UN NETWORKS
ಉಳ್ಳಾಲ: ಎಸ್ಎಂಎ ಮಂಜನಾಡಿ ರೀಜನಲ್ ಇದರ ವಾರ್ಷಿಕ ಕೌನ್ಸಿಲ್ ಸಭೆ ಸೋಮವಾರ ಸಮಿತಿಯ ಅಧ್ಯಕ್ಷ ಕತ್ತರ್ ಬಾವಾ ಹಾಜಿಯವರ ಅಧ್ಯಕ್ಷತೆಯಲ್ಲಿ ಮಂಗಳಾಂತಿ ಮದ್ರಸದಲ್ಲಿ ಜರಗಿತು.
ಕಲ್ಕಟ್ಟ ಮಸೀದಿ ಖತೀಬ್ ಇಝುದ್ದೀನ್ ಅಹ್ಸನಿ ಸಭೆಯನ್ನು ಉದ್ಘಾಟಿಸಿದರು. ಈ ಸಂದರ್ಭ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಆತುರು ಸಅದ್ ಮುಸ್ಲಿಯಾರ್ ಸಮಿತಿಯ ದ್ಯೇಯೋದ್ದೇಶಗಳನ್ನು ವಿವರಿಸಿದರು. ರಿಟೈನಿಂಗ್ ಆಫೀಸರ್ ಆಗಮಿಸಿದ ಪಿ.ಎಂ. ಮಹಮ್ಮದ್ ಮದನಿಯವರು ಸಮಿತಿಯ ಮುಂದಿನ ಕಾರ್ಯ ಚಟುವಟಿಕೆಯ ಬಗ್ಗೆ ವಿವರಿಸಿ ಚರ್ಚೆಗೆ ನೇತೃತ್ವ ವಹಿಸಿದ್ದರು. ಸಮಿತಿಯ ಪ್ರ.ಕಾರ್ಯದರ್ಶಿ ಮುಸ್ತಪಾ ಕಮಾಲ್ ಲೆಕ್ಕ ಪತ್ರ ಮಂಡಿಸಿದರು. ಉಪಾಧ್ಯಕ್ಷರುಗಳಾದ ಉಮ್ಮರ್ ಸಖಾಫಿ, ಕುಂಞ ಬಾವಾ ಹಾಜಿ ಕಲ್ಕಟ್ಟ ಮೊದಲಾದವರು ಉಪಸ್ಥಿತರಿದ್ದರು.


