UN NETWORKS ತೊಕ್ಕೊಟ್ಟು: ಕಾರ್ಮಿಕರ ಬೇಡಿಕೆಗಳ ಈಡೇರಿಕೆಗಾಗಿ ಹಾಗೂ ಖಾಸಗೀಕರಣ, ಗುತ್ತಿಗೆ ಪದ್ಧತಿ , ನಿಗದಿತ ಅವಧಿ ಉದ್ಯೋಗ ದಂತಹ ಕೇಂದ್ರ ಸರಕಾರದ ಕ್ರಮಗಳನ್ನು ವಿರೋಧಿಸಿ ಜ.8 ಮತ್ತು 9 ರಂದು ಎರಡು ದಿನಗಳ ಕಾಲ ನಡೆಯಲಿರುವ ಅಖಿಲ ಭಾರತ ಮಹಾಮುಷ್ಕರಕ್ಕೆ ಎಲ್ಲಾ ವರ್ಗದ ಕಾರ್ಮಿಕರು ಬೆಂಬಲಿಸಬೇಕು ಎಂದು ಇಂಟಕ್ ಕಾರ್ಯದರ್ಶಿ ಸುರೇಶ್ ಚಂದ್ರ ಶೆಟ್ಟಿ, ಜ.8 ಮತ್ತು 9 ರಂದು ಎರಡು ದಿನಗಳ ಕಾಲ ಅಖಿಲ ಭಾರತ ಮಹಾಮುಷ್ಕರದ ಯಶಸ್ವಿಗಾಗಿ ದ.ಕ ಜಿಲ್ಲಾ ಮಟ್ಟದ ವಾಹನ ಪ್ರಚಾರ ಜಾಥಾವನ್ನು ತೊಕ್ಕೊಟ್ಟುವಿನಲ್ಲಿ ಸ್ವಾಗತಿಸಿ ಮಾತನಾಡಿದರು. 48 ಗಂಟೆಗಳ ಕಾಲ ದೇಶವನ್ನು ಬಂದ್ ನಡೆಸಿ ಪ್ರಧಾನಿ ಮೋದಿಗೆ ಬಿಸಿ ಮುಟ್ಟಿಸುವ ಕಾರ್ಯ ಕಾರ್ಮಿಕ ವರ್ಗದಿಂದ ಆಗಬೇಕಿದೆ. ಜನಸಾಮಾನ್ಯರು, ರಿಕ್ಷಾ ಚಾಲಕರು ಹಾಗೂ ಮಾಲಕರು ಬೆಂಬಲಿಸಬೇಕಿದೆ. ರೈತರ, ಕಾರ್ಮಿಕರ ಏಳಿಗೆ ಹೆಸರಿನಲ್ಲಿ ಅಧಿಕಾರ ಪಡೆದುಕೊಂಡ ಕೇಂದ್ರ ಸರಕಾರ, ಬಂಡವಾಳಶಾಹಿಗಳ ಪರವಾಗಿ ಕಾರ್ಯ ನಿರ್ವಹಿಸುತ್ತಿದೆ. ವಿವಿಧ ಬೇಡಿಕೆಗಳನ್ನು ಕೇಂದ್ರ ಸರಕಾರದ ಮುಂದಿಟ್ಟರೂ ಯಾವುದೂ ಈಡೇರಿಕೆಯಾಗಿಲ್ಲ. ಈ…
Author: UllalaVani
UN NETWORKS ಕೋಟೆಕಾರು: ಬೈಕ್ ಅಪಘಾತದಲ್ಲಿ ಮೂವರು ಸಿಪಿಎಂ ಕಾರ್ಯಕತರು ಗಾಯಗೊಂಡಿರುವ ಘಟನೆ ಕೋಟೆಕಾರು ಬೀರಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬುಧವಾರ ಸಂಜೆ ವೇಳೆ ಸಂಭವಿಸಿದೆ. ಸಿಪಿಎಂ ಉಳ್ಳಾಲ ವಲಯ ಕಾರ್ಯದರ್ಶಿ ಕೃಷ್ಣಪ್ಪ ಸಾಲ್ಯಾನ್, ವಲಯ ಸದಸ್ಯ ಸುಂದರ್ ಕುಂಪಲ, ಗ್ರಾಮ ಸದಸ್ಯ ಸೀತಾರಾಮ ಪೂಜಾರಿ ಮಾಡೂರು ಗಾಯಗೊಂಡವರು. ಪಕ್ಷದ ಕಾರ್ಯಕರ್ತರ ಭೇಟಿ ಕಾರ್ಯಕ್ರಮದಲ್ಲಿ ಭಾಗವಹಿಸಿ ತೊಕ್ಕೊಟ್ಟು ಕಡೆಗೆ ತೆರಳಲು ಹೆದ್ದಾರಿ ದಾಟುವ ಸಂದರ್ಭ ತಲಪಾಡಿ ಕಡೆಯಿಂದ ಬರುತ್ತಿದ್ದ ಬೈಕ್ ಮೂವರಿಗೆ ಢಿಕ್ಕಿ ಹೊಡೆದಿದೆ. ಮೂವರನ್ನು ದೇರಳಕಟ್ಟೆ ಆಸ್ಪತ್ರೆಗೆ ಸ್ಥಳೀಯರು ಹಾಗೂ ಪಕ್ಷದ ಮುಖಂಡರು ದಾಖಲಿಸಿದ್ದು, ಪ್ರಾಥಮಿಕ ಚಿಕಿತ್ಸೆ ಪಡೆದು ವಾಪಸ್ಸಾಗಿದ್ದಾರೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
UN NETWORKS ಉಳ್ಳಾಲ: ಬ್ರಹ್ಮಶ್ರೀ ಬಿಲ್ಲವ ವೇದಿಕೆ ಉಳ್ಳಾಲ ಇದರ ಅಧ್ಯಕ್ಷರಾಗಿ ಕೆ.ಟಿ. ಸುವರ್ಣ ಆಯ್ಕೆಯಾಗಿದ್ದಾರೆ. ಕಾರ್ಯಾಧ್ಯಕ್ಷರಾಗಿ ಸತೀಶ್ ಕರ್ಕೇರಾ, ಪ್ರಧಾನ ಕಾರ್ಯದರ್ಶಿಯಾಗಿ ಜೀವನ್ ಕುಮಾರ್ ತೊಕ್ಕೊಟ್ಟು, ಕೋಶಾಧಿಕಾರಿಯಾಗಿ ಲಕ್ಷ್ಮಣ ಪೂಜಾರಿ, ಉಪಾಧ್ಯಕ್ಷರಾಗಿ ಹರೀಶ್ ಮುಂಡೋಳಿ, ಪ್ರಧಾನ ದತ್ತು ಸಂಚಾಲಕರಾಗಿ ಆನಂದ ಕೆ. ಅಸೈಗೋಳಿ, ಪ್ರಧಾನ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರವೀಣ್ ಎಸ್. ಕುಂಪಲ, ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ ಗೋಪಿನಾತ್ ಬಗಂಬಿಲ, ಪ್ರಧಾನ ಕ್ರೀಡಾ ಕಾರ್ಯದರ್ಶಿಯಾಗಿ ರಾಜೇಶ್ ಕೆರೆಬೈಲು, ವಕ್ತಾರರಾಗಿ ಹರೀಶ್ ಅಂಬ್ಲಮೊಗರು, ದತ್ತು ಸಂಚಾಲಕರಾಗಿ ರಾಜೀವ ಮಾಸ್ಟರ್, ಕಾರ್ಯದರ್ಶಿಯಾಗಿ ರವೀಂದ್ರ ಕುಕ್ಕುದಕಟ್ಟೆ, ಸಾಂಸ್ಕೃತಿಕ ಕಾರ್ಯದರ್ಶಿಗಳಾಗಿ ಕೃಷ್ಣಪ್ಪ ಕಿನ್ಯ, ಲೋಹಿತ್ ಪಜೀರ್, ಶೇಖರ್ ಕೊಂಡೆವೂರ್, ಕ್ರೀಡಾ ಕಾರ್ಯದರ್ಶಿಯಾಗಿ ರವಿ ಸುವರ್ಣ, ಆರ್.ಕೆ. ಉದಯ, ಶೇಖರ್ ಕನೀರುತೋಟ, ಸಂಘಟನಾ ಕಾರ್ಯದರ್ಶಿಗಳಾಗಿ ಚಂದ್ರಹಾಸ್ ಪಂಡಿತ್ ಹೌಸ್, ರವಿ ಸುವರ್ಣ, ಭಗವಾನ್ ದಾಸ್ ತೊಕ್ಕೊಟ್ಟು, ಯಶೋಧರ ಕನೀರುತೋಟ, ಕಿರಣ್ ಸುವರ್ಣ, ಹರೀಶ್ ಭಂಡಾರಮನೆ, ರಾಜೇಶ್ ಪ್ರಕಾಶ್ ನಗರ, ರವಿ ಗುಡ್ಡೆಮಾರ್, ಜಗದೀಶ್ ಕೆರೆಬೈಲ್, ಮೋಹನ್ ಸೇವಂತಿಗುಡ್ಡೆ, ರಾಕೇಶ್…
