Author: UllalaVani

Kannada News From Coastal Karnataka

UN NETWORKS ತೊಕ್ಕೊಟ್ಟು: ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ತೊಕ್ಕೊಟ್ಟುವಿನ ಮುದ್ದುಕೃಷ್ಣ ಸಾಂಸ್ಕೃತಿಕ ಟ್ರಸ್ಟ್ ಇದರ ಆಶ್ರಯದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನಡೆದ ಸಾಮಸ್ಕೃತಿ ಸ್ಪರ್ಧೆಗಳಿಗೆ ಪುಟಾಣಿಗಳಾದ ಜೇಷ್ಠ ಕಾಶಿಯಪ್ಪ ಪಂಚಮಿ ಕೆ. ಪಂಚಮಿ ಕೆ., ಧನ್ಯ, ಅಲಿಷ್ಕಾ, ಧ್ಯಾನ್ ಕೃಷ್ಣನನಗರ ಉದ್ಘಾಟಿಸಿದರು. ತೀರ್ಪುಗಾರರಾಗಿ ಛೋಟಾ ಮಂಗಳೂರು ಲಯನ್ಸ್ ಕ್ಲಬ್‍ನ ಅಧ್ಯಕ್ಷ ಕೆ.ಸಿ. ನಾರಾಯಣ ಸೋಮೇಶ್ವರ, ಸಮಾಜಿಕ ಕಾರ್ಯಕರ್ತ ಯಶವಂತ ಬೀರಿ, ಉಚ್ಚಿಲಗುಡ್ಡೆ ಶಾಲೆಯ ನಿವೃತ್ತ ಶಿಕ್ಷಕ ರಾಮಕೃಷ್ಣ, ಜಗದೀಶ್ ಬೆಳ್ಳಾರೆ, ದಿವ್ಯ ಕೊಟ್ಟಾರಿ ಮಂಗಳಾದೇವಿ, ಸಚಿನ್ ಜೈನ್ ತೊಕ್ಕೊಟ್ಟು, ಹರೀಶ್ ಚೌಟ ಮಂಜೇಶ್ವರ, ರಾಜ್ ಮೋಹನ್ ಕುಂಪಲ, ರಮಣಿ ಹರಿದಾಸ್ ಸೋಮೇಶ್ವರ, ಕಲಾವಿದ ಜೆ.ಪಿ. ಕೋಟೆಕಾರ್, ಲಲಿತಾ ಗಾಂಧಿನಗರ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಚಂದ್ರಕಾಂತ್, ಅಶೋಕ್ ಕ್ಲಿಕ್ ತೊಕ್ಕೊಟ್ಟು, ಪ್ರವೀಣ್ ಟಾಪ ಸಿಂಪೋನಿ, ವಿಶ್ವನಾಥ್ ಅಟ್ಟೊಳಿಗೆ ಕಿರಣ್ ಚೆಂಬುಗುಡ್ಡೆ, ಶರತ್ ಬಂಗೇರ ಉಪಸ್ಥಿತರಿದ್ದರು.

