UN NETWORKS ಉಳ್ಳಾಲ: ಹಿಂದೂಗಳು ಸಂಘಟಿತರಾಗದೇ ಇದ್ದಲ್ಲಿ ಶಬರಿಮಲೆ ದಕ್ಷಿಣದ ಅಯೋಧ್ಯೆ ಆಗುವುದರಲ್ಲಿ ಸಂಶಯವಿಲ್ಲ. ಬೇರೆ ಸಮುದಾಯದ ಮಹಿಳೆಯರು ಹೋರಾಟದ ಹೆಸರಲ್ಲಿ 800 ವರ್ಷಗಳ ಪಾವಿತ್ರ್ಯತೆಯನ್ನು ಹಾಳುಗೆಡವಲು ಯತ್ನಿಸುತ್ತಿರುವುದು ಹಿಂದೂ ಸಮಾಜ ಒಗ್ಗಟ್ಟಾಗಲು ನೀಡಿರುವ ಸೂಚನೆ ಎಂದು ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದ್ದಾರೆ. ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜಾ ಸಮಿತಿ ಮತ್ತು ಹಿಂದು ಜಾಗರಣ ವೇದಿಕೆ ಓಂ ಶಕ್ತಿ ಘಟಕ ಕುಂಪಲ ಇವರ ಆಶ್ರಯದಲ್ಲಿ ಕುಂಪಲದ ಆಶ್ರಯ ಕಾಲನಿ ಮೈದಾನದಲ್ಲಿ ಜರಗಿದ 9 ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆಯ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಬರಿಮಲೆಯನ್ನು ಪಾವಿತ್ರ್ಯತೆಯನ್ನು ಕೆಡವಲು ಅಲ್ಲಿನ ಸಿಪಿಎಂ ಸರಕಾರ ಮತ್ತು ಕೆಲ ಹಿಂದೂ ವಿರೋಧಿಗಳಿಂದ ನಡೆಯುತ್ತಿದೆ. ಇದು ಮುಂದುವರಿದರೆ ದೇಶದ ದಕ್ಷಿಣದ ಅಯೋಧ್ಯೆ ಆಗುವುದರಲ್ಲಿ ಸಂಶಯವಿಲ್ಲ. ಶಬರಿಮಲೆ ವಿಚಾರದಲ್ಲಿ ಇದೀಗ ಕೇರಳದಲ್ಲಿ ರಾಷ್ಟ್ರೀಯತೆ ವಿಜೃಂಭಿಸುತ್ತಿದೆ. ಹಿಂದೂಗಳು ಎಲ್ಲರೂ ಒಗ್ಗಟ್ಟಾಗುವ ಅನಿವಾರ್ಯತೆ ಎದುರಾಗಿದೆ. ಬಾಬರಿ ಮಸೀದಿ ಧ್ವಂಸ ಹಿನ್ನೆಲೆಯಲ್ಲಿ ನಡೆಯುತ್ತಿರುವ ಜಾತ್ಯಾತೀತವಾದಿಗಳು ಬಂಟರ,…
Author: UllalaVani
UN NETWORKS ಉಳ್ಳಾಲ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಮನೆ ನಿರ್ಮಿಸಿಕೊಳ್ಳಲು , ಇರುವ ಮನೆ ವಿಸ್ತರಿಸಲು ಬಯಸುವ , ವಾರ್ಷಿಕ 3 ಲಕ್ಷ ಆದಾಯ ಹೊಂದಿರುವ ಕುಟುಂಬಗಳಿಗೆ ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಆವಾಝ್ ಯೋಜನೆಯಡಿ ತಲಾ ಒಂದು ಕುಟುಂಬಕ್ಕೆ ರೂ.1.50 ಲಕ್ಷ ಸಹಾಯಧನ ಅತ್ಯಂತ ಸರಳ ವಿಧಾನದಲ್ಲಿ ಒದಗಿಸಲಾಗುವುದು ಎಂದು ನಗರಸಭೆ ಪೌರಾಯುಕ್ತೆ ವಾಣಿ.ವಿ ಆಳ್ವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸರ್ವರಿಗೂ ಸೂರು ಒದಗಿಸುವ ನಿಟ್ಟಿನಲ್ಲಿ ಪ್ರಧಾನ ಮಂತ್ರಿ ಅವಾಝ್ ಯೋಜನೆಯನ್ನು ಜೂನ್ 2015ರಲ್ಲಿ ಜಾರಿಗೊಳಿಸಲಾಗಿದೆ. ಇದೀಗ ಉಳ್ಳಾಲ ನಗರಸಭೆ ವ್ಯಾಪ್ತಿಗೆ ಬಂದಿದೆ. ಹೊಸದಾಗಿ ಮನೆ ನಿರ್ಮಿಸಿಕೊಳ್ಳುವುದಾದಲ್ಲಿ ಅಂತಹ ಕುಟುಂಬವು ಸ್ವಂತ ಹೆಸರಿನಲ್ಲಿ ನಿವೇಶನ ಹೊಂದಿರಬೇಕು ಅಥವಾ ಕಚ್ಚಾ ಮನೆ ಹೊಂದಿರಬೇಕು. ಫಲಾನುಭವಿಯು ಫೋಟೋ, ಆಧಾರ್ ಕಾರ್ಡ್, ಆದಾಯ ಪ್ರಮಾಣ ಪತ್ರ, ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳು, ಬ್ಯಾಂಕ್ ಖಾತೆಯ ವಿವರಗಳು ಹಾಗೂ ತನ್ನ ಹೆಸರಿನಲ್ಲಿ ಈಗಾಗಲೇ ಪಕ್ಕಾ ಮನೆ ಇಲ್ಲವೆಂದು ಅಫಿದವಿತ್‍ಗಳನ್ನು ಉಳ್ಳಾಲ ನಗರಸಭೆಗೆ ಸಲ್ಲಿಸಬೇಕಾಗಿದೆ. ಒಂದು ಕುಟುಂಬದಲ್ಲಿ ವಿವಾಹಿತ /…
UN NETWORKS ಮಂಗಳೂರು : ಅನುದಾನಿತ ಶಾಲಾ ಶಿಕ್ಷಕರ ವಿಧ್ಯಾರ್ಥಿಗಳ ಹಾಗೂ ಶಾಲೆಗಳಿಗೆ ಸಂಬಂಧಿಸಿರುವ ತಾರತಮ್ಯಗಳ ಬಗ್ಗೆ ವಿಧಾನ ಸಭೆಯ ಬೆಳಗಾವಿ ಅಧಿವೇಶನದ ಮೊದಲು ಸಮಾಧಾನಕರ ಘೋಷಣೆಯಾಗದಿದ್ದರೆ ರಾಜ್ಯದ ಎಲ್ಲಾ ಅನುದಾನಿತ ಶಾಲೆಗಳನ್ನು ಮುಚ್ಚಿ ಅನುದಾನಿತ ಶಿಕ್ಷಕರು ಬೆಳಗಾವಿ ಛಲೋ ನಡೆಸಿ ಅಧಿವೇಶನದ ಸಮಯದಲ್ಲಿ ಸಾಮೂಹಿಕ ಮುಷ್ಕರ ಹೂಡಲಾಗುವುದು ಎಂಬ ತೀರ್ಮಾನವನ್ನು ಮಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ವ್ಯಕ್ತಪಡಿಸಲಾಗಿದೆ. ಈ ವೇಳೆ ಕರ್ನಾಟಕ ರಾಜ್ಯ ಅನುದಾನಿತ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಎಂ.ಕೆ.ಮಂಜನಾಡಿ ಮಾತನಾಡಿ ಅನುದಾನಿತ ಶಾಲೆಗಳಿಗೆ ಕನಿಷ್ಠ ಐದು ವರ್ಷಗಳ ಮಾನ್ಯತೆ ನೀಡಬೇಕು. ಈ ಬಾರಿಯ ನವೀಕರಣದ ಶುಲ್ಕವನ್ನು ಇಲಾಖೆ ಜೊತೆಗೆ ಚರ್ಚಿಸಿದ ನಂತರವೇ ಕಟ್ಟಲಾಗುವುದು. ಮೂಲಭೂತ ಸೌಕರ್ಯಗಳನ್ನು ಹೊಂದಿರುವ ಮತ್ತು 15 ವರ್ಷಗಳನ್ನು ಪೂರೈಸಿರುವ ಅನುದಾನಿತ ಶಾಲೆಗಳಿಗೆ ಶಾಶ್ವತ ಮಾನ್ಯತೆ ನೀಡಲು ಸರಕಾರದ ಆದೇಶವಿದೆ. ಆದರೂ ಇಲಾಖೆಯು ಅನುದಾನಿತ ಶಾಲೆಗಳನ್ನು ಸತಾಯಿಸುತ್ತಲೇ ಬಂದಿದೆ. ಕೆಲವು…
UN NETWORKS ಸೋಮೇಶ್ವರ: ಸೋಮೇಶ್ವರ ಉಚ್ಚಿಲ ಸಮುದ್ರತೀರದಲ್ಲಿ ಬುಧವಾರ ಮೃತದೇಹವೊಂದು ಪತ್ತೆಯಾಗಿದ್ದು ಮೃತರನ್ನು ಬಡಗ ಬೆಳ್ಳೂರು ನಿವಾಸಿ ಕೃಷ್ಣಪ್ಪ ಬಂಗೇರ (60) ಎಂದು ಗುರುತಿಸಲಾಗಿದೆ. ಕೃಷ್ಣಪ್ಪ ಅವರು ಮನೆಯಿಂದ ಮಂಗಳವಾರದಿಂದ ಕಾಣೆಯಾಗಿದ್ದು ಮನೆ ಮಂದಿ ಬಂಟ್ವಾಳ ಠಾಣೆಯಲ್ಲಿ ಬುಧವಾರ ನಾಪತ್ತೆಯಾದ ಕುರಿತು ದೂರು ದಾಖಲಿಸಿದ್ದು, ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ದೇರಳಕಟ್ಟೆ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಲಿದೆ.
UN NETWORKS ಮಂಗಳೂರು: ಮಂಗಳೂರು ಫೆಬ್ರವರಿ ತಿಂಗಳಲ್ಲಿ ನಡೆಯಿರುವ ಅಲ್‍ಮದೀನ ಬೆಳ್ಳಿಮಹೋತ್ಸವದ ಪ್ರಚಾರ ಸಭೆ ಮತ್ತು ಬುಲೆಟಿನ್ ಬಿಡುಗಡೆ ಸಮಾರಂಭವು ಅಲ್‍ಮದೀನ ವಿದ್ಯಾ ಸಂಸ್ಥೆಯಲ್ಲಿ ಬುಧವಾರ ನಡೆಯಿತು. ದುವಾ ನೆರವೇರಿಸಿ ಮಾತನಾಡಿದ ಅಲ್ ಮದೀನ ಅಧ್ಯಕ್ಷ ಶರಫುಲ್ ಉಮಾ ಪಿ.