UN NETWORKS ಮಂಗಳೂರು: ಗೌರಿ ಲಂಕೇಶ್ ಬಳಗ ಅಗಸ್ಟ್ ಮೂವತ್ತರಿಂದ ಸೆಪ್ಟೆಂಬರ್ ಐದರವರೆಗೆ ರಾಜ್ಯವ್ಯಾಪಿ ನಡೆಸಲಿರುವ “ಅಭಿವ್ಯಕ್ತಿ ಹತ್ಯೆ ವಿರೋಧಿ ಸಪ್ತಾಹದ” ಅಂಗವಾಗಿ 30-08-18 ರ ಗುರುವಾರ ಸಂಜೆ ನಾಲ್ಕು ಗಂಟೆಗೆ ಮಂಗಳೂರಿನ ಅಲ್ ರಹಬಾ ಫ್ಲಾಝಾದಲ್ಲಿರುವ ಕ್ಯಾಂಪಸ್ ಕೆರಿಯರ್ ಅಕಾಡೆಮಿಯಲ್ಲಿ “ನಮ್ಮ ಗೌರಿ” ಚಿತ್ರ ಪ್ರದರ್ಶನ ಮತ್ತು ವಿಚಾರ ಸಂಕಿರಣ ವನ್ನು ಹಮ್ಮಿಕೊಳ್ಳಲಾಗಿದೆ ಎಂದು ಗೌರಿ ಲಂಕೇಶ್ ಬಳಗದ ಸಂಚಾಲಕ ಇಸ್ಮತ್ ಪಜೀರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಗಸ್ಟ್ ಮೂವತ್ತಕ್ಕೆ ಹಿರಿಯ ವಿದ್ವಾಂಸ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆಯಾಗಿ ಮೂರು ವರ್ಷ ಮತ್ತು ಸೆಪ್ಟೆಂಬರ್ ಐದಕ್ಕೆ ಖ್ಯಾತ ಪತ್ರಕರ್ತೆ ಮತ್ತು ಮಾನವ ಹಕ್ಕು ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆಯಾಗಿ ಒಂದು ವರ್ಷ ತುಂಬುತ್ತದೆ. ಈ ನಿಟ್ಟಿನಲ್ಲಿ ಈ ಸಪ್ತಾಹವನ್ನು ಹಮ್ಮಿಕೊಳ್ಳಲಾಗಿದೆ . ಪೆಡಸ್ಟ್ರಿಯನ್ ಪಿಕ್ಚರ್ಸ್ ನಿರ್ಮಿಸಿದ ಗೌರಿ ಲಂಕೇಶ್ ಬದುಕು, ಬರಹ ಮತ್ತು ಚಳವಳಿಗಳ ಮೇಲೆ ಪಕ್ಷಿ ನೋಟ ಬೀರುವ ಚಿತ್ರವನ್ನು ಇದೇ ಮೊದಲ ಬಾರಿಗೆ ಮಂಗಳೂರಿನಲ್ಲಿ ಪ್ರದರ್ಶಿಸಲಾಗುತ್ತಿದೆ. ವಿಚಾರ ಸಂಕಿರಣದ ಅಧ್ಯಕ್ಷತೆ…
Author: UllalaVani
UN NETWORKS ಉಳ್ಳಾಲ: ಸ್ವಚ್ಛ ಉಳ್ಳಾಲ ನಿರ್ಮಾಣದೊಂದಿಗೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ರಾಜ್ಯದಲ್ಲೇ ಮಾದರಿ ನಗರಸಭೆಯನ್ನಾಗಿ ರೂಪಿಸಲು ಜನ ಸ್ಥಳೀಯಾಡಳಿತ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಗಳನ್ನು ಬೆಂಬಲಿಸಬೇಕಿದೆ ಎಂದು ಜಾತ್ಯಾತೀತ ಜನತಾದಳ ವಕ್ತಾರ ನಝೀರ್ ಉಳ್ಳಾಲ್ ಹೇಳಿದ್ದಾರೆ. ಅವರು ತೊಕ್ಕೊಟ್ಟು ಖಾಸಗಿ ಹೊಟೇಲಿನಲ್ಲಿ ಉಳ್ಳಾಲ ನಗರಸಭೆ ಚುನಾವಣೆ-2018ರ ಪ್ರಣಾಳಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಿಷ್ಕಳಂಕ, ನಿರಂತರ ಜನರೊಂದಿಗೆ ಇರುವ ಶಿಕ್ಷಿತ ಅಭ್ಯರ್ಥಿಗಳನ್ನೇ ಈ ಬಾರಿ ಅಭ್ಯರ್ಥಿಗಳನ್ನಾಗಿ ಆಯ್ಕೆ ಮಾಡಲಾಗಿದೆ. ರಾಜ್ಯದ ಮುಖ್ಯಮಂತ್ರಿಯವರು ವೃದ್ಧಾಪ್ಯಮಾಶಾಶನದಲ್ಲಿ ಏರಿಕೆ , ನಗರಾಭಿವೃದ್ಧಿ ಹಾಗೂ ಸ್ಥಳೀಯಾಡಳಿತಗಳಿಗೆ ಹೆಚ್ಚಿನ ಅನುದಾನವನ್ನು ಪೂರೈಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಜೆಡಿಎಸ್ ಆಡಳಿತಕ್ಕೆ ಬಂದಲ್ಲಿ ನಗರಸಭೆ ಸರ್ವತೋಮುಖ ಅಭಿವೃದ್ಧಿ ಆಗಲಿದೆ. ಮಾಜಿ ಕೌನ್ಸಿಲರ್ ಯು.ಹೆಚ್ ಫಾರುಕ್ ಮಾತನಾಡಿ 24 ಗಂಟೆ ಕುಡಿಯುವ ನೀರಿನ ಪೂರೈಕೆ, ವೈಜ್ಞಾನಿಕ ರೀತಿಯಲ್ಲಿ ಘನತ್ಯಾಜ್ಯ ನಿರ್ವಹಣೆ, ಒಳಚರಂಡಿ ಯೋಜನೆ ಸಮಗ್ರ ಅನುಷ್ಠಾನ, ಭ್ರಷ್ಟಾಚಾರ ಮತ್ತು ಪಾರದರ್ಶಕ ಆಡಳಿತ, ಆಟದ ಮೈದಾನ ನಿರ್ಮಾಣ, ಈಜುಕೊಳ ಮತ್ತು ಉದ್ಯಾನವನ…
UN NETWORKS ಉಳ್ಳಾಲ: ಹೊಟ್ಟೆಯ ವಿವಿಧ ಭಾಗಗಳಿಗೆ ಹರಡಿ ಅಂತಿಮ ಹಂತದಲ್ಲಿರುವ ಹಾಗೂ ಎಲ್ಲ ಬಗೆಯ ಚಿಕಿತ್ಸೆಯಲ್ಲೂ ವಿಫಲವಾಗಿರುವ ಕ್ಯಾನ್ಸರ್ ರೋಗಿಗಳಿಗೊಂದು ಆಶಾಕಿರಣವಾಗಿ ಹೈಪರ್ ಥರ್ಮಿಕ್ ಇಂಟ್ರಿ ಪೆರಿಟೋನಿಯಲ್ ಕಿಮೋ ಥೆರಫಿ(ಹೈಪೆಕ್) ಎಂಬ ಅತ್ಯಾಧುನಿಕ ಚಿಕಿತ್ಸಾ ವಿಧಾನದಿಂದ ಕ್ಯಾನ್ಸರ್ ಮತ್ತೆ ಮರುಕಳಿಸುವುದನ್ನು ಮತ್ತು ಬೇರೆ ಅಂಗಗಳಿಗೆ ಹರಡುವುದನ್ನು ತಪ್ಪಿಸುವಲ್ಲಿ ಕೆ.ಎಸ್.ಹೆಗ್ಡೆ ಆಸ್ಪತ್ರೆಯ ತಜ್ಞರ ತಂಡ ಯಶಸ್ವಿಯಾಗಿದೆ. ಆ ಮೂಲಕ ನೂತನ ವಿಧಾನವು ಕ್ಯಾನ್ಸರ್ ಕಾಯಿಲೆಯನ್ನು ಸಂಪೂರ್ಣ ಗುಣಪಡಿಸಲು ಮತ್ತು ರೋಗಿಗಳ ಆಯಸ್ಸನ್ನು ಹೆಚ್ಚಿಸಲು ಪರಿಣಾಮಕಾರಿಯಾಗಿದೆ. ಚಿಕಿತ್ಸಾ ವಿಧಾನ: ನೂತನ ವಿಧಾನದಲ್ಲಿ ಹೆಚ್ಚಿನ ಸಾಂದ್ರತೆಯ ಮತ್ತು ಹೆಚ್ಚಿನ ಉಷ್ಣಾಂಶದ ಕಿಮೋಥೆರಫಿ ಔಷಧಿಯನ್ನು ನೇರವಾಗಿ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ಕ್ಯಾನ್ಸರ್ ಪೀಡಿತ ಭಾಗಗಳಿಗೆ ವಿತರಿಸಲಾಗುತ್ತದೆ. ಹಿಂದೆ ಶಸ್ತ್ರಚಿಕಿತ್ಸೆಯ ನಂತರ ಬಾಕಿ ಉಳಿದ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು ರಕ್ತನಾಳಗಳ ಮೂಲಕ ಕಿಮೋಥೆರಫಿಯನ್ನು ನೀಡಲಾಗುವ ವಿಧಾನ ಅನುಸರಿಸಲಾಗುತ್ತಿತ್ತು. ಆದರೆ ಈ ನೂತನ ವಿಧಾನದಲ್ಲಿ ನೇರವಾಗಿ ಶಸ್ತ್ರ ಚಿಕಿತ್ಸೆಯ ಸಮಯದಲ್ಲಿ ನೀಡುವುದರಿಂದ ಹೊಟ್ಟೆಯ ಎಲ್ಲ ಕ್ಯಾನ್ಸರ್ ಕಣಗಳನ್ನು ವ್ಯವಸ್ಥಿತವಾಗಿ…