Read More

UN NETWORKS ಉಳ್ಳಾಲ: ಅಪಘಾತ ಚಿಕಿತ್ಸೆ ಸಂಬಂಧಪಟ್ಟಂತೆ ಪ್ರತಿಯೊಬ್ಬರಲ್ಲಿಯೂ ಜಾಗೃತಿ ಮೂಡಿಸುವ ಸಲುವಾಗಿ ಆನ್‍ಲೈನ್ ಕೋರ್ಸ್ ಅಥವಾ ಡಿಪ್ಲೊಮಾ ಕೋರ್ಸ್‍ನ್ನು ಪ್ರತಿ ವೈದ್ಯಕೀಯ ಕಾಲೇಜುಗಳಲ್ಲಿ ಸ್ಥಾಪಿಸುವ ಅಗತ್ಯವಿದೆ. ಅದರಿಂದಾಗಿ ಅಪಘಾತ ಸಂದರ್ಭದಲ್ಲಿ ಸಾರ್ವಜನಿಕರಲ್ಲಿಜಾಗೃತಿ ಮೂಡುವುದರೊಂದಿಗೆ ವಿಚಾರದ ಕುರಿತಾಗಿ ಆಕರ್ಷಿತರಾಗಲಿದ್ದಾರೆ ಎಂದು ಅಸೋಸಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾ ಅಧ್ಯಕ್ಷ ಡಾ. ದಿಲೀಪ್ ಎಸ್. ಗೋಡೆ ಹೇಳಿದರು. ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿಶ್ವವಿದ್ಯಾಲಯದ ಕ್ಯಾಂಪಸ್‍ನ ಕೆ.ಎಸ್. ಹೆಗ್ಡೆ ಆಡಿಟೋರಿಯಂನಲ್ಲಿಅಸೋಸಿಯೇಶನ್ ಆಫ್ ಸರ್ಜನ್ಸ್ ಆಫ್ ಇಂಡಿಯಾದ ಘಟಕವಾದ ಇಂಡಿಯನ್ ಅಸೋಸಿಯೇಶನ್ ಆಫ್ ಟ್ರಾಮೊಟೋಲಾಜಿ ಆ್ಯಂಡ್ ಕ್ರಿಟಿಕಲ್ ಕೇರ್ ಹಾಗೂ ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಜನರಲ್ ಸರ್ಜರಿ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ “ಟ್ರೋಮಾಸಿಕಾನ್”-2018 ಎಂಟನೆಯ ರಾಷ್ಟ್ರೀಯ ಸಮ್ಮೇಳನವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು. ಪದವೀಧರ ವೈದ್ಯರು ಗ್ರಾಮೀಣ ಭಾಗದಲ್ಲಿಆರು ತಿಂಗಳು ಸೇವೆ ಸಲ್ಲಿಸಬೇಕಾಗಿರುವುದು ಹೇಗೆ ಕಡ್ಡಾಯವಾಗಿ ಜಾರಿಗೊಂಡಿದೆಯೋ ಹಾಗೆಯೇ ಪ್ರಪಂಚದಲ್ಲಿಯೇ ಎರಡನೆಯ ಅತಿ ಹೆಚ್ಚಿನ ಸಾವು ಸಂಭವಿಸಲು ಕಾರಣ…

Read More

UN NETWORKS ಉಳ್ಳಾಲ: ಕೇರಳದಿಂದ ಮಂಗಳೂರಿಗೆ ಕಾರಿನಲ್ಲಿ ಗಾಂಜಾ ಸಾಗಾಟ ನಡೆಸುತ್ತಿದ್ದ ಮೂವರ ತಂಡವನ್ನು ಉಳ್ಳಾಲ ಪೊಲೀಸರು ತೊಕ್ಕೊಟ್ಟು ಕಲ್ಲಾಪು ಸಮೀಪ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕುತ್ತಾರು ಶಾಂತಿಭಾಗ್ ನಿವಾಸಿ ಮಹಮ್ಮದ್ ನೌಫಾಲ್ (25), ಮದನಿನಗರ ನಿವಾಸಿ ಮಹಮ್ಮದ್ ಖುರ್ಷಿದ್ ((20), ಮತ್ತು ಮುಡಿಪು ಕುಕ್ಕುದಕಟ್ಟೆ ನಿವಾಸಿ ಅಬ್ದುಲ್ ಆತಿಕ್ (19) ಬಂಧಿತರು.ಆರೋಪಿಗಳು ಆಲ್ಟೋ ಕಾರಿನಲ್ಲಿ ಉಪ್ಪಳದಿಂದ ಮಂಗಳೂರು ಕಡೆಗೆ ಕಾರಿನಲ್ಲಿ ಗಾಂಜಾ ಸಾಗಾಟ ನಡೆಸುತ್ತಿರುವ ಖಚಿತ ಮಾಹಿತಿ ಪಡೆದ ಉಳ್ಳಾಲ ಪೊಲೀಸರು ಕಲ್ಲಾಪು ಸಮೀಪ ತಡೆಹಿಡಿದು ಬಂಧಿಸಿದ್ದಾರೆ. ಆರೋಪಿಗಳ ಬಳಿಯಿದ್ದ 105 ಗ್ರಾಂ ಗಾಂಜಾ, ಕಾರು ಹಾಗೂ ರೂ.4,000 ನಗದು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಉಳ್ಳಾಲ ಠಾಣಾಧಿಕಾರಿ ಗೋಪಿಕೃಷ್ಣ, ಉಪನಿರೀಕ್ಷಕ ವಿನಾಯಕ ತೋರಗಲ್, ಎಎಸ್ ಐ ವಿಶ್ವನಾಥ ರೈ, ವಾಸುದೇವ, ಸುರೇಶ್, ಅಕ್ಬರ್ ಕಾರ್ಯಾಚರಣೆ ಯಲ್ಲಿ ಪಾಲ್ಗೊಂಡಿದ್ದರು.

