ಮಾಡೂರು: ಶಬರಿ ಫ್ರೆಂಡ್ಸ್ ಮಾಡೂರು ಇದರ 15ನೇ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಶ್ರೀ ಕೃಷ್ಣ ಸಾಂಸ್ಕೃತಿಕ ಮಹೋತ್ಸವ ಮುದ್ದು ಕೃಷ್ಣ 2018 ಪುಟಾಣಿಗಳ ಪ್ರತಿಭಾ ಕಾರ್ಯಕ್ರಮವು ಆ.26 ರಂದು ಭಾನುವಾರ ದ.ಕ.ಜಿ.ಪ. ಹಿರಿಯ ಪ್ರಾಥಮಿಕ ಶಾಲೆ ಮಾಡೂರುನಲ್ಲಿ ನಡೆಯಲಿದೆ.


ಮಾಜಿ ಶಾಸಕರು ಕೆ.ಜಯರಾಮ ಶೆಟ್ಟಿ ಕಾರ್ಯಕ್ರಮವನ್ನು ಉಧ್ಘಾಟಿಸಲಿದ್ದು ಸೋಮೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ರಾಜೇಶ್ ಎ.ಉಚ್ಚಿಲ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ತುಳು ಚಿಂತಕ ನವನೀತ್ ಶೆಟ್ಟಿ ಕದ್ರಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ನ್ಯಾಯಾವಾದಿ ರಾಮ್ ಪ್ರಸಾದ್ ಎಸ್, ಶ್ರೀ ಕ್ಷೇತ್ರ ಕೊಂಡಾಣ ಇದರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರು ಗುತ್ತು, ಉದ್ಯಮಿ ಸೂರಜ್ ಸುವರ್ಣ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ, ಕೋಟೆಕಾರು ವ್ಯವಸಾಯ ಸಹಕಾರಿ ಬ್ಯಾಂಕ್ ನಿರ್ದೇಶಕ ಉದಯ್ ಕುಮಾರ್ ಶೆಟ್ಟಿ, ಚಲನಚಿತ್ರ ನಟ ಅರವಿಂದ ಬೋಳಾರ್, ರೋಶನ್ ಎಮ್ ಶೆಟ್ಟಿ, ಧೀರಜ್ ಗಟ್ಟಿ, ಜಯಶ್ರೀ ಪ್ರಪುಲಾ ದಾಸ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ನಿವೃತ್ತ ಯೋಧ ಪ್ರವೀಣ್ ಕುಮಾರ್ ರೈ ಅಸೈಗೋಳಿ ಇವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು ಎಂದು ಶಬರಿ ಫ್ರೆಂಡ್ಸ್ ಇದರ ಅಧ್ಯಕ್ಷ ನವೀನ್ ಎಸ್. ಕೋಟೆಕಾರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿವಿಧ ಸ್ಪರ್ಧೆಗಳು:
ಪ್ರಾಥಮಿಕ ಹಾಗೂ ಹೈಸ್ಕೂಲ್ ಮಕ್ಕಳಿಗೆ ಭಕ್ತಿ ಗೀತೆ ಹಾಗೂ ಮುದ್ದು ಕೃಷ್ಣ ಹಾಗೂ ರಾಧ ಕೃಷ್ಣ ಚಿತ್ರ ರಚನೆ, ಚುಕ್ಕಿ ರಂಗೋಲಿ ಹಾಗೂ ಸಾರ್ವಜನಿಕರಿಗೆ ಭಗವದ್ಗೀತೆ ಕಂಠ ಪಾಠ, ಭಕ್ತಿ ಗೀತೆ ಸ್ಪರ್ಧೆ ನಡೆಯಲಿದೆ.
ಮಧ್ಯಾಹ್ನ 12.30 ರಿಂದ 1 ವರ್ಷದ ಒಳಗಿನ ಮಕ್ಕಳಿಗೆ ಕಂದ ಕೃಷ್ಣ ವೇಷದ ಪ್ರದರ್ಶನ, 1 ರಿಂದ 3 ವರ್ಷದ ಒಳಗಿನ ಮಕ್ಕಳಿಗೆ ಮುದ್ದು ಕೃಷ್ಣ ವೇಷದ ಪ್ರದರ್ಶನ , 3 ರಿಂದ 6 ವರ್ಷದ ಒಳಗಿನ ಮಕ್ಕಳಿಗೆ ಪುಟಾಣಿ ಕೃಷ್ಣ ವೇಷದ ಪ್ರದರ್ಶನ ಸ್ಪರ್ಧೆ, 6 ರಿಂದ 10 ವರ್ಷದ ಒಳಗಿನ ಮಕ್ಕಳಿಗೆ ಬಾಲಕೃಷ್ಣ ವೇಷದ ಪ್ರದರ್ಶನ ಸ್ಪರ್ಧೆ, ಹಾಗೂ ವಿದ್ಯಾರ್ಥಿಗಳಿಗೆ ರಾದಾಕೃಷ್ಣ ಗೀತಾ ನೃತ್ಯ ಸ್ಪರ್ಧೆ ನಡೆಯಲಿದೆ.


