UN NETWORKS ಅಸೈಗೋಳಿ: ಅಸೈಗೋಳಿ ಶ್ರೀ ಧರ್ಮಶಾಸ್ತ ಅಯ್ಯಪ್ಪನ ನೂತನ ವಿಗ್ರಹದ ಎರಕ ಹೊಯ್ಯುವ ಹಾಗೂ ನೂತನ ನಾಗನಕಟ್ಟೆಯ ಭೂಮಿಪೂಜೆ ಮತ್ತು 32ನೇ ವಾರ್ಷಿಕೋತ್ಸವ ಭಾನುವಾರ ನಡೆಯಲಿದೆ. ಕಾರ್ಯಕ್ರಮದ ಹಿನ್ನೆಲೆಯಲ್ಲಿ ಗಣಹೋಮ, ಭಜನಾ ಸಂಕೀರ್ತನೆ, ಅಯ್ಯಪ್ಪ ಸ್ವಾಮಿಯ ನೂತನ ವಿಗ್ರಹದ ಎರಕ, ಧಾರ್ಮಿಕ ಸಭೆ, ಮಹಾಪೂಜೆ, ಸಂಕ್ರಮಣ ಪೂಜೆ ನಡೆಯಲಿದೆ. ಸಭಾ ಕಾರ್ಯಕ್ರಮ ವಿಶ್ವನಾಥ ಕಾಯರ್‍ಪಳಿಕೆ ಉದ್ಘಾಟಿಸಲಿದ್ದಾರೆ. ಸಚಿವ ಯು.ಟಿ.ಖಾದರ್, ಪದ್ಮನಾಭ ಕೋಟ್ಯಾನ್, ಜಿತೇಂದ್ರ ಶೆಟ್ಟಿ, ಮಿಥುನ್ ರೈ, ಚಂದ್ರಹಾಸ ಉಳ್ಳಾಲ್, ವಿಶ್ವಾಸ್ ದಾಸ್, ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರ್‍ಗುತ್ತು, ಹರೀಶ್ ಕುತ್ತಾರ್, ಅನಿಲ್‍ದಾಸ್, ಶಂಕರ್ ನಾರಾಯಣ ಭಟ್, ಸತೀಶ್ಚಂದ್ರ ಸೆಟ್ಟಿ ಕುಡಾಗುತ್ತು, ಸುರೇಶ್ ಭಟ್ನಗರ, ಅಶೋಕ್ ಭಂಡಾರಿ, ಮಂಜುನಾಥ ಆಳ್ವ, ಫ್ರಾಂಕಿ ಫ್ರಾನ್ಸಿಸ್ ಕುಟಿನ್ಹಾ, ರಘುರಾಮ ಕಾಜವ, ಸಂತೋಷ್ ಶೆಟ್ಟಿ, ಬಾಸ್ಕರ ಕೆ., ಶೌಕತ್ ಅಲಿ, ರಾಜಾರಾಮ ರೈ, ಹೇಮಂತ್ ಶೆಟ್ಟಿ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಮಂದಿರದ ಸಂಚಾಲಕ ಶ್ರೀನಿವಾಸ ಶೆಟ್ಟಿ ಪುಲ್ಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Author: UllalaVani
UN NETWORKS ತೊಕ್ಕೊಟ್ಟು: ಸಂತ ಸೆಬೆಸ್ತಿಯನ್ನರ ಧರ್ಮಕೇಂದ್ರ ಸಿಎಲ್ ಸಿ ಪೆರ್ಮನ್ನೂರು ಸಮುದಾಯದ 43 ನೇ ವಾರ್ಷಿಕೋತ್ಸವ ಸಮಾರಂಭ ಬಲಿಪೂಜೆ ಮೂಲಕ ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂತ ಸೆಬೆಸ್ತಿಯನ್ನರ ಚರ್ಚಿನ ಧರ್ಮಗುರು ಫಾ.ಜೆ.ಬಿ ಸಲ್ದಾನ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಹಾಯಕ ಗುರು ಫಾ.ಸ್ಟ್ಯಾನಿ ಪಿಂಟೋ,ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ಮೆಲ್ವಿನ್ ಡಿಸೋಜ, ಕಾರ್ಯದರ್ಶಿ ರೊನಾಲ್ಡ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಇದೇ ಸಂದರ್ಭ ಕೆ ಎಸ್ ಆರ್ ಟಿಸಿ ಸಂಸ್ಥೆಯಲ್ಲಿ 25 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಉತ್ತಮ ನಿರ್ವಾಹಕ ಎಂಬ ಪ್ರಶಂಸೆ ಹೊಂದಿರುವ ಉರ್ಬನ್ ಅಪೋಸ್ ಎಂಬವರನ್ನು ಸನ್ಮಾನಿಸಲಾಯಿತು. ಸಿ.ಎಲ್ ಸಿ ಅಧ್ಯಕ್ಷ ಜೋಸೆಫ್ ಡಿಸೋಜ ಸ್ವಾಗತಿಸಿದರು. ಸಹ ಕಾರ್ಯದರ್ಶಿ ಜೋಸೆಫ್ ಡೇಸಾ ವಂದಿಸಿದರು. ಮೌರೀಸ್ ಮೊಂತೇರೊ ಕಾರ್ಯಕ್ರಮ ನಿರೂಪಿಸಿದರು.
