UN NETWORKS ಉಳ್ಳಾಲ: ಉಳ್ಳಾಲ ಮೊಗವೀರಪಟ್ನದ ವಿಶ್ವ ಹಿಂದೂ ಪರಿಷತ್ ಬಜರಂಗದಳ ವ್ಯಾಘ್ರವಾಹಿನಿ ಶಾಖೆ ವತಿಯಿಂದ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯ ಸ್ವಯಂಸೇವಕ ದಿ. ಲೋಕನಾಥ್ ಅಮೀನ್ ಉಳ್ಳಾಲ ಇವರ ಸ್ಮರಣಾರ್ಥ ಉಳ್ಳಾಲ ಶಿವ ಸಾನಿಧ್ಯ (ಹಿಂದೂ ರುದ್ರಭೂಮಿ)ಯಲ್ಲಿ ಸುಮಾರು 4.75 ಲಕ್ಷ ರೂ ಅಂದಾಜು ವೆಚ್ಚದಲ್ಲಿ ” ಸತ್ಯ ಹರಿಶ್ಚಂದ್ರನ ಪ್ರತಿಮೆ ಹಾಗೂ ತ್ರಿಶೂಲ ಸ್ಥಂಭ” ನಿರ್ಮಿಸುವ ಕುರಿತು “ವಿಜ್ಞಾಪನಾ ಪತ್ರ ಬಿಡುಗಡೆ ಸಮಾರಂಭ ಶುಕ್ರವಾರ ಬ್ರದರ್ಸ್ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಜರಗಿತು. ಉಳ್ಳಾಲ ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ಹಿಂದೂ ಶವ ಸಂಸ್ಕಾರ ಸೇವಾ ಸಮಿತಿಯ ಅಧ್ಯಕ್ಷ ಲಕ್ಷಣ ಅಬ್ಬಕ್ಕನಗರ ವಿಜ್ಞಾಪನಾ ಪತ್ರ ಬಿಡುಗಡೆಗೊಳಿಸಿದರು. ಮುಖ್ಯ ಅತಿಥಿಗಳಾಗಿ ಉಳ್ಳಾಲ ಮೊಗವೀರ ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಬಂಗೇರ, ಶಾಲಾ ಮಾಜಿ ಸಂಚಾಲಕ ಬಾಬು ಬಂಗೇರ, ಭಾರತ್ ಪ್ರೌಢಶಾಲೆಯ ನಿವೃತ ಪ್ರಾಧ್ಯಾಪಕ ವಾಸುದೇವ ರಾವ್, ಮೊಗವೀರ ಹಿ. ಪ್ರಾ ಶಾಲಾ ಹಳೆ ವಿದ್ಯಾರ್ಥಿ…
Author: UllalaVani
UN NETWORKS ಪಾನೀರ್: ನಮ್ಮ ಜೀವಿತಾವಯಲ್ಲಿ ಧಾರ್ಮಿಕ ಹಬ್ಬಗಳನ್ನು ಮಾತ್ರವೇ ಆಚರಿಸಿದರೆ ಸಾಲದು, ಹಬ್ಬದ ಹಿಂದಿರುವ ಸಂದೇಶಗಳ ಪಾಲನೆಯನ್ನೂ ಅನುಷ್ಠಾನಗೊಳಿಸಬೇಕಾಗಿದೆ ಎಂದು ಪ್ರಧಾನ ಧರ್ಮಗುರು ರೆ.ಫಾ. ಜೋಸೆಫ್ ಮಾರ್ಟಿಸ್ ಹೇಳಿದರು. ಪಾನೀರ್ ದಯಾಮಾತೆ ಮರ್ಸಿಯಮ್ಮನವರ ಇಗರ್ಜಿಯ ಪರಮಪ್ರಸಾದದ ಮೆರವಣಿಗೆ ಹಾಗೂ ದಿವ್ಯ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿದ ಅವರು ನಮ್ಮ ಜೀವನದಲ್ಲಿ ದೇವ ಸ್ಮರಣೆ ಸದಾ ಇರಬೇಕು, ಧಾರ್ಮಿಕ ಭಾವನೆಯೊಂದಿಗೆ, ಸಂಸ್ಕಾರ, ನಾವೆಲ್ಲರೂ ಒಂದೇ ಎನ್ನುವ ಭಾವನೆ ಮುಖ್ಯ. ಸಾಮಾಜಿಕ ಸೇವಾ ಮನೋಭಾವ, ಚಿಂತನೆ ಅಗತ್ಯ ಎಂದರು. ಕಾರ್ಯಕ್ರಮದ ಪ್ರಯುಕ್ತ ಚರ್ಚ್ ವ್ಯಾಪ್ತಿಯ ಕ್ರೈಸ್ತರು ನೂತನ ಬೆಂಚುಗಳು ಹಾಗೂ ಐದು ಎಲ್‍ಇಡಿ ಟಿವಿಗಳನ್ನು ಕೊಡುಗೆಯಾಗಿ ನೀಡಿದರು. ಪಾನೀರ್ ಚರ್ಚ್‍ನ ಧರ್ಮಗುರು ರೆ.