UN NETWORKS ಉಳ್ಳಾಲ: ಅಯ್ಯಪ್ಪ ಮಾಲಾಧಾರಿಯಾಗಿ ಕಳೆದ 25ವರ್ಷಗಳಿಂದ ಶಬರಿಮಲೆ ಕ್ಷೇತ್ರಕ್ಕೆ ತೆರಳಿ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುತ್ತಾ ಬಂದಿರುವ, ಭಾರತೀಯ ತೀಯಾ ಸಮಾಜದ ರಾಜೇಶ್ ಸ್ವಾಮಿ ಕುಂಪಲ ಅವರು ತನ್ನ 25ನೇ ವರ್ಷದ ಯಾತ್ರೆಯನ್ನು ಶಾಶ್ವತವಾಗಿ ನಪಿಸಿಕೊಳ್ಳುವ ದೃಷ್ಟಿಯಿಂದ ಈ ಬಾರಿ ಶ್ರೀ ಶಿರಡಿ ಕ್ಷೇತ್ರದಿಂದ ಸುಮಾರು 1500ಕಿ.ಮೀ. ದೂರದ ಶಬರಿಮಲೆ ಕ್ಷೇತ್ರಕ್ಕೆ ಕಾಲ್ನಡಿಗೆಯಲ್ಲಿ ಪ್ರಯಾಣ ನಡೆಸುವ ಸಂಕಲ್ಪ ಮಾಡಿದ್ದು, ಅದರಂತೆ ಪಾದಯಾತ್ರೆ ಮಾಡುತ್ತಾ ಬುಧವಾರ ಶ್ರೀ ಮಂಗಳಾದೇವಿ ಸನ್ನಿಧಿಗೆ ತಲುಪಿದ್ದಾರೆ. ಈ ಸಂದರ್ಭ ಭಾರತೀಯ ತೀಯಾ ಸಮಾಜದ ಮುಖಂಡರು ಸ್ಥಳಕ್ಕೆ ಆಗಮಿಸಿ ಅವರ ಪ್ರಯತ್ನ ಶ್ಲಾಘಿಸಿ, ಶಾಲು ಹೊದಿಸಿ ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಿ ತಮ್ಮ ಸಮುದಾಯಯದವರೇ ಆದ ರಾಜೇಶ್ ಸ್ವಾಮಿ ಕಳೆದ ಎರಡು ವರ್ಷಗಳಿಂದ ಪಾದಯಾತ್ರೆ ಮೂಲಕ ಶಬರಿಮಲೆಗೆ ತೆರಳುತ್ತಿದ್ದು ಅವರ ಮುಂದಿನ ಯಾತ್ರೆ ಸುಖಕರವಾರಲಿ ಎಂದು ಶುಭ ಹಾರೈಸಿದರು. ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿಯ ಉಪಾಧ್ಯಕ್ಷ ರಾಜಗೋಪಾಲ್ ಜೆಪ್ಪು, ಉಳ್ಳಾಲ ವಲಯ ಅಧ್ಯಕ್ಷ ಎಂ.…
UN NETWORKS ಕೈರಂಗಳ: ಬಂಟ್ವಾಳ ತಾಲೂಕಿನ ಕೈರಂಗಳದ ಶಾರದಾ ಗಣಪತಿ ವಿದ್ಯಾಕೇಂದ್ರದ ಆಶ್ರಯದಲ್ಲಿ ಅಂತರ್ ರಾಜ್ಯ ಮಟ್ಟದ ಗ್ರಿಪ್ ಹಗ್ಗ ಜಗ್ಗಾಟ ಪಂದ್ಯಾಟನಡೆಯಿತು. ಪಂದ್ಯಾಕೂಟವನ್ನು ಶಾರದಾ ಗಣಪತಿ ಸಂಸ್ಥೆಯ ಪ್ರಾಂಶುಪಾಲ ದಿವ್ಯದೀಪ ಉದ್ಘಾಟಿಸಿದರು.