Author: UllalaVani

Kannada News From Coastal Karnataka

UN NETWORKS ಉಳ್ಳಾಲ: ಉಳ್ಳಾಲ ಕ್ರಿಕೆಟ್ ಬೋರ್ಡ್‍ ಆಯೋಜಿಸಿದಂತಹ 8 ತಂಡದ ಮಾಸ್ಟರ್ ಕ್ರಿಕೆಟ್ ಲೀಗ್‍ನ ಸಮಾರೋಪ ಸಮಾರಂಭ ಉಳ್ಳಾಲ ಸೀ ಮೈದಾನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಉಳ್ಳಾಲ ನಗರ ಸಭಾ ಹಿರಿಯ ಸದಸ್ಯರಾದ ಮೊಹಮ್ಮದ್ ಮುಕ್ಕಚ್ಚೇರಿ ಮಾತನಾಡಿ ಕ್ರೀಡೆಯಲ್ಲಿ ಸೋಲು ಗೆಲುವು ಒಂದೇ ನಾಣ್ಯದ ಮುಖ ಇದ್ದಂತೆ, ಕ್ರೀಡಾ ಸ್ಪೂರ್ತಿಯಿಂದ ಭಾಗವಹಿಸಿ ಐಕ್ಯತೆ ಸಹೋದರತೆಯನ್ನು ಎತ್ತಿ ಹಿಡಿಯಬೇಕು ಎಂದರು.ಉಳ್ಳಾಲ ನಗರ ಸಭಾ ಸದಸ್ಯರಾದ ಯು.ಎ.ಇಸ್ಮಾಯಿಲ್, ಅಬ್ದುಲ್ ಜಬ್ಬಾರ್,ಅಬ್ದುಲ್ ಅಝೀಝ್, ಮಾಜಿ ಸದಸ್ಯ ಅಶ್ರಫ್ ಬಾವ, ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್, ಉಪಾಧ್ಯಕ್ಷ ಫಯಾಝ್ ಪಟ್ಲ, ಸಂಚಾಲಕ ಸಾಜಿದ್ ಉಳ್ಳಾಲ್ ಉಪಸ್ಥಿತರಿದ್ದರು. ಆಲ್ಫಾ ಸ್ಪೋಟ್ರ್ಸ್ ಕ್ಲಬ್ ಫ್ರಥಮ ಮತ್ತು ಕೋಟೆಪುರ,ಕೋಡಿ ಫ್ರೆಂಡ್ಸ್ ಸರ್ಕಲ್ ದ್ವಿತೀಯ ಸ್ಥಾನಪಡೆಯಿತು.ಉಳ್ಳಾಲ ಕ್ರಿಕೆಟ್ ಬೋರ್ಡ್ ಅಧ್ಯಕ್ಷ ಖಲೀಲ್ ಉಳ್ಳಾಲ್ ಸ್ವಾಗತಿಸಿದರು, ಅಬ್ದುಲ್ ಸಮದ್ ಕಾರ್ಯಕ್ರಮ ನಿರೂಪಿಸಿದರು.