UN NETWORKS ಅಸೈಗೋಳಿ: ಆಕಾಶದಿಂದ ಚಂದ್ರನನ್ನು ಭೂಮಿಗೆ ತಂದು ನಿಲ್ಲಿಸುತ್ತೇವೆ ಎನ್ನುವ ರೀತಿಯಲ್ಲಿ ಪ್ರಧಾನಿ ನೀಡಿದ್ದ ಪೊಳ್ಳು ಭರವಸೆಗಳಿಂದ ಬೇಸತ್ತ ಜನ ಪಂಚರಾಜ್ಯ ಚುನಾವಣೆಯ ಮೂಲಕ ತಕ್ಕಪಾಠ ಕಲಿಸಿದ್ದು, ರಾಹುಲ್ ಗಾಂಧಿ ದೇಶದ ಮುಂದಿನ ಪ್ರಧಾನಿಯಾಗುವುದಕ್ಕೆ ಫಲಿತಾಂಶ ಮುನ್ಸೂಚನೆಯಾಗಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಅಭಿಪ್ರಾಯಪಟ್ಟರು. ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವಿನ ಹಿನ್ನೆಲೆಯಲ್ಲಿ ಬುಧವಾರ ಅಸೈಗೋಳಿ ಜಂಕ್ಷನ್‍ನಲ್ಲಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ವಿಜಯೋತ್ಸವದಲ್ಲಿ ಮಾತನಾಡಿದರು.ದೇಶದಲ್ಲಿ ನೋಟ್ ನಿಷೇಧ ಬಳಿಕ ಜನಸಾಮಾನ್ಯರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಚುನಾವಣೆಯ ಫಲಿತಾಂಶದ ಮೂಲಕ ಸಾಬೀತಾಗಿದೆ. ಪ್ರಧಾನಿ ಮೋದಿ ಕೇವಲ ಭರವಸೆಗಳಿಂದಲೇ ಜನರನ್ನು ಮೋಸ ಮಾಡಿದ್ದಾರೆ ಎಂದು ಹೇಳಿದರು.ಉಪಾಧ್ಯಕ್ಷ ಮುಸ್ತಫಾ ಮಲಾರ್ ಮಾತನಾಡಿ, ಕಳೆದ ನಾಲ್ಕುವರೆ ವರ್ಷದ ಆಡಳಿತದಲ್ಲಿ ಕೇಂದ್ರ ಸರ್ಕಾರ ವೈಫಲ್ಯ ಅನುಭವಿಸಿದೆ, ದೇಶದ ಅಭಿವೃದ್ಧಿ ಕಾಂಗ್ರೆಸ್‍ನಿಂದ ಮಾತ್ರ ಸಾಧ್ಯ ಎನ್ನುವ ಸತ್ಯ ಅರಿತ ಮತದಾರರು ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಬೆಂಬಲ ನೀಡಿದ್ದಾರೆ ಎಂದು ತಿಳಿಸಿದರು. ತಾಲೂಕು…
UN NETWORKS ತಲಪಾಡಿ : ತಲಪಾಡಿ ವಲಯ ಕಾಂಗ್ರೆಸ್ ವತಿಯಿಂದ ಬುಧವಾರ ಪಂಚರಾಜ್ಯ ಚುನಾವಣಾ ಗೆಲುವಿನ ಸಂಭ್ರಮಾಚರಣೆ ನಡೆಯಿತು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ, ತಾಲೂಕು ಪಂಚಾಯಿತಿ ಸದಸ್ಯರಾದ ಅಬೂಬಕ್ಕರ್ ಸಿದ್ದೀಕ್ ಕೊಳಂಗೆರೆ, ಸುರೇಖ ಚಂದ್ರಹಾಸ್, ವಲಯಾಧ್ಯಕ್ಷ ಗಣೇಶ್ ಶೆಟ್ಟಿ, ಜಮಾಲ್ ಅಜ್ಜಿನಡ್ಕ, ಲತಾ ಕಡೆಮುಗೇರು ಇನ್ನಿತರರು ಉಪಸ್ಥಿತರಿದ್ದರು.
