UN NETWORKS ತೊಕ್ಕೊಟ್ಟು: ತೊಕ್ಕೊಟಿನ ಭಗತ್ ಸಿಂಗ್ ಸೇವಾ ಪ್ರತಿಷ್ಠಾನ ಮತ್ತು ಉಳ್ಳಾಲ ನಗರಸಭೆಯ ಜಂಟಿ ಆಶ್ರಯದಲ್ಲಿ ತೊಕ್ಕೊಟು ಬಸ್ಸು ನಿಲ್ದಾಣ ಮತ್ತು ಆಸುಪಾಸು ಸ್ವಚ್ಛತಾ ಅಭಿಯಾನ ಕಾರ್ಯಕ್ರಮ ಭಾನುವಾರ ನಡೆಯಿತು. ಉಳ್ಳಾಲ ನಗರಸಭೆಯ ಹಿರಿಯ ಆರೋಗ್ಯಕಾರಿ ಜಯಶಂಕರ್, ಆರೋಗ್ಯ ನಿರೀಕ್ಷಕರು ರಾಜೇಶ್, ಭಗತ್ ಸಿಂಗ್ ಸೇವಾ ಪ್ರತಿಷ್ಠಾನದ ಸ್ಥಾಪಕಧ್ಯಕ್ಷ ಜೀವನ್ ಕುಮಾರ್ ತೊಕ್ಕೊಟು, ಅಧ್ಯಕ್ಷ ರಾಕೇಶ್ ಬೈಪಾಸ್, ನಗರಸಭೆ ಸದಸ್ಯರಾದ ರಾಜೇಶ್ ಯು.ಬಿ., ಪ್ರಧಾನ ಕಾರ್ಯದರ್ಶಿ ಗಣೇಶ್ ಕಾಪಿಕಾಡ್, ಹರೀಶ್ ಅಂಬ್ಲಮೊಗರು, ನವೀನ್ ಎ.ಕೆ., ವಿಶ್ವನಾಥ ಶೆಟ್ಟಿ, ಗಂಗಾಧರ್, ದಾಮೋದರ್ ನಡಾರ್, ರಾಜೇಂದ್ರ, ನಗರಸಭೆಯ ಅಂಗಾರ, ಪೌರ ಕಾರ್ಮಿಕರು ಹಾಗೂ ಪ್ರತಿಷ್ಠಾನದ ಸದಸ್ಯರು ಭಾಗವಹಿಸಿದ್ದರು.
Author: UllalaVani
UN NETWORKS ತಲಪಾಡಿ: ಗ್ರಾಮೀಣ ಭಾರತದಲ್ಲಿ ಅವಿಭಕ್ತ ಕುಟುಂಬಗಳು ಕಣ್ಮರೆಯಾಗುತ್ತಿದ್ದು ಅದರೊಂದಿಗೆ ಕೃಷಿಜೀವನವೂ ಕಡಿಮೆಯಾಗುತ್ತಿದ್ದು, ಇಂದಿನ ರೋಗಯುಕ್ತ ಸಮಾಜಕ್ಕೆ ನಾವು ಸೇವಿಸುವ ವಿಷಯುಕ್ತ ಆಹಾರವೇ ಕಾರಣವಾಗಿದೆ. ಆರೋಗ್ಯಯುಕ್ತ ಸಮಾಜ ನಿರ್ಮಾಣವಾಗಬೇಕಾದರೆ ಕೃಷಿಯತ್ತ ಯುವಜನರು ಆಕರ್ಷಿತರಾಗಬೇಕಾಗಿದೆ ಎಂದು ಮಂಗಳೂರಿನ ಶಾರದಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಅಭಿಪ್ರಾಯಪಟ್ಟರು. ತಲಪಾಡಿ ದೇವಿನಗರದ ಶಾರದಾ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್‍ನ ಸಭಾಂಗಣದಲ್ಲಿ ಶನಿವಾರ ನಡೆದ ರೈತರ ದಿನಾಚರಣೆಯಲ್ಲಿ ಪ್ರಗತಿಪರ ರೈತ ದಂಪತಿಗಳಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು.ಹಿಂದೆ ದೈನಂದಿನ ವಸ್ತುಗಳನ್ನು ನಾವೇ ಬೆಳೆಸುತ್ತಿದ್ದವು. ಪ್ರತಿಯೊಬ್ಬರ ಮನೆಯಲ್ಲೂ ಗೋ ಸಂತತಿ ಇತ್ತು. ನಮ್ಮ ಹರಿಯರು ಎಂತಹ ಕಠಿಣ ಪರಿಸ್ಥಿತಿಯಲ್ಲೂ ಕೃಷಿಯಿಂದ ವಿಮುಖರಾಗಿಲ್ಲ ಆದ್ದರಿಂದ ಅವರು ತಮ್ಮ ಜೀವನವನ್ನು ಉತ್ತಮ ರೀತಿಯಲ್ಲಿ ಬಾಳಿ ಬದುಕಿದ್ದರು. ಆದರೆ ಇಂದು ರೈತರಲ್ಲಿ ಕೃಷಿ ಮಾಡಿದರೆ ಲಾಭವಿಲ್ಲ ಎನ್ನುವ ಮನಸ್ಥಿತಿ ನಿರ್ಮಾಣವಾಗಿದೆ. ಪ್ರತೀ ವಸ್ತುವಿಗೆ ಅಂಗಡಿಗೆ ಹೋಗುವ ಸ್ಥಿತಿಯಿಂದ ನಾವು ವಿಷಯುಕ್ತ ಆಹಾರ ಸೇವಿಸುವಂತಾಗಿದೆ. ಈ ನಟ್ಟಿನಲ್ಲಿ ಯುವಜನತೆ ಕೃಷಯತ್ತ ಮುಖ…
UN NETWORKS ಕೊಣಾಜೆ: ನಮ್ಮಲ್ಲಿ ನಿರ್ಮಲವಾದ ಮನಸ್ಸು ಇದ್ದರೆ ನಮ್ಮ ಸಮಾಜವನ್ನು ಕೂಡಾ ನಾವು ಸ್ವಚ್ಚವಾಗಿಡಲು ಪ್ರಯತ್ನಿಸುತ್ತೇವೆ. ಸ್ವಚ್ಚತೆಯ ವಿಷಯದಲ್ಲಿ ಇಂದು ರಾಷ್ಟ್ರಮಟ್ಟದಲ್ಲಿ ಜಾಗೃತಿ ಕಾರ್ಯ ನಡೆಯುತ್ತಿದ್ದು ನಾವೆಲ್ಲರೂ ಜಾಗೃತರಾಗಿ ಪರಿಸರ ಸಂರಕ್ಷಣೆ ಮತ್ತು ಸ್ವಚ್ಚತೆಗೆ ಹೆಚ್ಚಿನ ಆಧ್ಯತೆ ನೀಡಿ ಮುನ್ನಡೆಯಬೇಕು ಎಂದು ಕೊಣಾಜೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಅಚ್ಯುತ ಗಟ್ಟಿ ಅವರು ಅಭಿಪ್ರಾಯಪಟ್ಟರು. ಅವರು ಕೊಣಾಜೆ ಗ್ರಾಮದಲ್ಲಿ ರಾಮಕೃಷ್ಣ ಮಿಷನ್ ಮಂಗಳೂರು, ಕೊಣಾಜೆ ಗ್ರಾಮ ಪಂಚಾಯಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಭಾನುವಾರ ನಡೆದ ಸ್ವಚ್ಚತಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೊಣಾಜೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಲಲಿತಾ ಎಸ್.ರಾವ್ ಅವರು ಮಾತನಾಡಿ, ಕೊಣಾಜೆ ಗ್ರಾಮದಲ್ಲಿ ಈಗಾಗಲೇ ಸಾರ್ವಜನಿಕರಲ್ಲಿ ಸ್ವಚ್ಚತೆಯ ಬಗ್ಗೆ ಅರಿವು ಮೂಡಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಇದರೊಂದಿಗೆ ಹಲವಾರು ಸಂಘಟನೆಗಳು ಕೈ ಜೋಡಿಸಿವೆ ಎಂದು ಹೇಳಿದರು. ಕಾರ್ಯಕ್ರಮಲ್ಲಿ ಪಂಚಾಯಿತಿ ಸದಸ್ಯರಾದ ವೇದಾವತಿ ಗಟ್ಟಿ, ಶೋಭಾ, ಗೀತಾ, ಮುತ್ತು ಶೆಟ್ಟಿ, ಹರಿಶ್ಚಂದ್ರ, ದಯಾನಂದ ಗಟ್ಟಿ, ಪಂಚಾಯಿತಿ ಕಾರ್ಯದರ್ಶಿ ಶಾಲಿನಿ,…