ಫಾ. ಡೆನ್ನಿಸ್ ಸುವಾರಿಸ್, ಅತಿಥಿ ಧರ್ಮಗುರು ಫಾ. ವಿಜಯಾ ಟೆಲ್ಲಿಸ್, ಫಾ. ವಿಲ್ಸನ್ ಮೋರಾಸ್, ಫಾ. ಜೋಯ್ ಪಾಯ್ಸ್, ಫಾ. ಬಾಲರಾಜ್, ಫಾ. ಬರ್ನಾಡ್, ಚರ್ಚ್‍ನ ದಿಯಾಕೋನ್ ಲ್ಯಾರಿ ಫ್ರಾಂಕ್ಲಿನ್ ಪಿಂಟೋ, ಉಪಾಧ್ಯಕ್ಷ ಎಲಿಯಾಸ್ ಡಿಸೋಜ, ಕಾರ್ಯದರ್ಶಿ ಡೆನ್ನಿಸ್ ಗೋನ್ಸಾಲ್ವೀಸ್…
UN NETWORKS ಬಾಳೆಪುಣಿ: ಅಂತಾರಾಷ್ಟ್ರೀಯ ಲಯನ್ಸ್ ಸೇವಾ ಸಂಸ್ಥೆ ಸಮಾಜದಲ್ಲಿ ಸೇವೆಯ ಅಗತ್ಯವಿರುವ ಭಾಗದಲ್ಲಿ ತನ್ನ ಸಹಾಯ ಹಸ್ತ ಚಾಚುವ ಆದರ್ಶ ಪಾಲನೆಯ ಮೂಲಕ ಸಶಕ್ತ ಸಂಘಟನೆಯಾಗಿ ಬೆಳೆದಿದೆ ಎಂದು ಲಯನ್ಸ್ ಜಿಲ್ಲೆ 317-ಡಿಯ ಗವರ್ನರ್ ದೇವದಾಸ ಭಂಡಾರಿ ಹೇಳಿದರು. ಬಾಳೆಪುಣಿ ಗ್ರಾಮ ಪಂಚಾಯಿತಿ. ಹಿಂದೂ ರುದ್ರಭೂಮಿ ಸಮಿತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಮಿತಿಯೊಂದಿಗೆ ಲಯನ್ಸ್ ಜಿಲ್ಲೆ 317-ಡಿಯ ಪ್ರಾಂತ್ಯ 4ರ ಪ್ರಾಂತೀಯ ಸಮ್ಮೇಳನ “ಸಮಿದೆ” ಸಹಭಾಗಿತ್ವದಲ್ಲಿ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದ ಹೂ ಹಾಕುವ ಕಲ್ಲಿಗೆ ನೀಡಿದ ಶಾಶ್ವತ ಕೊಡುಗೆಯಾದ ಹಿಂದೂ ರುದ್ರಭೂಮಿ ‘ಶಾಂತಿಧಾಮ’ವನ್ನು ಗ್ರಾಮಕ್ಕೆ ಹಸ್ತಾಂತಿರಿಸಿ ಮಾತನಾಡಿದರು.ಮಂಗಳೂರು ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್ ರುದ್ರಭೂಮಿಯನ್ನು ಲೋಕಾರ್ಪಣೆಗೊಳಿಸಿದರು. ಕೈರಂಗಳದ ಶಾರದಾಗಣಪತಿ ವಿದ್ಯಾಕೇಂದ್ರದ ಟಿ. ಜಿ. ರಾಜಾರಾಮ ಭಟ್ ಮಾತನಾಡಿ ಮನುಷ್ಯ ಜೀವಿತದ ಕೊನೆಯ ನಿಲ್ದಾಣವಾಗಿರುವ ರುದ್ರಭೂಮಿ, ಇಂದಿನ ಸಮಾಜದಲ್ಲಿ ಅತ್ಯಗತ್ಯವಾಗಿದ್ದು, ಇದನ್ನು ಕೊಡಮಾಡುವಲ್ಲಿ ಗ್ರಾಮದ ಜನರೊಂದಿಗೆ ಕೈ ಜೋಡಿಸಿದ ಲಯನ್ಸ್ ಪ್ರಾಂತ್ಯಾಧ್ಯಕ್ಷ ಪ್ರವೀಣ್ ಶೆಟ್ಟಿಯವರ ಕೊಡುಗೆ ಮಹತ್ವವಾದುದು,…