Read More

UN NETWORKS ಉಳ್ಳಾಲ: ನಗರಸಭೆ ವ್ಯಾಪ್ತಿಯ ಮೂಲಭೂತ ಸೌಕರ್ಯಗಳಿಂದ ಹಿಡಿದು ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಲಭ್ಯಗೊಳಿಸಲು ಅನೇಕ ಹೋರಾಟಗಳನ್ನು ನಡೆಸಿರುವ ಸಿಪಿಐಎಂ ಪಕ್ಷದ ಅಭ್ಯರ್ಥಿಗಳನ್ನು ಜನ ಬೆಂಬಲಿಸಲಿದ್ದಾರೆ ಎಂದು ಸಿಪಿಐಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್ ತಿಳಿಸಿದ್ದಾರೆ. ಪ್ರಥಮ ಬಾರಿಗೆ ಉಳ್ಳಾಲ ನಗರಸಭೆಗೆ ನಡೆಯಲಿರುವ ಚುನಾವಣೆಗೆ ಸಿಪಿಐಎಂ ನಿಂದ ಐವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಲಾಗಿದೆ. ಒಂದು ವಾರ್ಡಿನಲ್ಲಿ ಪಕ್ಷೇತರ ಅಭ್ಯರ್ಥಿಯನ್ನು ಬೆಂಬಲಿಸಲಾಗಿದೆ. ಸಿಪಿಎಂ ಪಕ್ಷ ಕಳೆದ ಐದು ವರ್ಷಗಳಲ್ಲಿ ನಗರಸಭೆ ವ್ಯಾಪ್ತಿಯ ನಾಗರಿಕರ ಮೂಲಭೂತ ಸೌಕರ್ಯಗಳಿಗೆ ನಿರಂತರವಾಗಿ ಹೋರಾಟ ನಡೆಸುತ್ತಾ ಬಂದಿದೆ. ಕ್ಷೇತ್ರದ ಶಾಂತಿ, ಸೌಹಾರ್ದತೆಗಾಗಿ ಹೋರಾಟ ನಡೆಸುತ್ತಿದೆ. ಮುಂದಿನ 5 ವರ್ಷಗಳಲ್ಲಿ ನಗರಸಭೆ ವ್ಯಾಪ್ತಿಯ ಸರ್ವತೋಮುಖ ಅಭಿವೃದ್ಧಿಗೆ ಸಮಗ್ರವಾಗಿ ಸ್ಪಂಧಿಸುವ ಉದ್ದೇಶದೊಂದಿಗೆ ಚುನಾವಣೆಗೆ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ. ಕುಡಿಯುವ ನೀರು, ರಸ್ತೆ, ದಾರಿದೀಪ, ಮಾರುಕಟ್ಟೆ ಸೇರಿದಂತೆ ಜನರ ಅನುಕೂಲಕ್ಕೆ ಲಭ್ಯವಾಗುವ ಯೋಜನೆಗಳೊಂದಿಗೆ ನಗರಸಭೆ ಶುಚಿತ್ವವೂ ಪ್ರಮುಖ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ವಾರ್ಡ್ ನಂ 16 ಲಕ್ಷ್ಮಣ್ ಅಮೀನ್ ಕೆರೆಬೈಲ್, 17 ರಲ್ಲಿ…