UN NETWORKS ದುಬೈ: ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ (DKSC) ಯು.ಎ.ಇ ವತಿಯಿಂದ ಡಿ.ಕೆ.ಎಸ್.ಸಿ ಸಂಘಟನೆ ಯ ಪ್ರವರ್ತಕರು, ಸದಸ್ಯರು, ಹಿತೈಷಿಗಳು ಹಾಗು ಕರಾವಳಿ ಪ್ರದೇಶದ ಕುಟುಂಬ ಸದಸ್ಯರನ್ನು ಒಂದೇ ಕಡೆ ಸೇರಿಸಿ ಧಾರ್ಮಿಕಚೌಕಟ್ಟಿನೊಳಗೆ ಗಂಡಸರು, ಮಹಿಳೆಯರು ಮಕ್ಕಳು ಪ್ರತ್ಯೇಕವಾಗಿ ವಿವಿಧ ಧಾರ್ಮಿಕ ಸಾಂಸ್ಕೃತಿಕ ಆಟೋಟ ಕಾರ್ಯಕ್ರಮದೊಂದಿಗೆ 2019 ಜನವರಿ 4 ರಂದು ವುಡ್ ಲೀಂ ಪಾರ್ಕ್ ಸ್ಕೂಲ್ ಅಜ್ಮಾನ್ ಇದರ ಒಳಾಂಗಣ ಹಾಗೂ ಒರಾಂಗಣವ್ಯವಸ್ಥೆ ಇದ್ದು ಪ್ರಕ್ರತಿ ಸೌಂದರ್ಯ ದಿಂದ ಕೂಡಿದ ಪ್ರದೇಶದಲ್ಲಿ “ಗ್ರಾಂಡ್ ಕರಾವಳಿ ಪ್ಯಾಮಲಿ ಮುಲಾಖತ್” ಸಂಘಟಿಸಿರುತ್ತದೆ. ವಿವಿಧ ಕಾರ್ಯಕ್ರಮಗಳು ಬೆಳಿಗ್ಗೆ 9 ಘಂಟೆಯಿಂದ 12 ತಂಡದಿಂದ ಮಾರ್ಚ್ ಪಾಸ್ಟ್ ನೊಂದಿಗೆ ನಮ್ಮತಾಯ್ನಾಡು ಭಾರತ ದೇಶ ಹಾಗೂ ತಾವು ಇರುವ ಯು.ಎ.ಇ ಎರಡು ರಾಷ್ಟ್ರಗಳ ರಾಷ್ಟ್ರಗೀತೆಯೊಂದಿಗೆ ಹಾಗೂ ದಪ್ ಪ್ರದರ್ಶನ ಅಲ್ಲದೆ ಮಕ್ಕಳಿಗೆ ಹಿರಿಯರಿಗೆ ಮಹಿಳೆಯರಿಗೆ ಪ್ರತ್ಯೇಕ ವಿವಿಧ ಮನಸ್ಸಿಗೆ ಉಲ್ಲಾಸ ತರುವ ಸ್ಪರ್ಧೆಗಳುನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಗಣ್ಯ ಅತಿಥಿಗಳಾಗಿ ಕರ್ನಾಟಕ ರಾಜ್ಯ ಧಾನ ಪರಿಷತ್ ಸದಸ್ಯರಾದ…
UN NETWORKS ಉಳ್ಳಾಲ: ಖಾಸಗಿ ಸುದ್ಧಿವಾಹಿನಿ ನಿರೂಪಕನ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯೂತ್ ಲೀಗ್ ವತಿಯಿಂದ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಯಿತು. ಸಂದರ್ಶನ ಸಂದರ್ಭ ಪ್ರವಾದಿಯವರನ್ನು ನಿಂದಿಸಿದ್ದಾರೆಂಬ ಆರೋಪದಡಿ ದೂರು ದಾಖಲಿಸಲಾಗಿದೆ.ಈ ವೇಳೆ ಇಸ್ಮಾಯಿಲ್ ತಲಪಾಡಿ, ಐಸನ್ ತಲಪಾಡಿ, ಶಬೀರ್ ಅಬ್ಬಾಸ್ ತಲಪಾಡಿ, ಫಾರೂಕ್ ಸೋಷಿಯಲ್, ಸಂಶುದ್ದೀನ್ , ಅಬ್ದುಲ್ ರಹಿಮಾನ್, ಸಾಲಿ ಅಡ್ಡೂರು, ಅಬೂಬಕರ್, ವಕೀಲ ಹನೀಫ್, ಮುನೀರ್ ಮುಂತಾದವರು ಉಪಸ್ಥಿತರಿದ್ದರು.