UN NETWORKS ಶಕ್ತಿನಗರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದಲ್ಲಿ ಉಳ್ಳಾಲ ಮಂತ್ರ ನಾಟ್ಯಕಲಾ ಗುರುಕುಲದಿಂದ ಶಕ್ತಿನಗರದ ಸಾನಿಧ್ಯ ಭಿನ್ನ ಸಾಮಥ್ರ್ಯದ ಮಕ್ಕಳ ವಸತಿ ಶಾಲೆಯಲ್ಲಿ “ಸಂಭ್ರಮ ಕಾರ್ಯಕ್ರಮವು ನಡೆಯಿತು. ಕಾರ್ಯಕ್ರಮಕ್ಕೆ ಮುಡಿಪು ವಿಶ್ವಕರ್ಮ ಸಂಘದ ಅಧ್ಯಕ್ಷ ಇರಾ ಯೋಗೀಶ್ ಆಚಾರ್ಯ ಚಾಲನೆ ನೀಡಿದರು. ಸಾನಿಧ್ಯ ಭಿನ್ನ ಸಾಮಥ್ರ್ಯದ ಮಕ್ಕಳ ವಸತಿ ಶಾಲೆ ಹಾಗೂ ತರಬೇತಿ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸಂತ್ ಕುಮಾರ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಶ್ರೀ ಗಣೇಶ್ ಸೇವಾ ಟ್ರಸ್ಟ್‍ನ ಉಪಾಧ್ಯಕ್ಷ ಎಮ್. ದೇವದತ್ತ ರಾವ್, ವೇಣುಗೋಪಾಲ್ ಯು. ಭಟ್ನಗರ, ಮಂತ್ರ ನಾಟ್ಯಕಲಾ ಗುರುಕುಲ ಅಧ್ಯಕ್ಷ ಶಕೀಲಾ ಜನಾರ್ಧನ, ಅಧ್ಯಕ್ಷೆ ಶಕೀಲಾ ಜನಾರ್ಧನ್, ಟ್ರಸ್ಟಿಗಳಾದ ಶೈನಾ ಶ್ರಾವಣ್ ಉಳ್ಳಾಲ್, ಬಬಿತಾ ಕಿರಣ್ ಉಳ್ಳಾಲ್ ಉಪಸ್ಥಿತರಿದ್ದರು. ನಿರ್ದೇಶಕ ಶ್ರಾವಣ್ ಉಳ್ಳಾಲ್ ಸ್ವಾಗತಿಸಿದರು. ಕಾರ್ಯದರ್ಶಿ ಕಿರಣ್ ಉಳ್ಳಾಲ್ ಕಾರ್ಯಕ್ರಮ ನಿರೂಪಿಸಿದರು.
UN NETWORKS ಉಳ್ಳಾಲ: ಬೆಂಗಳೂರಿನಲ್ಲಿ ನಡೆದ 66ನೇ ರಾಜ್ಯಮಟ್ಟದ ದೇಹದಾಡ್ರ್ಯ ಚಾಂಪಿಯನ್‍ಶಿಪ್‍ನಲ್ಲಿ ಫಯಾಝ್ ಅವರು `ಮಿಸ್ಟರ್ ಕರ್ನಾಟಕ ಉದಯ -2018′ ಪ್ರಶಸ್ತಿಯನ್ನು ಪಡೆದು ರಾಷ್ಟ್ರಮಟ್ಟದ ದೇಹದಾಢ್ರ್ಯ ಚಾಂಪಿಯನ್‍ಶಿಪ್‍ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಅವರು ಕೆ.ಸಿ.ರೋಡ್ ಹೆಲ್ತ್ ಝೋನ್ ಜಿಮ್‍ನ ತರಬೇತುದಾರರಾಗಿದ್ದು, ಮಂಗಳೂರಿನಲ್ಲಿ ನಡೆದ ಜಿಲ್ಲಾಮಟ್ಟದ ದೇಹದಾಢ್ರ್ಯ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ- 2018 ಪ್ರಶಸ್ತಿಯನ್ನು ಪಡೆದಿದ್ದರು.