ಎಂ. ಅಬ್ಬಾಸ್ ಮುಸ್ಲಿಯಾರ್ ಅವರು ಫೆಭ್ರವರಿಯಲ್ಲಿ ನಡೆಯಲಿರುವ ಬೆಳ್ಳಿ ಮಹೊತ್ಸವ ಕಾರ್ಯಕ್ರಮವನ್ನು ಎಲ್ಲರೂ ಕೈಜೋಡಿಸಿ ಯಶಸ್ವಿಗೊಳಿಸುವ ಮೂಲಕ ಸಹಕರಿಸಬೇಕೆಂದು ಹೇಳಿದರು. ಸಿಟಿಎಂ ತಂಙಳ್ ತಂಙಳ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ಸಹಕಾರ ಯಾಚಿಸಿದರು. ಕಾರ್ಯಕ್ರಮದಲ್ಲಿ ಮಹಮ್ಮದ್ ಸಖಾಫಿ ಅಶರಿಯ್ಯ, ಸಿರಾಜುದ್ದೀನ್ ಸಖಾಫಿ ಕನ್ಯಾನ, ಸಯ್ಯದ್ ಕುಬೈಬ್ ತಂಙಳ್, ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಶಾಕಿರ್ ಹಾಜಿ ಮಿತ್ತೂರು. ಅಬ್ದುರಹ್ಮಾನ್ ಮೊಗಪಾನೆ, ಹನೀಫ್ ಹಾಜಿ ಉಳ್ಳಾಲ್, ಮುನೀರ್ ಸಖಾಫಿ ಉಳ್ಳಾಲ್, ಆರೂಕ್ ಹಾಜಿ ಮಲಾಝ್, ಮಹಮ್ಮದ್ ಹಾಜಿ ಕಂಡಿಕ, ಜಮಾಲುದ್ದೀನ್ ಮುಸ್ಲಿಯಾರ್ ಉಳ್ಳಾಲ್, ಹಮೀದ್ ಹಾಜಿ ಬೀಜಕೊಚಿ, ಉಮರ್ ಹಾಜಿ ಸುಳ್ಯ, ಸೌಕತ್ ಹಾಜಿ, ಕುಂಞಬಾವ ಹಾಜಿ, ರಶೀದ್ ಹಾಜಿ , ಜಮಾಲುದ್ದೀನ್…
UN NETWORKS ಮಂಗಳೂರು:ಸುಮಾರು 7 ದಶಕ ಗಳ ತನಕ ದಕ್ಷಿಣ ಕರ್ನಾಟಕದ ಉಳ್ಳಾಲದಲ್ಲಿ ಬಂದು ದೀನೀ ಪ್ರಭೋದನೆಯೊಂದಿಗೆ ರಾಷ್ಟ್ರಾದ್ಯಂತ ಅಹ್ಲು ಸುನ್ನತ್ ವಲ್-ಜಮಾಅತ್ ನೆಲೆಯೂರಲು ಕಾರಣಕರ್ತರಾದ ಆಧ್ಯಾತ್ಮಿಕ ನಾಯಕ ಮರ್ಹೂಂ ಸಯ್ಯದ್ ತಾಜುಲ್ ಉಲಮಾ ಅಬ್ದುರಹ್ಮಾನ್ ಕುಂಞಕೋಯ ತಂಙಳ್ ಅಲ್ ಬುಖಾರಿರವರ 5 ನೇ ಉರೂಸ್ ಡಿಸೆಂಬರ್ 7,8,9 ರಂದು ಎಟ್ಟಿಕುಲಂನಲ್ಲಿ ನಡೆಯಲಿದೆ. ಉನ್ನತ ಸಾದಾತ್ ಗಳು,ಉನ್ನತ ಉಲಮಾ,ಉಮರಾ ನೇತಾರರು,ಸಂಘಟನಾ ನಾಯಕರು ಭಾಗವಹಿಸುವ ಈ ಉರೂಸ್ ಕಾರ್ಯಕ್ರಮಕ್ಕೆ ರಾಜ್ಯಾದ್ಯಂತ ಇರುವ ಎಲ್ಲಾ ಸುನ್ನೀ ಕುಟುಂಬದ ನಾಯಕರು,ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಇಸ್ಮಾಯಿಲ್ ಸಖಾಫಿ ಕೊಡಗು ಕರೆ ನೀಡಿದರು.