UN NETWORKS ಉಳ್ಳಾಲ: ಒಳಚರಂಡಿ ವ್ಯವಸ್ಥೆ ಮೂಲಕ ಉಳ್ಳಾಲ ನಗರಸಭೆಯ ವ್ಯಾಪ್ತಿಯಲ್ಲಿಜನರಿಗೆ ನೆಮ್ಮದಿ ಕರುಣಿಸುತ್ತೇವೆ ಎಂದು ಕಾಂಗ್ರೆಸ್ ಆಡಳಿತ ಬಾಯಿ ಮಾತಿನಲ್ಲೇ ಹೇಳಿದ್ದೇ ಬಿಟ್ಟರೆ ಈ ತನಕ ಅದು ಅನುಷ್ಠಾನವಾಗಿಲ್ಲ. ಬಹು ನಿರೀಕೆಯ ಶಾಶ್ವತ ಕುಡಿಯುವ ನೀರಿನ ಯೋಜನೆ ವಿಫಲವಾಗಿದೆ. ಎಡಿಬಿ ಯೋಜನೆಯಡಿಯಲ್ಲಿಜಾರಿಗೆ ತಂದಿರುವ ಯಾವುದೇ ಯೋಜನೆ ಪೂರ್ಣಗೊಂಡಿಲ್ಲ. ಹಾಗಿದ್ದ ಮೇಲೆ ಕಾಂಗ್ರೆಸ್ಸಿಗರು ಯಾವ ಸಾಧನೆಯ ಆಧಾರದಲ್ಲಿ ಮತ ಕೇಳಲು ಹೋಗುತ್ತಾರೆ ಎಂದು ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ತೊಕ್ಕೊಟ್ಟಿನ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಕಾಂಗ್ರೆಸ್ ಸರಕಾರವೇ ಜಾರಿಗೆ ತಂದಿರುವ ಯೋಜನೆ ಅನುಷ್ಠಾನವಾಗಿಲ್ಲ. ನಗರ ಯೋಜನೆಯಲ್ಲಿ ಆಶ್ರಯ ಯೋಜನೆ ಮನೆಗಳು ಮನುಷ್ಯರು ವಾಸಿಸಲು ಯೋಗ್ಯವಾ ಎಂಬ ಪ್ರಶ್ನೆ ಜನರು ಕೇಳಬೇಕು. ಎಡಿಬಿ ಯೋಜನೆಯ ಯಾವುದೇ ಕಾಮಗಾರಿ ತುದಿ ಮುಟ್ಟಿಲ್ಲ. ತುಂಬೆ ವೆಂಟೆಡ್ ಡ್ಯಾಂನಿಂದ ಗ್ರಾಮಗಳಿಗಂತಲೂ ಕನಿಷ್ಠ 15ರಿಂದ 20ವಾರ್ಡ್ ಗೆ ನೀರು ಸರಬರಾಜು ಮಾಡಲು ಸಧ್ಯವಾಗಿಲ್ಲ. ಸ್ವಚ್ಛ ಭಾರತ ಯೋಜನೆಯಡಿಯಲ್ಲಿಕೇಂದ್ರ ಸರಕಾರ…
UN NETWORKS ಉಳ್ಳಾಲ: ತನ್ನನ್ನು ಸಹೋದರಿ ಮತ್ತು ಆಕೆಯ ಪತಿ ಸರಿಯಾಗಿ ನೋಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ ಹಿರಿಯ ನಾಗರಿಕನೋರ್ವ ದಂಪತಿಗೆ ಕಬ್ಬಿಣದ ರಾಡಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಗಂಭೀರ ಸ್ಥಿತಿಯಲ್ಲಿ ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ತೊಕ್ಕೊಟ್ಟು