UN NETWORKS ಕೊಣಾಜೆ: ಮಂಗಳೂರು ವಿಶವಿದ್ಯಾಲಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎಂ.ರಾಜಶೇಖರ್(63) ಅವರು ಶನಿವಾರ ರಾತ್ರಿ ಅಸೌಖ್ಯದಿಂದ ನಿಧನರಾದರು. ಅವರು ಮಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್ ಆಗಿ, ಕಾಲೇಜು ಅಭಿವೃದ್ಧಿ ಮಂಡಳಿಯ ನಿರ್ದೇಶಕರಾಗಿ, ಜೀವವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಹಾಗೂ ವಿವಿದ ಯೋಜನೆಗಳ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. 2017ರಲ್ಲಿ ವಿವಿಯಿಂದ ನಿವೃತ್ತರಾದ ಅವರು ಪ್ರಸ್ತುತ ಮೈಸೂರಿನಲ್ಲಿ ವಾಸವಾಗಿದ್ದರು.
UN NETWORKS ಕೊಣಾಜೆ: ಕೊಣಾಜೆ ಬೊಲ್ಮದಲ್ಲಿ ಜೀರ್ಣೋದ್ಧಾರಗೊಳ್ಳುತ್ತಿರುವ ಶ್ರೀ ಉಳ್ಳಾಲ್ತಿ ಅಮ್ಮನವರ ಕ್ಷೇತ್ರ ಹಾಗೂ ಪರಿವಾರ ದೈವಗಳ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜ. 16ರಿಂದ ಜ. 18ರ ತನಕ ಜರುಗಲಿದೆ ಎಂದು ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷ ಪ್ರಸಾದ್ ರೈ ಕಲ್ಲಿಮಾರು ಹೊಸಮನೆ ಹೇಳಿದರು. ಶ್ರೀ ಕ್ಷೇತ್ರದಲ್ಲಿ ಭಾನುವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮಗಳ ವಿವರ ನೀಡಿದ ಅವರು ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದ, ಬ್ರಹ್ಮಶ್ರೀ ಎಡಪದವು ವೇದಮೂರ್ತಿ ವೆಂಕಟೇಶ್ ತಂತ್ರಿಗಳ ಪೌರೋಹಿತ್ಯ ಹಾಗೂ ಕೊಣಾಜೆ ಶ್ಯಾನುಬೋಗರ ಮನೆಯ ಸುದರ್ಶನ ಭಟ್ ಅವರ ಮಾರ್ಗದರ್ಶನದಲ್ಲಿ ಉಳ್ಳಾಲ್ತಿ ಅಮ್ಮನವರ ಪ್ರತಿಷ್ಠೆ ಹಾಗೂ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಲಿದೆ ಎಂದರು.ಬೊಲ್ಮ ಮುಲಾರದ ಜನ ಕೃಷಿ ಸಂಸ್ಕೃತಿಯಲ್ಲಿ ಹುಟ್ಟಿ ಬೆಳದವರು. ಗ್ರಾಮ ದೇವರಾಗಿ, ಸುಖ ಸಂಪತ್ತನ್ನು ನೀಡುವ ತಾಯಿಯಾಗಿ ಉಳ್ಳಾಲ್ತಿ ದಿವ್ಯಶಕ್ತಿಯಾಗಿ ಉದ್ದೀಪನಗೊಂಡಿರುವ ಐತಿಹ್ಯವಿದೆ. ದೈವಜ್ಞರ ಚಿಂತನೆಯಂತೆ ಅನಾದಿ ಕಾಲದಿಂದ ಜೈನ ಮನೆತನದವರು ಆರಾಧಿಸಿಕೊಂಡು ಬರುತ್ತಿದ್ದ ಸಾನಿಧ್ಯವೆಂದು ತಿಳಿದುಬಂದಿದೆ. ಈ ಭಾಗದ ಜನರ ತೊಂದರೆಗಳಿಗೆ ನೆಲೆ ಇಲ್ಲದ…