UN NETWORKS ತೊಕ್ಕೊಟ್ಟು: ಎಲೆಕ್ಟ್ರಾನಿಕ್ಸ್ ಕ್ಷೇತ್ರದಲ್ಲಿ ಪ್ರಸಿದ್ಧಿಯನ್ನು ಪಡೆದಿರುವ ತೊಕ್ಕೊಟ್ಟು ಮತ್ತು ಮುಡಿಪುವಿನಲ್ಲಿ ಶಾಖೆಯನ್ನು ಹೊಂದಿರುವ ಅಮ್ಮ ಎಲೆಕ್ಟ್ರಾನಿಕ್ಸ್ ನ ಫರ್ನೀಚರ್ ಮತ್ತು ಎಲೆಕ್ಟ್ರಾನಿಕ್ಸ್ ನ ನೂತನ ವಿಶಾಲ ಮಳಿಗೆ ತೊಕ್ಕೊಟ್ಟು ಮುಖ್ಯ ರಸ್ತೆಯ ಅಮ್ಮ ಎಲೆಕ್ಟ್ರಾನಿಕ್ಸ್ ನ ಹತ್ತಿರವಿರುವ ಸಿಟಿ ಗಾರ್ಡನ್‍ನಲ್ಲಿ ಬುಧವಾರ ಶುಭಾರಂಭಗೊಂಡಿತು. ನೂತನ ಮಳಿಗೆಗೆ ಮಂಗಳೂರು ಬೋಳೂರಿನಲ್ಲಿರುವ ಶ್ರೀ ಅಮೃತಾನಂದಮಯಿ ಶಾಖಾ ಮಠದ ಶ್ರೀ ಮಂಗಳಾಮೃತ ಚೈತನ್ಯ ಸ್ವಾಮಿನಿ ಉದ್ಘಾಟಿಸಿ ಯಾವುದೇ ಕ್ಷೇತ್ರದಲ್ಲಿ ಯಶಸ್ವಿಯಾಗಬೇಕಾದರೆ ಸನ್ಮಾರ್ಗದಲ್ಲಿ ಮುನ್ನಡೆಯುವುದರೊಂದಿಗೆ ಸಮಾಜಕ್ಕೆ ಕೊಡುಗೆಯನ್ನು ನೀಡುವ ಕಾರ್ಯ ಮಾಡಬೇಕು ಈ ನಿಟ್ಟಿನಲ್ಲಿ ಯೋಗೀಶ್ ದಂಪತಿಗಳು ಅಮ್ಮ ಎಲೆಕ್ಟ್ರಾನಿಕ್ಸ್ ಮೂಲಕ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡುವ ಮೂಲಕ ಯಶಸ್ವಿಯಾಗಿರುವುದು ಶ್ಲಾಘನೀಯ ಎಂದರು. ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ರಶೀದ್, ತಲಪಾಡಿ ಸಂತ ಚರ್ಚ್ ಧರ್ಮಗುರು ಎಡ್ವಿನ್ ಮಸ್ಕರೇಂಇಸ್, ಹಿಂದೂಸ್ಥಾನ್ ಬಾವ ಬಿಲ್ಡರ್ಸ್ ಅಬ್ದುಲ್ ಖಾದರ್ ಕೆ. ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಮುಖ್ಯ…
UN NETWORKS ಮೊಂಟೆಪದವು: ಹಳೆವಿದ್ಯಾರ್ಥಿ ಸಂಘ , ಸರಕಾರಿ ಶಾಲಾ ಮತ್ತು ಪ.ಪೂ. ಕಾಲೇಜು ಮೊಂಟೆಪದವು ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಆದರ್ ಮುಲ್ಲರ್ ವೈದ್ಯಕೀಯ ಕಾಲೇಜು ಕಂಕನಾಡಿ ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರ ಮೊಂಟೆಪದವು ಸರಕಾರಿ ಪ್ರೌಢ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಮೊಂಟೆಪದವು ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಅವರು ಮಾತನಾಡಿ ರಕ್ತದಾನವು ಬಹಳ ಉತ್ತಮವಾದ ಕಾರ್ಯ. ಶಿಕ್ಷಣದ ಬೆಳವಣಿಗೆಯ ಜತೆ ಜನರ ಆರೋಗ್ಯದ ಬಗ್ಗೆ ಚಿಂತಿಸಬೇಕಾದ ಅನಿವಾರ್ಯತೆ ಇದೆ. ಈ ಕೆಲಸ ಹಳೇ ವಿದ್ಯಾರ್ಥಿ ಸಂಘದಿಂದ ಆಗುತ್ತಿದೆ ಎಂದರು. ಮೊಂಟೆಪದವು ಪ.