ಕಾಪಿಕಾಡು ನಿವಾಸಿ ಜೋಸೆಫ್ ಡಿಸೋಜ (64) ಎಂಬವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಿಗ್ಗೆ ಮೃತಪಟ್ಟಿದ್ದಾರೆ. ಕೊಲೆಯತ್ನ ಪ್ರಕರಣ ಇದೀಗ ಕೊಲೆ ಪ್ರಕರಣವಾಗಿ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮೃತರ ಪತ್ನಿ ಜಾನೆಟ್ ಡಿಸೋಜ ಗೆ ಚಿಕಿತ್ಸೆ ಮುಂದುವರಿದಿದ್ದು, ಆಕ ಚೇತರಿಸಿಕೊಳ್ಳುತ್ತಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿದೆ. ಆ.8 ರಂದು ಕಾಪಿಕಾಡಿನ ಮನೆಯಲ್ಲಿ ದಂಪತಿ ಮಲಗಿದ್ದ ಸಂದರ್ಭ ಅದೇ ಮನೆಯಲ್ಲಿ ವಾಸಿಸುತ್ತಿದ್ದ ಜಾನೆಟ್ ಅವರ ಹಿರಿಯ ಸಹೋದರ ಡೆನಿಸ್ (78) ಅವರು ಕಬ್ಬಿಣದ ರಾಡಿನಲ್ಲಿ ದಂಪತಿ ತಲೆಗೆ ಹೊಡೆದಿದ್ದರು. ಇಬ್ಬರ ಬೊಬ್ಬಿಡುವ ಸದ್ದು ಕೇಳಿ ಸ್ಥಳಕ್ಕೆ ಧಾವಿಸಿದ ಜಾನೆಟ್ ಅವರ ಕಿರಿಯ ಸಹೋದರ ಉಳ್ಳಾಲ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಇಬ್ಬರನ್ನು…
UN NETWORKS ಉಳ್ಳಾಲ: ಕೇರಳದಲ್ಲಿ ಶೇ.100 ಸಾಕ್ಷರತೆ ಇಂದು ನೆಲೆಯೂರಲು ಬ್ರಹ್ಮಶ್ರೀ ನಾರಾಯಣ ಗುರುಗಳು ಅಂದು ಜನಸಾಮಾನ್ಯರಿಗೆ ನೀಡಿದ ಜ್ಞಾನವೇ ಕಾರಣ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅಭಿಪ್ರಾಯಪಟ್ಟರು. ಅವರು ಸೋಮೇಶ್ವರ ಕೊಲ್ಯದ ಬ್ರಹ್ಮಶ್ರೀ ನಾರಾಯಣಗುರು ಧ್ಯಾನವಮಂದಿರ ಆಶ್ರಯದಲ್ಲಿ ಕೊಲ್ಯ ನಾರಾಯಣ ಗುರು ಮಂದಿರ ಇಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುವರ್ಯರ 164 ನೇ ಜನ್ಮದಿನಾಚರಣೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಜನರಲ್ಲಿ ಆಧ್ಯಾತ್ಮದ ಚಿಂತನೆ ಮೂಡಿಸುತ್ತಾ ದೇವರ ಭಯದೊಂದಿಗೆ ಜ್ಞಾನವನ್ನು ಮೂಡಿಸಿದರು. ಇದರಿಂದ ಎಲ್ಲರೂ ಜ್ಞಾನ ವೃದ್ಧಿಸಿಕೊಂಡ ಹಿನ್ನೆಲೆಯಲ್ಲಿ ಕೇರಳದಲ್ಲಿ ಹಿಂದೂ ಸಮಾಜ ಮತಾಂತರವಾಗದೆ ಉಳಿಯಿತು. ಇಂತಹ ಮತಾಂತರದಂತಹ ಪ್ರಕ್ರಿಯೆಗಳಿಂದ ಸಮಾಜದಲ್ಲಿ ವಿಂಗಡಣೆಗಳು ಜಾಸ್ತಿಯಾಗುತ್ತದೆ. ಆದರೆ ಎಲ್ಲಾ ಧರ್ಮಗಳ ಮಹಾಪುರುಷರ ವಿಚಾರಧಾರೆಗಳನ್ನು ಮೈಗೂಡಿಸಿಕೊಂಡು ಸಾಮರಸ್ಯವನ್ನು ಸಮಾಜದಲ್ಲಿ ನೆಲೆಯೂರಿಸಿದರು. ಈ ನಿಟ್ಟಿನಲ್ಲಿ ನಾರಾಯಣ ಗುರುಗಳ ಚಿಂತನೆಗಳು ಹಾಗೂ ಕಲ್ಪನೆಗಳನ್ನು ಮುಂದಿಟ್ಟುಕೊಂಡೇ ಡಾ| ಬಿ.