ಕಾರ್ಯಕ್ರಮದಲ್ಲಿ ಸಂಸ್ಥೆಯ ಸಂಚಾಲಕ ಟಿ.ಜಿ ರಾಜಾರಾಮ ಭಟ್ ಅಧ್ಯಕ್ಷತೆ ವಹಿಸಿದ್ದರು.ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಯಶವಂತ ದೇರಾಜೆ, ಸದಸ್ಯ ನವೀನ್ ಪಾದಲ್ಪಾಡಿ, ಸುಂದರ ಪೂಜಾರಿ ಚೇಳೂರು, ಪ್ರಶಾಂತ್ ಗಟ್ಟಿ, ರಮೇಶ್ ಕುರ್ನಾಡು, ಶುಭ ಕೆ.ಹೆಚ್, ಗೋಪಾಲ ಮಿತ್ತಕೋಡಿ ಹಾಗೂ ದೀಪಕ್ ಕೋಟ್ಯಾನ್ ಸಜಿಪ ಭಾಗವಹಿಸಿದ್ದರು. ಪಂದ್ಯಾಕೂಟದಲ್ಲಿ ಅಂತರ್ ರಾಜ್ಯದ ಒಟ್ಟು 26ತಂಡಗಳು ಭಾಗವಹಿಸಿ ಎಸ್‍ಜಿವಿಕೆ ಪ್ರಥಮ, ಶ್ರೀರಾಮ ಭಕ್ತಾಂಜನೇಯ ಬಿ.ಸಿ.ರೋಡ್ ದ್ವಿತೀಯ, ಆಂಜನೇಯ ಕಣ್ವತೀರ್ಥ ತೃತೀಯ, ಅರಸು ಕುರಿಯಡಿತ್ತಾಯ ಮಜಿ ಬೋಳ್ಯಾರು ಚತುರ್ಥ, ಜೈ ಭಾರ್ಗವ ಕುಂಜರಗಿರಿ ಪಂಚಮ, ಶ್ರೀರಾಮ ಬೆಜ್ಜ ಷಷ್ಟಮ, ಯುವಕ ಮಂಡಲ ನಡುಮೊಗರು ಸಪ್ತಮ ಪ್ರಶಸ್ತಿಗಳನ್ನು ಪಡೆದುಕೊಂಡರು.ಕಾರ್ಯಕ್ರಮದ ಸಮಾರೋಪದಲ್ಲಿ ವಿಜಯ್ ರೈ ಚೇಳೂರು, ಪ್ರಜಿತ್ ಶೆಟ್ಟಿ, ಮಾಧವ ಬೆಳ್ಚಾಡ, ಗಣೇಶ್ ಬೋಳ್ಯಾರು, ಚಂದ್ರಶೇಖರ ಮಜಿ…
UN NETWORKS ಉಳ್ಳಾಲ: ವಿದ್ಯಾರ್ಥಿಗಳನ್ನು ಗದ್ದೆ ಕಾರ್ಯದಲ್ಲಿ ತೊಡಗಿಸಿಕೊಂಡು ಕೃಷಿಕರಿಗೆ ಸ್ಫೂರ್ತಿಯನ್ನು ತುಂಬಿಸುವ ಕಾರ್ಯ ಜಿಲ್ಲೆಯಾದ್ಯಂತ ಆಗುತ್ತಲೇ ಇದೆ. ಆದರೆ ಇದೀಗ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ದಕ್ಷಿಣ ಕನ್ನಡ ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ನೇತೃತ್ವದಲ್ಲಿ ಜಿಲ್ಲೆಯ 30 ಮಂದಿ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ವಿದ್ಯಾರ್ಥಿಗಳು ಬೆಳೆಸಿದ ಭತ್ತದ ಪೈರು ಕಟಾವಿನಲ್ಲಿ ಕೈಜೋಡಿಸುವ ಮೂಲಕ ಮಾದರಿಯಾದರು. ಅಂಬಿಕಾರೋಡ್ ಬಾರ್ದೆ ಸುಮಾರು ಎರಡು ಎಕರೆ ಗದ್ದೆಗಳಲ್ಲಿ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸೇರಿಕೊಂಡು ನಾಟಿ ಕಾರ್ಯ ನಡೆಸಿತ್ತು. ಒಂದು ಗದ್ದೆಯಲ್ಲಿ ಗೋರಿಗುಡ್ಡ ಕಿಟೆಲ್ ಮೆಮೋರಿಯಲ್ ಕಾಲೇಜಿನ ಸುಮಾರು 40 ಮಂದಿ ವಿದ್ಯಾರ್ಥಿಗಳು ಮೂರು ತಿಂಗಳ ಹಿಂದೆ ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದರು. ಅದರ ಭತ್ತದ ಪೈರಿನ ಕಟಾವಿನಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಕೈಜೋಡಿಸಿದರು. ಬೆಳಿಗ್ಗೆ 8 ಗಂಟೆಯಿಂದ ಕಟಾವು ಕಾರ್ಯದಲ್ಲಿ ಭಾಗವಹಿಸಿದ ಸಂಘದ ಕಾರ್ಯಕರ್ತರು ಮಧ್ಯಾಹ್ನದವರೆಗೆ ಸುಡುಬಿಸಿಲಿನಲ್ಲಿ ಭಾಗವಹಿಸಿದರು. ಹಲವರು ಕೃಷಿಕರ ಮಕ್ಕಳೇ ಆಗಿದ್ದಾರೆ. ಆದುದರಿಂದ…
UN NETWORKS ಕೊಣಾಜೆ: ಜನಪ್ರತಿನಿಧಿಗಳು ಆಯಾ ಪ್ರದೇಶದ ಜನರೊಂದಿಗೆ ಸೌಹಾರ್ದತೆಯ ಮೂಲಕ ಬೆರೆಯುವುದೊಂದಿಗೆ ಅವರ ಸುಖ; ದುಃಖಗಳಲ್ಲಿ ಭಾಗಿಯಾಗಬೇಕು. ಸಮಾಜದ ಅಭಿವೃದ್ಧಿಯಲ್ಲಿ ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ ಎಂದು ಅಲ್ ಸಬೀಲ್ ಸಂಸ್ಥೆಯ ಉಸ್ಮಾನ ಸಅದಿ ಪಟ್ಟೋರಿ ಅವರು ಹೇಳಿದರು. ಅವರು ಮಂಗಳೂರಿನ ಸರಕಾರಿ ನೌಕರರ ಸಂಘದ ಸಭಾಭವನದಲ್ಲಿ ಮಂಗಳವಾರ ನಡೆದ ಹಜ್ ಉಮ್ರಾ ಯಾತ್ರಿಗಳಿಗೆ ಮಾರ್ಗದರ್ಶನ ಶಿಬಿರದಲ್ಲಿ ಕೊಣಾಜೆ ಪಂಚಾಯಿತಿ ಅಧ್ಯಕ್ಷರಾಗಿ ನೂತನವಾಗಿ ಆಯ್ಕೆಯಾದ ನಝರ್ ಷಾ ಪಟ್ಟೋರಿ ಅವರನ್ನು ಸನ್ಮಾನಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಅಸಯ್ಯದ್ ಅಬ್ದುಸಲಾಂ ತಂಙಳ್, ಅಬ್ದುಲ್ ರಹಿಮಾನ್ ಮುಸ್ಲಿಯಾರ್, ಹಂಝ ನಾಝೀರ್, ಲತೀಫ್ ಮದನಿ ಕಲ್ಲಡ್ಕ, ಮುಫಿಯಾ ಮುಸ್ಕಾಕ್, ಸಿರಾಜ್ ಮೊದಲಾದವರು ಉಪಸ್ಥಿತರಿದ್ದರು.