ಪೂ. ಕಾಲೇಜು ಕಾರ್ಯಾಧ್ಯಕ್ಷ ಜಲೀಲ್ ಮಾತನಾಡಿ, ರಕ್ತದಾನ ಕಾರ್ಯಕ್ರಮ ಇದೆ ಎಂಧ ತಕ್ಷಣ ನಾನು ಪೂಣ್ ಸಹಕಾರ ನೀಡಿದ್ದೇನೆ ಇಂತಹ ಕಾರ್ಯಕ್ರಮ ಯಾವ ಸಂದರ್ಭದಲ್ಲಿ ಆಯೋಜಿಸಿದರೂ ನನ್ನ ಸಹಕಾರ ಇನ್ನೂ ಇದೆ. ಇಂತಹ ಕಾರ್ಯಕ್ರಮ ಯಶಸ್ವಿಯಾಗಿ ಸಾಗಲಿ ಎಂದು ಹಾರೈಸಿದರು.ಮುಖ್ಯ ಅತಿಥಿಗಳಾಗಿ ಹನೀಫ್ ಚಂದಹಿತ್ಲು, ರಹ್ಮಾನ್…
UN NETWORKS ಕೋಟೆಕಾರು: ಹೊಸ ವಿದ್ಯುತ್ ಕಂಬಗಳನ್ನು ಅಳವಡಿಸುವ ಸಂದರ್ಭ ವಿದ್ಯುತ್ ಅವಘಢ ಸಂಭವಿಸಿ ಕಂಬದ ಮೇಲಿನಿಂದ ಕೆಳಗೆ ಬಿದ್ದು ಕಾರ್ಮಿಕರೊಬ್ಬರು ದಾರುಣವಾಗಿ ಮೃತಪಟ್ಟಿರುವ ಘಟನೆ ಮೆಸ್ಕಾಂ ಕೋಟೆಕಾರು ಸೆಕ್ಷನ್ ವ್ಯಾಪ್ತಿಯ ಮಡ್ಯಾರು ಎಂಬಲ್ಲಿ ಸೋಮವಾರ ಮಧ್ಯಾಹ್ನ ವೇಳೆ ಸಂಭವಿಸಿದೆ. ಬಾದಾಮಿ ಪಟ್ಟದಕಲ್ಲು ಅಂಬೇಡ್ಕರ್ ಕಾಲನಿ ನಿವಾಸಿ ರಮೇಶ್ ಛಲವಾದಿ (22) ಮೃತಪಟ್ಟವರು. ಮಂಗಳವಾರ ಸಂಜೆ ವೇಳೆ ಮಡ್ಯಾರು ಸಮೀಪ ನೂತನ ವಿದ್ಯುತ್ ಕಂಬಗಳನ್ನು ಅಳವಡಿಸಿದ ಬಳಿಕ, ಕಂಬಗಳಿಗೆ ಅಡ್ಡ ವೈರ್ ಕಟ್ಟುವ ಸಂದರ್ಭ ವಿದ್ಯುತ್ ಪ್ರವಹಿಸಿ ಕಂಬದ ಮೇಲಿನಿಂದ ಕೆಳಕ್ಕೆ ಬಿದ್ದು ರಮೇಶ್ ಅವರು ಮೃತಪಟ್ಟಿದ್ದಾರೆ. ಘಟನೆಗೆ ಗುತ್ತಿಗೆದಾರ ಬಂಟ್ವಾಳದ ಲೆವಿನ್ ಇಲೆಕ್ಟ್ರಿಕಲ್ ಮತ್ತು ವೀರಾ ಇಲೆಕ್ಟ್ರಿಕಲ್ಸ್ ಹಾಗೂ ಮೆಸ್ಕಾಂ ಸಿಬ್ಬಂದಿ ನಿರ್ಲಕ್ಷ್ಯವೇ ಕಾರಣ ಎಂದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