Read More

UN NETWORKS ಧಾರ್ಮಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಧಾರ್ಮಿಕ ಪರಿಷತ್‍ನ ಮಾಜಿ ಸದಸ್ಯ ಹಾಗೂ ಉಳ್ಳಾಲ ಬ್ರಹ್ಮಶ್ರೀ ಬಿಲ್ಲವ ವೇದಿಕೆ ಅಧ್ಯಕ್ಷ ಕೆ.ಟಿ. ಸುವರ್ಣ ಅವರಿಗೆ ಕೋಟಿ ಚೆನ್ನಯ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು. ತೊಕ್ಕೊಟ್ಟು ಜಂಕ್ಷನ್ ಬಾಯ್ಸ್ ಹಾಗೂ ತೊಕ್ಕೊಟ್ಟು ನಾಗರಿಕ ಸಮಿತಿ ಆಶ್ರಯದಲ್ಲಿ ತೊಕ್ಕೊಟ್ಟು ಅಂಬೇಡ್ಕರ್ ಮೈದಾನದಲ್ಲಿ ನಡೆದ ದ.ಕ. ಜಿಲ್ಲಾ ಮಟ್ಟದ 70ಕೆ.ಜಿ. ವಿಭಾಗದ ಕೋಟಿ ಚೆನ್ನಯ ಟ್ರೋಫಿ ಪ್ರೊ ಕಬಡ್ಡಿ ಪಂದ್ಯಾಟದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾರ್ಯಕ್ರಮದಲ್ಲಿ ಬಿಜೆಪಿ ಮಂಗಳೂರು ಕ್ಷೇತ್ರಾಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರ್, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಅಧ್ಯಕ್ಷ ಚಂದ್ರಹಾಸ ಉಳ್ಳಾಲ, ದೇವಿ ಬೈದೆದಿ ಕೋಟಿ ಚೆನ್ನೆಯ ಗೆಜ್ಜೆಗಿರಿ ಮೂಲಕ್ಷೇತ್ರದ ಮೊಕ್ತೇಸರ ಚಂದ್ರಶೇಖರ ಉಚ್ಚಿಲ್, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಸತೀಶ್ ಕುಂಪಲ, ಉಳ್ಳಾಲ ಶ್ರೀ ಚೀರುಂಭ ಭಗವತೀ ಕ್ಷೇತ್ರದ ಉಪಾಧ್ಯಕ್ಷ ಸುರೇಶ್ ಭಟ್ನಗರ, ಬ್ರಹ್ಮಶ್ರೀ ಬಿಲ್ಲವ ವೇದಿಕೆಯ ಕಾರ್ಯಾಧ್ಯಕ್ಷ ಸತೀಶ್ ಕರ್ಕೇರ, ಭವಾನಿ ಸ್ಯಾನಿಟರಿ…

Read More

UN NETWORKS ಮುನ್ನೂರು: ಹಿರಿಯರು ನಡೆಸಿಕೊಂಡು ಬಂದ ಸೇವೆಯನ್ನು ನಾವು ನಿರಂತರವಾಗಿ ಮಾಡಿಕೊಂಡು ಹೋಗಲು ಗಾಣದ ಕೊಟ್ಯ ಅಗತ್ಯತೆ ಇದೆ. ಅದಕ್ಕೆ ಎಲ್ಲರೂ ಕೈಜೋಡಿಸಿ ಸಂಪನ್ಮೂಲವನ್ನು ಭರ್ತಿ ಮಾಡಿ ಒಂದು ವರ್ಷದೊಳಗೆ ಗಾಣದ ಮನೆ ನಿರ್ಮಾಣ ಆಗುವ ಹಾಗೆ ಮಾಡಬೇಕು ಎಂದು ಎಂದು ಗುರುಪುರ ವಜ್ರದೇಹಿಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹೇಳಿದರು. ಮುನ್ನೂರು ಗ್ರಾಮದಲ್ಲಿ ಅನಾದಿ ಕಾಲದಿಂದಲೂ ಇದ್ದ ಗಾಣದ ಮನೆಯನ್ನು ಜೀರ್ಣೋದ್ಧಾರಗೊಳಿಸುವ ಪ್ರಯುಕ್ತ ಗಾಣದ ಮನೆ ಜೀರ್ಣೋದ್ಧಾರ ಸಮಿತಿ ವತಿಯಿಂದ ಜರಗಿದ ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೇರಿಸಿದ ಬಳಿಕ ಆಶೀರ್ವಚನ ನೀಡಿ ಅವರು ಮಾತನಾಡಿದರು.ಪಂಜಂದಾಯ ಬಂಟ ವೈದ್ಯನಾಥ ದೈವಸ್ಥಾನದ ಆಡಳಿತ ಮೊಕ್ತೇಸರ ರವೀಂದ್ರನಾಥ ಪೂಂಜ ಮಾತನಾಡಿ ಈ ಗಾಣದ ಕೊಟ್ಯ ಆದಷ್ಟು ಬೇಗ ನಿರ್ಮಾಣವಾಗಲಿ ಎಂದು ಹಾರೈಸಿದರು.ಕಾರ್ಯಕ್ರಮದಲ್ಲಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಧರ್ಮದರ್ಶಿ ತಂತ್ರಿ ಶ್ರೀ ಕೃಷ್ಣ ಕುಣಿಕುಳ್ಳಾಯ, ಬಂಟ್ವಾಳ ತಾಲೂಕು ಗಾಣಿಗರ ಸಂಘದ ಅಧ್ಯಕ್ಷ ರಘು ಸಫಲ್ಯ, ಗಾಣದ ಮನೆ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷ ಸೀತಾರಾಮ ಸಫಲ್ಯ, ಅತ್ತಾವರ ಶ್ರೀ…

Read More

UN NETWORKS ತಲಪಾಡಿ: ಕೇರಳ ಭಾಗದಲ್ಲಿ ಗ್ಯಾಸ್ ಟ್ಯಾಂಕರ್ ಸಂಚಾರಕ್ಕೆ ಅವಧಿ ನಿಗದಿ ಪಡಿಸಲಾಗಿದ್ದು ಅದರಿಂದಾಗಿ ಕೇರಳ ಕಡೆಗೆ ಸಂಚರಿಸುವ ಗ್ಯಾಸ್ ಟ್ಯಾಂಕರ್ ಳನ್ನು ತಲಪಾಡಿ ಟೋಲ್ ಗೇಟ್ ಆಸುಪಾಸಿನಲ್ಲಿ ನಿಲ್ಲಿಸಲಾಗುತ್ತಿದೆ. ಅದರ ಚಾಲಕರು ವಾಹನದ ಕೆಳಗಡೆ ಅಡುಗೆ ಮಾಡುವುದರಿಂದ ದೊಡ್ಡ ಮಟ್ಟದ ಅಪಾಯ ಕಾದಿದ್ದರೂ ಆ ಬಗ್ಗೆ ಅಧಿಕಾರಿಗಳಿಗೆ ಎಚ್ಚರಿಸಿದರೂ ಅದನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಗಡಿನಾಡು ರಕ್ಷಣಾ ವೇದಿಕೆ ಸಿದ್ದಿಕ್ ತಲಪಾಡಿ ಆರೋಪಿಸಿದರು. https://www.youtube.com/watch?v=R-quaHktiSQ ತಲಪಾಡಿ ಟೋಲ್‍ಗೇಟ್ ಪ್ರದೇಶದಲ್ಲಿ ಗ್ಯಾಸ್ ಟ್ಯಾಂಕರ್ ನಿಲುಗಡೆ ಹಾಗೂ ಚಾಲಕರು ಟ್ಯಾಂಕರ್ ಕೆಳಗಡೆ ಅಡುಗೆ ಮಾಡುವ ಕ್ರಮವನ್ನು ಖಂಡಿಸಿ ಗಡಿನಾಡು ರಕ್ಷಣಾ ವೇದಿಕೆ ಆಶ್ರಯದಲ್ಲಿ ತಲಪಾಡಿ ಟೋಲ್‍ಗೇಟ್ ಸಮೀಪ ಮಂಗಳವಾರ ನಡೆದ ಸಾಂಕೇತಿಕ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದರು. ಕೇರಳದಲ್ಲಿ ನಡೆದ ಭೀಕರ ಅನಾಹುತದ ಬಳಿಕ ಗ್ಯಾಸ್ ಟ್ಯಾಂಕರ್ ಕುರಿತಾಗಿ ಅಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಅದರ ಪರಿಣಾಮ ತಲಪಾಡಿಯಲ್ಲಿ ಸರತಿ ಸಾಲಿನಲ್ಲಿ ಕಂಡುಬರುತ್ತಿದೆ. ಟ್ಯಾಂಕರ್‍ನಲ್ಲಿ ಗ್ಯಾಸ್ ಸ್ಟವ್ ಇಡಲೂ…