UN NETWORKS ಉಳ್ಳಾಲ: ಅಯ್ಯಪ್ಪ ವೃತಧಾರಿಗಳು ಶಬರಿಮಲೆ ದೇವಸ್ಥಾನದ ಹುಂಡಿಗೆ ಕಾಣಿಕೆ ಹಾಕದೆ ಕೇರಳ ಸರಕಾರಕ್ಕೆ ಹೋಗುವ ಆದಾಯವನ್ನು ನಿಲ್ಲಿಸುವ ಮೂಲಕ ಸರಕಾರವನ್ನು ಬಗ್ಗಿಸುವ ಕೆಲಸ ಮಾಡಬೇಕಿದೆ ಎಂದು ಕಪಿಲಾಶ್ರಮ ಉತ್ತರಕಾಶಿಯ ಶ್ರೀರಾಮಚಂದ್ರ ಸ್ವಾಮಿ ಹೇಳಿದರು. ಅವರು ಶ್ರೀ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿ ಮಂಗಳೂರು ಗ್ರಾಮಾಂತರ ಉಳ್ಳಾಲ ವತಿಯಿಂದ ಕೊಲ್ಯ ಸೌಭಾಗ್ಯ ಸದನದಲ್ಲಿ ಜರಗಿದ ಅಯ್ಯಪ್ಪ ಭಕ್ತರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.ಶಬರಿಮಲೆಗೆ ಹೋಗುವ ಅಯ್ಯಪ್ಪ ವೃತಧಾರಿಗಳು ಜಾಸ್ತಿಯಾಗಬೇಕಿದೆ. ಮಲೆ ಹತ್ತಿ ಶಬರಿಮಲೆಯನ್ನು ಸಂದರ್ಶಿಸಿದರೂ ಕಾಣಿಕೆ ಹುಂಡಿಗೆ ನಯಾಪೈಸೆಯನ್ನು ಹಾಕದಿರಿ. ದಾರಿಯುದ್ದಕ್ಕೂ ಕ್ರೈಸ್ತ ಮಿಷನರಿಗಳು ನಡೆಸುವ ಹೊಟೇಲುಗಳು ವೃತಧಾರಿಗಳು ತೆರಳುವ ಸಂದರ್ಭ ಸಸ್ಯಹಾರಿ ಹೊಟೇಲುಗಳಾದಲ್ಲಿ, ದೇವಸ್ಥಾನದ ಬಾಗಿಲು ಮುಚ್ಚಿದ ನಂತರ ಅದೇ ಹೊಟೇಲುಗಳು ಮಾಂಸಹಾರಿ ಹೊಟೇಲುಗಳಾಗಿ ಕಾರ್ಯಾಚರಿಸುತ್ತಿದೆ. ಇಂತಹ ಹೊಟೇಲುಗಳಲ್ಲಿ ಆಹಾರ ಸೇವಿಸುವುದನ್ನು ನಿಲ್ಲಿಸಿ. ಸರಕಾರಕ್ಕೆ ಆರ್ಥಿಕ ಸಂಕಷ್ಟ ಆದಲ್ಲಿ ಮಾತ್ರ ಹಿಂದೂಗಳಿಗೆ , ಶಬರಿಮಲೆ ಕ್ಷೇತ್ರಕ್ಕೆ ಸಲ್ಲುವ ಜಯವಾಗಿರುತ್ತದೆ. ಅಯ್ಯಪ್ಪ ಮಾಲಾಧಾರಿಗಳ ಮೇಲೆ ವಿದ್ಯುತ್ ಕಟ್ ನಡೆಸಿ ಹಲ್ಲೆ ನಡೆಸುವ…
UN NETWORKS ಬೋಳಿಯಾರು: ಸಮಾಜದ ಕಟ್ಟಕಡೆಯ ಜನ ಸಾಮಾನ್ಯರು ಉತ್ತಮವಾದ ಮೂಲಭೂತ ಸೌಕರ್ಯ ಪಡೆಯಬೇಕೆಂದು ಸರಕಾರದ ಉದ್ದೇಶವಾಗಿದೆ ಎಂದು ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದರು.ಅವರು ಬೋಳಿಯಾರು ಗ್ರಾಮದ ಫರೀದ್ ನಗರ ಸಂಪರ್ಕ ರಸ್ತೆಗೆ ಶಿಲಾ ನ್ಯಾಸಗೈದು ಮಾತನಾಡಿದರು. ನಗರ ಪ್ರದೇಶದ ನಾಗರಿಕರು ಪಡೆಯುತ್ತಿರುವ ಮೂಲಭೂತ ಸೌಕರ್ಯಗಳು ಗ್ರಾಮೀಣ ಪ್ರದೇಶವಾದ ನನ್ನ ಕ್ಷೇತ್ರಕ್ಕೆ ತರುವಲ್ಲಿ ಕ್ಷಮ ಪಡುತ್ತೆನೆ.ಮಂಗಳೂರು ವಿಧಾನ ಸಭಾ ಕ್ಷೇತ್ರದ ಕ್ಕೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆಗಾಗಿ 480ಕೋಟಿ ರೂಪಾಯಿ ಯಲ್ಲಿ 178ಕೋಟಿ ಬ್ರಿಜ್ ನಿರ್ಮಾಣ ಹಾಗೂ198 ಕುಡಿಯುವ ನೀರಿನ ಯೋಜನೆಯ ಸಂಬಂಧಿಸಿ ಅನುದಾನ ಬಿಡುಗಡೆಯಾಗಿದೆ. ಶ್ರೀಘದಲ್ಲಿ ಟೆಂಡರ್ ಕರೆದು 3 ವರ್ಷದೊಳಗೆ ಕಾಮಗಾರಿ ಸಂಪೂರ್ಣಗೊಳಲಿದೆ ಎಂದು ಹೇಳಿದರು. ತಾ.ಪಂ ಸದಸ್ಯ ಜಬ್ಬಾರ್ ಬೋಳಿಯಾರು, ಗ್ರಾ.ಪಂ ಸದಸ್ಯ ರಾಮೇಶ್ ಶೆಟ್ಟಿ, ಅಬ್ದುಲ್ ಶಕೂರು, ಬೋಳಿಯಾರು ಕಾಂಗ್ರೆಸ್ ವಲಯ ಅಧ್ಯಕ್ಷ ಉಸ್ಮಾನ್ ಬಿ.ಎಂ, ಹಿಂದೂಳಿದ ವರ್ಗದ ಗ್ರಾ ಉ ವಲಯಾಧ್ಯಕ್ಷ ಸೀನಾ ಪೂಜಾರಿ, ನಾರಾಯಣ ಗುರು ಮಂದಿರದ ಸದಸ್ಯ ಸುಂದರ್ ಪೂಜಾರಿ,…
UN NETWORKS ಉಳ್ಳಾಲ: ಹಝ್ರತ್ ಅಸ್ಸಯ್ಯಿದ್ ಇಸ್ಮಾಯಿಲ್ ವಲಿಯುಲ್ಲಾಹಿಲ್ ಬುಖಾರಿ ರವರ ಹೆಸರಿನಲ್ಲಿ ಎರಡು ವರ್ಷಕೊಮ್ಮೆ ನಡೆಸಿ ಬರುವ ಮಂಜನಾಡಿ ಉರೂಸ್ ಜನವರಿ 10ರಿಂದ 19ರ ತನಕ ನಡೆಯಲಿದ್ದು ಶುಕ್ರವಾರ ಮಂಜನಾಡಿ ಜಮಾಅತ್ ಗೌರವಾಧ್ಯಕ್ಷ ಅಸ್ಸಯ್ಯಿದ್ ಕೆ.ಎಸ್ ಆಟಕೋಯ ತಂಙಳ್ ಕುಂಬೋಳ್ ಧ್ವಜಾರೋಹಣಗೈದು ಮಂಜನಾಡಿ ಉರೂಸ್ ಗೆ ಚಾಲನೆ ನೀಡಿದರು. ದರ್ಗಾ ಸಮಿತಿ ಅಧ್ಯಕ್ಷ ಅಬ್ದುಲ್ ಅಝೀಝ್ ಮೈಸೂರು ಬಾವ, ಮುದರ್ರಿಸ್ ಪಿ.ಎ ಅಹ್ಮದ್ ಬಾಖವಿ, ಪ್ರ.ಕಾರ್ಯದರ್ಶಿ ಅಝೀಝ್ ಪರ್ತಿಪ್ಪಾಡಿ, ಉಪಾಧ್ಯಕ್ಷರುಳಾದ ಇಸ್ಮಾಯಿಲ್ ದೊಡ್ಡಮನೆ, ಮೊದ್ದೀನ್ಕುಂಞ ಬಸರ, ಕೋಶಾಧಿಕಾರಿ ಕುಂಞ ಬಾವ ಹಾಜಿ ಕಲ್ಕಟ್ಟ, ಜೊತೆ ಕಾರ್ಯದರ್ಶಿ ಎನ್.ಕೆ ಬಾವು ಮುಂತಾದವರು ಈ ಸಂದರ್ಭ ಉಪಸ್ಥಿತರಿದ್ದರು.