UN NETWORKS ದೇರಳಕಟ್ಟೆ: ಖಾಸಗಿ ಸುದ್ಧಿ ವಾಹಿನಿಯ ನಿರೂಪಕ ಅಜಿತ್ ಎಂಬಾತ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ.ಅ) ಬಗ್ಗೆ ಇತ್ತೀಚಿನ ನಿಂದನಾತ್ಮಕ ಹೇಳಿಕೆಯನ್ನು ವಿರೋಧಿಸಿ ಮತ್ತು ಆತನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಒತ್ತಾಯಿಸಿ ದೇರಳಕಟ್ಟೆ ರೇಂಜ್ ಮದರಸ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ನ ಅಧ್ಯಕ್ಷ ಇಸ್ಮಾಯಿಲ್ ಹಾಜಿ ನೇತೃತ್ವದಲ್ಲಿ ಕೊಣಾಜೆ ಪೊಲೀಸ್ ಠಾಣಾಧಿಕಾರಿಗೆ ದೂರು ನೀಡಲಾಯಿತು. ನಿಯೋಗದಲ್ಲಿ ಅಸೋಸಿಯೇಷನ್ ಗೌರವ ಅಧ್ಯಕ್ಷರಾದ ಮಜಲ್ ಅಬ್ಬಾಸ್ ಹಾಜಿ , ಪ್ರಧಾನ ಕಾರ್ಯದರ್ಶಿ ಇಬ್ರಾಹಿಮ್ ಕೊಣಾಜೆ , ಉಪಾಧ್ಯಕ್ಷರಾದ ಸ್ವಾಗತ್ ಅಬೂಬಕರ್ ಹಾಜಿ , ಕೋಶಾಧಿಕಾರಿ ಅಬೂಸ್ವಾಲಿಹ್ ಹಾಜಿ ಕುರಿಯಕ್ಕಾರ್, ಪತ್ರಿಕಾ ಕಾರ್ಯದರ್ಶಿ ಹಮೀದ್ ಮದ್ಪಾಡಿ, ರೇಂಜ್ ಜಂ-ಇಯ್ಯತುಲ್ ಮುಅಲ್ಲಿಮೀನ್ ಅಧ್ಯಕ್ಷ ಲತೀಫ್ ದಾರಿಮಿ ರೆಂಜಾಡಿ, ರೇಂಜ್ ವ್ಯಾಪ್ತಿಯಲ್ಲಿನ ವಿವಿಧ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳಾದ ಅಝೀಝ್ ಹಾಜಿ ದೇರಳಕಟ್ಟೆ, ಅಬೂಬಕರ್ ಹಾಜಿ ನಾಟೆಕಲ್, ಸಯ್ಯದಾಲಿ, ಇಬ್ರಾಹಿಮ್ ಭಂಡಾರಪಾದೆ, ಸಿ.ಎಮ್ ಶರೀಫ್ ಪಟ್ಟೋರಿ, ಮೊಹಿದೀನ್ ಮೀಂಪ್ರಿ, ಮಹಮ್ಮದ್ ಲಾಡ, ಅಲ್ತಾಫ್ ಅರಸ್ತಾನ ಮತ್ತಿತರರು ಉಪಸ್ಥಿತರಿದ್ದರು.