ಎಟ್ಟಿಕುಳಂನಲ್ಲಿ ಡಿ.7,8, 9ರಂದು ನಡೆಯಲಿರುವ ಉರೂಸ್ ಪ್ರಯುಕ್ತ ಅಲ್ ಮದೀನದಲ್ಲಿ ಬುಧವಾರ ನಡೆದ ಸಭೆಯಲ್ಲಿ ಹೇಳಿದರು. ಉರೂಸ್ ಪ್ರಯುಕ್ತ ಡಿಸೆಂಬರ್ 7 ಶುಕ್ರವಾರ ಬೆಳಿಗ್ಗೆ 7:00 ಗಂಟೆಗೆ ಉಳ್ಳಾಲ ಸಯ್ಯದ್ ಮದನಿ ಝಿಯಾರತ್ ನೊಂದಿಗೆ ಸಂದಲ್ ಜಾಥಾವು ಸಯ್ಯದ್ ಇಸ್ಮಾಯಿಲ್ ತಂಙಳ್ ಉಜಿರೆ,ಮುಹಿಯ್ಯದ್ದೀನ್ ಕಾಮಿಲ್ ಸಖಾಫಿ ತೋಕೆ,ಸಯ್ಯದ್ ಖುಬೈಬ್ ತಂಙಳ್…
UN NETWORKS ನರಿಂಗಾನ: ನರಿಂಗಾನ ಗ್ರಾಮದ ಕೊಲ್ಲರಕೋಡಿಯ ನೂರುಲ್ ಹುದಾ ಮಸ್ಜಿದ್ ತಕ್ವಾ ಹಾಗೂ ನೂರುಲ್ ಉಲೂಂ ಮದ್ರಸ ಸಮಿತಿ ನೂತನ ಅಧ್ಯಕ್ಷರಾಗಿ ಇಬ್ರಾಹಿಂ ಕುಂಞ ಹಾಜಿ ಪಾರೆ ಅಯ್ಕೆಯಾಗಿದ್ದಾರೆ. ನೂತನ ಸಾಲಿನ ಆಡಳಿತ ಮಂಡಳಿಯನ್ನು ರಚಿಸಲಾಯಿತು.ಅಧ್ಯಕ್ಷರಾಗಿಇಬ್ರಾಹಿಂ ಕುಂಞ ಹಾಜಿ ಪಾರೆ , ಉಪಾಧ್ಯಕ್ಷರುಗಳಾಗಿ ಅಬ್ದುಲ್ ಖಾದರ್ ಕುಂಞ ಚೌಕ, ಮಹಮ್ಮದ್ ಎನ್ ಐ, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಪಿ.ಐ, ಜೊತೆ ಕಾರ್ಯದರ್ಶಿಗಳಾಗಿ ಖಾಸಿಂ ಲತೀಫಿ, ರಫೀಕ್ ಮುಳ್ಳುಗುಡ್ಡೆ, ಕೋಶಾಧಿಕಾರಿಯಾಗಿ ಅಬ್ದುಲ್ ಮಜೀದ್ ಎಮ್.ಪಿ ಪಾರೆ ಹಾಗೂ 15 ಮಂದಿ ಸದಸ್ಯರನ್ನೊಳಗೊಂಡ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು. ಅಬ್ದುಲ್ ರಝಾಕ್ ಪಾರೆ ಸಭೆಯ ಅಧ್ಯಕ್ಷತೆ ವಹಿಸಿದರು. ಕಾರ್ಯದರ್ಶಿ ಖಾಸಿಂ ಲತೀಫಿ ವರದಿ ವಾಚಿಸಿದರು. ಪ್ರ. ಕಾರ್ಯದರ್ಶಿ ಹಮೀದ್ ತಟ್ಲ ಲೆಕ್ಕಪತ್ರ ಮಂಡಿಸಿದರು.