UN NETWORKS ತೊಕ್ಕೊಟ್ಟು: ಪರಸ್ಪರ ಸಂಪರ್ಕ ಬೆಳಸುವ ಹಬ್ಬವಾಗಿದೆ ಕ್ರಿಸ್‍ಮಸ್. ಪರರ ಜತೆ, ದೇವರ ಜತೆ, ಅಂತಕರಣದ ಜತೆ ಇಂತಹ ಸಂಬಂಧದ ಬಗ್ಗೆ ಅರಿತುಕೊಂಡು ಪರಸ್ಪರ ಪ್ರೀತಿ ವಿಶ್ವಾಸ ಬೆಳೆಸಿಕೊಂಡು ಎಲ್ಲರನ್ನು ಸ್ವಾಗತಿಸುವ ಗುಣ ಬೆಳೆಸಿಕೊಳ್ಳಬೇಕೆಂದು ಪೆರ್ಮನ್ನೂರು ಸಂತ ಸೆಬೆಸ್ಟಿಯನ್ ಧರ್ಮ ಕೇಂದ್ರದ ಧರ್ಮಗುರು ಜೆ.ಬಿ. ಸಲ್ದಾನ ಕರೆ ನೀಡಿದರು. ಅವರು ಸಂತ ಸೆಬೆಸ್ಟಿಯನ್ ಧರ್ಮಕೇಂದ್ರ ಫೆರ್ಮನ್ನೂರು ಇದರ ಆಶ್ರಯದಲ್ಲಿ ಪೊಸಕುರಲ್ ಬಳಗ, ಸದ್ಭಾವನಾ ವೇದಿಕೆ ಮತ್ತು ಸಾರ್ಜಂಟ್ ಬಿಷಪ್ ದೇವಾಲಯ ಬಬ್ಬುಕಟ್ಟೆ ಇವರ ಸಹಭಾಗಿತ್ವದಲ್ಲಿ ತೊಕ್ಕೊಟ್ಟುವಿನ ಅಂಬೇಡ್ಕರ್ ರಂಗಮಂದಿರದಲ್ಲಿ ಮಂಗಳವಾರ ನಡೆದ ಸೌಹಾರ್ದ ಕ್ರಿಸ್‍ಮಸ್ ಸಂಭ್ರಮದ ಅಧ್ಯಕ್ಷತೆ ವಹಿಸಿ ಆಶಿರ್ವಚನ ನೀಡಿದರು. ಪ್ರಸಕ್ತ ಕಾಲಘಟ್ಟದಲ್ಲಿ ಪ್ರತಿಕ್ಷೇತ್ರಗಳಲ್ಲಿ ಜಾತಿಯತೆ ಬೆಳೆಯುತ್ತಿದ್ದು, ರೀತಿ ವಿಶ್ವಾಸ ಕಡಿಮೆಯಾಗುತ್ತಿದೆ. ಇದಕ್ಕೆ ತೆರೆ ಎಳೆಯಲು ಏಸುಕ್ರಿಸ್ತ ಇನ್ನೊಮ್ಮೆ ಹುಟ್ಟಿ ಬರಬೇಕಾಗಿದೆ. ಸಂಸ್ಕಾರವನ್ನುಹಿರಿಯರಿಗೆ ಗೌರವ ಕೋಡುವುದನ್ನು ನಾವಿಂದು ಮರೆತಿದ್ದೇವೆ. ವೈದ್ಯಕೀಯ, ಶಿಕ್ಷಣ ಕೇತ್ರಗಳು ವ್ಯಾಪಾರೀಕರಣ ಆಗುತ್ತಿದೆ ಎಂದು ಖ್ಯಾತ ದಂತ ವೈದ್ಯ ಮುರಲೀಮೋಹನ್ ಚೊಂತಾರು ಹೇಳಿದರು. ಚೊಕ್ಕಬೆಟ್ಟು ಜುಮಾ…
UN NETWORKS ಕೋಟೆಕಾರು: ಹಣ ಪಣಕ್ಕಿಟ್ಟು ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಐದು ಮಂದಿಯನ್ನು ಕೋಟೆಕಾರು ಮಾಡೂರು ಬಲ್ಯದಲ್ಲಿ ಉಳ್ಳಾಲ ಪೊಲೀಸರು ಬಂಧಿಸಿದ್ದು, ಬಂಧಿತರಿಂದ ಆಟಕ್ಕೆ ಪಣವಾಗಿಟ್ಟ ನಗದು ಹಾಗೂ ಬಳಸಲಾದ ಪರಿಕರಗಳನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ಭಾನುವಾರ ನಡೆದಿದೆ. ಮಾಡೂರು ನಿವಾಸಿಗಳಾದ ನವೀನ್ ಕುಮಾರ್, ರತ್ನಾಕರ, ನಾರಾಯಣ ಮೊಗೇರ ಬಲ್ಯ, ಜಯರಾಜ್, ಅಹಮ್ಮದ್ , ಸುಧೀರ್ ಬಂಧಿತರು. ಬಂಧಿತರಿಂದ 8,200ರೂ. ನಗದು, ಬೈಕ್, ಮೊಬೈಲುಗಳು ಸೇರಿದಂತೆ ಆಟಕ್ಕೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಪೊಲೀಸರು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಿದ್ದರು.