Read More

UN NETWORKS ದೇರಳಕಟ್ಟೆ: ಮಂಗಳೂರು ವಿಶ್ವವಿದ್ಯಾಲಯ ಕಳೆದ ಏಪ್ರಿಲ್, ಮೇನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ದೇರಳಕಟ್ಟೆಯ ನಿಟ್ಟೆ ಪರಿಗಣಿಸಲಾಗಿರುವ ವಿವಿಯ ಅಧೀನ ಸಂಸ್ಥೆ ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಬಿಕಾಂ ವಿದ್ಯಾರ್ಥಿನಿಯರಾದ ಅವಿನಾ ಡಿಸೋಜ 94.78ಶೇ. ಅಂಕ ಗಳಿಸಿ ತೃತೀಯ ರ್ಯಾಂಕ್ ಹಾಗೂ ಬೋಳ ವೃಂದ ಕಾಮತ್ 93.80ಶೇ. ಅಂಕಗಳೊಂದಿಗೆ ಆರನೇ ರ್ಯಾಂಕ್ ಹಾಗೂ ಹಾಗೂ ಬಿಬಿಎಂ ವಿದ್ಯಾರ್ಥಿನಿ ದೀಕ್ಷಾ 85.70ಶೇ. ಅಂಕಗಳೊಂದಿಗೆ ಎಂಟನೇ ರ್ಯಾಂಕ್ ಪಡೆದಿದ್ದಾರೆ.

Read More

UN NETWORKS ಕೊಣಾಜೆ: ಮೂವತ್ತು ವರ್ಷಗಳ ಕಾಲ ನಿರಂತರವಾಗಿ ತುಳು ಭಾಷೆ ಸಂಸ್ಕೃತಿಯ ಕುರಿತು ಅಧ್ಯಯನ ಮಾಡಿ ತುಳುವಿಗೆ ಅಂತರಾಷ್ಟ್ರೀಯ ಮನ್ನಣೆ ತಂದಿತ್ತ ಕ್ಯಾಲಿಫೋರ್ನಿಯ ವಿವಿಯ ಮಾನವಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕ ಪ್ರೊ. ಪೀಟರ್ ಜೆ. ಕ್ಲಾಸ್ ಅವರು, ಮಂಗಳೂರು ವಿಶ್ವವಿದ್ಯಾನಿಲಯದ ಎಸ್‍ವಿಪಿ ಕನ್ನಡ ಅಧ್ಯನ ಸಂಸ್ಥೆಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ, ಆರ್ ಆರ್‍ಸಿ ಸಂಶೋಧನಾ ಕೇಂದ್ರದಲ್ಲಿ ಅಧ್ಯಯನ ಮಾಡಿ ಇಡೀ ತುಳುನಾಡಿನ ಜಾನಪದಕ್ಕೆ ಮಹತ್ತರವಾದ ಕಾಣಿಕೆಯನ್ನು ನೀಡಿದ್ದರು. ಪ್ರೊ. ಪೀಟರ್ ಜೆ ಕ್ಲಾಸ್ ಅವರು ನಿಧನರಾದ ಹಿನ್ನಲೆಯಲ್ಲಿ ಅವರ ಆತ್ಮಕ್ಕೆ ಶಾಂತಿ ಕೋರಿ ಎಸ್‍ವಿಪಿ ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸಂತಾಪ ಸಭೆ ನಡೆಯಿತು. ಬಿ.ಎ. ವಿವೇಕ ರೈ, ಕುಶಿ ಹರಿದಾಸ ಭಟ್ಟ ಮತ್ತು ಪೀಟರ್ ಜೆ. ಕ್ಲಾಸ್ ಅವರು ಸೇರಿ ತುಳು ಜಾನಪದ ಮೀಮಾಂಸೆಯನ್ನು ಕಟ್ಟುವಲ್ಲಿ ಮಹತ್ವದ ಪಾತ್ರ ನಿರ್ವಹಿಸಿದ್ದಾರೆ. ಆ ಮೂಲಕ ತುಳು ಭಾಷೆಗೆ ಸಾಂಸ್ಥಿಕ, ಚಾರಿತ್ರಿಕ ಹಾಗೂ ಪ್ರಾದೇಶಿಕ ಅಸ್ಮಿತೆಯೊಂದನ್ನು ರೂಪಿಸುವಲ್ಲಿಯೂ, ಅಂತರಾಷ್ಟ್ರೀಯ ಮನ್ನಣೆಯನ್ನು ಒದಗಿಸುವಲ್ಲಿಯೂ ಈ ಮೂವರ…

