UN NETWORKS
ಉಳ್ಳಾಲ : ಉಳ್ಳಾಲವನ್ನು ಉತ್ತಮ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ, ವಸತಿ ಮತ್ತು ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್ ಅಭಿಪ್ರಾಯಪಟ್ಟರು.ಅವರು ಉಳ್ಳಾಲ ನಗರಸಭಾ ವ್ಯಾಪ್ತಿಯ ನಗರೊತ್ಥಾನ ಯೋಜನೆಯಡಿ ನಡೆಯಲಿರುವ ರಸ್ತೆ ಅಭಿವೃದ್ಧಿಯ ಪರಿಶೀಲನೆ ನಡೆಸಿ ಮಾತನಾಡಿದರು.
ಅಬ್ಬಕ್ಕ ಸರ್ಕಲ್‍ನಿಂದ ಪ್ಯಾರಿಸ್ ಜಂಕ್ಷನ್, ಉಳ್ಳಾಲ ದರ್ಗಾ ಮಾರ್ಗವಾಗಿ, ಅಕ್ಕರೆಕೆರೆ, ಸೈಂಟ್ ಸೆಬಾಸ್ತಿಯನ್ ನಿಂದ ತೊಕ್ಕೊಟ್ಟು ಜಂಕ್ಷನ್ ಸಂಪರ್ಕಿಸುವ ರ್ತಸೆ ಟೆಂಡರ್ ಮುಗಿದು ಕಾಮಗಾರಿ ಪ್ರಾರಂಭಗೊಳ್ಳಲಿದೆ. ಈ ರಸ್ತ ಕಾಂಕ್ರಟೀಕರಣದೊಂದಿಗೆ ಮಾದರಿ ರಸ್ತೆ ನಿರ್ಮಾಣ ಮಾಡುವ ಗುರಿಯನ್ನು ಹೊಂಇದ್ದು ಈಗಾಗಲೇ 3.5 ಕೋಟಿ ರೂ ವೆಚ್ಚದಲ್ಲಿ ಕಾಮಗಾರಿ ನಡೆಯಲಿದೆ. ಈ ರಸ್ತೆಗೆ ಹೆಚ್ಚುವರಿ ಅನುದಾನ ಅಗತ್ಯವಿದ್ದಲ್ಲಿ ಇಲಾಖೆಯಿಂದ ಬಿಡುಗಡೆ ಮಾಡಲಾಗುವುದು.ಸಿಆರ್‍ಎಫ್‍ನಿಂದ ಪ್ಯಾರಿಸ್‍ನಿಂದ ಕೊಟೆಪುರ ಮಾರ್ಗವಾಗಿ 5 ಕೋಟಿ ರೂ. ಟೆಂಡರ್ ಹ,ತದಲ್ಲಿದ್ದು, ಓವರ್‍ಬ್ರಿಡ್ಜ್‍ನಿಂದ ಶಿಮ್ಲಾ ಬೇಕರಿ ಸಾರಸ್ವತ ಕಾಲನಿ ರಸ್ತೆಯಾಗಿ ಸೋಮೇಶ್ವರ ಸಂಪರ್ಕಿಸುವ ರಸ್ತೆ ಅಭಿವೃದ್ಧಿ, ಮುಡಿಪು ಜಂಕ್ಷನ್‍ನಿಂದ ಮೂಳೂರು ರ್ತಸೆ ಅಭಿವೃದ್ಧಿ ಶೀಘ್ರದಲ್ಲೆ ಕಾಮಗಾರಿ ಆರಂಭವಾಗಲಿದೆ ಎಂದರು.
ಕುಂಪಲ ಅಂಬ್ಲಮೊಗರು ಶಾಲೆಗೆ 2 ಕೋಟಿ ರೂ. : ಕುಂಪಲ ಸರಕಾರಿ ಶಾಲೆ ಕಟ್ಡ ನಿರ್ಮಣಕ್ಕೆ 2 ಕೋಟಿ ರೂ. ಮತ್ತು ಅಂಬ್ಲಮೊಗರು ಸರಕಾರಿ ಕಾಲೇಜು ಅಭಿವದ್ಧಿಗೆ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು ಶೈಕ್ಷಣಿಕ ಕಾರ್ಯಗಳಿಗೆ ಸರಕಾರ ಹಣ ನೀಡಲಿದೆ ಎಂದರು.ಈ ಸಂದರ್ಭದಲ್ಲಿ ಉಳ್ಳಾಲ ನಗರಸಭಾ ಸದಸ್ಯರಾದ ಬಾಝಿಲ್ ಡಿ.ಸೋಜ, ಮಹಮ್ಮದ್ ಮುಕ್ಕಚ್ಚೇರಿ, ಯು.ಎ. ಇಸ್ಮಾಯಿಲ್, ವೀಣಾ ಉಳಿಯ, ಶಶಿಕಲಾ, ಮಾಜಿ ಸದಸ್ಯರಾದ ಹುಸೈನ್ ಕುಂಇಮೋನು, ದಿನೇಶ್ ರೈ, ಮಹಮ್ಮದ್ ಮುಸ್ತಾಫ, ಇಸ್ಮಾಯಿಲ್ ಪೊಡಿಮೋನು,ಅಝೀಝ್ ಹಕ್, ಪಿಡಬ್ಲುಡಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರ ರವಿ ಕುಮಾರ್, ಸಹಾಯಕ ಅಭಿಯಂತರ ರತ್ನಾಕರ್, ಉಳ್ಳಾಲ ನಗರಸಭಾ ಪೌರಾಯುಕ್ತೆ ವಾಣಿ ವಿ.ಆಳ್ವ, ಕಾರ್ಯನಿರ್ವಾಹಕ ಅಭಿಯಂತರ ಉಮೇಶ್ ಕಾಮತ್, ಕಿರಿಯ ಅಭಿಯಂತರ ರೇಣುಕಾ ಮತ್ತಿತರರು ಉಪಸ್ಥಿತರಿದ್ದರು.