ಆರ್ ಅಂಬೇಡ್ಕರ್ ದೇಶದ ಸಂವಿಧಾನವನ್ನು ರಚಿಸಿದ್ದಾರೆ. ಕತ್ತಲಲ್ಲಿ ಕೂಡಿದ್ದ ದೇಶವನ್ನು ಬೆಳಕಿನ ಕಿರಣಗಳಿಂದ ಬೆಳಗಿಸಿ ವಿಶ್ವಗುರುವಾಗಿದ್ದಾರೆ. ಸ್ವಾಭಿಮಾನ…
UN NETWORKS ತೊಕ್ಕೊಟ್ಟು: ಪ್ರಕೃತಿ ವಿಕೋಪ ತಡೆಗಟ್ಟಲು ಭಗವಂತನಿಂದ ಮಾತ್ರ ಸಾಧ್ಯ. ಆದರೆ ನೊಂದವರಿಗೆ ಸಹಾಯ, ಸಾಂತ್ವನ ಹೇಳುವುದು ಮಾನವ ಧರ್ಮ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು. ಕೊಡಗು ಮತ್ತು ಕೇರಳದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಹೆಲ್ಪ್ ಇಂಡಿಯಾ ವತಿಯಿಂದ ದಾನಿಗಳಿಂದ ಸಂಗ್ರಹಿಸಿದ ವಸ್ತುಗಳನ್ನು ರವಾನಿಸುವ ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ ಮಾತನಾಡಿದರು.ಪ್ರಕೃತಿ ವಿಕೋಪ ಹಿನ್ನೆಲೆಯಲ್ಲಿ ಎಲ್ಲ ಧರ್ಮೀಯರು ಒಗ್ಗಟು ಕಾಪಾಡಿಕೊಳ್ಳುವ ಮೂಲಕ ಸೌಹಾರ್ದ ವಾತಾವರಣ ಸೃಷ್ಟಿಯಾಗಿದೆ. ಇದು ನಿರಂತರವಾಗಿರಲಿ. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ಪೂರೈಸುವ ಸಂದರ್ಭ ಹೆಲ್ಪ್ ಇಂಡಿಯಾ ಫೌಂಡೇಶನ್ ಗುಣಮಟ್ಟಕ್ಕೆ ಆದ್ಯತೆ ನೀಡಿದೆ ಎಂದು ಶ್ಲಾಘಿಸಿದರು. ಕೇವಲ ಸಾಮಾಜಿಕ ಜಾಲತಾಣದಲ್ಲಿ ಹತ್ತು ದಿನಗಳ ಹಿಂದೆ ಮಾಡಿದ ಮನವಿಗೆ ಜನ ಅದ್ಭುತವಾಗಿ ಸ್ಪಂದಿಸುವ ಮೂಲಕ ವಸ್ತ್ರ, ಆಹಾರ, ಔಷಧ ನೀಡಿದ್ದಾರೆ. ಮುಂದಿನ ಮನೆ ಶುದ್ಧೀಕರಣ ಮಾಡಲು ಬಳಸುವಂತಹ ವಸ್ತುಗಳ ಅಗತ್ಯ ಇರುವ ಪರಿಕರ ಬೇಕಾಗಿದ್ದು ದಾನಿಗಳು ನೀಡಿದರೆ ಸ್ವೀಕರಿಸ್ತೇವೆ ಎಂದು ಹೆಲ್ಪ್ ಇಂಡಿಯಾ ಫೌಂಡೇಶನ್…