Read More

UN NETWORKS ಅಸೈಗೋಳಿ: ಪ್ರವಾದಿಯವರು ಮಾನವ ಸಮುದಾಯಕ್ಕೆ ಉಪದೇಶ ನೀಡುವ ಮೂಲಕ ಧರ್ಮದ ಬೆಳವಣಿಗೆಗೆ ಕಾರಣಕರ್ತರಾದವರು. ಅವರು ಮುಸ್ಲಿಂ ಸಮುದಾಯದ ಕಾರಣೀಕೃತ ನೇತರರಾಗಿದ್ದಾರೆ. ಅವರನ್ನು ನಿಂದಿಸಿ ಹೇಳಿಕೆ ನೀಡಿದ ಖಾಸಗಿ ಚಾನೆಲ್‍ನ ನಿರೂಪಕ ಅಜಿತ್ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಪನೀರ್ ಮಸೀದಿ ಖತೀಬ್ ಯಾಸಿರ್ ಅರಾಫತ್ ಕೌಸರಿ ಒತ್ತಾಯಿಸಿದರು. ಅವರು ಪ್ರವಾದಿಯವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಖಾಸಗಿ ಚಾನೆಲ್‍ನ ಅಜಿತ್ ಮತ್ತು ರಾಮಚಂದ್ರರ ಬಗ್ಗೆ ಲಘುವಾಗಿ ಮಾತನಾಡಿದ ಭಗವಾನ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದುಒತ್ತಾಯಿಸಿ ಅಸೈಗೋಳಿಯಲ್ಲಿ ನಡೆದ ಅಸೈಯ ನಮ್ಮನಾಡು ನಮ್ಮದು ವಾಟ್ಸಾಪ್ ಗ್ರೂಪ್‍ನ ಸದಸ್ಯರ ಪ್ರತಿಭಟನೆಯಲ್ಲಿ ಮಾತನಾಡಿದರು.ಈ ಸಂದರ್ಭ ಬಿಜೆಪಿ ಮುಖಂಡ ಫಝಲ್ ಅಸೈಗೋಳಿ ಮಾತನಾಡಿದರು. ಈ ಸಂದರ್ಭ ಎನ್‍ಎಸ್ ಕರೀಂ,ನಿಯಾಝ್, ಸುಲೈಮಾನ್ ಮೊದಲಾದವರು ಉಪಸ್ಥಿತರಿದ್ದರು.

Read More

UN NETWORKS ಕೊಣಾಜೆ: ಖಾಸಗಿ ಚಾನೆಲ್‍ನ ನಿರೂಪಕ ಅಜಿತ್‍ರವರು ವಿಚಾರವೊಂದರಲ್ಲಿ ಪ್ರವಾದಿ ಪೈಗಂಬರ್‍ರವರನ್ನು ಅವಹೇಳನಕಾರಿಯಾಗಿ ನಿಂದಿಸಿ ಹೇಳಿಕೆ ನೀಡಿರುವುದರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ವಿವಿಧ ಮುಸ್ಲಿಂ ಸಂಘಟನೆಗಳು ಕೊಣಾಜೆ ಠಾಣೆಗೆ ಮುತ್ತಿಗೆ ಹಾಕಿ ಸೋಮವಾರ ದೂರು ಸಲ್ಲಿಸಿದರು. ಮಂಜನಾಡಿ ಜುಮ್ಮಾ ಮಸೀದಿ ಮತ್ತದರ ವ್ಯಾಪ್ತಿಯಲ್ಲಿರುವ ಸಂಘಟನೆಗಳು ಮತ್ತು ಮಸೀದಿಗಳ ಸದಸ್ಯರು ಒಟ್ಟಾಗಿ ದೂರು ನೀಡಿದ್ದು, ಒಟ್ಟು 16 ದೂರುಗಳನ್ನು ಕೊಣಾಜೆ ಠಾಣೆಯಲ್ಲಿ ಸ್ವೀಕಾರ ಮಾಡಲಾಗಿದೆ. ಅಜಿತ್ ವಿರುದ್ಧ ದೂರು ದಾಖಲು ಮಾಡಲೇಬೇಕೆಂದು ಒತ್ತಾಯಿಸಿ ಹಲವು ಮಸೀದಿಗಳ , ಸಂಘಟನೆಗಳ ಸಮಿತಿ ಸದಸ್ಯರು ಸೋಮವಾರ ಪೊಲೀಸ್ ಠಾಣೆಗೆ ಜಮಾಯಿಸಿ ಒತ್ತಡ ಹೇರಿದರು.ಈ ಸಂದರ್ಭ ಮಾತನಾಡಿದ ಕೊಣಾಜೆ ಇನ್ಸ್‍ಪೆಕ್ಟರ್ ರವಿನಾಯ್ಕ್ ಅವರು, ಅಜಿತ್‍ರವರ ಅಹವೇಳನಕಾರಿ ಹೇಳಿಕೆ ವಿರುದ್ಧ ವಿಶ್ವ ವ್ಯಾಪ್ತಿಯಲ್ಲಿ ಪ್ರತಿಭಟನೆ ನಡೆಯುತ್ತಿದೆ. ಎಲ್ಲಾ ಠಾಣೆಗಳಲ್ಲಿ ದೂರು ಸ್ವೀಕಾರ ಆಗುತ್ತಿದೆ. ಇದು ಕೇವಲ ಕೇವಲ ಕೊಣಾಜೆ ಠಾಣೆಗೆ ಸಂಬಂಧಿಸಿದ ದೂರು ಆಗದ ಕಾರಣ ಮೇಲಧಿಕಾರಿಗಳ ಆದೇಶ ಪರಿಗಣಿಸಿ ದೂರು ದಾಖಲಿಸಿ ಸೂಕ್ತ…