Read More

UN NETWORKS ಉಳ್ಳಾಲ: ಅಂಬಿಕಾರೋಡ್ ಗಟ್ಟಿ ಸಮಾಜ ಭವನದಲ್ಲಿ ಗಟ್ಟಿ ಸಮಾಜ ಮಹಿಳಾ ಸಮಿತಿ ಆಶ್ರಯದಲ್ಲಿ ವರಮಹಾಲಕ್ಷ್ಮಿ ಪೂಜೆ ರಾಘವೇಂದ್ರ ಹೊಳ್ಳ ಅವರ ಮಾರ್ಗದರ್ಶನದಲ್ಲಿ ನಡೆಯಿತು.

Read More

UN NETWORKS ಕುಂಪಲ: ಕುಂಪಲ ಕೇಸರಿ ಮಾತೃಮಂಡಳಿ ವತಿಯಿಂದ ಶ್ರೀ ವರಮಹಾಲಕ್ಷ್ಮಿ ಪೂಜೆಯು ಶುಕ್ರವಾರ ಕೇಸರಿ ಸಭಾಂಗಣದಲ್ಲಿ ನಡೆಯಿತು. ತೊಕ್ಕೊಟ್ಟು ಅಮ್ಮ ಎಲೆಕ್ಟ್ರಾನಿಕ್ಸ್ ನ ಮಾಲಕ ಪೂರ್ಣಿಮಾ ಯೋಗೀಶ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಕೇಸರಿ ಮಿತ್ರಮಂಡಲ ಹಾಗೂ ಮಾತೃಮಂಡಳಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.

Read More

UN NETWORKS ಉಳ್ಳಾಲ: ಅವೈಜ್ಞಾನಿಕವಾದ ಪ್ರಗತಿಯ ಅಭಿವೃದ್ಧಿ ಹಮ್ಮಿಕೊಂಡಾಗ ಪ್ರಾಕೃತಿಕ ವಿಕೋಪಗಳು ಸಂಭವಿಸುತ್ತಿವೆ ಅನ್ನುವ ಕುರಿತು ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇಂತಹ ಪ್ರಕೃತಿಯ ಮೇಲಿನ ಅತ್ಯಾಚಾರವನ್ನು ತಡೆಯುವ ಪ್ರಯತ್ನ ಎಲ್ಲರಿಂದ ಆಗಬೇಕಿದೆ ಎಂದು ಪಿಎಫ್ ಐ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಝಾಕ್ ಕೆಮ್ಮಾರ ಅಭಿಪ್ರಾಯಪಟ್ಟರು. ಅವರು ಜಿಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ಕೇರಳ-ಕರ್ನಾಟಕ ಪ್ರವಾಹ ಪೀಡಿತರಿಗೆ ನೆರವಾಗಿರಿ ಅನ್ನುವ ಕಾರ್ಯಕ್ರಮದ ಮೂಲಕ ನಾಲ್ಕು ದಿನಗಳಿಂದ ದಾನಿಗಳಿಂದ ಸಂಗ್ರಹಿಸಿದ ಸುಮಾರು ರೂ. 15 ಲಕ್ಷ ವೆಚ್ಚದ ಅಗತ್ಯ ದಿನಬಳಕೆ ವಸ್ತುಗಳನ್ನು ಕೇರಳ ಭಾಗಕ್ಕೆ ಕಳುಹಿಸುವ ಸಂದರ್ಭ ಭಾಗವಹಿಸಿ ಮಾತನಾಡಿದರು. ಪ್ರಾಕೃತಿಕ ವಿಕೋಪ ಸಂಭವಿಸಿದ ಕೇರಳ ಹಾಗೂ ಕೊಡಗಿನ ಜನರೊಂದಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸದಾ ಇದೆ. ದಿನರಾತ್ರಿ ಪಿಎಫ್ ಐನ ಕಾರ್ಯಕರ್ತರು ಪ್ರಾಮಾಣಿಕವಾಗಿ ದುಡಿಯುತ್ತಿದ್ದಾರೆ. ದುರಂತಗಳು ಮುಂದೆಂದೂ ನಡೆಯದಿರಲಿ ಎಂದು ಪ್ರತಿಯೊಬ್ಬರೂ ಪ್ರಾರ್ಥಿಸಬೇಕಾಗಿದೆ. ಮಾನವೀಯ ಮೌಲ್ಯಗಳನ್ನು ಮುಂದಿಟ್ಟುಕೊಂಡು ಜಾತಿಬೇಧವಿಲ್ಲದೆ ಕೇರಳದಾದ್ಯಂತ ಜನರು ಸಂತ್ರಸ್ತರ ಸೇವೆಯಲ್ಲಿ ಕಾರ್ಯಕರ್ತರು ಸಹಕರಿಸಿದ್ದಾರೆ. ಪರಿಹಾರ…