UN NETWORKS ಉಳ್ಳಾಲ:ಕೊಲ್ಯ ಶ್ರೀ ರಾಮ ಫ್ರೆಂಡ್ಸ್ ಸರ್ಕಲ್‍ನ ಸುವರ್ಣ ಸಂಭ್ರಮದ ಸಮಾರೋಪ ಸಮಾರಂಭವು ಕೊಲ್ಯ ಶ್ರೀ ರಾಮಾ ಭಜನಾ ಮಂದಿರದ ಮೈದಾನದಲ್ಲಿ ಭಾನುವಾರ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಸಿಸ್ಟೆಂಟ್ ಫ್ರೊ. ಡಾ. ಜಯಶ್ರೀ ಕೆ ಉದ್ಘಾಟಿಸಿ ಮಾತನಾಡಿ, ಶ್ರೀರಾಮ ಪ್ರೆಂಡ್ಸ್ ಸರ್ಕಲ್ , ಮತ್ತು ಶ್ರೀ ರಾಮ ಮಹಿಳಾ ವಿಭಾಗದವರ ಧಾರ್ಮಿಕ ಚಟುವಟಿಕೆಗಳು ನಡೆಯುತ್ತಿವೆ.ಸಮಾಜಮುಖಿ ಕೆಲಸ ಮಾಡುತ್ತಾ ಮಾಡಿ ಸಂಘಟನೆ ಆಗಿ ಬೆಳೆದಿವೆ ಎಂದರು.ಮಂಗಳೂರು ತಾ.ಪಂ. ಅಧ್ಯಕ್ಷ ಮಹಮ್ಮದ್ ಮೋನು ಮಾತನಾಡಿ, ಶ್ರೀ ರಾಮನ ಆದರ್ಶಗಳನ್ನು ಇಟ್ಟುಕೊಂಡು ಶ್ರೀರಾಮ ಮಂದಿರ ಮತ್ತು ಶ್ರೀ ರಾಮ ಫ್ರೆಂಡ್ ಸರ್ಕಲ್ ಉತ್ತಮ ಜೀವನ ಮಾಡುತ್ತಿದ್ದಾರೆ. ಹಿರಿಯರ ಮಾರ್ಗದರ್ಶನದಲ್ಲಿ ಈ ಸಂಸ್ಕೃತಿಯನ್ನು ಇಷ್ಟು ಉತ್ತಮವಾಗಿ ಬೆಳೆಸುವುದು ಯುವಕರ ಕೆಲಸ ಎಂದು ಹೇಳಿದರು. ಆನಂದಾಶ್ರಮ ಶಾಲಾ ನಿವೃತ್ತ ಶಿಕ್ಷಕ ಕೆ. ಆರ್. ತಂತ್ರಿ, ದೇರಳಕಟ್ಟೆ ಕೆ.ಎಸ್ ಹೆಗ್ಡೆ ಆಸ್ಪತ್ರೆಯ ಡಾ. ಕಾರ್ತಿಕ್ ವಿಶ್ವನಾಥ್ , ಪಾಂಡೇಶ್ವರ ಮಹಾಲಿಂಗೇಶ್ವರ…