Read More

UN NETWORKS ಮಂಗಳೂರು: ಶ್ರೀ ಕೋದಂಡರಾಮ ಕೃಪಾಪೋಷಿತ ಯಕ್ಷಗಾನ ಮಂಡಳಿ ಹನುಮಗಿರಿಯವರಿಂದ ನಳಿನಿ ಆರ್.ಕೆ ಉಪ್ಪೂರು ಕುಟುಂಬಸ್ಥರ ವತಿಯಿಂದ ಶ್ರೀ ದೇವಿ ಲಲಿತೋಪಖ್ಯಾನ ಕಾಲಮಿತಿ ಯಕ್ಷಗಾನ ದೇರಬೈಲು ಕೊಂಚಾಡಿ ಶ್ರೀ ದುರ್ಗಾ ಪರಮೇಶ್ವರಿ ನಾಗಕನ್ನಿಕಾ ದೇವಸ್ಥಾನದ ವಠಾರದಲ್ಲಿ ನಡೆಯಿತು. ಗಣಹೋಮ, ಮೇಳದದೇವರಿಗೆ ವಿಶೇಷ ಪೂಜೆ ನೆರವೇರಿತು. ಜೋತಿಷ್ಯ ಸುರೇಶ್ ಬಾರಿತಾಯ ದೀಪ ಬೆಳಗಿಸಿ ಕಾರ್ಯಕ್ರಮ ಕ್ಕೆ ಚಾಲನೆ ನೀಡಿದರು.ಮಂಗಳೂರು ನಗರ ಪಾಲಿಕೆಯ ದೇರಬೈಲ್ ವಾರ್ಡಿನ ಕಾರ್ಪೊರೇಟ್ ರಾಜೇಶ್ ಸನ್ಮಾನ ಸ್ವೀಕರಿಸಿ ಮಾತನಾಡಿ,ದೇವರ ಸೇವೆಯ ರೂಪದಲ್ಲಿ ಯಕ್ಷಗಾನ ಬಯಲಾಟ ಪ್ರದರ್ಶನ ನಡೆಸುವ ಮೂಲಕ ಕಲಾಭಿಮಾನಿಗಳ ಮನತಣಿಸುವ ಪ್ರಯತ್ನ ಮಾಡಿದ್ದಾರೆ ಎಂದು ಹೇಳಿದರು.ಎಲ್ಐಸಿ ನಿವೃತ್ತ ಅಭಿವೃದ್ಧಿ ಅಧಿಕಾರಿ ಎನ್ ವಿದ್ಯಾಧರ್ ಶೆಟ್ಟಿ ಕೊಲ್ನಾಡಗುತ್ತು ಮಾತನಾಡಿ ಪ್ರಪಂಚಕ್ಕೆ ಬಂದ ಬಳಿಕ ನಮ್ಮ ಋಣಗಳಾದ ಪಿತೃ ಋಣ ಪಿಂಡ ತರ್ಪಣದಿಂದ, ಗುರು ಋಣ ಗುರುದಕ್ಷಿಣೆಯಿಂದ ಹಾಗೂ ದೇವತಾ ಋಣ ಸಮಾಜಸೇವೆಯಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ನುಡಿದರು. ಈ ಸಂದರ್ಭ ಕಾರ್ಪೊರೇಟ್ ರಾಜೇಶ್, ಜೋತಿಷ್ಯ ಸುರೇಶ್ ಬರಿತಾಯ…