Read More

UN NETWORKS ಉಳ್ಳಾಲ: ಉಳ್ಳಾಲ ನಗರಸಭೆಗೆ ಪ್ರಥಮ ಬಾರಿಗೆ ಸೆ. 31ರಂದು ಚುನಾವಣೆ ನಡೆಯಲಿದ್ದು, ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಪ್ರಾದೇಶಿಕ ಪಕ್ಷವಾಗಿರುವ ಜೆಡಿಎಸ್ ಪೈಪೋಟಿಗೆ ಈ ಬಾರಿ ಇಳಿದಿದೆ. ಅಭ್ಯರ್ಥಿಗಳನ್ನು ಕಣಕ್ಕಿಳಿಸುವಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸಮಾನ ಹೆಜ್ಜೆ ಇಟ್ಟಿದೆ. ಕಳೆದ ಬಾರಿ ಉಳ್ಳಾಲ ಪುರಸಭೆಗೆ ನಡೆದ ಚುನಾವಣೆಯಲ್ಲಿ 27ಸ್ಥಾನಗಳ ಪೈಕಿ ಕಾಂಗ್ರೆಸ್ 17ಸ್ಥಾನಗಳನ್ನು ಗೆದ್ದುಕೊಳ್ಳುವ ಮೂಲಕ ಅಧಿಕಾರ ಹಿಡಿದಿತ್ತು. ಬಿಜೆಪಿ ಏಳು, ಪಕ್ಷೇತರ ಎರಡು ಹಾಗೂ ಎಸ್‍ಡಿಪಿಐ ಒಂದು ಸ್ಥಾನ ಪಡೆದುಕೊಂಡಿತ್ತು. ಈ ಬಾರಿ ನಗರಸಭೆಯಲ್ಲಿ ನಾಲ್ಕು ವಾರ್ಡ್‍ಗಳು ಹೆಚ್ಚಾಗಿದ್ದು ಆ ನಾಲ್ಕೂ ವಾರ್ಡ್‍ಗಳು ಕಾಂಗ್ರೆಸ್ ಪ್ರಾಬಲ್ಯ ಇರುವ ಕ್ಷೇತ್ರಗಳೇ ಆಗಿರುವುದರಿಂದ ಕಾಂಗ್ರೆಸ್‍ಗೆ ಅಧಿಕಾರ ಹಿಡಿಯಲು ಇನ್ನೂ ಹೆಚ್ಚಿನ ಬಲ ಸಿಕ್ಕಿದೆ. ಬಿಜೆಪಿ ಕಳೆದ ಬಾರಿ ಗೆದ್ದಿರುವ ಕ್ಷೇತ್ರದಲ್ಲಿ ಹೆಚ್ಚಿನ ಕ್ಷೇತ್ರದಲ್ಲಿ ಮಹಿಳಾ ಮೀಸಲಾತಿ ಬಂದಿರುವುದರಿಂದ ಮಹಿಳೆಯರಿಗೆ ಹೆಚ್ಚಿನ ಸೀಟು ಸಿಕ್ಕಿದೆ. ಕಳೆದ ಬಾರಿ ಗೆದ್ದಿರುವ ಸದಸ್ಯರ ಪೈಕಿ ಮಹಾಲಕ್ಷ್ಮಿ ಅವರನ್ನು ಹೊರತು ಪಡಿಸಿ ಇತರ ಯಾವ ಮಾಜಿ…