UN NETWORKS ತೊಕ್ಕೊಟ್ಟು: ಉಳ್ಳಾಲ ಸೋಮೇಶ್ವರದ ಸಾರಸ್ವತ ಕಾಲನಿ, ಓವರ್ ಬ್ರಿಡ್ಜ್ ರಸ್ತೆ ಅಭಿವೃದ್ಧಿಗೆ ವಸತಿ ಹಾಗೂ ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅವರು ಬಿಡುಗಡೆಗೊಳಿಸಿದ ಮೂರು ಕೋಟಿ ರೂ. ಅನುದಾನವನ್ನು ಮಂಗಳೂರು ಕ್ಷೇತ್ರ ಬಿಜೆಪಿ ಅದು ಕೇಂದ್ರ ಸರಕಾರದ ಅನುದಾನ ಎಂದು ಬಿಂಬಿಸಿ ಪ್ರಧಾನಿ ಮತ್ತು ಸಂಸದರ ಭಾವಚಿತ್ರವುಳ್ಳ ಕಟೌಟ್ ಹಾಕಿದ್ದಾರೆ. ಬಿಜೆಪಿ ಮುಖಂಡರಿಗೆ ಮಾನ, ಮರ್ಯಾದೆ ಇದ್ದಲ್ಲಿ ಅದಕ್ಕೆ ಸರಿಯಾದ ದಾಖಲೆಗಳನ್ನು ನೀಡಲಿ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಪ್ರಶ್ನಿಸಿದ್ದಾರೆ. ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನ ತೊಕ್ಕೊಟ್ಟು ಕಚೇರಿಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕೋಟೆಕಾರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕೊಂಡಾಣ ಶ್ರೀ ಕ್ಷೇತ್ರ ಸಂಪರ್ಕಿಸುವ ರಸ್ತೆ ನಿರ್ಮಾಣ ಸಂದರ್ಭದಲ್ಲೂ ಯು.ಟಿ.ಖಾದರ್ ಆವರ ಅನುದಾನವನ್ನು ಕೇಂದ್ರ ಸರ್ಕಾರದ ಪ್ರಧಾನ ಮೋದಿ ಅವರ ಅನುದಾನ ಎಂದು ಹೇಳಿಕೆ ನೀಡಿ ಕಾಮಗಾರಿ ನಿಲ್ಲಿಸಿದ ಬಳಿಕವೇ ಬಿಜೆಪಿ ಮುಕಮಡರು ತಪ್ಪು ಒಪ್ಪಿಕೊಂಡಿದ್ದರು. ಈ ರಸ್ತೆ ಕಾಮಗಾರಿ…
UN NETWORKS ಉಳ್ಳಾಲ: ದರ್ಗಾಕ್ಕೆ ಸರಕಾರದಿಂದ ಎರಡು ಕೋಟಿ ರೂ. ಅನುದಾನ ಬಂದಿದ್ದು ಸಮಿತಿಯವರು ನುಂಗಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸಂದೇಶ ಸುಳ್ಳಾಗಿದೆ ಎಂದು ಸಯ್ಯಿದ್ ಮದನಿ ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಹೇಳಿದರು. ಸಯ್ಯಿದ್ ಮದನಿ ಎಜ್ಯುಕೇಶನ್ ಟ್ರಸ್ಟ್ ಅದೀನದಲ್ಲಿ ಚೆಂಬುಗುಡ್ಡೆ ಜುಮಾ ಮಸೀದಿ ಹಾಗೂ ನೂರುಲ್ ಹುದಾ ಮದರಸದಲ್ಲಿ ಸೋಮವಾರ ನಡೆದ ಮೀಲಾದುನ್ನಬಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ವಕ್ಪ್ ಸಮಿತಿಯಿಂದ ದರ್ಗಾಕ್ಕೆ 80 ಸಾವಿರ ನಗದು ಹಾಗೂ ಪ್ರಮಾಣ ಪತ್ರ ಅಲ್ಪಸಂಖ್ಯಾತ ಇಲಾಖೆಯಿಂದ ಆಧುನಿಕ ಮದರಸ ಯೋಜನೆಯಡಿ 10 ಲಕ್ಷ ರೂ. ನಗದು ಬಂದಿದ್ದು ಅದರಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಪ್ರಚಾರ ಮಾಡಲಾಗುತ್ತಿದ್ದು ಜನರೇ ಉತ್ತರಿಸಬೇಕಾಗಿದೆ ಎಂದರು. ಮಸೀದಿ ಅಧ್ಯಕ್ಷ ಸಿ ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ವಕ್ಪ್ ಅಧ್ಯಕ್ಷ ಯು.ಕೆ.ಮೋನು, ಪದಾಧಿಕಾರಿಗಳಾದ ಅಬ್ದುಲ್ಲಾ ಎಂ, ಅಬ್ದುಲ್ ಲತೀಫ್, ಪಿ.ಎಚ್.ಹಮೀದ್, ಅಬ್ದುಲ್ಲಾ ಡಿ, ಸಲಾಂ, ಹನೀಫ್, ಇಸ್ಮಾಯಿಲ್ ರಫೀಕ್, ಮದರಸ ಧರ್ಮಗುರು ಸುಲೈಮಾನ್, ಅಬೂಬಕ್ಕರ್…
UN NETWORKS ಉಳ್ಳಾಲ: ಕಾಂಗ್ರೆಸ್ ಹಿರಿಯ ಮುಖಂಡ ಬ.ಜನಾರ್ದನ ಪೂಜಾರಿಯವರು ಅಯೋಧ್ಯೆ ವ್ಯಾಜ್ಯ ಸುಪ್ರೀಂ ಕೋರ್ಟಿನಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಸಂದರ್ಭದಲ್ಲೇ ವಿವಾದಿತ ಜಮೀನಿನಲ್ಲಿ ರಾಮ ಮಂದಿರ ನಿರ್ಮಾಣ ಶತ ಸಿದ್ಧ ಅನ್ನುವ ಹೇಳಿಕೆ ನೀಡಿರುವುದನ್ನು ದಕ್ಷಿಣ ಕನ್ನಡ ಮುಸ್ಲಿಂ ಲೀಗ್ ತೀವ್ರವಾಗಿ ಖಂಡಿಸಿದೆ. ದಶಕಗಳಿಂದ ಜಾತ್ಯಾತೀತ ಪ್ರಮುಖ ಪಕ್ಷವನ್ನು ನಿಷ್ಠೆಯಿಂದ ಹಿಂಬಾಲಿಸಿದ ಮತ್ತು ನಿರಂತರ ಮತ ಹಾಕಿದ ಅಲ್ಪಸಂಖ್ಯಾತ ಮುಸ್ಲಿಂ ಸಮುದಾಯದ ಮಂದಿ ಧಾರ್ಮಿಕ ಭಾವನೆ ಮತ್ತು ನಂಬಿಕೆಗೆ ತೀವ್ರ ಘಾಸಿ ಉಂಟು ಮಾಡಿದೆ. ಒಂದು ಸಮುದಾಯದ ಪರ ಮಾತನಾಡಿ ಇನ್ನೊಂದು ಸಮುದಾಯದ ನಂಬಿಕೆಗೆ ವಿರುದ್ಧ ಹೇಳಿಕೆ ನೀಡಿದ್ದಾರೆ. ಇದು ಅವರು ಪ್ರತಿನಿಧಿಸುತ್ತಿರುವ ಕಾಂಗ್ರೆಸ್ ಪಕ್ಷದ ಮೂಲ ಸಿದ್ಧಾಂತಕ್ಕೆ ಧಕ್ಕೆ ಉಂಟು ಮಾಡಿದೆ. ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶಗಳನ್ನು ಪ್ರತಿಪಾದಿಸುತ್ತಾ ಬಂದಿರುವ ಪೂಜಾರಿ, ರಾಷ್ಟ್ರೀಯ ಪ್ರಾತನಿಧ್ಯಕ್ಕಾಗಿ ಬೆಂಬಲಸಿದ ಮುಸ್ಲಿಂ ಸಮುದಾಯವನ್ನು ಸಾಮಾಜಿಕ ಕಾಲೊನಿಯನ್ನಾಗಿಸಿದ್ದಾರೆ. ಜನಾರ್ದನ ಪೂಜಾರಿ ದ್ವಂದ್ವ ನಿಲುವಿನ ಬಗ್ಗೆ ಜಿಲ್ಲಾ ಮತ್ತು ರಾಜ್ಯ ಕಾಂಗ್ರೆಸ್ ಅಲ್ಪಸಂಖ್ಯಾತ ನಾಯಕರು ತಕ್ಷಣ ತಮ್ಮ…