Read More

UN NETWORKS ಕೊಣಾಜೆ: ಮಂಗಳೂರು ವಿಶ್ವವಿದ್ಯಾನಿಲಯದ ಡಾ. ಪಿ. ದಯಾನಂದ ಪೈ ಮತ್ತು ಶ್ರೀ ಪಿ. ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರವು ಶ್ರೀಧವಲಾ ಮಹಾವಿದ್ಯಾಲಯ ಮೂಡುಬಿದಿರೆ ಇವರ ಸಹಯೋಗದೊಂದಿಗೆ ಜನವರಿ 19, 2019 ಶನಿವಾರದಂದು ಶ್ರೀಧವಳಾ ಮಹಾವಿದ್ಯಾಲಯದ ಸಭಾಂಗಣದಲ್ಲಿ ಯಕ್ಷಗಾನದಲ್ಲಿ ಹಾಸ್ಯ ಎಂಬ ವಿಷಯದ ಕುರಿತು ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಿದೆ. ಈ ವಿಚಾರಸಂಕಿರಣದಲ್ಲಿ ಉದ್ಘಾಟನಾ ಸಮಾರಂಭದ ಬಳಿಕ ಕನ್ನಡ ಸಾಹಿತ್ಯ ಮತ್ತು ಯಕ್ಷಗಾನದ ಹಾಸ್ಯ, ಯಕ್ಷಗಾನ ಹಾಸ್ಯ ಪರಂಪರೆ ಮತ್ತು ವರ್ತಮಾನ, ಯಕ್ಷಗಾನ ಮತ್ತು ಇತರ ಕಲಾಪ್ರಕಾರಗಳಲ್ಲಿ ಹಾಸ್ಯಾಭಿವ್ಯಕ್ತಿ ಹಾಗೂ ಯಕ್ಷಗಾನದ ಹಾಸ್ಯದಲ್ಲಿ ನುಡಿವಿಶಿಷ್ಟತೆ ಎಂಬ ವಿಷಯಗಳ ಕುರಿತು ವಿದ್ವಾಂಸರಿಂದ ವಿಚಾರ ಮಂಡನೆ ನಡೆಯಲಿದೆ. ಅಪರಾಹ್ನ ಸಂಶೋಧಕರಿಂದ ಪ್ರಬಂಧಮಂಡನೆ ನಡೆಯಲಿದ್ದು, ಯಕ್ಷಗಾನದ ಹಾಸ್ಯಪಾತ್ರಗಳ ವೇಷಭೂಷಣಗಳು, ಯಕ್ಷಗಾನದ ಹಾಸ್ಯ ಪಾತ್ರಗಳ ಕುಣಿತ ಮತ್ತು ಅಭಿನಯ, ಹಾಸ್ಯ ಪಾತ್ರಗಳ ಭಾಷೆ, ಪೂರ್ವರಂಗದ ಹಾಸ್ಯ ವಿವೇಚನೆ, ಯಕ್ಷಗಾನದ ಪ್ರಮುಖ ಹಾಸ್ಯಗಾರರು, ಯಕ್ಷಗಾನ ಪ್ರಸಂಗಗಳಲ್ಲಿ ಹಾಸ್ಯ, ಯಕ್ಷಗಾನದ ಹಾಸ್ಯ ಮತ್ತು ಸಮಕಾಲೀನ ಪ್ರಜ್ಞೆ ಎಂಬ ವಿಷಯಗಳ…

Read More