UN NETWORKS ಕೊಣಾಜೆ: ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಮತ್ತೊಮ್ಮೆ ಜಾತಿ, ಧರ್ಮ ಮೇಳೈಸುತ್ತಿದೆ. ಅಂತಹ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ, ಸಿದ್ಧಾಂತ ಪಾಲನೆಯಿಂದ ತಾರತಮ್ಯ ಹೋಗಲಾಡಿಸಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಸಮಾಜ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಡಾ. ಜಯರಾಜ್ ಅಮೀನ್ ಅಭಿಪ್ರಾಯಪಟ್ಟರು. ಕೊಣಾಜೆ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘದ ಆಶ್ರಯದಲ್ಲಿ ಸೋಮವಾರ ನಡೆದ ನಾರಾಯಣ ಗುರುಗಳ 164ನೇ ಗುರುಜಯಂತಿ ಪ್ರಯುಕ್ತ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಕೇರಳದಲ್ಲಿ ಕೆಳ ಜಾತಿಯವರು ದೇವಾಲಯ ಪ್ರವೇಶಿಸಬಾರದು. ಮಹಿಳೆಯರು ಎದೆಗೆ ವಸ್ತ್ರ ಹಾಕಬಾರದು ಎಂಬ ನಿಯಮ ಮೇಲ್ಜಾತಿಯ ಜನ ಅಳವಡಿಸಿದ್ದರು. ಅವರೊಡನೆ ಜಗಳ ಕಾಯದೆ ನಮ್ಮದೇ ಆದ ದೇವಾಲಯ ನಿರ್ಮಿಸಲು ನಾರಾಯಣ ಗುರುಗಳು ಪ್ರೇರಣೆ ನೀಡಿದ್ದರು. ಅದರ ಫಲವಾಗಿ ಕಳೆದ 150ವರ್ಷಗಳಿಂದ ಕೇರಳದಲ್ಲಿ ಬದಲಾವಣೆ ಕಂಡಿದ್ದು ಇಂದು ಸಮಾನತೆ ಕಾಣಲು ಸಾಧ್ಯವಾಗಿದೆ ಎಂದು ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸೇವಾ…
UN NETWORKS ತೊಕ್ಕೊಟ್ಟು: ತೊಕ್ಕೊಟ್ಟಿನ ಬ್ರಹ್ಮ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಭಾನುವಾರ ರಕ್ಷಾಬಂಧನ ಆಚರಣೆ ನಡೆಯಿತು. ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಂಚಾಲಕಿ ಬ್ರಹ್ಮ್ಮಕುಮಾರಿ ವಿಶ್ವೇಶ್ವರಿ ಮಾತನಾಡಿ ರಕ್ಷಾಬಂಧನದ ಮಹತ್ವ, ವರ್ತಮಾನದಲ್ಲಿ ನಡೆಯುತ್ತಿರುವ ಅಹಿತರ ಘಟನೆಗಳ ಬಗೆಯೂ ವಿವರಿಸುತ್ತಾ ಪರಮಾತ್ಮ ರಕ್ಷಣೆ ಅತೀ ಅವಶ್ಯ ಎಂದರು. ಕಾರ್ಯಕ್ರಮದಲ್ಲಿ ಪುರುಷೋತ್ತಮ ಅಂಚನ್, ರೋಟರಿ ಕ್ಲಬ್ ದೇರಳಕಟ್ಟೆ ಕಾರ್ಯದರ್ಶಿ ಜಯಪ್ರಕಾಶ್ ರೈ ಉಪಸ್ಥಿತರಿದ್ದರು. ರೋಟರಿ ಕ್ಲಬ್ ದೇರಳಕಟ್ಟೆ ಮಾಜಿ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಹಾಗೂ ವಿಕ್ರಂ ದತ್ತ ಉಪಸ್ಥಿತರಿದ್ದರು.