UN NETWORKS ಉಳ್ಳಾಲ: ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧೀನದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ವಾರ್ಷಿಕ ಸಭೆ ತಾಜುಲ್ ಉಲಮಾ ಸುನ್ನೀ ಸೆಂಟರ್, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಕಚೇರಿಯಲ್ಲಿ ಸೆಕ್ಟರ್ ಅಧ್ಯಕ್ಷ ಮುಸ್ತಫ ಮಾಸ್ಟರ್ ಮುಕ್ಕಚೇರಿ ಅಧ್ಯಕ್ಷತೆಯಲ್ಲಿ ನಡೆಯಿತು. ಡಿವಿಷನ್ ಅಧ್ಯಕ್ಷ ಮುನೀರ್ ಅಹಮದ್ ಕಾಮಿಲ್ ಸಖಾಫಿ ಅವರು ಇತ್ತೀಚೆಗೆ ಮರಣ ಹೊಂದಿದ ಅಶ್ರಫ್ ಅಡ್ಡೂರು, ತೋಕೆ ಉಸ್ತಾದರ ತಾಯಿ ಹಾಗೂ ಎಲ್ಲಾ ಸುನ್ನೀ ಕಾರ್ಯಕರ್ತರ ಮೇಲೆ ತಹ್ಲೀಲ್ ನೆರವೇರಿಸಿ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರಧಾನ ಕಾರ್ಯದರ್ಶಿ ಹಂಝಾ ಸುಂದರಿ ಬಾಗ್ ಸ್ವಾಗತಿಸಿರು. ಪ್ರಸ್ತುತ ಕೌನ್ಸಿಲ್ ಗೆ ರಾಜ್ಯ ಎಸ್ಸೆಸ್ಸೆಫ್ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ದ.ಕ ಜಿಲ್ಲಾ ಎಸ್ಸೆಸ್ಸೆಫ್ ನಾಯಕರಾದ ಸೆಯ್ಯಿದ್ ಖುಬೈಬ್ ತಂಙಳ್,ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಸಖಾಫಿ, ಡಿವಿಷನ್ ಎಲೆಕ್ಷನ್ ಆಫೀಸರ್ ಹಮೀದ್ ತಲಪಾಡಿ ,ಇಲ್ಯಾಸ್ ಪಟ್ಟೊಳಿಕೆ ಮತ್ತು ಜಾಫರ್ ಅಲೇಕಲ ಸಭೆಯಲ್ಲಿ ಉಪಸ್ಥಿತರಿದ್ದರು. ನಂತರ ಸಮಿತಿಯನ್ನು ಬರ್ಖಾಸ್ತುಗೊಳಿಸಿ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಶಬೀರ್…
UN NETWORKS ಮುಡಿಪು : ಪ್ರವಾದಿ (ಸ.ಅ) ರವರನ್ನು ನಿಂದನೆ ಮಾಡಿದ ಖಾಸಗಿ ಸುದ್ಧಿ ವಾಹಿನಿ ನಿರೂಪಕ ಅಜಿತ್ ಹನುಮಕ್ಕನವರ್ ವಿರುದ್ದ ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ವತಿಯಿಂದ ಕೊಣಾಜೆ ಪೋಲಿಸ್ ಠಾಣೆಗೆ ದೂರು ನೀಡಲಾಗಿದೆ ಎಂದು ಎಸ್ಸೆಸ್ಸೆಫ್ ಮುಡಿಪು ಸೆಕ್ಟರ್ ಅಧ್ಯಕ್ಷ ರಫೀಕ್ ಮದನಿ ಪಾನೆಲ ತಿಳಿಸಿದ್ದಾರೆ. ಈ ಸಂದರ್ಭ ಎಸ್ಸೆಸ್ಸೆಫ್ ರಾಜ್ಯ ಸಮಿತಿ ಸದಸ್ಯ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಶರೀಫ್ ಮುಡಿಪು, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಮೊದಲಾದವರು ಉಪಸ್ಥಿತರಿದ್ದರು.