Read More

UN NETWORKS ಉಳ್ಳಾಲ: ಹಬ್ಬದ ಸಂತೋಷವನ್ನು ಎಲ್ಲರೂ ಆಚರಿಸಬೇಕು ಅನ್ನುವ ಉದ್ದೇಶ ಇಟ್ಟುಕೊಂಡು ಪ್ರತಿವರ್ಷವೂ ಸಂಘಟನೆ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿರುವ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಹೆಲ್ಪ್ ಇಂಡಿಯಾ ಫೌಂಡೇಷನ್ ಬಕ್ರೀದ್ ಹಬ್ಬದ ಪ್ರಯುಕ್ತ ಸೋಮೇಶ್ವರ ನೆಹರುನಗರದಲ್ಲಿರುವ ಪಶ್ಚಿಮ್ ರಿಹ್ಯಾಬ್ ಸೆಂಟರ್ ನಲ್ಲಿರುವ ಆಶ್ರಮ ವಾಸಿಗಳ ಜೊತೆಗೆ ಹಬ್ಬದ ಊಟ ಕಾರ್ಯಕ್ರಮದಲ್ಲಿ ಊಟ ವಿತರಿಸಿ ಮಾತನಾಡಿದರು. ಎಲ್ಲ ಕೂಡಿಕೊಂಡು ಹಬ್ಬವನ್ನು ಆಚರಿಸುವ ಮೂಲಕ ಸಮಾಜದಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಬೇಕಿದೆ. ಸೌಹಾರ್ದತೆಯನ್ನು ಕಾಪಾಡಲು ಹಬ್ಬಗಳು ಸಹಕಾರಿ. ತಾವು ಎಲ್ಲಿದ್ದೇವೆ ಅನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ಸಂತೋಷದಿಂದ ಹಬ್ಬದಲ್ಲಿ ಪಾಲ್ಗೊಳ್ಳುವ ಮೂಲಕ ಮಾನಸಿಕವಾಗಿ ಸದೃಢತೆಯನ್ನು ಹೊಂದಬಹುದು. ಹೆಲ್ಪ್ ಇಂಡಿಯಾ ಫೌಂಡೇಶನ್ ನ ಸೇವಾ ಕಾರ್ಯ ಎಲ್ಲರಿಗೂ ಸ್ಫೂರ್ತಿ ಎಂದರು. ಹೆಲ್ಪ್ ಇಂಡಿಯಾ ಫೌಂಡೇಷನ್ ವತಿಯಿಂದಲೂ ನಿರಾಶ್ರಿತರಿಗೆ ತಾಣ ಮಾಡುವ ಯೋಜನೆಯನ್ನು ಇಟ್ಟುಕೊಂಡಿದೆ. ಸಮಾಜದಲ್ಲಿ ಹೆಚ್ಚಿನ ಮಂದಿ ನಿರಾಶ್ರಿತರಾಗಿಯೇ ದಾರಿಬದಿಯಲ್ಲಿ ಸಾಯುವಂತಹ ಸ್ಥಿತಿಯಿದೆ. ಇದನ್ನು ಗಣನೆಗೆ ಪಡೆದುಕೊಂಡು ಯೋಜನೆಯನ್ನು ರೂಪಿಸಲಾಗಿದೆ. ಆಶ್ರಮದಲ್ಲಿರುವವರು…