UN NETWORKS ಕೈರಂಗಳ: ಕೈರಂಗಳ ಪುಣ್ಯಕೋಟಿ ನಗರದ ಶಾರದಾಗಣಪತಿ ವಿದ್ಯಾಕೇಂದ್ರ ಮತ್ತು ಸ್ಥಳೀಯ ಸಂಘಟನೆಗಳ ಸಹಕಾರದಿಂದ ಕೊಡಗು ನೆರೆಸಂತ್ರಸ್ತ್ರರಿಗೆ ಶುದ್ಧ ಕುಡಿಯುವ ನೀರು ಕಳುಹಿಸಿಕೊಡಲಾಯಿತು. ಶಾರದಾಗಣಪತಿ ವಿದ್ಯಾಕೇಂದ್ರದ ಸಂಚಾಲಕರಾದ ಟಿ.ಜಿ.ರಾಜಾರಾಮ ಭಟ್ ಅವರು ಮಾತನಾಡಿ, ನೆರೆಸಂತ್ರಸ್ತರಿಗೆ ಕುಡಿಯುವ ನೀರಿನ ಅವಶ್ಯಕತೆ ಇದ್ದುದರ ಬಗ್ಗೆ ಅರಿತುಕೊಂಡು ಸ್ಥಳೀಯ ಅನೇಕ ಸಂಘಟನೆಗಳು ಒಟ್ಟು ಸೇರಿ ಶುದ್ಧ ಕುಡಿಯುವ ನೀರನ್ನು ಸಂಗ್ರಹಿಸಿದ್ದು ಶಾಲಾ ವಿದ್ಯಾರ್ಥಿಗಳ ಪರಿಶ್ರಮದಿಂದ ಕೊಡಗಿನ ಕಲ್ಲಗುಂಡಿ, ಸಂಪಾಜೆ, ಅರಂತೋಡು ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ. ಪ್ರಾಕೃತಿಕ ವಿಕೋಪಗಳು ನಡೆದಾಗ ಸಾಂಕ್ರಾಮಿಕ ರೋಗಗಳು ಹರಡುವ ಎಲ್ಲಾ ಸಾಧ್ಯತೆಗಳು ಹೆಚ್ಚಿದ್ದು ಆ ನಿಟ್ಟಿನಲ್ಲಿ ಸಂತ್ರಸ್ತರಿಗೆ ಶುದ್ದ ಕುಡಿಯುವ ನೀರು ಸಂಜೀವಿನಿಯಾಗಲಿದೆ. ಸಮಾಜದ ಕಷ್ಟಗಳಿಗೆ ಎಂದಿಗೂ ಸ್ಪಂದಿಸಲು ನಾವುಗಳು ಸಿದ್ದ ಎಂದರು. ಸಂಸ್ಥೆಯ ಪ್ರಾಂಶುಪಾಲರಾದ ದಿವ್ಯದೀಪ, ಉಪನ್ಯಾಸಕರಾದ ಶ್ರೀಹರಿ, ಸೋಮಶೇಖರ್, ಯೋಗಿತ, ಸ್ಥಳೀಯ ಮುಖಂಡರಾದ ವಿಜೇಶ್ ನಾಯ್ಕ್, ಜಯಂತ್ ಪಾದಲ್ಪಾಡಿ, ಉದಯ ಪಾದಲ್ಪಾಡಿ, ಸಂತೋಷ್, ಸುಖೇಶ್, ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

