಾಧಿಕಾರಿ ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್ , ಉಪಾಧ್ಯಕ್ಷರುಗಳಾದ ಸ್ವಾಗತ್ ಅಬೂಬಕ್ಕರ್ ಹಾಜಿ , ಎಂ.ಎ.ಅಬ್ದುಲ್ಲಾ ಬೆಳ್ಮ ,ಕಾರ್ಯದರ್ಶಿ ಎಚ್ .ಎಂ. ಮಹಮ್ಮದ್ ಮಾಸ್ಟರ್ ಮಲಾರ್ , ಪತ್ರಿಕಾ ಕಾರ್ಯದರ್ಶಿ ಹಮೀದ್ ಮದ್ಪಾಡಿ ,ಶರೀಅತ್ ಸಂರಕ್ಷಣಾ ಸಮಾವೇಶ ಪ್ರಚಾರ ಸಮ್ಮೇಳನದ ಸ್ವಾಗತ ಸಮಿತಿ ದೇರಳಕಟ್ಟೆ ರೇಂಜ್ ಇದರ ಚೇಯರ್ ಮ್ಯಾನ್ ಅಬೂಬಕ್ಕರ್ ಹಾಜಿ ನಾಟೆಕಲ್ , ಜನರಲ್ ಕನ್ವೀನರ್ ಲತೀಫ್ ದಾರಿಮಿ ರೆಂಜಾಡಿ…