UN NETWORKS ಅಳೇಕಲ: ಉಳ್ಳಾಲ ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಅಧೀನದ ಎಸ್.ವೈ.ಎಸ್. ಅಳೇಕಲ, ಮಂಚಿಲ, ಮಾರ್ಗತಲೆ ಬ್ರಾಂಚ್ ವತಿಯಿಂದ ಸುನ್ನೀ ಆದರ್ಶ ಸಂಗಮ ಅಳೇಕಲದ ಜೂನಿಯರ್ ಕಾಲೇಜು ಸಮೀಪದ ಮದನಿ ಮೈದಾನದಲ್ಲಿ ನಡೆಯಿತು. ಅಳೇಕಲ ಜುಮಾ ಮಸೀದಿಯ ಖತೀಬ್ ಅಲ್ಹಾಜ್ ಅಬೂ ಝಿಯಾದ್ ಮದನಿ ಪಟ್ಟಾಂಬಿ ದುಆದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸುಂದರಿಬಾಗ್ ಬದ್ರಿಯ ಜುಮಾ ಮಸೀದಿಯ ಖತೀಬ್ ಶರೀಫ್ ಸಅದಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಅಧ್ಯಕ್ಷ ಸೈಯದ್ ಜಲಾಲ್ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಅಬ್ದುಲ್ ವಹಾಬ್ ಸಖಾಫಿ ಮಂಬಾಡ್ ಮುಖ್ಯ ಭಾಷಣ ಮಾಡಿದರು. ಸೈಯದ್ ಮದನಿ ಮೊಹಲ್ಲಾ ಒಕ್ಕೂಟದ ಗೌರವಾಧ್ಯಕ್ಷ ಯು.ಎಸ್.ಹಂಝ ಹಾಜಿ, ಎಸ್ಸೆಸ್ಸೆಫ್ ದ.ಕ. ಜಿಲ್ಲಾ ನಾಯಕ ಸೈಯದ್ ಖುಬೈಬ್ ತಂಙಳ್, ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಶೀರ್ ಸಖಾಫಿ ಉಳ್ಳಾಲ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಎಸ್.ವೈ.ಎಸ್. ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಬಶೀರ್ ಅಹ್ಸನಿ ತೋಡಾರ್,…
UN NETWORKS ನರಿಂಗಾನ: ಗ್ರಾಮೀಣ ಪ್ರದೇಶದಲ್ಲಿ ಇರುವ ಕೋಲ್ಲರಕೋಡಿ ಶಾಲೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಸರಕಾರದಿಂದ ಪಡೆಯುದರಲ್ಲಿ ಯಶಸ್ವಿಯಾಗಿದೆ ಎಂದು ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು. ಅವರು ನರಿಂಗಾನ ಗ್ರಾಮದ ಕೋಲ್ಲರಕೋಡಿಯ ದ.ಕ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಶಾಲಾ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿಮಾತನಾಡಿದರು.ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿ ಗಳಿಗೆ ಉತ್ತಮ ರೀತಿಯ ಶಿಕ್ಷಣ ನೀಡುತ್ತಾ ಬಂದಿದೆ. ಇಲ್ಲಿ ವಿದ್ಯೆ ಪಡೆದ ವಿದ್ಯಾರ್ಥಿಗಳು ದೇಶ ವಿದೇಶಗಳಲ್ಲಿ ಉತ್ತಮ ಹೆಸರುಗಳಿಸಿದ್ದಾರೆ.ಪೋಷಕರು ಮಕ್ಕಳ ಕಲಿಕೆ ವಿಚಾರದಲ್ಲಿ ಹೆಚ್ಚಿನ ಗಮನ ನೀಡಿವ ಮೂಲಕ ಭವಿಷ್ಯದಲ್ಲಿ ನಿಮ್ಮ ಕನಸಿಗೆ ಮಕ್ಕಳುಸಹಕಾರಿಸಲಿದ್ದಾರೆ ಎಂದು ಹೇಳಿದರು ಜಿ.ಪಂ ಸದಸ್ಯೆ ಮಮತ ಡಿ.ಎಸ್ ಗಟ್ಟಿ ದೀಪಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಶಿಕ್ಷಣ ಎಂಬುದು ಜೀವನ ಪ್ರಾಮುಖ್ಯ ಅಂಗವಾಗಿದೆ. ಶಿಕ್ಷಣ ಪಡೆದಾಗ ಮಾತ್ರ ಮನುಷ್ಯ ಮನುಷ್ಯನಾಗಿ ಪರಿವರ್ತನೆಯಾಗುತ್ತಾನೆ. ವಿದ್ಯಾರ್ಥಿಗಳು ಗುರು ಹಿರಿಯರಿಗೆ ಗೌರವಿಸಿ ವಿದ್ಯೆ ಪಡೆದಾಗ ಮುಂದೆ ಉತ್ತಮ ಭವಿಷ್ಯ ರೂಪಿಸಲು ಸಾಧ್ಯ ಎಂದು ಹೇಳಿದರು.ಶಾಲಾ…