UN NETWORKS ಕುಲಶೇಖರ: ಸದಾ ಮೊಬೈಲ್, ವೀಡಿಯೋ ಗೇಮ್ ಗಳಲ್ಲಿ ತೊಡಗುವ ನಗರದ ವಿದ್ಯಾರ್ಥಿಗಳು ಗೋಲಿ ಆಟ, ಲಗೋರಿ, ಕಣ್ಣಾಮುಚ್ಚಾಲೆ ಗ್ರಾಮೀಣ ಆಟಗಳಲ್ಲಿ ಭಾಗವಹಿಸುವ ಮೂಲಕ ಕುಲಶೇಖರ ಚರ್ಚ್‍ನ ಸಂತ ರೀತಾ ವಾಳೆಯ ಮಕಾಳೆಯಲ್ಲಿ ಜರಗಿದ ವಿಶಿಷ್ಟವಾದ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗವಹಿಸಿದರು. ಮಾಂಡ್ ಸೊಭಾಣ್ ಹಾಗೂ ತ್ರಿವೇಣಿ ಆಯುರ್ವೇದದ ವತಿಯಿಂದ ಕ್ರಿಸ್ಮಸ್ ಸಂಭ್ರಮವು ಮಕಾಳೆಯಲ್ಲಿ ರವಿವಾರ ನಡೆಯಿತು. ಕ್ರಿಸ್ಮಸ್ ಮರದ ದೀಪಗಳನ್ನು ಪ್ರಜ್ವಲಿಸಿ ಮಾತನಾಡಿದ ಮಾಜಿ ಮೇಯರ್ ಅಬ್ದುಲ್ ಅಝೀಝ್ ಇಂದಿನ ಕಾಲದಲ್ಲಿ ಸರ್ವ ಧರ್ಮೀಯರನ್ನೂ ಒಗ್ಗೂಡಿಸಿ ನಡೆಸುವ ಇಂತಹ ಸಂಭ್ರಮಗಳ ಅಗತ್ಯವಿದೆ. ಇದರಿಂದ ಸೌಹಾರ್ದ ಬೆಳೆಯಲಿದೆ ಎಂದರು.ಕುಸ್ವಾರ್ ತಿಂಡಿಗಳನ್ನು ತೆರೆದು ಹಂಚುವ ಪ್ರಕ್ರಿಯೆಗೆ ಚಾಲನೆ ನೀಡಿದ ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಯೇಸು ಬಡವರಿಗೋಸ್ಕರ, ನ್ಯಾಯ ವಂಚಿತರಿಗೋಸ್ಕರ ಶ್ರಮಿಸಿದರು. ಕ್ರಿಸ್ಮಸ್ ಹಬ್ಬದ ನೈಜ ಸಂದೇಶವನ್ನು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಬೇಕು ಎಂದು ಕರೆ ನೀಡಿದರು. ಸೌಹಾರ್ದ ಆಚರಣೆ : ವೇದಿಕೆಯಲ್ಲಿ ನಡೆದ ಕ್ರಿಸ್ ಮಸ್ ಕ್ಯಾರಲ್ಸ್ , ಕೊಂಕಣಿ ನಾಟಕ,…
UN NETWORKS ತೊಕ್ಕೊಟ್ಟು : ಲಾರಿಯೊಂದು ಟ್ರಾಫಿಕ್ ಪೊಲೀಸರ ಸೂಚನೆಯಂತೆ ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಚರಂಡಿ ಮೇಲೆ ನಿಲ್ಲಿಸುತ್ತಿದ್ದಂತೆ, ಚರಂಡಿ ಮುಚ್ಚಿದ್ದ ಕಾಂಕ್ರೀಟ್ ಸ್ಲಾಬ್ ತುಂಡಾಗಿ ಲಾರಿ ಮಗುಚಿ ಅದರಡಿಗೆ ಕ್ಲೀನರ್ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದೆ. ಘಟನೆಯಿಂದ ಉದ್ರಿಕ್ತ ಗುಂಪು ರಾಷ್ಟ್ರೀಯ ಹೆದ್ದಾರಿ ಕಳಪೆ ಕಾಮಗಾರಿ ಮತ್ತು ಟ್ರಾಫಿಕ್ ಪೊಲೀಸರನ್ನುಅಮಾನತುಗೊಳಿಸುವಂತೆ ಆಗ್ರಹಿಸಿ ಒಂದು ಗಂಟೆಯ ಕಾಲ ಹೆದ್ದಾರಿ ತಡೆ ನಡೆಸಿ ಪ್ರತಿಭಟಿಸಿದ್ದಾರೆ. ಶಿವಮೊಗ್ಗ ಶಿಕಾರಿಪುರ ನಿವಾಸಿ ವಸಂತ ಕುಮಾರ್ (25) ಮೃತಪಟ್ಟವರು. ಕಾರ್ಕಳ ಕಡೆಯಿಂದ ಉಳ್ಳಾಲದ ಮೀನಿನ ತೈಲ ತೆಗೆಯುವ ಕಾರ್ಖಾನೆಗೆ ಕಟ್ಟಿಗೆ ಸಾಗಾಟ ನಡೆಸುತ್ತಿದ್ದ ಲಾರಿ ಅಪಘಾತ ಸಂಭವಿಸಿದೆ. ತೊಕ್ಕೊಟ್ಟು ಜಂಕ್ಷನ್‍ನಲ್ಲಿ ಸಂಚಾರಿ ಪೊಲೀಸರು ಉಳ್ಳಾಲ ಕಡೆಗೆ ಬರುತ್ತಿದ್ದ ಲಾರಿಯನ್ನು ನಿಲ್ಲಿಸುವಂತೆ ಸೂಚಿಸಿದ್ದರು. ಅದರಂತೆ ಲಾರಿ ಚಾಲಕ ಸೂಚಿಸಿದ ಸ್ಥಳದಿಂದ ಅರ್ಧ ಕಿ.ಮೀ ಎದುರು ಬಂದು ರಾಷ್ಟ್ರೀಯ ಹೆದ್ದಾರಿ ಬದಿಯ ಚರಂಡಿಗೆ ಹಾಸಲಾದ ಕಾಂಕ್ರೀಟ್ ಮೇಲೆ ಲಾರಿಯನ್ನು ನಿಲ್ಲಿಸಲು ಮುಂದಾಗಿದ್ದರು. ಕಾಂಕ್ರೀಟ್ ಸ್ಲ್ಯಾಬ್ ತುಂಡಾಗಿ…
UN NETWORKS ಕೊಣಾಜೆ: ಕೊಣಾಜೆ ಗ್ರಾಮದ ಬೊಳ್ಮ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಸಂಪರ್ಕ ರಸ್ತೆ ಕಾಂಕ್ರೀಟ್ ಕಾಮಗಾರಿಗೆ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ ಸೋಮವಾರ ಶಿಲಾನ್ಯಾಸಗೈದರು. ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು ಆ ನಿಟ್ಟಿನಲ್ಲಿ ಸಚಿವರಲ್ಲಿ ಮಾಡಿದ ಮನವಿ ಮೇರೆಗೆ ತಕ್ಷಣ ಅನುದಾನ ನೀಡಿರುವುದರಿಂದ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು ಹತ್ತು ಲಕ್ಷ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಸಚಿವರು ಜಾತ್ಯಾತೀತ ನೆಲೆಯಲ್ಲಿಕಾರ್ಯಾಚರಿಸುತ್ತಿದ್ದು ಮಸೀದಿ, ಚರ್ಚ್, ದೇವಸ್ಥಾನಗಳಿಗೆ ಅನುದಾನ ನೀಡಿದ್ದಾರೆ. ಉಳ್ಳಾಲ್ತಿ ಅಮ್ಮನವರ ಕ್ಷೇತ್ರದ ಕೆಲಸಕ್ಕಾಗಿ ಐದು ಲಕ್ಷ ರೂ. ಅನುದಾನದ ಜೊತೆಗೆ ಮರದ ವ್ಯವಸ್ಥೆ ಮಾಡುವ ಭರವಸೆ ನೀಡಿದ್ದಾರೆ ಎಂದರು. ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಕಲ್ಲಿಮಾರ್, ಕೋಶಾಕಾರಿ ರವೀಂದ್ರ ಬಂಗೇರ, ಕೊಣಾಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ನಝರ್ ಷಾ ಪಟ್ಟೋರಿ, ಮಾಜಿ ಅಧ್ಯಕ್ಷ ಶೌಕತ್ ಅಲಿ, ಅಚ್ಚುತ ಗಟ್ಟಿ, ಮಾಜಿ ಉಪಾಧ್ಯಕ್ಷ ರಾಜಾರಾಮ…