Read More

UN NETWORKS ಉಳ್ಳಾಲ: ಕೊಡಗಿನಲ್ಲಿ ಆಗಿರುವ ಪ್ರಾಕೃತಿಕ ವಿಕೋಪದ ಸಂತ್ರಸ್ತರ ಜತಗೆ ನಾವಿದ್ದೇವೆ. ಎಲ್ಲಾ ಧರ್ಮದವರು ತಮ್ಮ ಆರಾಧನಾಲಯಗಳಲ್ಲಿ ಧರ್ಮ ನೋಡದೆ ಆಶ್ರಯ ನೀಡಿರುವುದು ರಾಜ್ಯದ ಜನತೆಯ ಮಾನವೀಯತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಹೇಳಿದ್ದಾರೆ. ಅವರು ಬಕ್ರೀದ್ ಹಬ್ಬದ ಪ್ರಯುಕ್ತ ಉಳ್ಳಾಲದ ಇತಿಹಾಸ ಪ್ರಸಿದ್ಧ ಸೈಯ್ಯದ್ ಮದನಿ ದರ್ಗಾದಲ್ಲಿ ನಡೆದ ವಿಶೇಷ ಪ್ರಾರ್ಥನೆಯಲ್ಲಿ ಭಾಗವಹಿಸಿ ಮಾತನಾಡಿದರು. ಬಕ್ರೀದ್ ಹಬ್ಬದ ಸಂದೇಶವಾಗಿರುವ ತ್ಯಾಗ, ತಾಳ್ಮೆ, ಪ್ರೀತಿ, ವಿಶ್ವಾಸದಲ್ಲಿ ಬಾಳುವಂತಹವ ವಾತಾವರಣ ನಿರ್ಮಿಸುವಲ್ಲಿ ಎಲ್ಲರೂ ತೊಡಗಬೇಕಿದೆ. ಬಕ್ರೀದ್ ಹಬ್ಬ ಒಂದು ಧರ್ಮಕ್ಕೆ ಸೀಮಿತವಾದ ಹಬ್ಬವಲ್ಲ, ಎಲ್ಲಾ ಧರ್ಮದವರು ಸೇರಿಕೊಂಡು ಆಚರಿಸಿದಾಗ ಹಬ್ಬದ ವಾತಾವರಣ ನಿರ್ಮಾಣವಾಗುತ್ತದೆ. ಹಬ್ಬದ ಸಂದೇಶವನ್ನು ಎಲ್ಲರಿಗೂ ತಿಳಿಸಿ ಪರಸ್ಪರ ಜೊತೆಯಾಗುವ ಮೂಲಕ ಉತ್ತಮ ಸಮಾಜದ ನಿರ್ಮಾಣವಾಗಬೇಕಿದೆ. ಕಷ್ಟದ ಕಾಲದಲ್ಲಿಯೂ ಎಲ್ಲರೂ ಜೊತೆಯಾಗುವಂತಹ ಮನೋಸ್ಥಿತಿಯನ್ನು ಬೆಳೆಸಬೇಕಿದೆ. ಕೊಡಗಿನಲ್ಲಿ ಸಂಭವಿಸಿದ ಅನಾಹುತದ ಸಂತ್ರಸ್ತರ ನೋವಿನಲ್ಲಿ ಎಲ್ಲರೂ ಜೊತೆಗಿದ್ದೇವೆ. ಮುಸ್ಲಿಂ ಸಹೋದರರು ಹಿಂದು ಆರಾಧನಾಲಯಗಳಲ್ಲಿ, ಹಿಂದೂಗಳು ಮುಸ್ಲಿಂ ಆರಾಧನಾಲಯಗಳಲ್ಲಿ ಹಾಗೂ…

Read More